POLICE BHAVAN KALABURAGI

POLICE BHAVAN KALABURAGI

01 February 2013

GULBARGA DISTRICT REPORTED CRIMES


ಕೊಲೆ ಪ್ರಕರಣದ ಆರೋಪಿ ಬಂಧನ
ದಿನಾಂಕ:30/01/2013 ರಂದು ರಾಘವೇಂದ್ರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಬೋರಬಾಯಿ ನಗರದಲ್ಲಿ ಕಾಶಿನಾಥ ಬೇಕರಿ @ ಕಾಶಿನಾಥ ಹಾದಿಮನಿ ಸಾ|| ಬೋರಾಬಾಯಿ ನಗರ ಗುಲಬರ್ಗಾ  ಇತನು ಗಣೇಶ ತಂದೆ ಮಲ್ಲಿಕಾರ್ಜುನ ಕಡಿಹಳ್ಳಿ ಸಾ|| ಬೋರಬಾಯಿ ನಗರ ಇತನ ಜೊತೆ ಬೆಳಿಗ್ಗೆ ಬಾಯಿ ಮಾತಿನ ತಕರಾರು ಆಗಿದ್ದರಿಂದ ಆರೋಪಿ ಕಾಶೀನಾಥ ಇತನು ಗಣೇಶ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ತಲವಾರನಿಂದ ಹೊಡೆದಿದ್ದನು ಗಾಯಾಳು ಗಣೇಶ ಇತನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಯಾಗಿದ್ದು ಉಪಚಾರ ಫಲಕಾರಿಯಾಗದೇ ಗಾಯಾಳು ಮೃತಪಟ್ಟಿದ್ದನು. ಸದರಿ ಪ್ರಕರಣದ ಆರೋಪಿ ಪತ್ತೆ ಕುರಿತು ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಗುಲಬರ್ಗಾ,  ಹಾಗೂ ಶ್ರೀ.ಭೂಷಣ ಜಿ ಬೋರಸೆ ಸಹಾಯಕ ಹಿರಿಯ ಪೊಲೀಸ ಅಧೀಕ್ಷಕರು '' ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯ ಪಿ.ಐ.ಶರಣಬಸವೇಶ್ವರ ಭಜಂತ್ರಿ ಮತ್ತು ಶ್ರೀ ಮಲ್ಲಿಕಾರ್ಜುನ ಇಕ್ಕಳಕಿ ಪಿ.ಎಸ್.ಐ.ರಾಘವೇಂದ್ರ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ರಫೀಕ ಪಿ.ಸಿ, ಶಿವಪ್ರಕಾಶ ಪಿ.ಸಿ, ದೇವಿಂದ್ರಪ್ಪ ಪಿ.ಸಿ, ರಾಮು ಪವಾರ ಪಿ.ಸಿ ರವರು ಕೊಲೆ ಮಾಡಿದ ಆರೋಪಿ ಕಾಶಿನಾಥನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಅಪಹರಣ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ತನ್ನ ಮಕ್ಕಳಿಗೆ ವಿದ್ಯಾಭ್ಯಾಸದ ಸಲುವಾಗಿ ಸೇಡಂದಲ್ಲಿ ರೂಮ್ ಮಾಡಿಕೊಟ್ಟು ಇಟ್ಟಿದ್ದು, ಮಗಳು ಪಿ.ಯು.ಸಿ. ಎರಡನೇ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಳು,ಮಗನಿಗೆ ಆರಾಮ ಇರದ ಕಾರಣ ಮಗ ಊರಿಗೆ ಬಂದಿದ್ದನು. ದಿನಾಂಕ:20-01-2013 ರಂದು  ಸಾಯಂಕಾಲ 4-00 ಗಂಟೆ ಸುಮಾರಿಗೆ ಸೇಡಂ ಪಟ್ಟಣದಲ್ಲಿರುವ ಬಸವರಾಜ ತಂದೆ ಖತಲಪ್ಪ ಮಂಗದ ಸಾ:ನಾವದಗಿ ಎಂಬುವವನು ತನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ.ಮಗಳನ್ನು ಅಪಹರಣ ಮಾಡಿಕೊಂಡು ಹೋದವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಯುವತಿಯ ತಾಯಿ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 25/2013 ಕಲಂ, 366 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ಕಪಿಲ್ ದ್ವಜ್ ತಂದೆ ಮಹಾದೇವಪ್ಪ ದನ್ನಿ, ಸಾ||  .ಅಂಬೇಡ್ಕರ್ ನಗರ ಶರಣಸಿರಸಗಿ, ಗುಲಬರ್ಗಾರವರು  ನಾನು ನಮ್ಮ ಟೆಂಪೂ ಜುಡೊ ಟ್ರಾಕ್ಸ್ ನಂ-ಕೆಎ-32 ಎಮ್.ಎ-700 ನೇದ್ದನು ದಿನಾಂಕ:31/01/2013 ರಂದು ಬೆಳಿಗ್ಗೆ 10:00 ಗಂಟೆ  ಸುಮಾರಿಗೆ ಬಿದ್ದಾಪೂರ ಕಾಲೋನಿಯ ಮಖಾಂತರ ಶರಣಸಿರಸಗಿ ಹೋಗುತ್ತಿರುವಾಗ ಅದೆ ವೇಳೆಗೆ ಲಾರಿ ನಂ-ಕೆಎ32 ಎ-7941 ನೇದ್ದರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿಯಿಂದ ನಡೆಯಿಸಿಕೊಂಡು ಬಂದು ಟ್ರಾಕ್ಸ್ ನ ಹಿಂದುಗಡೆಯಿಂದ ಡಿಕ್ಕಿ ಹೊಡೆದು ಹಾಗೂ ಡ್ರೈವರ್ ಕೂತುಕೊಳ್ಳುವ ಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದ ನನಗೆ ಭಾರಿ ಗಾಯವಾಗಿರುತ್ತದೆ. ಲಾರಿ ಚಾಲಕನು ತನ್ನ ಲಾರಿಯನ್ನು ಹಾಗೇಯೇ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:63/2013 ಕಲಂ 279, 338 ಐಪಿಸಿ ಸಂಗಡ 187 ಐಎಮ್ ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ವಂಚನೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಅವರಾದ ಗ್ರಾಮದ ಸೀಮಾಂತರದಲ್ಲಿರುವ ಸರ್ವೆ ನಂ: 101/ಅಅ ಮುನಿರುದ್ಧೀನ ಹೆಸರಿಗೆ 1 ರಿಂದ 198 ಪ್ಲಾಟಗಳು ಮಾಡಿ ಕೊಡುತ್ತೇನೆ ಅಂತಾ ಹೇಳಿ  ನನ್ನ ಕಡೆಯಿಂದ 7.25 ಲಕ್ಷ ರೂ. ಹಣ  ಪಡೆದುಕೊಂಡು ಪಂಚಾಯತಿಯ ಫಾರ್ಮ ನಂ-12, ಕರ ಪಾವತಿ ರಶೀದಿ, ಬಾಕಿ ರಹಿತ ಪ್ರಮಾಣ ಪತ್ರ, ಖಾತಾ ಎಕ್ಸಟ್ರಾಕ್ಟ್ ಖೊಟ್ಟಿ ದಾಖಲಾತಿಗಳ ತಯಾರಿಸಿ ನನಗೆ ಮೋಸ ಮಾಡುವ ಉದ್ದೇಶದಿಂದ ಜಗದೀಶ ವಳಕೇರಿ ಮತ್ತು ಮೋನಿಕಾ ಜಾಧವ ಪಿ.ಡಿ.ಓ.  ಹಾಗೂ  ಅವರಾದ ಬಿಲ್ಲ ಕಲೆಕ್ಟರ ಪೀರಪ್ಪ ಮತ್ತು  ಕುಸನೂರ ಗ್ರಾಮ ಪಂಚಾಯತ ಬಿಲ್ಲ ಕಲೆಕ್ಟರ ಶರಣಗೌಡ ಇವರೆಲ್ಲರೂ ಕೂಡಿಕೊಂಡು ಪಂಚಾಯತಿಯಲ್ಲಿ ನೊಂದಣಿ ಮಾಡದೇ ಖೊಟ್ಟಿ ದಾಖಲಾತಿ ತಯಾರಿಸಿ ಸಹಿ ಮಾಡಿರುತ್ತಾರೆ. ನನಗೆ ಮೋಸ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಶ್ರೀ ಮೊಹಮ್ಮದ ಅಹಮದ್  ತಂದೆ ಮೊಹಮ್ಮದ ಖಾಸೀಮ ವಯಾ||33 ವರ್ಷ ಉದ್ಯೋಗ ವ್ಯಾಪರ ಸಾ||ಖಾಜಾ ಕಾಲೋನಿ ಹಾಗರಗಾ ರೋಡ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:64/2013 ಕಲಂ, 465, 468, 471, 420 ಐಪಿಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:-31/01/2013 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ನನ್ನ ಮಗ ಅನುಪ @ ಚಂದ್ರಹಾಸ ಇತನು ಮೋಟಾರ ಸೈಕಲ ನಂ ಕೆಎ-36 ಯು-8171 ನೇದ್ದರ ಮೇಲೆ ಮೋಟಾರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಆಳಂದ ಚೆಕ್ಕ ಪೋಸ್ಟ ಕಡೆಗೆ ಹೋಗುತ್ತಿರುವಾಗ ಮೋಟಾರ ಸೈಕಲ ಮೇಲಿಂದ ಒಮ್ಮಲೇ ಸ್ಕೀಡಾಗಿ ಬಿದ್ದಿದ್ದರಿಂದ ಆತನಿಗೆ ಸಾದಾ ರಕ್ತಗಾಯ ಮತ್ತು ಬಾರಿ ಗುಪ್ತಗಾಯಗಳಾಗಿರುತ್ತವೆ. ಅಂತಾ ಶ್ರೀ ಗಂಗಾದರ ತಂದೆ ನರಸಿಂಹರಾವ ಪಾಟೀಲ ಸಾ:ರೇವಣಸಿದ್ದೇಶ್ವರ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 65/2013 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.  
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಾಗಾಂವ ಪೊಲೀಸ್ ಠಾಣೆ:ಶ್ರೀಮತಿ ಪೂಜಾ ಗಂಡ ಗುರುಲಿಂಗಪ್ಪ ದಾಖಲೆ ಸಾ|| ತಡಕಲ ತಾ||ಜಿ|| ಗುಲಬರ್ಗಾ ರವರು ನನಗೆ  ತಡಕಲ್ ಗ್ರಾಮದ ಗುರುಲಿಂಗಪ್ಪಾ ಅನ್ನುವನೊಂದಿಗೆ 8 ತಿಂಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ನನ್ನ ತಂದೆತಾಯಿಯವರು ಮದುವೆ ಮಾಡಿದ್ದು, ಮದುವೆ ಕಾಲಕ್ಕೆ 51  ಸಾವಿರ ರೂಪಾಯಿ ಬಂಗಾರ ಕೊಟ್ಟಿರುತ್ತಾರೆ. ನನ್ನ ಗಂಡ, ಅತ್ತೆ ಜಗದೇವಿ ಭಾವ ಹುಚ್ಚಣ್ಣ ನೆಗಣಿ ಸುವರ್ಣ ಹಾಗೂ ರೇವಣಸಿದ್ದಪ್ಪ ಮತ್ತು ರಾವಮ್ಮ ಇವರು ನನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ಅಂತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಾ ಹೊಡೆಬಡೆ ಮಾಡಿದ್ದಲ್ಲದೆ, ತವರು ಮನೆಯವರಿಂದ ಬಂಗಾರ ತೆಗೆದುಕೊಂಡು ಬಾ ಹೇಳಿ ಜಗಳ ಮಾಡಿರುತ್ತಾರೆ ಈ ವಿಷಯವು  ನ್ನ ತಾಯಿಗೆ  ಹಾಗೂ ಸಂಬಂಧಿಕರಿಗೆ ತಿಳಿದಾಗ ಅವರು ದಿನಾಂಕ:29-01-2013 ರಂದು ರಾತ್ರಿ 8-00 ಗಂಟೆಗೆ  ತಡಕಲ ಗ್ರಾಮದ ನ್ನ ಗಂಡನ ಮನೆಗೆ ಬಂದಾಗ ನನ್ನ ಗಂಡ ಮತ್ತು ಆತನ ಮನೆಯವರು ನನ್ನ ತಾಯಿ ಹಾಗೂ ಸಂಬಂಧಿಕರೊಂದಿಗೆ ಜಗಳ ತೆಗೆದು ನನಗೆ ಕೂದಲು ಹಿಡಿದು ಹೊಡೆದಿದ್ದರಿಂದ  ಹಣೆಯ ಮದ್ಯ ರಕ್ತಗಾಯವಾಗಿದ್ದು ಹಾಗೂ ಬಿಡಿಸಲು ಬಂದ ತನ್ನ ತಾಯಿ ಕೀರ್ತಿ ಇವಳಿಗೆ ಕೂಡಗೋಲದಿಂದ ಅವಳ ಎಡಗೈ ಹಸ್ತದ ಮೇಲಭಾಗ ಹೊಡೆದಿದ್ದರಿಂದ  ರಕ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2013 ಕಲಂ, 498 (ಎ), 324, 504, ಸಂಗಡ 149 ಐಪಿಸಿ ಮತ್ತು 3 ಮತ್ತು 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.  
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:31/01/2013 ರಂದು ಸಾಯಂಕಾಲ 6:30 ಗಂಟೆಗೆ ಕಟ್ಟಿಯ ಮೇಲೆ ಕುಳಿತು ನಾನು ಮತ್ತು ನನ್ನ ಮಾಮನಾದ ಬಾಬು ಪಟೇಲ ತಂದೆ ಗೂಡು ಪಟೇಲ ಸಾ:ಕಿಣ್ಣಿ ಅಬ್ಬಾಸ ಇಬ್ಬರೂ  ಕೂಡಿಕೊಂಡು ಕುಳಿತು ಚಹಾ ಕುಡಿಯುತ್ತಿದ್ದೆವು, ಶ್ರೀಕಾಂತ ನಿಕ್ಕಂ ಇತನು ನನ್ನ ಮತ್ತು ನನ್ನ ಅಣ್ಣನ್ನೂಂದಿಗೆ ಒಂದು ವರ್ಷದ ಹಿಂದೆ ಜಗಳವಾಗಿತ್ತು. ಅದೇ ಹಿಂದಿನ ವೈಷಮ್ಯದಿಂದ ಶ್ರೀಕಾಂತ ತಂದೆ ಆನಂದರಾವ ನಿಕ್ಕಂ,ಈಶ್ವರ ತಂದೆ ಮನೋಹರ ನಿಕ್ಕಂ, ಸಾಗರ ತಂದೆ ಸಿದ್ದರಾಮ ನಿಕ್ಕಂ, ಸುಧೀರ ತಂದೆ ಶಿವಲಾಲ ನಿಕ್ಕಂ ಎಲ್ಲರೂ ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ. ಅಲ್ಲದೇ ಜಗಳ ಬಿಡಸಲು ಬಂದ ನನ್ನ ತಾಯಿಗೆ ಶ್ರೀಕಾಂತ ನಿಕ್ಕಂ ಇತನು ನನ್ನ ತಾಯಿಯ ಟೊಂಕದ ಮೇಲೆ ಕಾಲಿನಿಂದ ಒದ್ದಿರುತ್ತಾನೆ. ಮತ್ತು ಈಶ್ವರ ತಂದೆ ಮನೋಹರ ನಿಕ್ಕಂ ಇತನು ನನ್ನ ತಾಯಿಯ ಸೀರೆ ಹಿಡಿದು ಜಗ್ಗಿ  ಅವಮಾನ ಮಾಡಿರುತ್ತಾರೆ ಅಂತಾ ಶ್ರೀ. ಮುನೀರ್ ತಂದೆ ವಜೀರ್ ಪಟೇಲ ಸಾ|| ಕಿಣ್ಣಿ ಅಬ್ಬಾಸ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2013 ಕಲಂ,143,147,323,324,341,354,504,506  ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.  

No comments: