ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಅಕಬರ ತಂದೆ ಖಾಸಿಂ ಸಾಬ ಬೀದರ ಸಾ: ನದಿಸಿನ್ನೂರ ತಾ:ಜಿ:
ಗುಲಬರ್ಗಾ ರವರ ತಂದೆಯವರು ದಿನಾಂಕ
17-03-2014 ರಂದು ಬೆಳಗ್ಗೆ 08:30 ಗಂಟೆಯ
ಸುಮಾರಿಗೆ ಕೂಲಿ ಕೆಲಸ ಮಾಡಲು ಸರಡಗಿ (ಬಿ)
ಖಣಿಗೆ ಹೋಗಿ ಬರುತ್ತೆನೆ ಅಂತಾ ಮನೆಯಿಂದ ನಮ್ಮ ಮೋಟರ್ ಸೈಕಲ್ ನಂ. ಕೆಎ 32 ಇಡಿ 3695 ನೇದ್ದರ
ಮೇಲೆ ಹೇಳಿ ಹೋಗಿರುತ್ತಾರೆ. ಸಾಯಂಕಾಲ 6:10 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ಶಹನಾಜ
ಬೇಗಂ ಹಾಗೂ ನಮ್ಮ ತಮ್ಮಂದಿರೆಲ್ಲರೂ ಮನೆಯಲ್ಲಿದ್ದಾಗ ನನ್ನ ಮೋಬೈಲ್‌ಗೆ ನಮ್ಮೂರಿನ ಅಬ್ದುಲ್
ರಹೆಮಾನ ಅದೊನಿ ಇತನು ಫೊನ್ ಮಾಡಿ ತಿಳಿಸಿದ್ದೆನಂದರೆ ನಾನು ಗುಲಬರ್ಗಾದಿಂದ ನನ್ನ ಮೊಟರ್
ಸೈಕಲ್ ಮೇಲೆ ಊರಿಗೆ ಬರುತ್ತಿರುವಾಗ ನಿಮ್ಮ ತಂದೆ ಅಕ್ಬರ ಇವರು ಮೊಟರ್ ಸೈಕಲ್ ಮೇಲೆ ನನ್ನ ಮುಂದೆ ಹೊಗುತ್ತಿದ್ದರು.
ಈಗ ಸಾಯಂಕಾಲ 6 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218
ರೋಡಿನ ಮೇಲೆ ಸರಡಗಿ ಖಣಿ ದಾಟಿ ಸ್ವಲ್ಪ ಮುಂದೆ ನಿಮ್ಮ ತಂದೆಯವರು ರಸ್ತೆಯ ಎಡಗಡೆಯಿಂದ
ಸಾವಕಾಶವಾಗಿ ಹೊಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಇಂಡಿಕಾ ಕಾರ ಚಾಲಕನು ತನ್ನ ಕಾರನ್ನು ಅತವೇಗ
ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ, ಸದರ ಮೊಟರ್ ಸೈಕಲ್‌ಗೆ ಡಿಕ್ಕಿ ಪಡಿಸಿದ ಕಾರ ನಂಬರ ನೋಡಲಾಗಿ ಎಮ್‌ಹೆಚ್
14 ಎಇ-3035 ಅಂತಾ ಇದ್ದು ಸದರ ಚಾಲಕನು ಡಿಕ್ಕಿ ಪಡಿಸಿದ ನಂತರ ತನ್ನ ವಾಹನವನ್ನು ಸ್ಥಳದಲ್ಲಿಯೇ
ಬಿಟ್ಟು ಓಡಿ ಹೊಗಿರುತ್ತಾನೆ. ಸದರಿ ಘಟನೆಯಿಂದ ನಿಮ್ಮ ತಂದೆಗೆ ಹಣೆಗೆ ಭಾರಿ ರಕ್ತಗಾಯವಾಗಿ
ಮುಗಿನಿಂದ, ಬಾಯಿಂದ ರಕ್ತ ಬರುತ್ತಿದೆ.
ನೀನು ಬೇಗ ಬಾ ಅಂತಾ ತಿಳಿಸಿದ ಕೂಡಲೆ ನಾನು ಗಾಬರಿಗೊಂಡು ಸದರಿ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ
ತಂದೆಯವರು ಚಲಾಯಿಸುತ್ತಿದ್ದ ಮೊಟರ್ ಸೈಕಲ್ ಕೆಎ 32 ಇಡಿ-3695 ನೇದ್ದಕ್ಕೆ ಕಾರ ಡಿಕ್ಕಿ
ಪಡಿಸಿದ್ದರಿಂದ ನಮ್ಮ ತಂದೆಗೆ ಹಣೆಗೆ ಭಾರಿ ರಕ್ತಗಾಯವಾಗಿ ಮುಗಿನಿಂದ, ಬಾಯಿಂದ ರಕ್ತ ಬರುತ್ತಿತ್ತು, ನಂತರ ನಾನು ಮತ್ತು ಅಬ್ದುಲ್
ರಹೆಮಾನ ಇಬ್ಬರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತಂದು
ಸೇರಿಕೆ ಮಾಡಲಾಗಿ ನಮ್ಮ ತಂದೆಯವರು
ಉಪಚಾರದಿಂದ ಗುಣಮುಖರಾಗದೆ ರಾತ್ರಿ 7 ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ. ಶಿವಕುಮಾರ ತಂದೆ ನಾಗೀಂದ್ರಪ್ಪಾ ಜೋಗನ ಸಾ;
ತಾಜಸುಲ್ತಾನಪೂರ ಜಿ;ಗುಲಬರ್ಗಾ ಇವರು ರೆ
ದಿನಾಂಕ.
17-03-2014 ರಂದು
11-00 ಎ.ಎಂ.ಕ್ಕೆ. ತಾನು ಮತ್ತು ತನ್ನ ಗೆಳೆಯ ಮಲ್ಲಿಕಾರ್ಜುನ ತಂದೆ ಬಸವರಾಜ ನಾಟೀಕಾರ ಸಾ; ತಾಜಸುಲ್ತಾನಪುರ ಗುಲಬರ್ಗಾ ಇಬ್ಬರು ಕೂಡಿಕೊಂಡು ಮಲ್ಲಿಕಾರ್ಜುನನ ಮೋಟಾರ ಸೈಕಲ ಹಿಂರೋ ಹೊಂಡಾ ಸ್ಪ್ಲೆಂಡರ ನಂ.ಕೆ.ಎ.36
ಎಸ್.7817
ನೆದ್ದರ ಮೇಲೆ ರಿಂಗರೋಡದಿಂದ ಸುಲ್ತಾನಪೂರಕ್ಕೆ ಹೋಗುತ್ತಿರುವಾಗ ಸಿದ್ದೇಶ್ವರ ಆಸ್ಪತ್ರೆಯ ಎದರುಗಡೆ ಮಲ್ಲಿಕಾಜುನ ಮೋಟಾರ ಸೈಕಲ ನಡೆಯಿಸುತ್ತಿದ್ದು , ಫಿರ್ಯಾದಿ ಶಿವಕುಮಾರ ಹಿಂದೆ ಕುಳಿತಿದ್ದು , ಸದರಿ ಮಲ್ಲಿಕಾರ್ಜುನ ನಾಟೀಕಾರ ಇತನು ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ಎದರುಗಡೆ ಬರುತ್ತಿದ್ದ ಒಂದು ಟಿ.ವಿಎಸ್.ಎಕ್ಸ ನಂ.ಕೆ.ಎ.32
ಇಸಿ.6671
ನೆದ್ದರ ಸವಾರನಿಗೆ ಜೋರಾಗಿ ಡಿಕ್ಕಿ ಹೊಡೆದಿದ್ದು ಇದರಿಂದ ಎಲ್ಲರೂ ಕೆಳಗೆ ಬಿದ್ದಿದ್ದು ಫಿರ್ಯಾದಿಗೆ ಮತ್ತು ಮಲ್ಲಿಕಾರ್ಜುನನಿಗೆ ತಲೆಗೆ ಮುಖಕ್ಕೆ , ಕಾಲುಗಳಿಗೆ ರಕ್ತಗಾಯಗಳಾ ಗಿದ್ದು , ಟಿ.ವಿ.ಎಸ್.
ಎಕ್ಸನ ಕೆ.ಎ.32 ಇಸಿ.6671
ನೆದ್ದರ ಸವಾರ ಹೆಸರು ಕೇಳಿ ಗೊತ್ತಾದ ಸಿದ್ರಾಮಪ್ಪಾ ತಂದೆ ತುಕರಾಮ ಖರಟಮಲ ಸಾ;ಗಣಜಲಖೇಡ ಇತನಿಗೆ ಭಾರಿಗಾಯಗಳಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಮಲ್ಲಿಕಾರ್ಜುನ ತಂದೆ ಬಸವರಾಜ ನಾಟೀಕಾರ ಸಾ;ತಾಜಸುಲ್ತಾನಪೂರ ಗುಲಬರ್ಗಾ ಇತನು ತನ್ನ ಹಿಂರೋ ಹೊಂಡಾ ಸ್ಪ್ಲೆಂಡರ ನಂ.ಕೆ.ಎ.36
ಎಸ್.7817
ನೆದ್ದನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿದರಿಂದ ಈ ಘಟನೆ ಸಂಭಿಸಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸಪ್ಪ ತಂದೆ ಮಾಳಪ್ಪ ಯಲಗೊಂಡ
ಸಾ||ಬಳೂರ್ಗಿ ಇವರು ದಿನಾಂಕ:-17/03/2014 ರಂದು ಮದ್ಯಾಹ್ನ 2:45 ಗಂಟೆಗೆ ನಾನು ನಮ್ಮ ಗ್ರಾಮದ
ಸಂಗೋಳಿ ರಾಯಣ್ಣ ವೃತ್ತದ ಹತ್ತಿರ ಇದ್ದಾಗ ಲಕ್ಷ್ಮೀಪುತ್ರ ತಂದೆ ಮಾಳಪ್ಪಾ ಯಲಗೊಂಡ ಸಾ :
ಬಳುರ್ಗಿ ಸಂಗಡ ಕೆಲವು ಜನರು ಎಲ್ಲರು ತಮ್ಮ ತಮ್ಮ ಕೈಯಲ್ಲಿ ಬಡಿಗೆ,ಕಬ್ಬು ಕತ್ತರಿಸುವ ಕೊಯ್ತಾ
ಮತ್ತು ಕಬ್ಬಿಣದ ರಾಡುಗಳನ್ನು ಹಿಡಿದುಕೊಂಡು ನನ್ನ ಹತ್ತಿರ ಬಂದು “ ಮಗನೆ ಬಸ್ಯಾ ಇವತ್ತ ಹೋಳಿ
ಹುಣ್ಣಿ ಆದ ಬಣ್ಣ ಆಡಕ್ಕಾ ನಮ್ಮಗ ರೊಕ್ಕಾ ಕೊಡು” ಎಂದು ಎಲ್ಲರು ಬೈಯ್ಯ ಹತ್ತಿದರು
ಆಗ ನಾನು “ನಿಮಗ್ಯಾಕ ರೊಕ್ಕಾ ಕೊಡಬೇಕು ನಾ
ಕೊಡಲ್ಲಾ “ ಅಂತ ಹೇಳಿದೇನು ಅದಕ್ಕೆ ಬಸಪ್ಪ
ಮೈಂದರ್ಗಿ ಈತನು “ ಮಗನೇ ನಮಗೆ ರೊಕ್ಕಕೊಡಲ್ಲಾ ಅಂತಿ ನೀನು” ಅಂತ ಏಕಾಏಕಿ ತನ್ನ
ಕೈಯ್ಯಲ್ಲಿದ್ದ ಕೊಯ್ತಾದಿಂದ ನನ್ನ ಹೆಡಕಿನ ಮೇಲೆ ಹೊಡೆದನು, ಮಾಳಪ್ಪ ಈತನು ಬಡಿಗೆಯಿಂದ ನನ್ನ
ಬಾಯಿಯ ಮೇಲೆ ಹೊಡೆದನು, ಮಾಳಪ್ಪ ಮತ್ತು ಆನಂದ ಇವರು “ ಈ ಮಗನದು ಊರಾಗಾ ಜ್ಯಾಸ್ತಿ ಆಗ್ಯಾದ ಈ ಮಗನಿಗೆ ಖಲಾಸ ಮಾಡ್ರಿ” ಅಂತ ಕಬ್ಬಿಣದ ರಾಡಿನಿಂದ
ಇಬ್ಬರು ನನ್ನ ಮೈಕೈಗೆ ಹೊಡೆದರು ಸದರಿಯವರು ಹೊಡೆದು ಭಾರಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಣೆ ಕಿರುಕಳ ಗೃಹಣಿ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಚಂದ್ರಶೇಖರ ತಂದೆ
ಭೀಮರಾಯ ಸಾಲಿಮನಿ ಸಾ: ಶಹಾಪೂರ ತಾ:
ಶಹಾಪೂರ ಜಿ: ಯಾದಗೀರ ರವರ 4 ನೇ ಮಗಳಾದ ಮರೆಮ್ಮ [ಶೇಭಾ 19 ವರ್ಷ] ಈಕೆಯನ್ನು ನೆಲೋಗಿ ಗ್ರಾಮದ ಭೀಮಣ್ಣ ನಾಟೀಕಾರ ಇವರ 2 ನೇ ಮಗನಾದ ಶರಣಪ್ಪ ನಾಟೀಕಾರ ಇತನಿಗೆ ಭೀಮರಾಯನ ಗುಡಿಯ ಬಲಭೀಮೇಶ್ವರ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಡಲಾಯಿತು. ಮದುವೆ ಸಮಯದಲ್ಲಿ ಮಾತುಕತೆಯಾದಂತೆ ಹಿರಿಯರ ಸಮಕ್ಷಮದಲ್ಲಿ ಹನ್ನೊಂದು ತೊಲೆ ಬಂಗಾರ ಕೊಟ್ಟು ನಾವೇ ಮದುವೆ ಮಾಡಿಕೊಟ್ಟಿದ್ದು ಮದುವೆಯಾದಾಗಿನಿಂದ ಗಂಡ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ನನ್ನ ಮಗಳಿಗೆ ಒತ್ತಾಯಿಸುತ್ತಿದ್ದಾರೆ. ಈ ವಿಷಯವಾಗಿ ನನ್ನ ಗಮಳು ಮರೆಮ್ಮ, ನನ್ನ ಹೆಂಡತಿ ಕಸ್ತೂರಬಾಯಿ ಹಾಗೂ ಆಕೆಯ ಅಕ್ಕ ಚಂದ್ರಕಲಾ ಬಳಿ ಹೇಳಿ ಕೊಂಡಿರುತ್ತಾಳೆ. ಅಲ್ಲದೇ ನಾನು ಅಲ್ಲಿಯೆ ಶಹಾಪೂರದ ಮನೆಯಲ್ಲಿ ಇರುತ್ತೇನೆ ಗಂಡನ ಮನೆಯಲ್ಲಿ ಇರುವದಿಲ್ಲಾ. ಅಂತಾ ಹೇಳಿದಳು. ಆದರೂ ನಾನು ಬುದ್ದಿ ಹೇಳಿ ಗಂಡನ ಮನೆಯಲ್ಲಿ ಇರಬೇಕು ಅಂತಾ ಹೇಳಿ ಕಳುಹಿಸಿದೇವು, ಈ ವರ್ಷ ಫೆಬ್ರುವರಿ ತಿಂಗಳಲ್ಲಿ ನಮ್ಮೂರಿನಲ್ಲಿ ಮರೆಮ್ಮನ ಜಾತ್ರೆಯ ಪ್ರಯುಕ್ತ ನನ್ನ ಅಳಿಯ ಶರಣಪ್ಪ ಮತ್ತು ಮರೆಮ್ಮ ಇಬ್ಬರೂ ಬಂದಿದ್ದರು. ಜಾತ್ರೆ ಮುಗಿದ ನಂತರ ಇಬ್ಬರಿಗೂ ನೆಲೋಗಿಗೆ ಕಳುಹಿಸಿದೇವು. ಇಲ್ಲಿಗೆ ಬಂದ ಮರುದಿನವೇ ನನ್ನ ಮಗಳು ಫೋನ ಮಾಡಿ ನಾನು ಇಲ್ಲಿ ಇರಬೇಕೆಂದರೆ ಬಂಗಾರ ತಗೆದುಕೊಂಡು ಬಾ ಇಲ್ಲವಾದರೆ ನೀನು ನಿನ್ನ ಅಪ್ಪನ ಮನೆಯಲ್ಲಿ ಹೋಗಿ ಇರು ಅಂತಾ ಶರಣಪ್ಪ ಮತ್ತು ಆತನ ಮನೆಯವರು ಒತ್ತಾಯಿಸಿದರ ಬಗ್ಗೆ ತಿಳಿಸಿದ್ದಲ್ಲಿ, ನಾನು ನೆಲೋಗಿಗೆ ಬಂದು ಶರಣಪ್ಪ ಮತ್ತು ಮನೆಯವರಿಗೆ ಕಾಲಿಗೆ ಬಿದ್ದು ಕೇಳಿಕೊಂಡು ಇನ್ನು ಸ್ವಲ್ಪ ದಿನಗಳಲ್ಲಿ ನಿಮಗೆ ಬಂಗಾರ ಕೊಡುತ್ತೇವೆ ಅಂತಾ ಕೇಳಿಕೊಂಡು ಬಿಟ್ಟು ಹೋಗಿದೇನು. ಈಗ 2 ದಿನಗಳ ಹಿಂದೆ ನನ್ನ ಮಗಳು ಫೋನ ಮಾಡಿ ನಾನು ಇಲ್ಲಿ ಇರುವದಿಲ್ಲಾ ಗಂಡ ಹಾಗೂ ಅತ್ತೆ , ಮೈದುನರು ತುಂಬಾ ತೊಂದರೆ ಕೊಡುತ್ತಿದ್ದಾರೆ ನಾನು ಬರುತ್ತೇನೆ ಕರೆದುಕೊಂಡು ಹೋಗು ಅಂತಾ ಹೇಳಿದಳು. ಅದಕ್ಕೆ ನಾನು ಹೋಳಿ ಹುಣ್ಣಿಮೆ ಇದೆ ಅದಕ್ಕ ಈಗ ಬೇಡ. ಎರಡು ದಿನದ ನಂತರ ಕರೆದುಕೊಂಡು ಹೋಗುತ್ತೇನೆ ಅಲ್ಲಿಯವರೆಗೆ ನೆಲೋಗಿಯಲ್ಲಿ ಇರು ಅಂತಾ ಹೇಳಿದೇನು. ಆದರೆ ಇಂದು ದಿನಾಂಕ: 17-03-2014 ರಂದು ಬೆಳಿಗ್ಗೆ 09.30 ರ ಸುಮಾರಿಗೆ ಶರಣಪ್ಪನ ಮಾವ ಬಾಲಚಂದ್ರ ತಳವಾರ ಇತನು ನಿಮ್ಮ ಮಗಳಿಗೆ ಬೆಳಿಗ್ಗೆ ನೀರು ಬಿಡಲು ಹೋದಾಗ ಕರೆಂಟ್ ಶಾಖ ಹೊಡೆದಿದೆ ಬನ್ನಿ ಎಂದು ತಿಳಿಸಿದನು. ನಾನು ,ತಮ್ಮ ರಾಯಪ್ಪ, ಮಹಾದೇವಪ್ಪ ಸಾಲಿಮನಿ ಹಾಗೂ ನನ್ನ ಹೆಂಡತಿ ಕಸ್ತೂರಿಬಾಯಿ ಹಾಗೂ ಅಕ್ಕಂದಿರಾದ ಚಂದ್ರಮ್ಮ ಗಂಡ ಅಂಬ್ಲಪ್ಪ ನಾಯ್ಕೋಡಿ, ಮಹಾದೇವಮ್ಮ ಗಂಡ ಸಂಗಪ್ಪ ನಾಯ್ಕೋಡಿ ಮತ್ತು ಊರಿನ ಸಂಬಂಧಿಕರು ಬಂದು ನೆಲೋಗಿ ಗ್ರಾಮದಲ್ಲಿ ನೋಡಲಾಗಿ ನನ್ನ ಮಗಳು ಸತ್ತು ಹೋಗಿದ್ದಳು. ನನ್ನ ಮಗಳ ಎಡಗೈ ಅಂಗೈಯಲ್ಲಿ ಬೊಬ್ಬೆ ಬಂದ ಗಾಯವಾಗಿತ್ತು. ನನ್ನ ಅಳಿಯ ಶರಣಪ್ಪ ಆತನ ತಾಯಿ ನೀಲಮ್ಮ, ತಮ್ಮ ನಿಂಗಪ್ಪ, ಚಿಕ್ಕ ತಾಯಿ ತಾಯಮ್ಮ ಹಾಗೂ ಅಣ್ಣ ಮಹಾದೇವಪ್ಪ ಇವರು ಕೂಡಿಕೊಂಡು ವರದಕ್ಷಿಣೆ ಆಸೆಗೋಸ್ಕರ ನನ್ನ ಮಗಳಿಗೆ ಹಿಂಸೆ ಮಾಡಿ ಮೋಟಾರ್ ನೀರು ಬಿಡುವಾಗ ವಯರ್ ತಾಗುವಂತೆ ಮಾಡಿ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment