ಅಪಘಾತ ಪ್ರಕರಣ:
ಸಂಚಾರಿ
ಪೊಲೀಸ್ ಠಾಣೆ:ಶ್ರೀ ನಾಗರಾಜ ತಂದೆ
ಸೂಗಣ್ಣಾ ಪತ್ತಾರ, ಉಃ ಉಪನ್ಯಾಸಕ ಸಾಃ
ಪಾವನಗಂಗಾ, ಕಾಲೂನಿ ರಾಜಾಪೂರ ಗುಲಬರ್ಗಾರವರು
ನಾನು ದಿನಾಂಕ:11-05-2012 ರಂದು ಬೆಳಗ್ಗೆ 6-15 ಗಂಟೆಗೆ ನಾನು ಮತ್ತು ಸುನೀಲಕುಮಾರ ಇಬ್ಬರು ಮೋಟಾರ
ಸೈಕಲ ನಂ. ಕೆ.ಎ 32 ಎ 4434 ನೇದ್ದರ ಮೇಲೆ ಆರ್.ಟಿ.ಓ ಆಫೀಸ ಎದರುಗಡೆಯಿಂದ ರೈಲ್ವೆ ಸ್ಟೇಷನ
ಕಡೆಗೆ ಹೋಗುವಾಗ ಹಿಂದಿನಿಂದ ಟಂ.ಟಂ ನಂ. ಕೆ.ಎ 32 ಬಿ 5199 ನೇದ್ದರ ಚಾಲಕ ಅತಿವೇಗ ಮತ್ತು
ಅಲಕ್ಷತನದಿಂದ ಟಂ.ಟಂ ಚಲಾಯಿಸಿಕೊಂಡು ಬಂದು ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ
ಡಿಕ್ಕಿ ಪಡಿಸಿ ಟಂ.ಟಂ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
ನಂ: 25/2012 ಕಲಂ 279, 337, ಐ.ಪಿ.ಸಿ ಸಂಗಡ 187
ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಾಖಲೆ ಇಲ್ಲದೆ ಇರುವ ಮೋಟಾರ
ಸೈಕಲ ಜಪ್ತಿ :
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:30/04/2012 ರಂದು ಶ್ರೀ.ಡಿ.ಸಂತೋಷಕುಮಾರ
ಪಿ.ಎಸ್.ಐ (ಅ.ವಿ) ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ
ನಂ: 48/2012 ಕಲಂ: 379 ಐ.ಪಿ.ಸಿ ನೇದ್ದರಲ್ಲಿ ದಸ್ತಗಿರಿ ಮಾಡಿದ ಬಾಬು ತಂದೆ ಗೋಪಾಲ ಪರಿಯಾ ವಯ|| 45, ಜಾತಿ|| ಪರಿಯಾ, ಉ|| ಪೆಂಟಿಂಗ ಕೆಲಸ, ಸಾ|| ಮರೆಮ್ಮಾ ಗುಡಿ
ಹತ್ತಿರ ರಾಮಜಿ ನಗರ ತಿರುಚಿನಾಪಳ್ಳಿ ಜಿ|| ತಿರುಚಿನಾಪಳ್ಳಿ ರಾಜ್ಯ ತಮಿಳುನಾಡು ಈತನಿಂದ ಹಿರೋ
ಹೋಂಡಾ ಮೋಟಾರ ಸೈಕಲ ಜಪ್ತಿ ಮಾಡಿಕೊಂಡು ಬೆರಳು ಮುದ್ರೆ ಪಡೆದು ಜೆ.ಸಿ ಕುರಿತು ಕಳುಹಿಸಿದ್ದು, ಬೆರಳು ಮುದ್ರೆಯನ್ನು
ಬೆರಳು ಮುದ್ರೆ ಘಟಕಕ್ಕೆ ಕಳುಹಿಸಿದಾಗ, ಈ ಆರೋಪಿತನು ಮೈಸೂರ ಸೌತ ಪೊಲೀಸ ಠಾಣೆಯ ಗುನ್ನೆ ನಂ:
299/95 ಕಲಂ: 41(ಡಿ) 102 ಸಿ.ಆರ್.ಪಿ.ಸಿ ಹಾಗೂ ಹಾವೇರಿ ಟೌನ ಪೊಲೀಸ ಠಾಣೆಯ ಗುನ್ನೆ ನಂ:
186/92 ಕಲಂ: 457, 380 ಐ.ಪಿ.ಸಿ
ನೇದ್ದರಲ್ಲಿ ಆರೋಪಿತನಾಗಿರುವದರಿಂದ ಸದರಿಯವನಿಗೆ ಸಂಬಂಧಪಟ್ಟ ಠಾಣೆಗಳಲ್ಲಿ ಪ್ರಕರಣದಲ್ಲಿ
ಭಾಗಿಯಾಗಿರುವದರಿಂದ ಮತ್ತು ಇಲ್ಲಿ ಬೇರೆ ಬೇರೆ ಹೆಸರು ಹೇಳಿರುವದರಿಂದ ಸದರಿಯವನ ವಿರುದ್ದ ಕಲಂ:
177 ಐ.ಪಿ.ಸಿ ನೇದ್ದರಲ್ಲಿ ಅಸಂಜ್ಞೇಯ ಅಪರಾದ ಗುನ್ನೆ ದಾಖಲು ಮಾಡಿಕೊಳ್ಳಲು ಮಾನ್ಯ
ನ್ಯಾಯಾಲಯಕ್ಕೆ ಪರವಾನಿಗೆ ಕುರಿತು ಕೇಳಿಕೊಂಡಿದ್ದರಿಂದ ಮಾನ್ಯ ನ್ಯಾಯಲಯದ ಆದೇಶದನ್ವಯ ಠಾಣೆ
ಗುನ್ನೆ ನಂ:60/2012 ಕಲಂ: 177 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ನಿಂದನೆ ತಾಳಲಾರದೇ ಆತ್ಮಹತ್ಯೆ:
ರಟಕಲ್
ಪೊಲೀಸ್ ಠಾಣೆ:ಶ್ರೀ ವಸಂತಕುಮಾರ ತಂದೆ ಭೀಮಸಿಂಗ
ಚಿನ್ನಾ ರಾಠೋಡ ಸಾ||ಡೊಂಗರ ನಾಯಕ ತಾಂಡಾ ಖಾನಾಪೂರ ರವರು ನಾನು ಗುಲ್ಬರ್ಗಾದಲ್ಲಿ
ವಿದ್ಯಾಭ್ಯಾಸ ಮಾಡುತ್ತಿದ್ದು, ನಿನ್ನೆ ನಾನು ಊರಿಗೆ ಪೋನ ಮಾಡಿದಾಗ
ನನ್ನ ತಾಯಿ ನನಗೆ ತಿಳಿಸಿದ್ದೇನೆಂದರೆ ನಿನ್ನ
ತಂಗಿ ಅಂಜನಾಬಾಯಿ ಇವಳು 8 ದಿನಗಳ ಹಿಂದೆ ನೀರು ತರಲು ಟಾಕಿ ಹತ್ತಿರ
ಹೋದಾಗ ನಮ್ಮ ಬಾಜು ಮನೆಯ ಸೀತಾಬಾಯಿ ಇವಳೊಂದಿಗೆ ಜಗಳ ಮಾಡಿಕೊಂಡಿದ್ದು ಆಗ ಸೀತಾಬಾಯಿ
ಕೊರಳಲ್ಲಿದ್ದ 2 ಗುಂಡು ಮಣಿಗಳು ಕಳೆದ ಸಂಬಂಧ ನೀನೆ ಕಾರಣ ಅಂತ ಅಂತಾ ಆಕೆಯ ಗಂಡ ಚನ್ನಪ್ಪಾ ಪಂಚಾಯಿ
ಕರೆದಿದ್ದನು, ನಾನು ಮತ್ತು ನಿಮ್ಮ ತಂದೆ ಪಂಚಾಯತಿಗೆ ಹೋಗಿದ್ದು. ಪಂಚಾಯತಿಯಲ್ಲಿ ಚನ್ನಪ್ಪಾ ತಂದೆ ಖೀರು ಜಾಧವ, ಸೀತಾಬಾಯಿ ಗಂಡ ಚನ್ನಪ್ಪಾ
ಜಾಧವ,ಧನಸಿಂಗ ತಂದೆ ಹರು ಪವಾರ,ಕಾಶಿರಾಮ ತಂದೆ ಕೇಸು ಚಿನ್ನಾ ರಾಠೋಡ, ಭಾವಸಿಂಗ ತಂದೆ ಬಿಕ್ಕು
ರಾಠೋಡ,ಭೀಮಸಿಂಗ ತಂದೆ ರಾವಣು ರಾಠೋಡ,ಲಾಲುಸಿಂಗ ತಂದೆ ಥಾವರು ಸಿನ್ನಾ ರಾಠೋಡ,ಮೊಹನ ತಂದೆ
ಡೊಂಗ್ರನಾಯಕ ರಾಠೋಡ ಸಾ||ಎಲ್ಲರು ಡೊಂಗರನಾಯಕ ತಾಂಡ ಖಾನಾಪೂರ ರವರು ಪಂಚಾಯತಿ ಮಾಡಿ ಅಂಜನಾಬಾಯಿಗೆ 551
ರೂ ದಂಡ ಕಟ್ಟಿರುತ್ತಾರೆ ಅಂತ ತಿಳಿಸಿದಳು, ನಾನು ಹಣ ತರಲು ಹೋದಾಗ ನಿನ್ನ ತಂಗಿ ಅಂಜನಾಬಾಯಿ
ಹೇಳಿದ್ದೇನೆಂದರೆ, ಸೀತಾಬಾಯಿ & ಆಕೆಯ ಗಂಡ ಚನ್ನಪ್ಪಾ ಇಬ್ಬರು ನನಗೆ ನಿನ್ನ ತಂದೆ – ತಾಯಿ ನಿನ್ನ ಮದುವೆ ಮಾಡಲ್ಲಾ ಇದೆ ರೀತಿ ಜಗಳಾಡುತ್ತಿರಿ ನಿನ್ನಂತವರು
ಯಾಕ್ಯಾ ಬದುಕಬೇಕು ನಿನಗೆ ಚಪ್ಪಲಿ ಹಾರ ಕೊಳ್ಳಾಗ ಹಾಕಿ ಮೆರೆಸಬೇಕಿತ್ತು, ಸುಮ್ನೆ ಬಿಟ್ಟೀವಿ ಅಂದಿದ್ದಕ್ಕೆ ಅವಮಾನ ತಾಳಲಾರದೇ ನಿನ್ನ ತಂಗಿ
ತನ್ನ ಓಡನಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ , ನಾವು ಚೀರಾಡಲು ಶಾಲೆ ಹತ್ತಿರ ಇದ್ದ
ಪಂಚರು & ತಾಂಡೆ ಜನರು ಬಂದು ನನ್ನ ತಂಗಿಯ ಶವ
ಸುಟ್ಟಿರುತ್ತಾರೆ ಅಂತಾ ನನ್ನ ತಾಯಿ ನನಗೆ ಹೇಳಿರುತ್ತಾಳೆ, ನನ್ನ ತಂಗಿಯ ಸಾವಿಗೆ ಕಾರಣರಾದ ಹಾಗೂ ನನ್ನ ತಂದೆ ತಾಯಿಯವರು ಹೆಣ
ಸುಡಬೇಡ ಅಂದರೂ ಸುಟ್ಟಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ
25/2012 ಕಲಂ 306, 201, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ.ಬಾಬುಮಿಯಾ ತಂದೆ ರುಕ್ಮೊದ್ದಿನ ನದಾಫ, ವಯ|| 56 ವರ್ಷ, ಉ|| ಅಡುಗೆ ಭಟ, ಸಾ|| ಜಿಲಾನಾಬಾದ
ಗುಲಬರ್ಗಾ ರವರು ನಾನು ಪಬ್ಲಿಕ ಗಾರ್ಡನದಲ್ಲಿರುವ
ಮಯೂರ ಬಹುಮನಿ ಬಾರ ಮತ್ತು ರೆಸ್ಟೋರೆಂಟದಲ್ಲಿ ಅಡುಗೆ ಭಟ ಅಂತಾ ಕೆಲಸ ಮಾಡುತ್ತಿದ್ದು, ದಿನಾಂಕ: 11/05/2012 ರಂದು ಮಧ್ಯಾಹ್ನ
2:00 ಗಂಟೆಗೆ ಜಗತ ಬಡಾವಣೆಯ ಗೌತಮ ಪುಟಗೆ ಈತನು ಮ್ಯಾನೇಜರ ಸಂತೋಷ ಟೆಂಗಳಿ ಇವರೊಂದಿಗೆ ಜಗಳಕ್ಕೆ
ಬಿದ್ದು, ಅವಾಚ್ಯ ಶಬ್ದಗಳಿಂದ
ಬೈಯುತ್ತಿದ್ದನು. ಆಗ ಸಂತೋಷ ಇವರು ಸುಮ್ಮನೆ ಬೈಯಬೇಡ ಊಟ ಮಾಡಿದ ಬಿಲ್ಲು ಕೊಟ್ಟು ಹೋಗು ಅಂತಾ
ಅಂದಿದ್ದಕ್ಕೆ ಗೌತಮ ಈತನು ಸಂತೋಷನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆಯುತ್ತಿದ್ದನು. ಜಗಳ
ಬಿಡಿಸಲು ಹೋದ ನನಗೂ ಕೂಡ ಗೌತಮ ಈತನು ತನ್ನ ಕೈಯಲ್ಲಿ ಇದ್ದ ಚಾಕುವಿನಿಂದ ನನ್ನ ತಲೆಯ ಮೇಲೆ
ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:59/12
ಕಲಂ: 323, 324, 504, 506 ಐ.ಪಿ.ಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment