ಮಹಿಳಾ ಪೊಲೀಸ್ ಠಾಣೆ:
ವರದಕ್ಷಿಣೆ ಕಿರುಕುಳ ಪ್ರಕರಣ:ಮಾನ್ಯ 2 ನೇ ಅಪರ ಜೆ.ಎಮ್.ಎಫ್.ಸಿ.ನ್ಯಾಯಾಲಯದಿಂದ ಖಾಸಗಿ ದೂರು ಪತ್ರ ನಂ.383/2013
ದಿನಾಂಕ:17.01.2013 ನೇದ್ದರ ಆದೇಶದ
ಸಾರಂಶದವೇನೆಂದರೆ, ಶ್ರೀಮತಿ ಶೀತಲ ಗಂಡ ರಾಘವೇಂದ್ರ ಶಿಂತರೆ, ಸಾ||ಪ್ರಗತಿ ಕಾಲೋನಿ ಗುಲಬರ್ಗಾರವರು ನನಗೆ ದಿನಾಂಕ:12-06-2011 ರಂದು ರಾಘವೇಂದ್ರ
ತಂದೆ ಲಕ್ಷ್ಮಣರಾವ ಸಿಂತ್ರೆ ಜೆ.ಸಿ.ನಗರ ಬೆಂಗಳೂರು ಇತನೊಂದಿಗೆ ಸಂಪ್ರದಾಯದಂತೆ ತಂದೆ ತಾಯಿಯವರು
ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ನಗದು ಹಣ ಬಂಗಾರ ಇತರೆ ಸಾಮಾನುಗಳು
ಕೊಟ್ಟಿರುತ್ತಾರೆ. ಮದುವೆಯಾದ 2 ತಿಂಗಳ ನಂತರ ನನ್ನ ಗಂಡ ತವರು ಮನೆಯಿಂದ ಮನೆ ಖರೀದಿಸಲು 10
ಲಕ್ಷ ರೂಪಾಯಿಗಳು ತೆಗೆದುಕೊಂಡು ಬರಬೇಕು ಅಂತಾ ಹೊಡೆಬಡೆ ಮಾಡಿದ್ದರು, ಈ ವಿಷಯ ತನ್ನ ತಂದೆ
ತಾಯಿಗೆ ತಿಳಿಸಿ, ಮೊದಲನೇ ದೀಪಾವಳಿ ಹಬ್ಬಕ್ಕೆ ನನ್ನ ಗಂಡ ನನ್ನ ತವರು ಮನೆಗೆ ಬಂದಿರುವಾಗ 2 ಲಕ್ಷ
ರೂಪಾಯಿ ಕೊಟ್ಟು, ಇನ್ನೂ ಮುಂದೆ ಹಣ ಕೊಡುವದು ಆಗುವದಿಲ್ಲ ಅಂತಾ ನನ್ನ ತವರು ಮನೆಯವರು
ತಿಳಿಸಿದ್ದರು. ನಂತರ ನಮಗೆ ಒಂದು ಗಂಡು ಮಗು ಒಂದು ಹೆಣ್ಣು ಮಗು ಅವಳಿ ಮಕ್ಕಳಾಗಿರುತ್ತವೆ. ನನ್ನ
ಮಕ್ಕಳೊಂದಿಗೆ ಗಂಡನ ಮನೆ ಬೆಂಗಳೂರಿಗೆ ಹೋಗಿದ್ದಾಗ ಆವಾಗಲೂ ಸಹ ಹಣ ತರಬೇಕು ಅಂತಾ ಮಾನಸಿಕ ಮತ್ತು
ದೈಹಿಕ ಹಿಂಸೆ ನೀಡಿದರೂ. ನನ್ನ ತಂದೆ ತಾಯಿ ಬೆಂಗಳೂರಿಗೆ ಬಂದು ಮಾವ ಲಕ್ಷಣ ಇತನಿಗೆ
ಸಾದ್ಯವಾದಷ್ಟು ಬೇಗ ಹಣ ತಂದೆ ಕೊಡುತ್ತೇವೆ. ನಮ್ಮ ಮಗಳಿಗೆ ಇಟ್ಟುಕೊಳ್ಳಿರಿ ಅಂತಾ ಹೇಳಿದ್ದರಿಂದ
ಒಂದು ತಿಂಗಳವರೆಗೆ ಇಟ್ಟುಕೊಂಡಿದ್ದರು. ನನ್ನ ತಂದೆ ತಾಯಿಗೆ ಹಣ ತಂದು ಕೊಡಲು ಆಗದೇ ಇದ್ದುದರಿಂದ, ಮತ್ತೆ ಹೊಡೆ ಬಡೆ ಮಾಡಿರುತ್ತಾರೆ. ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ
ಮಾಡಿದ್ದರು ಸಹ ನನ್ನ ಗಂಡ ಮನೆಗೆ ಕರೆದುಕೊಂಡು
ಹೋಗಿರುವದಿಲ್ಲ. ಅನ್ನುವ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:04/2013 ಕಲಂ 498 (ಎ). 323.
506. 511 ಐಪಿಸಿ ಮತ್ತು 3 & 4 ಡಿಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ
ಪ್ರಕರಣ:
ಸೇಡಂ
ಪೊಲೀಸ್ ಠಾಣೆ:ದಿನಾಂಕ:29-01-2013 ರಂದು ಮಧ್ಯಾಹ್ನ ನನ್ನ ತಂಗಿಯಾದ
ನಂದಿತಾ (ಹೆಸರು ಬದಲಾಯಿಸಿದೆ) 19 ವರ್ಷ ಇವಳು ಹೊಲದಿಂದ
ಬರುತ್ತಿರುವಾಗ ಶಾಮರಾವ ತಂದೆ ಮಲಕಾಜಪ್ಪ ಸಾತನೂರ
ಮತ್ತು ಬಸವರಾಜ ಬಸ್ಸು @ ತಂದೆ ಪರಮೇಶ್ವರ ಡೊಳ್ಳಾ ಸಾ:ಇಬ್ಬರೂ ಹೊಸಳ್ಳಿ ಗ್ರಾಮದವರು ಹಾಗೂ
ಇನ್ನಿಬ್ಬರು ಹೆಸರು ಗೊತ್ತಿರದವರು ಕೂಡಿಕೊಂಡು ಜಬರದಸ್ತಿಯಿಂದ ಬುಲೆರೋ ಜೀಪಿನಲ್ಲಿ ಅಪಹರಣ ಮಾಡಿಕೊಂಡು
ಹೋಗಿದ್ದು, ಅಪಹರಣ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಿಬೇಕು ಅಂತ ಹುಡಗಿಯ ಅಣ್ಣ
ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:26/2013 ಕಲಂ 366 ಸಂಗಡ 34 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment