ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ :ಸಂಗಮೇಶ್ವರ ಕಾಲೋನಿಯಲ್ಲಿ ಭಾಗ್ಯಲಕ್ಷ್ಮಿ ಅಪಾರ್ಟಮೆಂಟ್ ನಲ್ಲಿ ವಾಸವಿರುವ ಶ್ರೀ ಡಾ: ಆನಂದ ತಂದೆ ಅಮರಪ್ಪ ನಾಗಲೀಕರ್ ಇವರು ದಿನಾಂಕ 07-10-2011 ರಂದು ಬೆಳೀಗ್ಗೆ 9 ಗಂಟೆಗೆ ಮನೆಗೆ ಕೀಲಿ ಹಾಕಿಕೊಂಡು "ಅಪೋಲೊ ಡೈಗ್ನೊಸ್ಟಿಕ್" ಕ್ಕೆ ಹೋಗಿದ್ದು, ಮರಳಿ ಮದ್ಯಾಹ್ನ 3 ಗಂಟೆಗೆ ಮನೆಗೆ ಬಂದಾಗ, ಮನೆಯ ಬಾಗಿಲ ಕೊಂಡಿ ಮುರಿದಿದ್ದು ಕಂಡು, ಮನೆಯೊಳಗೆ ಹೋಗಿ ನೋಡಲು ಅಲಮಾರ ತೆರೆದಿದ್ದು, ಅಲಮಾರದಲ್ಲಿಟ್ಟಿದ್ದ ನಗದು ಹಣ 4,80,000/-ರೂಪಾಯಿಗಳು ಬೆಳಿಗ್ಗೆ 9-30 ಗಂಟೆಯಿಂದ ಮದ್ಯಾಹ್ನ 3 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :ಶ್ರೀ ಮತಿ ಸಾವಿತ್ರಿ ಗಡ ಅನೀಲ ಉಕಂಡೆ ಸಾ: ರಾಜಾಸ್ತಾನ ಲಾದ್ಜ ಹತ್ತಿರ ಗುಲಬರ್ಗಾ ರವರು ದಿನಾಂಕ 10-07-2011 ರಂದು ನಗರದ ಸ್ಟೇಷನ ರೋಡಿನಲ್ಲಿ ಬರುವ ಜಾಮೀಯಾ ಮಜೀದ ಎದುರುಗಡೆ ರೋಡಿನ ಮೇಲೆ ನಡೆದುಕೊಂಡು ರೋಡ ದಾಟುತ್ತಿದ್ದಾಗ ಅಟೋರಿಕ್ಷಾ ನಂ:ಕೆಎ 32 ಎ 8527 ನೆದ್ದನ್ನು ಸ್ಟೇಷನ ಕಡೆಯಿಂದ ಅತಿವೇಗದಿಂದ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗನಾದ ಮಯೂರ ವ:12 ವರ್ಷ ಈತನಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಆತನನ್ನು ತನ್ನ ಅಟೋರಿಕ್ಷಾದಲ್ಲಿ ಧನ್ವಂತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿ ಅಲ್ಲಿಂದ ಹೇಳದೆ ಕೇಳದೆ ಅಟೋರೀಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಹಿಣಿಗೆ ಕಿರುಕಳ ನೀಡಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :ಶ್ರೀ ಮತಿ ವಿಜಯಲಕ್ಷ್ಮಿ ಗಂಡ ವಿಜಯಕುಮಾರ ಬನ್ನಿಕಟ್ಟಿ ಸಾ|| ನಂದೂರ (ಕೆ) ಗ್ರಾಮ ಇವರಿಗೆ 6 ವರ್ಷಗಳ ಹಿಂದೆ ನಮ್ಮ ತಾಯಿ ನಿಲಮ್ಮಳು ನನಗೆ ನಂದೂರ (ಕೆ) ಗ್ರಾಮದ ವಿಜಯಕುಮಾರ ತಂಧೆ ಬಾಬು ಬನ್ನಿಕಟ್ಟಿ ಇತನೊಂದಿಗೆ ಲಗ್ನ ಮಾಡಿಕೊಟ್ಟಿರುತ್ತಾರೆ, ನನಗೆ ಇಬ್ಬರು ಹೆಣ್ಣು ಮಕ್ಕಳು 1) ಪೂಜಾ ವ|| 3 ವರ್ಷ 2) ಭಾಗ್ಯಶ್ರೀ ವ|| 1/12 ವರ್ಷದವಳಿರುತ್ತಾಳೆ, ನನ್ನ ಗಂಡನು ಲಗ್ನವಾದ 2-3 ತಿಂಗಳು ನನ್ನೊಂದಿಗೆ ಸರಿಯಾಗಿ ಸಂಸಾರ ಮಾಡಿದ್ದು ನಂತರ ನೀನು ಅಡುಗೆ ಸರಿಯಾಗಿ ಮಾಡುವುದಿಲ್ಲಾ ಏನೂ ಕೆಲಸಕ್ಕೆ ಬಾರದವಳಿದ್ದು ಅಂತಾ ಚಿತ್ರ ಹಿಂಸೆ ಕೊಡುತ್ತಾ ಹೊಡೆಬಡೆ ಮಾಡುತ್ತಾ ಬಂದಿದ್ದು ನಾನು ಹಾಗೇ ತಾಳಿಕೊಂಡು ಮಕ್ಕಳೊಂದಿಗೆ ಜೀವನ ಸಾಗಿಸಿದ್ದು ಈ ವಿಷಯ ನಾನು ನನ್ನ ತಾಯಿಗೆ ತಿಳಿಸಿರುತ್ತೇನೆ. ಈ ಬಗ್ಗೆ ಆಜು ಬಾಜು ಮನೆಯವರಿಗೂ ಕೂಡಾ ಗೊತ್ತಿರುತ್ತದೆ. ದಿನಾಂಕ 01-10-2011 ರಂದು ಸಾಯಂಕಾಲ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನಗೆ ನನ್ನ ಗಂಡನಾದ ವಿಜಯಕುಮಾರ ಅವಾಚ್ಯ ಶಬ್ದಗಳಿಂದ ಬೈದು ಮನೆಯಲ್ಲಿ ಇರಬೇಡ ನೀನು ಅಡಿಗೆ ಸರಿಯಾಗಿ ಮಾಡುವುದಿಲ್ಲಾ ನಾನು ಬೇರೆ ಲಗ್ನ ಮಾಡಿಕೊಳ್ಳುತ್ಥೇನೆ, ನೀನು ಈಗ ಮನೆಯಿಂದ ಹೊರಟು ಹೋಗು ಅಂತಾ ಕೈಯಿಂದ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :ಶ್ರೀ ಬಸವರಾಜ ತಂದೆ ಭೀಮರಾಯ ಪೊಲೀಸ ಗೌಡ ಸಾ|| ಹೋಸಕೇರಿ ತಾ|| ಶಹಾಪೂರ ರವರು 07-10-2011 ರಂದು ಬೇಳಿಗ್ಗೆ ನಾನು ಮತ್ತು ನಮ್ಮ ಕಂಡಕ್ಟರ ಕೂಡಿಕೊಂಡು ಸದರಿ ನಮ್ಮ ಬಸ್ಸಿನಲ್ಲಿ ಗುಲಬರ್ಗಾ ಬಸ್ ನಿಲ್ದಾಣ ಹತ್ತಿರದಿಂದ ಪ್ಯಾಸೆಂಜರ್ ಹಾಕಿಕೊಂಡು ನಾನು ಬಸ್ಸನ್ನು ಚಲಾಯಿಸುತ್ತಾ ಬಿದ್ದಾಪೂರ ಕಾಲೋನಿ ದಾಟಿ ಹೈ ಕೋರ್ಟ ಎದುರು ಇರುವ ಕೆ ಎಚ್ ಬಿ ಕಲೋನಿ ಸಮೀಪ ಹೋರಟಾಗ ನನ್ನ ಮುಂದುಗಡೆ ಒಂದು ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ 33 ಎಫ್ 72 ನೇದ್ದರ ಚಾಲಕ ತನ್ನ ಬಸ್ಸನ್ನು ಸುರಪೂರ ಕಡೆಗೆ ಚಲಾಯಿಸುತ್ತಾ ಹೋಗುತ್ತಿದ್ದು ನಾನು ಸದರಿ ಬಸ್ಸಿಗೆ ಓವರ್ ಟೇಕ್ ಮಾಡಿ ಹೋಗಬೇಕೆಂದು ನನ್ನ ಬಸ್ ಓಡಿಸುತ್ತಿದ್ದಾಗ ಎದುರಿನಿಂದ ಯಾವುದೋ ಒಂದು ಕಾರ ಬಂದಿದ್ದರಿಂದ ಅನಿವಾರ್ಯವಾಗಿ ಸದರಿ ಕೆ ಎಸ್ ಆರ್ ಟಿ ಸಿ ಬಸ್ ನ ಎಡಗಡೆಯಿಂದ ಓವರ್ ಟೇಕ್ ಮಾಡಿ ಹೋಗುತ್ತಿದ್ದಾಗ ಸದರಿ ಬಸ್ಸಿನ ಎಡಗಡೆಯ ಸೈಡಿನ ಬಸ್ಸಿಗೆ ಮುಂಬಾಗದ ಎಡ ಬಾಗದ ಸಯಡಿನ ಮಿರರ್ ಗೆ ಹಾಗೂ ಎಡ ಬಾಗದ ಬಾಡಿಗೆ ತರಚಿದ್ದು ಹಾಗೇ ನಾನು ನನ್ನ ಬಸ್ಸನ್ನು ಮುಂದೆ ತೆಗದುಕೊಂಡು ಹೊರಟಿದ್ದು ನಾನು ನನ್ನ ಬಸ್ಸನ್ನು ಚಲಾಯಿಸುತ್ತಾ ರಿಂಗ್ ರೋಡ ಕ್ರಾಸ್ ಹತ್ತಿರ ಬರುತ್ತಿದ್ದಾಗ ಸದರಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನು ನನ್ನ ಬಸ್ಸಿಗಿಂತ ಮುಂದೆ ತನ್ನ ಬಸ್ಸು ಒಯ್ದು ನಿಲ್ಲಿಸಿ ನನ್ನ ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿ ನನ್ನ ಬಸ್ಸಿನ ರಾಂಗ್ ಸೈಡಿನಿಂದ ಬಂದು ಬಸ್ಸಿಗೆ ಡಿಕ್ಕಿ ಹೊಡೆದು ಮುಂದೆ ಬಂದು ನಿಲ್ಲಿಸಿದ್ದಿಯಾ ಅಂತಾ ಅಂದವನೇ ಕೆ ಎಸ್ ಆರ್ ಟಿ ಸಿ ಬಸ್ ನೇದ್ದರ ಚಾಲಕನು ನನಗೆ ಕೈಯಿಂದ ಕಪಾಳಕ್ಕೆ , ಬೆನ್ನಿಗೆ ಹೊಡೆದು ಕಾಲಿನಿಂದ ಟೊಂಕಕ್ಕೆ ಒದ್ದು ಒಳಪೆಟ್ಟು ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment