POLICE BHAVAN KALABURAGI

POLICE BHAVAN KALABURAGI

21 December 2019

KALABURAGI DISTRICT CRIME REPORTS.


C¥sÀd®¥ÀÆgÀ ¥Éưøï oÁuÉ : ದಿನಾಂಕ 20-12-2019 ರಂದು 08-15 ಎ.ಎಮ್ ಕ್ಕೆ ಮಾನ್ಯ ಪಿ,ಎಸ್,ಐ ಸಾಹೇಬರು 03 ಮರಳು ತುಂಬಿದ ಟಿಪ್ಪರಗಳನ್ನು ಹಾಜರು ಪಡಿಸಿ ವರದಿ ನೀಡಿದ್ದು ಸದರಿ ವರದಿಯ ಸಾರಾಂಶವೇನೆಂದರೆ ನಾನು ಸಂತೋಷ ಎಲ್ ತಟ್ಟೆಪಳ್ಳಿ ಪಿ,ಎಸ್,ಐ ಅಫಜಲಪೂರ ಪೊಲೀಸ್ ಠಾಣೆ ಈ ಮೂಲಕ ವರದಿ ಕೊಡುವುದೇನೆಂದರೆ. ಇಂದು ದಿನಾಂಕ 20-12-2019 ರಂದು 6:00 ಎ,ಎಮ್ ಕ್ಕೆ ನಾನು ಮತ್ತು ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಶರಣು ಹೆಚ್.ಸಿ-403, ಚಂದ್ರಕಾಂತ ಪಿಸಿ-706 ರವರು ಗಸ್ತು ಕರ್ತವ್ಯ ಮುಗಿಸಿಕೊಂಡು ಬಂದು ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಬನ್ನೆಟ್ಟಿ ಗ್ರಾಮದ ಭೀಮಾ ನದಿಯಲ್ಲಿ ಟಿಪ್ಪರಗಳಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಅಫಜಲಪೂರ ಪಟ್ಟಣದ ಕಡೆಗೆ ಬರುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಸರ್ಕಾರಿ ಪಂಚರಾಗಿ 1) ಮಂಜುನಾಥ ತಂದೆ ಮಲ್ಲಪ್ಪ ಜಾಲಗಾರ ವಯ|| 28 ವರ್ಷ ಉ|| ಗ್ರಾಮ ಲೆಕ್ಕಾಧಿಕಾರಿ ಅಫಜಲಪೂರ ಸಾ|| ತಹಸಿಲ ಕಾರ್ಯಲಯ ಅಫಜಲಪೂರ 2) ಯಲ್ಲಪ್ಪ ತಂದೆ ವಿಠ್ಠಲ ಜಮಾದಾರ ವಯ|| 25 ವರ್ಷ ಉ|| ಗ್ರಾಮ ಸಹಾಯಕ ಅಫಜಲಪೂರ ಸಾ|| ತಹಸಿಲ ಕಾರ್ಯಲಯ ಅಫಜಲಪೂರ ಇವರನ್ನು ಪೊಲೀಸ್ ಠಾಣೆಗೆ ಬರಮಾಡಿಕೊಂಡು ವಿಷಯವನ್ನು ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ, ನಾನು ಹಾಗೂ ಪಂಚರು ಮತ್ತು ನಮ್ಮ  ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಶರಣು ಹೆಚ್.ಸಿ-403, ಚಂದ್ರಕಾಂತ ಪಿಸಿ-706 ರವರನ್ನು ಸಂಗಡ ಕರೆದುಕೊಂಡು ಎಲ್ಲರೂ ಕೂಡಿ ನಮ್ಮ ಪೊಲೀಸ್ ಜೀಪಿನಲ್ಲಿ 6:10 ಎ. ಎಮ್ ಕ್ಕೆ ಹೊರಟು. ಘತ್ತರಗಾ ರೋಡಿಗೆ ಹೋಗುತ್ತಿದ್ದಾಗ ಅಫಜಲಪೂರ ಪಟ್ಟಣದ ಅಮೋಘಸಿದ್ದ ಗುಡಿಯ ಹತ್ತಿರ 06:15 ಎ ಎಮ್ ಕ್ಕೆ ಹೋಗುತ್ತಿದ್ದಾಗ ಎದುರುಗಡೆಯಿಂದ ಮೂರು ಟಿಪ್ಪರಗಳು ಮರಳು ತುಂಬಿಕೊಂಡು  ನಮ್ಮ ಎದುರುಗಡೆ ಬರುತ್ತಿದ್ದು ಟಿಪ್ಪರಗಳನ್ನು ನಿಲ್ಲಿಸಲು ಸೂಚನೆ ಕೊಟ್ಟಾಗ ಅವುಗಳ ಚಾಲಕರು ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿ ಓಡಿ ಹೋಗಿರುತ್ತಾರೆ. ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನೊಂದಣಿ ಸಂಖ್ಯೆ ನೋಡಲು ಕೆಎ-32 ಸಿ-6203 ಇದ್ದು. ಸದರಿ ಟಿಪ್ಪರ ಅ.ಕಿ 10,00,000/-ರೂ ಇರಬಹುದು ಮತ್ತು ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು. 2) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನೊಂದಣಿ ಸಂಖ್ಯೆ ನೋಡಲು ಕೆಎ-32 ಡಿ-0647 ಇದ್ದು. ಸದರಿ ಟಿಪ್ಪರ ಅ.ಕಿ 10,00,000/-ರೂ ಇರಬಹುದು ಮತ್ತು ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು. 3) ಟಾಟಾ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನೊಂದಣಿ ಸಂಖ್ಯೆ ನೋಡಲು ಎಮ್.ಹೆಚ್-48 ಎಜಿ-6688 ಇದ್ದು. ಸದರಿ ಟಿಪ್ಪರ ಅ.ಕಿ 10,00,000/-ರೂ ಇರಬಹುದು ಮತ್ತು ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ 06:30 ಎಎಮ್ ದಿಂದ 07:30 ಎ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು. ನಂತರ ಸದರಿ ಟಿಪ್ಪರಗಳನ್ನು ಸಿಬ್ಬಂದಿಯವರ ಸಹಾಯದಿಂದ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿ, ಸದರಿ ಟಿಪ್ಪರ ಚಾಲಕರ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಈ ವರದಿ ಸಲ್ಲಿಸಿದ್ದು ಇರುತ್ತದೆ. ಅಂತಾ ನೀಡಿದ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ : ದಿನಾಂಕ 20/12/2019 ರಂದು 6-45 ಪಿಎಮ್‍ಕ್ಕೆ ಶ್ರೀ ಮೋಹಿದ್ದಿನ ತಂದೆ ಚಾಂದಸಾಬ ಕಾಟಂನಳ್ಳಿ ಸಾ||ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ದೂರು ಅರ್ಜಿ ಸಾರಾಂಸವೇನೆಂದರೆ ನಾನು ಮೋಹಿದ್ದಿನ ತಂದೆ ಚಾಂದಸಾಬ ಕಾಟಂನಳ್ಳಿ ವ|| 34 ವರ್ಷ ಉ|| ಖಾಸಗಿ ಕೇಲಸ ಸಾ|| ಅಫಜಲಪೂರ ನಿವಾಸಿತನಿದ್ದು ಈ ಮೂಲಕ ತಮ್ಮಲ್ಲಿ ದೂರು ಅರ್ಜಿ ಸಲ್ಲಿಸುವದೆನಂದರೆ ಅಫಜಲಪೂರ ಪಟ್ಟಣದಲ್ಲಿ ಬಸವಶ್ವೇರ ಸರ್ಕಲ ಸಮೀಪ ಬಸವೇಶ್ವರ ಸರ್ಕಲದಿಂದ ಬಸ್ ನಿಲ್ದಾಣಕ್ಕೆ ಬರುವ ಮುಖ್ಯೆ ರೋಡಿನ ಬದಿ ನನ್ನದು ಒಂದು ಅಂಗಡಿ ಇದ್ದು ನೇಟ ಪಾಯಿಂಟ ಅಂತ ಅದರ ಹೆಸರು ಇರುತ್ತದೆ. ಸದರಿ ಅಂಗಡಿಯನ್ನು ನಾನು ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ತರೆದು ರಾತ್ರಿ 9-00 ಗಂಟೆ ಮುಚ್ಚುತ್ತೆನೆ ಅದರಂತೆ ದಿನಾಂಕ:11/12/2019 ರಂದು ನನ್ನ ದೈನಂದಿನ ಕೆಲಸ ಮುಗಿಸಿಕೊಂಡು ರಾತ್ರಿ 9-00 ಗಂಟೆಗೆ ನನ್ನ ಅಂಗಡಿಯನ್ನು ಮುಚ್ಚಿ ನಮ್ಮ ಮನೆಗೆ ಹೋಗಿರುತ್ತೆನೆ ನಂತರ ದಿನಾಂಕ:12/12/2019 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಪ್ರತಿ ದಿನದಂತೆ ನನ್ನ ಅಂಗಡಿಗೆ ಬಂದು ಅಂಗಡಿಯನ್ನು ತಗೆದು ನೋಡಲಾಗಿ ಅಂಗಡಿಯಲ್ಲಿನ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಕಂಡು ಬಂತು ಮತ್ತು ನನ್ನ ಅಂಗಡಿಯ ಹಿಂದಿನ ಪತ್ರಾ ಕಿತ್ತಿರುವದು ಕಂಡು ಬಂತು ನೊಡಲಾಗಿ ನನ್ನ ಅಂಗಡಿಯಲ್ಲಿಟ್ಟಿದ್ದ 1) DELL ಕಂಪನಿಯ ಎರಡು ಲ್ಯಾಪಟಾಪಗಳು ಈಗಿನ ಅಂದಾಜು ಕಿಮ್ಮತ್ತು 16,000/- ರೂ 2) ಒಂದು ಕಲರ್ PRINTER EPSON ಕಂಪನಿಯದ್ದು ಈಗಿನ ಅಂದಾಜು ಕಿಮ್ಮತ್ತು 2,500/- ರೂ 3) ಒಂದು INVETER MICROTEK ಕಂಪನಿಯದ್ದು ಈಗಿನ ಅಂದಾಜು ಕಿಮ್ಮತ್ತು 1000/- ರೂ 4) ಎರಡು SECUTION RD THUMB ಈಗಿನ ಅಂದಾಜು ಕಿಮ್ಮತ್ತು 2,000/- ರೂ 5) ಒಂದು SCANNER ಈಗಿನ ಅಂದಾಜು ಕಿಮ್ಮತ್ತು 2,000/- ರೂ 6) ಒಂದು AIR BLOOR ಅಕಿ-500/- ರೂ ಹಿಗೆ ಒಟ್ಟು 24,000/- ರೂ ಕಿಮ್ಮತ್ತಿನ ಸಾಮಾನುಗಳು ಕಳ್ಳತನವಾಗಿರುವದು ಕಂಡು ಬಂತು ನಂತರ ನಾನು ಈ ವಿಷಯವನ್ನು ನನ್ನ ಗೆಳೆಯನಾದ ಬಾಜು ಪೊಟೊ ಸ್ಟಿಡಿಯೋ ಅಂಗಡಿಯ ಕುತುಬುದ್ದಿನ ಮುಲ್ಲಾ ರವರಿಗೆ ಕರೆಯಿಸಿ ವಿಷಯ ತಿಳಿಸಿ ಇಬ್ಬರು ಕೂಡಿಕೊಂಡು ಎಲ್ಲಾ ಕಡೆ ಹುಡುಕಾಡಿದರು ನನ್ನ ಅಂಗಡಿಯಲ್ಲಿಂದ ಕಳ್ಳತನವಾದ ಸಾಮಾನುಗಳು ಸಿಕ್ಕಿರುವದಿಲ್ಲ. ಕಾರಣ ನಾನು ಇಂದು ಸದರಿ ಘಟನೆ ಬಗ್ಗೆ ನಮ್ಮ ಮನೆಯರೊಂದಿಗೆ ಚರ್ಚಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಕಾರಣ ದಿನಾಂಕ 11-12-2019 ರಂದು 9-00 ಪಿ ಎಮ್ ದಿಂದ ದಿನಾಂಕ 12-12-2019 ರ ಮದ್ಯದ ಅವದಿಯಲ್ಲಿ ನನ್ನ ಅಂಗಡಿಯಲ್ಲಿಯ ಒಟ್ಟು 24,000/- ರೂ ಕಿಮ್ಮತ್ತಿನ ಸಾಮಾನುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಸದರಿ ಕಳ್ಳತನವಾದ ಮಾಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸಬೆಕೆಂದು ವಿನಂತಿ ಇದೆ. ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಮಡು ತನಿಖೆ ಕೈಕೊಂಡ ಬಗ್ಗೆ ವರದಿ.

No comments: