POLICE BHAVAN KALABURAGI

POLICE BHAVAN KALABURAGI

01 September 2015

Kalaburagi District Reported Crimes.

ಚೌಕ ಠಾಣೆ : ದಿನಾಂಕ 31/08/2015 ರಂದು 7 ಪಿ.ಎಂ, ಕ್ಕೆ ಶ್ರೀ ಶಿವಾನಂದ ಕಟ್ಟಿ ತಂದೆ ಸಿದ್ದಲಿಂಗಪ್ಪ  ಕಟ್ಟಿ ವಯಃ 70 ವರ್ಷ ಜಾಃ ಗಂಗಾಮಾತ(ಕಬ್ಬೇರ)  ಉಃ ನಿವೃತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸಾಃ ಮನೆ ನಂ 9-587/24/109 ಅಕ್ಕ ಮಹಾದೇವಿ ಗುಡಿ ಹತ್ತಿರ ಗಂಧಿಗುಡಿ ಲೇಔಟ ಕಲಬುರಗಿ ತಮ್ಮಲ್ಲಿ ವಿನಂತಿಸಿ ಕೋಳ್ಳುವದೆನೆಂದರೆ ನಾನು ನಿವೃತ ನ್ಯಾಯಾಧೀಶನಾಗಿದ್ದು ಸದ್ಯ ನಿವೃತಿ ಜೀವನ ನಡೆಸುತ್ತಿದೆನೆ. ಹೀಗಿದ್ದು ನಾನು ಕುಟುಂಬದವರು ನಿಶ್ಚಯಿಸಿದಂತೆ ನಮ್ಮ ಮನೆಯ ದೇವರಾದ ಗಜೇಂದ್ರಗಡದ ಕಾಲಕಾಳಕೇಶ್ವರ ದೇವರ ಹರಕೆ ಇರುವದರಿಂದ ನಾವು ದೇವರ ದರ್ಶನ ಕುರಿತು ನಾನು ಮತ್ತು ನಮ್ಮ ಕುಟುಂಬದ ಸದಸ್ಯರೆಲ್ಲರು ಸೇರಿಕೊಂಡು  ದಿನಾಂಕಃ 28.08.2015 ರಂದು ಬೆಳಿಗ್ಗೆ 9.15 ಗಂಟೆಗೆ ನಮ್ಮ ಮನೆಯ ಮುಖ್ಯ ದ್ವಾರಕ್ಕೆ ಇನ್‌ರ ಲಾಕ (ಸೆಂಟ್ರ್‌ಲಾಕ) ಹಾಕಿಕೊಂಡು ದೇವರ ದರ್ಶನ ಕುರಿತು ಗಜೇಂದ್ರಗಡಕ್ಕೆ  ಹೋಗಿದ್ದು ಮನೆಯಲ್ಲಿ ಯಾರು ಇರಲ್ಲಿಲ. ದೇವರ ದರ್ಶನ ಮಾಡಿಕೊಂಡು ಮರಳಿ ದಿನಾಂಕಃ 29.08.2015 ರಂದು ರಾತ್ರಿ 10.10 ಪಿಎಮ್‌ಕ್ಕೆ ಮನೆಗೆ ಮರಳಿ ಬಂದು ನೋಡಿದ್ದಾಗ ನಾವು ಹಾಕಿರುವ ಮುಖ್ಯ ದ್ವಾರದ ಬಾಗಿಲಗೆ ಸೆಂಟರ್‌ ಲಾಕ ತೆಗೆದಾಗ ಅದು ತೆಗೆಯಲ್ಲಿಲ.ಒಳಗಿನಿಂದ ಕೊಂಡಿ ಹಾಕಿದಂತೆ ಕಂಡುಬಂದಿದ್ದು  ಇದರಿಂದ ಗಾಬರಿಯಾಗಿ ನಾವು ನಮ್ಮ ಮನೆಯ ಬಾಲಕೋನಿ ನೋಡಲು ಬಾಗಿಲು ತೆರೆದಂತೆ ಕಂಡು ಬಂದಿದ್ದು ನಾನು ನಮ್ಮ ಕಾರಿನ ಡ್ರೈವನಾದ ಸದಾಂ ಇತನಿಗೆ  ಬಾಲಕೋನಿ ಮುಖಾಂತರ ಮೇಲೆ ಏರಿಸಿ  ಆತನು ಒಳಗೆ ಬಂದು ಬಾಗಿಲದ ಲಾಕ ತೆಗೆದಿದ್ದು ನಂತರ ನಾವೇಲ್ಲರೂ ಒಳಗಡೆ ಬಂದು ನೋಡಿದ್ದಾಗ ನಮ್ಮ ಮನೆಯ  ಮೇಲಿನ ವೆಂಟಲೆಟರ್‌ದ ಗ್ಲಾಸ್‌ ಒಡೆದು ಮನೆಯ ಒಳಗಡೆ ಎಲ್ಲಾ ಕಡೆ  ಗ್ಲಾಸಿನ ಒಡೆದ ಚೂರುಗಳು ಬಿದ್ದಿದ್ದು ಮತ್ತು ಮನೆಯಲ್ಲಿದ್ದ  ಸಾಮಾನಗಳು ಸಹ ಚಲಾಪಿಲ್ಲೇ ಆಗಿ ಬಿದಿದ್ದು ಆಗ ನಾವು ಗಾಬರಿಗೊಂಡು ಎಲ್ಲಾ ರೋಂಗಳಲ್ಲಿ ಒಳಗಡೆ ಹೋಗಿ ನೋಡಿದಾಗ ನಮ್ಮ ಮಗ ಸಿದ್ದಣ ಕಟ್ಟಿ ಮತ್ತು ಸೋಸೆ ಯಶೋದಾ ಕಟ್ಟಿ ಇವರು ಮಲಗುವ ಬೆಡ್‌ರೋಂ ಕೋಣೆಯಲ್ಲಿಯ ಅಲಮಾರಿಯು ಸಹ ತೆಗದಿದ್ದು ಸಾಮಾನಗಳು ಚಲ್ಲಾಪಿಲ್ಲೇಯಾಗಿ ಬಿದಿದ್ದು ಯಾರೋ ಕಳ್ಳರು ನಾವು ಮನೆಯಲ್ಲಿ ಇರದ ವೇಳೆಯಲ್ಲಿ ನಮ್ಮ ಮನೆಯ ವೆಂಟಿಲೆಟ್‌ರ ಗ್ಲಾಸ್‌ ಒಡೆದು ವೆಂಟಿಲೆಟ್‌‌ರ ಮುಖಾಂತರ ಒಳಗಡೆ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರಿ ಚಾವಿಯನ್ನು ತೆಗೆದುಕೊಂಡು ಅಲಮಾರಿಯನ್ನು ತೆರೆದು ಅಲಮಾರಿಯಲ್ಲಿಟ್ಟಿದ 1) ಬಂಗಾರದ ಪಾಟ್ಲಿ 60 ಗ್ರಾಂ ಅಃಕಿಃ 84,000/-, 2) ಬಂಗಾರದ ಲಾಕೇಟ್‌ 06 ಗ್ರಾಂ ಅಃಕಿಃ 9000/-, 3) ಕರೀಮಣಿಯ ತಾಳಿ 2 ಗ್ರಾಂ  ಅಃಕಿಃ 2000/- 4) ಬಂಗಾರದ ಸಣ್ಣ ಗುಂಡುಗಳು 5 ಗ್ರಾಂ ಅಃಕಿಃ 7000/-, 5) ಬಂಗಾರದ ಉಂಗೂರ ಹರಲಿನದ್ದು 3 ಗ್ರಾಂ ಅಃಕಿಃ 3000/-, 6) ಬಂಗಾರದ ಉಂಗೂರ 4 ಗ್ರಾಂ ಅಃಕಿಃ 4000/-, 7) ಬೆಳ್ಳಿಯ  ಮಕ್ಕಳ ಕಾಲುಗಡಗ್‌ 50ಗ್ರಾಂ ಅಃಕಿಃ 2500/-, 8) ಬೆಳ್ಳಿಯ ಕಾಲು ಚೈನ್‌ 50 ಗ್ರಾಂ ಅಃಕಿಃ2500/-, 9) ಬೆಳ್ಳಿಯ ಕಾಲು ಚೈನ್‌ 60 ಗ್ರಾಂ ಅಃಕಿಃ 3000/-, 10) ಬೆಳ್ಳಿಯ ಕಾಲೂಂಗರ 20 ಗ್ರಾಂ  ಅಃಕಿಃ 1000/-, ಬೆಳ್ಳಿಯ ಕಾಲೂಂಗರ 21 ಗ್ರಾಂ ಅಃಕಿಃ 1000/- ಹೀಗೇ ಒಟ್ಟು 80 ಗ್ರಾಂ ಬಂಗರಾದ ಆಭರನಗಳು ಅಃಕಿಃ 1,09,000/-, ಮತ್ತು 201 ಗ್ರಾಂ ಬೆಳ್ಳಿಯ ಸಾಮಾನಗಳು ಅಃಕಿಃ 10,000/- ಹೀಗೆ ಒಟ್ಟು 1,19,000 ಬೆಲೆಯುಳ್ಳ ಸಾಮಾನಗಳು ಅಲಮಾರಿಯಲ್ಲಿಟ್ಟಿದ್ದು ಅವು ಇರಲ್ಲಿಲ ಕಳುವು  ಮಾಡಿಕೊಂಡು ಹೋಗಿದ್ದು ಇರುತ್ತದೆ. ದಿನಾಂಕಃ 28.08.2015 ರ 9.15 ಎಎಮ್‌ ದಿಂದ ದಿನಾಂಕಃ 29.08.2015 ರ ರಾತ್ರಿ  10.10 ಪಿಎಮ್‌ದ ಮದ್ಯದ ಅವದಿಯಲ್ಲಿ ನಾವು ದೇವರ ದರ್ಶನಕ್ಕೆ ಹೋದ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ವೆಂಟಿಲೆಟ್ಟರ ಖಿಡಕಿಯ ಗ್ಲಾಸ್‌ ಒಡೆದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿರುವ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು  ಕಳ್ಳತನ ಮಾಡಿಕೊಂಡು ಹೋಗಿದ್ದು ಈ  ಬಗ್ಗೆ  ನನ್ನ ಸೋಸೆ ಮತ್ತು ಮೊಮ್ಮಗಳಿಗೆ ಮೈಯಲ್ಲಿ ಆರಾಮ ಇಲ್ಲದೆ ಇರುವದರಿಂದ ಅವರಿಗೆ ಆಸ್ಪತ್ರೆಯಲ್ಲಿ ದಾಖಲ ಮಾಡಿ ಉಪಚಾರ ಪಡಿಸಿ ಅವರುನ್ನು  ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ಮನೆಗೆ ತಂದು ಎಲ್ಲಾ ಸಾಮಾನಗಳನ್ನು ನನ್ನ ಸೋಸೆಯಿಂದ ಪರಿಶೀಲನೆ ಮಾಡಿಸಿ  ಇಂದು ಠಾಣೆಗೆ ಬಂದು  ಫಿರ್ಯಾದಿ ಕೊಡಲು ತಡವಾಗಿರುತ್ತದೆ.  ಕಾರಣ ಕಳ್ಳುವಾದ ನನ್ನ ಬಂಗಾರದ  ಮತ್ತು ಬೆಳ್ಳಿಯ  ಸಾಮಾನಗಳುನ್ನು  ಪತ್ತೆ ಮಾಡಿ ಕಳ್ಳುವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಲು ವಿನಂತಿ ಅದೆ. ಅಂತಾ ವಗೈರೆ ಪಿರ್ಯಾದಿಯ ಸಾರಾಂಶದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ. 
ರಾಘವೇಂದ್ರ ನಗರ ಠಾಣೆ : ದಿನಾಂಕ 31/08/15 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿ ಶ್ರೀಮತಿ ನರಸುಬಾಯಿ ಗಂಡ ಸಿದ್ರಾಮಪ್ಪ ದಾಮಜಿಗರ ವ||58 ಸಾ|| ಪ್ಲಾಟ ನಂ 40 ಉದನೂರ ಲೇಔಟ ಕಲಬುರಗಿರವರು ಠಾಣೆಗೆ ಹಾಜರಾಗಿ ಒಂದು ಲೀಖಿತ ದೂರು ಸಲ್ಲಿಸಿದ್ದು ಅದರ ಸಾರಂಶವೆನಂದರೆ ಇಂದು ದಿ||31/08/15 ರಂದು ಸಾಯಂಕಾಲ 7.30 ಗಂಟೆಯ ಸೂಮಾರಿಗೆ ನಾನು ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ದರ್ಶನ ಮಾಡುತ್ತಿರುವಾಗ ಅಲ್ಲಿ ಭಕ್ತಾಧಿಗಳು ಬಹಳಷ್ಟು ಇದ್ದು ನನ್ನ ಕೊರಳಲ್ಲಿದ್ದ 8 ಗ್ರಾಂ ಬಂಗಾರದ ಮಂಗಳ ಸೂತ್ರ ಅದರ ಅ||ಕಿ|| 24000 ರೂ ಬೆಲೆಬಾಳುವುದು ಯಾರೊ ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿಕೊಡಬೇಕು ಅಂತಾ ಪಿರ್ಯಾದಿಯ ದೂರು ಇದ್ದು ದೂರಿನ ಸಾರಂಶದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. 

31 August 2015

Kalaburagi District Reported Crimes.

ಜೇವರ್ಗಿ ಠಾಣೆ  : ದಿನಾಂಕ: 29.08.2015 ರಂದು 21:35 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ “ ದಿನಾಂಕ 28.08.2015 ರಂದು ಸಾಯಂಕಾಲ 06:00 ಗಂಟೆಗೆ  ಕಟ್ಟಿ ಸಂಗಾವಿ ಗ್ರಾಮದ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ಆರೋಪಿತರೆಲ್ಲರು ಕೂಡಿಕೊಂಡು ಬಂದು ನನ್ನ ಅಣ್ಣನ ಹೆಂಡತಿ ರತ್ನಮ್ಮ ಇವಳ ಸಂಗಡ ಮಲ್ಲಪ್ಪ ಹೆಳೂರ ಈತನು ಸಲುಗೆಯಿಂದ ಮಾತನಾಡಿದ ವಿಷಯ ನಮಗೆ ಕೇಳಿರುತ್ತಿ ಅಂತಾ ಆರೋಪಿತರು ವೈಮನಸ್ಸು ಮಾಡಿಕೊಂಡು ನನಗೆ ಮತ್ತು ನನ್ನ ಹೆಂಡತಿ ತುಳಜಾಬಾಯಿಗೆ ಹಾಗು ತಾಯಿ ಕಮಲಾಬಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನಗೆ  ಕಲ್ಲಿನಿಂದ ಹೊಡೆ ಬಡೆ ಮಾಡಿ ನನ್ನ ಹೆಂಡತಿಗೆ ಮತ್ತು ತಾಯಿಗೆ ಕೈ ಹಿಡಿದು ಜಗ್ಗಾಡಿ ಮಾನ ಭಂಗ ಮಾಡಿ ಜಾತಿ ಎತ್ತಿ ಬೈದಿದ್ದುಇರುತ್ತದೆ. ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು” ಅಂತ ಇತ್ಯಾದಿ ವಗೈರೆ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. ಆರೋಪಿತರ ಹೆಸರು, ವಿಳಾಸ  : 1. ಮಲ್ಲಪ್ಪ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ, 2) ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ, 3) ಪಾಪಣ್ಣ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ, 4) ಹಣಮಂತ ತಂದೆ ಭೀಮರಾಯ ಜಾ|| ಹೆಳವರ ಸಾ|| ಕಟ್ಟಿ ಸಂಗಾವಿ, 5) ಭೀಮರಾಯ ತಂದೆ ಯಲ್ಲಪ್ಪ ಜಾ|| ಹೆಳವರ ಸಾ|| ಕಟ್ಟಿ ಸಂಘಾವಿ .                                                                                                                                                       
ಅಶೋಕ ನಗರ ಠಾಣೆ : ದಿನಾಂಕ 30/08/2015 ರಂದು 10:00 ಎಎಮ್ ಕ್ಕೆ ಫಿರ್ಯಾದಿ ನರಸಿಮಲು ತಂದೆ ನರಸಯ್ಯಾ ಕಾವಲೆ ಸಾ: ಅನಂತಪೂರ ಪೋಸ್ಟ ರಿಬ್ಬನಪಲ್ಲಿ ತಾ: ಸೇಡಂ ಜಿ: ಕಲಬುರಗಿ ಇವರು ಕನ್ನಡದಲ್ಲಿ ಬರೆದ ಅರ್ಜಿ ಹಾಜರು ಪಡೆಸಿದ್ದು ತನಗೆ ಪವನಕುಮಾರ ಅಂತಾ 17 ವರ್ಷದ ಮಗನಿದ್ದು ನನ್ನ ಮಗ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಸೇಡಂದಲ್ಲಿಯೇ ವಿದ್ಯಾಬ್ಯಾಸ ಮಾಡಿ ಮುಂದಿನ ವಿದ್ಯಾಬ್ಯಾಸಕ್ಕಾಗಿ ಕಲಬುರಗಿಯ ಸರ್ವಜ್ಞ ಕಾಲೇಜಕ್ಕೆ ನನ್ನ ಮಗ ಪಿಯುಸಿಯ ಪ್ರಥಮ ವರ್ಷ ಪಾಸಾಗಿದ್ದು 2015ನೇ ಸಾಲಿನಲ್ಲಿ ದ್ವೀತಿಯ ವಿದ್ಯಾಬ್ಯಾಸಕ್ಕಾಗಿ ಸರ್ವಜ್ಞ ಶಾಲೆಯಲ್ಲಿ ಮುಂದುವರೆಸಿದ್ದು ನನ್ನ ಮಗನು ವಾಸಕ್ಕಾಗಿ ಅಲ್ಲಿಯೇ ಶಾಲೆಯ ಹತ್ತಿರದ ಸಾಯಿ ಮಂದಿರದ ಹತ್ತಿರ ಚಂದಪ್ಪಾ ಎಂಬುವರ ಮನೆಯಲ್ಲಿ ಭಾಡಿಗೆ ರೂಮ ಮಾಡಿ ಇಟ್ಟಿದ್ದು ಆಗಾಗೆ ರೂಮಿಗೆ ಬಂದು ಹೋಗುತ್ತಿದ್ದು ಅದೆ. ಹೀಗಿದ್ದು ದಿನಾಂಕ 27/08/2015 ರಂದು ನಾನು ಸಾಯಂಕಾಲ 7:30 ಗಂಟೆಗೆ ಕಲಬುರಗಿಯ ನಮ್ಮ ಬಾಡಿಗೆ ಮನೆಗೆ ಬಂದು ನೋಡಲಾಗಿ ನನ್ನ ಮಗ ಪವನಕುಮಾರ ಮನೆಯಲ್ಲಿ ಇದ್ದಿರುವದಿಲ್ಲಾ ಮನೆಗೆ ಕೀಲಿ ಹಾಕಿದ್ದು ನಂತರ ನಾನು ಕಾಲೇಜಕ್ಕೆ ಹೋಗಿ ವಿಚಾರಿಸಿದ್ದು ಇಂದು ಮುಂಜಾನೆ ಕಾಲೇಜದಲ್ಲಿ ಪ್ರಿನ್ಸಿಪಲರು ಗೈರುಹಾಜರಾದ ಬಗ್ಗೆ ಕೇಳಿದ್ದಕ್ಕೆ ಆತನ ಕ್ಲಾಸಿಗೆ ಹಾಜರಾಗದೇ ಎಲ್ಲಿಯೋ ಹೋಗಿರುತ್ತಾನೆ ಅಂತಾ ಆತನ ಗೆಳೆಯರಾದ ಸಚೀನ ಮತ್ತು ವಿಶ್ವಜ್ಯೋತಿ ತಿಳಿಸಿರುತ್ತಾರೆ ನಾನು ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು ನಂತರ ಬೀಗರ ಹತ್ತಿರ ಎಲ್ಲಾ ಗ್ರಾಮಗಳಲ್ಲಿ ವಿಚಾರಿಸಲಾಗಿ ನನ್ನ ಮಗ ಸಿಕ್ಕಿರುವದಿಲ್ಲಾ ನನ್ನ ಮಗನಿಗೆ ಕನ್ನಡ, ತೆಲಗೂ, ಹಿಂದಿ ಮಾತನಾಡಲು ಬರುತ್ತದೆ ತೆಳ್ಳನೆ ಮೈಕಟ್ಟು, ಗೋದಿ ಮೈಬಣ್ಣ, ಹಣೆಯ ಮೇಲೆ ಸುಟ್ಟಗಾಯ ಹೋಗುವಾಗ ಅವನ ಹತ್ತಿರ ಮೊಬಾಯಿಲ ಇದ್ದು ಸಿಮ್ ನಂ. 7676076441 ಅಂತಾ ಇದ್ದು ನನ್ನ ಮಗನಿಗೆ ಯಾರೋ ತೆಗೆದುಕೊಂಡು ಹೋಗಿರುತ್ತಾರೋ ತಾನೇ ಹೋಗಿದ್ದಾನೆ ಗೊತ್ತಿಲ್ಲಾ ಸಂಶಯ ಬರುತ್ತದೆ. ಮಗನಿಗೆ ಪತ್ತೆಹಚ್ಚಿಕೊಡಿಸಬೇಕು ಅಂತಾ ಇತ್ಯಾದಿ ದೂರು ಇರುತ್ತದೆ. ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

ಸ್ಟೇಷನ್ ಬಜಾರ ಠಾಣೆ : ದಿನಾಂಕ.30.08.2015 ರಂದು 12.00 ಗಂಟೆಗೆ ಶ್ರೀ ಗೋಪಾಲ ತಂದೆ ಪಾಂಡು ಚವ್ಹಾಣ ಸಾ|| ಖಣದಾಳ ತಾ|| & ಜಿ|| ಕಲಬುರಗಿ ರವರು ಠಾಣೆಗೆ ಹಾಜರಾಗಿ ಲಿಖೀತ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ. ದಿನಾಂಕ. 04.08.2015 ರಂದು 7.00 ಪಿ.ಎಂಕ್ಕೆ ತನ್ನ ಹಿರೋ ಹೊಂಡಾ ಫ್ಯಾಶನ್ ಪ್ರೋ ಮೊಟಾರ್ ಸೈಕಲ ನಂ. KA-32-Y-7819 ಚಾರ್ಸಿ ನಂ. MBLHA10EWBHG02582, ಇಂಜಿನ್ ನಂ. HA10EDBHF42280 ಅಕಿ|| 35,000/- ರೂ ನೆದ್ದು ರೈಲ್ವೆ ಸ್ಟೇಷನ ಹತ್ತಿರದ ಜನತಾ ಹೊಟೇಲ ಎದುರುಗಡೆ ನಿಲ್ಲುಗಡೆ ಮಾಡಿ ರೈಲ್ವೆ ಸ್ಟೇಷನದಲ್ಲಿ ಹೋಗಿ 7.30 ಪಿ.ಎಂಕ್ಕೆ ಮರಳಿ ಬಂದು ನೋಡಿವಷ್ಟರಲ್ಲಿ ಮೊಟಾರ ಸೈಕಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಹ ಸಿಕ್ಕಿರುವುದಿಲ್ಲ ಅಂತಾ ವಗೈರೆ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

ಸ್ಟೇಷನ್ ಬಜಾರ ಠಾಣೆ : ದಿನಾಂಕ. 30.08.2015 ರಂದು 1.30 ಪಿ.ಎಂಕ್ಕೆ ಶ್ರೀ ಗುರಣ್ಣಾ ಹೆಚ್.ಸಿ 373 ಬ್ರಹ್ಮಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಲಿಖಿತ ಫಿರ್ಯಾಧಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ನಾನು ಸುಮಾರು 3 ವರ್ಷಗಳಿಂದ ವಾರಂಟ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ಹೀಗಿದ್ದು ನಿನ್ನೆ ದಿನಾಂಕ 29/08/2015 ರಂದು ಮಧ್ಯಾಹ್ನ 03:00 ಪಿ.ಎಮ್ ಸುಮಾರಿಗೆ ಎಸ್.ಸಿ ನಂ.221/14 ನೇದ್ದರಲ್ಲಿ ಆರೋಪಿ ಹೀರಾ ಈತನ ಜಾಮೀನುದಾರನಾದ ಶಿವರಾಜ ತಂದೆ ಅಣವೀರಪ್ಪಾ ಕುಮಸಿ ಸಾಃ ಭೀಮಳ್ಳಿ ಈತನಿಗೆ ಮಾನ್ಯ 4 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಹಾಜರು ಪಡಿಸುವ ಕುರಿತು ಕರೆದುಕೊಂಡು ಬಂದು ಕೊರ್ಟ ಆವರಣದಲ್ಲಿ ನಿಲ್ಲಿಸಿ ನಾನು 4 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹೋಗಿ ನಿಂತಾಗ ಸದರಿ ಎಸ್.ಸಿ ನಂಬರ ನೇದ್ದರಲ್ಲಿ ಆರೋಪಿತನಾದ ಸತೀಶ @ ಬಾಂಬೆ ಸತ್ಯಾ ಈತನಿಗು ಮಾನ್ಯ ನ್ಯಾಯಾಲಯದಲ್ಲಿ ಹಾಜರು ಪಡಿಸುವ ಕುರಿತು ಡಿ.ಎ.ಆರ್ ಪೊಲೀಸರು ಕರೆದುಕೊಂಡು ಬಂದಿದ್ದರು. ಆಗ ಸದರಿ ಸತೀಶ @ ಬಾಂಬೆ ಸತ್ಯಾ ಈತನಿಗೆ ನಾನು ಹೀರಾ ಎನ್ನುವವನು ಯಾರು ಅಂತಾ ಕೇಳಿದಾಗ ಸತೀಶ ಈತನು ‘ಏ ಭೋಸಡಿ ಮಗನೆ ನನಗೆ ಏನು ಕೇಳುತ್ತಿ’ ಅಂತಾ ಹೊಡೆಯಲು ಬಂದಾಗ ಬೆಂಗಾವಲು ಕರ್ತವ್ಯಕ್ಕೆ ಬಂದ ಸಿದ್ದಣ್ಣ ಎ.ಹೆಚ್.ಸಿ-77, ಅಶೋಕ ಎ.ಹೆಚ್.ಸಿ-102, ಶ್ರೀಮಂತ ಎ.ಪಿ.ಸಿ-09, ಗುರುನಾಥ ಎ.ಪಿ.ಸಿ-12 ಇವರು ಸದರಿಯವನಿಗೆ ಹಿಡಿದುಕೊಂಡರು. ಆಗ ಬಾಂಬೆ ಸತ್ಯಾ ಇವನು ‘ನೀನು ಹೀರಾ ಈತನ ಬಗ್ಗೆ ನನಗೆ ಇನ್ನೊಮ್ಮೆ ಕೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ’ ಅಂತಾ ಜೀವದ ಬೆದರಿಕೆ ಹಾಕಿ ನನ್ನ ಕರ್ತವ್ಯಕ್ಕೆ ಅಡೆತಡೆ ಮಾಡಿದನು. ನಾನು ವಿಚಾರ ಮಾಡಿ ಇಂದು ತಡವಾಗಿ ಅರ್ಜಿ ಸಲ್ಲಿಸುತ್ತಿದ್ದೆನೆ. ಕಾರಣ ಸತೀಶ @ ಬಾಂಬೆ ಸತ್ಯಾ ಈತನ ಮೇಲೆ ಕಾನೂರು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಅಂತಾ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

30 August 2015

Kalaburagi District Reported Crimes.

ಜೇವರ್ಗಿ ಠಾಣೆ  : ದಿನಾಂಕ: 29.08.2015 ರಂದು 22:45 ಗಂಟೆಗೆ ಫಿರ್ಯಾದಿದಾರನು ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ “ ದಿನಾಂಕ 28.08.2015 ರಂದು ಸಾಯಂಕಾಲ 05:30 ಗಂಟೆಗೆ  ಕಟ್ಟಿ ಸಂಗಾವಿ ಗ್ರಾಮದ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ಆರೋಪಿತರಿಬ್ಬರು ಕೂಡಿಕೊಂಡು ಬಂದು ನನಗೆ ಮತ್ತು ನನ್ನ ತಂದೆಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದ್ದು ಕಾರಣ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು” ಅಂತ ಇತ್ಯಾದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 238/2015 ಕಲಂ 341 323. 324. 504. 506 ಸಂ 34 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
ಜೇವರ್ಗಿ ಠಾಣೆ  : ದಿನಾಂಕ: 29.08.2015 ರಂದು 21:35 ಗಂಟೆಗೆ ಫಿರ್ಯಾದಿದಾರ ಹಣಮಂತ ತಂದೆ ಭೀಮರಯಾ ವಡ್ಡರ್ ಜಾ|| ವಡ್ಡರ್ ಸಾ|| ಕಟ್ಟಿ ಸಂಗಾವಿ  ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ “ ದಿನಾಂಕ 28.08.2015 ರಂದು ಸಾಯಂಕಾಲ 06:00 ಗಂಟೆಗೆ  ಕಟ್ಟಿ ಸಂಗಾವಿ ಗ್ರಾಮದ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ಆರೋಪಿತರೆಲ್ಲರು ಕೂಡಿಕೊಂಡು ಬಂದು ನನಗೆ ಮತ್ತು ನನ್ನ ಹೆಂಡತಿಗೆ ಹಾಗು ತಾಯಿ ಕಮಲಾಬಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ  ಕಲ್ಲಿನಿಂದ ಹೊಡೆ ಬಡೆ ಮಾಡಿ ನನ್ನ ಹೆಂಡತಿಗೆ ಮತ್ತು ತಾಯಿಗೆ ಕೈ ಹಿಡಿದು ಜಗ್ಗಾಡಿ ಮಾನ ಭಂಗ ಮಾಡಿ ಜಾತಿ ಎತ್ತಿ ಬೈದಿದ್ದು ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು” ಅಂತ ಇತ್ಯಾದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 237/2015 ಕಲಂ 143. 147 323. 324. 354. 504. ಸಂ 149 ಐಪಿಸಿ ಮತ್ತು 3 (1) (10) (11) ಎಸ್.ಸಿ/ಎಸ್.ಟಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ಆರೋಪಿತರ ಹೆಸರು, ವಿಳಾಸ  : 1. ಮಲ್ಲಪ್ಪ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ,  2) ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ,  3) ಪಾಪಣ್ಣ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ,  4) ಹಣಮಂತ ತಂದೆ ಭೀಮರಾಯ ಜಾ|| ಹೆಳವರ ಸಾ|| ಕಟ್ಟಿ ಸಂಗಾವಿ,   5) ಭೀಮರಾಯ ತಂದೆ ಯಲ್ಲಪ್ಪ ಜಾ|| ಹೆಳವರ ಸಾ|| ಕಟ್ಟಿ ಸಂಘಾವಿ.     ಗಾಯಾಳು  : 1) ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ, 2) ಭಿಮರಾಯ ತಂದೆ ಯಲ್ಲಪ್ಪ ಜಾ|| ಹೆಳವರ ಸಾ|| ಕಟ್ಟಿ ಸಂಗಾವಿ,  ಆರೋಪಿತರ ಹೆಸರು, ವಿಳಾಸ : 1. ಹಣಮಂತ ತಂದೆ ಭೀಮರಯಾ ವಡ್ಡರ್ ಜಾ|| ವಡ್ಡರ್ ಸಾ|| ಕಟ್ಟಿ ಸಂಗಾವಿ , 2) ತುಳಜಾಬಾಯಿ ಗಂಡ ಹಣಮಂತ ವಡ್ಡರ್ ಸಾ|| ಕಟ್ಟಿ ಸಂಗಾವಿ.
ಜೇವರ್ಗಿ ಠಾಣೆ : ದಿನಾಂಕ: 29.08.2015 ರಂದು 20:15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 29.08.2015 ರಂದು 19:00 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಜೇವರಗಿ ಪಟ್ಟಣದ ಗಂಗಾಮಯಿ ಮಠದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 72.150/-- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿದ್ದು ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಅಂತ ವರದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 236/2015 ಕಲಂ 87 ಕೆ.ಪಿ ಆಕ್ಟ್‌ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.  ಆರೋಪಿತರ ಹೆಸರು, ವಿಳಾಸ  : 1. ರಾಜು ತಂದೆ ಕ್ರೀಷ್ಣಾಜಿ ಸಲಗರ ಸಾ|| ಜೇವರಗಿ,  2) ಮಹಾಂತೇಷ ತಂದೆ ಶರಣಗೌಡ ಆನೂರ ಸಾ|| ಯಾತನೂರ  3) ಹಣಮಂತ ತಂದೆ ಅಶೋಕ ಸಾ|| ಬುದ್ದ ನಗರ ಜೇವರಗಿ,  4) ಪ್ರೇಮನಗೌಡ ತಂದೆ ಚಂದ್ರಶೇಖರ ಕಲ್ಲೂರ ಸಾ|| ನೇಲೋಗಿ,  5) ನಿಂಗಣಗೌಡ ತಂದೆ ಶರಣಗೌಡ ಚೆನ್ನೂರ ಸಾ|| ಚೆನ್ನೂರ,  6) ರೇವಣಸಿದ್ದ ತಂದೆ ಶಾಂತಗೌಡ ಸಾ|| ಚೆನ್ನೂರ,   7) ಸಿದ್ದು ತಂದೆ ಭಗವಂತರಾಯ ಕಡ್ಲೆವಾಡ ಸಾ|| ಕೆಲ್ಲೂರ,  8) ಸಿದ್ದು ತಂದೆ ಶಿವಶರಣಪ್ಪ ಹರವಾಳ ಸಾ|| ಹರವಾಳ  .
ಜೇವರ್ಗಿ  ಠಾಣೆ : ದಿನಾಂಕ 29.08.2015 ರಂದು 17:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ “ದಿನಾಂಕ 24.08.2015 ಮುಂಜಾನೆ 09:00 ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ರಾಸ್ ದಿಂದ ಶಹಾಫುರ ಕಡೆಗೆ ಹೋಗುವ ರಸ್ತೆಯ ಪಕ್ಕ ಇರುವ ಪೆಟ್ರೋಲ್ ಪಂಪ್ ಹತ್ತಿರ ಜೇವರಗಿ ಶಹಾಪುರ ರಸ್ತೆ ಮೇಲೆ ನನ್ನ ತಂದೆ ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32ವಿ7157 ನೇದ್ದರ ಮೇಲೆ ನನ್ನ ಅಜ್ಜಿಯವರು ಕುಳಿತುಕೊಂಡು ಶಹಾಪುರ ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಎದುರಿನಿಂದ ಟ್ರ್ಯಾಕ್ಟರ್ ನಂ ಕೆ.ಎ32ಟಿಎ2623 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನನ್ನ ತಂದೆ ನಡೆಸುತ್ತಿದ್ದ ಮೋಟಾರು ಸೈಕಲ್‌ಗೆ ಎದುರುನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ತಂದೆ ಮತ್ತು ಅಜ್ಜಿಗೆ ಭಾರಿ ಮತ್ತು ಸಾದಾ ಗಾಯಪಡಿಸಿ ಅಪಘಾತದ ನಂತರ ಟ್ರ್ಯಾಕ್ಟರ್ ಅನ್ನು ಸ್ಥಳದಲ್ಲಿ ಯೆ ಬಿಟ್ಟು ಓಡಿ ಹೋಗಿದ್ದು, ನನ್ನ ತಂದೆ ಮತ್ತು ಅಜ್ಜಿಯವರಿಗೆ ಆಸ್ಪತ್ರೆಯಲ್ಲಿ ಉಪಚಾರ ಪಡಿಸಿ ನಂತರ ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಕಾರಣ ಸದರಿ ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ.” ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 235/15 ಕಲಂ 279. 337. 338. ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ರಾಘವೇಂದ್ರ ನಗರ  ಠಾಣೆ : ದಿನಾಂಕ:29/08/2015 ರಂದು ಬೆಳಗ್ಗೆ 9.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶರಣಬಸಪ್ಪಾ ತಂದೆ ಶಂಭುಲಿಂಗಪ್ಪಾ ಹೂಗಾರ ವ:32 ಉ:ಖಾಸಗಿ ಕೆಲಸ ಸಾ:ಮಾತೋಶ್ರೀ ನಿಲಯ ಚಿಂಚೋಳಿ ಲೇ ಔಟ ಆಳಂದ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:28/08/2015 ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿ ಕೊಂಡಾಗ ರಾತ್ರಿ 11.30 ರಿಂದ ಬೆಳಗ್ಗೆ 5.00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಮನೆಯಲ್ಲಿದ್ದ ಅಲಮಾರ ತೆರೆದು ಅದರಲ್ಲಿ ಇದ್ದ ಅರ್ಧತೊಲೆ ಬಂಗಾರದ ಆಭರಣ ಅಂದಾಜು ಕಿಮ್ಮತ್ತು 12000/-ರೂ ಹಾಗೂ ನಗದು ಹಣ 10000/-ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.120/15 ಕಲಂ:457, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

«±Àé«zÁå®AiÀÄ oÁuÉ :  ªÁå¦ÛAiÀÄ°è ¢£ÁAPÀ: 06/08/2014 gÀAzÀÄ ªÀÄzÁåºÀß ªÉüÉAiÀÄ°è ®Qëöä £ÀUÀgÀzÀ°è ªÀÄ£ÉUÉ ©ÃUÀ ºÁQzÀÄÝ AiÀiÁgÉÆÃ PÀ¼ÀîgÀÄ ªÀÄ£ÉAiÀÄ »A¢£À ¨ÁV® Qð ªÀÄÄjzÀÄ ªÀÄ£ÉAiÀÄ M¼ÀUÀqÉ ¥ÀæªÉñÀ ªÀiÁr ªÀÄ£ÉAiÀÄ C®ªÀiÁj ªÀÄÄjzÀÄ ªÀÄ£ÉAiÀİèlÖzÀ 170 UÁæA §AUÁgÀzÀ D¨sÀgÀtUÀ¼ÀÄ ºÁUÀÆ £ÀUÀzÀÄ ºÀt 29000 »ÃUÉ MlÄÖ 5,22,000/- gÀÆ. ¨É¯É¨Á¼ÀĪÀ ªÀiÁ®£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. «±Àé«zÁå®AiÀÄ ¥ÉưøÀ oÁuÉAiÀÄ ªÁå¦ÛAiÀÄ°è ¢£ÁAPÀ: 19/06/2015 gÀAzÀÄ gÁwæ ªÉüÉAiÀÄ°è ¥ÉÆæÃ¥sɸÀgï PÁ¯ÉÆÃ¤ AiÀİè gÁwæ ªÉüÉAiÀÄ°è ªÀÄ£ÉAiÀÄ ¨ÁV®Ä Qð ºÁQzÀÝ£ÀÄß £ÉÆÃr ªÀÄ£ÉAiÀÄ ¨ÁV® Qð ªÀÄÄjzÀÄ ªÀÄ£ÉAiÀÄ C®ªÀiÁjAiÀİè EnÖzÀÝ 5.09 UÁæA §AUÁgÀzÀ ««zsÀ £ÀªÀÄÆ£ÉAiÀÄ §AUÁgÀzÀ D¨sÀgÀtUÀ¼ÀÄ C:Q: 1,47,500/- PÀ¼ÀîvÀ£À ªÀiÁrPÉÆArzÀÄÝ ºÉÆÃVzÀÄÝ EgÀÄvÀÛzÉ ªÉÄîÌAqÀ «µÀAiÀÄzÀ §UÉÎ «±Àé«zÁå®AiÀÄ ¥ÉưøÀ oÁuÉAiÀÄ°è ¥ÀæPÀgÀtUÀ¼ÀÄ zÁR¯ÁVzÀÄÝ EgÀÄvÀÛªÉ. ¸ÀzÀj ¥ÀæPÀgÀtUÀ½UÉ ¸ÀA§A¢ü¹zÀAvÉ ªÀiÁ£Àå ²æÃ.C«ÄvÀ ¹AUï J¸ï.¦ ¸ÁºÉç PÀ®§gÀÄV, ªÀiÁ£Àå ²æÃ.dAiÀÄ¥ÀæPÁ±À ºÉZÀÄѪÀj J¸ï.¦ ¸ÁºÉç PÀ®§ÄgÀV, ªÀiÁ£Àå «dAiÀÄ CAa rªÉÊJ¸ï.¦ ¸ÁºÉç UÁæªÀiÁAvÀgÀ G¥À-«¨sÁUÀ, ªÀiÁ£Àå eÉ.ºÉZï E£ÁªÀÄzÁgÀ ¹.¦.L JªÀÄ.© £ÀUÀgÀ ªÀÈvÀÛ PÀ®§ÄgÀV gÀªÀgÀ ªÀiÁUÀðzÀ±Àð£ÀzÀ ªÉÄÃgÉUÉ «±Àé«zÁå®AiÀÄ ¥ÉưøÀ oÁuÉAiÀÄ ²æÃ.f.J¸ï gÁWÀªÉÃAzÀæ ¦.J¸ï.L (PÁ.¸ÀÄ), ºÁUÀÆ C¥ÀgÁzsÀ «¨sÁUÀ ¹§âA¢AiÀĪÀgÁzÀ ¸ÀAvÉÆµÀ ¹.¦.¹ 935, zÁåªÀ¥Àà ¹.¦.¹ 942, ¸ÀįÁÛ£À ¹.¦.¹ 958, gÀªÀgÀÄ DgÉÆÃ¦üvÀgÁzÀ 1) C§ÄÝ® ªÀÄwãÀ vÀAzÉ G¸Áä£À C°, ¸Á: GªÀÄgÀ PÁ¯ÉÆÃ¤ DeÁzÀ¥ÀÆgÀ gÉÆÃqÀ ªÀĺÀä¢ ªÀÄfÃzÀ ºÀwÛgÀ PÀ®§ÄgÀV, 2) ªÀĺÀäzÀ C§gÁgÀ CºÀäzÀ vÀAzÉ ªÀĺÀäzÀ UÀįÁªÉÆÃ¢Ý£À ¸Á: CºÀäzÀ £ÀUÀgÀ 3£Éà PÁæ¸ï £ÀÆgÀ ªÀÄfÃzÀ ºÀwÛgÀ DeÁzÀ¥ÀÆgÀ gÉÆÃqÀ PÀ®§ÄgÀV 3) ±ÉÃR ªÀĺɧƧ SÁf vÀAzÉ ªÀĺÀäzÀ SÁeÁ«ÄAiÀiÁ, ¸Á: ªÀÄPÁÌ PÁ¯ÉÆÃ¤ ªÁlgÀ mÁåAPÀ ºÀwÛgÀ PÀ®§ÄgÀV EªÀgÀ£ÀÄß ªÀ±ÀPÉÌ vÉUÉzÀÄPÉÆAqÀÄ DgÉÆÃ¦vÀjAzÀ MlÄÖ 170 UÁæA §AUÁgÀ, ºÁUÀÆ ªÀÄÆgÀÄ ¢éZÀPÀæ ªÁºÀ£ÀUÀ¼ÀÄ(§¸ÀPÀ¯Áåt ©ÃzÀgÀ°è PÀ¼ÀîvÀ£À ªÀiÁrzÀ) J¯Áè ¸ÉÃj MlÄÖ 5,00,000/- ¨É¯É¨Á¼ÀĪÀ §AUÁgÀzÀ D¨sÀgÀtUÀ¼ÀÄ ºÁUÀÆ 3 ¢éZÀPÀæ ªÁºÀ£ÀUÀ¼À£ÀÄß d¥ÀÛ ¥Àr¹PÉÆArzÀÄÝ EgÀÄvÀÛzÉ.