POLICE BHAVAN KALABURAGI

POLICE BHAVAN KALABURAGI

27 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ.
ಜೇವರ್ಗಿ ಕಾಲೋನಿಯಲ್ಲಿರುವ ಲೋಕೊಪಯೋಗಿ ಇಲಾಖೆ ಸರ್ಕಾರಿ ವಸತಿಗೃಹ ಸಂಖ್ಯೆ 17-ಡಿ ಯಲ್ಲಿರುವ ವಿದ್ಯುತ್ ವೈರಗಳನ್ನು ಅ.ಕಿ.-21,000/-ರೂಪಾಯಿಗಳದ್ದು ದಿನಾಂಕ:24.12.2011 ರಂದು 1600 ಗಂಟೆಯಿಂದ 1700 ಗಂಟೆಯವರೆಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಅಲೀಮ ಪಟೇಲ್ ವರ್ಕ ಇನ್ಸಪೆಕ್ಟರ್ ಪಿ.ಡಬ್ಯ್ಲೂ.ಡಿ. ಆಫೀಸ್ ಮುನ್ಸಿಪಾಲ್ ಗಾರ್ಡನ್ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.218/2011 ಕಲಂ. 454, 380 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಟೋ ಚಾಲಕ ಸಾವು:
ರಾಘವೇಂದ್ರ ನಗರ ಠಾಣೆ:
ಶ್ರೀ ಯಲ್ಲಪ್ಪ ತಂದೆ ಶರಣಪ್ಪ ಹರಗೆನವರ ಈತನು ರಾಘವೇಂದ್ರ ನಗರ ರವರು ನನ್ನ ಅಣ್ಣನಾದ ಮೃತ ವ್ಯಕ್ತಿ ರಾಣಪ್ಪ ತಂದೆ ಶರಣಪ್ಪ ಹರಗೆನವರ ವ 28, ಸಾ ಬೋರಾಬಾಯಿ ನಗರ ಬ್ರಹ್ಮಪೂರ ಇವನು ಅಟೋ ಚಾಲಕನಾಗಿದ್ದನು. ಪ್ರತಿ ದಿನದಂತೆ ದಿನಾಂಕ 26-12-2011 ರಂದು ಬೆಳಿಗ್ಗೆ ಅಟೋ ನಡೆಸುವ ಕುರಿತು, ಮನೆಯಿಂದ ಹೋಗಿ ನಂತರ ರಾತ್ರಿ 8-30 ಗಂಟೆಯ ಸುಮಾರಿಗೆ ತನ್ನ ಅಟೋ ಸಮೇತ ಮನೆಗೆ ಬಂದು, ಅಟೋ ನಿಲ್ಲಿಸಿ ಪ್ರತಿ ದಿನದಂತೆ ಬ್ಯ್ರಾಂಡಿ ಕುಡಿಯಲು ಓಣಿಯ ಚಾಣುಕ್ಯ ಬಾರ್ ಕ್ಕೆ ಹೋದನು. ನಂತರ 9-30 ಗಂಟೆಯ ಸುಮಾರಿಗೆ ನನ್ನ ಅಣ್ಣ ರಾಣಪ್ಪ ಈತನು ಚಾಣುಕ್ಯ ವೈನ್ ಶಾಪ್ ಎದುರುಗಡೆ ಬಿದ್ದಿರುವನು ಅಂತ ವಿಷಯ ತಿಳಿದು, ನಾನು ಮತ್ತು ನನ್ನ ತಂದೆ ಹಾಗು ನನ್ನ ತಮ್ಮ ಹೋಗಿ ನೋಡಲು, ನನ್ನ ಅಣ್ಣ ರಾಣಪ್ಪನು ಚಾಣುಕ್ಯ ಬಾರ್ ಎದುರುಗಡೆ ಅಂಗಾತವಾಗಿ ಬಿದ್ದಿದ್ದನು. ಪರೀಶಿಲಿಸಿ ನೋಡಲು ಅವನು ಮೃತಪಟ್ಟಿದ್ದನು. ನನ್ನ ಅಣ್ಣನ ಸಾವಿನ ಬಗ್ಗೆ ಚಾಣುಕ್ಯ ವೈನ್ ಶಾಪ್ ನ ವ್ಯವಸ್ಥಾಪಕ ವಿಟ್ಠಲ್ ಹಾಗು ಕುಲಕರ್ಣಿ ಮತ್ತು ವೇಟರ್ ಶಂಕರ ಇವರ ಮೇಲೆ ಬಲವಾದ ಸಂಶಯ ವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಆರ್ ನಂ 8/11 ಕಲಂ 174 (ಸಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ರವಿ ತಂದೆ ಗುಂಡಪ್ಪ ಕಂಬಾರ ವ: 25 ವರ್ಷ ಉ:ಲಾರಿ ಚಾಲಕ ಜಾ: ಮರಾಠ ಕಂಬಾರ ಸಾ: ಡಾಕುಳಕಿ ತಾ: ಹುಮನಾಬಾದ ಜಿ: ಬೀದರ ರವರು ನಾನು ದಿನಾಂಕ 25/12/2011 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ನನ್ನ ಲಾರಿಯಲ್ಲಿ ತೋಗರಿ ಬೆಳೆ ತುಂಬಿಕೊಂಡು ಗಂಜ ದಿಂದ ಬೆಲೂರ ಕ್ರಾಸ ಕೆಇಬಿ ಹತ್ತಿರ ಹೋಗುತ್ತಿದ್ದಾಗ ಒಂದು ಮೋಟಾರ ಸೈಕಲ ಸವಾರ ಲಾರಿ ಮುಂದೆ ಬಂದು ಮೋಟಾರ ಸೈಕಲ ನಿಲ್ಲಿಸಿ ನನಗೆ ಕೆಳಗೆ ಇಳಿಸಿ ಡಿಫರ ಲೈಟ ಏಕೆ ಹಾಕಿಲ್ಲ ಅಂತಾ ಬೈಯುತ್ತಿದ್ದಾಗ ನಾನು ಡಿಫರ ಹಾಕಿದ್ದೇನು ಅಂತಾ ಅಂದಾಗ ಪೋನ ಮಾಡಿ ಇನ್ನೂ 3 ಜನರಿಗೆ ಕರೆಯಿಸಿದ್ದು ಅವರು ಬಂದು ಒತ್ತಿಯಾಗಿ ಬಡಿಗೆಯಿಂದ ಕೈಯಿಂದ ಹೊಡೆದು ಅವ್ಯಾಚ್ಛವಾಗಿ ಬೈದ್ದು ಹೊಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 382/2011 ಕಲಂ 504, 341, 323, 324, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ
: ಶ್ರೀ. ರಾಮ ಬಿನಯ ತಂದೆ ಮಟಕಿಸಾಬ ಸಾ ಬೇಗಮಸರಾಯಿ ತಾಮಚವಾಡಾ ಜಿಬೇಗುಸರಾಯ ರಾಜ್ಯಬಿಹಾರ ಹಾವ ಹೆಲಿಯೋ ಕಾನ ಕೆಮಿಕಲ್ ಅಗ್ರೋ ಲಿಮಿಟೇಡ ಬೇಲೂರ ಕ್ರಾಸ ಗುಲಬರ್ಗಾರವರು ನಾನು ಹಾಗೂ ನನ್ನ ಸಂಗಡಿಗರು ಬೆಲೂರ (ಜೆ) ಕ್ರಾಸದಲ್ಲಿ ಒಂದು ಆಟೋ ನಂ ಕೆ.ಎ.32 / 8019 ನೇದ್ದರಲ್ಲಿ ಕುಳಿತು ಗುಲಬರ್ಗಾ ಗಂಜ ಕಡೆಗೆ ಹೊರಟಿದ್ದು. ಕಪನೂರ ಗ್ರಾಮದ ಬ್ರೀಡ್ಜ ಹತ್ತಿರ ಬಂದಾಗ ಎದುರಿನಿಂದ ಟ್ಯಾಂಕರ ಲಾರಿ ನಂ ಕೆ.ಎ.03 ಡಿ-9825 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗ & ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಆಟೋಗೆ ಜೋರಾಗಿ ಡಿಕ್ಕಿ ಹೋಡೆದನು ಇದರಿಂದ ನಮ್ಮ ಆಟೋ ಚಾಲಕ ನಿಗೆ ಮತ್ತು ಅವನ ಪಕ್ಕದಲ್ಲಿ ಕುಳಿತಿದ್ದ ಸಂಭು ಯಾದವ ಇವರಿಗೆ ತಲೆಗೆ ಭಾರಿ ರಕ್ತಗಾಯವಾಗಿ ಇವರು ಸ್ಥಳದಲ್ಲಿಯೇ ಮೃತ ಪಟ್ಟರು ಮತ್ತು ಹಿಂದೆ ಕುಳಿತ ನಾನು ಮತ್ತು ಅಜಯ ಪಾಶ್ವಾನ ಇತನಿಗೆ. ಸಂಜೀತ ಯಾದವ ಇವರುಗಳಿಗೆ ಬಾರಿ ಹಾಗೂ ಸಾದಾ ಅಲ್ಲದೆ ಗುಪ್ತಪೆಟ್ಟಾಗಿರುತ್ತದೆ. ಟ್ಯಾಂಕರ ಲಾರಿ ನಂ. ಕೆಎ. 03-ಡಿ 9825 ನೆದ್ದರ ಚಾಲಕ ಗುರುರಾಜ ಹರಳಳ್ಳಿ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 383/2011 ಕಲಂ 279, 337 ,338,304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ :
ಶ್ರೀ.ಚನ್ನಬಸಯ್ಯ ತಂದೆ ವೀರಯ್ಯ ಹಿರೇಮಠ, ಸಾ ಕೇರಾಫ:ಸಿದ್ರಾಮಪ್ಪ ಪಾಟೀಲ, ವಾದಿರಾಜ ಲಾಡ್ಜ ಹಿಂದುಗಡೆ ರೇಣುಕಾಚಾರ್ಯ ಕಲ್ಯಾಣ ಮಂಟಪ ಹತ್ತಿರ ಸರಸ್ವತಿ ಗೋದಾಮ ಗುಲಬರ್ಗಾ ರವರು ನಾನು ವಾದಿರಾಜ ಲಾಡ್ಜ ಹಿಂದುಗಡೆ ರೇಣುಕಾಚಾರ್ಯ ಕಲ್ಯಾಣ ಮಂಟಪದ ಹತ್ತಿರ ಸರಸ್ವತಿ ಗೋದಾಮ ಸಿದ್ರಾಮಪ್ಪ ಪಾಟೀಲ ಇವರ ಮನೆಯಲ್ಲಿ ಬಾಡಿಗೆ ಇದ್ದು, ದಿನಾಂಕ: 06/12/11 ರಂದು ರಾತ್ರಿ ಮನೆಯ ಮುಂದೆ ನನ್ನ ಹೀರೊ ಹೊಂಡಾ ಪ್ಯಾಶನ್ ಪ್ರೋ ನಂ: ಕೆಎ 32 ವೈ 7326 ಅಕಿ 45,000/- ನೇದ್ದನ್ನು ನಿಲ್ಲಿಸಿ ದಿನಾಂಕ: 07/12/11 ರಂದು ಬೆಳಿಗ್ಗೆ 0500 ಗಂಟೆಗೆ ನೋಡಲಾಗಿ ನನ್ನ ಮೋಟರ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಆವಾಗಿನಿಂದ ಇಲ್ಲಿಯವರೆಗೆ ಹುಡುಕಾಡಿದರು ಪತ್ತೆಯಾಗಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: