ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ
: ಶ್ರೀ ಆಲಾವುದ್ದಿನ ತಂದೆ ಸೈಪಾನ ಸಾಬ, ಸಾಃ ನೂರಾನಿ ಮೋಹಲ್ಲಾ ಕಲಬುರಗಿ ರವರು ದಿನಾಂಕ 27-01-2015 ರಂದು 11-30 ಎ.ಎಮ್ ಕ್ಕೆ ಜಲಾಲ
ವಾಡಿಯಲ್ಲಿರುವ ಕ್ಲಾಸಿಕ ಗಿಫ್ಟ ಸೆಂಟರ ಹತ್ತಿರ ರೋಡಿನ ಮೇಲೆ ಫಿರ್ಯಾದಿ ನಡೆದುಕೊಂಡು
ಹೋಗುತ್ತಿದ್ದಾಗ ಒಂದು ಕೆಂಪು ಬಣ್ಣದ ಕಾರ ನಂ. ಕೆ.ಎ 01 ಎಮ್.ಜಿ 3547 ನೇದ್ದರ ಚಾಲಕ ತನ್ನ
ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ
ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಕಾರ ಸಮೇತ ಓಡಿ ಹೋಗಿದ್ದು
ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಮೊಳಕಾಲು ಕೆಳಗೆ ಮತ್ತು ಪಾದಕ್ಕೆ ಗುಪ್ತಗಾಯಗಳಾಗಿರುತ್ತವೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ ಧನಸಿಂಗ ತಂದೆ ಕಿಶನ ಪವಾರ ಸಾ: ದರ್ಮಾಪೂರ ತಾಂಡಾ ಹಾ:ವ: ಹನುಮಾನ ಟೆಂಪಲ ಹತ್ತಿರ
ಬಿದ್ದಾಪೂರ ಕಾಲೋನಿ ಕಲಬುರಗಿ ರವರು 26-01-2015 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನಾನು ರೇಲ್ವೆ ಸ್ಟೇಶನದಿಂದ ನನ್ನ
ಅಟೋರಿಕ್ಷಾ ನಂಬರ ಕೆಎ-32 ಬಿ-2722 ನೇದ್ದರಲ್ಲಿ ಎರಡು ಜನ ಪ್ರಯಾಣಿಕರನ್ನು ಕೂಡಿಸಿಕೊಂಡು
ಟೌನಹಾಲ ಕ್ರಾಸ ಮುಖಾಂತರವಾಗಿ ಸೇಡಂ ರಿಂಗ ರೋಡ ಕಡೆಗೆ ಹೋಗುವಾಗ ಕುಳಗೇರಿ ಕ್ರಾಸ ಸಮೀಪವಿರುವ
ಡಾಕ್ಟರ ದೇಶಪಾಂಡೆ ರವರ ಆಸ್ಪತ್ರೆಯ ಎದುರು ರೋಡ ಮೇಲೆ
ಮೋಟಾರ ಸೈಕಲ ನಂಬರ ಕೆಎ-32 ಎಸ್-5275 ರ ಸವಾರನ್ನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಎದುರಿನಿಂದ ಬಂದು ನನ್ನ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ
ನನಗೆ ಗಾಯಗೊಳಿಸಿದ್ದು ಮತ್ತು ಅಟೋರಿಕ್ಷಾ ಡ್ಯಾಮೇಜ ಮಾಡಿ ನನ್ನ ಹಣೆಗೆ, ಎಡ ಹುಬ್ಬಿಗೆ ರಕ್ತಗಾಯಗೊಳಿಸಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ
ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿಉ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ ಶಿವಕುಮಾರ ತಂದೆ ಬಸಯ್ಯ ಸಾ: ಕನ್ನಕಟ್ಟಾ ತಾ: ಹುಮನಾಬಾದ ಹಾ:ವ: ಸಿ2-01
ಹೈಕೊರ್ಟ ಆವರಣ ಕಲಬುರಗಿ ರವರು ದಿನಾಂಕ: 23/01/2015 ರಂದು 6-30 ಪಿಎಮ್ ಗಂಟೆ ಸುಮಾರಿಗೆ ಹೈಕೋರ್ಟನಲ್ಲಿರುವ ವಸತಿ
ಗೃಹ ಸಿ2-01 ನೇದ್ದನ್ನು ನನ್ನ ಸ್ವಂತ ಊರಾದ ಕನ್ನಕಟ್ಟಾ ಗ್ರಾಮದಲ್ಲಿ ಜಾತ್ರೆ ಪ್ರಯುಕ್ತ
ಕುಟುಂಬ ಸಮೇತನಾಗಿ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕ: 26/01/2015ರಂದು
ಬೆಳಿಗ್ಗೆ 9-30 ಗಂಟೆಗೆ ಸ್ನೇಹಿತರು ಫೋನ ಮಾಡಿ ನಿಮ್ಮ ಮನೆ ಬಾಗಿಲ ಕೀಲಿ ಮುರಿದಿದ್ದು
ಕಳ್ಳತನವಾಗಿರಬಹುದು ಬೇಗ ಬಾ ಅಂತಾ ತಿಳಿಸಿದ ಮೇರೆಗೆ ಅರ್ಜಿದಾರರು ಮನೆಗೆ ಬಂದು ನೋಡಲಾಗಿ ಬಂಗಾರದ ಬೆಳ್ಳಿಯ ಆಭರಣಗಳು
ಹಾಗು ನಗದು ಹಣ ಒಟ್ಟು 95,700/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ
26.01.2015 ರಂದು ಗಣರಾಜ್ಯೋತ್ಸವದ ಅಂಗವಾಗಿ ಆಂದೋಲಾ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್
ನೀಯಮಿತ ಕಾರ್ಯಾಲಯದ ಮುಂದೆ ಬ್ಯಾಂಕಿನ ಕಾರ್ಯದರ್ಶಿಯಾದ ಬಸವರಾಜ ಮತ್ತಿಮಡು ಇವರು ಇಂದು ಬೆಳಗ್ಗೆ 7 ಗಂಟೆಗೆ ದ್ವಜಾರೋಹಣವನ್ನು
ಮಾಡಿ ಮಧ್ಯಾಹ್ನ 12:00 ಗಂಟೆಯಿಂದ 01:30 ಗಂಟೇಯ ಅವಧಿಯಲ್ಲಿ ದ್ವಜವನ್ನು ಕೇಳಗೆ ಇಳಿಸಿ
ದ್ವಜಕ್ಕೆ ಅಪಮಾನ ಮಾಡಿರುತ್ತರೆ ಅಂತಾ ಶ್ರೀ ಮಲ್ಲಿಕಾರ್ಜುನ
ತಂದೆ ಸಿದ್ರಾಮಪ್ಪ ಲಕ್ಕಾಣಿ ಸಾ|| ಆಂದೋಲಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ
26/01/15 ರಂದು ಮಧ್ಯಾಹ್ನ ಗೇಣಿ ಇಮ್ಮತಿಯಾಜ ಮತ್ತು ಮಾಮು ಜಾಕೀರ ಇವರಿಬ್ಬರು
ಮೋಟಾರ ಸೈಕಲ ಮೇಲೆ ಜಿಬ್ರಾನ ಕೆಲಸ ಮಾಡುತ್ತಿರುವ ಮಿಜಾಬ ನಗರದಲ್ಲಿ ನಬೀಖಾನ ಇವರು ಕಟ್ಟುತ್ತಿರುವ
ಮನೆ ಸೆಂಟ್ರಿಂಗ ಮಾಡುವ ಸ್ಥಳಕ್ಕೆ ಹೋಗಿ ಅವನ ಜೊತೆ ಮಾತನಾಡುವದಿದೆ ಅಂತಾ ಹೇಳಿದ್ದು ಅದಕ್ಕೆ ಇಮ್ರಾನಖಾನ
ಗುತ್ತೆದಾರ ಅವರಿಗೆ ಜಿಬ್ರಾನಿನಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ ಅಂತಾ ಕೇಳಿದ್ದಕ್ಕೆ ಅವನಿಗೆ
ಚಾಕು ತೋರಿಸಿ ಬೆದರಿಕೆ ಹಾಕಿ ಜಿಬ್ರಾನನಿಗೆ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು 4-00 ಪಿಎಂ ಸುಮಾರಿಗೆ ಡಬರಾಬಾದ ಕ್ರಾಸಿನಲ್ಲಿ ಕರೆದುಕೊಂಡು ಹೋಗಿ,
ಈ ಹಿಂದೆ ಜಿಬ್ರಾನ ಇತನು
ಸದ್ದಾಂ ಮತ್ತು ಅವನ ಗೆಳೆಯರಿಗೆ ಹೊಡೆ ಬಡಿ ಮಾಡಿದ್ದು, ಈ ಬಗ್ಗೆ ಜಿಬ್ರಾನನ ಮೇಲೆ ಅರ್.ಜಿ.ನಗರ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಅದೇ ದ್ವೇಷದಿಂದ ಸದ್ದಾಂನ ಗೆಳೆಯರಾದ ಗೇಣಿ ಇಮ್ಮತಿಯಾಜ,
ಮಾಮು ಜಾಕೀರ , ಚನ್ನು ಡೌನ ಮತ್ತು ಇನ್ನೂ
3-4 ಜನರು ಕೂಡಿ ಜಿಬ್ರಾನನಿಗೆ
ಕೊಲೆ ಮಾಡುವ ಉದ್ದೇಶದಿಂದ ಚಾಕುದಿಂದ ಎದೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು, ಮತ್ತು ಬಡಿಗೆಯಿಂದ ಎರಡು ಕೈಗಳ ಮೇಲೆ ಕಾಲುಗಳ ಮೇಲೆ ಎಡ ಕಿವಿಗೆ ಹೊಡೆದು ಭಾರಿ ರಕ್ತಗಾಗೊಳಿಸಿ ಮರಣಾಂತಿಕ ಹಲ್ಲೆ ಮಾಡಿ ಕೊಲೆ
ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ಶ್ರೀ ಶ್ರೀ ನಜೀರ ಪಟೇಲ್ ತಂದೆ ಸೈಯ್ಯದ ಪಟೇಲ್ ಸಾ: ಮದಿನಾ ಕಾಲನಿ ಕಲಬುರಗಿ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment