ಹುಡಗಿ ಕಾಣೆಯಾದ
ಪ್ರಕರಣ:
ಚಿತ್ತಾಪೂರ
ಪೊಲೀಸ್ ಠಾಣೆ: ಶ್ರೀ ದೇವರಾಜ ತಂದೆ ತಿಮ್ಮೇಗೌಡ ಸಾ|| ಹಾಸನ ಜಿಲ್ಲಾ ಹಾವ|| ವೆಂಟಕೆಶ್ವರ ಕಾಲನಿ ಚಿತ್ತಾಪುರ
ರವರು ನನ್ನ ಮಗಳಾದ ರಕ್ಷಿತಾ ವಯ-18 ಇವಳು ಚಿತ್ತಾಪುರದ ಶಿವಲಿಂಗಪ್ಪಗೌಡ ಪಾಟೀಲ ನರಿಬೋಳಿ ಇವರ ಪ್ಯಾರಾ ಮೆಡಿಕಲ್
ಕಾಲೇಜದಲ್ಲಿ ಓದುತ್ತಿದ್ದಳು. ದಿನಾಲು ಮುಂಜಾನೆ 8-30 ಗಂಟೆಗೆ ಕಾಲೇಜಿಗೆ ಹೋಗಿ ಮಧ್ಯಾಹ್ನ
12-30 ಗಂಟೆಗೆ ಮನೆಗೆ ಬರುತ್ತಿದ್ದಳು. ನಿನ್ನೆ ದಿನಾಂಕ 24/8/2012 ರಂದು ಪ್ರತಿ ದಿವಸದಂತೆ ಮುಂಜಾನೆ
8-30 ಗಂಟೆಗೆ ಕಾಲೇಜಿಗೆ ಹೋಗಿದ್ದು, ಅವಳು ಪುನಃ ಮನೆಗೆ ಬರಲಿಲ್ಲಾ. ಅವಳ ಗೆಳತಿಯರ ಮನೆಗೆ ಹೋಗಿರಬಹುದು
ಅಂತ ಸುಮ್ಮನಾದೆವು. ಮತ್ತು ನಮ್ಮ ಸಂಬಂದಿಕರ ಊರುಗಳಿಗೆ ಫೋನ ಮಾಡಿ ಅವಳ ಬಗ್ಗೆ ವಿಚಾರಿಸಲು ಅವರ ಹತ್ತಿರ
ಬಂದಿರುವದಿಲ್ಲಾ ಅಂತ ಗೊತ್ತಾಗಿರುತ್ತದೆ. ಕಾಣೆಯಾದ ಹುಡಗಿಯ ಹೆಸರು: ರಕ್ಷಿತಾ, ವಯಸ್ಸು 18, ಎತ್ತರ:
5 ಪೀಟ , ದುಂಡು ಮುಖ, ಕೆಂಪು ಬಣ್ಣ , ಕಪ್ಪು ಕೂದಲು, ಕನ್ನಡ, ಹಿಂದಿ, ಇಂಗ್ಲೀಷ ಭಾಷೆ
ಬಲ್ಲವಳಾಗಿರುತ್ತಾಳೆ. ಅವಳು ಧರಿಸಿರುವ ಬಟ್ಟೆ: ಕರಿ ಬಣ್ಣದ ಚೂಡಿದಾರ ಇರುತ್ತದೆ. ಅಂತ ಅವರ
ತಂದೆಯವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 79/12 ಕಲಂ ಹುಡುಗಿ ಕಾಣೆಯಾದ ಬಗ್ಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಅನಿಲಕುಮಾರ ತಂದೆ ಬಾಬು ನಾಗನಳ್ಳಿ ಸಾ:ಹೆಚ್.ಎಮ್.ಪಿ ಕಾಲೋನಿ
ಶಹಾಬಾದ ರವರು ನಾನು ದಿನಾಂಕ:24/08/2012
ರಂದು ರಾತ್ರಿ 10.00 ಗಂಟೆ ಸುಮಾರಿಗೆ ದಿವ್ಯಾ ಚೌಕ ರಸ್ತೆಯಿಂದ ಮನೆಗೆ ಹೋಗುತ್ತಿರುವಾಗ ದಿದಾರಸಿಂಗ ಇತನು ನಿಲ್ಲಿಸಿ “ತುಮ ಕಂಹಾ ಜಾರಹೀಹೆ” ಅಂತಾ ಕೇಳಿದ್ದಕ್ಕೆ
ನಾನು ಮನೆಗೆ ಹೋಗುತ್ತಿದ್ದೆನೆ ಅಂತಾ ಅಂದಿದ್ದಕ್ಕೆ ಸದರಿಯವನು ವಿನಾಕಾರಣ ಜಗಳ ತಗೆದು
ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ.
ಬಿಡಿಸಲು ಬಂದ ನನ್ನ ತಾಯಿ ಪಾರ್ವತಿ ಇವಳಿಗೂ ಕೂಡಾ ಕೈಯಿಂದ ಹೊಡೆದಿರುತ್ತಾನೆ. ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 111/2012 ಕಲಂ: 341,323, 324,354 504 ಸಂ:34 ಐಪಿಸಿ
ಮತ್ತು 3[1] [10] ಎಸ್‌ಸಿ/ಎಸ್‌ಟಿ ಪಿಎ ಆಕ್ಟ್
1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಎಸ್.ಎನ್.ಷಹಾ ನಿವೃತ್ತ ಮೇಜರ
ಜನರಲ್ ಸೀನಿಯರ ವೈಸ ಪ್ರೇಸಿಡೆಂಟ (ಪಿ&ಎ) ಜೆ.ಪಿ ಶಹಾಬಾದ ಸಿಮೆಂಟ ಪ್ರಾಜೇಕ್ಟ್
ಪತ್ರ ನಂ.ಜೆಸಿಸಿಎಲ್/ಜೆಎಸ್‌ಸಿಪಿ/ಪಿ&ಎ/ಪೊಲೀಸ/2012 ದಿನಾಂಕ:25/08/2012
ನೇದ್ದು ಇಂಗ್ಲೀಷನಲ್ಲಿ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ:24/08/2012 ರಂದು ರಾತ್ರಿ 10.30
ಗಂಟೆಗೆ ನಮ್ಮ ಕಾಲೋನಿ ಮನೆ.ನಂ.ಇ-01/10 ರಲ್ಲಿ ವಾಸಿಸುವ ಶ್ರೀ ಅನೀಲ ತಂದೆ ಬಾಬು ಇತನು ಕುಡಿದ
ಅಮಲಿನಲ್ಲಿ ಕೆಲವು ಜನರೊಂದಿಗೆ ನಮ್ಮ ಸಿಬ್ಬಂದಿ ರಾಜಬಹಾರ ಪಾಂಡೆ ವಾಸಿಸುವ ಮನೆ.ನಂ.ಸಿ-2/10
ಬಂದು ಬಾಗಿಲ ಒದ್ದು ಮುರಿದು ಒಳಗೆ ಬಂದು ಅವನಿಗೆ ಹೊಡೆದಿದ್ದು ಅಲ್ಲದೆ ಅವಾಚ್ಯವಾಗಿ ಬೈದು ಜೀವದ
ಬೆದರಿಕೆ ಹಾಕಿ ಅಂಜಿಸುತ್ತಿರುವಾಗ ಈ ಸುದ್ದಿ ತಿಳಿದು ನಮ್ಮ ಕೆಲವು ಸೆಕ್ಯೂರಿಟಿ ಗಾರ್ಡದವರನ್ನು
ಅಲ್ಲಿಗೆ ಕಳುಹಿಸಿ ಕೂಗಡುತ್ತಿರುವ ಆತನ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 112/2012 ಕಲಂ: 147,323,448,504,506 ಸಂ:149 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
No comments:
Post a Comment