ಎಸ್.ಎಮ್.ಎಸ್ ಕಳುಹಿಸಿ ಸಾರ್ವಜನಿಕ ಜೀವನದಲ್ಲಿ ಭಯ-ಬೀತಿ ಹುಟ್ಟಿಸುತ್ತಿರುವವರ ಮೇಲೆ
ಕ್ರಮ ಜರುಗಿಸುತ್ತಿರುವ ಬಗ್ಗೆ.
ಇತ್ತೀಚಿನ
ದಿವಸಗಳಲ್ಲಿ ಮೊಬಾಯಿಲ್, ಈ ಮೇಲ್ ಮತ್ತು ಪೇಸ್ ಬುಕ್ ಮುಖಾಂತರ ಸುಳ್ಳು ಎಸ್.ಎಮ್.ಎಸ್. ಕಳುಹಿಸಿ
ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಮೆಸೆಜಗಳನ್ನು ಕಳುಹಿಸಿ ಜನರಲ್ಲಿ ಆತಂಕದ ವಾತವರಣವನ್ನುಂಟು
ಮಾಡುತ್ತಿದ್ದು, ಈ ಬಗ್ಗೆ ಈಗಾಗಲೇ ಗುಲಬರ್ಗಾ ನಗರದ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ಸುಳ್ಳು ಎಸ್.ಎಮ್.ಎಸ್
ಬಗ್ಗೆ ಪ್ರಕರಣ ದಾಖಲಾಗಿದೆ. ಇಂತಹ ಸುಳ್ಳು ಎಸ್.ಎಮ್.ಎಸ್ ಮೆಸೆಜಗಳು ಕಳುಹಿಸುತ್ತಿರುವವರನ್ನು ಪತ್ತೆ
ಮಾಡಲು ಈಗಾಗಲೇ ಕ್ರಮ ಕೈಕೊಳ್ಳಲಾಗುತ್ತಿದೆ. ಸಾರ್ವಜನಿಕರು ಈ ತರಹ ಸುಳ್ಳು ಎಸ್.ಎಮ್.ಎಸ್
ಬಂದಲ್ಲಿ ನಿರ್ಲಕ್ಷ ಮಾಡತಕ್ಕದ್ದು, ಮತ್ತು ಇಂತಹ ಮೆಸೆಜಗಳನ್ನು ಸ್ವಿಕರಿಸಿದಲ್ಲಿ ಮೊತ್ತೊಬ್ಬರಿಗೆ
ಕಳುಹಿಸಬಾರದು. ಇದು ಸಹ ಅಪರಾದ ಆಗುತ್ತದೆ. ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದೆಂದು ಜಿಲ್ಲಾ
ಪೊಲೀಸ್ ವತಿಯಿಂದ ಮನವಿ.
No comments:
Post a Comment