POLICE BHAVAN KALABURAGI

POLICE BHAVAN KALABURAGI

11 May 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಸುಭಾಷ ತಂದೆ ವೀರಸಂಗಪ್ಪ ಭೀಮ್ಮನಳ್ಳಿ ಸಾ||ಭವಾನಿನಗರ ಗುಲಬರ್ಗಾ ವರು ನನ್ನ ಲಾರಿ ನಂಬರ ಕೆಎ-32 ಎ-7751 ನೇದ್ದು ಸೇಡಂ ರಿಂಗ ರೋಡ ಬಂದೂಕವಾಲಾ ಕಾಟಾದ ಎದುರಿನ ರಸ್ತೆಯ ಮೇಲೆ ನಿಲ್ಲಿಸಿದ್ದು, ದಿನಾಂಕ:09/05/2012 ರಂದು ರಾತ್ರಿ 9-00  ಗಂಟೆ ಅವಧಿಯಿಂದ ದಿನಾಂಕ: 10/05/2012 ರಂದು ಬೆಳಿಗ್ಗೆ 6-00 ಅಂಟೆಯ ಅವಧಿಯಲ್ಲಿ ನಿಲ್ಲಿಸಿದ ಲಾರಿಯನ್ನು ತೆಗೆದುಕೊಂಡು ಹೋಗಿ ನಾಗೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಮುಂದೆ ಲಾರಿಯನ್ನು ನಿಲ್ಲಿಸಿ, ಅದರ 11 ಟೈರಗಳು ಡಿಸ್ಕ್‌ ಸಮೇತ ಕಳುವು ಮಾಡಿಕೊಂಡು ಹೋಗಿದ್ದು. ಅದರ ಮೌಲ್ಯ ಅ||ಕಿ|| 2,40,000/- ರೂಪಾಯಿ ಆಗುತ್ತದೆ, ಯಾರೋ ಕಳ್ಳರು ನನ್ನ ಲಾರಿಯ ಟೈರ ಡಿಸ್ಕ ಕಳವು ಮಾಡಿಕೊಂಡು ಹೋಗಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂಬರ: 147/2012 ಕಲಂ 379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಬಾಂಬ ಬೇದರಿಕೆ ಪತ್ರ ಬರೆದ ಆರೋಪಿ ಬಂದನ :
ಅಶೋಕ ನಗರ ಪೊಲೀಸ್ ಠಾಣೆ:ಮಾನ್ಯ ಪ್ರವೀಣ ಪವಾರ ಎಸ್.ಪಿ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ, ಶ್ರೀ ಭೂಷಣ ಬೊರಸೆ ಐ.ಪಿ.ಎಸ್  ಎ.ಎಸ್.ಪಿ (ಎ) ಉಪ ವಿಭಾಗ ಗುಲಬರ್ಗಾ ರವರ ನೇತ್ರತ್ವದಲ್ಲಿ ಶ್ರೀ ಟಿ.ಹೆಚ್.ಕರೀಕಲ್ ಪಿ.ಐ ಅಶೋಕ ನಗರ, ಶ್ರೀ ಬಸೀರ ಪಟೇಲ ಪಿ.ಐ   ಡಿ.ಸಿ.ಐ.ಬಿ ಘಟಕ ಗುಲಬರ್ಗಾ, ಹಾಗು ಸಿಬ್ಬಂದಿ ಜನರಾದ ಸುರೇಶ, ಚನ್ನವೀರ, ಗಂಗಯ್ಯಾ ಸ್ವಾಮಿ ರವರನೊಳಗೊಂಡ ತಂಡವು ದಿನಾಂಕ 06/05/2012 ರಂದು ಗುಲಬರ್ಗಾ ಬಸ್ಸ ನಿಲ್ದಾಣದಲ್ಲಿ ಬಾಂಬ ಇಟ್ಟಿರುವ ಅನಾಮಧೇಯ ಬೆದರಿಕೆ ಪತ್ರದ ತನಿಖೆ ಕೈಕೊಂಡಿದ್ದರಿಂದ ಬಾಂಬ ಬೇದರಿಕೆ ಪತ್ರದ ಅಪಾಧಿತ ಶ್ರವಣಕುಮಾರ ತಂದೆ ಪಂಡಿತರಾವ ಸಾ:ತಾರಪೈಲ್ ಗುಲಬರ್ಗಾ ಇತನಿಗೆ ದಿನಾಂಕ 10/05/2012 ರಂದು ಮದ್ಯಾಹ್ನ 3 ಗಂಟೆಗೆ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ, ಶ್ರವಣಕುಮಾರ ಇತನು ಶಹಾಪುರದಲ್ಲಿ ಫೈನಾಸ್ಸ ಕಂಪನಿಯಲ್ಲಿ ಕೆಲಸ ಮಾಡುತ್ತಾ ಪ್ರಭಾವತಿ ಎನ್ನುವವಳ ಹೆಣ್ಣು ಮಗಳೊಂದಿಗೆ ಪರಿಚಯ ಮಾಡಿಕೊಂಡು ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದು, ಆ ಪ್ರಭಾವತಿ ಹೆಣ್ಣು ಮಗಳು ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಬೇಳೆಸುತ್ತಿದ್ದಾಳೆ ಅಂತಾ ಸಂಶಯ ಪಟ್ಟು ಆ ವ್ಯಕ್ತಿಯ ಹೆಸರು ವಿಳಾಸ ತಿಳಿದುಕೊಳ್ಳುವಗೊಸ್ಕರ  ಸುಳ್ಳು ಬಾಂಬ ಬೆದರಿಕೆ ಪತ್ರದಲ್ಲಿ ಅವರ ಮೋಬೈಲ್ ನಂಬರಗಳು ಬರೆದಿಟ್ಟು ಭಯದ ವಾತವಾರಣ ನಿರ್ಮಾಣ ಮಾಡಿರುತ್ತಾನೆ. ಮಾನ್ಯ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಸಾರ್ವಜನಿಕರು ಯಾವುದೇ ಭಯಬೀತಿ ಇಲ್ಲದೆ ನಿರ್ಭಯವಾಗಿ ಬಸ್ಸ, ರೇಲ್ವೆಗಳಲ್ಲಿ ಪ್ರಯಾಣ ಮಾಡುವಂತೆ ಸಾರ್ವಜನಿಕರಲ್ಲಿ ಕೋರಿಕೊಂಡಿರುತ್ತಾರೆ.  ಮತ್ತು ಈ ಬಾಂಬ ಬೆದರಿಕೆ ಪತ್ರದ ಆರೋಪಿ ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿರುತ್ತಾರೆ.

No comments: