ಅ
ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ
ಠಾಣೆ : ದಿನಾಂಕ 27.01.2015 ರಂದು ಶ್ರೀಮತಿ
ಚೆನ್ನಮ್ಮ ಗಂಡ ಜಗದೀಶ ಭೈರಾಮಡಗಿ ಸಾ : ಶಿವಶಕ್ತಿ ನಗರ ಕಲಬುರಗಿ ರವರ ಗಂಡನಾದ ಜಗದೀಶ ತಂದೆ ಸುಭಾಶ
ಭೈರಾಮಡಗಿ ಈತನು ಮತ್ತು ಅಶೋಕ ಇಬ್ಬರು ಕೂಡಿಕೊಂಡು ಪೆಂಟಿಂಗ್ ಕೆಲಸದ ನಿಮಿತ್ತ ಮುದಬಾಳ ಕೆ
ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ಜೇವರ್ಗಿ ತಾಲ್ಲೂಕಿನ ಮುದಬಾಳ ಕೆ ಗ್ರಾಮದ ಹತ್ತಿರ ಇರುವ
ಮುಖ್ಯ ನೀರಿನ ಕಾಲುವೆಯಲ್ಲಿ ಕೈ ಕಾಲು ಮುಖ ತೊಳೆದುಕೊಳ್ಳಲು ಮಧ್ಯಾಹ್ನ ೦3:30 ಗಂಟೆಯ ಸುಮಾರಿಗೆ
ಹೋಗಿ ಸದರಿ ಮುಖ್ಯ ಕಾಲುವೆಯಲ್ಲಿ ಕೈ ಕಾಲು ತೊಳೆದುಕೊಳ್ಳುತ್ತಿದ್ದಾಗ ಜಗದೀಶ ಈತನು
ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು ಸದರಿಯವನ ಮೃತ
ದೇಹವು ಇಂದು ದಿನಾಂಕ 29.01.2015 ರಂದು ಮುಂಜಾನೆ 09:00 ಗಂಟೆಯ ಸುಮಾರಿಗೆ ಕೇನಾಲ್ ಗೇಟಿನ
ಹತ್ತಿರ ನೀರಿನಲ್ಲಿ ತೆಲಿದ್ದು ಸದರಿ ಮೃತನು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು
ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಜೇವರ್ಗಿ
ಠಾಣೆ : ಶ್ರೀ ಹಣಮಂತ್ರಾಯ
ತಂದೆ ಮಲ್ಲೆಶಪ್ಪಗೌಡ ಆಲೂರು ಸಾ : ಲಕ್ಷ್ಮಿಚೌಕ್ ಜೇವರ್ಗಿ ದಿನಾಂಕ 25.01.2015 ರಂದು ಸಾಯಂಕಾಲ ಕಂಕರ್ ಮಷೀನ್ ನರಿಬೋಳಿ
ಜೇವರ್ಗಿ ರೋಡ ಹತ್ತಿರ ನಮ್ಮ ತಂದೆ ಮಲ್ಲೆಶಪ್ಪಗೌಡ ಇವರು ರೋಡಿನ ಸೈಡಿನಿಂದ ಜೇವರ್ಗಿ ಕಡೆಗೆ
ನಡೆದುಕೊಂಡು ಬರುತ್ತಿದ್ದಾಗ ಆ ವೇಳೆಗೆ ಹಿಂದಿನಿಂದ ಅಂದರೆ ಚೆನ್ನುರು ಕಡೆಯಿಂದ ಬಂದ ಮೋಟಾರು ಸೈಕಲ್ ನಂ ಕೆಎ32ಈಬಿ9632
ನೇದ್ದರ ಚಾಲಕನು ತನ್ನ ಮೊಟಾರು ಸೈಕಲ್ ಅನ್ನು ಭಹಳ ಸ್ಪೀಡಾಗಿ ಮತ್ತು ಅಡ್ಡದಿಡ್ಡಿಯಾಗಿ
ನಡೆಸಿಕೊಂಡು ಬಂದು ನಮ್ಮ ತಂದೆಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅವರಿಗೆ ಗಾಯಗೊಳಿಸಿ ತನ್ನ ಮೋಟಾರು
ಸೈಕಲ್ ನೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ
ಠಾಣೆ : ದಿನಾಂಕ 28.01.2015 ರಂದು ಶ್ರೀ
ಯಮನಪ್ಪ ತಂದೆ ಭೀಮರಾಯ ನಾಯಕೋಡಿ ಸಾ : ಮಾರಡಗಿ ರವರು ಟಾಟಾ ಎಸ್ ವಾಹನ ನಂ ಕೆ.ಎ 27 9819 ನೇದ್ದರದಲ್ಲಿ
ಕುಳಿತುಕೊಂಡು ಮಾರಡಗಿ ಗ್ರಾಮದಿಂದ ಜೇವರ್ಗಿ ಕಡೆಗೆ ಬರುತ್ತಿದ್ದಾಗ ಅವರಾದ್ ಕ್ರಾಸ್ ಹತ್ತಿರ
ಜೇವರ್ಗಿ ಶಹಾಪುರ ಮೇನ್ ರೋಡಿನಲ್ಲಿ ಬರುತ್ತಿದ್ದಾಗ ಮಧ್ಯಾಹ್ನ 02:30 ಗಂಟೆಗೆ ಶಹಾಪುರ
ಕಡೆಯಿಂದ ಬರುತ್ತಿದ್ದ ಲಾರಿ ಟ್ಯಾಂಕರ್ ನಂ ಕೆ.ಎ32ಎ6363 ನೇದ್ದರ ಚಾಲಕನು ತನ್ನ ವಾಹನವನ್ನು
ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನಲ್ಲಿ ಹೋಗುತ್ತಿದ್ದ ಮೋಟಾರು ಸೈಕಲ್
ನಂ ಎಮ್.ಹೆಚ್13 ಬಿ.ಎಪ್ 0544 ನೇದ್ದಕ್ಕೆ ಡಿಕ್ಕಿ ಪಡಿಸಿ ಮುಂದೆ ಬಂದು ಫಿರ್ಯಾದಿ ದಾರನು
ಕುಳಿತುಕೊಂಡು ಹೊಗುತ್ತಿದ್ದ ಟಾಟಾ ಎಸ್ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿ ದ್ವಿಚಕ್ರ
ವಾಹನ ಸವಾರ ಮತ್ತು ಹಿಂದೆ ಕುಳಿತನಿಗೆ ಹಾಗು ಫಿರ್ಯಾದಿದಾರನಿಗೆ ಹಾಗು ಟಾಟಾ ಎಸ್
ವಾಹನದಲ್ಲಿದ್ದ ಮಲ್ಲಪ್ಪ ಮತ್ತು ಚಾಲಕ ನಿಗೆ ಭಾರಿ ಮತ್ತು ಸಾದಾ ರಕ್ತ ಗಾಯಗೊಳಿಸಿ ಆರೋಪಿ ಲಾರಿ
ಚಾಲಕ ತನ್ನ ಲಾರಿಯನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ರೋಜಾ ಠಾಣೆ : ದಿನಾಂಕ: 10/11/2014 ರಂದು ಬೆಳಿಗ್ಗೆ 05:30 ಎ.ಎಮ್
ದಿಂದ 06:00 ಎ.ಎಮ್ ದ ಅವಧಿಯಲ್ಲಿ ನನ್ನ ಗಂಡ
ಶರಣಪ್ಪಾ ತಂದೆ ಸಾಯಿಬಣ್ಣ ನಿಪ್ಪಾಣಿ ಇವರು ನಮಗೆ ಮನೆಯಲ್ಲಿ ಏನು ಹೇಳದೆ-ಕೇಳದೆ ಮನೆಯಿಂದ ಹೊರ
ಹೋದವರು ಇಲ್ಲಿಯವರೆಗೆ ಹಿಂತಿರುಗಿ ಬಂದಿರುವುದಿಲ್ಲಾ. ನಮ್ಮ ಎಲ್ಲಾ ಸಂಭಂಧಿಕರ ಮನೆಯಲ್ಲಿ ಹಾಗೂ
ಅವರ ಮಿತ್ರರು ಮತ್ತು ಗುತ್ತೇದಾರರ ಹತ್ತಿರ ಹೋಗಿ ವಿಚಾರಿಸಿದರು ಯಾವುದೇ ಸುಳಿವು
ಸಿಕ್ಕಿರುವುದಿಲ್ಲಾ. ಅಂತಾ ಶ್ರೀಮತಿ ಭಾರತಿಬಾಯಿ
ಗಂಡ ಶರಣಪ್ಪಾ ನಿಪ್ಪಾಣಿ ಸಾ|| ರಾಮಜೀ ನಗರ ರೋಜಾ
[ಕೆ] ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment