POLICE BHAVAN KALABURAGI

POLICE BHAVAN KALABURAGI

29 January 2015

Kalaburagi District Reported Crimes

ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 27.01.2015 ರಂದು ಶ್ರೀಮತಿ ಚೆನ್ನಮ್ಮ ಗಂಡ ಜಗದೀಶ ಭೈರಾಮಡಗಿ ಸಾ : ಶಿವಶಕ್ತಿ ನಗರ ಕಲಬುರಗಿ ರವರ ಗಂಡನಾದ ಜಗದೀಶ ತಂದೆ ಸುಭಾಶ ಭೈರಾಮಡಗಿ ಈತನು ಮತ್ತು ಅಶೋಕ ಇಬ್ಬರು ಕೂಡಿಕೊಂಡು ಪೆಂಟಿಂಗ್ ಕೆಲಸದ ನಿಮಿತ್ತ ಮುದಬಾಳ ಕೆ ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ಜೇವರ್ಗಿ ತಾಲ್ಲೂಕಿನ ಮುದಬಾಳ ಕೆ ಗ್ರಾಮದ ಹತ್ತಿರ ಇರುವ ಮುಖ್ಯ ನೀರಿನ ಕಾಲುವೆಯಲ್ಲಿ ಕೈ ಕಾಲು ಮುಖ ತೊಳೆದುಕೊಳ್ಳಲು ಮಧ್ಯಾಹ್ನ ೦3:30 ಗಂಟೆಯ ಸುಮಾರಿಗೆ ಹೋಗಿ ಸದರಿ ಮುಖ್ಯ ಕಾಲುವೆಯಲ್ಲಿ ಕೈ ಕಾಲು ತೊಳೆದುಕೊಳ್ಳುತ್ತಿದ್ದಾಗ ಜಗದೀಶ ಈತನು ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು ಸದರಿಯವನ ಮೃತ ದೇಹವು ಇಂದು ದಿನಾಂಕ 29.01.2015 ರಂದು ಮುಂಜಾನೆ 09:00 ಗಂಟೆಯ ಸುಮಾರಿಗೆ ಕೇನಾಲ್‌ ಗೇಟಿನ ಹತ್ತಿರ ನೀರಿನಲ್ಲಿ ತೆಲಿದ್ದು ಸದರಿ ಮೃತನು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಹಣಮಂತ್ರಾಯ ತಂದೆ ಮಲ್ಲೆಶಪ್ಪಗೌಡ ಆಲೂರು ಸಾ : ಲಕ್ಷ್ಮಿಚೌಕ್‌ ಜೇವರ್ಗಿ  ದಿನಾಂಕ 25.01.2015 ರಂದು ಸಾಯಂಕಾಲ ಕಂಕರ್ ಮಷೀನ್‌ ನರಿಬೋಳಿ ಜೇವರ್ಗಿ ರೋಡ ಹತ್ತಿರ ನಮ್ಮ ತಂದೆ ಮಲ್ಲೆಶಪ್ಪಗೌಡ ಇವರು ರೋಡಿನ ಸೈಡಿನಿಂದ ಜೇವರ್ಗಿ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಆ ವೇಳೆಗೆ ಹಿಂದಿನಿಂದ ಅಂದರೆ ಚೆನ್ನುರು ಕಡೆಯಿಂದ ಬಂದ  ಮೋಟಾರು ಸೈಕಲ್‌ ನಂ ಕೆಎ32ಈಬಿ9632 ನೇದ್ದರ ಚಾಲಕನು ತನ್ನ ಮೊಟಾರು ಸೈಕಲ್‌ ಅನ್ನು ಭಹಳ ಸ್ಪೀಡಾಗಿ ಮತ್ತು ಅಡ್ಡದಿಡ್ಡಿಯಾಗಿ ನಡೆಸಿಕೊಂಡು ಬಂದು ನಮ್ಮ ತಂದೆಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅವರಿಗೆ ಗಾಯಗೊಳಿಸಿ ತನ್ನ ಮೋಟಾರು ಸೈಕಲ್‌ ನೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 28.01.2015 ರಂದು ಶ್ರೀ ಯಮನಪ್ಪ ತಂದೆ ಭೀಮರಾಯ ನಾಯಕೋಡಿ ಸಾ : ಮಾರಡಗಿ ರವರು  ಟಾಟಾ ಎಸ್ ವಾಹನ ನಂ ಕೆ.ಎ 27 9819 ನೇದ್ದರದಲ್ಲಿ ಕುಳಿತುಕೊಂಡು ಮಾರಡಗಿ ಗ್ರಾಮದಿಂದ ಜೇವರ್ಗಿ ಕಡೆಗೆ ಬರುತ್ತಿದ್ದಾಗ  ಅವರಾದ್‌ ಕ್ರಾಸ್‌ ಹತ್ತಿರ ಜೇವರ್ಗಿ ಶಹಾಪುರ ಮೇನ್‌ ರೋಡಿನಲ್ಲಿ ಬರುತ್ತಿದ್ದಾಗ ಮಧ್ಯಾಹ್ನ 02:30 ಗಂಟೆಗೆ ಶಹಾಪುರ ಕಡೆಯಿಂದ ಬರುತ್ತಿದ್ದ ಲಾರಿ ಟ್ಯಾಂಕರ್ ನಂ ಕೆ.ಎ32ಎ6363 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನಲ್ಲಿ ಹೋಗುತ್ತಿದ್ದ ಮೋಟಾರು ಸೈಕಲ್‌ ನಂ ಎಮ್.ಹೆಚ್13 ಬಿ.ಎಪ್‌ 0544 ನೇದ್ದಕ್ಕೆ ಡಿಕ್ಕಿ ಪಡಿಸಿ ಮುಂದೆ ಬಂದು ಫಿರ್ಯಾದಿ ದಾರನು ಕುಳಿತುಕೊಂಡು ಹೊಗುತ್ತಿದ್ದ ಟಾಟಾ ಎಸ್ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿ ದ್ವಿಚಕ್ರ ವಾಹನ ಸವಾರ ಮತ್ತು ಹಿಂದೆ ಕುಳಿತನಿಗೆ ಹಾಗು ಫಿರ್ಯಾದಿದಾರನಿಗೆ ಹಾಗು ಟಾಟಾ ಎಸ್‌ ವಾಹನದಲ್ಲಿದ್ದ ಮಲ್ಲಪ್ಪ ಮತ್ತು ಚಾಲಕ ನಿಗೆ ಭಾರಿ ಮತ್ತು ಸಾದಾ ರಕ್ತ ಗಾಯಗೊಳಿಸಿ ಆರೋಪಿ ಲಾರಿ ಚಾಲಕ ತನ್ನ ಲಾರಿಯನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಮನುಷ್ಯ ಕಾಣೆಯಾದ ಪ್ರಕರಣ :
ರೋಜಾ ಠಾಣೆ : ದಿನಾಂಕ: 10/11/2014 ರಂದು ಬೆಳಿಗ್ಗೆ 05:30 ಎ.ಎಮ್ ದಿಂದ 06:00 ಎ.ಎಮ್ ದ ಅವಧಿಯಲ್ಲಿ  ನನ್ನ ಗಂಡ ಶರಣಪ್ಪಾ ತಂದೆ ಸಾಯಿಬಣ್ಣ ನಿಪ್ಪಾಣಿ ಇವರು ನಮಗೆ ಮನೆಯಲ್ಲಿ ಏನು ಹೇಳದೆ-ಕೇಳದೆ ಮನೆಯಿಂದ ಹೊರ ಹೋದವರು ಇಲ್ಲಿಯವರೆಗೆ ಹಿಂತಿರುಗಿ ಬಂದಿರುವುದಿಲ್ಲಾ. ನಮ್ಮ ಎಲ್ಲಾ ಸಂಭಂಧಿಕರ ಮನೆಯಲ್ಲಿ ಹಾಗೂ ಅವರ ಮಿತ್ರರು ಮತ್ತು ಗುತ್ತೇದಾರರ ಹತ್ತಿರ ಹೋಗಿ ವಿಚಾರಿಸಿದರು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ. ಅಂತಾ  ಶ್ರೀಮತಿ ಭಾರತಿಬಾಯಿ ಗಂಡ  ಶರಣಪ್ಪಾ ನಿಪ್ಪಾಣಿ ಸಾ|| ರಾಮಜೀ ನಗರ ರೋಜಾ [ಕೆ] ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 January 2015

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 26-01-2015 ರಂದು ಬೆಳಿಗ್ಗೆ ಶ್ರೀ ಸೋಮಶೇಖರ ತಂದೆ ಬಾಬಾಸಾಹೇಬಗೌಡ ಮಾಲೀಪಾಟೀಲ  ಸಾ: ನಗರ ಗುಡಿ ಹತ್ತಿರ ಮಾಣೆಕೇಶ್ವರಿ  ಕಾಲೋನಿ ಕಲಬುರಗಿ ರವರು ಮತ್ತು ತನ್ನ ಮೊಮ್ಮಗ ನಾದ ಆಕಾಶ ಮತ್ತು ಜಗತ ಓಣಿಯ ನನ್ನ ಮೊಮ್ಮಗನ ಗೆಳಯ ಪ್ರತಾಪರೆಡ್ಡಿ ಮೂರು ಜನರು ಕೂಡಿಕೊಂಡು ಡಿ.ಎ.ಆರ್. ಪರೇಡ ಮೈದಾನದಲ್ಲಿ ಗಣರಾಜೋತ್ಸ ನೋಡಿಕೊಂಡು ಹಾಗೇ ಏಷಿಯನ ಮಹಲ ನೋಡುವ ಸಲುವಾಗಿ ಮೂರು ಜನರು ಹಳೆ ಡಿಪಿಓ ಕ್ರಾಸದಿಂದ ಏಷಿಯನ ಮಹಲ ಕಡೆಗೆ ನಡೆದುಕೊಂಡು ಹೋಗುವಾಗ ಏಷಿಯನ ಮಹಲ ಎದುರಿನ ರೋಡ ಮೇಲೆ ಎದುರಿನಿಂದ ಮೋ/ಸೈಕಲ ನಂಬರ ಕೆಎ-32 ಕೆ-9707 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆಕಾಶ ಮತ್ತು ಪ್ರತಾಪರೆಡ್ಡಿ ಇಬ್ಬರಿಗೂ ಅಪಘಾತ ಪಡಿಸಿ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ  : ಶ್ರೀ ಈಶ್ವರ ತಂದೆ ಕೈಲಾಸ ಜಾಧವ ಸಾ|| ಕಿಷನ್ ನಾಯಕ ತಾಂಡಾ ತಾ|| ಉದನೂರ ಜಿಲ್ಲಾ|| ಅದಿಲಾಬಾದ ರವರು  ಎರಡು ತಿಂಗಳ ಹಿಂದೆ ಕಬ್ಬು ಕಡಿಯಲು ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲೂಕಿಗೆ ಬಂದಿದ್ದು ನನ್ನಂತೆ ನಮ್ಮ ಮಾವ ಸವಾಯಿರಾಮ ರಾಠೋಡ, ಹಾಗು ನಮ್ಮ ತಾಂಡಾದವರಾದ ಸಂತೋಷ ರಾಠೋಡ, ಇಂದರ ರಾಠೋಡ, ಗಣೇಶ ರಾಠೋಡ ಹಾಗು ಇತರರು ಬಂದಿದ್ದು ದಿನಾಂಕ 27-01-2015 ರಂದು ಅಫಜಲಪೂರ ತಾಲೂಕಿನ ಶಂಕರ ಸೋಬಾನಿ ರವರ ಹೊಲದಲ್ಲಿ ಕಬ್ಬು ಕಡಿಯುತ್ತಿದ್ದೇವು. ನಂತರ ನಾನು 12;00 ಪಿ.ಎಂ ಸುಮಾರಿಗೆ ಅಫಜಲಪೂರ ಹತ್ತಿರ ಇರುವ ಶ್ರೀಗಿರಿ ಧಾಬಾಕೆ ಹೋಗಿ ಅಲ್ಲಿ ಧಾಬಾ ಮಾಲಕರಾದ ಸೋಮು ಶ್ರೀಗಿರಿ ರವರಿಗೆ ನಾನು ಕಬ್ಬು ಕಡಿಯವ ಕೆಲಸ ಮಾಡುತ್ತೇನೆ. ನಿಮ್ಮ ಹೊಲದಲ್ಲಿ ಕಬ್ಬು ಇದ್ದರೆ ಹೇಳಿ ನಮ್ಮ ಟೋಳಿ ಮಾಲಕರಿಗೆ ಹೇಳಿ ಆದಷ್ಟು ಬೇಗನೆ ಕಬ್ಬು ಕಟಾವ ಮಾಡುತ್ತೇವೆ ಅಂತಾ ಹೇಳಿ ಅಲ್ಲೆ ಧಾಬಾದಲ್ಲೆ ಊಟಾ ಮಾಡಿದೆನು, ನಾನು ಊಟಾ ಮಾಡಿದ ಬಿಲ್ಲು ತೆಗೆದುಕೊಂಡಿರುವುದಿಲ್ಲಾ. ನಂತರ ನಮ್ಮ ಟೋಳಿ ಮಾಲಿಕರಿಗೆ ಬೇಟಿಯಾಗಲು ಸೋಮು ಮತ್ತು  ಅವರ ತಮ್ಮ ಚಂದು ಶ್ರೀಗಿರಿ ಹಾಗು ಇನ್ನು ಒಬ್ಬನನ್ನು ಕರೆದುಕೊಂಡು ನಾವು ಕೆಲಸ ಮಾಡುತ್ತಿದ್ದ ಶಂಕರ ಸೋಬಾನಿ ರವರ ಹೊಲಕ್ಕೆ ಹೋದೆವು. ಆಗ ಸೋಮು ರವರು ನಮ್ಮ ಟೋಳಿದವರಿಗೆ ವಿಚಾರಿಸಿದಾಗ ಇನ್ನು ಇಲ್ಲಿ ಕೆಲಸ ಬಹಳ ಇದೆ ನಿಮ್ಮ ಹೊಲದ ಕಬ್ಬು ಕಟಾವ ಮಾಡುವುದಿಲ್ಲಾ ಅಂತಾ ಅಂದರು, ಅದಕ್ಕೆ ಸೋಮು ಇವನು ನನ್ನ ಮೇಲೆ ಸಿಟ್ಟಿಗೆ ಬಂದು ನನಗೆ ಏ ಸೂಳಿ ಮಗನಾ ಲಮಾಣ್ಯಾ ನಮಗೇ ಮೋಸಮಾಡತಿಯಾ ಮಗನಾ ಅಂತಾ ಅಂದು ಅಲ್ಲೆ ಬಿದ್ದಿದ ಒಂದು ಬಡಿಗೆ ತೆಗೆದುಕೊಂಡು ನನ್ನ ಎಡಗಡೆ ಕುತ್ತಿಗಿಯ ಮೇಲೆ ಜೋರಾಗಿ ಹೊಡೆದು ಭಾರಿ ಗುಪ್ತ ಪೆಟ್ಟು ಪಡಿಸಿದನು, ಆಗ ನಾನು ಒಮ್ಮೇಲೆ ನೆಲದ ಮೇಲೆ ಬಿದ್ದಾಗ ಅದೆ ಬಡಿಗೆಯಿಂದ ನನ್ನ ಎಡಗಾಲ ಮೊಳಕಾಲ ಕೆಳಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ಅವನೊಂದಿಗೆ ಇದ್ದ ಎರಡು ಜನರು ನನ್ನ ಹೊಟ್ಟೆಯ ಮೆಲೆ ಒದ್ದು ಗಾಯಗೊಳಿಸಿ ಜಾತಿ ನಿಂದನೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 January 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ಆಲಾವುದ್ದಿನ ತಂದೆ ಸೈಪಾನ ಸಾಬ, ಸಾಃ ನೂರಾನಿ ಮೋಹಲ್ಲಾ ಕಲಬುರಗಿ ರವರು ದಿನಾಂಕ 27-01-2015 ರಂದು 11-30 ಎ.ಎಮ್ ಕ್ಕೆ ಜಲಾಲ ವಾಡಿಯಲ್ಲಿರುವ ಕ್ಲಾಸಿಕ ಗಿಫ್ಟ ಸೆಂಟರ ಹತ್ತಿರ ರೋಡಿನ ಮೇಲೆ ಫಿರ್ಯಾದಿ ನಡೆದುಕೊಂಡು ಹೋಗುತ್ತಿದ್ದಾಗ ಒಂದು ಕೆಂಪು ಬಣ್ಣದ ಕಾರ ನಂ. ಕೆ.ಎ 01 ಎಮ್.ಜಿ 3547 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಮೊಳಕಾಲು ಕೆಳಗೆ ಮತ್ತು ಪಾದಕ್ಕೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಧನಸಿಂಗ ತಂದೆ ಕಿಶನ ಪವಾರ ಸಾ: ದರ್ಮಾಪೂರ ತಾಂಡಾ ಹಾ:ವ: ಹನುಮಾನ ಟೆಂಪಲ ಹತ್ತಿರ ಬಿದ್ದಾಪೂರ ಕಾಲೋನಿ ಕಲಬುರಗಿ  ರವರು 26-01-2015 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನಾನು ರೇಲ್ವೆ ಸ್ಟೇಶನದಿಂದ ನನ್ನ ಅಟೋರಿಕ್ಷಾ ನಂಬರ ಕೆಎ-32 ಬಿ-2722 ನೇದ್ದರಲ್ಲಿ ಎರಡು ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಟೌನಹಾಲ ಕ್ರಾಸ ಮುಖಾಂತರವಾಗಿ ಸೇಡಂ ರಿಂಗ ರೋಡ ಕಡೆಗೆ ಹೋಗುವಾಗ ಕುಳಗೇರಿ ಕ್ರಾಸ ಸಮೀಪವಿರುವ ಡಾಕ್ಟರ ದೇಶಪಾಂಡೆ ರವರ ಆಸ್ಪತ್ರೆಯ ಎದುರು ರೋಡ ಮೇಲೆ  ಮೋಟಾರ ಸೈಕಲ ನಂಬರ ಕೆಎ-32 ಎಸ್-5275 ರ ಸವಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನನ್ನ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿದ್ದು ಮತ್ತು ಅಟೋರಿಕ್ಷಾ ಡ್ಯಾಮೇಜ ಮಾಡಿ ನನ್ನ ಹಣೆಗೆ, ಎಡ ಹುಬ್ಬಿಗೆ ರಕ್ತಗಾಯಗೊಳಿಸಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿಉ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಿವಕುಮಾರ ತಂದೆ ಬಸಯ್ಯ  ಸಾ: ಕನ್ನಕಟ್ಟಾ ತಾ: ಹುಮನಾಬಾದ ಹಾ:ವ: ಸಿ2-01 ಹೈಕೊರ್ಟ ಆವರಣ ಕಲಬುರಗಿ ರವರು  ದಿನಾಂಕ: 23/01/2015 ರಂದು 6-30 ಪಿಎಮ್ ಗಂಟೆ ಸುಮಾರಿಗೆ ಹೈಕೋರ್ಟನಲ್ಲಿರುವ ವಸತಿ ಗೃಹ ಸಿ2-01 ನೇದ್ದನ್ನು ನನ್ನ ಸ್ವಂತ ಊರಾದ ಕನ್ನಕಟ್ಟಾ ಗ್ರಾಮದಲ್ಲಿ ಜಾತ್ರೆ ಪ್ರಯುಕ್ತ ಕುಟುಂಬ ಸಮೇತನಾಗಿ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕ: 26/01/2015ರಂದು ಬೆಳಿಗ್ಗೆ 9-30 ಗಂಟೆಗೆ ಸ್ನೇಹಿತರು ಫೋನ ಮಾಡಿ ನಿಮ್ಮ ಮನೆ ಬಾಗಿಲ ಕೀಲಿ ಮುರಿದಿದ್ದು ಕಳ್ಳತನವಾಗಿರಬಹುದು ಬೇಗ ಬಾ ಅಂತಾ ತಿಳಿಸಿದ ಮೇರೆಗೆ ಅರ್ಜಿದಾರರು ಮನೆಗೆ ಬಂದು ನೋಡಲಾಗಿ ಬಂಗಾರದ ಬೆಳ್ಳಿಯ ಆಭರಣಗಳು ಹಾಗು ನಗದು ಹಣ ಒಟ್ಟು 95,700/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 26.01.2015 ರಂದು ಗಣರಾಜ್ಯೋತ್ಸವದ ಅಂಗವಾಗಿ ಆಂದೋಲಾ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನೀಯಮಿತ ಕಾರ್ಯಾಲಯದ ಮುಂದೆ ಬ್ಯಾಂಕಿನ  ಕಾರ್ಯದರ್ಶಿಯಾದ ಬಸವರಾಜ ಮತ್ತಿಮಡು ಇವರು ಇಂದು  ಬೆಳಗ್ಗೆ 7 ಗಂಟೆಗೆ ದ್ವಜಾರೋಹಣವನ್ನು ಮಾಡಿ ಮಧ್ಯಾಹ್ನ 12:00 ಗಂಟೆಯಿಂದ 01:30 ಗಂಟೇಯ ಅವಧಿಯಲ್ಲಿ ದ್ವಜವನ್ನು ಕೇಳಗೆ ಇಳಿಸಿ ದ್ವಜಕ್ಕೆ ಅಪಮಾನ ಮಾಡಿರುತ್ತರೆ ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ರಾಮಪ್ಪ ಲಕ್ಕಾಣಿ ಸಾ|| ಆಂದೋಲಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 26/01/15 ರಂದು ಮಧ್ಯಾಹ್ನ ಗೇಣಿ ಇಮ್ಮತಿಯಾಜ ಮತ್ತು ಮಾಮು ಜಾಕೀರ ಇವರಿಬ್ಬರು ಮೋಟಾರ ಸೈಕಲ ಮೇಲೆ ಜಿಬ್ರಾನ ಕೆಲಸ ಮಾಡುತ್ತಿರುವ ಮಿಜಾಬ ನಗರದಲ್ಲಿ ನಬೀಖಾನ ಇವರು ಕಟ್ಟುತ್ತಿರುವ ಮನೆ ಸೆಂಟ್ರಿಂಗ ಮಾಡುವ ಸ್ಥಳಕ್ಕೆ ಹೋಗಿ ಅವನ ಜೊತೆ ಮಾತನಾಡುವದಿದೆ ಅಂತಾ ಹೇಳಿದ್ದು ಅದಕ್ಕೆ ಇಮ್ರಾನಖಾನ ಗುತ್ತೆದಾರ ಅವರಿಗೆ ಜಿಬ್ರಾನಿನಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ ಅಂತಾ ಕೇಳಿದ್ದಕ್ಕೆ ಅವನಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ಜಿಬ್ರಾನನಿಗೆ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು 4-00 ಪಿಎಂ ಸುಮಾರಿಗೆ ಡಬರಾಬಾದ ಕ್ರಾಸಿನಲ್ಲಿ ಕರೆದುಕೊಂಡು ಹೋಗಿ,   ಈ  ಹಿಂದೆ  ಜಿಬ್ರಾನ ಇತನು  ಸದ್ದಾಂ ಮತ್ತು ಅವನ ಗೆಳೆಯರಿಗೆ ಹೊಡೆ ಬಡಿ ಮಾಡಿದ್ದು, ಈ ಬಗ್ಗೆ ಜಿಬ್ರಾನನ  ಮೇಲೆ ಅರ್.ಜಿ.ನಗರ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ. ಅದೇ ದ್ವೇಷದಿಂದ ಸದ್ದಾಂನ ಗೆಳೆಯರಾದ ಗೇಣಿ ಇಮ್ಮತಿಯಾಜ,  ಮಾಮು ಜಾಕೀರ , ಚನ್ನು ಡೌನ ಮತ್ತು ಇನ್ನೂ  3-4 ಜನರು ಕೂಡಿ ಜಿಬ್ರಾನನಿಗೆ   ಕೊಲೆ ಮಾಡುವ ಉದ್ದೇಶದಿಂದ ಚಾಕುದಿಂದ ಎದೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು, ಮತ್ತು ಬಡಿಗೆಯಿಂದ ಎರಡು ಕೈಗಳ ಮೇಲೆ ಕಾಲುಗಳ ಮೇಲೆ ಎಡ ಕಿವಿಗೆ  ಹೊಡೆದು ಭಾರಿ ರಕ್ತಗಾಗೊಳಿಸಿ ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ  ಶ್ರೀ  ಶ್ರೀ ನಜೀರ ಪಟೇಲ್ ತಂದೆ ಸೈಯ್ಯದ ಪಟೇಲ್  ಸಾ: ಮದಿನಾ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.