POLICE BHAVAN KALABURAGI

POLICE BHAVAN KALABURAGI

26 December 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಸಾಗರ ತಂದೆ ಗಂಗಾರಾಮ ಪವಾರ ಸಾ:- ಹೇಬಳಿ ತಾಂಡ ತಾ:- ಆಳಂದ ರವರು ನಾನು ನಮ್ಮ ಹೋಲಕ್ಕೆ ಬಂದಿದ್ದು ಸಾಯಾಂಕಾಲ 6.30 ಪಿಎಂಕ್ಕೆ ಗುಲ್ಬರ್ಗಾಕ್ಕೆ ಹೋಗಬೆಕೆಂದು ನಮ್ಮ ತಾಂಡದ ಬಸ್ ಸ್ಟಾಪ್ ನಲ್ಲಿ ನಿಂತಾಗ ಹಿರೋಹೋಂಡಾ ಮೋಟರ ಸೈಕಲ ನಂ ಕೆ.ಎ 32 ಯು 9366 ನೇದ್ದರ ಮೇಲೆ ಬಂದು ನನ್ನನು ನೋಡಿ ಮೋಟರ ಸೈಕಲ ನಿಲ್ಲಿಸಿ ಅಜೀತ ರಾಠೋಡ, ಚಂದು ರಾಠೋಡ, ನಾಗರಾಜ ರಾಠೋಡ ಇದ್ದು ನನಗೆ ಅಜೀತ ಇತನು ಎ ಬೋಸಿಡಿ ಮಗನೇ ನಿನು ಗುಲ್ಬರ್ಗಾದಲ್ಲಿ ಶಾಲೆ ಕಲಿಯುತ್ತಿ ಅಂತಾ ಬಹಳ ಹುಷಾರಿ ತೋರಿಸುತ್ತಿಯಾ ನಿಮ್ಮ ತಾಂಡದವರು ನಿಮ್ಮ ತಾಂಡದವರು ನಮ್ಮ ತಾಂಡದವರ ಮೇಲೆ ಕೇಸ ಮಾಡಿಸಿರುತ್ತಿರಿ ಅಂತಾ ಅವಾಚ್ಯವಾಗಿ ಬೈಯುತ್ತಾ ಈ ತಾಂಡದವರಿಗೆ ಬಹಳ ಸೋಕು ಬಂದಿದೆ ಅಂತಾ ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ ಮತ್ತು ಕೈಯಿಂದ ಕಣ್ಣಿನ ಮೇಲೆ ಸಹ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 297/2011 ಕಲಂ 323, 324, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ನಾನು ಅಜೀತ ತಂದೆ ದೇವು ರಾಠೋಡ ಸಾ:ಪಿ.ಎನ್.ತಾಂಡಾ ಹೇಬಳಿ ರೋಡ ತಾ:ಆಳಂದ ಹೇಳಿ ಬರೆಸಿದ ಹೇಳಿಕೆ ಹಿಗಿದ್ದು ನಿನ್ನೆ ದಿನಾಂಕ 24/12/2011 ರಂದು ಎಳ್ಳ ಅಮವಾಸ್ಯೆ ಇದ್ದ ಪ್ರಯುಕ್ತ ನಾನು ನಮ್ಮ ಹೊಲಕ್ಕೆ ಹೇಬಳಿ ತಾಂಡಾದ ಆಚೆ ಇರುವ ಹೊಲಕ್ಕೆ ಹೋಗಿ ಸಾಯಾಂಕಾಲ 6:30 ಪಿ.ಎಮ್ ಸುಮಾರಿಗೆ ನಮ್ಮ ತಾಂಡಾಕ್ಕೆ ಮನೆಗೆ ಬರುತಿದ್ದಾಗ ಹೇಬಳಿ ತಾಂಡಾದ ಬಸ್ ಸ್ಯಾಂಡದಲ್ಲಿ ಸಾಗರ ರಾಠೋಡ ಮತ್ತು ಸಾವನ ರಾಠೋಡ ಇವನು ನನಗೆ “ಏ ಸುನೀಲ್ ನಿಲ್ಲು” ಅಂತಾ ಅಂದಾಗ ನಾನು ಅವರಿಗೆ ನಾನು ಸುನೀಲ್ ಅಲ್ಲಿ ನನ್ನ ಹೆಸರು ಅಜೀತ ರಾಠೋಡ ಇದೆ, ನಾನು ಪಿ.ಎನ್.ತಂಡಾದ ಮುಕುಂದ ರಾಠೋಡ ಇವರ ತಮ್ಮನ ಮಗನಿದ್ದೇನೆ ಅಂತಾ ಅಂದೇನು, ಆಗ ಸಾಗರ ಇತನು ಎಲ್ಲಿಗೆ ಹೋಗುತ್ತಿ ನಿಲ್ಲು ಬೋಸಡಿ ಮಗನೆ ನಿಮ್ಮ ಕಾಕಾ ಮುಕುಂದ ನಮ್ಮ ಮೇಲೆ ಕೇಸ ಮಾಡಿಸಿದ್ದಾನೆ, ನಿನು ನಮಗೆ ಬೇಕು ಅಂತಾ ಅವಾಚ್ಯವಾಗಿ ಬೈದು ನನಗೆ ತಡೆದು ನಿಲ್ಲಿಸಿದ್ದು, ಸಾವನ ಇತನು ನನಗೆ ಕೈಯಿಂದ ಹೊಟ್ಟೆ, ಬೇನ್ನಿಗೆ ಹೊಡೆದು ಗುಪ್ತಗಾಯಾ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 298/2011 ಕಲಂ 323, 341, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ರಾಜೇಂದ್ರ ತಂದೆ ಮಾಣಿಕರಾವ್ ಬೇಳ್ಳೆ ರವರು ನಮ್ಮ ಮನೆಯ ಮುಂದಿನ ಮನೆಯವರಾದ ಸಂಗಮೇಶ ತಂದೆ ದೇವಪ್ಪಾ ಪಡೆಶೇಟ್ಟಿ ಸಾ:ರೇವಣಸಿದ್ದೇಶ್ವರ ಕಾಲೋನಿ ಇವರು ನನಗೆ ದೂರವಾಣಿ ಮುಖಾಂತರ ತಿಳಿಸಿದ್ದೇನೆಂದರೆ ನಿಮ್ಮ ಮನೆಯ ಗೇಟಿನ ಮತ್ತು ಮನೆಯ ಬಾಗಿಲಿನ ಕಿಲಿ ಮುರಿದು ಯಾರೂ ಕಳ್ಳರು ಕಳ್ಳತನ ಮಾಡಿಕೊಂಡಂತೆ ಕಂಡುಬರುತಿದ್ದೆ, ಕಾರಣ ನೀವು ಬರಲು ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ನನ್ನ ಹೆಂಡಿತಿ ಮಕ್ಕಳೂಂದಿಗೆ ಮನೆಗೆ ಬಂದು ನೂಡಲಾಗಿ ಮನೆಯ ಗೇಟಿನ ಕೀಲಿ ಮುರಿದು, ಮನೆಯ ಬಾಗಿಲಿನ ಕೊಂಡಿ ಮುರಿದ್ದು, ಮನೆಯ ಒಳಗೆ ಪ್ರವೇಶಮಾಡಿ ಅಲಮಾರಿ ಇದ್ದ ಕೊಣೆಯಲ್ಲಿ ಹೋಗಿ ಅಲಮಾರಿಯ ಲಾಕರನಲ್ಲಿ ಇಟ್ಟಿದ್ದ ನಗದು ಹಣ 60,000/- ರೂ ಬಂಗಾರದ ಆಭರಣಗಳು ಹಾಗು ಬೆಳ್ಳಿಯ ಸಾಮಾನುಗಳು ಬಟ್ಟೆ ಬರೆ ಹೀಗೆ ಒಟ್ಟು 1,20,200/- ರೂ ಬೆಲೆಯುಳ್ಳದ್ದು ಯಾರೂ ಕಳ್ಳರು ರಾತ್ರಿಯ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 299/2011 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ; 25/12/2011 ರಂದು ಮದ್ಯಾಹ್ನ 4:45 ಗಂಟೆಗೆ ಇಂಡಸ್ಟ್ರಿಯಲ್‌ ಏರಿಯಾದ ರಮಾ ಇಂಜಿನಿಯರಿಂಗ ವರ್ಕ್ಸ ಗೋದಾಮಿನ ಹಿಂದುಗಡೆ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪಂಚರು ಸಮಕ್ಷಮ ಪಿ.ಎಸ.ಐ ಆನಂದರಾವ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಮಹ್ಮದ ಆಸೀಪ ತಂದೆ ಮಹ್ಮದ ಸಿದ್ದಿಕಿ ಸಾ: ಕಾಕಡೇ ಚೌಕ ಗುಲಬರ್ಗಾ ಸಂಗಡ 5 ಜನರು ಜನರನ್ನು ಹಿಡಿದು ಜೂಜಾಟಕ್ಕೆ ಬಳಸಿದ 52 ಇಸ್ಪೇಟ ಎಲೆ ಹಾಗೂ ನಗದು ಹಣ 6300/- ರೂ ಮತ್ತು 6 ಮೊಬೈಲಗಳನ್ನು ವಶಪಡಿಸಿಕೊಂಡಿದ್ದು ಹೀಗೆ ಒಟ್ಟು 9100/- ರೂಪಾಯಿ ಗಳನ್ನು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 380/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಠಾಣೆ:
ಶ್ರೀ ಮಹಿಬೂಬ ಅಲಿ ತಂದೆ ಅಲ್ಲಿಸಾಬ ಸಾ ಮದಿನಾ ಕಾಲೋನಿ ಗುಲಬರ್ಗಾ ಇವರು ದಿನಾಂಕ 23-12-2011 ರಂದು ರಾತ್ರಿ ವೇಳೆಯಲ್ಲಿ ಮದಿನಾ ಕಾಲೋನಿಯಲ್ಲಿ ತನ್ನ ಲಾರಿ ನಂ ಕೆಎ-32/5911 ನೇದ್ದನ್ನು ನಿಲ್ಲಿಸಿದ್ದು, ಅದರಲ್ಲಿದ್ದ 4000/-ರೂ ಬೆಲೆಯುಳ್ಳ ಎರಡು ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲೆ ಠಾಣೆ ಗುನ್ನೆ ನಂ 103/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. .
ಕಳ್ಳತನ ಪ್ರಕರಣ:
ರೋಜಾ ಠಾಣೆ:
ಶ್ರೀ ಮಹ್ಮದ ಅಬ್ದುಲ ಹಬೀಬ ತಂದೆ ಮಹ್ಮದ ಅಬ್ದುಲ ರಸೀದ ಸೆಕರೇಟರಿ ಕೆ.ಬಿ.ಎನ್ ದರ್ಗಾ ರವರು ನಾನು ದಿನಾಂಕ 25-12-2011 ಕೆ.ಬಿ.ಎನ್ ದರ್ಗಾದಲ್ಲಿ ಬರುವ ಅಕೌಂಟ ಸೇಕ್ಷನ್ ಆಫೀಸಿನಲ್ಲಿ ಮಧ್ಯರಾತ್ರಿ 2-30 ಎ. ದಿಂದ 4-30 ಅವಧಿಯಲ್ಲಿ ಪ್ರವೇಶ ದ್ವಾರದ ಬಾಗಿಲದ ಕೀಲಿ ಮುರಿದು ಯಾರೋ ಕಳ್ಳರು ಒಳಗಡೆ ಪ್ರವೇಶ ಮಾಡಿ ಅಕೌಂಟ ಆಪೀಸದಲ್ಲಿದ್ದ ಟ್ರೇಜರಿಗಳನ್ನು ಮತ್ತು ಅಲಮಾರ್ ಗಳನ್ನು ಮುರಿದು ಟ್ರೇಜರಿಯಲ್ಲಿದ್ದ ನಗದು ಹಣ ಒಟ್ಟು 24,767/- ರೂಪಾಯಿಗಳನ್ನು ಯಾರೋ ಕಳ್ಳರು ಕಳುಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 119/2011 ಕಲಂ:457,380 ಐ,ಪಿ,ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ರೂಪಾಲಿ ಗಂಡ ಪ್ರಮೋದ ಪಟವಾರಿ ವ:42 ವರ್ಷ ಉ:ಮನೆಗೆಲಸ ಜಾತಿ ಬ್ರಾಹ್ಮಣ ಸಾ:ವೆಂಕಟೇಶ ನಗರ ಗುಲಬರ್ಗಾ ರವರು ನಾನು ಮತ್ತು ಮಕ್ಕಳಾದ ಪ್ರಣೀತಾ, ಪ್ರತೀಕ, ಆಕೆಯ ಗಂಡ ಪ್ರಮೋದ ಪಟವಾರಿ ಹಾಗೂ ಗಂಡನ ಸೋದರಮಾವ ಅಶೋಕರಾವ ಬಕಸಿ ರವರು ಎಳ್ಳ ಅಮವ್ಯಾಸೆ ಹಬ್ಬ ಕುರಿತು ಲಾತೂರ ಜಿಲ್ಲೆಯ ಅಮದಸೂರಿಗೆ ಮಾರುತಿ ಕೆಎ 32 ಎಂ 3851 ನೇದ್ದರಲ್ಲಿ ಹೋಗಿ ಮರಳಿ ಗುಲಬರ್ಗಾಕ್ಕೆ ಹೊರಟಿದ್ದು ಕಾರ ಪ್ರಮೋದ ಪಟವಾರಿ ನಡೆಸುತ್ತಿದ್ದು, ಗುಲಬರ್ಗಾ- ಆಳಂದ ರೋಡಿನ ಕೆರೆಭೋಸಗಾ ಕ್ರಾಸ ದಾಟಿ 1 ಕಿ.ಮೀ. ದೂರ ಬಂದಾಗ, ಎದುರುನಿಂದ ಯಾವುದೋ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಯಿಸುತ್ತಾ ಬಂದು ತನ್ನ ಸೈಡಿಗೆ ಹೋಗದೇ ರಾಂಗ ರೂಟನಲ್ಲಿ ಬಂದವನೇ, ನಮ್ಮ ಕಾರಿನ ಎಡಭಾಗದಿಂದ ಒಮ್ಮಿಂದ ಒಮ್ಮೇಲೆ ವೇಗದಲ್ಲಿ ಕಟ್ ಮಾಡಿದ್ದರಿಂದ ಕಾರಿನ ಎಡಭಾಗಕ್ಕೆ ಡಿಕ್ಕಿ ಹೊಡೆದು ಹಾಗೇ ಎಡಭಾಗಕ್ಕೆ ಸವರಿಕೊಂಡು ಅಳಂದ ಕಡೆಗೆ ಓಡಿಸಿಕೊಂಡು ಹೋದನು. ಕತ್ತಲೆ ಇದುದ್ದರಿಂದ ಲಾರಿ ನಂಬರ ನೋಡಲು ಆಗಿರುವುದಿಲ್ಲಾ. ಲಾರಿ ಚಾಲಕ ಡಿಕ್ಕಿ ಹೊಡೆದ ರಭಸಕ್ಕೆ ನಮ್ಮ ಕಾರ ಮೊರು ಸಲ ಪಲ್ಟಿಯಾಗಿ,ಆಳಂದ ಕಡೆ ಮುಖ ಮಾಡಿ ಎಡ ಮಗ್ಗಲು ಪಲ್ಟಿಯಾಗಿ ಬಿದ್ದಿದ್ದು, ಇದರಿಂದಾಗಿ ಅಶೋಕಕರಾವ ಬಕಸಿ ಇವರಿಗೆ ತಲೆ ಭಾರಿ ರಕ್ತಗಾಯವಾಗಿ, ಕಿವಿಯಿಂದ ಮೊಗಿನಿಂದ ರಕ್ತ ಸೋರಿ ಸ್ಥಳದಲ್ಲಿ ಮೃತಪಟ್ಟಿದ್ದು, ಪ್ರಮೋದ ಪಟವಾರಿ ಬಲಗೈ ಪ್ರ್ಯಾಕ್ಚರ ಆಗಿದ್ದು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 279, 337, 338, 304 (ಎ) ಐಪಿಸಿ ಸಂಗಡ 187 ಐ.,ಎಮ್ ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ
ಕೊಲೆ ಪ್ರಕರಣ:
ಚೌಕ ಪೊಲೀಸ್ ಠಾಣೆ :
ಶ್ರೀ ಆನಂದ ತಂದೆ ಪ್ರಭಾಕರ್ ಛಕ್ಕಡಿ ಚೌಡೇಶ್ವರ ಕಾಲೋನಿ ಗುಲಬರ್ಗಾ ರವರು ನನ್ನ ತಮ್ಮನ ಗೆಳಯನಾದ ರಾಜಗೋಪಾಲ ಚಾರಿ ಸಾ: ಆಳಂದ ಚಕ್ ಪೋಸ್ಟ ಗುಲಬರ್ಗಾ ರವರು ಮನೆಗೆ ಬಂದು ವಿಷಯ ತಿಳಿಸಿದ್ದು ಏನೆಂದರೆ, ನಾನು ಆಳಂದ ಚಕ್ ಪೋಸ್ಟದಿಂದ ಚೌಕ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಸೇಠಜಿ ಕಾಂಪ್ಲೇಕ್ಸ [ಭಲಾಡ್ಯ ಫೈನಾನ್ಸ ಲೀಜಿಂಗ ಮುಂದೆ ರೋಡಿನ ಮೇಲೆ ನಿನ್ನ ತಮ್ಮನಾದ ಸಂತೋಷ ಇತನಿಗೆ ಯಾರೋ ಜನರು ಜಂಬ್ಯಾದಿಂದ ಹೋಡೆದು ಮತ್ತು ಪರ್ಸಿ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ ನಿನ್ನ ತಮ್ಮನ ಶವವು ರೋಡಿನ ಮೇಲೆ ಬಿದಿದೆ ಅಂತಾ ತಿಳಿಸಿದ್ದರಿಂದ ಅವನು ಮತ್ತು ನಾನು ಹಾಗೂ ನನ್ನ ತಮ್ಮನಾದ ರವಿ ರವರು ಕೂಡಿಕೂಂಡು ಸೇಠಜಿ ಕಾಂಪ್ಲೇಕ್ಸದ ರೋಡಿನ ಹತ್ತಿರ ಬಂದು ನೋಡಲಾಗಿ ಯಾರೋ ಜನರು ಯಾವೂದೋ ಕಾರಣಕ್ಕಾಗಿ ಭೀಕರವಾಗಿ ಜಂಬ್ಯಾದಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 248/2011 ಕಲಂ 143, 147, 148, 302 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಯು.ಡಿ.ಅರ್.ಪ್ರಕರಣ: ಶ್ರೀ ಪರಶುರಾಮ ತಂದೆ ತುಳಜಪ್ಪಾ ಗಂಗಾಪೂರ ಸಾ ವೆಂಕಟಾಪೂರ ರವರು ನನ್ನ ತಂದೆ ತುಳಜಪ್ಪಾ ಇವರಿಗೆ ವೆಂಕಟಾಪೂರ ಸಿಮಾಂತರದಲ್ಲಿ ಸರ್ವ ನಂ 288/3, 288/6 ರಲ್ಲಿ ಒಟ್ಟು 4 ಎಕರೆ 16 ಗುಂಟೆ ಜಮಿನು ಇದ್ದು ನಾವು ಮೂರು ಜನ ಗಂಡು ಮಕ್ಕಳು ಇದ್ದು ಮೂರು ಜನ ಗಂಡು ಮಕ್ಕಳು ಹಾಗೂ ತಂದೆ ತುಳಜಪ್ಪಾ ಎಲ್ಲರೂ ಕೊಡಿ ಒಕ್ಕಲು ತನ ಕೆಲಸ ಮಾಡಿಕೊಂಡಿದ್ದು 2006 ನೇ ಸಾಲಿನಲ್ಲಿ ತನ್ನ ತಂದೆ ತುಳಜಪ್ಪಾ ಇವರು ಗುಲಬರ್ಗಾ ದಲ್ಲಿನ ಕೆನರಾ ಬ್ಯಾಂಕ ನಿಂದ 5,50000 /- ರೂ ಸಾಲ ಪಡೆದು ಒಂದು ಟ್ರ್ಯಾಕ್ಟರ ಖರೀದಿಸಿ ಒಕ್ಕಲುತನ ಕೆಲಸಕ್ಕಾಗಿ ಉಪಯೊಗಿಸುತ್ತಾ ಬಂದಿದ್ದು ಅಲ್ಲಿಂದ ಇಲ್ಲಿಯ ವರೆಗೆ ಸಕಾಲಕ್ಕೆ ಮಳೆಯಾಗದೆ ಇರುವದ್ದರಿಂದ ಹೊಲದಲ್ಲಿ ಬೆಳೆ ಸರಿಯಾಗಿ ಬೇಳೆಯದೆ ಬ್ಯಾಂಕಿಗೆ ಟ್ರ್ಯಾಕ್ಟರ ಹಣ ಖಾಸಗಿಯವರಿಂದ ಸಾಲ ಪಡೆದು ಕಟ್ಟಿದ್ದು . 2008 ನೇ ಸಾಲಿನಿಂದ ಬೆಳೆಗಳಿಗೆ ರೋಗ, ಕೀಟ ಭಾದೆ ಹಾಗೂ ಸಕಾಲಕ್ಕೆ ಮಳೆಯಾಗದ ಕಾರಣ ಯಾವುದೇ ರೀತಿಯ ಬೇಳೆ ಬೇಳೆದಿರುವದಿಲ್ಲಾ. ಇದರಿಂದ ಖಾಸಗಿಯವರ ಸಾಲ ಮತ್ತು ಬ್ಯಾಂಕಿನ ಸಾಲ ತೀರಿಸದೆ ಆಗದೆ ಇರುವುದರಿಂದ ತನ್ನ ತಂದೆ ತುಳಜಪ್ಪಾ ಇವರು ದಿನಾಂಕ 24/12/2011 ರಂದು ಮಧ್ಯಾನ 12-30 ಗಂಟೆಯ ಸುಮಾರಿಗೆ ನಮ್ಮ ಹೊಲದಲ್ಲಿ ಕ್ರಿಮಿನಾಶಕ ಔಷಧಿಯನ್ನು ಆತ್ಮ ಹತ್ಯೆ ಮಡಿಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸುಲೇಪೇಟ ಠಾಣೆ ಯ ಯು ಡಿ ಆರ್ ನಂ 14/2011 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: