POLICE BHAVAN KALABURAGI

POLICE BHAVAN KALABURAGI

25 August 2012

GULBARGA DISTRICT REPORTED CRIMES


ಹೆಣ್ಣು ಮಗಳು ಕಾಣೆಯಾದ ಪ್ರಕರಣ:
ಮಹಿಳಾ ಪೊಲೀಸ ಠಾಣೆ : ಶ್ರೀ ಅಮಜದ ತಂದೆ ಮಹ್ಮದ ಖಾಸಿಂಸಾಬ ಸಾ||ಖುರೇಷಿ ಮಜೀದ ಹತ್ತಿರ ರೋಜಾ ಗುಲಬರ್ಗಾ ರವರು ನನ್ನ ಹೆಂಡತಿಯಾದ ಮಹೀರುನ್ನಿಸಾ ಇವಳು ದಿನಾಂಕ:22/08/2012 ರಂದು ರಾತ್ರಿ 1-00 ಗಂಟೆಯ ಸುಮಾರಿಗೆ ನಾವೇಲ್ಲರೂ ಮಲಗಿಕೊಂಡಾಗ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿರುತ್ತಾಳೆ ನಮ್ಮ ಸಂಬಂದಿಕರಲ್ಲಿ ಹಾಗೂ ನಮ್ಮ ಅತ್ತೆ ಮಾವನವರಿಗೆ ಪೋನ ಮಾಡಿ ವಿಷಯ ತಿಳಿಸಿರುತ್ತೆನೆ. ಕಾರಣ ಕಾಣೆಯಾದ ನನ್ನ ಹೆಂಡತಿ ಮಹರುನ್ನಿಸಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:61/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಪ್ಪ ತಂದೆ ಖತಲಪ್ಪ ಕೊಚಿ ಸಾ:ಝಳಕಿ (ಕೆ) ತಾ:ಆಳಂದ  ರವರು ನಾನು ದಿನಾಂಕ:23/08/2012 ರಂದು ಬೆಳ್ಳಿಗ್ಗೆ 9-00  ಗಂಟೆ ಸುಮಾರಿಗೆ ಕುರಿಗಳು ಮೇಯಿಸಲು ನನ್ನ ಕುರಿಗಳನ್ನು ಹೊಡೆದುಕೊಂಡು ಹೋಗಿದ್ದು, ನನ್ನ ಹೆಂಡತಿಯು ಸಹ  ಹೊಲದ ಕೆಲಸಕ್ಕೆ ಹೋಗಿರುತ್ತಾಳೆ. ನಾನು ಕುರಿಗಳು ಮೇಯಿಸಿಕೊಂಡು ಹೊಲದಿಂದ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಗೆ ಬಂದು, ಮನೆಯೂಳಗೆ ಹೋಗಬೇಕು ಅಂತಾ ಮನೆ ಬಾಗಿಲು ಹತ್ತಿರ ಹೋದಾಗ ಬಾಗಿಲು ಒಂದು ಫಲಕ ತೆರೆದು ಮುರಿದಿತ್ತು. ನಾನು ಮನೆಯೂಳಗೆ ಹೋಗಿ ನೋಡಲು ಬಟ್ಟೆಗಳು ,ಎಲ್.ಐ.ಸಿ ಪಾಲಸಿಗಳು ಹೊಲದ ಕಾಗದ ಪತ್ರಗಳು ಇತರೇ ಕಾಗದ ಪತ್ರಗಳು ಮನೆಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದಿದ್ದವು ನನ್ನ ಮನೆಯಲ್ಲಿನ ಪೆಟ್ಟಿಗೆ ಮುರಿದಿದ್ದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಾನುಗಳು ಮತ್ತು ನಗದು 10,000/-ಸಾವಿರ ರೂಪಾಯಿಗಳು. ಹೀಗೆ ಒಟ್ಟು 1,00,150/- (ಒಂದು ಲಕ್ಷದ ಒಂದು ನೂರಾ ಐವತ್ತು ) ರೂಪಾಯಿ ಕಿಮ್ಮತ್ತಿನವುಗಳು ಕಳ್ಳತನವಾಗಿರುತ್ತದೆ. ನನ್ನ ಮನೆಯಲ್ಲಿ ಕಳ್ಳತನ ಆದ ಬಗ್ಗೆ ನಮ್ಮೂರ ಶಿವಪ್ಪ ತಾಯಿ ಗೌರಾಬಾಯಿ ಕೊಚಿ, ಗೌರಾಬಾಯಿ ತಂದೆ ಶಿವಪ್ಪ ಕೊಚಿ ಸಾ:ಝಳಕಿ(ಕೆ) ಇವರೆ ಕಳ್ಳತನ ಮಾಡಿರಬಹುದು ಅಂತಾ ಸಂಶಯ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2012 ಕಲಂ: 454,380  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: