POLICE BHAVAN KALABURAGI

POLICE BHAVAN KALABURAGI

22 December 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸಿದ್ದಣ್ಣ ತಂದೆ ನಿಂಗಪ್ಪ ಬಡಿಗೆರ ಸಾ|| ಬೆಣ್ಣೂರ ರವರು ದಿನಾಂಕ 18-12-2019 ರಂದು ನಮ್ಮ ಅಣ್ಣನ ಹೆಂಡತಿ ಶಿವಕಾಂತಮ್ಮ ಇವರ ತಮ್ಮನಾದ ಮುತ್ತಪ್ಪ ತಂದೆ ರಾಮಣ್ಣ ಬಡಿಗೆರ ಸಾ|| ಕುಮ್ಮನಸಿರಸಗಿ ಇವರು ತಮ್ಮ ಮೋಟರ ಸೈಕಲ್ ನಂ ಕೆ.-32/.ಎಫ್-6296 ನೇದ್ದನ್ನು ತೆಗೆದುಕೊಂಡು ನಮ್ಮ ಮನೆಗೆ ಬಂದಿದ್ದರು, ನಂತರ ನಿನ್ನೆ ಬೆಳಿಗ್ಗೆ 10;00 ಗಂಟೆ ಸುಮಾರಿಗೆ ನಮ್ಮ ಅಣ್ಣನ ಹೆಂಡತಿ ಶಿವಕಾಂತಮ್ಮ ಗಂಡ ಸಿದ್ದಲಿಂಗಪ್ಪ ಇವರು ತಮ್ಮ ತಮ್ಮನ ಮೋಟರ ಸೈಕಲ ಮೇಲೆ ಹಿಂದೆ ಕುಳಿತು ಸಂಬಂಧಿಕರಿಗೆ ಬೇಟಿಯಾಗಲು ಇಜೇರಿ ಗ್ರಾಮಕ್ಕೆ ಹೋಗಿದ್ದರು, 3;40 ಪಿ.ಎಂ ಸುಮಾರಿಗೆ ನಮ್ಮೂರಿನ ಬಾಬುರಾಯ ತಂದೆ ಮಹಾದೇವಪ್ಪ ಅರಳಗುಂಡಗಿ ಇವರು ನನಗೆ ಫೋನ ಹೇಳಿದ್ದೇನೆಂದರೆ, ಇದೀಗ 3;30 ಪಿ.ಎಂ ಸುಮಾರಿಗೆ ನಾನು ನಮ್ಮೂರಿಗೆ ಹೋಗುವ ಸಲುವಾಗಿ ಕರಕಿಹಳ್ಳಿ ಹತ್ತಿರ ಇರುವ ಕುಕ್ಕನೂರ ಕ್ರಾಸಬಳಿ ನಿಂತಾಗ ನಿಮ್ಮ ಅಣ್ಣನ ಹೆಂಡತಿ ಮತ್ತು ಅವರ ತಮ್ಮ ಮುತ್ತಪ್ಪ ಎಂಬುವರು ತಮ್ಮ ಮೋಟರ ಸೈಕಲ ಮೇಲೆ ಇಜೇರಿ ಕಡೆಯಿಂದ ಬರುತ್ತಿದ್ದಾಗ ಕುಕನೂರ ಕ್ರಾಸ್ ಹತ್ತಿರ ಹಿಂದಿನಿಂದ ಮೋಟರ ಸೈಕಲ್ ನಂ ಕೆ.-32/ಇಟಿ-4596 ನೇದ್ದರ ಸವಾರನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮೋಟರ ಸೈಕಲನ್ನು ಚಲಾಯಿಸಿಕೊಂಡು ಬಂದು ಮುತ್ತಪ್ಪನ ಮೋಟರ ಸೈಕಲಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ, ನಂತರ ನಾನು ನೋಡಲಾಗಿ ನಿಮ್ಮ ಅಣ್ಣನ ಹೆಂಡತಿಯ ತಲೆಯ ಹಿಂದೆ ಜೋರಾಗಿ ಬಡಿದು ರಕ್ತಗಾಯವಾಗಿ ಭಾರಿ ಒಳಪೆಟ್ಟಾಗಿರುತ್ತದೆ, ಸದ್ಯ ಅವರು ಮಾನಾಡುತ್ತಿಲ್ಲಾ, ಮುತ್ತಪ್ಪನಿಗೆ ಎಡಗೈ ಹಸ್ತದ ಹತ್ತಿರ ಸ್ವಲ್ಪ ತರಚಿದಗಾಯವಾಗಿರುತ್ತದೆ, ಅಪಘಾತ ಪಡಿಸಿದ ಮೋಟರ ಸೈಕಲ್ ಹಿಂದೆ ಕುಳಿತವನಿಗೆ ತಲೆಗೆ ರಕ್ತಗಾಯವಾಗಿರುತ್ತದೆ, ನೀವು ಬೇಗ ಬನ್ನಿ ಅಂತಾ ಹೇಳಿದ ಕೂಡಲೆ ನಾನು ಮತ್ತು ನಮ್ಮ ಅಣ್ಣ ಸಿದ್ದಲಿಂಗಪ್ಪ ಮತ್ತು ನಮ್ಮೂರಿನ ಭೀಮಣ್ಣ ತಂದೆ ಮಹಾದೇವಪ್ಪ ನೆಲೋಗಿ, ವಿಜಯಕುಮಾರ ತಂದೆ ಈರಪ್ಪ ಸೊಲಾಪೂರ, ಮೌಲಾಲಿ ತಂದೆ ಲಾಲಸಾಬ ಮುಲ್ಲಾ ರವರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ಅಣ್ಣನ ಹೆಂಡತಿಗೆ ಮೇಲ್ಕಂಡಂತೆ ಗಾಯಗಳಾಗಿದ್ದವು, ನಂತರ ನಾವು 108 ಅಂಬೂಲೆನ್ಸ ಕರೆಯಿಸಿ ಅವರನ್ನು ಅಂಬೂಲೆನ್ಸನಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆಮಾಡಿರುತ್ತೇವೆ, ನಮ್ಮ ಅಣ್ಣನ ಹೆಂಡತಿ ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ, ಆದ್ದರಿಂದ ನಮ್ಮ ಅಳಿಯ ಮುತಪ್ಪ ತಂದೆ ರಾಮಣ್ಣ ಬಡಿಗೆರ ರವರಿಗೆ ವಿಚಾರಿಸಿ  ಮೇಲ್ಕಂಡ ಮೋಟರ ಸೈಕಲ್ ಕೆ.-32/ಇಟಿ-4596 ನೇದ್ದರ ಸವಾರನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 21-12-2019 ರಂದು 11;30 .ಎಂ ಕ್ಕೆ ಫಿರ್ಯಾದಿ ಸಿದ್ದಣ್ಣ ತಂದೆ ನಿಂಗಪ್ಪ ಬಡಿಗೆರ ಸಾ|| ಬೆಣ್ಣೂರ  ರವರು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದ್ದೆನೆಂದರೆ, ದಿನಾಂಕ 18-12-2019 ರಂದು 3;30 ಪಿ.ಎಂ ಕ್ಕೆ ಕುಕನೂರ ಕ್ರಾಸ್ ಹತ್ತಿರ ಆದ ರಸ್ತೆ ಅಪಘಾತದಲ್ಲಿ ನಮ್ಮ ಅಣ್ಣನ ಹೆಂಡತಿ ಶಿವಕಾಂತಮ್ಮ ಇವರ ತಲೆಯ ಹಿಂದೆ ಭಾರಿ ಒಳಪೆಟ್ಟಾಗಿದ್ದರಿಂದ ಅವರಿಗೆ ಉಪಚಾರ ಕುರಿತು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ, ನಂತರ ನಮ್ಮ ವೈನಿಯನ್ನು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಓಮಿನಿ ಆಸ್ಪತ್ರೆಗೆ ಕರೆದುಕೋಂಡು ಹೋಗಿದ್ದು, ಅಲ್ಲಿಯ ವೈದ್ಯರು ನಮ್ಮ ವೈನಿಯನ್ನು ನೋಡಿ ಪರೀಕ್ಷಿಸಿ ಇವರು ಇನ್ನು ಬಹಳೊತ್ತು ಬದುಕುವುದಿಲ್ಲಾ, ನಿವು ಮನೆಗೆ ಕರೆದುಕೋಂಡು ಹೋಗರಿ ಅಂತಾ ಹೇಳಿದ್ದರಿಂದ ನಮ್ಮ ವೈನಿಯನ್ನು ಮರಳಿ ಕರೆದುಕೋಂಡು ಬರುತ್ತಿದ್ದಾಗ ದಿನಾಂಕ 21-12-2019 ರಂದು 12;30 .ಎಂ ಸುಮಾರಿಗೆ ಮಾರ್ಗ ಮದ್ಯ ಹುಮನಾಬಾದ ಹತ್ತಿರ ನಮ್ಮ ವೈನಿ ಶಿವಕಾಂತಮ್ಮ ಇವರು ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿನೋದ ತಂದೆ ರಾಜಾಸಾಬ ವಾಗ್ಮೋರೆ ಸಾ|| ಅಫಜಲಪೂರ ರವರು ಮತ್ತು ನನ್ನ ಅಣ್ಣನಾದ ಪಾಂಡುರಂಗ ಇಬ್ಬರು 8 ವರ್ಷಗಳಿಂದ ಅಫಜಲಪೂರ ಪಟ್ಟಣದಲ್ಲಿ ಅಮೋಘಸಿದ್ದ ಗುಡಿಯ ಹತ್ತಿರ ಖಾಲಿ ಜಾಗದಲ್ಲಿ ಸೆಡ್ಡ ಹಾಕಿಕೊಂಡು ಗುಜರಿ ವ್ಯಾಪಾರ ಮಾಡುತ್ತಿರುತ್ತೇವೆ. ಈಗ ಸುಮಾರು 03 ವರ್ಷಗಳಿಂದ ಸಂದಲಕುಮಾರ ವಯ|| 40 ವರ್ಷ ಈತನು ನಮ್ಮ ಹತ್ತಿರ ಕೆಲಸ ಮಾಡುತ್ತಿದ್ದನು. ಸದರಿಯವನು ಪಟ್ಟಣದಲ್ಲಿ ಖಾಲಿ ಬಾಟಲಿ. ಪ್ಲಾಸ್ಟಿಕ್ ಇನ್ನಿತರ ಸಾಮಾನುಗಳನ್ನು ಆಯ್ದುಕೊಂಡು ಬಂದು ನಮ್ಮ ಅಂಗಡಿಯಲ್ಲಿ ಹಾಕುತ್ತಿದ್ದನು, ಸದರಿ ಸಂದಲಕುಮಾರನು ಪಟ್ಟಣದ ಲಿಂಬಿತೋಟದಲ್ಲಿರುವ ಗಂಗವ್ವ ಗೋಲ್ಲರ ಇವರ ಜಾಗದಲ್ಲಿನ ಪತ್ರಾಸ ಸೆಡ್ಡಿನಲ್ಲಿ ಒಬ್ಬನೆ ವಾಸವಾಗಿದ್ದನು. ಸದರಿ ಸಂದಲಕುಮಾರ ಈತನು ಮಾನಸಿಕ ಕಾಯಿಲೆಯಿಂದ ಬಳಲಿ ಯಾರ ಜೋತೆಗೂ ಮಾತಾಡದೆ ತನ್ನಷ್ಟಕ್ಕೆ ತಾನು ಇರುತ್ತಿದ್ದನು. ಅವನಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣದಿಂದ ಸದರಿ ಸಂದಲಕುಮಾರನು 3 ದಿನಗಳಿಂದ ಕೆಲಸಕ್ಕೆ ಬಂದಿರುವುದಿಲ್ಲ.  ಸದರಿ ಸಂದಲಕುಮಾರನು ಕೆಲಸಕ್ಕೆ ಬರದೆ ಇದ್ದರಿಂದ ಇಂದು ದಿನಾಂಕ 21-12-2019 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಸಂದಲಕುಮಾರನು ವಾಸವಿದ್ದ ಸೆಡ್ಡಿಗೆ ಹೋಗಿ ನೋಡಲಾಗಿ, ಮನೆಯ ಬಾಗಿಲು ಮುಚ್ಚಿ ಸ್ವಲ್ಪ ತೆರೆದಿತ್ತು. ಬಾಗಿಲು ತಗೆದು ನೋಡಲಾಗಿ, ಸದರಿ ಸಂದಲಕುಮಾರನು ಪತ್ರಾಸ ಸೆಡ್ಡಿಗೆ ಇರುವ ಮೇಲಿನ ಕಟ್ಟಿಗೆಗೆ ಶಾಲಿನಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದನು. ಸದರಿ ಸಂದಲಕುಮಾರ ಈತನು ಮಾನಸಿಕ ಕಾಯಿಲೆಯಿಂದ ಬಳಲಿ ಜಿವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20-12-2019 ರಂದು ರಾತ್ರಿ ತಾನು ವಾಸವಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಭಾರಿ ಗಾಯಗೊಳಿಸಿ ಜಾತಿ ನಿಂದನೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಗಿರೀಶ ಕಂಬಾನೂರ ರವರು ಹೆಚ್ ಎಮ್ ಪಿ ಕಾಲೋನಿಯಲ್ಲಿರುವ ನನ್ನ ಗೆಳೆಯನಾದ ಸಂತೋಷ ಡೋಣಗಾಂವ ರವರ ಮದುವೆಯು ದಿನಾಂಕ: 11/12/2019 ರಂದು ಶಹಾಬಾದ ಪಟ್ಟಣದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಇರುವುದ್ದರಿಂದ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮದುವೆ  ಮುಗಿಸಿಕೊಂಡು ನಂತರ ರಾತ್ರಿ 9-00 ಗಂಟೆಗೆ ಮದುವೆಯ ಮನೆಯ ಹತ್ತಿರ ಕಾರ್ಯಕ್ರಮಗಳು ಇರುವುದರಿಂದ ನಾನು ಮತ್ತು ನನ್ನ ಜೊತೆಯಲ್ಲಿ ಲಕ್ಷ್ಮಿಕಾಂತ ಬೆಳ್ಳೆ , ಅರವಿಂದ ಕಾಂಬಳೆ , ಅನೀಲ ಗೊಬ್ಬರಕರ , ಎಲ್ಲಾರೂ ಕೂಡಿ ಸಂತೋಷ ಡೋಣಗಾಂವ ಇವರ ಮನೆಯ ಹತ್ತಿರ ಕಾರ್ಯಕ್ರಮದಲ್ಲಿ ಇದ್ದಾಗ ರಾತ್ರಿ 11-30 ಗಂಟೆಗೆ ಒಂದು ಮರಳು ತುಂಬಿದ ಟಿಪ್ಪರ ಅತೀ ವೇಗವಾಗಿ ಬರುತ್ತಿದ್ದಾಗ  ಅದಕ್ಕೆ ನಾವು ತಡೆದು ನಿಲ್ಲಿಸಿ ಯಾರದು ಟಿಪ್ಪರ ಅಂತಾ ವಿಚಾರಿಸಿದಾಗ ಅದರ ಚಾಲಕನು ಮಂಜು ವಾರದ ರವರ ಟಿಪ್ಪರ ಅಂತಾ ತಿಳಿಸಿದನು. ಅದೇ ವೇಳೆಗೆ ಅದರ ಹಿಂದೆ ಮತ್ತೊಂದು ಮರಳು ತುಂಬಿದ ಟಿಪ್ಪರ ಬರುತ್ತಿದ್ದಾಗ ಅದಕ್ಕೂ ನಾವು ತಡೆದು ನಿಲ್ಲಿಸಿ ವಿಚಾರಿಸಿದಾಗ ಅದರ ಚಾಲಕ ವಿಜಯಕುಮಾರ ಹಳ್ಳಿ ರವರ ಟಿಪ್ಪರ ಅಂತಾ ತಿಳಿಸಿದನು ಆಗ ಇಬ್ಬರೂ ಚಾಲಕರಿಗೆ ನೀವು ರೀತಿ ಮರಳು ತುಂಬಿಕೊಂಡು ಕಾಲೋನಿಯಿಂದ ಹೋದರೆ ಕಾರ್ಯಕ್ರಮಕ್ಕೆ ತೊಂದರೆ ಆಗುತ್ತದೆ  ಅಂತಾ ಕೇಳಿದಾಗ ಅವರು ತಮ್ಮ ಮಾಲಿಕರಿಗೆ ಟಿಪ್ಪರ ಹಿಡಿದ ಬಗ್ಗೆ ತಿಳಿಸಿ ಟಿಪ್ಪರಗಳು ಅಲ್ಲೆ ಬಿಟ್ಟು ಹೋದರೂ. ನಂತರ ನಾವು ಮದುವೆಯ ಕಾರ್ಯಕ್ರಮ ಮುಗಿಸಿಕೊಂಡು ಲಕ್ಷ್ಮಿಕಾಂತ ಬೆಳ್ಳೆ ರವರ ಈರಟಿಗಾ ಕಾರ ನಂಬರ ..32 ಪಿ 4609 ನೇದ್ದರಲ್ಲಿ ನಾನು ಮತ್ತು ಲಕ್ಷ್ಮಿಕಾಂತ ಬೆಳ್ಳೆ , ಅರವಿಂದ ಕಾಂಬಳೆ , ಅನೀಲ ಗೊಬ್ಬರಕರ , ಕೂಡಿಕೊಂಡು ಮನೆಗೆ ಹೋಗುವ ಕುರಿತು ಹೆಚ್ ಎಮ್ ಪಿ ಕಾಲೋನಿಯಿಂದ ಹೋಗುತ್ತಿದ್ದಾಗ  ದಿನಾಂಕ: 12/12/2019 ರಂದು ಬೆಳಗಿನ ಜಾವ 1-00 ಗಂಟೆಗೆ ಹೆಚ್ ಎಮ್ ಪಿ ಕಂಪನಿಯ ಎಸ್ ಆಸ್ಪತ್ರೆಯ ಹತ್ತಿರ ನಮ್ಮ ಎದುರುಗಡೆಯಿಂದ ಮೂರು ವಾಹನಗಳು ಬಂದು ನಮ್ಮ ಕಾರಿಗೆ ಎದುರುಗಟ್ಟಿ ನಿಲ್ಲಿಸಿದರೂ ಆಗ ನಾನು ಕಾರನಿಂದ ಇಳಿದು ನೋಡಲು ಒಂದು ಡಸ್ಟರ ಕಾರ ಇದ್ದು ಅದರಲ್ಲಿ ವಿಜಯಕುಮಾರ ಹಳ್ಳಿ  , ಪರವತ ರಡ್ಡಿ , ಚಂದ್ರಕಾಂತ ಬುರ್ಲೆ , ಮಲ್ಲಿಕಾರ್ಜುನ ಕಟ್ಟಿಮನಿ ಇದ್ದು,  ಇನ್ನೊಂದು ಬೊಲೊರೋ ವಾಹನದಲ್ಲಿ ಗೀರಿಶ  ರಾಠೋಡ , ಚಂಡುಲಾ , ಮತ್ತು ಕಿರಣ ಶಂಕರವಾಡಿ , ಹಾಗೂ ಇನ್ನೊಂದು ಹೊಂಡಾ ಕೇರಿಟಾ ಕಾರನಲ್ಲಿ ಮಂಜು ವಾರದ ಶಂಕರ ಅಳ್ಳೋಳ್ಳಿ , ರಾಣೋಜಿ ಶಂಕರವಾಡಿ ರವರು ವಾಹನಗಳಿಂದ ಕೆಳಗೆ ಇಳಿದು ಬಂದು ಅವರಲ್ಲಿ ವಿಜಯಕುಮಾರ  ಹಳ್ಳಿ ಇತನು ಯಾಕೆ ಟಿಪ್ಪರ ಹಿಡಿದು ನಿಲ್ಲಿಸಿದಿ ಅಂತಾ ಕೇಳಿದಾಗ ಅದಕ್ಕೆ ನಾನು ಕಾಲೋನಿಯಲ್ಲಿ ಮದುವೆಯ ಕಾರ್ಯಕ್ರಮ ಇದೆ  ಮತ್ತು ನೀವು ನಮ್ಮ ಹೊಲದಲ್ಲಿಂದ  ಬಂದರೆ ನಮ್ಮ ಹೊಲ ಹಾಳು ಅಗುವುದಿಲ್ಲಾ ಅಂತಾ ಕೇಳಿದಾಗ ಅವರಲ್ಲಿಯ ಚಂದ್ರಕಾಂತ ಬುರ್ಲೆ  ಮತ್ತು ಪರವತ ರಡ್ಡಿ ರವರು ಭೋಸಡಿ ಮಗನೆ ನಿಮ್ಮ ಹೊಲ ಇದ್ದರ ನಾವು ಏನು ಮಾಡೋಣ ಮೊದಲು ಟಿಪ್ಪರ ಯಾಕೆ ಹಿಡಿದಿದ್ದಿ ಬಿಡು ಅಂತಾ ಅವಾಚ್ಯವಾಗಿ ಬೈದು  ಅವರಲ್ಲಿ ಚಂಡೂಲಾ ಇತನು ಟಿಪ್ಪರ ಬಿಡತಿಯಿಲ್ಲೋ ಸೂಳೆ ಮಗನೆ ಅಂತಾ ಬೈದು ನನ್ನ ಕಪ್ಪಾಳದ ಮೇಲೆ ಹೊಡೆದನು ಆಗ ಅವರಲ್ಲಿ ಶಂಕರ ಅಳ್ಳೋಳ್ಳಿ , ಮಂಜು ವಾರದ ರವರು ನನಗೆ  ರಂಡಿ  ಮಗನಾ ಟಿಪ್ಪರ ಹಿಡಿದು ನಿಲ್ಲಿಸಿತ್ತಿ ಸೂಳಿ ಮಗನದು ಬಹಳ ಆಗಿದೆ ಅಂತಾ ಇಬ್ಬರೂ ಕೂಡಿ ನನ್ನ ಬಲಗೈ ಒತ್ತಿ ಹಿಡಿದರೂ ಅದೇ ವೇಳೆಗೆ ಅವರಲ್ಲಿ ಗಿರೀಶ ರಾಠೋಡ ಇತನು ಬೋಸಡಿ ಮಗನಾ ನೀನು ಟಿಪ್ಪರ ಹಿಡಿದು ನಿಲ್ಲಿಸಿದರೆ ನಾವು ಹೇಗೆ ದಂದಾ ಮಾಡುವುದು ರಂಡಿ ಮಗನೆ ಅಂತಾ ಕೈ ಮುಷ್ಟಿ ಮಾಡಿ ನನ್ನ ಬೆನ್ನಿಗೆ ಹೊಡೆದನು ಆಗ ರಾಣೋಜಿ ಶಂಕರವಾಡಿ ಮತ್ತು ಕಿರಣ ಶಂಕರವಾಡಿ ಇವರಿಬ್ಬರೂ ಕೂಡಿ ಬಂದು ನನ್ನ ಎಡಗೈ ಒತ್ತಿ ಹಿಡಿದರೂ ಆಗ ಮಲ್ಲಿಕಾರ್ಜುನ ಕಟ್ಟಿಮನಿ ಇತು  ರಂಡಿ ಮಗದು ಊರಲ್ಲಿ ಬಹಳ ಆಗಿದೆ ಇವತ್ತೂ ಏನಾಗುತ್ತದೋ ಆಗಿ ಹೋಗಲಿ ಅಂತಾ ಬೈದು ನನ್ನ ಹೊಟ್ಟೆಗೆ ಕೈಯಿಂದ ಹೊಡೆದನು ಆಗ ವಿಜಯಕುಮಾರ ಹಳ್ಳಿ ಇತನು ಸೂಳೆ ಮಗ ಜೀವಂತ ಇದ್ದರೆ ಮುಂದೆ ನಮ್ಮ ಮರಳು ದಂದೆ ಮಾಡಲು ಬಿಡುವುದಿಲ್ಲಾ ಅವನಿಗೆ ಖಲಾಸ ಮಾಡಬೇಕು ಅಂತಾ ಅನ್ನುತ್ತಾ ತನ್ನ ಹತ್ತಿರ ಇದ್ದ  ಚಾಕು ತೆಗೆದು ನನ್ನ ಬಲ ಕುತ್ತಿಗೆ ಹತ್ತಿರ ಹೊಡೆದು ರಕ್ತಗಾಯ ಪಡಿಸಿದನು ಆಗ ಕಾರನಲ್ಲಿ ಇದ್ದ ಲಕ್ಷ್ಮಿಕಾಂತ ಬೆಳ್ಳೆ ಮತ್ತು ಅರವಿಂದ ಕಾಂಬಳೆ, ಅನೀಲ ಗೊಬ್ಬರಕರ ರವರು ನೋಡಿ ಬಿಡಿಸಲು ಬಂದಾಗ ಅವರಿಬ್ಬರಿಗೆ ಚಂಡೂಲಾ ಮತ್ತು ಗಿರೀಶ ರಾಠೋಡ ಮತ್ತು ಮಂಜು ವಾರದ ರವರು ಕೂಡಿ ಅವರಿಗೆ ಹಿಡಿದು ತಡೆದು ನಿಲ್ಲಿಸಿ ಬೋಸಡಿ ಮಕ್ಕಳೆ ನಾವು ಅವನಿಗೆ ಸಾಯಿಸುವುದು ನೀವು ನೋಡಬೇಕು ಅಂತಾ ಅನುತ್ತಾ ವಿಜಯಕುಮಾರ ಹಳ್ಳಿಗೆ   ಹೊಡೆ ಸೂಳಿ ಮಗನಿಗೆ ಅಂತಾ ಅಂದಾಗ ಮತ್ತೆ ಅದೆ ಚಾಕುವಿನಿಂದ ವಿಜಯಕುಮಾರ ಹಳ್ಳಿ ಇತನು  ನನ್ನ ಎಡಗಡೆ ಹೊಟ್ಟೆಯ ಹತ್ತಿರ ಹೊಡೆದಾಗ ಭಾರಿ ರಕ್ತಗಾಯವಾಗಿ  ನಾನು ಬೇಹುಷಾ ಆಗಿ ಬಿದ್ದಾಗ  ಅರವಿಂದ ಕಾಂಬಳೆ ಇತನು ಪೋನ ಮಾಡಿ ನಮ್ಮ ಮನೆಯವರಿಗೆ ತಿಳಿಸುತ್ತಿದ್ದಾಗ  ಅವರೆಲ್ಲಾರೂ ನಾನು ಬೆಹುಷಾ ಆಗಿದ್ದು ನೋಡಿ ಸತ್ತಿರಬಹುದು ಅಂತಾ ತಿಳಿದು ತಮ್ಮ ತಮ್ಮ ವಾಹನಗಳಲ್ಲಿ ಕುಳಿತುಕೊಂಡು ಓಡಿ ಹೋಗಿರುತ್ತರೆ ಅವರ ವಾಹನಗಳು ನೋಡಿದರೆ ಗುರುತಿಸುತ್ತೇನೆ ಮತ್ತು ನಂಬರ ನೋಡಲಿಲ್ಲಾ ನಂತರ ನಮ್ಮ ಮನೆಯಿಂದ ನಮ್ಮ ಅಣ್ಣ ಸತೀಶ ಕಂಬಾನೂರ ಮತ್ತು ಅವಿನಾಶ ಕಂಬಾನೂರ ಹಾಗೂ ಮಹೇಶ ಹುಲಿ ರವರು ಬಂದು ಎಲ್ಲಾರೂ ಕೂಡಿಕೊಂಡು ನನಗೆ ಉಪಚಾರ ಕುರಿತು ಯುನೇಟೇಡ ಆಸ್ಪತ್ರೆ ತಂದು ಸೇರಿಕೆ ಮಾಡಿರುತ್ತಾರೆ . ನಾನು ಪರಿಶಿಷ್ಟ ಜಾತಿಯವನು ಎಂದು ಮಂಜು ವಾರದ ಮತ್ತು ಪರವತ ರಡ್ಡಿ ಇವರಿಗೆ ಗೊತ್ತಿದ್ದರೂ ಕೂಡ ನನಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: