POLICE BHAVAN KALABURAGI

POLICE BHAVAN KALABURAGI

21 December 2019

KALABURAGI DISTRICT CRIME REPORTS.


C¥sÀd®¥ÀÆgÀ ¥Éưøï oÁuÉ : ದಿನಾಂಕ 20-12-2019 ರಂದು 08-15 ಎ.ಎಮ್ ಕ್ಕೆ ಮಾನ್ಯ ಪಿ,ಎಸ್,ಐ ಸಾಹೇಬರು 03 ಮರಳು ತುಂಬಿದ ಟಿಪ್ಪರಗಳನ್ನು ಹಾಜರು ಪಡಿಸಿ ವರದಿ ನೀಡಿದ್ದು ಸದರಿ ವರದಿಯ ಸಾರಾಂಶವೇನೆಂದರೆ ನಾನು ಸಂತೋಷ ಎಲ್ ತಟ್ಟೆಪಳ್ಳಿ ಪಿ,ಎಸ್,ಐ ಅಫಜಲಪೂರ ಪೊಲೀಸ್ ಠಾಣೆ ಈ ಮೂಲಕ ವರದಿ ಕೊಡುವುದೇನೆಂದರೆ. ಇಂದು ದಿನಾಂಕ 20-12-2019 ರಂದು 6:00 ಎ,ಎಮ್ ಕ್ಕೆ ನಾನು ಮತ್ತು ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಶರಣು ಹೆಚ್.ಸಿ-403, ಚಂದ್ರಕಾಂತ ಪಿಸಿ-706 ರವರು ಗಸ್ತು ಕರ್ತವ್ಯ ಮುಗಿಸಿಕೊಂಡು ಬಂದು ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಬನ್ನೆಟ್ಟಿ ಗ್ರಾಮದ ಭೀಮಾ ನದಿಯಲ್ಲಿ ಟಿಪ್ಪರಗಳಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಅಫಜಲಪೂರ ಪಟ್ಟಣದ ಕಡೆಗೆ ಬರುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಸರ್ಕಾರಿ ಪಂಚರಾಗಿ 1) ಮಂಜುನಾಥ ತಂದೆ ಮಲ್ಲಪ್ಪ ಜಾಲಗಾರ ವಯ|| 28 ವರ್ಷ ಉ|| ಗ್ರಾಮ ಲೆಕ್ಕಾಧಿಕಾರಿ ಅಫಜಲಪೂರ ಸಾ|| ತಹಸಿಲ ಕಾರ್ಯಲಯ ಅಫಜಲಪೂರ 2) ಯಲ್ಲಪ್ಪ ತಂದೆ ವಿಠ್ಠಲ ಜಮಾದಾರ ವಯ|| 25 ವರ್ಷ ಉ|| ಗ್ರಾಮ ಸಹಾಯಕ ಅಫಜಲಪೂರ ಸಾ|| ತಹಸಿಲ ಕಾರ್ಯಲಯ ಅಫಜಲಪೂರ ಇವರನ್ನು ಪೊಲೀಸ್ ಠಾಣೆಗೆ ಬರಮಾಡಿಕೊಂಡು ವಿಷಯವನ್ನು ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ, ನಾನು ಹಾಗೂ ಪಂಚರು ಮತ್ತು ನಮ್ಮ  ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಶರಣು ಹೆಚ್.ಸಿ-403, ಚಂದ್ರಕಾಂತ ಪಿಸಿ-706 ರವರನ್ನು ಸಂಗಡ ಕರೆದುಕೊಂಡು ಎಲ್ಲರೂ ಕೂಡಿ ನಮ್ಮ ಪೊಲೀಸ್ ಜೀಪಿನಲ್ಲಿ 6:10 ಎ. ಎಮ್ ಕ್ಕೆ ಹೊರಟು. ಘತ್ತರಗಾ ರೋಡಿಗೆ ಹೋಗುತ್ತಿದ್ದಾಗ ಅಫಜಲಪೂರ ಪಟ್ಟಣದ ಅಮೋಘಸಿದ್ದ ಗುಡಿಯ ಹತ್ತಿರ 06:15 ಎ ಎಮ್ ಕ್ಕೆ ಹೋಗುತ್ತಿದ್ದಾಗ ಎದುರುಗಡೆಯಿಂದ ಮೂರು ಟಿಪ್ಪರಗಳು ಮರಳು ತುಂಬಿಕೊಂಡು  ನಮ್ಮ ಎದುರುಗಡೆ ಬರುತ್ತಿದ್ದು ಟಿಪ್ಪರಗಳನ್ನು ನಿಲ್ಲಿಸಲು ಸೂಚನೆ ಕೊಟ್ಟಾಗ ಅವುಗಳ ಚಾಲಕರು ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿ ಓಡಿ ಹೋಗಿರುತ್ತಾರೆ. ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನೊಂದಣಿ ಸಂಖ್ಯೆ ನೋಡಲು ಕೆಎ-32 ಸಿ-6203 ಇದ್ದು. ಸದರಿ ಟಿಪ್ಪರ ಅ.ಕಿ 10,00,000/-ರೂ ಇರಬಹುದು ಮತ್ತು ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು. 2) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನೊಂದಣಿ ಸಂಖ್ಯೆ ನೋಡಲು ಕೆಎ-32 ಡಿ-0647 ಇದ್ದು. ಸದರಿ ಟಿಪ್ಪರ ಅ.ಕಿ 10,00,000/-ರೂ ಇರಬಹುದು ಮತ್ತು ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು. 3) ಟಾಟಾ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನೊಂದಣಿ ಸಂಖ್ಯೆ ನೋಡಲು ಎಮ್.ಹೆಚ್-48 ಎಜಿ-6688 ಇದ್ದು. ಸದರಿ ಟಿಪ್ಪರ ಅ.ಕಿ 10,00,000/-ರೂ ಇರಬಹುದು ಮತ್ತು ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ 06:30 ಎಎಮ್ ದಿಂದ 07:30 ಎ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು. ನಂತರ ಸದರಿ ಟಿಪ್ಪರಗಳನ್ನು ಸಿಬ್ಬಂದಿಯವರ ಸಹಾಯದಿಂದ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿ, ಸದರಿ ಟಿಪ್ಪರ ಚಾಲಕರ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಈ ವರದಿ ಸಲ್ಲಿಸಿದ್ದು ಇರುತ್ತದೆ. ಅಂತಾ ನೀಡಿದ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ : ದಿನಾಂಕ 20/12/2019 ರಂದು 6-45 ಪಿಎಮ್‍ಕ್ಕೆ ಶ್ರೀ ಮೋಹಿದ್ದಿನ ತಂದೆ ಚಾಂದಸಾಬ ಕಾಟಂನಳ್ಳಿ ಸಾ||ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ದೂರು ಅರ್ಜಿ ಸಾರಾಂಸವೇನೆಂದರೆ ನಾನು ಮೋಹಿದ್ದಿನ ತಂದೆ ಚಾಂದಸಾಬ ಕಾಟಂನಳ್ಳಿ ವ|| 34 ವರ್ಷ ಉ|| ಖಾಸಗಿ ಕೇಲಸ ಸಾ|| ಅಫಜಲಪೂರ ನಿವಾಸಿತನಿದ್ದು ಈ ಮೂಲಕ ತಮ್ಮಲ್ಲಿ ದೂರು ಅರ್ಜಿ ಸಲ್ಲಿಸುವದೆನಂದರೆ ಅಫಜಲಪೂರ ಪಟ್ಟಣದಲ್ಲಿ ಬಸವಶ್ವೇರ ಸರ್ಕಲ ಸಮೀಪ ಬಸವೇಶ್ವರ ಸರ್ಕಲದಿಂದ ಬಸ್ ನಿಲ್ದಾಣಕ್ಕೆ ಬರುವ ಮುಖ್ಯೆ ರೋಡಿನ ಬದಿ ನನ್ನದು ಒಂದು ಅಂಗಡಿ ಇದ್ದು ನೇಟ ಪಾಯಿಂಟ ಅಂತ ಅದರ ಹೆಸರು ಇರುತ್ತದೆ. ಸದರಿ ಅಂಗಡಿಯನ್ನು ನಾನು ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ತರೆದು ರಾತ್ರಿ 9-00 ಗಂಟೆ ಮುಚ್ಚುತ್ತೆನೆ ಅದರಂತೆ ದಿನಾಂಕ:11/12/2019 ರಂದು ನನ್ನ ದೈನಂದಿನ ಕೆಲಸ ಮುಗಿಸಿಕೊಂಡು ರಾತ್ರಿ 9-00 ಗಂಟೆಗೆ ನನ್ನ ಅಂಗಡಿಯನ್ನು ಮುಚ್ಚಿ ನಮ್ಮ ಮನೆಗೆ ಹೋಗಿರುತ್ತೆನೆ ನಂತರ ದಿನಾಂಕ:12/12/2019 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಪ್ರತಿ ದಿನದಂತೆ ನನ್ನ ಅಂಗಡಿಗೆ ಬಂದು ಅಂಗಡಿಯನ್ನು ತಗೆದು ನೋಡಲಾಗಿ ಅಂಗಡಿಯಲ್ಲಿನ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಕಂಡು ಬಂತು ಮತ್ತು ನನ್ನ ಅಂಗಡಿಯ ಹಿಂದಿನ ಪತ್ರಾ ಕಿತ್ತಿರುವದು ಕಂಡು ಬಂತು ನೊಡಲಾಗಿ ನನ್ನ ಅಂಗಡಿಯಲ್ಲಿಟ್ಟಿದ್ದ 1) DELL ಕಂಪನಿಯ ಎರಡು ಲ್ಯಾಪಟಾಪಗಳು ಈಗಿನ ಅಂದಾಜು ಕಿಮ್ಮತ್ತು 16,000/- ರೂ 2) ಒಂದು ಕಲರ್ PRINTER EPSON ಕಂಪನಿಯದ್ದು ಈಗಿನ ಅಂದಾಜು ಕಿಮ್ಮತ್ತು 2,500/- ರೂ 3) ಒಂದು INVETER MICROTEK ಕಂಪನಿಯದ್ದು ಈಗಿನ ಅಂದಾಜು ಕಿಮ್ಮತ್ತು 1000/- ರೂ 4) ಎರಡು SECUTION RD THUMB ಈಗಿನ ಅಂದಾಜು ಕಿಮ್ಮತ್ತು 2,000/- ರೂ 5) ಒಂದು SCANNER ಈಗಿನ ಅಂದಾಜು ಕಿಮ್ಮತ್ತು 2,000/- ರೂ 6) ಒಂದು AIR BLOOR ಅಕಿ-500/- ರೂ ಹಿಗೆ ಒಟ್ಟು 24,000/- ರೂ ಕಿಮ್ಮತ್ತಿನ ಸಾಮಾನುಗಳು ಕಳ್ಳತನವಾಗಿರುವದು ಕಂಡು ಬಂತು ನಂತರ ನಾನು ಈ ವಿಷಯವನ್ನು ನನ್ನ ಗೆಳೆಯನಾದ ಬಾಜು ಪೊಟೊ ಸ್ಟಿಡಿಯೋ ಅಂಗಡಿಯ ಕುತುಬುದ್ದಿನ ಮುಲ್ಲಾ ರವರಿಗೆ ಕರೆಯಿಸಿ ವಿಷಯ ತಿಳಿಸಿ ಇಬ್ಬರು ಕೂಡಿಕೊಂಡು ಎಲ್ಲಾ ಕಡೆ ಹುಡುಕಾಡಿದರು ನನ್ನ ಅಂಗಡಿಯಲ್ಲಿಂದ ಕಳ್ಳತನವಾದ ಸಾಮಾನುಗಳು ಸಿಕ್ಕಿರುವದಿಲ್ಲ. ಕಾರಣ ನಾನು ಇಂದು ಸದರಿ ಘಟನೆ ಬಗ್ಗೆ ನಮ್ಮ ಮನೆಯರೊಂದಿಗೆ ಚರ್ಚಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಕಾರಣ ದಿನಾಂಕ 11-12-2019 ರಂದು 9-00 ಪಿ ಎಮ್ ದಿಂದ ದಿನಾಂಕ 12-12-2019 ರ ಮದ್ಯದ ಅವದಿಯಲ್ಲಿ ನನ್ನ ಅಂಗಡಿಯಲ್ಲಿಯ ಒಟ್ಟು 24,000/- ರೂ ಕಿಮ್ಮತ್ತಿನ ಸಾಮಾನುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಸದರಿ ಕಳ್ಳತನವಾದ ಮಾಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸಬೆಕೆಂದು ವಿನಂತಿ ಇದೆ. ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಮಡು ತನಿಖೆ ಕೈಕೊಂಡ ಬಗ್ಗೆ ವರದಿ.

20 December 2019

KALABURAGI DISTRICT REPORTED CRIMES.


ªÁr oÁuÉ : ದಿನಾಂಕ 19/12/2019 ರಂದು 04-00 ಪಿ.ಎಮ್ ಕ್ಕೆ ಫಿರ್ಯಾದಿ ಶ್ರೀ ಚಂದ್ರಶೇಖರ ತಂದೆ ಶರಣಪ್ಪ ಬೆಣ್ಣೂರ ವಯ:40 ವರ್ಷ ಉ:ಖಾಸಗಿ ನೌಕರಿ ಜಾ:ಕಬ್ಬಲಿಗ ಮು:ಚೌಡೇಶ್ವರ ಕಾಲೋನಿ ವಾಡಿ  ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅರ್ಜಿಯನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನಾನು ವಾಡಿ ಪಟ್ಟಣದ ಜಯಲಕ್ಷ್ಮೀ ಟ್ರಾನ್ಸಪೋರ್ಟದಲ್ಲಿ ನೌಕರಿ ಮಾಡಿಕೊಂಡಿದ್ದು ನನಗೆ ಸಿದ್ದಮ್ಮ ವಯ:30 ವರ್ಷದ ಹೆಂಡತಿ ಇದ್ದು ಅವಳು ಮನೆ ಕೆಲಸ ಮಾಡಿಕೊಂಡಿರುತ್ತಾಳೆ. ಅಲ್ಲದೇ ನನಗೆ ಕುಮಾರಿ ಗೌರಿ ವಯ:08 ವರ್ಷ, ಕುಮಾರ ಗಣೇಶ ವಯ:07 ವರ್ಷ, ಕುಮಾರಿ ಆರಾಧನಾ ವಯ:01 ವರ್ಷ ಹೀಗೆ 03 ಜನ ಮಕ್ಕಳಿದ್ದು ಕುಮಾರಿ ಗೌರಿ ಇವಳು ವಾಡಿ ಪಟ್ಟಣದ ಡಿ.ಎ.ವಿ ಶಾಲೆಯಲ್ಲಿ 02 ನೇ ತರಗತಿಯಲ್ಲಿ ಓದುತ್ತಿದ್ದು, ಕುಮಾರ ಗಣೇಶ ಇತನು ವಾಡಿ ಪಟ್ಟಣದ ಸೆಂಟ್ ಅಂಬ್ರೋಸ ಶಾಲೆಯಲ್ಲಿ 01 ನೇ ತರಗತಿಯಲ್ಲಿ ಓದುತ್ತಿದ್ದಾನೆ. ನನ್ನ  ಮನೆಯಲ್ಲಿ ನಾನು ಮತ್ತು ನನ್ನ 03 ಮಕ್ಕಳು ಹಾಗೂ ನಮ್ಮತಂದೆ ಶರಣಪ್ಪ ತಂದೆ  ಮಲ್ಲಪ್ಪ ಬೆಣ್ಣೂರ ರವರು ಕೂಡಿ ವಾಸವಾಗಿರುತ್ತೆವೆ. ನನ್ನ ಹೆಂಡತಿಯ ತವರು ಊರು ನಾಲವಾರ ಗ್ರಾಮ ಇರುತ್ತದೆ. ಹೀಗಿದ್ದು ದಿನಾಂಕ 03/12/2019 ರಂದು ಪ್ರತಿ ದಿನದಂತೆ ನಾನು ಬೆಳಗ್ಗೆ 10-00 ಗಂಟೆಗೆ ನನ್ನ ಕೆಲಸಕ್ಕೆ ಹೊರಟು ಹೋಗುವಾಗ ಮಗಳಾದ ಗೌರಿ ಇವಳಿಗೆ ಆರಾಮವಿರಲಿಲ್ಲ ಅವಳಿಗೆ ಆಸ್ಪತ್ರೆಗೆ ತೋರಿಸು ಅಂತಾ ನನ್ನ ಹೆಂಡತಿಗೆ ಹೇಳಿ ಹೋದೆನು. ನಂತರ ನಾನು ವಾಡಿಯಿಂದ ಕೆಲಸದ ಮೇಲೆ ವಿಜಯಪುರಕ್ಕೆ ಹೊರಟು ಹೋಗಿ ಮದ್ಯಾಹ್ನ 04-00 ಗಂಟೆ ಸುಮಾರು ನನ್ನ ಹೆಂಡತಿಯ ಮೊಬೈಲ ನಂಬರ 6362511744 ಗೆ ಫೋನ ಮಾಡಿ ಗೌರಿ ಇವಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋದ ಬಗ್ಗೆ ವಿಚಾರಿಸಲಾಗಿ ಅವಳು ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಂದಿರುತ್ತೆನೆ ಅಂತಾ ಹೇಳಿ ತನ್ನ  ಮೊಬೈಲದಲ್ಲಿ ಚಾರ್ಜ ಇರುವದಿಲ್ಲ ಬಂದ ಆಗುತ್ತದೆ ಅಂತಾ ಹೇಳಿ ಫೋನ  ಕಟ್ ಮಾಡಿದಳು. ನಂತರ ರಾತ್ರಿ 08-00 ಗಂಟೆ ಸುಮಾರು ನಾನು ನನ್ನ ಹೆಂಡತಿಯ ಮೊಬೈಲಗೆ ಫೋನ ಮಾಡಿದಾಗ ಬಂದ ಆಗಿದ್ದರಿಂದ ನನ್ನ ಅಣ್ಣನ ಮಗ ಸತೀಶ ಇತನಿಗೆ ಪೋನ ಮಾಡಿ ನಮ್ಮ  ಮನೆಗೆ ಹೋಗಿ ನಿಮ್ಮ ಕಾಕಿಗೆ ಪೋನ ಕೊಡು ಮಾತನಾಡುತ್ತೆನೆ ಅಂತಾ ಹೇಳಿದಾಗ ಅವಳು ಇನ್ನು ಮನೆಗೆ ಬಂದಿರುವದಿಲ್ಲ ಅಂತಾ ತಿಳಿಸಿದನು.  ನಂತರ ನಾನು ಅವಳು ಎಲ್ಲಿ ಹೋಗಿದ್ದಾಳೆ ಹುಡುಕಾಡು ಅಂತಾ ಹೇಳಿ ನಾನು ವಿಜಯಪುರದಲ್ಲಿ ಕೆಲಸದ  ಮೇಲೆ ಉಳಿದುಕೊಂಡೆನು. ನಂತರ ದಿನಾಂಕ 04/12/2019 ರಂದು ಬೆಳಗ್ಗೆ 08-00 ಗಂಟೆಗೆ ವಾಡಿ ಪಟ್ಟಣದ ನನ್ನ ಮನೆಗೆ ಬಂದು ನೋಡಲಾಗಿ ಮನೆಯಲ್ಲಿ ಹೆಂಡತಿ ಹಾಗೂ ನನ್ನ 03 ಜನ ಮಕ್ಕಳು ಇರಲಿಲ್ಲ. ನಮ್ಮ ತಂದೆಗೆ ವಿಚಾರಿಸಲಾಗಿ ನಿನ್ನೆ ದಿವಸ ಬೆಳಗ್ಗೆ 10-30 ಗಂಟೆ ಸುಮಾರು ಸಿದ್ದಮ್ಮ ಇವಳು ಗೌರಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೆನೆ ಅಂತಾ ಹೇಳಿ 03 ಮಕ್ಕಳನ್ನು ಕರೆದುಕೊಂಡು ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಅಂತಾ ತಿಳಿಸಿದನು. ನಂತರ ನನ್ನ ಹೆಂಡತಿ ಸಿದ್ದಮ್ಮ ಹಾಗೂ ಮಕ್ಕಳಾದ ಗೌರಿ, ಗಣೇಶ, ಆರಾಧನಾ ಇವರ ಪತ್ತೆಗಾಗಿ ನಾಲವಾರ ಗ್ರಾಮ, ಜೈನಾಪೂರ, ಕಲಬುರಗಿ, ಹಿಪ್ಪರಗಿ, ಗೋಳಾ, ಶಹಾಬಾದ, ನಂದೂರ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಲಾಗಿ ನನ್ನ ಹೆಂಡತಿ ಹಾಗೂ 03 ಜನ ಮಕ್ಕಳ ಬಗ್ಗೆ ಯಾವದೇ ಮಾಹಿತಿ ಸಿಕ್ಕಿರುವದಿಲ್ಲ. ಅವರನ್ನು ಹಡುಕಾಡಿ ಪತ್ತಯಾಗದೇ ಇರುವದರಿಂದ ತಡಮಾಡಿ ಇಂದು ಠಾಣೆಗೆ ಬಂದು ಅರ್ಜಿಯನ್ನು ಸಲ್ಲಿಸಿದ್ದು ಕಾಣೆಯಾದ ನನ್ನ ಹೆಂಡತಿ ಹಾಗೂ ಮಕ್ಕಳ ಚಹರೆ ಪಟ್ಟಿ ಈ ಕೆಳಗಿನಂತೆ ಇರುತ್ತದೆ. 1] ಹೆಂಡತಿ ಹೆಸರು: ಸಿದ್ದಮ್ಮ ವಯ:30 ವರ್ಷ ಉ:ಮನೆಕೆಲಸ ಜಾ:ಕಬ್ಬಲಿಗ ಎತ್ತರ:5 ಪೀಟ್, ಸಾದಾಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಅಗಲ ಹಣೆ, ನೆಟ್ಟನೆ ಮೂಗು, ಕನ್ನಡ ಭಾಷೆ ಮಾತನಾಡುತ್ತಾಳೆ,ಧರಿಸಿದ ಬಟ್ಟೆಗಳು ಹಸಿರು  ಬಣ್ಣದ  ಹೂವಿನ ಚುಕ್ಕೆಯುಳ್ಳ ಸೀರೆ, ಕೆಂಪುಬಣ್ಣದ ಬ್ಲೌಸ ಧರಿಸಿರುತ್ತಾಳೆ. 2] ಕುಮಾರಿ ಗೌರಿ ವಯ:08 ವರ್ಷ, ಉ:ವಿದ್ಯಾರ್ಥೀನಿ ಜಾ:ಕಬ್ಬಲಿಗ ಎತ್ತರ:03 ಫೀಟ್, ಸಾದಾಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಗಿಡ್ಡ ಮೂಗು, ಅಗಲ ಕಣ್ಣು, ಕನ್ನಡ ಭಾಷೆ ಮಾತನಾಡುತ್ತಿದ್ದು ಹಳದಿ ಬಣ್ಣದ ಟೀ ಶರ್ಟ, ಕಪ್ಪುಬಣ್ಣದ ಪ್ಯಾಂಟು ಧರಿಸಿದ್ದು ಇರುತ್ತದೆ. 3] ಕುಮಾರ ಗಣೇಶ ವಯ:07 ವರ್ಷ, ಉ:ವಿದ್ಯಾರ್ಥೀ ಜಾ:ಕಬ್ಬಲಿಗ ಎತ್ತರ:02.1/2  ಫೀಟ್, ಸಾಧಾಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಅಗಲ ಹಣೆ, ಮರದ ಕಿವಿ, ಗಿಡ್ಡ ಮೂಗು, ಕನ್ನಡ ಭಾಷೆ ಮಾತನಾಡುತ್ತಿದ್ದು ಬಿಳಿ ಬಣ್ಣದ ಶರ್ಟ ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿದ್ದು ಇರುತ್ತದೆ. 04] ಕುಮಾರಿ ಆರಾಧನಾ ವಯ:01 ವರ್ಷ, ಜಾ:ಕಬ್ಬಲಿಗ ಎತ್ತರ: 02 ಫೀಟ್, ಸಾದಾಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮೂಖ, ಗಿಡ್ಡ ಮೂಗು, ಅಗಲ ಕಣ್ಣು,ಅಗಲ ಹಣೆ, ಕಂದು ಬಣ್ಣದ ಪ್ರಾಕ್ ಧರಿಸಿದ್ದು ಇರುತ್ತದೆ. ರೀತಿ ಚಹರೆ ಪಟ್ಟಿ ಉಳ್ಳ ನನ್ನ ಹೆಂಡತಿ ಸಿದ್ದಮ್ಮ ಹಾಗೂ ಮಕ್ಕಳಾದ ಕುಮಾರಿ ಗೌರಿ, ಕುಮಾರ ಗಣೇಶ, ಕುಮಾರಿ ಆರಾಧನಾ ರವರು ಕಾಣೆಯಾಗಿದ್ದು ಅವರನ್ನು ಪತ್ತೆ ಮಾಡಿಕೊಡಲು ವಿನಂತಿ ಅದೆ ಅಂತಾ ಇತ್ಯಾದಿ ವಗೈರೆ ಅರ್ಜಿಯ ಸಾರಾಂಶದ ಮೇಲಿಂದ ವಾಡಿ ಪೊಲೀಸ ಠಾಣೆ ಗುನ್ನೆ ನಂಬರ 134/2019 ಕಲಂ;ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿ.
C¥sÀd®¥ÀÆgÀ oÁuÉ : ದಿನಾಂಕ: 19-12-2019 ರಂದು 1-30 ಪಿಎಮ್‍ಕ್ಕೆ ಶ್ರೋ ಮೋದಿನ ತಂದೆ ಮೈಹಿಬೂಬಸಾಬ ಭಾಗವಾನ ಕಂದಾಯ ನಿರೀಕ್ಷಕರು ಕರಜಗಿ ರವರು ಟೈಪ ಮಾಡಿದ ಸೂರು ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿ ಸಾರಾಂಶ ವೇನೆಂದರೆ ನಾನು ಮೋದಿನ ತಂದೆ ಮೆಹಬೂಬಸಾಬ ಭಾಗವಾನ ವ||33 ಜಾ||ಮುಸ್ಲಿಂ ಉ||ಕಂದಾಯ ನಿರೀಕ್ಷಕರು ಕರಜಗಿ ವಲಯ ಸಾ||ಉಸ್ಮಾನಿಯ ಕಾಲೋನಿ ಅಫಜಲಪೂರ ಸರಕಾರಿ ತರ್ಫೆ ಪಿರ್ಯಾದ ಕೊಡುವದೆನಂದರೆ ಇಂದು ದಿನಾಂಕ 19/12/2019 ರಂದು ಮದ್ಯ ರಾತ್ರಿ 1:30 ಗಂಟೆಗೆ ನಾನು ಮತ್ತು ಮಾನ್ಯ ಯಲ್ಲಪ್ಪ ಸುಬೇದಾರ ತಹಸಿಲ್ದಾರರು ಅಫಜಲಪೂರ ರವರು ಹಾಗೂ ಗ್ರಾಮ ಸಹಾಯಕರಾದ ನಂದಶ ನಾಗಪ್ಪ ಪ್ಯಾಟಿ, ಮಲ್ಲಿಕಾರ್ಜುನ ಗುರಣ್ಣ ಜಮಾದಾರ ಎಲ್ಲರೂ ಕೂಡಿ ಅಕ್ರಮ ಮರಳು ಸಾಗಾಣಿಕ ತಡೆಗಟ್ಟುವ ಸಲುವಾಗಿ ಗಸ್ತು ಕರ್ತವ್ಯದಲ್ಲಿದ್ದಾಗ ಮಣೂರ ಭೀಮಾ ನದಿಯ ಪಕ್ಕದಲ್ಲಿ ಈಗಾಗಲೆ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದನ್ನು ಜಪ್ತ ಮಾಡಿಕೊಂಡು ಕೇಸು ಮಾಡಿದ್ದು, ಸದರಿ ಜಾಗಕ್ಕೆ ಬೇಟಿ ನೀಡಿದಾಗ, ಸದರಿ ಜಾಗದಲ್ಲಿ ಒಂದು ಜೆಸಿಬಿ ಯಿಂದ ಮರಳನ್ನು ತುಂಬಿ ಟಿಪ್ಪರದಲ್ಲಿ ಹಾಕಿ ಮರಳು ತುಂಬಿಕೊಂಡು ಬರುತ್ತಿದ್ದರು. ಆಗ ನಾವು ಸದರಿ ವಾಹನಗಳ ಹತ್ತಿರ ಹೋಗುತ್ತಿದ್ದಂತೆ ಟಿಪ್ಪರ ಚಾಲಕ ಮತ್ತು ಜೆ.ಸಿಬಿ ಚಾಲಕ ನಮ್ಮನ್ನು ನೋಡಿ ಓಡಿ ಹೋಗಿರುತ್ತಾರೆ. ನಂತರ ನಾವು ಟಿಪ್ಪರನ್ನು ಚೆಕ್ ಮಾಡಿ ನೊಡಲಾಗಿ, ಟಿಪ್ಪರದಲ್ಲಿ ಮರಳು ತುಂಬಿತ್ತು. ಸದರಿ ಟಿಪ್ಪರ ನಂಬರ ನೋಡಲಾಗಿ ಚೆಸ್ಸಿ ನಂ MAT449020G2D09335 ಇರುತ್ತದೆ. ಸದರಿ ಟಿಪ್ಪರ ಅಕಿ 10 ಲಕ್ಷ. ಟಿಪ್ಪರದಲ್ಲಿದ್ದ ಮರಳೀನ ಅಕಿ 10,000/- ರೂ, ಮರಳು ತುಂಬಲು ಬಳಸಿದ ಜೆ.ಸಿ/ಬಿ ನಂ MH-13 AH-0490 ಇರುತ್ತದೆ. ಅಕಿ 10 ಲಕ್ಷ ಇರಬಹುದು. ನಂತರ ಸದರಿ ವಾಹನಗಳನ್ನು ನಂದೇಶ ಪ್ಯಾಟಿ ಗ್ರಾಮ ಸಹಾಯಕ ಮಣೂರ, ಮಲ್ಲಿಕಾರ್ಜುನ ತಂದೆ ಗುರಣ್ಣ ಜಮಾದಾರ ಗ್ರಾಮ ಸಹಾಯಕ ಮಣೂರ ರವರ ಸಮಕ್ಷಮ ರಾತ್ರಿ 01:45 ಎ.ಎಮ್ ದಿಂದ 02:45 ಎ.ಎಮ್ ಅವಧಿಯಲ್ಲಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು. ಅವುಗಳನ್ನು ಮಾಶ್ಯಾಳ ಉಕ್ಕಡ ಠಾಣೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಸದರಿ ಘಟನೆ ಬಗ್ಗೆ ನಮ್ಮ ಮೇಲಾಧಿಕಾರಿಯವರೊಂದಿಗೆ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಕಾರಣ ಸದರಿ ಟಿಪ್ಪರ ಚೆಸ್ಸಿ ನಂ MAT449020G2D09335 ನೇದ್ದರ ಚಾಲಕ ಮತ್ತು ಮಾಲೀಕನ ಮೇಲೆ ಹಾಗೂ ಮರಳು ತುಂಭಲು ಬಳಸಿದ ಜೆ.ಸಿ/ಬಿ ನಂ MH-13 AH-0490 ನೇದ್ದರ ಚಾಲಕ ಮತ್ತು ಮಾಲಿಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ಪಿರ್ಯಾದಿ ಸಲ್ಲಿಸಿರುತ್ತೇನೆ.  ಅಂತಾ ಸಲ್ಲಿಸಿದ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.

18 December 2019

KALABURAGI DISTRICT REPORTED CRIMES

ಅನಧಿಕೃತವಾಗಿ ಮಧ್ಯ ಮಾರಾಟಮಾಡುತ್ತಿದ್ದವನ ಬಂಧನ :
ವಾಡಿ ಠಾಣೆ : ದಿನಾಂಕ:16/12/2019 ರಂದು ಮದ್ಯಾಹ್ನ ವಾಡಿ  ಪೊಲೀಸ ಠಾಣಾ ವ್ಯಾಪ್ತಿಯ ಯಾಗಾಪೂರ ಗ್ರಾಮದಲ್ಲಿ ಸಾಬಣ್ಣಾ ತಂದೆ ಮಲ್ಲಪ್ಪ ಚನ್ನಬಾನವರ ಎನ್ನುವನು ತನ್ನ ಚಹಾದ ಹೊಟೇದಲ್ಲಿ ಯಾವದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮದ್ಯದ ಬಾಟಲಗಳನ್ನು ಇಟ್ಟು ಜನರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾನೆ ಅಂತಾ ಬಂದ ಬಾತ್ಮೀ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಮಾನ್ಯ ಸಿಪಿಐ ಸಾಹೇಬರು ಚಿತ್ತಾಪೂರ ವೃತ್ತ ರವರಿಗೆ ಮಾಹಿತಿ ತಿಳಿಸಿ ಅವರ  ಮಾರ್ಗದರ್ಶನದಲ್ಲಿ  ಯಾಗಾಪೂರ ಗ್ರಾಮದ ಸಾಬಣ್ಣಾ ಚನ್ನಬಾನವರ ರವರ ಹೊಟೇಲ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಕೆಳಗಡೆ ಇಳಿದು ನೋಡಲಾಗಿ ಹೊಟೇಲ ಹತ್ತಿರರಿಂದ ಒಬ್ಬಿಬ್ಬರು ನಮ್ಮ ಪೊಲೀಸ ಜೀಪ ನೋಡಿ ಓಡಲು ಪ್ರಾರಂಭಿಸಿದಾಗ ನಾವು ಸದರಿಯವನ ಹೊಟೇಲ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ನಿಂತುಕೊಂಡಿದ್ದು ಆತನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಸಾಬಣ್ಣಾ ತಂದೆ ಮಲ್ಲಪ್ಪ ಚನ್ನಬಾನವರ ಸಾಃಯಾಗಾಪೂರ ಅಂತಾ ತಿಳಿಸಿದ್ದು ಪಂಚರ ಸಮಕ್ಷಮ ಹೊಟೇಲ ಒಳಗಡೆ ಹೋಗಿ ಪರಿಶೀಲಿಸಿ ನೋಡಲಾಗಿ ಒಂದು ರಟ್ಟಿನ ಡಬ್ಬಾದಲ್ಲಿ ಬಾಟಲಗಳಿದ್ದು ಪರಿಶೀಲಿಸಿ ನೋಡಲಾಗಿ 1] ಕಿಂಗ ಪೀಶರ ಕಂಪನಿಯ ಬಿಯರ್ ತುಂಬಿದ 330 ಎಮ್.ಎಲ್ ದ 53 ಟಿನ್ ಡಬ್ಬಾಗಳಿದ್ದು ಒಂದರ ಅಂದಾಜು ಕಿಮ್ಮತ್ತು 80 ರೂ ಪಾಯಿ ಆಗುತ್ತಿದ್ದು ಒಟ್ಟು 4240/-ರೂಪಾಯಿ ಆಗುತ್ತದೆ. 2] ಇನ್ನೊಂದು ಕೈ ಚೀಲ ಇದ್ದು ಅದರಲ್ಲಿ ಪರಿಶೀಲಿಸಿ ನೋಡಲಾಗಿ ಓಲ್ಡ್ ಟವರಿನ್  ವಿಸ್ಕಿ ಮದ್ಯ ತುಂಬಿದ 180 ಎಮ್ ಎಲ್ ದ 15 ಪೌಚುಗಳಿದ್ದು ಒಂದರ ಕಿಮ್ಮತ್ತು 74,13 ಪೈಸೆ ಇದ್ದು ಒಟ್ಟು 1111 ರೂಪಾಯಿ 95 ಪೈಸೆ ಆಗುತ್ತದೆ. 3] ಇನ್ನೊಂದು ರಟ್ಟಿನ ಡಬ್ಬಾದಲ್ಲಿ  ಪರಿಶೀಲಿಸಿ ನೋಡಲಾಗಿ ಕಿಂಗ್ ಪೀಶರ ಸ್ಟ್ರಾಂಗ ಕಂಪನಿಯ ಬಿಯರ್ ತುಂಬಿದ 650 ಎಮ್.ಎಲ್ ದ 30 ಬಾಟಲಗಳಿದ್ದು ಒಂದು ಬಾಟಲ ಕಿಮ್ಮತ್ತು 145 ರೂಪಾಯಿ ಇದ್ದು ಒಟ್ಟು 4640/-ರೂಪಾಯಿ ಆಗುತ್ತದೆ. ಸದರಿ ಮದ್ಯವನ್ನು ಎಲ್ಲಿಂದ ತಂದಿರುವದಾಗಿ ವಿಚಾರಿಸಲಾಗಿ ಚಿತ್ತಾಪೂರದ ಅಶ್ಚನಿ ವೈನಶಾಪ್ ರವರಿಂದ ಮಾರಾಟ ಮಾಡಲು ತಂದಿರುವದಾಗಿ ತಿಳಿಸಿದ್ದು ಇರುತ್ತದೆ. ಸದರಿಯವನು ಯಾವದೇ ಪರವಾನಿಗೆ ಅಥವಾ ಲೈಸನ್ಸ ಇಲ್ಲದೇ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವದಾಗಿ ಒಪ್ಪಿಕೊಂಡಿದ್ದು ಸದರಿ ಜಪ್ತಿ ಪಡಿಸಿಕೊಂಡು ಮುದ್ದೆಮಾಲು ಹಾಗೂ ಆರೋಪಿತನನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ ಆನಂದ ಸಿಪಿಸಿ-1258 ನರೋಣಾ ಪೊಲೀಸ್ ಠಾಣೆ ರವರು  ದಿನಾಂಕ:16/12/2019 ರಂದು ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳಾದ ಕಡಗಂಚಿ, ಲಾಡಚಿಂಚೋಳಿ, ಹಾಗೂ ಲಾಡಚಿಂಚೋಳಿ ತಾಂಡಾಕ್ಕೆ ಗುಪ್ತ ಮಾಹಿತಿ ಸಂಗ್ರಹಿಸುವ ಕುರಿತು ಹೋದಾಗ ಸಾಯಂಕಾಲ 4-00 ಗಂಟೆಗೆ ಎಸ್.ಹೆಚ್:10 ರಸ್ತೆಯ ಮೇಲೆ ಡೋಗಿನಾಲಾ ಕ್ರಾಸ್ ತಿರುವಿನಲ್ಲಿ ಒಂದು ಸಿಮೇಂಟ್ ಚೀಲಗಳು ತುಂಬಿದ ಲಾರಿ ನಂಬರ್ ಎನ್.ಎಲ್01-ಎಡಿ5468 ನೇದ್ದು ಪಲ್ಟಿಯಾಗಿ ರೋಡಿನ ಪಕ್ಕ ಬಿದ್ದಿದ್ದು ಸದರಿ ಲಾರಿಯ ಚಾಲಕನಾಗಲಿ ಮಾಲೀಕನಾಗಲಿ ಲಾರಿ ಹತ್ತಿರ ಇರುವುದಿಲ್ಲ. ಸದರಿ ಅಪಘಾತದ ಬಗ್ಗೆ ಸ್ಥಳಿಯರಲ್ಲಿ ವಿಚಾರಿಸಿದಾಗ ಸದರಿ ಲಾರಿ ಚಾಲಕನು ದಿನಾಂಕ:16/12/2019 ರಂದು ಬೆಳಿಗ್ಗೆ 03-00 ಗಂಟೆಯಿಂದ 03-30 ಗಂಟೆಯ ಮಧ್ಯದ ಅವಧಿಯಲ್ಲಿ ಕಲಬುರಗಿ ಕಡೆಯಿಂದ ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಲಾರಿ ಪಲ್ಟಿಯಾಗಿ ಅಪಘಾತವಾಗಿದ್ದು ಲಾರಿ ಚಾಲಕನು ಸದರಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುವುದಾಗಿ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.