POLICE BHAVAN KALABURAGI

POLICE BHAVAN KALABURAGI

12 June 2018

KALABURAGI DISTRICT REPORTED CRIMES

ಆಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 11.06.2018 ರಂದು ಸಾಯಂಕಾಲ ಬ್ರಹ್ಮಪೂರ ಬಡಾವಣೆಯ ಆಜಾದ ಚೌಕ ಅಪ್ಪರ ಲೈನ್ ಅನಂತಸೇನ ಗುಡಿ ಹತ್ತಿರ ಮನೆ ಇರುವ ಭೀಮಶ್ಯಾ ತಂದೆ ಶಂಕ್ರೇಪ್ಪ ಪರಿಟ ಮತ್ತು ಅವನ ಮಗ ರವಿ ತಂದೆ ಭೀಮಶ್ಯಾ ಪರಿಟ ಇವರುಗಳು ತಮ್ಮ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಬಾತ್ಮಿ ಬಂದ ಮೇರೆಗೆ ಜಿಲ್ಲಾ ನಿಸ್ತಂತು ಕೊಣೆಗೆ ಮತ್ತು ಮೇಲಾಧಿಕಾರಿಗಳಲ್ಲಿ ಮಾಹಿತಿ ತಿಳಿಸಿದ್ದು, ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಚಿಕ್ಕ ವೆಂಕಟರಮಣಪ್ಪ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಕಲಬುರಗಿ ಇವರಿಗೆ ದಾಳಿ ಕಾಲಕ್ಕೆ ಹಾಜರಿರಲು ಕೊರಿಕೊಂಡಿದ್ದು ಮತ್ತು ಪಂಚರನ್ನಾಗಿ ಸರಕಾರಿ ನೌಕರರಾದ 1.ಶ್ರೀ ಪ್ರೇಮಾನಂದ ಚಿಂಚೊಳ್ಳಿಕರ ಎಪ್.ಡಿ.ಎ. ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳ ಕಾರ್ಯಾಲಯ ಕಲಬುರಗಿ ಗ್ರಾಮೀಣ 2. ಶ್ರೀ ಡಾ: ಮಹಾಂತೇಶ ಭೋವಿ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೇ ಅಫಜಲಪೂರ ಹಾ:ವ: ನೆಹರು ಗಂಜ ಕಲಬುರಗಿ. ಇವರನ್ನು ಬ್ರಹ್ಮಪೂರ ಬಡಾವಣೆಯ ಈಶ್ವರ ಗುಡಿಯ ಹತ್ತಿರ ಬರಮಾಡಿಕೊಂಡಿದ್ದು ಅವರುಗಳಿಗೆ ತಿಳಿ ಹೇಳಿದ್ದು. ಅದರಂತೆ ಶ್ರೀ ಎಸ್.ಎಮ್. ಯಾಳಗಿ ಪಿ.ಐ. ಬ್ರಹ್ಮಪೂರ ಪೊಲೀಸ ಠಾಣೆ ರವರು ಬಂದು ದಾಳಿ ಉಸ್ತುವಾರಿಯನ್ನು ನೋಡಿಕೊಳ್ಳಲು ಕೇಳಿಕೊಂಡಿದ್ದು ಶ್ರೀಮತಿ ಅಕ್ಕಮಹಾದೇವಿ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ , ಶ್ರೀಮತಿ ಸುವರ್ಣ ಪಿ.ಎಸ್.ಐ.(ಪ್ರೋ) ಹಾಗು ಸಿಬ್ಬಂದಿ ಬಾತ್ಮಿಯಂತೆ ಬ್ರಹ್ಮಪೂರ ಬಡಾವಣೆಯ ಆಜಾದ ಚೌಕ ಅಪ್ಪರ ಲೈನ್ ಅನಂತಸೇನ ಗುಡಿ ಹತ್ತಿರ ಮನೆ ಇರುವ ಭೀಮಶ್ಯಾ ತಂದೆ ಶಂಕ್ರೇಪ್ಪ ಪರಿಟ ಮತ್ತು ಅವನ ಮಗ ರವಿ ತಂದೆ ಭೀಮಶ್ಯಾ ಪರಿಟ ಇವರುಗಳ ಮನೆಯ ಒಳಗೆ ಶ್ರೀ ಎಸ್.ಎಮ್. ಯಾಳಗಿ ಸಾಹೇಬರ ಉಸ್ತುವಾರಿಯಲ್ಲಿ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಚಿಕ್ಕ ವೆಂಕಟರಮಣಪ್ಪ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಕಲಬುರಗಿ ಇವರ ಸಮಕ್ಷಮದಲ್ಲಿ ಸದರಿಯವರ ಮನೆಯ ಮೇಲೆ ದಾಳಿ ಮಾಡಿದ್ದು, ಸದರಿ ಮನೆಯಲ್ಲಿ ಇಬ್ಬರು ವ್ಯಕ್ತಿಗಳು ಹಾಜರಿದ್ದು ಅವರ ಹೆಸರು ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಭೀಮಶ್ಯಾ ತಂದೆ ಶಂಕ್ರೇಪ್ಪ ಪರಿಟ 2. ರವಿ ತಂದೆ ಭೀಮಶ್ಯಾ ಪರಿಟ ಅಂತ ತಿಳಿಸಿದ್ದು. ನಂತರ ನಾನು ಮತ್ತು ಪಿ.ಐ. ಸಾಹೇಬರು ಸದರಿಯವನ ಮನೆಯನ್ನು ಪರಿಶೀಲಿಸಿ ನೋಡಲು ಮನೆಯಲ್ಲಿ ಒಂದು ತೆಳುವಾದ ಕೈ ಚೀಲ ಇದ್ದು. ಕೈ ಚೀಲದ ಒಳಗೆ ಗಾಂಜಾ ಇದ್ದು ಹಾಗೂ ಪ್ಲಾಸ್ಟೀಕ ಕ್ಯಾರಿ ಬ್ಯಾಗಿನಲ್ಲಿ ಸ್ವಲ್ಪ ಗಾಂಜಾ ಕಟ್ಟಿದ್ದು ಇದ್ದು ಗಾಂಜಾವನ್ನು ತೂಕ ಹಾಕುವ ಕುರಿತು ಕಿರಾಣಾ ಅಂಗಡಿಯ ಶ್ರೀ ಇಸ್ಮಾಯಿಲ್ ತಂದೆ ಬಾಸುಮಿಯಾ ಇವರನ್ನು ತೂಕದ ಯಂತ್ರದೊಂದಿಗೆ ಬರಮಾಡಿಕೊಂಡು ಗಾಂಜಾವನ್ನು ತೂಕ ಹಾಕಿ ನೋಡಲು ಕೈ ಚೀಲದಲ್ಲಿ ಇದ್ದ ಗಾಂಜಾ 730 ಗ್ರಾಂ ಇದ್ದು ಕೈ ಚೀಲದಲ್ಲಿ ಇದ್ದ ಪ್ಲಾಸ್ಟಿಕ ಕ್ಯಾರಿ ಬ್ಯಾಗಿನಲ್ಲಿ ಇದ್ದ ಗಾಂಜಾ ತೂಕ ಹಾಕಿ ನೋಡಲು ಅದು 230 ಗ್ರಾಂ ಇದ್ದು. ಹೀಗೆ ಒಟ್ಟು 960 ಗ್ರಾಂ ಗಾಂಜಾ ಇದ್ದು. ಅಂದಾಜ ಕಿಮ್ಮತ್ತು 6,000/- ರೂ ಆಗುತ್ತದೆ. ಸದರಿ ಗಾಂಜಾ ದೊರೆತ ಕೈ ಚೀಲವನ್ನು ಪರಿಶಿಲಿಸಿ ನೊಡಲಾಗಿ ಅದರ ಮೇಲೆ ಶ್ರೀ ರಾಜ ರಾಜೇಶ್ವರ ಮೇನ್ಸ್ ವೇರ್ ಎ ಕಂಪ್ಲಿಟ ಮಲ್ಟಿ ಬ್ರಾಂಡ್ ಶೊರೂಂ ಶಾಸ್ತ್ರಿ ರೋಡ ಸದಾಶಿವ ಪೇಠ ಡಿಸ್ಟ್: ಮೇದಕ (ಟಿಎಸ್) ಮೊನಂ 9908393936 ಅಂತ ಬರೆಯಲಾಗಿತ್ತು ಸದರಿ ಕೈ ಚೀಲದಲ್ಲಿ ದೊರೆತ 730 ಗಾಂ ಮತ್ತು 230 ಗ್ರಾಂ ಗಾಂಜಾ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಸದರಿ ಆರೊಪಿತರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಕಮಲಾಪೂರ ಟಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ನಾಗಾರೆಡ್ಡಿ ಕಪನೂರ ಮು:ಕಲ್ಮೂಡ ಗ್ರಾಮ ತಾ:ಜಿ: ಕಲಬುರಗಿ ಇವರು ಸೂಮಾರು 26 ವರ್ಷಗಳ ಹಿಂದೆ ಕಲ್ಮೂಡ ಗ್ರಾಮದ ವೆಂಕಾರೆಡ್ಡಿ ಇವರ 3 ನೇ ಮಗನಾದ ನಾಗಾರೆಡ್ಡಿ ಇವರೊಂದಿಗೆ ಮದುವೆ ಮಾಡಿಕೊಂಡಿದ್ದು. ನನಗೆ ರೇಣುಕಾ, ಗೀತಾ ಅಂತಾ ಇಬ್ಬರೂ ಹೆಣ್ಣು ಮಕ್ಕಳಿದ್ದು. ರೇಣುಕಾ ಇವಳ ಎರಡು ಕಾಲುಗಳು ಚಿಕ್ಕವು ಇದ್ದು. ಅಂಗವಿಕಲೆ ಇರುತ್ತಾಳೆ ಅದರಂತೆ ಗೀತಾ ಇವಳಿಗೆ ಎರಡು ಕಣ್ಣುಗಳು ಕುರುಡು ಇರುತ್ತವೆ. ಅದರಂತೆ ರಾಜರೆಡ್ಡಿ, ಹಾಗೂ ಮಾಣಿಕರೆಡ್ಡಿ ಅಂತಾ ಇಬ್ಬರೂ ಗಂಡು ಮಕ್ಕಳಿದ್ದು. ಇನ್ನೂ ಯಾರಿಗೂ ಮದುವೆ ಆಗಿರುವುದಿಲ್ಲ. ನನ್ನ ಗಂಡನ ಹೆಸರಿಗೆ ಕಲ್ಮೂಡ ಗ್ರಾಮ ಸೀಮಾಂತರದಲ್ಲಿ ಹೋಲ ಸರ್ವೇ ನಂ-27 ರಲ್ಲಿ 3 ಎಕರೆ ಜಮೀನ ಇದ್ದು. ನಾವೇಲ್ಲರೂ ಅದರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೇವೆ. ಮತ್ತು ಹೋಲದಲ್ಲಿ ಬಾವಿ ಕೂಡಾ ಇರುತ್ತದೆ. ಹೀಗಿದ್ದು ಈಗ್ಗೆ ಸೂಮಾರು 1 ವರ್ಷಗಳ ಹಿಂದೆ ನನ್ನ ಗಂಡ ನಾಗಾರೆಡ್ಡಿ ಇವರು ತನ್ನ ಹೆಸರಿಗೆ ಇರುವ ಹೋಲದಲ್ಲಿ ಬೆಳೆ ಬೆಳೆಯುವ ಸಂಭಂಧ ಕಮಲಾಪೂರ ಗ್ರಾಮದ ಕೆನರಾ ಬ್ಯಾಂಕನಲ್ಲಿ 50 ಸಾವಿರ ರೂಪಾಯಿ ಬೆಳೆ ಸಾಲ ಅಂತಾ ತೆಗೆದುಕೊಂಡಿದ್ದು. ಸರಿಯಾಗಿ ಮಳೆ ಬರದೆ ಬೆಳೆ ಕೂಡಾ ಬೆಳೆಯದೆ ಇದ್ದುದರಿಂದ ನನ್ನ ಗಂಡ ನಾಗಾರೆಡ್ಡಿ ಇವರು ಮನಸ್ಸಿನ ಮೇಲೆ ಬೇಜಾರ ಮಾಡಿಕೊಂಡು ಮನೆಯಲ್ಲಿ ಸರಿಯಾಗಿ ಊಟ ತಿಂಡಿ ಮಾಡದೆ ಯಾರೊಂದಿಗೂ ಸರಿಯಾಗಿ ಮಾತು ಕೂಡಾ ಆಡದೆ ಒಬ್ಬರೆ ಸಾಲ ಮುಟ್ಟಿಸುವ ಬಗ್ಗೆ ಚಿಂತೆ ಮಾಡುತ್ತ ಕೂಡುತ್ತಿದ್ದರು ಅದನ್ನು ನೋಡಿ ನಾನು ಮತ್ತು ನನ್ನ ಮಕ್ಕಳೂ ಹಾಗೂ ನನ್ನ ಭಾವ ಮಲ್ಲರೆಡ್ಡಿ ಮತ್ತು ಇತರರು ಕೂಡಿ ನನ್ನ ಗಂಡನಿಗೆ ಹೀಗೆ ಸಾಲದ ವಿಷಯದಲ್ಲಿ ಚಿಂತೆ ಮಾಡಬೇಡಾ ನಮಗೆ 4 ಜನ ಮಕ್ಕಳಿದ್ದಾರೆ ನಿಮಗೆ ಏನಾದರು ಆದರೆ ನಾನು ಮತ್ತು ಮಕ್ಕಳು ಅನಾಥರಾಗುತ್ತೇವೆ ನಾವೇಲ್ಲರೂ ಕೂಡಿ ಮುಂದೆ ಸಾಲ ಮುಟ್ಟಿಸಿದರಾಯಿತು ಅಂತಾ ಬುದ್ದಿಮಾತು ಹೇಳುತ್ತ ಬಂದಿದ್ದರು ಕೂಡಾ ನನ್ನ ಗಂಡ ಅದೇ ರೀತಿ ಬ್ಯಾಂಕನ ಸಾಲ ತಿರಿಸುವ ವಿಷಯದಲ್ಲಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದರು. ಮತ್ತು ನನ್ನ ಗಂಡನಿಗೆ ಇಜು ಬರುತ್ತಿರಲಿಲ್ಲ. ದಿನಾಂಕ:11-06-2018 ರಂದು ಮುಂಜಾನೆ 07-00 ಗಂಟೆಯ ಸೂಮಾರಿಗೆ ನನ್ನ ಗಂಡ ನಾಗಾರೆಡ್ಡಿ ಇವರು ನಮ್ಮ ಹೋಲದಲ್ಲಿನ ಕಬ್ಬಿನ ಬೆಳೆಗೆ ನಿರು ಬಿಟ್ಟು ಹೋಲದಲ್ಲಿ ಕೆಲಸ ಮಾಡಲು ಹೋಗುತ್ತೇನೆ ನೀನು ಬರುವಾಗ ನನಗೆ ಊಟ ತೆಗೆದುಕೊಂಡು ಬಾ ಅಂತಾ ನನಗೆ ಹೇಳಿ ಮನೆಯಿಂದ ನಮ್ಮ ಹೋಲಕ್ಕೆ ಹೋಗಿದ್ದು. ನಂತರ ನಾನು ಕೂಡಾ ಇಂದು ಮದ್ಯಾಹ್ನ 12-00 ಗಂಟೆಯ ಸೂಮಾರಿಗೆ ನನ್ನ ಗಂಡನಿಗೆ ಊಟ ತೆಗೆದುಕೊಂಡು ವಸಂತ ಶೇಠ ಇವರ ಹೋಲದಿಂದ ನಮ್ಮ ಹೋಲಕ್ಕೆ ಹೋಗುತ್ತಿದ್ದಾಗ ನನ್ನ ಗಂಡ ಕೂಡಾ ಅದೇ ಹೋಲದಿಂದ ನಡೆದುಕೊಂಡು ಬರುತ್ತಿದ್ದು. ನಾನು ನನ್ನ ಗಂಡನಿಗೆ ಎಲ್ಲಿಗೆ ಹೋರಟಿದ್ದಿರಿ ಅಂತಾ ವಿಚಾರ ಮಾಡಲು ಅವರು ಊಟ ತರಲು ತಡವಾಗಿದ್ದರಿಂದ ಮನೆ ಕಡೆಗೆ ಹೋರಟಿದ್ದೆ ಅಂತಾ ಹೇಳಿದ್ದು. ನಂತರ ನಾವಿಬ್ಬರೂ ಕೂಡಿ ವಾಪಸ್ಸ ನಮ್ಮ ಹೋಲಕ್ಕೆ ಬಂದು ಹೋಲದಲ್ಲಿ ಊಟ ಮಾಡಿದ್ದು. ನಂತರ ನಾನು ಹೋಲದಲ್ಲಿ ಸದಿ ತೆಗೆಯುತ್ತಿದ್ದು ಮದ್ಯಾಹ್ನ 02.00 ಗಂಟೆಯ ಸೂಮಾರಿಗೆ ನನ್ನ ಗಂಡ ನಮ್ಮ ಹೋಲದಲ್ಲಿನ ಬಾವಿಯ ಹತ್ತಿರ ಹೋಗುತ್ತಿದ್ದು. ಅದನ್ನು ನೋಡಿ ನಾನು ನನ್ನ ಗಂಡನ ಹಿಂದೆ ಹೋಗುತ್ತಿದ್ದಾಗ ನನ್ನ ಗಂಡ ಒಮ್ಮಿಲೆ ಬಾವಿಯ ನಿರಿನಲ್ಲಿ ಹಾರಿದನು. ಅದನ್ನು ನೋಡಿ ನಾನು ಚಿರಾಡುತ್ತಿದ್ದಾಗ ನಮ್ಮ ಬಾಜು ಹೋಲದಲ್ಲಿದ್ದ ನಮ್ಮ ಭಾವ ಭೀಮರೆಡ್ಡಿ ಹಾಗೂ ನಮ್ಮ ಅಣ್ಣತಮ್ಮಕ್ಕಿಯ ವಿಠಲರೆಡ್ಡಿ, ದಿಲೀಪರೆಡ್ಡಿ  ಇವರು ಬಂದು ಬಾವಿಯಲ್ಲಿ ಇಳಿದು ಇಂದು ಮದ್ಯಾಹ್ನ 02-15 ಗಂಟೆಯ ಸೂಮಾರಿಗೆ ನನ್ನ ಗಂಡನಿಗೆ ಬಾವಿಯಿಂದ ಹೋರಗಡೆ ತೆಗೆದು ನೋಡಲಾಗಿ ನನ್ನ ಗಂಡ ಬಾವಿಯ ನಿರಿನಲ್ಲಿ ಬಿದ್ದು ಇಜು ಬಾರದೆ ಉಸಿರುಗಟ್ಟಿ ಬಾಯಿ ತೆರೆದು ಮುಗಿನಿಂದ ಸುಂಬಳ ಬಂದು ಮೃತ ಪಟ್ಟಿದ್ದರು. ನನ್ನ ಗಂಡನಾದ ನಾಗಾರೆಡ್ಡಿ ಇವರು ಕಮಲಾಪೂರ ಗ್ರಾಮದ ಕೆನರಾ ಬ್ಯಾಂಕನಲ್ಲಿ ತೆಗೆದ 50 ಸಾವಿರ ರೂಪಾಯಿ ಬೆಳೆ ಸಾಲವನ್ನು ಮುಟ್ಟಿಸಲು ಆಗದೆ ಮಾನಸಿಕನಾಗಿ ಮನನೊಂದು ಬಾವಿಯ ನಿರಿನಲ್ಲಿ ಹಾರಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂದೀಪ ತಂದೆ ಸಂಜಯ ಖಾಡೆ ಸಾ||ಅಕಲುಜ ತಾ||ಮಾಳಸಿರಸ ಜಿ||ಸೊಲಾಪೂರ ರವರು  ದಿನಾಂಕ 11/06/2018 ರಂದು ಬೆಳಿಗ್ಗೆ ನಮ್ಮ ಕುಟುಂಬದ ಸದಸ್ಯರು ಹಾಗು ಸಂಬಂದಿಕರಾದ 1) ಪ್ರಶಾಂತ ತಂದೆ ಮದುಕರ ಖಾಡೆ 2) ಮಂಗಲ ಗಂಡ ವಿನಾಯಕ 3)ವೈಶಾಲಿ ಗಂಡ ವಿಷ್ಣು 4) ಮಂಗಲ ಗಂಡ ದೀಲಿಪ 5) ಪದ್ಮಿನಿ ಗಂಡ ಬಲಿರಾವ ಕುಂಬಾರ 6) ವಿಷ್ಣು ತಂದೆ ವಿನಾಯಕ ನಾಗರಗೋಜ ಎಲ್ಲರು ಕೂಡಿ ನಮ್ಮ ಕುಟುಂಬದ ಬುಲೆರೋ  ವಾಹನ ನಂ ಎಮ್ ಹೆಚ್ 11 ಸಿಜಿ-8467 ನೇದ್ದನ್ನು ತಗೆದುಕೊಂಡು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಶ್ರೀ ದತ್ತಾತ್ರೇಯ ಮಹಾರಾಜರ ದರ್ಶನಕ್ಕಾಗಿ ದೇವಲ ಗಾಣಗಾಪೂರಕ್ಕೆ ಬಂದು ದರ್ಶನ ಮಾಡಿ  ಮರಳಿ ನಮ್ಮ ಗ್ರಾಮಕ್ಕೆ ಹೋಗುತಿದ್ದಾಗ ನಮ್ಮ  ವಾಹನದ ಚಾಲಕ ವಿಷ್ಣು ತಂದೆ ವಿನಾಯಕ ರವರು ಚಾಲಾಯಿಸುತಿದ್ದರು ಅಫಜಲಪೂರ ಬಸ ಡಿಪೋ ಹತ್ತಿರ ಇದ್ದಾಗ ನಮ್ಮ ಎದುರಿನಿಂದ ಟ್ಯಾಂಕರ ವಾಹನದ ಚಾಲಕ ಸದರಿ ಟ್ಯಾಂಕರನ್ನು ಅತಿವೇಗ ಹಾಗು ನಿನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ BOLERO ವಾಹನಕ್ಕೆ  ಜೋರಾಗಿ ಡಿಕ್ಕಿ ಪಡಿಸಿದಾಗ ನಮ್ಮ  BOLERO  ವಾಹನದ ಮುಂದಿನ ಭಾಗ ಜಕಂ ಆಗಿ ಒಳಗೆ ಕುಳಿತಿದ್ದ ನನಗೆ ಹಣೆಯ ಬಲಭಾಗಕ್ಕೆ ರಕ್ತಗಾಯವಾಗಿದ್ದು ನನ್ನಂತೆ ಮಂಗಲ ಗಂಡ ದೀಲಿಪ ರವರಿಗೆ ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ ಪದ್ಮಿನಿ ಗಂಡ ಬಲಿರಾವ ಕುಂಬಾರ ರವರಿಗೆ ತಲೆಗೆ ರಕ್ತಗಾಯ ಹೊಟ್ಟೆಗೆ ಗುಪ್ತಗಾಯ ಬಾಯಿ ಜೋರಾಗಿ ಬಡಿದು ಬಾಯಿಯಲ್ಲಿನ 2-3 ಹಲ್ಲುಗಳು ಮುರಿದು ಭಾರಿ ರಕ್ತಗಾಯವಾಗಿರುತ್ತದೆ ಸದರಿ ಟ್ಯಾಂಕರ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ ನಾವು ಟ್ಯಾಂಕರ ವಾಹನದ ನಂಬರ ನೋಡಲಾಗಿ ಎಮ್ ಹೆಚ್-12 ಎಲ್ ಟಿ-7425 ಅಂತ ಇರುತ್ತದೆ. ನಂತರ ನಾವು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಚಿಕಿತ್ಸೆ ಪಡೆಯುತಿದ್ದೇವೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಚಂದ್ರಕಾಂತ ತಂದೆ ಗುಂಡಪ್ಪ ಹಳಕೆ ಸಾ:ಲೇಂಗಟಿ ಇವರು ಈಗ ಮೂರು ವರ್ಷಗಳ ಹಿಂದೆ ನಮ್ಮೂರಿನ  ಶೇಖಪ್ಪ ತಂದೆ ಮಾಹಾರುದ್ರಪ್ಪ ಭೂತೆ, ಇವರ ಮಗಳ ಮದುವೆ ಕಾಲಕ್ಕೆ ಒಂದು ಲಕ್ಷ ರೂಪಾಯಿ ಕೊಟ್ಟಿದ್ದು ಸದರಿ ಹಣ ವಾಪಸ್ಸು ಕೊಡುವರೆಗೆ ಶೇಖಪ್ಪ ಈತನ ಹೊಲ ಸರ್ವೇ ನಂ: 13ರಲ್ಲಿಯ ಒಂದವರೆ ಎಕರೆ ಜಮೀನು ನಾನು ಉಪಭೋಗ ಮಾಡಬೇಕೆಂದು ಮಾತುಕತೆ ಮಾಡಿ ಹಣ ಕೊಟ್ಟಿರುತ್ತೇನೆ ಆದರೆ ಶೇಖಪ್ಪ ಇವರು ನಮ್ಮ ಹಣ ನಮಗೆ ವಾಪಸ್ಸ ಕೊಡದೆ ಸದರಿ ಹೊಲವನ್ನು ತನ್ನ ಕಬ್ಜೆಗೆ ಬಿಟ್ಟು ಕೊಡು ಎಂದು ನನ್ನೊಂದಿಗೆ ಆಗಾಗ ತಕರಾರರು ಮಾಡುತ್ತಾ ಬಂದಿದ್ದು ದಿನಾಂಕ:10/06/2018 ರಂದು ಸದರಿ ಶೇಖಪ್ಪ ಇವರು ನನಗೆ ಕಬ್ಜೆ ಕೊಟ್ಟ ಹೊಲದಲ್ಲಿ ತಾವು ಬಿತ್ತನೆ ಮಾಡುತ್ತಿರುವ ವಿಷಯ ನನಗೆ ಗೊತ್ತಾಗಿ ನಾನು ಮತ್ತು ನಮ್ಮ ಸಂಬಂಧಿಕರಾದ ವಿಠಲ್ ತಂದೆ ಪೀರಪ್ಪ ಅಯ್ಯಪ್ಪಗೋಳ ಇಬ್ಬರು ಕೂಡಿ ಸದರಿ ಹೊಲ ಸರ್ವೇ ನಂ 13 ನೇದ್ದಕ್ಕೆ ಹೋಗಿ ಶೇಖಪ್ಪ ಇವರಿಗೆ ಮಾತುಕತೆ ಪ್ರಕಾರ ಸದರಿ ಹೊಲದಲ್ಲಿ ನಾನು ಬಿತ್ತುತ್ತೇನೆಂದು ಹೇಳುತ್ತಿರುವಾಗ ಶೇಖಪ್ಪ ತಂದೆ ಮಾಹಾರುದ್ರಪ್ಪ ಭೂತೆ, ಮಾಹಾರುದ್ರಪ್ಪ ತಂದೆ ಶೇಖಪ್ಪ ಭೂತೆ, ನಾಗಮ್ಮ ಗಂಡ ಶೇಖಪ್ಪ ಭೂತೆ ಮತ್ತು ಕಸ್ತೂರಬಾಯಿ ಮಹಾರುದ್ರಪಪ್ ಭೂತೆ ಇವರುಗಳೆಲ್ಲರೂ ಕೂಡಿಕೊಂಡು ಭೋಸಡಿ ಮಗನೆ ಹಾಟ್ಯಾ ಭಾಡು ಎಂದು ಅವಾಚ್ಯವಾಗಿ ಬೈಯುತ್ತಾ ನೆಲಕ್ಕೆ ಹಾಕಿ ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದ್ದಿರುತ್ತಾನೆ. ಅಲ್ಲದೇ ಕಸ್ತೂರಬಾಯಿ ಇವಳು ಕೈಯಿಂದ ಕಲ್ಲು ಹಿಡಿದುಕೊಂಡು ಬಲಗಡೆ ಮಗ್ಗಲಿಗೆ ಗುದ್ದಿದ್ದರಿಂದ ಒಳಪೆಟ್ಟು ಆಗಿದೆ. ಆಷ್ಟರಲ್ಲಿ ಇದ್ದ ನಮ್ಮ ಸಂಬಂದಿಕರಾದ ವಿಠಲ್ ತಂದೆ ಪೀರಪ್ಪ ಅಯ್ಯಪ್ಪಗೋಳ ಇವರು ಜಗಳ ನೋಡಿ ಬಿಡಿಸಿದರು ನಂತರ ನಾಲ್ಕುಜನ ಸೇರಿ ನನಗೆ ಇನ್ನಮುಂದೆ ನೀನು ನಮ್ಮ ಹೊಲದಾಗ ಕಾಲಿಟ್ಟರೇ ನೀನಗೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.          
ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಜಯಮ್ಮ ಗಂಡ ನಾರಾಯಣ ಸಾ: ದುದ್ಯಾಲ್ಹಾವ: ತಿಲಕ ನಗರ ಕಲಬುರಗಿ ಇವರ ಮಗಳಾದ ರಾಗಸುಧಾ ಇವಳಿಗೆ ಕಾನಾಗಡ್ಡಾ ಗ್ರಾಮದ ನನ್ನ ಚಿಕ್ಕಮ್ಮನ ಮಗನಾದ ಸಂತೋಷ ಎಂಬುವವರಿಗೆ 2006 ರಲ್ಲಿ ಮದುವೆ ಮಾಡಿಕೊಟ್ಟಿದ್ದು ನನ್ನ ಮಗಳಿಗೆ ಅವಳ ಗಂಡ ಸಂತೋಷ ಇತನು ಮಕ್ಕಳಾಗಿಲ್ಲಾ ಅಂತಾ ಮತ್ತು 1 ಲಕ್ಷರೂಪಾಯಿ ವರದಕ್ಷಣೆ ಹಣ ತೆಗೆದು ಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ತೊಂದರೆ ಕೊಡುತ್ತಿದ್ದು, ಇವನಿಗೆ ನಾವುಗಳು ಬುದ್ದಿವಾದ ಹೇಳಿದರು ಸಹ ನಮ್ಮ ಅಳಿಯನು ನಮ್ಮ ಮಗಳಿಗೆಹೊಡೆ ಬಡೆ ಮಾಡಿ ತಾಳಿ ಕಿತ್ತಿ ಕೊಂಡು ನಮ್ಮ ಮನೆಯಲ್ಲಿ ಇರಬೇಡಾ ತವರು ಮನೆಗೆ ಹೋಗು ಅಂತಾ 06 ತಿಂಗಳ ಹಿಂದೆ ತವರು ಮನೆಗೆ ಕಳುಹಿಸಿದ್ದು, ನಂತರ ನಾವು ನಮ್ಮ ಮಗಳಿಗೆ ಗಂಡನ ಮನಗೆ ಕರೆದು ಕೊಂಡು ಹೋಗಿ ಪಂಚಾಯತ ಮಾಡಿಬಿಟ್ಟು ಬರಲು ಹೋದಾಗ ಅವಳ ಗಂಡನು ನನಗೆ ಈಗ ಆರಾಮಇರುವದಿಲ್ಲಾ ಎರಡು ತಿಂಗಳಾದ ಮೇಲೆ ಬಂದು ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿದ್ದರಿಂದ ನನ್ನ ಮಗಳಿಗೆ ನಮ್ಮ ಮನೆಯಲ್ಲಿಟ್ಟಿ ಕೊಂಡಿದ್ದು ನನ್ನ ಮಗಳು ದಿನಾಂಕ: 25-07-2017 ರಂದು ಅವಳ ಗಂಡನಿಗೆ ಫೋನಮಾಡಿ ನಾನು ಊರಿಗೆ ಬರುತ್ತಿದ್ದೇನೆ ಅಂತಾ ಹೇಳಿದ್ದು, ಅವನು ನೀನು ಊರಿಗೆ ಬರಬೇಡಾ ಅಲ್ಲಿ ಎಲ್ಲಾದರು ಬಿದ್ದುಸಾಯಿ, ನೀನು ಒಂದು ವೇಳೆ ಊರಿಗೆ ಬಂದರೆ, ನಿಮ್ಮ ಮನೆಯಲ್ಲಿ ಎಲ್ಲರಿಗೆ ಹೊಡೆದು ಖಲಾಸ ಮಾಡುತ್ತೇನೆ ಅಂತಾ ಬೇದರಿಕೆ ಹಾಕಿದ್ದರಿಂದ ನನ್ನ ಮಗಳು ಮಾನಸಿಕ ಮಾಡಿಕೊಂಡು ದಿನಾಂಕ: 25-07-17 ರಂದು ಮದ್ಯಾಹ್ನ ನನ್ನ ಮಗಳು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿ ರೈಲ್ವೆ ಪಟ್ರಿಯಲ್ಲಿ ಬಿದ್ದು ಆತ್ಮ ಹತ್ತೆಮಾಡಿಕೊಂಡಿರುತ್ತಾಳೆ ನನ್ನ ಮಗಳ ಸಾವಿಗೆ ಅವಳ ಗಂಡನ ಮೇಲೆ ಕಾನೂನಿನ ಕ್ರಮಕೈಕೊಳ್ಳ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

11 June 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 10/6/18 ರಂದು ಬೆಳಿಗ್ಗೆ ನಾಗೂರ ತಾಂಡಾದಿಂದ ನಮ್ಮ ಗುತ್ತೆದಾರ ಠಾಕೂರ ಜಾಧವ ಇವರ ಹೇಳಿದ ಪ್ರಕಾರ ಹಾಗರಗಾ ಕ್ರಾಸ ಹತ್ತಿರುವ ಸೈಟಿಗೆ ಛತ್ತು ಹಾಕುವ ಕೂಲಿ ಕೆಲಸಕ್ಕೆ ಶ್ರೀ ಸಂತೋಷ ತಂದೆ ದೇವಿದಾಸ ಜಾಧವ ಸಾ : ನಾಗೂರ ತಾಂಡಾ ರವರು ಮತ್ತು ಕರ್ಣ, ಪೂಜಾ, ಪ್ರಿಯಾಂಕ, ಸವಿತಾ, ಗುರಿಬಾಯಿ, ವಿಕಾಸ ಜಾಧವ ಲಲಿತಾಬಾಯಿ ಇವರನ್ನು ಲಾರಿ KA 27 2694 ಚಾಲಕ ಪ್ರಕಾಶ ತಂದೆ ಶಂಕರ ರಾಠೋಡ ಸಾ: ನಾಗೂರ ತಾಂಡಾ ಇತನು ಕೂಡಿಸಿಕೊಂಡು ಕಲಬುರಗಿ ಕಡೆ ಹೊರಟಿದ್ದು ಮಾಹಾಗಾಂವ ಕ್ರಾಸನಲ್ಲಿ ಜಾಕೀರ, ಶಿವಾನಂದ, ನಾಗೇಶ ಇವರುಗಳು ಲಾರಿಯಲ್ಲಿ ಏರಿ ಕುಳಿತುಕೊಂಡರು. ಅಂಕಲಗಿ  ಕ್ರಾಸನಲ್ಲಿ ಮಂಜುನಾಥ @ ಬಸವರಾಜ  ಇತನು ಏರಿದ್ದು, ಲಾರಿ ಚಾಲಕ ಪ್ರಕಾಶ ರಾಠೋಡ ಇತನು ತನ್ನ ವಶದಲ್ಲಿದ್ದ ಲಾರಿ KA 27 2694 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾ ತಿಡ್ಡಿಯಾಗಿ ನಡೆಸುತ್ತಾ ಬೆಳಗಿನ 09-00 ಗಂಟೆ ಸುಮಾರಿಗೆ ಅವರಾದ (ಬಿ) ಗ್ರಾಮದ ಸೀಮಾಂತರದಲ್ಲಿ ಬರುವ ತೊಗರಿನಾಡು ಎಂದು ಬರೆದ ಬೋರ್ಡ ಹತ್ತಿರ ಬಂದಾಗ ಎದುರುನಿಂದ ಬರುತ್ತಿದ್ದ ಅಂದರೆ ಕಲಬುರಗಿ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣ  ಕಾರ KA  19 MD 3587  ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಲಾರಿ ರೋಡಿನ ಬಲಭಾಗದಲ್ಲಿ ತೆಗ್ಗಿನಲ್ಲಿ ಹೋಗಿ ನಿಂತಿರುತ್ತದೆ. ಇದರಿಂದಾಗಿ ಲಾರಿಯಲ್ಲಿದ್ದ ನನಗೆ ಮತ್ತು ಕರ್ಣ, ಜಾಕೀರ, ಪ್ರಕಾಶ, ವಿಕಾಸ, ನಾಗೇಶ,ಮಂಜುನಾಥ @ ಬಸವರಾಜ, ಶಿವಾನಂದ, ಪೂಜಾ, ಪ್ರಿಯಾಂಕಾ, ಗುರಿಬಾಯಿ, ಸವಿತಾ, ಲಲಿತಾಬಾಯಿ ಇವರುಗಳಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಅವರಲ್ಲಿ ವಿಕಾಸ, ನಾಗೇಶ ಇಬ್ಬರಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಎ.ಎಸ್.ಎಂ. ಆಸ್ಪತ್ರ  ಕಲಬುರಗಿ, ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ, ಯುನೈಟೆಡ ಆಸ್ಪತ್ರೆ ಕಲಬುರಗಿ, ಬಸವೇಶ್ವರ ಆಸ್ಪತ್ರೆ ಕಲಬುರಗಿ ಮೇಲ್ಕಂಡವರು ಉಪಚಾರ ಕುರಿತು ಸೇರಿಕೆಯಾಗಿರುತ್ತಾರೆ. ಲಲಿತಾಬಾಯಿ ಇವಳಿಗೆ ಅಂತಹ ಪೆಟ್ಟಗಾದ ಕಾರಣ ಆಸ್ಪತ್ರೆಗೆ ತೋರಿಸಕೊಂಡಿರುವುದಿಲ್ಲಾ. ಈ ಅಪಘಾತವು ಈ ಮೇಲೆ ಹೇಳಿದಂತೆ ನಮ್ಮ ಲಾರಿ  KA 27 2694  ಚಾಲಕ  ಪ್ರಕಾಶ ತಂದೆ ಶಂಕರ ರಾಠೋಡ ಇತನ ತಪ್ಪಿನಿಂದ ಸಂಭವಿಸಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 11/06/18 ರಂದು ರಾತ್ರಿ 12-15 ಗಂಟೆ ಸುಮಾರಿಗೆ ಯುನೈಟೆಡ ಆಸ್ಪತ್ರೆ ಕಲಬುರಗಿ ಸಿಬ್ಬಂದಿಯವರು ಪೋನ ಮುಖಾಂತರ ವಿಕಾಸ ತಂದೆ ಗೋಪು @ ಗೋಪಾಲ ಜಾಧವ ಸಾ: ನಾಗೂರ ತಾಂಡಾ ಇತನು ಗುಣ ಮುಖ ಹೊಂದದೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರ ಮೇರೆಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀಮತಿ ಪೂಜಾ ಗಂಡ ಸಚಿನ ಚವ್ಹಾಣ ಸಾ: ಕಮಲಾಪೂರ ಚವ್ಹಾಣ ತಾಂಡಾ ತಾ:ಜಿ: ಕಲಬುರಗಿ ಹಾ:ವ ಹನುಮಾನ ನಗರ ತಾಂಡಾ ಕಲಬುರಗಿ ಇವರ ಮದುವೆಯು ಸಚಿನ ತಂದೆ ಸುಭಾಷ ಚವ್ಹಾಣ  ಇವರೊಂದಿಗೆ ಹಿಂದು ಸಂಪ್ರದಾಯದಂತೆ 4 ವರ್ಷ ಕಳೆದಿರುತ್ತವೆ. ಮದುವೆಯಾದಾಗಿನಿಂದ 3 ವರ್ಷಗಳವರೆಗೆ ನನ್ನೊಂದಿಗೆ ಅನೂನ್ಯತೆಯಿಂದ ಇದ್ದ ನನ್ನ ಪತಿ ಇತ್ತಿತ್ತಲಾಗಿ ಸುಮಾರು 1 ವರ್ಷಗಳಿಂದ ನನ್ನ ಪತಿಯವರು ನನ್ನ ಅತ್ತೆಯಾದ 1)ಶ್ರೀಮತಿ ಜಗುಬಾಯಿ ಗಂಡ ಸುಭಾಷ ಚವ್ಹಾಣ 2) ಮಾವನಾದ ಸುಭಾಷ 3) ಮೈದುನಾದ ಸುನೀಲ ತಂದೆ ಸುಭಾಷ ಚವ್ಹಾಣ ಇವರೆಲ್ಲರೂ ಕುಮ್ಮಕಿನಿಂದಲೇ ನನ್ನ ತವರು ಮನೆಯಿಂದ 4 ತೊಲೆ ಬಂಗಾರ ಹಾಗೂ 1 ಲಕ್ಷ ಹಣ ತೆಎಗೆದುಕೊಂಡು ಬಾ ನನ್ನ ಪತಿ ಹಾಗೂ ಅತ್ತೆ ಮೈದು ಎಲ್ಲರೂ ಕಿರುಕುಳ ನೀಡುತ್ತಿರುವ ಪ್ರಯುಕ್ತ  ನಾನು ನನ್ನ ತವರು ಮನೆಯಾದ ಹನುಮಾನ ನಗರ ತಾಂಡಾ ತವರು ಮನೆಯಲ್ಲಿ ಸುಮಾರು 1 ವರ್ಷದಿಂದ ವಾಸ ಮಾಡುತ್ತಿದ್ದೇನೆ ಈ ಹಿಂದೆ ನನ್ನ ಪತಿಯವರು ಹೊರಗಿನ ದೇಶಕ್ಕೆ ಹೋಗುವುದು ಇದೆ ಮೇಡಿಕಲ ಚೆಕ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ 1 ವರ್ಷ ಕಳೆದರು ಸಹ ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ ಸದರಿ ನನ್ನ ಪತಿಯವರ ಮೋಬೈಲ ನಂ 9945333507 ಗೆ ಕರೆ ಮಾಡಿ ನನ್ನ ತವರು ಮನಗೆ ಬಂದು ನನಗೆ ಕರೆದುಕೊಂಡು ಹೋಗು ಎಂದು ಎಷ್ಟೊಂದು ಸಹ ವಿನಂತಿ ಮಾಡಿಕೊಂಡಿದರು ಸಹ ಮನೆಗೆ ಬರುವುದಿಲ್ಲ ನೀ ಏನು  ಮಾಡುತ್ತಿ ಮಾಡಿಕೊ ಎಂದು ಹೇಳುತ್ತಿದ್ದಾರೆ. ಮಾನ್ಯರೇ ನನ್ನ ತಂದೆ ತಾಯಿ ವಯೋವೃದ್ದರಾಗಿದ್ದು ಕೂಲಿ ಕೆಲಸ ಮಾಡಿ ತಮ್ಮ ಉಪಜೀವನ ನಿರ್ವಹಿಸುತ್ತಿದ್ದಾರೆ ಇಂತಹ ಸಂಕಷ್ಟ ಪರಿಸ್ಥಿಯಲ್ಲ 4 ತೊಲೆ ಬಂಗಾರ ಹಾಗೂ 1  ಲಕ್ಷ ಹಣ ಕೊಡಲಾರದಂತಹ ಸಂಕಷ್ಟ ಪರಿಸ್ಥಿಯಲ್ಲಿ ನನ್ನ ತಂದ ತಾಯಿಯವರು ಇರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀಮತಿ ಗೀತಾ ಗಂಡ ವೆಂಕಟೇಶ ತಳವಾರವ ಸಾ: ಗುಂಡಳ್ಳಿ(ಬಿ) ತಾ :   ಸೇಡಂ ಇವರು ಸುಮಾರು 6 ವರ್ಷ 11 ತಿಂಗಳ ಹಿಂದೆ ಅಂದರೆ ದಿನಾಂಕ 08-06-2011 ರಂದು ಗುಂಡಳ್ಳಿ(ಬಿ) ಗ್ರಾಮದ ವೆಂಕಟೇಶ ತಂದೆ ಅನಂತಪ್ಪ ಇವರೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಈಗ ನನಗೆ 6 ವರ್ಷದ ಬಾನುಪ್ರಸಾದ ಅಂತಾ ಗಂಡು ಮಗ ಹಾಗು 3 ವರ್ಷದ ದಿವ್ಯಾ ಅಂತಾ ಮಗಳಿದ್ದು. ಮದುವೆಯಾಗಿ ಸುಮಾರು 2-3 ವರ್ಷದವರೆಗೆ ನನ್ನ ಗಂಡನು ನನಗೆ ಚೆನ್ನಾಗಿ ನೋಡಿಕೊಂಡಿದ್ದು ನಂತರ ನನ್ನ ಗಂಡನು ನನಗೆ ದಿನಾಲು ಮದ್ಯ ಕುಡಿದು ಬಂದು ನಿಮ್ಮ ತಂದೆ ಮದುವೆಯಲ್ಲಿ ನನಗೆ ಎರಡವರೆ ತೊಲೆ ಬಂಗಾರ 35,000/- ಸಾವಿರ ರೂ ಕೊಟ್ಟಿದ್ದು ನನಗೆ ಕಡಿಮೆ ವರದಕ್ಷಿಣೆಕೊಟ್ಟಿದ್ದು, ನೀನು ನಿಮ್ಮ ತಂದಗೆ ಹೇಳಿ ಇನ್ನು 1 ತೊಲೆ ಬಂಗಾರ ಮತ್ತು 20,000 ರೂಪಾಯಿ ಹಣವನ್ನು ತೆಗೆದುಕೊಂಡು ಬಾ ಅಂತಾ ನನಗೆ ದಿನಾಲು ಹೊಡೆ ಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನಿಡುತ್ತಿದ್ದರಿಂದ ನಾನು ನಮ್ಮ ತವರು ಮನೆಯಲ್ಲಿ ಹೇಳಿದ್ದು, ಅವರು ಹಲವುಬಾರಿ ನನ್ನ ಗಂಡನಿಗೆ ಬುದ್ದಿವಾದ ಹೇಳಿದ್ದು, ಇಂದಲ್ಲಾ ನಾಳೆ ಸರಿಹೋಗಬಹುದು ಅಂತಾ ನಾನು ಸುಮ್ಮನಾಗಿದ್ದೇನು. ದಿನಾಂಕ: 21-05-2018 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನಾದ ವೆಂಕಟೇಶ ಇವರು ಹೊರಗಿನಿಂದ ಮದ್ಯ ಕುಡಿದು ಮನೆಗೆ ಬಂದು ನನಗೆ ಏರಂಡಿ ಏನುಮಾಡುತ್ತಿಯಾ ಮೊನ್ನೆ ನಿಮ್ಮ ತಂದೆ ನನಗೆ ದೌಲತಾಬಾದ ಮದುವೆಗೆ ಹೋದಾಗ ಬೈದು ನನ್ನ ಮರಯಾದೆ ಹಾಳು ಮಾಡಿದ್ದಾನೆ ನಿಮ್ಮ ತಂದೆಗೆ ಬಹಳಸೊಕ್ಕು ಬಂದಿದೆ ನಿನು ಅಲ್ಲೆ ಇದ್ದರೂ ನಿಮ್ಮ ತಂದೆಗೆ ಏನು ಹೇಳಲಿಲ್ಲ ರಂಡಿ ಅಂತಾ ನನಗೆ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಾ ಬಂದಾಗ ನಾನು ಯಾಕೆ ಸುಮ್ಮ ನೆಬೈಯುತ್ತಿರಿ ಅವರು ನಮಗೆ ಬುದ್ದಿಹೇಳಿರುತ್ತಾರೆ ಅಂತಾ ಹೇಳುತ್ತಿದ್ದಾಗ ಏರಂಡಿ ನೀನು ಅವರ ಪರವಾಗಿ ಮಾತನಾಡುತ್ತಿಯಾ ನಿನಗೆ ಬಹಳ ಸೊಕ್ಕು ಇದೆ ಹೋಗು ನೀನು ನಿಮ್ಮ ತಂದೆಯ ಮನೆಗೆ ಹೋಗಿ ನನಗೆ ನಿಮ್ಮ ತಂದೆ ನನಗೆ ಮದುವೆಯಲ್ಲಿ ವರದಕ್ಷಿಣೆ ಕಡಿಮೆ ಕೊಟ್ಟಿರುತ್ತಾನೆ ನೀನು ಹೋಗಿ ಇನ್ನು 1 ತೊಲೆ ಬಂಗಾರ ಮತ್ತು 20,000 ರುಪಾಯಿ ಹಣವನ್ನು ತೆಗೆದುಕೊಂಡುಬಾ ಅಂತಾ ನನಗೆ ಕೈಯಿಂದ ಮೈಕೈಗೆ ಹೊಡೆಬಡೆ ಮಾಡುತ್ತಿದ್ದಾಗ ನಮ್ಮ ಭಾವನ ಹೆಂಡತಿಯಾದ ಸವಿತಾ ಇವಳು ಬಂದು ಬಿಡಿಸಿದ್ದು ನಂತರ ಸುಮ್ಮಾನಗಿದ್ದು ನಂತರ ಸಾಯಕಾಂಲ 05-30 ಗಂಟೆಯ ಸುಮಾರಿಗೆ ಹೊರಗಿನಿಂದ ಬಂದು ನನಗೆ ನೋಡಿ ಏರಂಡಿ ನೀನು ಇನ್ನು ಇಲ್ಲೆಇದ್ದಿಯಾ ನಿನು ನಿಮ್ಮ ತಂದೆಯ ಮೆನೆಗೆ ಹೋಗಿ ಹಣ ಬಂಗಾರ ತೆಗೆದುಕೋಂಡುಬಾ ಅಂತಾ ಹೇಳಿದ್ದರು ಹೋಗಿಲ್ಲವಲ್ಲ ನೀನು ಅಂತಾ ಬೈಯುತ್ತಿದ್ದಾಗ, ನಾನು ಯಾಕೆಹೋಗಬೇಕು ಅಂತಾ ಹೇಳಿದ್ದಕ್ಕೆ, ನನ್ನ ಗಂಡನು ಬೊಸಡಿ ನೀನು ನನಗೆ ಎದುರು ಮಾತಾಡುತ್ತಿಯಾ ಅಂತಾ ನನಗೆ ಅಲ್ಲೆ ಮನೆಯಲ್ಲಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಮೈಕೈಗೆ ಹಾಗು ಬಲಗಣ್ಣಿನ ಕೆಳಗಡೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯಪಡಿಸಿದ್ದು,  ನಂತರ ನಾನು ಚಿರಾಡುವ ಸಪ್ಪಳ ಕೇಳಿ ನಮ್ಮ ಪಕ್ಕದ ಮನೆಯವರಾದ ಮೈಪಾಲ ಹಾಗು ಮಾಧವರೆಡ್ಡಿ ಇವರುಗಳು ಬಂದು ನನಗೆ ಹೊಡೆಬಡೆಮಾಡುವುದನ್ನು ಬಿಡಿಸಿಕೊಂಡಿದ್ದು ಇರುತ್ತದೆ. ನಂತರ ನಾನು ಸ್ವಲ್ಪ ಸಮಯದ ನಂತರ ನಮ್ಮ ತಂದಗೆ ಪೋನ ಮಾಡಿ ವಿಷಯ ತಿಳಿಸಿದಾಗ ನಮ್ಮ ತಂದೆ ಹಾಗು ನಮ್ಮ ಅಣ್ಣನಾದ ನರೇಶ ಇವರು ನನ್ನ ಗಂಡನ ಮನಗೆ ಬಂದು ನನಗೆ ವಿಚಾರಿಸಿ ನನಗೆ ಉಪಚಾರ ಕುರಿತು ಮುಧೋಳ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ನನ್ನ ಗಂಡನು ನಮ್ಮ ತಂದೆ ಮತ್ತು ಅಣ್ಣನಿಗೆ ಏಬೋಸುಡೀಮಕ್ಕಳ್ಯಾ ನಿಮ್ಮ ಮಗಳಿಗೆ ಮತ್ತೆ ವಾಪಾಸ ನಮ್ಮ ಮನೆಗೆ ಕರೆದುಕೊಂಡು ಬಂದರೇ ನಿಮ್ಮನ್ನು ಅವತ್ತೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 June 2018

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀ  ಮಹೇಶ ತಂದೆ ಕಲ್ಯಾಣಿ ಮಾನಕರ  ಸಾ- ತಡಕಲ ಗ್ರಾಮ ರವರು ದಿನಾಂಕ 08-06-2018 ರಂದು ರಾತ್ರಿ 10 ಗಂಟೆಯ ಸುಮಯದಲ್ಲಿ ನಾನು ನಮ್ಮ ಗ್ರಾಮದ ಅಂಬೆಡ್ಕರ ಸರ್ಕಲ  ಹತ್ತಿರ ಆಳಂದ ದಿಂದ ಬಂದು ನಿಂತಿರುವಾಗ ರಾಜಕೀಯ ವೈಶಮ್ಯ ಇಟ್ಟುಕೊಂಡು ಒಮ್ಮಿಂದೊಮ್ಮಲೆ ನಮ್ಮ ಗ್ರಾಮದ ಶರಣಬಸಪ್ಪಾ ತಂದೆ ನಾಗಪ್ಪಾ ಜಮಾದಾರ  ಅಲಿಯಾಸ್ ದಿಪು  ಹಾಗು ರಾಜೇಂದ್ರ ತಂದೆ ಅಂಬಾರಾಯ  ಜಮಾದಾರ ಎಕಾಏಕಿ ರಾಜೇಂದ್ರ ಅವರು ಕೈಯಲ್ಲಿ ಕೊಡಲಿ, ಶರಣಬಸಪ್ಪನ ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಏಕಾಏಕಿ  ನನ್ನ ಮೇಲೆ ಹಲ್ಲೆ ನಡೆಸಿದರು. ರಾಜೇಂದ್ರನು ತನ್ನ ಕೈಯಲ್ಲಿದ್ದ ಕೊಡಲಿಯಿಂದ  ಹೊಲೆಯಾ ಸುಳೆ ಮಗನೇ  ಈ ಸಲ ರಾಜಕೀಯ ಮಾಡಿದ್ದಿ, ಮುಂದಿನ  ಸಲ ರಾಜಿಕೀಯ ಮಾಡಬಾರದು ಎಂದು ಹೇಳಿ ಬಲ ತಲೆಯ ಮೇಲೆ ಹೊಡೆದನು. ಆಗ ರಕ್ತ ಸ್ರಾವ ಆಯ್ತು . ಆಗ ಶರಣಬಸಪ್ಪಾ ಬಡಿಗೆಯಿಂದ ನನ್ನ ಮೇಲೆ ಬೆನ್ನು ಮತ್ತು ಹೊಟ್ಟೆಯ ಮೇಲೆ ಹಲ್ಲೆ ಮಾಡಿದನು. ಈಗ ನಮ್ಮ ಮಾಲಿಕರು ಆರಿಸಿ ಬಂದಾರ್ ಖಲಾಸ ಮಾಡ್ರಿ ರಂಡಿ ಮಗನಿಗೆ ಎಂದು ಹೇಳಿ ಬೈಯುತ್ತಿದ್ದರು. ಮತ್ತು ಮನಬಂದಂತೆ ಹೊಡೆದರು. ಈ ರಂಡಿ ಮಗನಿಗೆ  ಇವತ್ತು ಬಿಡಬ್ಯಾರದು ಎಂದು ಬೈಯುತ್ತಿದ್ದರು. ಆಗ ನಾನು ಚಿರಾಡ ತೊಡಗಿದ್ದೆ ಆಗ ನಮ್ಮ ಗ್ರಾಮದ ರವೀಂದ್ರ ತಂದೆ ಶರಣಪ್ಪ ಮಸನ ,  ಚಿದಾನಂದ ತಂದೆ ನಾಗಪ್ಪ ತಡಕಲ ಅವರು ಬಂದುದ್ದನ್ನು ನೋಡಿ ಅವರು ಕೃತ್ಯಕ್ಕೆ ಬಳಸಿದ ವಸ್ತುಗಳು(ಮಾರಕಾಸ್ತ್ರ) ತೆಗೆದುಕೊಂಡು ಓಡಿ ಹೊದರು. ನಂತರ ನನಗೆ ಗ್ರಾಮದ ಈರಣ್ಣಾ ಮಾಳಗೆ ನನ್ನ ತಮ್ಮನಾದ ಆಕಾಶ ತಂದೆ ಕಲ್ಯಾಣಿ ಕೂಡಿಕೊಂಡು ಆಳಂದ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗುಲಬರ್ಗಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ಸೆರ್ಪಡೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.