ರಸ್ತೆ ಅಪಘಾತ ಮರಣಾಂತಿಕ:-
ಮುಧೋಳ ಠಾಣೆ
. 1) ದಿನಾಂಕ;
27-08-2020 ರಂದು ಬೆಳಗ್ಗೆ 07-30 ಗಂಟೆ ಸುಮಾರಿಗೆ ಫಿರ್ಯಾದಿ
ರಾಮಪ್ಪ ತಂದೆ ತಿಮಪ್ಪಾ ಪರಮಾ ವ|| 65 ವರ್ಷ ಜಾ|| ಕಬ್ಬಲಿಗ ಉ||
ಒಕ್ಕಲುತನ ಸಾ|| ಮುಧೋಳ ಗ್ರಾಮ ತಾ|| ಸೇಡಂ ಹಾಗು ಮೃತ ವೆಂಕಟೇಶ ಇಬ್ಬರು ಕೂಡಿಕೊಂಡು ತಮ್ಮ ಮೋಟರ್
ಸೈಕಲ ನಂ ಕೆಎ-32 ಇಎಕ್ಸ್-3987 ನೆದ್ದರ ಮೇಲೆ ಯಾನಾಗುಂದಿ ಗ್ರಾಮದಿಂದ ಮುಧೋಳಕ್ಕೆ ಬರುವಾಗ
ಪಾಕಲ ದಾಟಿ ಸ್ವಲ್ಪ ಮುಂದುಗಡೆ ಬರುವಾಗ ವೆಂಕಟೇಶ ಇತನು ತನ್ನ ಮೊಟರ ಸೈಕಲನ್ನು ಅತೀವೇಗವಾಗಿ
ಮತ್ತುನಿಷ್ಕಳಜಿತನದಿಂದ ಚಲಾಯಿಸಿಕೊಂಡು ಬಂದು ಮುಂದುಗಡೆ ಹೊಲಕ್ಕೆ ಒಬ್ಬ ಮೊಟರ ಸೈಕಲಿಗೆ
ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ರಸ್ತೆ ಮೇಲೆ ಬಿದ್ದಿದ್ದು, ಫಿರ್ಯಾದಿಗೆ ಬಲಕಾಲು ಕೆಳಗಡೆ ಮೂಳೆ ಮುರಿದು ರಕ್ತಗಾಯ
ಗುಪ್ತಗಾಯಗಳಾಗಿದ್ದು, ಮತ್ತು ಮೃತ ವೆಂಕಟೇಶ
ಇತನಿಗೆ ಹಣೆಗೆ ಹಾಗು ಮೈಕೈಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಆಸ್ಪತ್ರೆಗೆ ಹೋಗುವಾಗ
ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ.
2) ದಿನಾಂಕ 28-08-2020 ರಂದು ರಾತ್ರಿ 01-15 ಗಂಟೆಗೆ ಫಿರ್ಯಾದಿ ವೆಂಕಟಪ್ಪಾ ಮುನಕನಪಲ್ಲಿ ಸಾ: ಆಡಕಿ ಇವರು ಠಾಣೆಗೆ ಬಂದು ಫಿರ್ಯಾದು ಹೇಳಿಕೆ ನೀಡಿದ ಸಾರಂಶವೆನೆಂದರೇ, ನಮ್ಮ ತಂದೆ ತಾಯಿಗೆ ನಾವು ಒಟ್ಟು 3 ಜನ ಗಂಡು ಮಕ್ಕಳಿದ್ದು 2 ನೇಯವನು ಶ್ರೀನಿವಾಸ ವ|| 30 ವರ್ಷ ಇತನು 3 ತಿಂಗಳಿಂದ ಖಾಸಗಿಯಾಗಿ ಕೆ.ಇ.ಬಿ ಯಲ್ಲಿ ಕೆಲಸ ಮಾಡಿಕೊಂಡು ಬಂದಿರುತ್ತಾನೆ. ದಿನಾಂಕ 27-08-2020 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ನನ್ನ ತಮ್ಮ ಶ್ರೀನಿವಾಸ ಇತನು ಮೊಹರಂ ಹಬ್ಬದ ನಿಮಿತ್ಯವಾಗಿ ತನ್ನ ಹೆಂಡತಿ ಊರಾದ ಇಟಕಾಲ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮ ಮೋಟರ್ ಸೈಕಲ್ ನಂ ಎಪಿ-22 ಎಸ್-1216 ನೇದ್ದು ತೆಗೆದುಕೊಂಡು ಹೋಗಿರುತ್ತಾನೆ. ನಂತರ ರಾತ್ರಿ 09-30 ಗಂಟೆ ಸುಮಾರಿಗೆ ನಮ್ಮೂರಿನ ನರೇಂದ್ರರೆಡ್ಡಿ ಇತನು ಪೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ಶ್ರೀನಿವಾಸ ಇಬ್ಬರೂ ಇಟಕಾಲ ಗ್ರಾಮದಿಂದ ಮರಳಿ ಊರಿಗೆ ಬರುವಾಗ ರಾತ್ರಿ 09-30 ಗಂಟೆ ಸುಮಾರಿಗೆ ಶ್ರೀನಿವಾಸ ಇತನು ನನ್ನ ಮುಂದೆ ಬರುತ್ತಿದ್ದನು ನಾನು ಸ್ವಲ್ಪ ಹಿಂದೆ ಬರುತ್ತಿದ್ದೆನು. ಶ್ರೀನಿವಾಸ ಇತನು ಜಾಕನಪಲ್ಲಿ ಗ್ರಾಮಕ್ಕೆ ಹೋಗುವ ಬಸ್ ನಿಲ್ದಾನವನ್ನು ದಾಟಿ ಮುಂದುಗಡೆ ಬರುವಗ ಒಬ್ಬ ಬುಲೆರೋ ಗೂಡ್ಸ್ ಪಿಕ್ ಅಪ್ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸ ಇತನ ಮೋಟರ್ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ವಾಹನವನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ನಂತರ ನನಗೆ ನೋಡಿ ಮತ್ತೆ ಅಲ್ಲಿಂದ ತನ್ನ ವಾಹನವನ್ನು ತೆಗೆದುಕೊಂಡು ಓಡಿ ಹೋಗಿದ್ದರಿಂದ ಶ್ರೀನಿವಾಸ ಇತನ ತಲೆಗೆ ಹಾಗೂ ಮೈ ಕೈ ಗೆ ಭಾರಿ ರಕ್ತ ಹಾಗೂ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನೀವು ಸ್ಥಳಕ್ಕೆ ಬರಬೇಕು ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಗ ರಮೇಶ ಹಾಗೂ ನಮ್ಮೂರಿನ ಇತರರು ಕೂಡಿಕೊಂಡು ಸದರಿ ಅಪಘಾತ ಸ್ಥಳಕ್ಕೆ ಹೋಗಿ ನಮ್ಮ ತಮ್ಮನಿಗೆ ನೋಡಲಾಗಿ ಅವನ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಹಾಗೂ ಹಣೆಯ ಮೇಲೆ, ಬಲಗಣ್ಣಿನ ಹತ್ತಿರ, ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಕಾರಣ ನಮ್ಮ ಶ್ರೀನಿವಾಸ ಇತನ ಮೋಟರ್ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ವಾಹನ ಸಮೇತ ಓಡಿ ಹೋದ ಬುಲೇರೋ ಪಿಕ್ ಅಪ್ ವಾಹನದ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಮುಧೋಳ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಅಕ್ರಮ ಗೋವು ಸಾಗಾಟ :-
ಮುಧೋಳ ಠಾಣೆ
ದಿನಾಂಕ; 27-08-2020 ರಂದು ಬೆಳಗ್ಗೆ 09-30 ಗಂಟೆ ಸುಮಾರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾದಿ ಆನಂದರಾವ್
ಎಸ್ ಎನ್ ಪಿಐ ಮುಧೋಳ ಠಾಣೆ ಹಾಗು ಸಿಬ್ಬಂದಿ ಜನರು ಮತ್ತು ಪಂಚರು ಕೂಡಿಕೊಂಡು ಮದನಾ ಗ್ರಾಮದ
ಲೋಕೇಶ್ವರ ಗುಡುಯ ಆರೋಪಿತರ ದಾಳಿ ಮಾಡಿದಾಗ ಸದರಿ ಗೂಡ್ಸ ಪಿಕಪ ವಾಹನ ನಂ ಕೆಎ-32-ಸಿ -0594 ನೆದ್ದರಲ್ಲಿ 06 ಹಸುಗಳು ಹಾಗು ಒಂದು ಕರುವನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿ
ನರಳಾಡುವಂತೆ ಮಾಡಿ ಅವುಗಳನ್ನು ಹತ್ಯೆ ಮಾಡುವ ಸಲುವಾಗಿ ಅಕ್ರಮ ಸಾಗಾಟ ಮಾಡುವುದು
ರುಜುವಾತಾಗಿದ್ದರಿಂದ ಆರೋಪಿತರ ವಿರುದ್ದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ರೈತ ಆತ್ಮ ಹತ್ಯ ಪ್ರಕರಣ :-
ಮಾಡಬೂಳ ಠಾಣೆ
No comments:
Post a Comment