POLICE BHAVAN KALABURAGI

POLICE BHAVAN KALABURAGI

01 April 2015

Kalaburagi District Reported Crimes

ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 28.03.2015 ರಂದು 20:45 ಗಂಟೆಯಿಂದ 29.03.2015 ರಂದು 06:00 ರ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ರೇವನೂರ ಸಿಮಾಂತರದ ಹೊಲ ಸರ್ವೇ ನಂ 42/2 ನೇದ್ದರಲ್ಲಿನ ವೊಡಾಫೋನ್ ಟಾವರಿನ ಸೆಲ್ಟರ್‌ ರೂಮ್‌ ನ ಬಾಗಿಲ ಚಾವಿ ಮುರಿದು ಒಳಗೆ ಹೋಗಿ ಒಳಗಡೆ ಇದ್ದ ಒಟ್ಟು 24 ಬ್ಯಾಟರಿಗಳು ಅಂ.ಕಿ 24.000/ರೂ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ  ಮಲ್ಲಿಕಾರ್ಜುನ. ತಂದೆ ಶಿವಶರಣಪ್ಪ ಕಲಬುರಗಿ ಸಾ|| ಕಾವೇರಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 31-03-2015 ರಂದು 10-30 ಎ ಎಮ್ ಕ್ಕೆ ಮುಸ್ಲಿಂ ಚೌಕ ಸನಾ ಹೋಟೆಲ ಹತ್ತಿರ ರೋಡಿನ ಮೇಲೆ  ಮುಸ್ತಾಕ ಅಹಮದ ಇತನು ನಡೆದುಕೊಂಡು ಹೋಗುತಿದ್ದಾಗ ಆರೋಪಿ ತನ್ನ ಮೋ,ಸೈ ನಂ ಕೆ ಎ 32 ಇಸಿ 5537 ನೇದ್ದನ್ನು ಮಿಜಗುರಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಡಿಕ್ಕಿ ಪಡಿಸಿ ಅಪಘಾತಮಾಡಿದ್ದು ಅಪಘಾತದಲ್ಲಿ ತಾನು ಸಹ ಗಾಯ ಹೋಂದಿ ಮಹ್ಮದ ಮುಸ್ತಾಕ ಇತನಿಗು ಸಹ ಭಾರಿ ಗಾಯಗೋಳಿಸಿರುತ್ತಾನೆ ಅಂತಾ ಶ್ರೀ ಅಜಮ ಪಟೇಲ ತಂದೆ ಮಹ್ಮದ ಅಲಿ ಸಾ: ಇಸ್ಲಾಮಾಬಾದ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 30.03.2015 ರಂದು ನನ್ನ ಮಗ ರವಿಕುಮಾರ  ಈತನು ನಡೆಸುತ್ತಿದ್ದ ನಮ್ಮ ಬುಲೇರೋ ವಾಹನ ನಂ ಕೆ.ಎ32ಎನ್.5722 ನೇದ್ದರಲ್ಲಿ ನಾನು ಮತ್ತು ನನ್ನ ಗಂಡ ಗಂಗಯ್ಯ ಕುಳಿತುಕೊಂಡು ಕೆಲಸದ ನಿಮಿತ್ಯ ಜೇವರ್ಗಿಗೆ ಬರುವಾಗ ಜೈನಾಪುರ ಕ್ರಾಸ್‌ ಹತ್ತಿರ ಆಂದೋಲಾ ಕೆಲ್ಲೂರು ರಸ್ತೆಯ ಮೇಲೆ ಬರುತ್ತಿದ್ದಾಗ ರಸ್ತೆಯ ಮೇಲೆ ದನಗಳು ಅಡ್ಡ ಬಂದಿದ್ದರಿಂದ ನನ್ನ ಮಗ ರವಿಕುಮಾರನು ಬುಲೇರೊ ಜೀಪ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನಿಂದ ನಡೆಸಿ ದನಗಳಿಗೆ ಉಳಿಸಲು ಹೋಗಿ ಒಮ್ಮೆಲೆ ಜೀಪ್‌ನ್ನು ಕಟ್ ಹೋಡೆದು ರೋಡಿನ ಪಕ್ಕದ ಗಿಡಕ್ಕೆ ಡಿಕ್ಕಿ ಪಡಿಸಿ ನನಗೆ ಮತ್ತು ನನ್ನ ಗಂಡನಿಗೆ ಸಾಧಾ ಮತ್ತು ಭಾರಿ ರಕ್ತ ಗಾಯ ಪಡಿಸಿರುತ್ತಾನೆ ಅಂತಾ ಶ್ರೀಮತಿ ಶಾಂತಾಬಾಯಿ ಗಂಡ ಗಂಗಯ್ಯ ಗುತ್ತೆದಾರ ಸಾ|| ಆಂದೋಲಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 14-03-2015 ರಂದು ಬೆಳಿಗ್ಗೆ 04-00 ಗಂಟೆ ಸುಮಾರಿಗೆ ಎಸ.ವಿ.ಪಿ. ಸರ್ಕಲ ಹತ್ತೀರ ಮಲಗಿದ್ದವನು ಎದ್ದುಕೊಂಡು ರೈಲ್ವೇ ಸ್ಟೇಷನ ಕಡೆಗೆ ಚಹಾ ಕುಡಿಯುವ ಸಲುವಾಗಿ ನಡೆದುಕೊಂಡು ಹೋಗುವಾಗ ಎಸ.ವಿ.ಸರ್ಕಲ ಹತ್ತೀರ ರೋಡ ಮೇಲೆ ಯಾವುದೋ ಒಂದು  ಕಾರ ಚಾಲಕನು ತನ್ನ ಕಾರನ್ನು ಕೇಂದ್ರ ಬಸ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು  ಜಗತ ಸರ್ಕಲ ರೋಡ ಕಡೆ ಹೋಗುವ ಕುರಿತು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲಗಾಲ ತೊಡೆಗೆ ಪೆಟ್ಟುಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಚಂದ್ರಶೇಖರ ತಮದೆ ಅಪ್ಪಣ್ಣಾ ರಾಮಗೊಂಡ ಸಾ: ಮುತ್ತಗಿ ಗ್ರಾಮ ತಾ: ಚಿತ್ತಾಪೂರ  ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

31 March 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ : 30-03-2015 ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಮಗನಾದ ಶಿವಶರಣಪ್ಪ ಇತನು ಸೇಡಂಕ್ಕೆ ಹೊಗಿ ತನ್ನ ಶಾಲೆಯ ದಾಖಲಾತಿಗಳನ್ನು ತೆಗೆದುಕೊಂಡು ಬರುತ್ತೆನೆ. ಅಂತಾ ಹೇಳಿ ಮೊಟಾರ ಸೈಕಲ ನಂ. ಕೆಎ-32 ಇ-8465 ನೇದ್ದರ ಮೇಲೆ ಸೇಡಂಕ್ಕೆ ಹೊಗಿದ್ದನು. ನಂತರ ನಿನ್ನೆ ಸಾಯಂಕಾಲ 6-30 ಗಂಟೆಯ ಸುಮಾರಿಗೆ ನನ್ನ ಮಗನ ಗೆಳೆಯನಾದ ವಿರೇಶ ಆವಂಟಿ ಸಾ : ಸೇಡಂ ಇತನು ಪೊನ್ ಮಾಡಿ ತಿಳಿಸಿದ್ದೆನೆಂದರೆ ಸಾಯಂಕಾಲ 6 ಗಂಟೆಯ ಸುಮಾರಿಗೆ ಸೇಡಂದ ದಾನಿಬಾಯಿ ಲೇಔಟ ಹತ್ತಿರ ಇರುವ ವಾಟರ ಸರ್ವಿಸಿಂಗ ದುಖಾನ ಹತ್ತಿರ ಇದ್ದಾಗ ನಿಮ್ಮ ಮಗನಾದ ಶಿವಶರಣಪ್ಪ ಇತನು ಮೊಟಾರ ಸೈಕಲ ಮೇಲೆ ಸೇಡಂ ಕಡೆಯಿಂದ ಕಲಬುರಗಿ ಕಡೆಗೆ ಚಲಾಯಿಸಿಕೊಂಡು ಹೊಗುತ್ತಿದ್ದನು ಆ ವೇಳೆಯಲ್ಲಿ ಕಲಬುರಗಿ ಕಡೆಯಿಂದ ಒಬ್ಬ ಲಾರಿ ಚಾಲಕನು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶಿವಶರಣಪ್ಪ ಇತನ ಮೊಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಮಗನಿಗೆ ತಲೆಗೆ ಭಾರಿ ರಕ್ತಗಾಯ, ಕಿವಿಯಿಂದ, ಬಾಯಿಯಿಂದ ರಕ್ತಸ್ರಾವವಾಗಿದ್ದು ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿ ಕೈ ಮುರಿದಿರುತ್ತದೆ. ಬಲಗಾಲಿನ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಕಾಲು ಕಟ್ಟಾಗಿರುತ್ತದೆ, ಎಡಗಾಲಿನ ಕಪಗಂಡದ ಹತ್ತಿರ ಭಾರಿ ಗಾಯವಾಗಿ ಕಾಲು ಮುರಿದು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದನು. ಸದರಿ ಅಪಘಾತಪಡಿಸಿದ ಲಾರಿ ನಂ. AP -04 TW-1079 ನೇದ್ದು ಇದ್ದು ಚಾಲಕನು ಅಪಘಾತಪಡಿಸಿ ಲಾರಿ ಅಲ್ಲಿಯೆ ನಿಲ್ಲಿಸಿ ಓಡಿ ಹೊಗಿರುತ್ತಾನೆ. ಅಂತಾ ತಿಳಿಸಿದ್ದು ಸೇಡಂಕ್ಕೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ನೋಡಲಾಗಿ ವಿಷಯ ನಿಜವಿತ್ತು ಅಂತಾ ಶ್ರೀಮತಿ ಲಲಿತಾ ಗಂಡ ಬಸವರಾಜ ಕುಂಬಾರ ಸಾ : ಪೇಠಶೀರೂರ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 30-03-2015 ರಂದು 9-30 ಪಿ ಎಮ್ ಕ್ಕೆ ಆಳಂದ ರೋಡಿನಲ್ಲಿ ಬರುವ ಶಿವಶಕ್ತಿ ಖಾನಾವಳಿ ಎದುರು ರೋಡಿನ ಮೇಲೆ ಆರೋಪಿ ತನ್ನ ಗೂಡ್ಸ ಟಂ ಟಂ ,ನಂ ಕೆ ಎ 32 ಸಿ 3118 ನೇದ್ದನ್ನು ಆಳಂದ ಚೆಕ್ಕ ಪೊಷ್ಟ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕೆ ನಿಂತಿದ್ದ  ಸುಭಾಶ್ಚಂದ್ರ ಇತನಿಗೆ ಡಿಕ್ಕಿ ಪಡಿಸಿ ಅಫಘಾತಪಡಿಸಿ ಗಾಯ ಪೆಟ್ಟು ಗೊಳಿಸಿ ಹಾಗೆ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕೆ ನಿಂತಿದ್ದ ಅಟೋ ರೀಕ್ಷಾ ನಂ . ಕೆ ಎ 32 6638 ನೇದ್ದಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಫಘಾತ ಮಾಡಿರುತ್ತಾನೆ ಅಂತಾ ಶ್ರೀ ಸುಭಾಶ್ಚಂದ್ರ ತಂದೆ ಸಿದ್ದಣ್ಣ ಕೋಹಿನೂರು ಸಾ|| ಶಿವಶಕ್ತಿ ಖಾನಾವಳಿ ಆಳಂದ ಚೆಕ್ಕ ಪೊಷ್ಟ ಹತ್ತಿರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 March 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರ್ಗಿ ಠಾಣೆ : ದಿನಾಂಕ 29-03-2015 ಕೂಡಿ ಗ್ರಾಮದ  ಬಾಬಾಸಾಬ ದರ್ಗಾದ ಪಕ್ಕದಲ್ಲಿ   ಸಾರ್ವಜನಿಕ ಸ್ಥಳದಲ್ಲಿ 5 ಜನರು ಗುಂಪಾಗಿ ಕುಳಿತುಕೊಂಡು  ಇಸ್ಪೇಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಅಂತಾ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೇಲೆ ದಾಳಿ ಮಾಡಿ ಹಿಡಿದುಕೊಂಡು ವಿಚಾರಿಸಲು 1) ರಾಮು ತಂದೆ ದರ್ಮು ರಾಠೋಡ  2) ಮಲ್ಲಿಕಾರ್ಜುನ ತಂದೆ ಚರಂತಯ್ಯ  ಹಿರೇಮಠ  3]  ಚಂದ್ರಕಾಂತ ತಂದೆ ಅಮರಪ್ಪ ಕೊಣಿನ  4] ದೇವಿಂದ್ರಪ್ಪ ತಂದೆ ಸಿದ್ದಪ್ಪ ನಾಟೀಕರಾ  5] ಬಾಬು ತಂದೆ ಸೈದ್ ಸಾಬ ಬಿದನೂರ ಸಾಃ ಎಲ್ಲರು ಮಿಣಜಗಿ ಅಂತಾ ತಿಳಿಸಿದ್ದು ಸದರಿಯವರು ಜೂಜಾಟಕ್ಕೆ ಬಳಸಿದ 52 ಇಸ್ಪೇಟ ಎಲೆಗಳು ಮತ್ತು ಹಣ 4090/-ನೇದ್ದು ಜಪ್ತಿ  ಮಾಡಿಕೊಂಡು ಸದರಿಯವರೊಂದಿಗ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ  ಸೈಯದ್ ಪಟೇಲ ತಂದೆ ಅಕ್ಬರಪಟೇಲ  ಮಾಲಿ ಪಾಟೀಲ ಸಾಃ ಯಾಳವಾರ ಇವರಿಗೆ ದಿನಾಂಕ 12.04.2014 ರಂದು ಮಧ್ಯಾಹ್ನ ರಾಜಾ ಪಟೇಲ ತಂದೆ ಮೈಹಿಬೂಬ ಪಟೇಲ ಸಂಗಡ 4 ಜನರು ಸಾಃ ಯಾಳವಾರ,ಕೂಡಿಕೊಂಡು ನನ್ನ ಹೋಲ ಸರ್ವೇ ನಂ 201/ಬಿ ನೇದ್ದರಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ಮತ್ತು ನನ್ನ ಅಣ್ಣ ದಸ್ತಗೀರ ಈವರೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಮತ್ತು ಕೊಡಲಿಯಿಂದ ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.