POLICE BHAVAN KALABURAGI

POLICE BHAVAN KALABURAGI

28 August 2020

KALABURAGI DISTRICT REPORTED CRIMES

 ರಸ್ತೆ ಅಪಘಾತ ಮರಣಾಂತಿಕ:-

ಮುಧೋಳ ಠಾಣೆ 

. 1)  ದಿನಾಂಕ; 27-08-2020 ರಂದು ಬೆಳಗ್ಗೆ 07-30 ಗಂಟೆ ಸುಮಾರಿಗೆ ಫಿರ್ಯಾದಿ ರಾಮಪ್ಪ ತಂದೆ ತಿಮಪ್ಪಾ ಪರಮಾ ವ|| 65 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಮುಧೋಳ ಗ್ರಾಮ ತಾ|| ಸೇಡಂ ಹಾಗು ಮೃತ ವೆಂಕಟೇಶ ಇಬ್ಬರು ಕೂಡಿಕೊಂಡು ತಮ್ಮ ಮೋಟರ್ ಸೈಕಲ ನಂ ಕೆಎ-32 ಇಎಕ್ಸ್-3987 ನೆದ್ದರ ಮೇಲೆ ಯಾನಾಗುಂದಿ ಗ್ರಾಮದಿಂದ ಮುಧೋಳಕ್ಕೆ ಬರುವಾಗ ಪಾಕಲ ದಾಟಿ ಸ್ವಲ್ಪ ಮುಂದುಗಡೆ ಬರುವಾಗ ವೆಂಕಟೇಶ ಇತನು ತನ್ನ ಮೊಟರ ಸೈಕಲನ್ನು ಅತೀವೇಗವಾಗಿ ಮತ್ತುನಿಷ್ಕಳಜಿತನದಿಂದ ಚಲಾಯಿಸಿಕೊಂಡು ಬಂದು ಮುಂದುಗಡೆ ಹೊಲಕ್ಕೆ ಒಬ್ಬ ಮೊಟರ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ರಸ್ತೆ ಮೇಲೆ ಬಿದ್ದಿದ್ದು, ಫಿರ್ಯಾದಿಗೆ  ಬಲಕಾಲು ಕೆಳಗಡೆ ಮೂಳೆ ಮುರಿದು ರಕ್ತಗಾಯ ಗುಪ್ತಗಾಯಗಳಾಗಿದ್ದು, ಮತ್ತು ಮೃತ ವೆಂಕಟೇಶ ಇತನಿಗೆ ಹಣೆಗೆ ಹಾಗು ಮೈಕೈಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

    2) ದಿನಾಂಕ 28-08-2020 ರಂದು ರಾತ್ರಿ 01-15 ಗಂಟೆಗೆ ಫಿರ್ಯಾದಿ ವೆಂಕಟಪ್ಪಾ ಮುನಕನಪಲ್ಲಿ ಸಾ: ಆಡಕಿ ಇವರು ಠಾಣೆಗೆ ಬಂದು ಫಿರ್ಯಾದು  ಹೇಳಿಕೆ ನೀಡಿದ ಸಾರಂಶವೆನೆಂದರೇ, ನಮ್ಮ ತಂದೆ ತಾಯಿಗೆ ನಾವು ಒಟ್ಟು 3 ಜನ ಗಂಡು ಮಕ್ಕಳಿದ್ದು 2 ನೇಯವನು ಶ್ರೀನಿವಾಸ ವ|| 30 ವರ್ಷ ಇತನು 3 ತಿಂಗಳಿಂದ ಖಾಸಗಿಯಾಗಿ ಕೆ.ಇ.ಬಿ ಯಲ್ಲಿ ಕೆಲಸ ಮಾಡಿಕೊಂಡು ಬಂದಿರುತ್ತಾನೆ. ದಿನಾಂಕ 27-08-2020 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ನನ್ನ ತಮ್ಮ ಶ್ರೀನಿವಾಸ ಇತನು ಮೊಹರಂ ಹಬ್ಬದ ನಿಮಿತ್ಯವಾಗಿ ತನ್ನ ಹೆಂಡತಿ ಊರಾದ ಇಟಕಾಲ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮ ಮೋಟರ್ ಸೈಕಲ್ ನಂ ಎಪಿ-22 ಎಸ್-1216 ನೇದ್ದು ತೆಗೆದುಕೊಂಡು ಹೋಗಿರುತ್ತಾನೆ. ನಂತರ ರಾತ್ರಿ 09-30 ಗಂಟೆ ಸುಮಾರಿಗೆ ನಮ್ಮೂರಿನ ನರೇಂದ್ರರೆಡ್ಡಿ ಇತನು ಪೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ಶ್ರೀನಿವಾಸ ಇಬ್ಬರೂ ಇಟಕಾಲ ಗ್ರಾಮದಿಂದ ಮರಳಿ ಊರಿಗೆ ಬರುವಾಗ ರಾತ್ರಿ 09-30 ಗಂಟೆ ಸುಮಾರಿಗೆ ಶ್ರೀನಿವಾಸ ಇತನು ನನ್ನ ಮುಂದೆ ಬರುತ್ತಿದ್ದನು ನಾನು ಸ್ವಲ್ಪ ಹಿಂದೆ ಬರುತ್ತಿದ್ದೆನು. ಶ್ರೀನಿವಾಸ ಇತನು ಜಾಕನಪಲ್ಲಿ ಗ್ರಾಮಕ್ಕೆ ಹೋಗುವ ಬಸ್ ನಿಲ್ದಾನವನ್ನು ದಾಟಿ ಮುಂದುಗಡೆ ಬರುವಗ ಒಬ್ಬ ಬುಲೆರೋ ಗೂಡ್ಸ್ ಪಿಕ್ ಅಪ್ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸ ಇತನ ಮೋಟರ್ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ವಾಹನವನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ನಂತರ ನನಗೆ ನೋಡಿ ಮತ್ತೆ ಅಲ್ಲಿಂದ ತನ್ನ ವಾಹನವನ್ನು ತೆಗೆದುಕೊಂಡು ಓಡಿ ಹೋಗಿದ್ದರಿಂದ ಶ್ರೀನಿವಾಸ ಇತನ ತಲೆಗೆ ಹಾಗೂ ಮೈ ಕೈ ಗೆ ಭಾರಿ ರಕ್ತ ಹಾಗೂ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನೀವು ಸ್ಥಳಕ್ಕೆ ಬರಬೇಕು ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಗ ರಮೇಶ ಹಾಗೂ ನಮ್ಮೂರಿನ ಇತರರು ಕೂಡಿಕೊಂಡು ಸದರಿ ಅಪಘಾತ ಸ್ಥಳಕ್ಕೆ ಹೋಗಿ ನಮ್ಮ ತಮ್ಮನಿಗೆ ನೋಡಲಾಗಿ ಅವನ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಹಾಗೂ ಹಣೆಯ ಮೇಲೆ, ಬಲಗಣ್ಣಿನ ಹತ್ತಿರ, ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ  ಕಾರಣ ನಮ್ಮ ಶ್ರೀನಿವಾಸ ಇತನ ಮೋಟರ್ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ವಾಹನ ಸಮೇತ ಓಡಿ ಹೋದ ಬುಲೇರೋ ಪಿಕ್ ಅಪ್ ವಾಹನದ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಮುಧೋಳ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.  

 ಅಕ್ರಮ ಗೋವು ಸಾಗಾಟ :-

ಮುಧೋಳ ಠಾಣೆ 

  ದಿನಾಂಕ; 27-08-2020 ರಂದು ಬೆಳಗ್ಗೆ 09-30 ಗಂಟೆ ಸುಮಾರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾದಿ ಆನಂದರಾವ್ ಎಸ್ ಎನ್ ಪಿಐ ಮುಧೋಳ ಠಾಣೆ ಹಾಗು ಸಿಬ್ಬಂದಿ ಜನರು ಮತ್ತು ಪಂಚರು ಕೂಡಿಕೊಂಡು ಮದನಾ ಗ್ರಾಮದ ಲೋಕೇಶ್ವರ ಗುಡುಯ ಆರೋಪಿತರ ದಾಳಿ ಮಾಡಿದಾಗ ಸದರಿ ಗೂಡ್ಸ ಪಿಕಪ ವಾಹನ ನಂ ಕೆಎ-32-ಸಿ -0594 ನೆದ್ದರಲ್ಲಿ 06 ಹಸುಗಳು ಹಾಗು ಒಂದು ಕರುವನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿ ನರಳಾಡುವಂತೆ ಮಾಡಿ ಅವುಗಳನ್ನು ಹತ್ಯೆ ಮಾಡುವ ಸಲುವಾಗಿ ಅಕ್ರಮ ಸಾಗಾಟ ಮಾಡುವುದು ರುಜುವಾತಾಗಿದ್ದರಿಂದ ಆರೋಪಿತರ ವಿರುದ್ದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

  ರೈತ ಆತ್ಮ ಹತ್ಯ ಪ್ರಕರಣ :-

ಮಾಡಬೂಳ ಠಾಣೆ 

          ದಿನಾಂಕ:27/08/2020 ರಂದು 5.ಪಿ.ಎಮ್. ಕ್ಕೆ ಫಿರ್ಯಾದಿ ಶ್ರೀಮತಿ ಮಾಲಾಶ್ರೀ ಗಂಡ ಚಿತ್ರಶೇಖರ ದಂಡಗಿ ವಃ 30 ವರ್ಷ ಜಾಃ ಲಿಂಗಾಯತ ಉಃ ಮನೆ ಕೆಲಸ ಸಾಃ ಹೆಬ್ಬಾಳ ಗ್ರಾಮ ತಾಃ ಕಾಳಗಿ ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ನಾನು ಈ ಮೇಲ್ಕಂಡ ವಿಳಾಸದವಳಿದ್ದು ನಮ್ಮೂರಿನ ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಇಮ್ಮಾಣಿ ಇವರ ಮನೆಯಲ್ಲಿ ಬಾಡಿಗೆಯಿಂದ ಕುಟುಂಬ ಸಮೇತ ವಾಸವಾಗಿರುತ್ತೇವೆ. ನಮಗೆ ಹೆಬ್ಬಾಳ ಸೀಮೆಯಲ್ಲಿ ಸರ್ವೆ ನಂ. 102/2 ರಲ್ಲಿ 4 ಎಕರೆ 8 ಗುಂಟೆ ಹೊಲ ಇದ್ದು. ಈ ಹೊಲದಲ್ಲಿ ನನ್ನ ಗಂಡ ಚಿತ್ರಶೇಖರ ಇವರು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು. ಈ ಹೊಲದಲ್ಲಿ ಒಕ್ಕಲುತನ ಕೆಲಸಕ್ಕಾಗಿ ನನ್ನ ಗಂಡ ಪಿಕೆಜಿಬಿ ಬ್ಯಾಂಕ ಹೆಬ್ಬಾಳ ಶಾಖೆಯಲ್ಲಿ 70 ಸಾವೀರ ರೂಪಾಯಿ ಹಾಗೂ ಖಾಸಗಿಯವಾಗಿ ಅವರ ಇವರ ಹತ್ತಿರ 3 ಲಕ್ಷ ಹೀಗೆ ಒಟ್ಟು 3,70000/-ರೂ  ಸಾಲ ಮಾಡಿಕೊಂಡಿರುತ್ತಾನೆ. ಕಳೆದ 2-3 ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆ ಮತ್ತು ಬೆಳೆ ಬಾರದೆ  ಸಾಲ ತೀರಿಸಲು ಸಾದ್ಯವಾಗದ ಕಾರಣ ಸಾಲದ ಬಾದೆಯಿಂದ  ಇಂದು ದಿನಾಂಕ 27/08/2020 ರಂದು ಹೆಬ್ಬಾಳ ಗ್ರಾಮದ ಮನೆಯಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಮಾಡಬೂಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

26 August 2020

KALABURAGI DISTRICT REPORTED CRIMES

 ರಸ್ತೆ ಅಪಘಾತ:-

ವಾಡಿ ಪೊಲೀಸ ಠಾಣೆ 

               ದಿನಾಂಕಃ 25/08/2020 ರಂದು ಫಿರ್ಯಾದಿ ಶ್ರೀದತ್ತು ತಂದೆ ಮಾರುತಿ ನಾಯಿಕೋಡಿ ಸಾಃ ಕರುಣೇಶ್ವರ ನಗರ ಕಲಬುರಗಿ ರವರು ನೀಡಿದ  ದೂರು ಅರ್ಜಿ ಸಾರಂಶವೇನೆಂದರೆ, ದಿನಾಂಕಃ 25/08/2020 ರಂದು ರಾತ್ರಿ 00.15 ಎ.ಎಮ್.ಕ್ಕೆ ನಮ್ಮ ಟ್ಯಾಂಕರ ನಂ ಕೆಎ-30/9954 ನೇದ್ದರ ಚಾಲಕ ಅಣ್ಣಪ್ಪ ಇತನು ಟ್ಯಾಂಕರದಲ್ಲಿದ್ದ ಪೆಟ್ರೋಲನ್ನು ರಾಯಚೂರ ಶಕ್ತಿ ನಗರದಲ್ಲಿ ಖಾಲಿ ಮಾಡಿ ಮರಳಿ ಎನ್.ಹೆಚ್.-150 ಮುಖಾಂತರ ಕಲಬುರಗಿಗೆ ಬರುವಾಗ ಲಾಡ್ಲಾಪೂರ ದಾಟಿ ಹಲಕಟ್ಟಾ ಇನ್ನು ಒಂದು ಕಿಮಿ ಇರುವಾಗ ಚಾಲಕನು ಒಮ್ಮಲೆ ಬ್ರೇಕ ಹಾಕಿದ್ದರಿಂದ ಟ್ಯಾಂಕರ ಕಂಟ್ರೋಲ ಆಗದೆ ರಸ್ತೆ ಎಡಬದಿಗೆ ಪಲ್ಟಿಆಗಿದ್ದರಿಂದ  ಈ ಅಪಘಾತದಲ್ಲಿ ಚಾಲಕ ಅಣ್ಣಪ್ಪನಿಗೆ  ತಲೆಗೆ ರಕ್ತಗಾಯ ವಾಗಿದ್ದು , ಮೈಕೈಗೆ  ತರಚಿದ ರಕ್ತಗಾಯವಾಗಿದ್ದು ಮತ್ತು ಮೈಗೆ ಮತ್ತು ಕಾಲುಗಳಿಗೆ  ಒಳಪೆಟ್ಟಗಿರುತ್ತದೆ. ಕಾರಣ ನಮ್ಮ ಟ್ಯಾಂಕರ ನಂ ಕೆಎ-30/9954 ನೇದ್ದರ  ಚಾಲಕ ಅಣ್ಣಪ್ಪ ಇತನು ಟ್ಯಾಂಕರನ್ನು  ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ಒಮ್ಮೆಲೆ  ಬ್ರೇಕ ಹಾಕಿದ್ದರಿಂದ ಟ್ಯಾಂಕರ ರಸ್ತೆ ಎಡಬದಿಗೆ ಪಲ್ಟಿಮಾಡಿದ್ದು ಈತನ ಮೇಲೆ  ಕಾನೂನು ಕ್ರಮ  ಕೈಕೊಳ್ಳಬೇಕು ಅಂತಾ ಇರುವ ದೂರು ಅರ್ಜಿಯ ಸಾರಂಶದ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 

 ಎ.ಟಿ.ಎಂ ಕಳ್ಳತನಕ್ಕೆ ಪ್ರಯತ್ನ :-

ಶಹಾಬಾದ ನಗರ ಪೊಲೀಸ ಠಾಣೆ 

           ದಿನಾಂಕ: 25/08/2020 ರಂದು ಪಿರ್ಯಾದಿ ಶ್ರೀ ಸಂತೋಷ ತಂದೆ ಶರಣಪ್ಪ ಜವಳಿ ಸಾ: ದೇವಿ ನಗರ ಆಳಂದ ರೋಡ ಕಲಬುರಗಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಗಣಕಿಕೃತ ಮಾಡಿಸಿದ ಪಿರ್ಯಾದಿ ಅರ್ಜಿ ಹಾಜರ ಪಡಿಸಿದ ಸಾರಂಶವೆನೆಂದರೆ ದಿನಾಂಕ: 25/08/2020 ರಂದು 10-00 ಗಂಟೆಗೆ ನಮ್ಮ ಎಸ್ ಬಿ ಬ್ಯಾಂಕಿನ ಟಿ ಎಮ್ ಗಳಿಗೆ ಕ್ಯಾಶ ಲೋಡ ಮಾಡುವ ಶ್ರೀ ವಿಕ್ರಮ ಸಿ ಅರ್ ರವರು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ತಾನು ಶಹಾಬಾದ ಪಟ್ಟಣದ ಭಾರತ ಚೌಕದಲ್ಲಿರುವ ಎಸ್ ಬಿ ಬ್ಯಾಂಕಿನ ಟಿ ಎಮ್ ಮಶೀನಗೆ ಹಣ ಲೋಡ ಮಾಡಲು ಬಂದಿದ್ದು ಸದರಿ ಮಶೀನ ಯಾರೋ ಜಖಂಗೊಳಿಸಿದ್ದಾರೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಕಿರಣಸಿಂಗ ಠಾಕೂರ ಚಾನಲ್ ಕಾರ್ಯನಿರ್ವಾಹಕರು, ಮತ್ತು ಮಲ್ಲಣ್ಣ ತಂದೆ ಹಣಮಂತರಾಯ ತಳವಾರ ಎಸ್.ಬಿಐ ಬ್ಯಾಂಕ ಶಹಾಬಾದನ ಪಿಯೋನ ರವರು ಕೂಡಿಕೊಂಡು ಭಾರತಚೌಕ ಶಹಾಬಾದ ಎಸ್ ಬಿ ಬ್ಯಾಂಕಿನ ಎಟಿಎಮ್ ಮಶೀನ ಬಂದು ಪರಿಶೀಲಿಸಿ ನೋಡಲಾಗಿ ಮಶೀನಿನ ಡಿಸಪ್ಲೇ ಓಡಿದಿದ್ದು , ಮತ್ತು ಹೂಡ್ಡ ಡೋರ ಲಾಕ ಮುರಿದಿದ್ದು  ಹಾಗೂ ಎಸ್ ಎನ್ ಜಿ ಲಾಕರ ಮುರಿದಿದ್ದು ಮತ್ತು ಡಿಸಪ್ಲೇ ಹಿಂದುಗಡೆ ಕೂಡ ಓಡಿದಿದ್ದು ಯಾರೋ ಕಳ್ಳರು ಟಿ ಎಮ್ ಮಸೀನಿನಲ್ಲಿ ಇರುವ ಹಣ ಕಳವು ಮಾಡುವ ಉದ್ದೇಶದಿಂದ ಮಶೀನ ಮುರಿದು  ಕಳವು ಮಾಡಲು  ಪ್ರಯತ್ನಿಸಿದ್ದು ಇರುತ್ತದೆ.  ನಿನ್ನೆ ದಿನಾಂಕ: 24/08/2020 ರಂದು ರಾತ್ರಿ 11-30 ಪಿ ಎಮ್ ದಿಂದ ದಿನಾಂಕ: 25/08/2020 ರಂದು 6-00 ಎ ಎಮ್  ಅವದಿಯಲ್ಲಿ ಯಾರೋ ಕಳ್ಳರು ಶಹಾಬಾದ ಪಟ್ಟಣದ ಭಾರತ ಚೌಕದಲ್ಲಿರುವ ಎಸ್ ಬಿ ಐ ಬ್ಯಾಂಕಿನ ಎ ಟಿ ಎಮ್ ಮಸೀನ ರೂಮಿನ ಒಳಗಡೆ ಹೋಗಿ ಮಶೀನ ಮುರಿದು ಹಣ ಕಳವು ಮಾಡಲು ಪ್ರಯತ್ನಿಸಿದ್ದು ಕಾರಣ ಸೂಕ್ತ ಕ್ರಮ ಜರುಗಿಸಿ ಪತ್ತೆ ಮಾಡಬೇಕು  ನೀಡಿದ ಅರ್ಜಿ ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

25 August 2020

KALABURAGI DISTRICT REPORTED CRIMES

 ರಸ್ತೆ ಅಪಘಾತ ಮರಣಾಂತಿಕ:-

ನರೋಣಾ ಠಾಣೆ 

           ದಿನಾಂಕ:24/08/2020 ರಂದು ಫಿರ್ಯಾದಿ ಶ್ರೀ ಸಂಜುಕುಮಾರ ತಂದೆ ಶಿವಪುತ್ರಪ್ಪಾ ವಗ್ಗಿ ಸಾ:ಬೋದನ ಇವರು ಠಾಣೆಗೆ ಇವರು ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:23/08/2020 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮಲ್ಲಿಕಾರ್ಜುನ ಸುರೇಶ ಈತನು ಮೊಟಾರ್ ಸೈಕಲ್ ನಂ ಕೆಎ-33, ಕ್ಯೂ-0729 ನೇದ್ದರ ಮೇಲೆ ಮಲ್ಲಿಕಾರ್ಜುನ, ಬಾಬು ಮತ್ತು ಸುರೇಶ ಮೂರು ಜನರು ಕೂಡಿಕೊಂಡು ಬೋದನದಿಂದ ನರೋಣಾಕ್ಕೆ ಹೋಗುತ್ತಿರುವಾಗ ಬೋದನ ಕ್ರಾಸ ಹತ್ತಿರ ಹೋಗುತ್ತಿದ್ದಂತೆ ಎದುರುನಿಂದ ಯಾವುದೋ ಒಂದು ಕ್ರೂಜರ್ ಚಾಲಕನು ತನ್ನ ವಶದಲ್ಲಿರುವ ಕ್ರೂಜರನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ಮುಂದಿನಿಂದ ಜೋರಾಗಿ ಡಿಕ್ಕಿ ಹೊಡೆದು ಅಪಘಾತಗೊಳಿಸಿ ನಿಲ್ಲದೇ ತನ್ನ ಕ್ರೂಜರ್ ಸಮೇತ ಬೋದನ ಗ್ರಾಮದ ಕಡೆಗೆ ಹೋಗಿದ್ದರಿಂದ ಮೋ.ಸೈಕಲ ಚಲಾಯಿಸುತ್ತಿದ್ದ ಮಲ್ಲಿಕಾರ್ಜುನನಿಗೆ ಮತ್ತು ಮೋ.ಸೈಕಲ ಹಿಂದೆ ಕುಳಿತ ಸುರೇಶ ಗಾಜರೆ ವಯಸ್ಸು:27 ವರ್ಷ, ಮತ್ತು ಬಾಬು ಜಾದವ್ ವಯಾ:29 ವರ್ಷ ಇವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು. ಮಲ್ಲಿಕಾರ್ಜುನನು ಬೇಹೊಷ ಆಗಿದ್ದರಿಂದ  ಉಪಚಾರ ಕುರಿತು 108  ಅಂಬೂಲೆನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಆಸ್ಪತ್ರೆಗೆ ತರುವಾಗ ಮಾರ್ಗ ಮದ್ಯ ಕಲಬುರಗಿ ಸುಲ್ತಾನಪೂರ ಕ್ರಾಸ್ ಹತ್ತಿರ ಮಲ್ಲಿಕಾರ್ಜುನನು ಮೃತಪಟ್ಟಿದ್ದರಿಂದ ಈ ಬಗ್ಗೆ ಅಪರಿಚಿತ ಕ್ರೋಜರ ಜೀಪ ಮತ್ತು ಅದರ ಚಾಲಕನ ಮೇಲೆ ನರೋಣಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 ಕೊಲೆಗೆ ಪ್ರಯತ್ನ :-

ಅಫಜಲಪೂರ ಠಾಣೆ :

                    ದಿನಾಂಕ: 24-08-2020 ರಂದು ಫಿರ್ಯಾದಿ ಶ್ರೀ ಶಿವುಕುಮಾರ ತಂದೆ ಮಲಕಪ್ಪ ನಾಟಿಕಾರ ರಾಜ್ಯ ಕಾರ್ಯದರ್ಶಿಗಳು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕಾಂಗ್ರೇಸ್ ಮುಖಂಡರು ಸಾ|| ಹವಳಗಾ ತಾ|| ಅಫಜಲಪೂರ ಇವರು ನೀಡಿದ ಫಿರ್ಯಾದು ಸಾರಾಂಶವೆನೆಂದರೆ, ನನ್ನ ರಾಜಕಿಯ ವಿಷಯದಲ್ಲಿ ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ @ ಸಿದ್ರಾಮಪ್ಪ  ಜಗಲಗೊಂಡ ಈತನು  ನನಗೆ ವಿರೋದ ಮಾಡಿ ನನ್ನ ಮೇಲೆ ದ್ವೇಷ ಸಾಧಿಸಿಕೊಂಡು ಈಗ ಸುಮಾರು 02 ತಿಂಗಳ ಹಿಂದೆ ಸದರಿ ಮಾಳಪ್ಪನು ನನಗೆ ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇನೆ. ನನ್ನ ಬೆನ್ನ ಹಿಂದೆ ರಾಜಕೀಯ ಮುಖಂಡರು ಇದ್ದಾರೆ ಎಂದು ಜೀವ ಬೆದರಿಕೆ ಹಾಕುತ್ತಾ ಬಂದಿರುತ್ತಾನೆ.  ದಿನಾಂಕ 24-08-2020 ರಂದು ಮದ್ಯ ರಾತ್ರಿ ಅಂದಾಜು 01:00 ಗಂಟೆ ಸುಮಾರಿಗೆ ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ @ ಸಿದ್ರಾಮಪ್ಪ ಜಗಲಗೊಂಡ ಮತ್ತು ಇನ್ನು 3 ಜನ ಅಫರಿಚಿತರು ನಮ್ಮ ಮನೆಯ ಕಂಪೌಂಡ ಒಳಗೆ ಬಂದು ನಮ್ಮ ಇನೊವಾ ಕಾರಿನ ಮುಂಭಾಗದ ಗ್ಲಾಸಿನ ಮೇಲೆ ಕಲ್ಲು ಎತ್ತಿ ಹಾಕಿದರು. ಮಾಳಪ್ಪನು ತನ್ನ ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡಿದ್ದನು. ಆಗ ನನ್ನ ತಾಯಿ ಮತ್ತು ತಮ್ಮ ಶ್ರೀಶೈಲ ಇಬ್ಬರು ಚೀರಿದಾಗ ನಾಲ್ಕು ಜನರು ಕಂಪೌಂಡ್ ಗೋಡೆ ಹಾರಿ ಹೋಗಿರುತ್ತಾರೆ. ಮಾಳಪ್ಪನು ಕಂಪೌಂಡ್ ಗೋಡೆ ಹಾರುತ್ತಿದ್ದಾಗ ಅವನ ಕೈಯಲ್ಲಿದ್ದ ಪಿಸ್ತೂಲು ಕೆಳಗೆ ಬಿದ್ದಿರುತ್ತದೆ ಸದರಿ ಪಿಸ್ತೂಲು ಇನ್ನು ಸ್ಥಳದಲ್ಲಿಯೆ ಇರುತ್ತದೆ. ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ @ ಸಿದ್ರಾಮಪ್ಪ ಜಗಲಗೊಂಡ ಈತನು ದ್ವೇ಼ಷದಿಂದ ಹಾಗೂ ಬೇರೆಯವರ ಕುಮ್ಮಕ್ಕಿನಿಂದ ನನ್ನನ್ನು ಕೊಲೆ ಮಾಡಬೆಕೆಂದು ತನ್ನ ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡು ನಮ್ಮ ಮನೆಯ ಕಂಪೌಂಡ ಒಳಗೆ ಪ್ರವೇಶ ಮಾಡಿ, ನಾನು ಸಿಗದೆ ಇದ್ದರಿಂದ ನನ್ನ ಕಾರ ನಂ ಕೆಎ-32 ಎಎ-8055 ನೇದ್ದರ ಗ್ಲಾಸ ಒಡೆದು ಹಾನಿ ಮಾಡಿದ್ದರಿಂದ ಮಾಳಪ್ಪ ಜಗಲಗೊಂಡ ಹಾಗೂ ಆತನ 03 ಜನ ಸಹಚರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.