POLICE BHAVAN KALABURAGI

POLICE BHAVAN KALABURAGI

07 October 2011

Gulbarga District Reported Crimes

ರೈತ ಆತ್ಮಹತ್ಯೆ ಪ್ರಕರಣ :
ಕುಂಚಾವರಂ ಠಾಣೆ :
ಶ್ರೀಮತಿ ರುಕ್ಮಿಣಿ ಗಂಡ ರಾಮಲು ಸಾಃ ಪೋಚಾವರಂ ರವರು ನಮಗೆ 6 ಎಕರೆ ಜಮೀನು ಇದ್ದು ನನ್ನ ಗಂಡ ರಾಮಲು ಕುಂಚಾವರಂ ಕೆ.ಜಿ.ಬಿ ಬ್ಯಾಂಕನಲ್ಲಿ 2 ವರ್ಷಗಳಹಿಂದೆ 82,000/- ರೂಪಾಯಿ ಲೋನ ಪಡೆದುಕೊಂಡಿದ್ದು 2 ವರ್ಷಗಳಿಂದ ನಮ್ಮ ಹೊಲದಲ್ಲಿ ಬೆಳೆ ಸರಿಯಾಗಿ ಬೇಳೆದಿರುವದಿಲ್ಲಾ. ಹಾಗು ನಮ್ಮ ಹೊಲದಲ್ಲಿ 06 ತಿಂಗಳಹಿಂದೆ ಬೋರ ಹಾಕಿಸಿದ್ದು ಬೋರನಲ್ಲಿ ನೀರು ಬೀಳದ ಕಾರಣ ಚಿಂತೆ ಮಾಡಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯಲ್ಲಿ ಯಾರು ಇಲ್ಲದಾಗ ಕ್ರಿಮಿನಾಷಕ ಎಣ್ಣೆ ಸೆವನೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಸ ವಂಚನೆ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ :ತಹಸೀಲ್ದಾರ ಜೇವರ್ಗಿ ರವರ ಎಸ್.ಬಿ. ಖಾತೆ ಸಂ 52184385197 ನೇದ್ದಕ್ಕೆ ಸರಕಾರದಿಂದ ತಸ್ಥಿಕ ಮತ್ತು ವರ್ಷಾಶನ ಭತ್ಯೆ ಫಲಾನುಭವಿಗಳಿಗೆ ವಿತರಿಸುವಂತೆ ಬಿಡುಗಡೆಯಾದ ಹಣವನ್ನು ನಮ್ಮ ಕಛೇರಿ ಪ್ರಥಮ ದರ್ಜೇಯ ಸಹಾಯಕರಾದ ಮಾರುತಿ ಪವಾರ ಪ್ರಥಮ ದರ್ಜೇ ಸಹಾಯಕರು ತಹಸೀಲ ಅಪೀಸ ಜೇವರ್ಗಿ ಇವರು ದಿನಾಂಕ: 20-09-2010 ರಿಂದ 29-09-2011 ರವರಿಗೆ ಒಟ್ಟು 19 ಚಕ್ಕಗಳಿಗೆ ತಹಸೀಲ್ದಾರರ ಸುಳ್ಳು ರುಜು ಮಾಡಿ ಅವುಗಳನ್ನು ನೈಜವೆಂದು ಸೃಷ್ಟಿ ಮಾಡಿ ಎಸ್.ಬಿ.ಹೆಚ್. ಬ್ಯಾಂಕ ಖಾತೆ ಸಂ 52184385197 ನೇದ್ದರಲ್ಲಿನ ಒಟ್ಟು ನಗದು ಹಣ 11,00,000-00 ರೂಪಾಯಿಗಳು ಡ್ರಾ ಮಾಡಿಕೊಂಡು ತನ್ನ ಸ್ವತ್ತಕ್ಕೆ ಉಪಯೋಗಿಸಿ ಸರಕಾರಕ್ಕೆ ಮೋಸ ವಂಚನೆ ಮಾಡಿರುತ್ತಾನೆ. ಅಂತಾ ಶ್ರೀ ಡಿ.ವ್ಹಾಯಿ.ಪಾಟೀಲ ತಹಸೀಲ್ದಾರರು ಜೇವರ್ಗಿ ರವರು ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀ ಸ್ವಾಮಿ ತಂದೆ ಗೊವಿಂದಪ್ಪ @ ಚಿನ್ನಪ್ಪ ಕರಂಟಿ ಸಾ: ಗೊಲ್ಲರ ಗಲ್ಲಿ ಗುಲಬರ್ಗಾ ರವರು ದಿನಾಂಕ 06-10-2011 ರಂದು ಸಾಯಂಕಾಲ ನಗರದ ತಿರಂದಾಜ ಟಾಕೀಜ್ ಹತ್ತಿರ ರೋಡಿನ ಮೇಲೆ ಹೋಗುತ್ತಿದ್ದ ತಾಯವ್ವ ಗಂಡ ಗೊವಿಂದಪ್ಪ @ ಚಿನ್ನಪ್ಪ್ ಇವಳಿಗೆ ಹೊಂಡಾ ಎಕ್ಟಿವಾ ಮೊ/ಸೈಕಲ್ ನಂ;ಕೆಎ 32 ವಿ 9036 ಚಾಲಕಿ ಗಾಯತ್ರಿ ಇವಳು ಎಸ್.ಟಿ.ಬಿ.ಟಿ.ಕ್ರಾಸ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೊಳಿಸಿ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಹೊರಟು ಹೋಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವೆಇ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: