ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ :ಶ್ರೀಮತಿ ನಾಜಿಯಾ ಗಂಡ ಖುರ್ಷಿದ ಪಟೇಲ ಸಾ: ಯಳವಂತಗಿ ಇವರ ಗಂಡ ಅತ್ತೆ ಮಾವ ನಾದನಿ ಲಗ್ನವಾದ ಆರು ತಿಂಗಳ ನಂತರ ಒಂದಲ್ಲ ಒಂದು ಕಾರಣದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದಲ್ಲದೇ ತನಗೆ ಲಾರಿ ವ್ಯಾಪಾರದಲ್ಲಿ ಒಂದು ಲಕ್ಷ ರೂ ಲಾಸ್ ಆಗಿದೆ ತವರು ಮನೆಯಿಂದ ಹಣ ತೆಗೆದುಕೊಮಡು ಬಾ ಅಂತಾ ಹೊಡೆಬಡೆ ಮಾಡಿದ್ದು ಈ ಬಗ್ಗೆ ಊರಿನಲ್ಲಿ ಪಂಚಾಯಿತಿ ಮಾಡಿದ್ದು ಫಿರ್ಯಾದಿಯ ತಾಯಿ ರಂಜಾನಕ್ಕೆಂದು ತವರು ಮನೆಗೆ ಕರೆದುಕೊಂಡು ಹೋಗಿದ್ದು ಇಲ್ಲಿಯವರೆಗೆ ಗಂಡನ ಮನೆಯವರು ಫಿರ್ಯಾದಿಗೆ ಗಂಡನ ಮನೆಗೆ ಕರೆಯಲು ಬರದ ಕಾರಣ ಇಂದು ದಿನಾಂಕ: 06-10-2011ಬೆಳಿಗ್ಗೆ ಆಕೆಯ ತಾಯಿ ಚಿಕ್ಕಪ್ಪ ಗುಲಬರ್ಗಾದಿಂದ ಗಂಡನ ಮನೆಯಾದ ಯಳವಂತಗಿ ಗ್ರಾಮಕ್ಕೆ ಕರೆದುಕೊಂಡು ಹೋದಾಗ1.ಖುರ್ಷಿದ ಪಟೇಲ 2.ರಾಜಾಪಟೇಲ 3.ಜೈಬೂನ ಬೀ 4.ರಜೀಯಾ ಬೇಗಂ ಸಾ: ಎಲ್ಲರೂ ಯಳವಂತಗಿ (ಬಿ) ಎಲ್ಲರು ತವರು ಮನೆಯಿಂದ ಹಣ ತೆಗೆದುಕೊಂಡು ಮನೆಗೆ ಬಾ ಅಂತಾ ಬೈದು ಕೈಯಿಂದ ಮತ್ತು ಕಾಲಿಂದ ಹೊಡೆಬಡೆ ಮಾಡಿ ಜೀವ ಭಯ ಹಾಕಿ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :ಶ್ರೀ ರಮೇಶ ತಂದೆ ಮೋತಿರಾಮ ಜಾಧವ ಸಾ|| ಸಣ್ಣೂರು ತಾಂಡಾ ತಾ|| ಜಿ|| ಗುಲಬರ್ಗಾ ದಿನಾಂಕ05-10-2011 ರಂದು ಸಾಯಂಕಾಲ ತನ್ನ ಹೆಂಡತಿ ಅನುಸುಬಾಯಿ ಇಬ್ಬರೂ ಮನೆಯ ಹತ್ತಿರ ಇದ್ದಾಗ ನನ್ನ ಅಣ್ಣನಾದ ಬಾಭು ತಂದೆ ಮೋತಿರಾಮ ಜಾದವ ಮತ್ತು ಆತನ ಹೆಂಡತಿ ರುಕ್ಮಿನಿಬಾಯಿ ಇಬ್ಬರು ನನ್ನ ಹತ್ತಿರ ಬಂದವನೇ ನನಗೆ ಅವಚ್ಯ ಶಬ್ದಗಳಿಂದ ಬೈದು ಮನೆ ಕಟ್ಟಲು ಮೂರು ಪೀಟ್ ಜಾಗಾ ಬೀಡು ಅಂದರೆ ಬಿಡುವುದಿಲ್ಲಾ ಅಂತಾ ಅಂದವನೇ ವಿ:ನಾಕಾರಣ ಜಗಳ ತೆಗೆದು ಬಡಿಗೆಯಿಂದ ಹೊಡೆ ಬಡೆ ಮಾಡಿ ಗಾಆಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :ದಿನಾಂಕ 06-10-11 ರಂದು ಮುಂಜಾನೆ ಶ್ರೀ ಈಶ್ವರ ತಂದೆ ಸಿದ್ದಪ್ಪ ಕೇಶ್ವಾರ ಸಾ:ಹಡಗಿಲ ಹಾರುತಿ ಮತ್ತು ಗಾಯಾಳುಗಳು ತಮ್ಮ ಊರಿನ ಟಂ ಟಂ ನಂ ಕೆಎ 32 ಬಿ 3821 ನೇದ್ದು ಗೂಡ್ಸ್ ವಾಹನದಲ್ಲಿ ಕಾಯಿಪಲ್ಲೆ ಮಾರಲು ಗುಲಬರ್ಗಾಕ್ಕೆ ಬಂದು ವ್ಯಾಪಾರ ಮಾಡಿಕೊಂಡು ಮರಳಿ ತಮ್ಮ ಊರಿಗೆ ಹೊರಟಾಗ ಶರಣಸಿರಸಗಿ ಮಡ್ಡಿ ಹತ್ತಿರ ಬಂದಾಗ ಎದುರಿನಿಂದ ಬಂದ ಬಸ್ಸ ಚಾಲಕ ನಿಂಗಪ್ಪ ಗುನ್ನಾಪೂರ ಇತನು ತನ್ನ ಬಸ್ಸ ನಂ ಕೆಎ 32 ಎಪ್ 1276 ನೇದ್ದನ್ನು ಅತೀವೇಗದಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟಿದರಿಂದ ಟಂ ಟಂದಲ್ಲಿದ್ದವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಂಈಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment