ಕಾರ್ಮಿಕ
ಸಾವು:
ವಿಶ್ವ
ವಿದ್ಯಾಲಯ ಪೊಲೀಸ್ ಠಾಣೆ:
ಶ್ರೀ ಪಂಕಜ ಮಲ್ಲಿಕ್ ತಂದೆ ಮನೋರಂಜನ
ಮಲ್ಲಿಕ್ ವಯ: 23 ವರ್ಷ ಉ: ಈ.ಎಸ.ಐ ಆಸ್ಪತ್ರೆಯಲ್ಲಿ ಕಾರ್ಪೆಂಟರ ಸಾ:ಮಿಲನ ನಗರ ತಾ: ಬಗೂಲಾ ಜಿ|| ನೋದಿಯಾ, ರಾಜ್ಯ :ಪಶ್ಚಿಮ ಬಂಗಾಳ ರವರು ನಾನು ಮತ್ತು ಕಾರ್ಪೆಂಟರ ಕೆಲಸಗಾರರಾದ ಗೋವಿಂದ ತಂದೆ
ಸೂಲೇನ ಮತ್ತು ನಿಷಿತ ಟಿಕೇದಾರ ಮತ್ತು ಇತರರು ಕೂಡಿಕೊಂಡು ದಿನಾಂಕ : 18-08-2012 ರಂದು ಬೆಳಿಗ್ಗೆ 10-00
ಗಂಟೆಗೆ ಈ.ಎಸ.ಐ ಆಸ್ಪತ್ರೆಯ ಮುಖ್ಯ ಕಟ್ಟಡದ ಬಿ ಬ್ಲಾಕದ 4ನೇ ಅಂತಸ್ತಿನಲ್ಲಿ ಕಾರ್ಪೆಂಟರ ಕೆಲಸ
ಮಾಡುತ್ತಾ ಇದ್ದೆವು. ಅಂದಾಜು 12-30 ಪಿಎಮ ಸುಮಾರಿಗೆ ನಿಷಿತ ಟಿಕೇದಾರ ಇತನು ಕಾರ್ಪೆಂಟರ ಮಾಡುವ
ಸಾಮಾಗ್ರಿಗಳನ್ನು ಒಂದು ಕಡೆ ಹಾಕುತ್ತಾ ಇದ್ದಾಗ ಅವನ ಕಾಲಲ್ಲಿ ಪ್ಲೈವುಡ್ ಕಟ್ಟಿಗೆ ಚಪ್ಪಲದಲ್ಲಿ
ಸೇರಿದ್ದರಿಂದ ಜೋಲಿ ಹೋಗಿ 4ನೇ ಅಂತಸ್ತಿನಿಂದ ನೆಲ ಮಾಳಿಗೆಯ ಕೆಳಗೆ ಬಿದ್ದನು ಆಗ ನಾನು ಮತ್ತು
ಅಲ್ಲಿಯೇ ಇದ್ದ ಕಾರ್ಪೆಂಟರ ಗೋವಿಂದ ಮತ್ತು ಲೇಬರ ಗುತ್ತೇದಾರ ಮಿಲ್ಟನ ಬಿಸ್ವಾಸ ಮತು ಇತರರು
ಕೆಳಗಡೆ ಹೋಗಿ ನೋಡಲಾಗಿ ನಿಷಿತ ಟಿಕೇದಾರನ ಮುಖ ಪೂರ್ತಿ ಚಪ್ಪಟ್ಟೆಯಾಗಿದ್ದು ಬಲಗಡೆ
ಕಣ್ಣುಗುಡ್ಡೆ ಹೊರಗೆ ಬಂದಿದ್ದು, ಎಡಗೈ ಮುರಿದಿದ್ದು, ಬಲ ಮಣಿಕಟ್ಟು ಮುರಿದು ರಕ್ತಗಾಯ
ಹೊಟ್ಟೆಗೆ ಎದೆಗೆ ಗುಪ್ತಗಾಯ ತಲೆಗೆ ಗಾಯವಾಗಿ ನರಳುತ್ತಿದ್ದು ಆಗ ನಾನು ಮಿಲ್ಟನ ಬಿಸ್ವಾಸ ಮತ್ತು
ಇತರರು ಕಂಪನಿ ಗಾಡಿಯಲ್ಲಿ ಅವನಿಗೆ ಹಾಕಿಕೊಂಡು ಉಪಚಾರಕ್ಕೆ ಸರ್ಕಾರಿ ಆಸ್ಪತ್ರೆಗೆ ತಂದಾಗ
ಅಲ್ಲಿಯ ವೈದ್ಯರು ಪರೀಕ್ಷಿಸಿ ನಿಷಿತ ಟಿಕೇದಾರ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು.ಸದರಿ ಈ.ಎಸ.ಐ
ಆಸ್ಪತ್ರೆಯ ಮುಖ್ಯ ಆಸ್ಪತ್ರೆಯ ಬಿ ಬ್ಲಾಕ ಕಟ್ಟಡದ ಪ್ರಕಾಶ ರೆಡ್ಡಿ ಡೆಪ್ಯೂಟಿ ಪ್ರೋಜೆಕ್ಟ
ಮ್ಯಾನೇಜರ, ರಾಜಕುಮಾರ ತಂದೆ
ಹುಸನಪ್ಪ ಮೇತ್ರೆ ಸೂಪರವೈಜರ, ರಮೇಶಬಾಬು
ತಂದೆ ವೆಂಕಟಯ್ಯ ಲೇಬರ ಇನಚಾರ್ಜ ಇವರು ಆಸ್ಪತ್ರೆಯ ಕಟ್ಟಡ ನಿರ್ಮಾಣದ ಕಾರ್ಪೆಂಟರ ಕೆಲಸ
ಮಾಡುವವರ ಪ್ರಾಣಕ್ಕೆ ಅಪಾಯವಾಗದಂತೆ ಆಧುನಿಕ ಸುಸಜ್ಜಿತ ಸುರಕ್ಷತೆಯ ವ್ಯವಸ್ಥೆ ಮಾಡದೆ ಅವರ
ನಿರ್ಲಕ್ಷತನದಿಂದ ನಿಷಿತ ಟಿಕೇದಾರ ಇತನು ಕಾರ್ಪೆಂಟರ ಕೆಲಸ ಮಾಡುವ ಸಮಯದಲ್ಲಿ ಅವನ ಕಾಲಲ್ಲಿ
ಪ್ಲೈವುಡ್ ಕಟ್ಟಿಗೆ ಸಿಲುಕಿ ಜೋಲಿ ಹೋಗಿ 4ನೇ ಅಂತಸ್ತಿನಿಂದ ನೆಲ ಮಾಳಿಗೆಗೆ ಬಿದ್ದು ಮೈಮೇಲೆ
ಭಾರಿ ಗುಪ್ತ ಮತ್ತು ರಕ್ತಗಾಯಗಳಾಗಿ ಮೃತಪಟ್ಟಿದ್ದು ಕಾರಣ 3 ಜನರ ಮೇಲೆ ಕಾನೂನು ಕ್ರಮ
ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 182/2012 ಕಲಂ 304(ಎ) ಐಪಿಸಿ
ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಚಂದನ ತಂದೆ ಸುರೇಶ
ಪಾಂಡೆ ವಯಾ: 22 ವರ್ಷ ಉ: ಪೆಂಟಿಂಗ ಕೆಲಸ ಸಾ: ಗೋರಖಪೂರ. ಉತ್ತರ ಪ್ರದೇಶ ರಾಜ್ಯ ಹಾ;ವ;ಮೀಸಬಾ ನಗರ ಗುಲಬರ್ಗಾ ರವರು ನಾನು ಮತ್ತು ದರ್ಮೇಂದ್ರ ಕೂಡಿಕೊಂಡು ಸುಪರ
ಮಾರ್ಕೆಟದಿಂದ ಜಗತ ಸರ್ಕಲ ಬಸ ನಿಲ್ದಾಣದ ಮುಖಾಂತರ ದಿನಾಂಕ 15-08-2012 ರಂದು ರಾತ್ರಿ 9-45 ಗಂಟೆಗೆ ಸುಮಾರಿಗೆ ಮನೆಗೆ
ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಅಂದರೆ ಎಸ್.ವಿ.ಪಿ ಸರ್ಕಲ ಕಂದೂರ ಮಹಲ ಸಮೀಪದಿಂದ ಕಂದೂರ
ಮಹಲ ಹತ್ತಿರ ನಿಲ್ಲಿಸಿದ ಕ್ರೂಜರ ಜೀಪ ನಂ ಎಪಿ-23 ವಿ-4422 ನೇದ್ದರ ಚಾಲಕ ನಿಷ್ಕಾಳಜಿತನದಿಂದ ಹಿಂದಕ್ಕೆ ಜೋರಿನಿಂದ ಚಲಾಯಿಸಿದ್ದರಿಂದ ಚಂದನ ಇವರ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ
ಮಾಡಿ ಭಾರಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 84/2012 ಕಲಂ
279, 338 ಐಪಿಸಿ ಪ್ರಕಾರ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಠಾಣೆ: ಶ್ರೀ ಸಂಜೀವಕುಮಾರ ತಂದೆ ವಿಶ್ವನಾಥರಾವ ಕಾಂಬ್ಳೆ ರವರು ನಾನು ದಿನಾಂಕ 18-07-2012 ರಂದು ಬ್ಯಾಂಕ್ ಕರ್ತವ್ಯಕ್ಕೆ
ಹೋಗಿ, ರಾತ್ರಿ 9 ಗಂಟೆಗೆ ಮನೆಗೆ ಬಂದು ಅಳಂದ ರೋಡದಲ್ಲಿರುವ ಸಾಯಿ ರೆಸಿಡೆನ್ಸ್, ಶಟ್ಟಿ
ಅಪಾರ್ಟಮೆಂಟ್ ನ ಕೆಳಗೆ ಪಾರ್ಕಿಂಗ್ ಸ್ಥಳದಲ್ಲಿ ನನ್ನ ಹಿರೊ ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್
ನಂ. ಕೆಎ-38/ಹೆಚ್.-8861 ನೇದ್ದನ್ನು ನಿಲ್ಲಿಸಿದ್ದೆನು, ದಿನಾಂಕ 19-07-2012 ರಂದು ಬೆಳಿಗ್ಗೆ
ತನ್ನ ಮನೆಯಿಂದ ಕೆಳಗೆ ಬಂದು ಮೊಟಾರ್ ಸೈಕಲ್ ನೋಡಲು ಕಾಣಿಸಲಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರೂ
ಮೊಟಾರ್ ಸೈಕಲ್ ಸಿಕ್ಕರಿವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 60/12 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment