POLICE BHAVAN KALABURAGI

POLICE BHAVAN KALABURAGI

26 December 2011

GULBARGA DIST REPORTED CRIME



ಮೋಸ ವಂಚನೆ ಪ್ರಕರಣ:
ನರೋಣಾ ಠಾಣೆ:
ಶ್ರೀ ಸಿದ್ದಮಲ್ಲಪ್ಪ ತಂದೆ ಭೀಮಶಾ ಹಡಪದ್ ಸಾ: ನರೋಣಾ ರವರು ನನ್ನ ಮಗ ಭೀಮಾಶಂಕರ್ ಇತನು 2000 ನೇ ಸಾಲಿನಲ್ಲಿ ಬಿ.ಎಸ್.ಎಫ್. ಸೇವೆಗೆ ಸೇರಿದ್ದು, 2010 ನೇ ಸಾಲಿನಲ್ಲಿ ಆಗಷ್ಟ್ 29 ನೇ ತಾರೀಖಿನ ದಿವಸ ಚತ್ತಿಸಗಡದಲ್ಲಿ ವೀರ ಮರಣ ಹೊಂದಿದ್ದು, ಇದೇ ವಿಷಯದಲ್ಲಿ ಹಣಮಂತ ತಂದೆ ಬೀರಪ್ಪ ಬಂಡಗಾರ್ ವಯ 28 ವಷ್, ಜಾತಿ: ಮರಾಠಾ, ಸಾ; ಅಂತರಗಂಗಿ, ತಾ: ಸಿಂದಗಿ, ಇತನು ನಿರುದ್ಯೋಗಿಯಾಗಿದ್ದು, ತಾನು ಬಿ.ಎಸ್.ಎಫ್ ನಲ್ಲಿ ಮೇಜರ್ ಆಫೀಸರ ಇರುವುದಾಗಿ ಹೇಳಿಕೊಂಡು ಶ್ರೀ ಸಿದ್ದಮಲ್ಲಪ್ಪ ಇವರ ಹತ್ತಿರ ಬಂದು ಭೀಮಾಶಂಕರ ಇತನು ವೀರ ಮರಣ ಹೊಂದಿರುವ ವಿಷಯದಲ್ಲಿ ಗ್ರಾಮದಲ್ಲಿ ನೆನಪಿನ ಗೋಸ್ಕರ ಸಭೆ ಸಮಾರಂಭ ಮಾಡುವುದಾಗಿ ಹೇಳಿ ಆಫೀಸರನಂತೆ ನಟನೆ ಮಾಡಿ, 33,000/- ರೂ ಪಡೆದುಕೊಂಡಿದ್ದು, ಅಲ್ಲದೆ ಇದೆ ರೀತಿ ಅಲ್ಲಲ್ಲಿ ಕೂಡಾ ಯೋಧರು ಮರಣವಾದ ಮಾಹಿತಿಯನ್ನು ಪಡೆದುಕೊಂಡು ಮನೆಯ ಮಂದಿಗೆ ನೌಕರಿ ಕೊಡಿಸುದಾಗಿ ಆಸೆ ತೋರಿಸಿ ವಂಚನೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 131/2011 ಕಂ 417 419 420 ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ. ಸದರಿ ಆರೋಪಿತನ ಪತ್ತೆ ಕುರಿತು ಮಾನ್ಯ ಎಸ.ಪಿ ಸಾಹೇಬರು ಗುಲಬರ್ಗಾ ರವರು ಮತ್ತು ಹೆಚ್ಚುವರಿ ಎಸ.ಪಿ ಗುಲಬರ್ಗಾ, ಹಾಗು ಅಪರ ಎಸ್.ಪಿ ಶ್ರೀ ಕಾಶಿನಾಥ, ಡಿ.ಎಸ್.ಪಿ ಬಿ.ಎಸ್. ಸಂಭಾ, ಸಿಪಿಐರವರಾದ ಶ್ರೀ ಜಿ.ಎಸ್. ಉಡಗಿ ಆಳಂದ ರವರ ಮಾರ್ಗದರ್ಶನದಲ್ಲಿ ನರೋಣಾ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವಿನಾಯಕ್, ಪ್ರೋ. ಪಿ.ಎಸ್.ಐ ರವರಾದ ಶ್ರೀ ಪ್ರದೀಪ್ ಸಿಂಗ್, ಸಿಬ್ಬಂದಿಯವರಾದ ಶ್ರೀ ಬಂಡೆಪ್ಪ ಎ.ಎಸ್.ಐ, ಶ್ರೀ ಮಹಾಂತಪ್ಪ ಹೆಚ್.ಸಿ, ಶ್ರೀ ಸುರೇಶ್ ಬಾಬು, ಕಂಠೆಪ್ಪ ಪಿಸಿ , ಶ್ರೀ ಅಪ್ಪಣ, ಶ್ರೀ ಮಹೇಶ್,ಶ್ರೀ ಅಂಬಾರಾಯ, ಮುಕುಂದರಾಯ, ರವರ ತಂಡವನ್ನು ರಚಿಸಿಕೊಂಡು ಗುನ್ನೆಗೆ ಸಂಭಂದಪಟ್ಟ ಹಲವಾರು ಮಾಹಿತಿಗಳು ಹಾಗೂ ನಗದು ಹಣ 10,000/’- ಜಪ್ತಿ ಪಡಿಸಿಕೊಂಡಿರುತ್ತಾರೆ. ಈ ಆರೋಪಿತನು ಈ ಯೋದನಲ್ಲದೆ ಕಣ್ಣೂರ್, ತೇಲಗಿ, ಬಸವನ ಬಾಗೇವಾಡಿ, ಸಂಗೋಳಗಿ, ಸಂಕೇಶ್ವರ, ಹಿಟ್ನಳ್ಳಿ, ನೀಡಗುಂಡಿ ಮುಂತಾದ ಕಡೆಗಳ್ಳಿಯ ಯೋಧರಿಗೆ ಸಂಭಂದಿಕರ ಹತ್ತಿರ ಕೂಡಾ ಹಣ ವಸೂಲಿ ಮಾಡಿಕೊಂಡಿರುವ ಮಾಹಿತಿ ಲಬ್ಯವಾಗಿರುತ್ತದೆ. ಅಲ್ಲದೆ ಬಿಜಾಪೂರ್ ಜಿಲ್ಲೆಯಲ್ಲಿ ತಾನು ಕೆ.ಎಸ್.ಆರ್.ಟಿ.ಸಿ ಚೆಕ್ಕಿಂಗ್ ಆಫೀಸರ್ ಎಂದು ಬಸ್ ಚೆಕ್ ಮಾಡಿದ್ದು, ಅಲ್ಲದೆ ಆಳಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನೌಕರಿ ಮಾಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿರುತ್ತಾನೆ. ಇತನನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಟ್ಟಿದ್ದು ಇರುತ್ತದೆ.

No comments: