ಅಪಘಾತ ಪ್ರಕರಣ :-
ಮಳಖೇಡ ಠಾಣೆ :ಶ್ರೀಮತಿ ಮೆಹಬೂಬಿ ಗಂಡ ಮೆಹಬುಬ ಶಾಹಾ ಧರವೇರ ಸಾ|| ಹುಡಾ ಬಿ ರವರು, ನಾನು ಮತ್ತು ನನ್ನ ಗಂಡ ಸೇಡಂ ಗುಲಬರ್ಗಾ ರೋಡಿ ನ ಮೇಲೆ ನಡೆದುಕೊಂಡು ಸರ್ಕಾರಿ ಆಸ್ಪತ್ರೆ ಮಳಖೇಡಕ್ಕೆ ಬರುತ್ತಿರುವಾಗ ಮೋಟಾರು ಸೈಕಲ್ ನಂ ಎಪಿ 28 ಎ.ಎಸ್ 6226 ನೇದ್ದರ ಸವಾರ ಶೇಖ ಹಬೀಬ ಸಾ|| ತಾಂಡೂರ ಇವನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಬಂದು ನನಗೆ ಅಪಘಾತ ಪಡಿಸಿ ಭಾರಿ ಗಾಯಗೊಳಿಸಿದ್ದು ಕಾರಣ ಶೇಖ ಹಬೀಬ ಇವನ ವಿರುಧ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಗುನ್ನೆ ನಂ 95/2011 ಕಲಂ 279. 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ವಿಶ್ವವಿದ್ಯಾಲಯ ಠಾಣೆ :ಶ್ರೀ ರಾಚಣ್ಣ ತಂದೆ ರಾಮಚಂದ್ರಪ್ಪಾ ಮಾಲಿ ಪಾಟೀಲ ಸಾ|| ಸಣ್ಣೂರು ಗ್ರಾಮ ತಾ:ಜಿ: ಗುಲಬರ್ಗಾ ರವರು, ದಿನಾಂಕ 16-10-2011 ರಂದು ಸಾಯಂಕಾಲ ನಮ್ಮೂರ ಅಂದರೆ ಸಣ್ಣೂರು ಗ್ರಾಮ ಪಂಚಾಯತ ಪಿ.ಡಿ.ಓ ಅಧಿಕಾರಿಗಳಾದ ಮಂದಾಕಿನಿ ಇವರು ಗುಲಬರ್ಗಾದ ಬಿ.ಶ್ಯಾಮಸುಂದರ ಬಡಾವಣೆಯ ತಮ್ಮ ಮನೆಯಲ್ಲಿ ನೆಣು ಹಾಕಿಕೊಂಡು ಮೃತಪಟ್ಟ ಹಿನ್ನಲೆಯಲ್ಲಿ ಗುಲಬರ್ಗಾದ ರಾಘವೇಂದ್ರ ನಗರ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ರಾತ್ರಿ 11-30 ಪಿಎಮ ಕ್ಕೆ ನಮ್ಮ ಗ್ರಾಮಕ್ಕೆ ಬಂದು ನಮ್ಮ ಗ್ರಾಮದ ಜಗದೀಶ ತಂಧೆ ಶರಣಪ್ಪಾ ನಂದೂರ ಇವರಿಗೆ ಹಿಡಿದುಕೊಂಡು ಹೋದ ಮೇಲೆ ಅವರ ಮನೆಗೆ ಬಂದಾಗ ಅವನಿಗೆ ಹಿಡಿದುಕೊಂಡು ಹೋಗುವ ಕಾಲಕ್ಕೆ ನಾನು ಮತ್ತು ನಮ್ಮೂರ ಇತರೆ ಜನರು ನೋಡುತ್ತಾ ನಿಂತಾಗ ಜಗದೀಶ ನಂದೂರ ಇತನ ಅಣ್ಣ ಶಿವಪುತ್ರಪ್ಪಾ ತಂದೆ ಶರಣಪ್ಪಾ ನಂದೂರ ಮತ್ತು ತಮ್ಮ ಮಲ್ಲಿಕಾರ್ಜುನ ತಂದೆ ಶರಣಪ್ಪಾ ನಂದೂರ ಇವರು ನನ್ನ ಹತ್ತಿರ ಬಂದವರೆ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ನಮ್ಮ ಮನೆ ಪೊಲೀಸರಿಗೆ ನೀನೆ ತೋರಿಸಿ ನನ್ನ ತಮ್ಮ ಜಗದೀಶ ನಿಗೆ ಹಿಡಿದುಕೊಟ್ಟಿರುವಿ ಶಿವಪುತ್ರಪ್ಪಾ ಮತ್ತು ಮಲ್ಲಿಕಾರ್ಜುನ ಇಬ್ಬರೂ ಹೊಡೆಬಡೆ ಮಾಡಿರುತ್ತಾರೆ.ಮತ್ತು ನನ್ನ ತಮ್ಮ ಜಗದೀಶನಿಗೆ ಏನಾದರೂ ಶಿಕ್ಷೆ ಆದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಜೀವದ ಭಯ ಹಾಕಿರುತ್ತಾರೆ. ಕಾರಣ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಗುನ್ನೆ ನಂ. 235/11 ಕಲಂ 341.323.504.506 ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :-
ಜೇವರ್ಗಿ ಠಾಣೆ :ಶ್ರೀ ಸುಲ್ತಾನ ತಂದೆ ಜಾಫರ ಸಾ|| ಹೀರೆಬೂದುರ ರವರು ದಿನಾಂಕ 16-10-2011 ರಂದು ನಾನು ಮತ್ತು ನಮ್ಮ ಮನೆಯವರೆಲ್ಲರೂ ಗುಲಬರ್ಗಾದ ಬಂದೆ ನವಾಜ ದರ್ಗಾ ಜಾತ್ರೆ ಮುಗಿಸಿಕೊಂಡು ನಮ್ಮೂರಿಗೆ ಹೋಗುವಾಗ ಕೆಲ್ಲೂರ ಗ್ರಾಮದ ಹತ್ತಿರ ನಾವೆಲ್ಲೂರ ಮೂತ್ರ ವಿಸರ್ಜನೆಗೆ ಇಳಿದಿದ್ದೆವು ಹಾಗೂ ನನ್ನ ಮಗ ಬಾಬು ಮೂತ್ರ ವಿಸರ್ಜನೆ ಮಾಡಲು ರೋಡ ಕ್ರಾಸ ಮಾಡುತ್ತಿದ್ದಾಗ ಜೇವರ್ಗಿ ಕಡೆಯಿಂದ ಯಾರೋ ಕಾರ್ ಚಾಲಕ ನನ್ನ ಮಗನಾದ ಬಾಬುಗೆ ಅಪಘಾತ ಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ. ಅವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಗುನ್ನೆ ನಂ 183/11 ಕಲಂ 279.337..ಐ.ಪಿ.ಸಿ. 187 ಐ.ಎಮ್.ವ್ಹಿ ಆಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment