POLICE BHAVAN KALABURAGI

POLICE BHAVAN KALABURAGI

21 March 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಚೌಕ ಠಾಣೆ : ದಿನಾಂಕ 19/03/2014 ರಂದು  ಮುಂಜಾನೆ 11.00ಗಂಟೆ ಸುಮಾರಿಗೆ ಗುಲಬರ್ಗಾ  ನಗರದ ಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಿವಾಜಿ ನಗರ ಬಡಾವಣೆಯಲ್ಲಿ ಮಸೂತಿಯ  ಎದರುಗಡೆ  ಖೋಬಾಜಿ ತಂದೆ ಬೀಮರಾವ್ ಪವಾರ  ಸಾ- ಶಿವಾಜಿನಗರ, ಇತನು ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಗುಲಬರ್ಗಾ ದ  ಡಿಸಿಐಬಿ ಘಟಕದ ಸಿಬ್ಬಂದಿಯವರು ಘಟಕದ ಫ್ರಭಾರದಲ್ಲಿರುವ ಶ್ರೀ. ಯು.ಶರಣಪ್ಪ. ಪೊಲೀಸ್ ಇನ್ಸಪೆಕ್ಟರ ರವರ ಮಾರ್ಗದರ್ಶನದಲ್ಲಿ ಶ್ರೀ.ದತ್ತಾತ್ರೇಯ ಎ.ಎಸ್.ಐ ಹಾಗೂ ಅವರ ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಕಡೆಯಿಂದ ಮಟಕಾ ಚೀಟಿ, ಬಾಲ್ ಪೆನ್ನು, ಹಾಗೂ ನಗದು ಹಣ 18,00/- ರೂಪಾಯಿ, ಜಪ್ತು ಮಾಡಿಕೊಂಡು  ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

20 March 2014

GULBARGA DIST REPORTED CRIMES

ಅತ್ಯಾಚಾರ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ : ದಿನಾಂಕ: 18/03/2014 ರಂದು ರಾತ್ರಿ 07-00 ಗಂಟೆ ಸುಮಾರಿಗೆ  ಶ್ರೀಮತಿ. ಬಾಲಮ್ಮ ಗಂಡ ಕಿಶನ ಸೋನಾರ  ಸಾಕಿಣ್ಣಿ ಸೋನಾರ ತಾಂಡಾ  ರವರು  ಠಾಣೆಗೆ  ಹಾಜರಾಗಿ ತನ್ನ ಹಿರಿಯ ಮಗಳಾದ ಪುತಳಾಬಾಯಿ ಮತ್ತು ಅವಳ ಗಂಡ ಚಂದರ ಹೊಟ್ಟೆಪಾಡಿಗಾಗಿ ದುಡಿಯಲು ಮುಂಬೈಗೆ ಹೋಗಿದ್ದು ಅವರ 15 ವರ್ಷದ ಮಗಳಿಗೆ ನಮ್ಮ ಮನೆಯಲ್ಲಿ ಬಿಟ್ಟು ಹೋಗಿದ್ದು ನಿನ್ನೆ ದಿನಾಂಕ: 17/03/2014 ರಂದು ಬೆಳೆಗ್ಗೆ ನಾವು ನಮ್ಮ ಮನೆಯಲ್ಲಿದ್ದಾಗ ಸರಫೋಸ್ ಕಿಣ್ಣೀ ತಾಂಡಾದ ವಿನೋದ ತಂದೆ ರೂಪಲಾ ರಾಠೋಡ ಅಂದಾಜು ಈತನು ನಮ್ಮ ಮನೆಗೆ ಬಂದು ತನಗೆ ಒಂದು ಬೆಳ್ಳಿಯ ಉಂಗುರು ಮಾಡಿಕೊಡಿ ಅಂತಾ ಕೇಳಿಕೊಂಡು ಬಂದಿದ್ದು, ನನ್ನ ಗಂಡ ಆತನಿಗೆ ಉಂಗುರು ಮಾಡುತ್ತಿದ್ದಾಗ  ವಿನೋದ ರಾಠೋಡನು ನನ್ನ ಮೊಮ್ಮಗಳಿಗೆ ತಾನು ವಿಠಲ ಸೋನಾರರ ಹೊಲದ ಹತ್ತಿರ ನಮ್ಮ  ದನಗಳನ್ನು ಬಿಟ್ಟು ಬಂದಿದ್ದೇನೆ, ಅವುಗಳನ್ನು ಹೊಡೆದುಕೊಂಡು ನಿಮ್ಮ ಮನೆಯ ಕಡೆಗೆ ತೆಗೆದುಕೊಂಡು ಬಾ ಅಂತಾ ಹೇಳಿದ್ದಕ್ಕೆ ತನ್ನ ಮೊಮ್ಮಗಳು ದನಗಳನ್ನು  ಹೊಡೆದುಕೊಂಡು ಬರಲು ಹೋದಾಗ ಸ್ವಲ್ಪ ಸಮಯದ ಬಳಿಕ ವಿನೋದ ರಾಠೋಡ ಸಹ ಬಯಲು ಕಡೆಗೆ ಹೋಗಿ ಬರುತ್ತೇನೆ ಅಂತಾ ಹೋಗಿದ್ದು ಸ್ವಲ್ಪ ಸಮಯದ  ಬಳಿಕೆ ತಮ್ಮ ಮೊಮ್ಮಗಳು ಅಳುತ್ತಾ ನಮ್ಮ ಮನೆಗೆ ಬಂದು ತಾನು ವಿಠಲ ಸೋನಾರನ ಹೊಲದ ಹತ್ತಿರ  ಹೋಗಿ ನೋಡಲಾಗಿ ಅಲ್ಲಿ ಯಾವುದೇ ದನಗಳು ಇರಲಿಲ್ಲ. ತಾನು ಮರಳಿ ಮನೆಗೆ ಬರುತ್ತಿರುವಾಗ ವಿನೋದ ರಾಠೋಡನು ನನಗೆ ಜಬರಿ ಸಂಭೋಗ ಮಾಡಿ ವಿಷಯ ಯಾರಿಗಾದರೂ ತಿಳಿಸಿದರೆ  ನಿನಗೆ ಜೀವ ಸಹಿತ  ಬಿಡುವುದಿಲ್ಲ ಅಂತಾ  ಜೀವದ ಬೆದರಿಕೆ  ಹಾಕಿ ಅಲ್ಲಿಂದ  ಓಡಿ  ಹೋಗಿರುತ್ತಾನೆ.  ಆತ ನನಗೆ  ಜಬರಿ ಸಂಭೋಗ ಮಾಡುವಾಗ ನೆಲಕ್ಕೆ ಬೀಳಿಸಿದ್ದರಿಂದ ನನ್ನ  ಬೆನ್ನಿಗೆ ಕಲ್ಲುಗಳು ತರಿಚಿದ  ರಕ್ತಗಾಯವಾಗಿರುತ್ತದೆ ಮತ್ತು ತನಗೆ ಹೊಟ್ಟೆ  ನೋಯುತ್ತಿದೆ  ಅಂತಾ ಅಳುತ್ತಾ ತಿಳಿಸಿದ್ದು. ಈ  ವಿಷಯದ ಬಗ್ಗೆ ನಮ್ಮ  ತಾಂಡಾದ ಪಂಚಾಯತಿಯಲ್ಲಿ ಸಹ ಯಾವುದೇ  ತೀರ್ಮಾನ ಆಗದೇ ಇದ್ದಿದ್ದರಿಂದ ರಾತ್ರಿ ತಾಂಡಾದಲ್ಲಿಯೇ ಉಳಿದುಕೊಂಡು ಇಂದು ದೂರು ನೀಡಲು  ಪೊಲೀಸ್  ಠಾಣೆಗೆ  ಬಂದಿದ್ದು.  ತನ್ನ  ಮೊಮ್ಮಗಳಿಗೆ ವಿನೋದ ತಂದೆ ರೂಪಲಾ ರಾಠೋಡ  ಸಾ:ಸರಫೋಶ್ ಕಿಣ್ಣೀ  ಕೆಳಗಿನ [ಭವಾನಿ ನಗರ] ತಾಂಡಾ ಈತನು ಜಬರಿ ಸಂಭೋಗ  ಮಾಡಿ ಜೀವದ  ಬೆದರಿಕೆ  ಹಾಕಿ  ಓಡಿ ಹೋಗಿದ್ದು, ಆತನ  ಮೇಲೆ  ಸೂಕ್ತ  ಕಾನೂನು  ಕ್ರಮ  ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಚೀಟಿ ಬರೆದುಕೊಳ್ಳುತ್ತಿರುವವನ ಬಂಧನ:
ಚೌಕ ಪೊಲೀಸ್ ಠಾಣೆ: ¢£ÁAPÀ 19.03.2014 gÀAzÀÄ 1100 ಗಂಟೆಗೆ ಆರೋಪಿ ಕೋಬಾಜಿ ತಂದೆ ಬೀಮರಾವ ಪವಾರ ಸಾಃ ಶಿವಾಜಿ ನಗರ ಗುಲಬರ್ಗಾ ಈತನು  ಶಿವಾಜಿ ನಗರದ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾಗ ಶ್ರೀ ದತ್ತಾತ್ರಯ ಎ.ಎಸ್.ಐ ಡಿಸಿಐಬಿ ಘಟಕ ಗುಲಬರ್ಗಾ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ  ನಗದು ಹಣ ರೂ 1800/- ಮತ್ತು ಮಟಕಾ ಚೀಟಿ, ಬಾಲ ಪೆನ್ನ ಜಪ್ತಿ ಮಾಡಿಕೊಂಡಿದ್ದು ಈ ಬಗ್ಗೆ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ಕಾಳಪ್ಪ ಸುತಾರ ಸಾ: ಲಕ್ಷ್ಮಿ ನಗರ ಗುಲಬರ್ಗಾ ರವರು ಹಳೆ ಹೆಬ್ಬಾಳ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಇಂದು ದಿನಂಕ 19-03-2014 ರಂದು ಪ್ರತಿದಿವಸದಂತೆ ಶಾಲೆಗೆ ಹೊರಟಿದ್ದು ಅವರಂತೆಯೆ  1) ಥಾಹೆರ ಪಟೇಲ ತಂದೆ ಮಾರೂಫ ಪಟೇಲ  2) ಲಕ್ಷ್ಮಿಕಾಂತ ತಂದೆ ಬಸವರಾಜ  3) ಅಹೇಮದಿ ಬೇಗಂ ಗಂಡ ಥಾಹೆರ ಪಟೇಲ 4)ವಿರೇಂದ್ರ ತಂದೆ ಸಿದ್ರಾಮಯ್ಯಾ  5) ಗಾಯತ್ರಿ ಗಂಡ ಸುಜ್ಞಾನ  6) ತೇಜಸ್ವಿನಿ ಗಂಡ ಅನೀಲಕುಮಾರ  7) ಶ್ರೀದೆವಿ ಗಂಡ ಶ್ರೀನಿವಾಸ  8) ಭಾರತಿ ಗಂಡ ಮಡಿವಾಳ  9) ಸುನೀತ ಗಂಡ ಶರಣು 10) ಭುವನೇಶ್ವರಿ ಗಂಡ ವಿಶ್ವನಾಥ 11) ನನ್ನ ಮಗಳು ಕವನಾ ಎಲ್ಲರೂ ಕ್ರೂಜರ ವಾಹನದಲ್ಲಿ ಹೋಗುತ್ತಿರುವಾಗ ಖಾಜಾ ಕೋಟನೂರ ಕೆರೆಯ ಹತ್ತಿರ ಇರುವ ಬ್ರಿಜ್ ಹತ್ತೀರ ಕ್ರೂಜರ ಚಾಲಕನು ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಕಲಾಯಿಸುತ್ತಾ ವಾಹನ  ಕಟ್ ಮಾಡಿದ್ದರಿಂದ ಕ್ರೂಜರ ವಾಹನವು ರಸ್ತೆಯ ಮೇಲೆ ಪಲ್ಟಿಯಾಗಿ ಕ್ರೂಜರದಲ್ಲಿದ್ದ ನನಗೆ ಮತ್ತು ಉಳಿದವರಿಗೆ ಗಾಯಗಳಾಗಿದ್ದು ಕ್ರೂಜರವಾಹನ ಚಾಲಕನ ವಿರುದ್ದ ಕ್ರಮ ಕಯಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕಯಕೊಳ್ಳಲಾಗಿದೆ.

18 March 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಅಕಬರ ತಂದೆ  ಖಾಸಿಂ ಸಾಬ ಬೀದರ  ಸಾ: ನದಿಸಿನ್ನೂರ ತಾ:ಜಿ: ಗುಲಬರ್ಗಾ ರವರ ತಂದೆಯವರು ದಿನಾಂಕ 17-03-2014  ರಂದು ಬೆಳಗ್ಗೆ 08:30 ಗಂಟೆಯ ಸುಮಾರಿಗೆ  ಕೂಲಿ ಕೆಲಸ ಮಾಡಲು ಸರಡಗಿ (ಬಿ) ಖಣಿಗೆ ಹೋಗಿ ಬರುತ್ತೆನೆ ಅಂತಾ ಮನೆಯಿಂದ ನಮ್ಮ ಮೋಟರ್‌ ಸೈಕಲ್‌ ನಂ. ಕೆಎ 32 ಇಡಿ 3695 ನೇದ್ದರ ಮೇಲೆ ಹೇಳಿ ಹೋಗಿರುತ್ತಾರೆ. ಸಾಯಂಕಾಲ 6:10 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ಶಹನಾಜ ಬೇಗಂ ಹಾಗೂ ನಮ್ಮ ತಮ್ಮಂದಿರೆಲ್ಲರೂ ಮನೆಯಲ್ಲಿದ್ದಾಗ ನನ್ನ ಮೋಬೈಲ್‌ಗೆ ನಮ್ಮೂರಿನ ಅಬ್ದುಲ್‌ ರಹೆಮಾನ ಅದೊನಿ ಇತನು ಫೊನ್‌ ಮಾಡಿ ತಿಳಿಸಿದ್ದೆನಂದರೆ ನಾನು ಗುಲಬರ್ಗಾದಿಂದ ನನ್ನ ಮೊಟರ್‌ ಸೈಕಲ್‌ ಮೇಲೆ ಊರಿಗೆ ಬರುತ್ತಿರುವಾಗ ನಿಮ್ಮ ತಂದೆ ಅಕ್ಬರ ಇವರು ಮೊಟರ್‌ ಸೈಕಲ್‌ ಮೇಲೆ   ನನ್ನ ಮುಂದೆ ಹೊಗುತ್ತಿದ್ದರು. ಈಗ ಸಾಯಂಕಾಲ 6  ಗಂಟೆಯ ಸುಮಾರಿಗೆ  ರಾಷ್ಟ್ರೀಯ ಹೆದ್ದಾರಿ 218 ರೋಡಿನ ಮೇಲೆ ಸರಡಗಿ ಖಣಿ ದಾಟಿ ಸ್ವಲ್ಪ ಮುಂದೆ ನಿಮ್ಮ ತಂದೆಯವರು ರಸ್ತೆಯ ಎಡಗಡೆಯಿಂದ ಸಾವಕಾಶವಾಗಿ ಹೊಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಇಂಡಿಕಾ ಕಾರ ಚಾಲಕನು ತನ್ನ ಕಾರನ್ನು ಅತವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆಸದರ ಮೊಟರ್‌ ಸೈಕಲ್‌ಗೆ ಡಿಕ್ಕಿ ಪಡಿಸಿದ ಕಾರ ನಂಬರ ನೋಡಲಾಗಿ ಎಮ್‌ಹೆಚ್‌ 14 ಎಇ-3035 ಅಂತಾ ಇದ್ದು ಸದರ ಚಾಲಕನು ಡಿಕ್ಕಿ ಪಡಿಸಿದ ನಂತರ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ. ಸದರಿ ಘಟನೆಯಿಂದ ನಿಮ್ಮ ತಂದೆಗೆ ಹಣೆಗೆ ಭಾರಿ ರಕ್ತಗಾಯವಾಗಿ ಮುಗಿನಿಂದಬಾಯಿಂದ ರಕ್ತ ಬರುತ್ತಿದೆ. ನೀನು ಬೇಗ ಬಾ ಅಂತಾ ತಿಳಿಸಿದ ಕೂಡಲೆ ನಾನು ಗಾಬರಿಗೊಂಡು ಸದರಿ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಂದೆಯವರು ಚಲಾಯಿಸುತ್ತಿದ್ದ ಮೊಟರ್‌ ಸೈಕಲ್‌ ಕೆಎ 32 ಇಡಿ-3695 ನೇದ್ದಕ್ಕೆ ಕಾರ ಡಿಕ್ಕಿ ಪಡಿಸಿದ್ದರಿಂದ ನಮ್ಮ ತಂದೆಗೆ  ಹಣೆಗೆ ಭಾರಿ ರಕ್ತಗಾಯವಾಗಿ ಮುಗಿನಿಂದಬಾಯಿಂದ ರಕ್ತ ಬರುತ್ತಿತ್ತುನಂತರ ನಾನು ಮತ್ತು ಅಬ್ದುಲ್ ರಹೆಮಾನ ಇಬ್ಬರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು  ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ  ಮಾಡಲಾಗಿ ನಮ್ಮ ತಂದೆಯವರು ಉಪಚಾರದಿಂದ ಗುಣಮುಖರಾಗದೆ ರಾತ್ರಿ 7 ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ. ಶಿವಕುಮಾರ ತಂದೆ  ನಾಗೀಂದ್ರಪ್ಪಾ ಜೋಗನ ಸಾ; ತಾಜಸುಲ್ತಾನಪೂರ ಜಿ;ಗುಲಬರ್ಗಾ ಇವರು ರೆ ದಿನಾಂಕ. 17-03-2014 ರಂದು 11-00 .ಎಂ.ಕ್ಕೆತಾನು ಮತ್ತು ತನ್ನ ಗೆಳೆಯ ಮಲ್ಲಿಕಾರ್ಜುನ ತಂದೆ  ಬಸವರಾಜ ನಾಟೀಕಾರ ಸಾ; ತಾಜಸುಲ್ತಾನಪುರ ಗುಲಬರ್ಗಾ ಇಬ್ಬರು ಕೂಡಿಕೊಂಡು ಮಲ್ಲಿಕಾರ್ಜುನನ ಮೋಟಾರ ಸೈಕಲ ಹಿಂರೋ ಹೊಂಡಾ ಸ್ಪ್ಲೆಂಡರ ನಂ.ಕೆ..36 ಎಸ್.7817 ನೆದ್ದರ ಮೇಲೆ ರಿಂಗರೋಡದಿಂದ ಸುಲ್ತಾನಪೂರಕ್ಕೆ ಹೋಗುತ್ತಿರುವಾಗ ಸಿದ್ದೇಶ್ವರ ಆಸ್ಪತ್ರೆಯ ಎದರುಗಡೆ ಮಲ್ಲಿಕಾಜುನ ಮೋಟಾರ ಸೈಕಲ ನಡೆಯಿಸುತ್ತಿದ್ದು , ಫಿರ್ಯಾದಿ ಶಿವಕುಮಾರ ಹಿಂದೆ ಕುಳಿತಿದ್ದು , ಸದರಿ ಮಲ್ಲಿಕಾರ್ಜುನ ನಾಟೀಕಾರ ಇತನು ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ  ಎದರುಗಡೆ ಬರುತ್ತಿದ್ದ ಒಂದು ಟಿ.ವಿಎಸ್.ಎಕ್ಸ ನಂ.ಕೆ..32 ಇಸಿ.6671 ನೆದ್ದರ ಸವಾರನಿಗೆ ಜೋರಾಗಿ ಡಿಕ್ಕಿ ಹೊಡೆದಿದ್ದು ಇದರಿಂದ  ಎಲ್ಲರೂ ಕೆಳಗೆ ಬಿದ್ದಿದ್ದು ಫಿರ್ಯಾದಿಗೆ ಮತ್ತು ಮಲ್ಲಿಕಾರ್ಜುನನಿಗೆ ತಲೆಗೆ  ಮುಖಕ್ಕೆ , ಕಾಲುಗಳಿಗೆ ರಕ್ತಗಾಯಗಳಾ ಗಿದ್ದು , ಟಿ.ವಿ.ಎಸ್. ಎಕ್ಸನ ಕೆ..32 ಇಸಿ.6671 ನೆದ್ದರ  ಸವಾರ ಹೆಸರು ಕೇಳಿ ಗೊತ್ತಾದ  ಸಿದ್ರಾಮಪ್ಪಾ ತಂದೆ ತುಕರಾಮ ಖರಟಮಲ ಸಾ;ಗಣಜಲಖೇಡ ಇತನಿಗೆ ಭಾರಿಗಾಯಗಳಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಮಲ್ಲಿಕಾರ್ಜುನ ತಂದೆ ಬಸವರಾಜ ನಾಟೀಕಾರ ಸಾ;ತಾಜಸುಲ್ತಾನಪೂರ ಗುಲಬರ್ಗಾ ಇತನು ತನ್ನ ಹಿಂರೋ ಹೊಂಡಾ ಸ್ಪ್ಲೆಂಡರ ನಂ.ಕೆ..36 ಎಸ್.7817 ನೆದ್ದನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿದರಿಂದ ಘಟನೆ ಸಂಭಿಸಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸಪ್ಪ ತಂದೆ ಮಾಳಪ್ಪ ಯಲಗೊಂಡ ಸಾ||ಬಳೂರ್ಗಿ ಇವರು ದಿನಾಂಕ:-17/03/2014 ರಂದು ಮದ್ಯಾಹ್ನ 2:45 ಗಂಟೆಗೆ ನಾನು ನಮ್ಮ ಗ್ರಾಮದ ಸಂಗೋಳಿ ರಾಯಣ್ಣ ವೃತ್ತದ ಹತ್ತಿರ ಇದ್ದಾಗ ಲಕ್ಷ್ಮೀಪುತ್ರ ತಂದೆ ಮಾಳಪ್ಪಾ ಯಲಗೊಂಡ ಸಾ : ಬಳುರ್ಗಿ ಸಂಗಡ ಕೆಲವು ಜನರು ಎಲ್ಲರು ತಮ್ಮ ತಮ್ಮ ಕೈಯಲ್ಲಿ ಬಡಿಗೆ,ಕಬ್ಬು ಕತ್ತರಿಸುವ ಕೊಯ್ತಾ ಮತ್ತು ಕಬ್ಬಿಣದ ರಾಡುಗಳನ್ನು ಹಿಡಿದುಕೊಂಡು ನನ್ನ ಹತ್ತಿರ ಬಂದು “ ಮಗನೆ ಬಸ್ಯಾ ಇವತ್ತ ಹೋಳಿ ಹುಣ್ಣಿ ಆದ ಬಣ್ಣ ಆಡಕ್ಕಾ ನಮ್ಮಗ ರೊಕ್ಕಾ ಕೊಡು”  ಎಂದು ಎಲ್ಲರು ಬೈಯ್ಯ ಹತ್ತಿದರು ಆಗ ನಾನು ನಿಮಗ್ಯಾಕ ರೊಕ್ಕಾ ಕೊಡಬೇಕು ನಾ ಕೊಡಲ್ಲಾ “ ಅಂತ ಹೇಳಿದೇನು ಅದಕ್ಕೆ ಬಸಪ್ಪ ಮೈಂದರ್ಗಿ ಈತನು  ಮಗನೇ ನಮಗೆ ರೊಕ್ಕಕೊಡಲ್ಲಾ ಅಂತಿ ನೀನು” ಅಂತ ಏಕಾಏಕಿ ತನ್ನ ಕೈಯ್ಯಲ್ಲಿದ್ದ ಕೊಯ್ತಾದಿಂದ ನನ್ನ ಹೆಡಕಿನ ಮೇಲೆ ಹೊಡೆದನುಮಾಳಪ್ಪ ಈತನು ಬಡಿಗೆಯಿಂದ ನನ್ನ ಬಾಯಿಯ ಮೇಲೆ ಹೊಡೆದನುಮಾಳಪ್ಪ ಮತ್ತು ಆನಂದ ಇವರು “ ಈ ಮಗನದು ಊರಾಗಾ ಜ್ಯಾಸ್ತಿ ಆಗ್ಯಾದ ಈ ಮಗನಿಗೆ ಖಲಾಸ ಮಾಡ್ರಿ” ಅಂತ ಕಬ್ಬಿಣದ ರಾಡಿನಿಂದ ಇಬ್ಬರು ನನ್ನ ಮೈಕೈಗೆ ಹೊಡೆದರು ಸದರಿಯವರು ಹೊಡೆದು ಭಾರಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಣೆ ಕಿರುಕಳ ಗೃಹಣಿ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಚಂದ್ರಶೇಖರ ತಂದೆ ಭೀಮರಾಯ ಸಾಲಿಮನಿ ಸಾ: ಶಹಾಪೂರ  ತಾ: ಶಹಾಪೂರ  ಜಿ: ಯಾದಗೀರ   ರವರ 4 ನೇ ಮಗಳಾದ ಮರೆಮ್ಮ [ಶೇಭಾ 19 ವರ್ಷ] ಈಕೆಯನ್ನು ನೆಲೋಗಿ ಗ್ರಾಮದ ಭೀಮಣ್ಣ ನಾಟೀಕಾರ ಇವರ 2 ನೇ ಮಗನಾದ ಶರಣಪ್ಪ ನಾಟೀಕಾರ ಇತನಿಗೆ ಭೀಮರಾಯನ ಗುಡಿಯ ಬಲಭೀಮೇಶ್ವರ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಡಲಾಯಿತು. ಮದುವೆ ಸಮಯದಲ್ಲಿ ಮಾತುಕತೆಯಾದಂತೆ ಹಿರಿಯರ ಸಮಕ್ಷಮದಲ್ಲಿ ಹನ್ನೊಂದು ತೊಲೆ ಬಂಗಾರ ಕೊಟ್ಟು ನಾವೇ ಮದುವೆ ಮಾಡಿಕೊಟ್ಟಿದ್ದು  ಮದುವೆಯಾದಾಗಿನಿಂದ ಗಂಡ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ನನ್ನ ಮಗಳಿಗೆ ಒತ್ತಾಯಿಸುತ್ತಿದ್ದಾರೆ. ವಿಷಯವಾಗಿ ನನ್ನ ಗಮಳು ಮರೆಮ್ಮ, ನನ್ನ ಹೆಂಡತಿ ಕಸ್ತೂರಬಾಯಿ ಹಾಗೂ ಆಕೆಯ ಅಕ್ಕ ಚಂದ್ರಕಲಾ ಬಳಿ ಹೇಳಿ ಕೊಂಡಿರುತ್ತಾಳೆ. ಅಲ್ಲದೇ ನಾನು ಅಲ್ಲಿಯೆ ಶಹಾಪೂರದ ಮನೆಯಲ್ಲಿ ಇರುತ್ತೇನೆ ಗಂಡನ ಮನೆಯಲ್ಲಿ ಇರುವದಿಲ್ಲಾ. ಅಂತಾ ಹೇಳಿದಳು. ಆದರೂ ನಾನು ಬುದ್ದಿ ಹೇಳಿ ಗಂಡನ ಮನೆಯಲ್ಲಿ ಇರಬೇಕು ಅಂತಾ ಹೇಳಿ ಕಳುಹಿಸಿದೇವು, ವರ್ಷ ಫೆಬ್ರುವರಿ ತಿಂಗಳಲ್ಲಿ ನಮ್ಮೂರಿನಲ್ಲಿ ಮರೆಮ್ಮನ ಜಾತ್ರೆಯ ಪ್ರಯುಕ್ತ ನನ್ನ ಅಳಿಯ ಶರಣಪ್ಪ ಮತ್ತು ಮರೆಮ್ಮ ಇಬ್ಬರೂ ಬಂದಿದ್ದರು. ಜಾತ್ರೆ ಮುಗಿದ ನಂತರ ಇಬ್ಬರಿಗೂ ನೆಲೋಗಿಗೆ ಕಳುಹಿಸಿದೇವು. ಇಲ್ಲಿಗೆ ಬಂದ ಮರುದಿನವೇ ನನ್ನ ಮಗಳು ಫೋನ ಮಾಡಿ ನಾನು ಇಲ್ಲಿ ಇರಬೇಕೆಂದರೆ ಬಂಗಾರ ತಗೆದುಕೊಂಡು ಬಾ ಇಲ್ಲವಾದರೆ ನೀನು ನಿನ್ನ ಅಪ್ಪನ ಮನೆಯಲ್ಲಿ ಹೋಗಿ ಇರು ಅಂತಾ ಶರಣಪ್ಪ ಮತ್ತು ಆತನ ಮನೆಯವರು ಒತ್ತಾಯಿಸಿದರ ಬಗ್ಗೆ ತಿಳಿಸಿದ್ದಲ್ಲಿ, ನಾನು ನೆಲೋಗಿಗೆ ಬಂದು ಶರಣಪ್ಪ ಮತ್ತು ಮನೆಯವರಿಗೆ ಕಾಲಿಗೆ ಬಿದ್ದು ಕೇಳಿಕೊಂಡು ಇನ್ನು ಸ್ವಲ್ಪ ದಿನಗಳಲ್ಲಿ ನಿಮಗೆ ಬಂಗಾರ ಕೊಡುತ್ತೇವೆ ಅಂತಾ ಕೇಳಿಕೊಂಡು ಬಿಟ್ಟು ಹೋಗಿದೇನು. ಈಗ 2 ದಿನಗಳ ಹಿಂದೆ ನನ್ನ ಮಗಳು ಫೋನ ಮಾಡಿ ನಾನು ಇಲ್ಲಿ ಇರುವದಿಲ್ಲಾ ಗಂಡ ಹಾಗೂ ಅತ್ತೆ , ಮೈದುನರು ತುಂಬಾ ತೊಂದರೆ ಕೊಡುತ್ತಿದ್ದಾರೆ ನಾನು ಬರುತ್ತೇನೆ ಕರೆದುಕೊಂಡು ಹೋಗು ಅಂತಾ ಹೇಳಿದಳು. ಅದಕ್ಕೆ ನಾನು ಹೋಳಿ ಹುಣ್ಣಿಮೆ ಇದೆ ಅದಕ್ಕ ಈಗ ಬೇಡ. ಎರಡು ದಿನದ ನಂತರ ಕರೆದುಕೊಂಡು ಹೋಗುತ್ತೇನೆ ಅಲ್ಲಿಯವರೆಗೆ ನೆಲೋಗಿಯಲ್ಲಿ ಇರು ಅಂತಾ ಹೇಳಿದೇನು. ಆದರೆ ಇಂದು ದಿನಾಂಕ: 17-03-2014 ರಂದು ಬೆಳಿಗ್ಗೆ 09.30 ಸುಮಾರಿಗೆ ಶರಣಪ್ಪನ ಮಾವ ಬಾಲಚಂದ್ರ ತಳವಾರ ಇತನು ನಿಮ್ಮ ಮಗಳಿಗೆ ಬೆಳಿಗ್ಗೆ ನೀರು ಬಿಡಲು ಹೋದಾಗ ಕರೆಂಟ್ ಶಾಖ ಹೊಡೆದಿದೆ ಬನ್ನಿ ಎಂದು ತಿಳಿಸಿದನು. ನಾನು ,ತಮ್ಮ ರಾಯಪ್ಪ, ಮಹಾದೇವಪ್ಪ ಸಾಲಿಮನಿ ಹಾಗೂ ನನ್ನ ಹೆಂಡತಿ ಕಸ್ತೂರಿಬಾಯಿ ಹಾಗೂ ಅಕ್ಕಂದಿರಾದ ಚಂದ್ರಮ್ಮ ಗಂಡ ಅಂಬ್ಲಪ್ಪ ನಾಯ್ಕೋಡಿ, ಮಹಾದೇವಮ್ಮ ಗಂಡ ಸಂಗಪ್ಪ ನಾಯ್ಕೋಡಿ ಮತ್ತು ಊರಿನ ಸಂಬಂಧಿಕರು ಬಂದು ನೆಲೋಗಿ ಗ್ರಾಮದಲ್ಲಿ ನೋಡಲಾಗಿ ನನ್ನ ಮಗಳು ಸತ್ತು ಹೋಗಿದ್ದಳು. ನನ್ನ ಮಗಳ ಎಡಗೈ ಅಂಗೈಯಲ್ಲಿ ಬೊಬ್ಬೆ ಬಂದ ಗಾಯವಾಗಿತ್ತು. ನನ್ನ ಅಳಿಯ ಶರಣಪ್ಪ ಆತನ ತಾಯಿ ನೀಲಮ್ಮ, ತಮ್ಮ ನಿಂಗಪ್ಪ, ಚಿಕ್ಕ ತಾಯಿ ತಾಯಮ್ಮ ಹಾಗೂ ಅಣ್ಣ ಮಹಾದೇವಪ್ಪ ಇವರು ಕೂಡಿಕೊಂಡು ವರದಕ್ಷಿಣೆ ಆಸೆಗೋಸ್ಕರ ನನ್ನ ಮಗಳಿಗೆ ಹಿಂಸೆ ಮಾಡಿ ಮೋಟಾರ್ ನೀರು ಬಿಡುವಾಗ ವಯರ್ ತಾಗುವಂತೆ ಮಾಡಿ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.