ಅತ್ಯಾಚಾರ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ : ದಿನಾಂಕ: 18/03/2014
ರಂದು ರಾತ್ರಿ 07-00 ಗಂಟೆ ಸುಮಾರಿಗೆ ಶ್ರೀಮತಿ.
ಬಾಲಮ್ಮ ಗಂಡ ಕಿಶನ ಸೋನಾರ ಸಾ; ಕಿಣ್ಣಿ ಸೋನಾರ ತಾಂಡಾ ರವರು
ಠಾಣೆಗೆ ಹಾಜರಾಗಿ ತನ್ನ ಹಿರಿಯ ಮಗಳಾದ
ಪುತಳಾಬಾಯಿ ಮತ್ತು ಅವಳ ಗಂಡ ಚಂದರ ಹೊಟ್ಟೆಪಾಡಿಗಾಗಿ ದುಡಿಯಲು ಮುಂಬೈಗೆ ಹೋಗಿದ್ದು ಅವರ 15
ವರ್ಷದ ಮಗಳಿಗೆ ನಮ್ಮ ಮನೆಯಲ್ಲಿ ಬಿಟ್ಟು ಹೋಗಿದ್ದು ನಿನ್ನೆ ದಿನಾಂಕ: 17/03/2014 ರಂದು
ಬೆಳೆಗ್ಗೆ ನಾವು ನಮ್ಮ ಮನೆಯಲ್ಲಿದ್ದಾಗ ಸರಫೋಸ್ ಕಿಣ್ಣೀ ತಾಂಡಾದ ವಿನೋದ ತಂದೆ ರೂಪಲಾ ರಾಠೋಡ
ಅಂದಾಜು ಈತನು ನಮ್ಮ ಮನೆಗೆ ಬಂದು ತನಗೆ ಒಂದು ಬೆಳ್ಳಿಯ ಉಂಗುರು ಮಾಡಿಕೊಡಿ ಅಂತಾ ಕೇಳಿಕೊಂಡು
ಬಂದಿದ್ದು, ನನ್ನ ಗಂಡ ಆತನಿಗೆ ಉಂಗುರು
ಮಾಡುತ್ತಿದ್ದಾಗ ವಿನೋದ ರಾಠೋಡನು ನನ್ನ ಮೊಮ್ಮಗಳಿಗೆ
ತಾನು ವಿಠಲ ಸೋನಾರರ ಹೊಲದ ಹತ್ತಿರ ನಮ್ಮ
ದನಗಳನ್ನು ಬಿಟ್ಟು ಬಂದಿದ್ದೇನೆ,
ಅವುಗಳನ್ನು ಹೊಡೆದುಕೊಂಡು ನಿಮ್ಮ ಮನೆಯ ಕಡೆಗೆ ತೆಗೆದುಕೊಂಡು ಬಾ ಅಂತಾ ಹೇಳಿದ್ದಕ್ಕೆ ತನ್ನ
ಮೊಮ್ಮಗಳು ದನಗಳನ್ನು ಹೊಡೆದುಕೊಂಡು ಬರಲು ಹೋದಾಗ
ಸ್ವಲ್ಪ ಸಮಯದ ಬಳಿಕ ವಿನೋದ ರಾಠೋಡ ಸಹ ಬಯಲು ಕಡೆಗೆ ಹೋಗಿ ಬರುತ್ತೇನೆ ಅಂತಾ ಹೋಗಿದ್ದು ಸ್ವಲ್ಪ
ಸಮಯದ ಬಳಿಕೆ ತಮ್ಮ ಮೊಮ್ಮಗಳು ಅಳುತ್ತಾ ನಮ್ಮ
ಮನೆಗೆ ಬಂದು ತಾನು ವಿಠಲ ಸೋನಾರನ ಹೊಲದ ಹತ್ತಿರ
ಹೋಗಿ ನೋಡಲಾಗಿ ಅಲ್ಲಿ ಯಾವುದೇ ದನಗಳು ಇರಲಿಲ್ಲ. ತಾನು ಮರಳಿ ಮನೆಗೆ ಬರುತ್ತಿರುವಾಗ
ವಿನೋದ ರಾಠೋಡನು ನನಗೆ ಜಬರಿ ಸಂಭೋಗ ಮಾಡಿ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ
ಹಾಕಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಆತ ನನಗೆ
ಜಬರಿ ಸಂಭೋಗ ಮಾಡುವಾಗ ನೆಲಕ್ಕೆ ಬೀಳಿಸಿದ್ದರಿಂದ ನನ್ನ ಬೆನ್ನಿಗೆ ಕಲ್ಲುಗಳು ತರಿಚಿದ ರಕ್ತಗಾಯವಾಗಿರುತ್ತದೆ ಮತ್ತು ತನಗೆ ಹೊಟ್ಟೆ ನೋಯುತ್ತಿದೆ
ಅಂತಾ ಅಳುತ್ತಾ ತಿಳಿಸಿದ್ದು. ಈ ವಿಷಯದ
ಬಗ್ಗೆ ನಮ್ಮ ತಾಂಡಾದ ಪಂಚಾಯತಿಯಲ್ಲಿ ಸಹ
ಯಾವುದೇ ತೀರ್ಮಾನ ಆಗದೇ ಇದ್ದಿದ್ದರಿಂದ ರಾತ್ರಿ
ತಾಂಡಾದಲ್ಲಿಯೇ ಉಳಿದುಕೊಂಡು ಇಂದು ದೂರು ನೀಡಲು
ಪೊಲೀಸ್ ಠಾಣೆಗೆ ಬಂದಿದ್ದು.
ತನ್ನ ಮೊಮ್ಮಗಳಿಗೆ ವಿನೋದ ತಂದೆ ರೂಪಲಾ
ರಾಠೋಡ ಸಾ:ಸರಫೋಶ್ ಕಿಣ್ಣೀ ಕೆಳಗಿನ [ಭವಾನಿ ನಗರ] ತಾಂಡಾ ಈತನು ಜಬರಿ ಸಂಭೋಗ ಮಾಡಿ ಜೀವದ
ಬೆದರಿಕೆ ಹಾಕಿ ಓಡಿ ಹೋಗಿದ್ದು, ಆತನ ಮೇಲೆ
ಸೂಕ್ತ ಕಾನೂನು ಕ್ರಮ
ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಚೀಟಿ ಬರೆದುಕೊಳ್ಳುತ್ತಿರುವವನ ಬಂಧನ:
ಚೌಕ
ಪೊಲೀಸ್ ಠಾಣೆ: ¢£ÁAPÀ 19.03.2014 gÀAzÀÄ 1100
ಗಂಟೆಗೆ ಆರೋಪಿ ಕೋಬಾಜಿ
ತಂದೆ ಬೀಮರಾವ ಪವಾರ ಸಾಃ ಶಿವಾಜಿ ನಗರ ಗುಲಬರ್ಗಾ ಈತನು ಶಿವಾಜಿ ನಗರದ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾಗ ಶ್ರೀ ದತ್ತಾತ್ರಯ ಎ.ಎಸ್.ಐ
ಡಿಸಿಐಬಿ ಘಟಕ ಗುಲಬರ್ಗಾ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ನಗದು ಹಣ
ರೂ 1800/- ಮತ್ತು ಮಟಕಾ ಚೀಟಿ, ಬಾಲ ಪೆನ್ನ
ಜಪ್ತಿ ಮಾಡಿಕೊಂಡಿದ್ದು ಈ ಬಗ್ಗೆ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಅಪಘಾತ
ಪ್ರಕರಣ:
ವಿಶ್ವ
ವಿದ್ಯಾಲಯ ಪೊಲೀಸ್ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ಕಾಳಪ್ಪ
ಸುತಾರ ಸಾ: ಲಕ್ಷ್ಮಿ ನಗರ ಗುಲಬರ್ಗಾ ರವರು ಹಳೆ ಹೆಬ್ಬಾಳ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಇಂದು
ದಿನಂಕ 19-03-2014 ರಂದು
ಪ್ರತಿದಿವಸದಂತೆ ಶಾಲೆಗೆ ಹೊರಟಿದ್ದು ಅವರಂತೆಯೆ 1) ಥಾಹೆರ
ಪಟೇಲ ತಂದೆ ಮಾರೂಫ ಪಟೇಲ 2) ಲಕ್ಷ್ಮಿಕಾಂತ
ತಂದೆ ಬಸವರಾಜ 3) ಅಹೇಮದಿ
ಬೇಗಂ ಗಂಡ ಥಾಹೆರ ಪಟೇಲ 4)ವಿರೇಂದ್ರ
ತಂದೆ ಸಿದ್ರಾಮಯ್ಯಾ 5) ಗಾಯತ್ರಿ
ಗಂಡ ಸುಜ್ಞಾನ 6) ತೇಜಸ್ವಿನಿ
ಗಂಡ ಅನೀಲಕುಮಾರ 7) ಶ್ರೀದೆವಿ
ಗಂಡ ಶ್ರೀನಿವಾಸ 8) ಭಾರತಿ
ಗಂಡ ಮಡಿವಾಳ 9) ಸುನೀತ
ಗಂಡ ಶರಣು 10) ಭುವನೇಶ್ವರಿ
ಗಂಡ ವಿಶ್ವನಾಥ 11) ನನ್ನ ಮಗಳು ಕವನಾ ಎಲ್ಲರೂ ಕ್ರೂಜರ ವಾಹನದಲ್ಲಿ
ಹೋಗುತ್ತಿರುವಾಗ ಖಾಜಾ ಕೋಟನೂರ ಕೆರೆಯ ಹತ್ತಿರ ಇರುವ ಬ್ರಿಜ್ ಹತ್ತೀರ ಕ್ರೂಜರ ಚಾಲಕನು
ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಕಲಾಯಿಸುತ್ತಾ ವಾಹನ ಕಟ್
ಮಾಡಿದ್ದರಿಂದ ಕ್ರೂಜರ ವಾಹನವು ರಸ್ತೆಯ ಮೇಲೆ ಪಲ್ಟಿಯಾಗಿ ಕ್ರೂಜರದಲ್ಲಿದ್ದ ನನಗೆ ಮತ್ತು
ಉಳಿದವರಿಗೆ ಗಾಯಗಳಾಗಿದ್ದು ಕ್ರೂಜರವಾಹನ ಚಾಲಕನ ವಿರುದ್ದ ಕ್ರಮ ಕಯಕೊಳ್ಳುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕಯಕೊಳ್ಳಲಾಗಿದೆ.
No comments:
Post a Comment