ಅನಧಿಕೃತವಾಗಿ
ಮಧ್ಯ ಮಾರಾಟಮಾಡುತ್ತಿದ್ದವನ ಬಂಧನ :
ವಾಡಿ ಠಾಣೆ : ದಿನಾಂಕ:16/12/2019 ರಂದು ಮದ್ಯಾಹ್ನ
ವಾಡಿ ಪೊಲೀಸ ಠಾಣಾ ವ್ಯಾಪ್ತಿಯ ಯಾಗಾಪೂರ ಗ್ರಾಮದಲ್ಲಿ ಸಾಬಣ್ಣಾ ತಂದೆ ಮಲ್ಲಪ್ಪ
ಚನ್ನಬಾನವರ ಎನ್ನುವನು ತನ್ನ ಚಹಾದ ಹೊಟೇದಲ್ಲಿ ಯಾವದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮದ್ಯದ ಬಾಟಲಗಳನ್ನು
ಇಟ್ಟು ಜನರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾನೆ ಅಂತಾ ಬಂದ ಬಾತ್ಮೀ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಮಾನ್ಯ ಸಿಪಿಐ ಸಾಹೇಬರು
ಚಿತ್ತಾಪೂರ ವೃತ್ತ ರವರಿಗೆ ಮಾಹಿತಿ ತಿಳಿಸಿ ಅವರ
ಮಾರ್ಗದರ್ಶನದಲ್ಲಿ ಯಾಗಾಪೂರ ಗ್ರಾಮದ
ಸಾಬಣ್ಣಾ ಚನ್ನಬಾನವರ ರವರ ಹೊಟೇಲ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಕೆಳಗಡೆ ಇಳಿದು
ನೋಡಲಾಗಿ ಹೊಟೇಲ ಹತ್ತಿರರಿಂದ ಒಬ್ಬಿಬ್ಬರು ನಮ್ಮ ಪೊಲೀಸ ಜೀಪ ನೋಡಿ ಓಡಲು ಪ್ರಾರಂಭಿಸಿದಾಗ ನಾವು
ಸದರಿಯವನ ಹೊಟೇಲ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ನಿಂತುಕೊಂಡಿದ್ದು ಆತನ ಹೆಸರು ವಿಚಾರಿಸಲಾಗಿ
ತನ್ನ ಹೆಸರು ಸಾಬಣ್ಣಾ ತಂದೆ ಮಲ್ಲಪ್ಪ ಚನ್ನಬಾನವರ ಸಾಃಯಾಗಾಪೂರ ಅಂತಾ ತಿಳಿಸಿದ್ದು ಪಂಚರ ಸಮಕ್ಷಮ
ಹೊಟೇಲ ಒಳಗಡೆ ಹೋಗಿ ಪರಿಶೀಲಿಸಿ ನೋಡಲಾಗಿ ಒಂದು ರಟ್ಟಿನ ಡಬ್ಬಾದಲ್ಲಿ ಬಾಟಲಗಳಿದ್ದು ಪರಿಶೀಲಿಸಿ
ನೋಡಲಾಗಿ 1] ಕಿಂಗ ಪೀಶರ ಕಂಪನಿಯ ಬಿಯರ್ ತುಂಬಿದ 330 ಎಮ್.ಎಲ್ ದ 53 ಟಿನ್ ಡಬ್ಬಾಗಳಿದ್ದು ಒಂದರ
ಅಂದಾಜು ಕಿಮ್ಮತ್ತು 80 ರೂ ಪಾಯಿ ಆಗುತ್ತಿದ್ದು ಒಟ್ಟು 4240/-ರೂಪಾಯಿ ಆಗುತ್ತದೆ. 2] ಇನ್ನೊಂದು
ಕೈ ಚೀಲ ಇದ್ದು ಅದರಲ್ಲಿ ಪರಿಶೀಲಿಸಿ ನೋಡಲಾಗಿ ಓಲ್ಡ್ ಟವರಿನ್ ವಿಸ್ಕಿ ಮದ್ಯ ತುಂಬಿದ 180 ಎಮ್ ಎಲ್ ದ 15 ಪೌಚುಗಳಿದ್ದು
ಒಂದರ ಕಿಮ್ಮತ್ತು 74,13 ಪೈಸೆ ಇದ್ದು ಒಟ್ಟು 1111 ರೂಪಾಯಿ 95 ಪೈಸೆ ಆಗುತ್ತದೆ. 3] ಇನ್ನೊಂದು ರಟ್ಟಿನ ಡಬ್ಬಾದಲ್ಲಿ ಪರಿಶೀಲಿಸಿ ನೋಡಲಾಗಿ ಕಿಂಗ್ ಪೀಶರ ಸ್ಟ್ರಾಂಗ ಕಂಪನಿಯ ಬಿಯರ್
ತುಂಬಿದ 650 ಎಮ್.ಎಲ್ ದ 30 ಬಾಟಲಗಳಿದ್ದು ಒಂದು ಬಾಟಲ ಕಿಮ್ಮತ್ತು 145 ರೂಪಾಯಿ ಇದ್ದು ಒಟ್ಟು
4640/-ರೂಪಾಯಿ ಆಗುತ್ತದೆ. ಸದರಿ ಮದ್ಯವನ್ನು ಎಲ್ಲಿಂದ ತಂದಿರುವದಾಗಿ ವಿಚಾರಿಸಲಾಗಿ ಚಿತ್ತಾಪೂರದ
ಅಶ್ಚನಿ ವೈನಶಾಪ್ ರವರಿಂದ ಮಾರಾಟ ಮಾಡಲು ತಂದಿರುವದಾಗಿ ತಿಳಿಸಿದ್ದು ಇರುತ್ತದೆ. ಸದರಿಯವನು ಯಾವದೇ
ಪರವಾನಿಗೆ ಅಥವಾ ಲೈಸನ್ಸ ಇಲ್ಲದೇ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವದಾಗಿ ಒಪ್ಪಿಕೊಂಡಿದ್ದು
ಸದರಿ ಜಪ್ತಿ ಪಡಿಸಿಕೊಂಡು ಮುದ್ದೆಮಾಲು ಹಾಗೂ ಆರೋಪಿತನನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ
ಪ್ರಕರಣ :
ನರೋಣಾ ಠಾಣೆ : ಶ್ರೀ ಆನಂದ ಸಿಪಿಸಿ-1258 ನರೋಣಾ ಪೊಲೀಸ್ ಠಾಣೆ ರವರು ದಿನಾಂಕ:16/12/2019 ರಂದು ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳಾದ ಕಡಗಂಚಿ, ಲಾಡಚಿಂಚೋಳಿ,
ಹಾಗೂ ಲಾಡಚಿಂಚೋಳಿ ತಾಂಡಾಕ್ಕೆ ಗುಪ್ತ ಮಾಹಿತಿ ಸಂಗ್ರಹಿಸುವ ಕುರಿತು ಹೋದಾಗ
ಸಾಯಂಕಾಲ 4-00 ಗಂಟೆಗೆ ಎಸ್.ಹೆಚ್:10 ರಸ್ತೆಯ ಮೇಲೆ ಡೋಗಿನಾಲಾ ಕ್ರಾಸ್ ತಿರುವಿನಲ್ಲಿ ಒಂದು ಸಿಮೇಂಟ್ ಚೀಲಗಳು ತುಂಬಿದ ಲಾರಿ ನಂಬರ್
ಎನ್.ಎಲ್01-ಎಡಿ5468 ನೇದ್ದು ಪಲ್ಟಿಯಾಗಿ ರೋಡಿನ ಪಕ್ಕ ಬಿದ್ದಿದ್ದು ಸದರಿ ಲಾರಿಯ ಚಾಲಕನಾಗಲಿ ಮಾಲೀಕನಾಗಲಿ ಲಾರಿ
ಹತ್ತಿರ ಇರುವುದಿಲ್ಲ. ಸದರಿ ಅಪಘಾತದ ಬಗ್ಗೆ ಸ್ಥಳಿಯರಲ್ಲಿ ವಿಚಾರಿಸಿದಾಗ ಸದರಿ ಲಾರಿ ಚಾಲಕನು ದಿನಾಂಕ:16/12/2019 ರಂದು ಬೆಳಿಗ್ಗೆ 03-00 ಗಂಟೆಯಿಂದ 03-30 ಗಂಟೆಯ ಮಧ್ಯದ ಅವಧಿಯಲ್ಲಿ ಕಲಬುರಗಿ ಕಡೆಯಿಂದ ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು
ಬಂದಿದ್ದರಿಂದ ಲಾರಿ ಪಲ್ಟಿಯಾಗಿ ಅಪಘಾತವಾಗಿದ್ದು ಲಾರಿ ಚಾಲಕನು ಸದರಿ ವಾಹನವನ್ನು ಸ್ಥಳದಲ್ಲಿಯೇ
ಬಿಟ್ಟು ಓಡಿ ಹೋಗಿರುವುದಾಗಿ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment