ರಸ್ತೆ ಅಪಘಾತ
ಮರಣಾಂತಿಕ:-
ನರೋಣಾ ಠಾಣೆ
ದಿನಾಂಕ:24/08/2020 ರಂದು ಫಿರ್ಯಾದಿ ಶ್ರೀ ಸಂಜುಕುಮಾರ ತಂದೆ
ಶಿವಪುತ್ರಪ್ಪಾ ವಗ್ಗಿ ಸಾ:ಬೋದನ ಇವರು ಠಾಣೆಗೆ ಇವರು ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:23/08/2020 ರಂದು ರಾತ್ರಿ 8-30 ಗಂಟೆ
ಸುಮಾರಿಗೆ ಮಲ್ಲಿಕಾರ್ಜುನ ಸುರೇಶ ಈತನು ಮೊಟಾರ್ ಸೈಕಲ್ ನಂ ಕೆಎ-33, ಕ್ಯೂ-0729 ನೇದ್ದರ ಮೇಲೆ ಮಲ್ಲಿಕಾರ್ಜುನ, ಬಾಬು ಮತ್ತು ಸುರೇಶ
ಮೂರು ಜನರು ಕೂಡಿಕೊಂಡು ಬೋದನದಿಂದ ನರೋಣಾಕ್ಕೆ ಹೋಗುತ್ತಿರುವಾಗ ಬೋದನ ಕ್ರಾಸ ಹತ್ತಿರ
ಹೋಗುತ್ತಿದ್ದಂತೆ ಎದುರುನಿಂದ ಯಾವುದೋ ಒಂದು ಕ್ರೂಜರ್ ಚಾಲಕನು ತನ್ನ ವಶದಲ್ಲಿರುವ ಕ್ರೂಜರನ್ನು
ಅತೀವೇಗವಾಗಿ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ಮುಂದಿನಿಂದ ಜೋರಾಗಿ ಡಿಕ್ಕಿ
ಹೊಡೆದು ಅಪಘಾತಗೊಳಿಸಿ ನಿಲ್ಲದೇ ತನ್ನ ಕ್ರೂಜರ್ ಸಮೇತ ಬೋದನ ಗ್ರಾಮದ ಕಡೆಗೆ ಹೋಗಿದ್ದರಿಂದ
ಮೋ.ಸೈಕಲ ಚಲಾಯಿಸುತ್ತಿದ್ದ ಮಲ್ಲಿಕಾರ್ಜುನನಿಗೆ ಮತ್ತು ಮೋ.ಸೈಕಲ ಹಿಂದೆ ಕುಳಿತ ಸುರೇಶ ಗಾಜರೆ
ವಯಸ್ಸು:27 ವರ್ಷ,
ಮತ್ತು ಬಾಬು ಜಾದವ್ ವಯಾ:29 ವರ್ಷ ಇವರಿಗೆ
ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು. ಮಲ್ಲಿಕಾರ್ಜುನನು ಬೇಹೊಷ ಆಗಿದ್ದರಿಂದ ಉಪಚಾರ ಕುರಿತು 108 ಅಂಬೂಲೆನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿ
ಆಸ್ಪತ್ರೆಗೆ ತರುವಾಗ ಮಾರ್ಗ ಮದ್ಯ ಕಲಬುರಗಿ ಸುಲ್ತಾನಪೂರ ಕ್ರಾಸ್ ಹತ್ತಿರ ಮಲ್ಲಿಕಾರ್ಜುನನು
ಮೃತಪಟ್ಟಿದ್ದರಿಂದ ಈ ಬಗ್ಗೆ ಅಪರಿಚಿತ ಕ್ರೋಜರ ಜೀಪ ಮತ್ತು ಅದರ ಚಾಲಕನ ಮೇಲೆ ನರೋಣಾ ಪೊಲೀಸ
ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಕೊಲೆಗೆ ಪ್ರಯತ್ನ :-
ಅಫಜಲಪೂರ ಠಾಣೆ :
ದಿನಾಂಕ: 24-08-2020 ರಂದು ಫಿರ್ಯಾದಿ
ಶ್ರೀ ಶಿವುಕುಮಾರ ತಂದೆ ಮಲಕಪ್ಪ ನಾಟಿಕಾರ ರಾಜ್ಯ ಕಾರ್ಯದರ್ಶಿಗಳು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕಾಂಗ್ರೇಸ್ ಮುಖಂಡರು ಸಾ|| ಹವಳಗಾ ತಾ|| ಅಫಜಲಪೂರ ಇವರು ನೀಡಿದ ಫಿರ್ಯಾದು ಸಾರಾಂಶವೆನೆಂದರೆ, ನನ್ನ ರಾಜಕಿಯ ವಿಷಯದಲ್ಲಿ ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ @ ಸಿದ್ರಾಮಪ್ಪ ಜಗಲಗೊಂಡ ಈತನು ನನಗೆ ವಿರೋದ ಮಾಡಿ ನನ್ನ ಮೇಲೆ ದ್ವೇಷ ಸಾಧಿಸಿಕೊಂಡು ಈಗ ಸುಮಾರು 02 ತಿಂಗಳ ಹಿಂದೆ ಸದರಿ ಮಾಳಪ್ಪನು ನನಗೆ ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇನೆ. ನನ್ನ ಬೆನ್ನ ಹಿಂದೆ ರಾಜಕೀಯ ಮುಖಂಡರು ಇದ್ದಾರೆ ಎಂದು ಜೀವ ಬೆದರಿಕೆ ಹಾಕುತ್ತಾ ಬಂದಿರುತ್ತಾನೆ. ದಿನಾಂಕ 24-08-2020 ರಂದು ಮದ್ಯ ರಾತ್ರಿ ಅಂದಾಜು 01:00 ಗಂಟೆ ಸುಮಾರಿಗೆ ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ @ ಸಿದ್ರಾಮಪ್ಪ ಜಗಲಗೊಂಡ ಮತ್ತು ಇನ್ನು 3 ಜನ ಅಫರಿಚಿತರು ನಮ್ಮ ಮನೆಯ ಕಂಪೌಂಡ ಒಳಗೆ ಬಂದು ನಮ್ಮ ಇನೊವಾ ಕಾರಿನ ಮುಂಭಾಗದ ಗ್ಲಾಸಿನ ಮೇಲೆ ಕಲ್ಲು ಎತ್ತಿ ಹಾಕಿದರು. ಮಾಳಪ್ಪನು ತನ್ನ ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡಿದ್ದನು. ಆಗ ನನ್ನ ತಾಯಿ ಮತ್ತು ತಮ್ಮ ಶ್ರೀಶೈಲ ಇಬ್ಬರು ಚೀರಿದಾಗ ನಾಲ್ಕು ಜನರು ಕಂಪೌಂಡ್ ಗೋಡೆ ಹಾರಿ ಹೋಗಿರುತ್ತಾರೆ. ಮಾಳಪ್ಪನು ಕಂಪೌಂಡ್ ಗೋಡೆ ಹಾರುತ್ತಿದ್ದಾಗ ಅವನ ಕೈಯಲ್ಲಿದ್ದ ಪಿಸ್ತೂಲು ಕೆಳಗೆ ಬಿದ್ದಿರುತ್ತದೆ ಸದರಿ ಪಿಸ್ತೂಲು ಇನ್ನು ಸ್ಥಳದಲ್ಲಿಯೆ ಇರುತ್ತದೆ. ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ @ ಸಿದ್ರಾಮಪ್ಪ ಜಗಲಗೊಂಡ ಈತನು ದ್ವೇ಼ಷದಿಂದ ಹಾಗೂ ಬೇರೆಯವರ ಕುಮ್ಮಕ್ಕಿನಿಂದ ನನ್ನನ್ನು ಕೊಲೆ ಮಾಡಬೆಕೆಂದು ತನ್ನ ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡು ನಮ್ಮ ಮನೆಯ ಕಂಪೌಂಡ ಒಳಗೆ ಪ್ರವೇಶ ಮಾಡಿ, ನಾನು ಸಿಗದೆ ಇದ್ದರಿಂದ ನನ್ನ ಕಾರ ನಂ ಕೆಎ-32 ಎಎ-8055 ನೇದ್ದರ ಗ್ಲಾಸ ಒಡೆದು ಹಾನಿ ಮಾಡಿದ್ದರಿಂದ ಮಾಳಪ್ಪ ಜಗಲಗೊಂಡ ಹಾಗೂ ಆತನ 03 ಜನ ಸಹಚರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ
ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment