POLICE BHAVAN KALABURAGI

POLICE BHAVAN KALABURAGI

02 February 2013

GULBARGA DISTRICT REPORTED CRIMES


ಮಟಕಾ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ದಿನಾಂಕ:01-02-2013 ರಂದು ಸಾಯಂಕಾಲ 7-00 ಸುಮಾರಿಗೆ ಠಾಣಾ ವ್ಯಾಪ್ತಿಯ ಯಂಕ್ಕವ ಮಾರ್ಕೆಟದ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ, ಜೂಜಾಟ, ನಡೆಯುತ್ತಿರುವ ಮಾಹಿತಿ ಬಂದ ಮೇರೆಗೆ ಮಲ್ಲಿಕಾರ್ಜುನ ಇಕ್ಕಳಕಿ ಪಿ.ಎಸ.ಐ ರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಆತನನ್ನು ವಿಚಾರಣೆ ಮಾಡಿದಾಗ ಆಶೋಕ ತಂದೆ ಕಲ್ಯಾಣಪ್ಪ ಮೀಟಗಾರ ವಯಾ|| 34ವರ್ಷಸಾ|| ಯಂಕ್ಕವ ಮಾರ್ಕೆಟ ಬ್ರಹ್ಮಪೂರ  ಗುಲಬರ್ಗಾ ಅಂತ ತಿಳಿಸಿದ್ದು. ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 2040/- , ಮಟಕಾ ಚೀಟಿಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:11/2013 ಕಲಂ 78 (iii) ಕರ್ನಾಟಕ ಪೊಲೀಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಂಚನೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:15-10-1992 ರಿಂದ 10-09-2012  ರ ಅವಧಿಯಲ್ಲಿ ಮಾಣಿಕ ತಂದೆ ಶಾಮರಾವ ಸಿಂಧೆ ಸಾ||ಸರಾಫ ಬಜಾರ ಗುಲಬರ್ಗಾ, ಯಶ್ವಂತ ತಂದೆ ಗುರುಲಿಂಗಪ್ಪ ಬನಶೆಟ್ಟಿ ಸಾ: ಇಕ್ಕಳಕಿ ತಾ:ಆಳಂದ, ಅನಿಲಕುಮಾರ ತಂದೆ ರಾಮಚಂದ್ರ ದೊಡ್ಡಮನಿ ರಾಜಾಪೂರ ಗುಲಬರ್ಗಾ ಹೆಂಡತಿ ಶಾಂತಾಬಾಯಿ ಇವರ ಹೆಸರಿನಲ್ಲಿದ್ದ ಜಾಫರಬಾದ ಸರ್ವೆ ನಂ:12/2 ರಲ್ಲಿಯ ಪ್ಲಾಟ ನಂ: 3 ಶಾಂತಾಬಾಯಿ ಇವರ ಕಡೆಯಿಂದ ಖರೀದಿಸಿದಂತೆ ನಕಲಿ ಸಹಿ ಮಾಡಿ ಸುಳ್ಳು (ಖೊಟ್ಟಿ) ದಾಖಲಾತಿ ತಯಾರಿಸಿ ವಂಚನೆ ಮಾಡಿರುತ್ತಾರೆ. ಮತ್ತು ಪ್ಲಾಟ ನಂ. 2/ಎ ರಲ್ಲಿ  ಮಾಣಿಕ ಸಿಂದೆ ಇತನು ಪ್ಲಾಟ ನಂ:3 ಅಂತಾ ತಿಳಿದುಕೊಂಡು  2/ಎ ರಲ್ಲಿ ಅತೀಕ್ರಮ ಪ್ರವೇಶ ಮಾಡಿ ಹಾಲೋ ಬ್ಲಾಕಿನ ರೂಮ ಕಟ್ಟಿರುತ್ತಾರೆ. ಮೇಲ್ಕಂಡ ಮೂರು ಜನರ ವಿರುದ್ಧ ಕಾನೂನು  ಕ್ರಮ ಜರುಗಿಸಿಬೇಕೆಂದು ಅಂತಾ ಶ್ರೀ ಅಮೃತರಾವ ತಂದೆ ಈಶ್ವರಪ್ಪ ಶೇಷಗಿರಿ ವಯಸ್ಸು 77 ವರ್ಷ ಉ ಮಾಹಾ ನಗರ ಪಾಲಿಕೆ ಗುಲ್ಬರ್ಗಾ ನಿವೃತ್ತ  ಎಫ.ಡಿ.ಎ.  ಜಾ||ಬಡಿಗೇರ  ಮನೆ ನಂ:9-567 ಶೇಖ ರೋಜಾ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 66/2013 ಕಲಂ.447,465,468, 471, 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.   

No comments: