ಸ್ಟೇಷನ ಬಜಾರ ಠಾಣೆ :ಶ್ರೀ ರಾಜ ತಂದೆ ಲಾಲಚಂದ ಧಾರುಂಗ ಸಾ: ಸಿಕಾತೊಡೆ ಪೋಸ್ಟ : ಪಸ್ಟ ಸಿಲೆ ಜಿ : ಈಸ್ಟಸಿಯಾಂಗ ಅರುಣಾಚಲ ಪ್ರದೇಶ ಹಾ.ವ : ಎಮ್.ಎ.ಎಮ್. ಹಾಸ್ಟೇಲ ಗುಲಬರ್ಗಾ ರವರು, ನನ್ನ ಗೆಳೆಯರಾದ, ಬಾಸಕ್ ಕೋಯ್ಯೋ, ದೋರ್ಜಿ ಸೇರಿಂಗ್, ಲಿಂಗ ಬಿತ್ತಿನ್, ಆನಂದ ಪೈಥ ಧರ್ಮೇಶ, ವಿಚಿಕತಾ, ಮತ್ತು ರಫಿಯಾ ಥಾಯಾಂಗ, ಎಲ್ಲರೂ ಕೂಡಿಕೊಂಡು ಎಮ್.ಎ.ಎಮ್. ಹಾಸ್ಟೇಲ ದಿಂದ ಪಿ.ಡಿ.ಎ. ಕಾಲೇಜಿಗೆ ಬರುವಾಗ ಕೋರಂಟಿ ಹನುಮಾನ ದೇವಾಲಯದ ಹತ್ತಿರ ಇರುವ ನೀರಿನ ಟ್ಯಾಂಕ ಹತ್ತಿರ ಸಂದೀಪ, ಶ್ರೀನಿವಾಸ, ಆಕಾಶ, ಸಂಗಡ ಸುಮಾರು 15 ಜನರು ಕೂಡಿ ಬಂದು ನಮಗೆ ನಿಲ್ಲಿಸಿ ನಮಗೆ ಹೊಡೆಬಡೆ ಮಾಡಿ ಗುಪ್ತಗಾಯ ಮತ್ತು ರಕ್ತಗಾಯ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಗುನ್ನೆ ಸಂಖ್ಯೆ 186/11 ಕಲಂ 147, 148, 341, 323, 324,325, 506, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ :ಶ್ರೀ ಸಂದೀಪ ತಂದೆ ಕೃಷ್ಣಾ ಸಿಂದೆ. ಸಾ: ಸಂತೋಷ ಕಾಲೋನಿ ಗುಲಬರ್ಗಾ ರವರು ದಿನಾಂಕ : 17-10-2011 ರಂದು 12:30 ರ ಸುಮಾರಿಗೆ ಫಿರ್ಯಾದಿದಾರರು ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜ ಕ್ಯಾಂಪಸ್ ನ ಆಟೋಮೊಬೈಲ್ ಡಿಪಾರ್ಟಮೆಂಟ ಎದುರಿಗೆ ಸ್ನೇಹಿತರಾದ ಶ್ರೀನಿವಾಸ ಚಿದರೆ, ಆಕಾಶ ಒಂಟಿ, ಎಲ್ಲರೂ ಮಾತನಾಡುತ್ತಾ ನಿಂತಾಗ ಪಿ.ಡಿ.ಎ. ಕಾಲೇಜಿನ ಕೆಲ ವಿದ್ಯಾರ್ಥಿಗಳು ಬಾಯಿ ಮಾತಿನ ತಕರಾರು ಮಾಡುತ್ತಿದ್ದುದನ್ನು ನಾನು ಮತ್ತು ನನ್ನ ಸ್ನೇಹಿತರು ನೋಡಿ ಅವರಿಗೆ ಬುದ್ದಿವಾದ ಹೇಳುವಾಗ ಅವರಲ್ಲಿದ್ದ ರಫಿಯಾ ಎಂಬುವವನು ನನಗೆ ನೀವೇನು ಹೇಳುತ್ತಿ ಎಂದು ಕೇಳಿ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಆನಂದ ಉತ್ತಮ ರಕ್ತಗಾಯಪಡಿಸಿದ್ದು ಆಗ ಬಿಡಿಸಲು ಬಂದ ಶ್ರೀನಿವಾಸನಿಗೆ ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿದ್ದು ಮತ್ತು ಜೀವ ಬೆದರಿಕೆ ಹಾಕಿರುತ್ತಾರೆ. ಕಾರಣ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಗುನ್ನೆ ನಂ 185/2011 ಕಲಂ 147, 148, 323, 324, 504, 506, ಸಂ 149 ಐಪಿಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.
No comments:
Post a Comment