POLICE BHAVAN KALABURAGI

POLICE BHAVAN KALABURAGI

27 February 2014

Gulbarga District Reported Crimes

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮೋಸಿನ್  ತಂದೆ ಸಾದೋದ್ದಿನ್ ಖುಷೇಷಿ ಸಾ : ಹುಸೇನಿ ಗಾರ್ಡ ಎಂ.ಎಸ್.ಕೆ ಮಿಲ್ ಗುಲಬರ್ಗಾ ರವರ ಹೆಂಡತಿ ಸುಮೆರಾ ಇವಳು ಕಳೆದ 15 ದಿವಸಗಳ ಹಿಂದೆ ಬೆಂಗಳೂರುನಲ್ಲಿ ವಾಸವಿರುವ ತನ್ನ ತಂಗಿ ದೀಪಾ ಇವಳ ಮನೆಗೆ ಹೋಗಿದ್ದು ಮನೆಯಲ್ಲಿ ನಾನು ಒಬ್ಬನೆ ಇರುತ್ತೆನೆ ಇಂದು ದಿನಾಂಕ 26-02-2014 ರಂದು ಎಂದಿನಂತೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಎಸ್.ಟಿ.ಬಿ.ಟಿ ಕ್ರಾಸ ಹತ್ತಿರ ಇರುವ ನಮ್ಮ ಹೋಟೆಲಕ್ಕೆ ಹೋಗಿದ್ದು ನಾನು ಹೋಟೆಲದಲ್ಲಿದ್ದಾಗ ಸಾಯಂಕಾಲ 04-15 ಗಂಟೆ ಸುಮಾರಿಗೆ ನನ್ನ ಅಳಿಯ ವಸಿಂ ಈತನು ಕರೆಮಾಡಿ ತಿಳಿಸಿದೇನೆಂದರೆ ಮದಿನಾ ಕಾಲೋನಿಯ ನದೀಮ ತಂದೆ ಮಹ್ಮದ ಹುಸೇನ ಎಂಬ ಹುಡುಗ ನಿಮ್ಮ ಮನೆ ಬಾಗಿಲಿನ ಕೊಂಡಿ  ಮುರಿದು ಒಳಗೆ ಹೊಗಿದ್ದು ಇದನ್ನು ನೋಡಿ ನಾವು ಅವನಿಗೆ ಹಿಡಿಯಲು ಹೋದಾಗ ಅವನ ಮೇಲಿನ ಅಂತಸ್ತಿನಿಂದ ಕೆಳೆಗೆ ಹಾರಿ ಹೋಗುವಾಗ ಹುಸೇನ ಗಾರ್ಡನ ವಾಚ್ ಮ್ಯಾನ್, ಹಾಗೂ ನಾನು, ಗೆಳೆಯರು ಹಿಡಿದು ಕೂಡಿಸಿರುತ್ತೆವೆ ಅಂತಾ ತಿಳಿಸಿದ ಮೇರೆಗೆ ನಾನು ಸಾಯಂಕಾಲ 04-30 ಗಂಟೆಗೆ ಮನೆಗೆ ಬಂದು ನೊಡಲು ನಮ್ಮ ಮನೆಯ ಮುಂದೆ ಜನರು ನೇರೆದಿದ್ದು ನಮ್ಮ ನದೀಮ ಇವನಿಗೆ ನಮ್ಮ ಮನೆಯ ಮುಂದೆ ಹಿಡಿದು ಕೂಡಿಸಿದ್ದು ಅವನು ಒಂದನೆ ಅಂತಸ ದಿಂದ ಕೆಳಗೆ ಹಾರಿದಿದ್ದರಿಂದ ಹಣೆಯ ಮೇಲೆ ಗಾಯವಾಗಿರುತ್ತದೆ ನಾನು,  ನಮ್ಮ ಮನೆಯ ಒಳಗೆ ಹೋಗಿ ನೋಡಲು ಬಾಗಿಲು ತರೆದಿದ್ದು ಇದ್ದು ಬೆಡ್ ರೂಮಿನ ಒಳಗೆ ಹೋಗಿ ನೋಡಲು ಬೆಡ್ ರೂಮಿನಲ್ಲಿದ್ದ ಎರಡು ಅಲಮಾರಿಗಳು ತರೆದಿದ್ದು ಇದ್ದು ಒಳಗಡೆ ಇದ್ದ ಎಲ್ಲಾ ಸಾಮಾನುಗಳು ಚಲ್ಲಪಿಲ್ಲಿ ಆಗಿ ಬಿದಿದ್ದು ಅಲ್ಲಿಂದ ಕೆಳಗೆ ಬಂದು ಕೆಳಗಿನ ರೂಮಿನಲ್ಲಿ ಬಂದು ನೋಡಲು ಅಲ್ಲಿ ಕೂಡ ಅಲಮಾರ ತೆರೆದಿದ್ದು ಎಲ್ಲಾ ಸಾಮಾನುಳು ಚಿಲ್ಲಪಿಲ್ಲಿ ಆಗಿ ಬಿದಿದ್ದು ಇರುತ್ತದೆ ನಾನು ಕೆಳಗೆ ಬಂದು ಅವನಿಗೆ ಒಂದು ಆಟೋರಿಕ್ಷಾದಲ್ಲಿ ತಂದು ಹಾಕಿರುತ್ತೆನೆ ಪೋಲೀಸ್ ಠಾಣೆಯಲ್ಲಿ ಅವನಿಗೆ ನನ್ನ ಮುಂದೆ ಅಂಗ ಶೋಧನೆ ಮಾಡಲು ಅವನ ಪ್ಯಾಂಟಿನಿಂದ ಜೋಬಿನಿಂದ ಒಂದು ಜೊತೆ ಬೆಳ್ಳಿ ಕಾಲು ಜೈನುಗಳು ಸಿಕ್ಕಿದ್ದು ಅವುಗಳು ನಾನು ನೋಡಲಾಗಿ ಅದು ನನ್ನ ಮಗಳು ರಾನಿಯ ಬುಸರಾ ಇವಳ ಕಾಲು ಜೈನು ಅಂದಾಜು 6 ತೋಲೆ ಅ.ಕಿ 3,000/- ರೂ. ಬೆಲೆ ಬಾಳುವದು  ಇರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ :  ಶ್ರೀ ರಮೇಶ ತಂದೆ ಸೋಮಯ್ಯ ಇಂದ್ರಿಲಾ ಸಾ:ಸಂಜಯ ನಗರ ಜನಗಾಂವ ಜಿ:ವರಾಂಗಲ್ಲ  ಆಂದ್ರಪ್ರದೇಶ ರಾಜ್ಯ  ರವರು ದಿನಾಂಕ 25-02-2014 ರಂದು ರಾತ್ರಿ ವೇಳೆಯಲ್ಲಿ ರಾಷ್ಟೀಯ ಹೆದ್ದಾರಿ 218 ರಸ್ತೆಯ ಮೇಲಿಂದ ಫರಹಾತಾಬಾದ ಗ್ರಾಮವನ್ನು ದಾಟಿ ಕೆರೆಯಂಗಳದ ಹತ್ತಿರ ರಾತ್ರಿ 11:30 ಗಂಟೆಯ ಸುಮಾರಿಗೆ ಪೆಟ್ರೊಲ್ ಪಂಪ ಎದರುಗಡೆಯಲ್ಲಿ ಹೋಗುತ್ತಿರುವಾಗ ನಮ್ಮ ಟೆಂಪೊದ ಎಡಗಡೆಯ ಮುಂದಿನ ಟೈರ್ ಮತ್ತು ಹಿಂದಿನ ಟೈರ್‌ ಪಂಕ್ಚರ್‌ ಆಗಿದ್ದು ಇರುತ್ತದೆ. ಸದರಿ ಟೈರಗಳನ್ನು ಬದಲಾಯಿಸಲು ನಾವು ನಮ್ಮ ಟೆಂಪೊವನ್ನು ರೋಡಿನ ಪಕ್ಕದಲ್ಲಿ  ನಿಲ್ಲಿಸಿ  ಹಿಂದಿನ ಮತ್ತು ಮುಂದಿನ ಎರಡು ಇಂಡಿಕೇಟರ್‌ಗಳನ್ನು ಹಾಕಿ ಮೊದಲು ಹಿಂದಿನ ಟೈರನ್ನು ಬದಲಾಯಿಸಿದ್ದು, ನಂತರ ನಾನು ಮತ್ತು ರಮೇಶ ಇಬ್ಬರೂ ಕೂಡಿಕೊಂಡು ಮುಂದಿನ ಟೈರ್‌ನ್ನು ಬದಲಾಯಿಸಲು ನಾನು ಟೆಂಪೊದ ಕೆಳಗಡೆಯಲ್ಲಿ ಹೋಗಿ ಕುಳಿತು ನನ್ನ ಕಾಲುಗಳನ್ನು ಚಾಚಿಕೊಂಡು ಜಾಕನ್ನು ಎರಿಸುತ್ತಿದ್ದೆನು, ಕ್ಲೀನರ ರಮೇಶ ಇತನು ಕೂಡಾ ಹೊರ ಬಾಜು ದಲ್ಲಿ ಕಾಲುಗಳನ್ನು ಚಾಚಿಕೊಂಡು ಟೈರ ಬಿಚ್ಚುತ್ತಿದ್ದನು. ಹೀಗಿರುವಾಗ ದಿನಾಂಕ 26-02-2014 ರಾತ್ರಿ 12-30 ಗಂಟೆಯ ಸುಮಾರಿಗೆ ನಮ್ಮ ಹಿಂದಗಡೆಯಿಂದ ಒಬ್ಬ ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟೆಂಪೊಕ್ಕೆ ಜೋರಾಗಿ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನಮ್ಮ ಟೆಂಪೊ ಸ್ತಳದಿಂದ ಮುಂದೆ ಹೋಗಿದ್ದರಿಂದ ನನ್ನ ಎಡಗಡೆಯ ಕಾಲಿನ ಮೇಲಿಂದ ಟೈರ ಹಾಯಿದು ಹೋಗಿರುತ್ತದೆ. ಇದರಿಂದ ನನಗೆ ಎಡಗಾಲಿನ ಮೂಳೆ ಮುರಿದಂತೆ ಆಗಿದ್ದಲ್ಲದೆ ಎಡಗಡೆ ಮೇಲಕಿನ ಮೇಲೆ ರಕ್ತಗಾಯವಾಗಿರುತ್ತದೆ. ನಮ್ಮ ಕ್ಲೀನರ್‌ ರಮೇಶ ಇತನ ಕಾಲಿನ ಮೇಲೆ ಹಾಯಿದು ಹೋಗಿದ್ದು ಆತನಿಗೆ ಬಲಗಡೆಯ ಕಾಲಿನ ಮೋಣಕಾಲು ಕೇಳಗೆ ಮೂಳೆ ಮುರಿದಂತೆ ಆಗಿದ್ದಲ್ಲದೆ, ಎಡಗಡೆಯ ಕಾಲಿನ ಮೋಣಕಾಲು ಕೇಳಗೆ ಬಾರಿ ರಕ್ತಗಾಯ ವಾಗಿರುತ್ತದೆ. ನಂತರ ನಮಗೆ ಡಿಕ್ಕಿ ಪಡಿಸಿದ ವಾಹನವನ್ನು ನೋಡಲಾಗಿ ಅದು ಕೂಡಾ ಹಣ್ಣನ್ನು ತುಂಬಿಕೊಂಡು ಹೊಗುವ ಐಚರ ಗೂಡ್ಸ ಗಾಡಿಯಿದ್ದು ಅದರ ನಂ ಎಪಿ 28 ಟಿಇ5327 ಅಂತಾ ಇರುತ್ತದೆ. ಅದರ ಚಾಲಕನ ಹೆಸರು ನರಸಿಮ್ಲೂ ಅಂತಾ ಗೊತ್ತಾಗಿರುತ್ತದೆ. ಆತನಿಗೆ ಹೊಟ್ಟೆಗೆ, ಎದೆಗೆ,  ಬಲಗಾಲಿಗೆ ಒಳಪೆಟ್ಟಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಭಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 February 2014

Gulbarga District Reported Crimes

ಹುಡುಗಿ ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ  ದಿಲೀಪ ತಂದೆ ಬಸಣ್ಣಾ ನಡಗೇರಿ ಸಾ|| ಖಜೂರಿ ತಾ|| ಆಳಂದ ರವರ ಮೊದಲನೇಯ ಮಗಳಾದ ಕರಬಸವ್ವಾ 14 ವರ್ಷ ಇವಳು  ದಿನಾಂಕ 23-02-2014 ರಂದು ರವಿವಾರ ನಾನು ನನ್ನ ಹೆಂಡತಿ ಕಲ್ಪನಾ ಕೂಡಿ ಕೂಲಿ ಕೆಸಕ್ಕೆಂದು ಮನೆಯಿಂದ ಬೆಳಿಗ್ಗೆ 10 ಗಂಟೆಗೆ ಹೋಗುವಾಗ ನನ್ನ ಮಗಳಾದ ಕರಬಸವ್ವಾ ಇವಳಿಗೆ ತಂಗಿಯರಿಗೆ ತೆಗೆದುಕೊಂಡು ಮನೆಯಲ್ಲಿ ಇರು ಅಂತಾ ಹೇಳಿ ಹೋಗಿರುತ್ತೇವೆ, ನಂತರ ಸಾಯಂಕಾಲ 6 ಗಂಟೆಗೆ ಮನೆಗೆ ಬಂದಾಗ ಮಗಳು ಕರಬಸವ್ವಾ ಕಾಣದಿದ್ದಾಗ ಮಗಳು ಸುನೀತಾ ಇವಳಿಗೆ ಕೇಳಲಾಗಿ ಆಕೆ ತಿಳಿಸಿದ್ದೇನೆಂದರೆ ನಮಗೆ ಹಸಿವೆಯಾಗಿದ್ದು ಅಕ್ಕ ಕರಬಸವ್ವಾ ಇವಳು ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೋದವಳು ಬಂದಿರುವುದಿಲ್ಲ, ಅಂತಾ ತಿಳಿಸಿರುತ್ತಾಳೆ, ನಂತರ ನಾನು ಹಾಗೂ ನನ್ನ ಹೆಂಡತಿ ಹಾಗೂ ನಮ್ಮ ಸಂಭಂಧಿಕರು ಕೂಡಿ ಊರಲ್ಲಿ ಹಾಗೂ ಸಂಭಂಧಿಕರಲ್ಲಿ ಹೋಗಿ ಹುಡುಕಾಡಿ ವಿಚಾರಿಸಿದ್ದು ಆಕೆಯ ಪತ್ತೆಯಾಗಿರುವುದಿಲ್ಲಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ದೇವಲ ಗಾಣಗಾಪೂರ ಠಾಣೆ : ಶ್ರೀಮತಿ ಲಕ್ಷ್ಮಿ ಇಲಕಲ್ ಸಾ|| ಗುಲಬರ್ಗಾ ಇವರು ದಿನಾಂಕ: 24-02-2014 ರಂದು ರಾತ್ರಿ ವೇಳೆಯಲ್ಲಿ ತಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಜ್ಯುಶ್ಯಾಟ ಮತ್ತು ಕಂಪ್ಯೂಟರ ಕೊಣೆಗಳ ಬಾಗಿಲ ಕೀಲಿ ಕತ್ತರಿಸಿ ಎಜ್ಯುಶ್ಯಾಟ ಕೊಣೆಯಲ್ಲಿ ಅಳವಡಿಸಿದ 1. ಒಂದು ಬ್ಯಾಟ್ರಿ ಅ:ಕಿ: 7000=00, 2. ಸೆಟ್ಟಪ್ ಬಾಕ್ಸ ಅ:ಕಿ: 3000=00, 3. ಚಾರ್ಜ ಕಂಟ್ರೋಲರ್ ಅ:ಕಿ: 2,500=00, 4. 2 ರಿಮೋಟಗಳು ಅ:ಕಿ: 700=00, ಹಾಗೂ ಕಂಪ್ಯೂಟರ ಕೊಣೆಯಲ್ಲಿದ್ದ 5. ಒಂದು ಸಿಪಿಯು ಅ:ಕಿ: 5500=00, 6. ಕಂಪ್ಯೂರ ಮೌಸ ಅ:ಕಿ: 200=00, 7. 2 ಕಂಪ್ಯೂಟರ ಸ್ಪೀಕರಗಳು ಅ:ಕಿ: 1,100=00 ರೂಪಾಯಿ ಹೀಗೆ ಒಟ್ಟು  20,000=00 ರೂಪಾಯಿ ಕಿಮ್ಮತಿನ ಸಾಮಾನುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ : 26-02-2014 ರಂದು ಮಧ್ಯಾಹ್ನ 01-30 ಗಂಟೆಗೆ ಶ್ರೀ ಅಲೀಮೋದ್ದಿನ ಪಟೇಲ  ತಂದೆ ಖಯ್ಯುಮ್ ಪಟೇಲ ಸಾ|| ಎಂ.ಎಸ್.ಕೆ ಮಿಲ್ ಮದಿನಾ ಕಾಲೋನಿ, ಗುಲಬರ್ಗಾ ಇವರು ಬಡಾವಣೆಯ ಪಕ್ಕದ ರಿಂಗ ರೋಡಿನ ಆಚೆ  ನಮ್ಮ ಒಂದು ಖಾಸಗಿ ನ್ಯೂಟನ್ ಕೀರಿಯ ಪ್ರಥಾಮಿಕ ಶಾಲೆ ಇದ್ದು ಮತ್ತು ಅಲ್ಲೆ ನಮ್ಮ ಭುಮಿ ಇದ್ದು ಅದರಲ್ಲಿ ಕಬ್ಬಿನ ತೋಟ ಮಾಡಿರುತ್ತೆವೆ ದಿನಾಂಕ|| 20-02-14 ರಂದು ಬೆಳಗ್ಗೆ 11-00 ಸುಮಾರಿಗೆ ನಮ್ಮ ತೋಟದ ಹತ್ತಿರ ನಾನು ಮತ್ತು ನಮ್ಮ ತಂದೆ ಖಯ್ಯುಮ್ ಪಟೇಲ ನಮ್ಮ ತಮ್ಮಂದಿರಾದ ಅಜೀಮ ಪಟೇಲ, ಮತ್ತು ವಾಸಿಂ ಪಟೇಲ, ಹಾಗೂ ನನ್ನ ಗೆಳೆಯರಾದ ಮೈನೋದ್ದಿನ ಸಿಮ್ಲಾ, ಹಾಗೂ ಅರೀಫ ನಾವೆಲ್ಲರೂ ಹೊಲದಲ್ಲಿದ್ದಾಗ ಅಲ್ಲೆ ಪಕ್ಕದಲ್ಲಿ ರಿಂಗ ರೋಡಿನ ಆಚೆ ಬಹಳಷ್ಟು ಜನರು ನೆರೆದಿದ್ದು ನಾವೆಲ್ಲರೂ ರಿಂಗ ರೋಡಿನ ಆಚೆ ನಿಂತು ನೋಡುತ್ತಿದ್ದು ಅಲ್ಲಿ ಪತ್ರಾಸ ಹಾಕಿದ ಶಡ್ಡಗಳನ್ನು ಹಾಗೂ ಮನೆ ಕೇಡವುತ್ತಿದ್ದರು ಮನೆ ಕಡವಿದ್ದ ಬಗ್ಗೆ ಅಸ್ಲಂ ಕಲ್ಯಾಣಿರವರು ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಖಯ್ಯುಮ ಪಟೇಲ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದ್ದ ಬಗ್ಗೆ ನಾನು ದಿನಪತ್ರಿಕೆಯಲ್ಲಿ ನೋಡಿ ಈ ವಿಷಯದ ಬಗ್ಗೆ ಅಸ್ಲಂ ಕಲ್ಯಾಣಿ ಇವರು ಮಾತನಾಡಿಸಬೇಕೆಂದು ನಿನ್ನೆ ದಿನಾಂಕ || 25/02/2014 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ನಾನು,  ಅಸ್ಲಾಂ ಕಲ್ಯಾಣಿ ಹತ್ತಿರ ಹೋಗಿ ಈ ವಿಷಯದ ಬಗ್ಗೆ ವಿಚಾರಿಸಲು ನಾವು ನಿಮ್ಮ ಮನೆ ಕೆಡವಿಲ್ಲಾ ನಮಗೆ ಯಾವುದೆ ಸಂಬಂಧ ಇಲ್ಲಾ ಅಂತಾ ಹೇಳಿದ್ದರಿಂದ ಸ್ವಲ್ಪ ಸಮಯದ ನಂತರ ಮಧ್ಯಾಹ್ನ 12-00 ಗಂಟೆಯ ನಾನು ಪಕ್ಕದಲ್ಲಿ ಅಸ್ಲಂ  ಕಲ್ಯಾಣಿ ಇವರ ಕೆಡವಿದ ಮನೆಯ ಎದುರಿನಿಂದ ಹೋಗುತ್ತಿರುವಾಗ ಅದೇ ವೇಳೆಯಲ್ಲಿ ಅಸ್ಲಾಂ ಕಲ್ಯಾಣಿ ಇವನು ಅವನ ಜೋತೆಯಲ್ಲಿ ದಿಲಶ್ಯಾದ್ ಕಲ್ಯಾಣಿ, ಶಾಫೀಕ ಕಲ್ಯಾಣಿ, ವಾಜೀದ ಕಲ್ಯಾಣಿ,  ಮತ್ತು ಸಾಜೀದ ಕಲ್ಯಾಣಿ,  ರವರೊಂದಿಗೆ ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ಬೈದು ಕೈಯಿಂದ ಕಾಲಿನಿಂದ ಹೋಡೆದು ಗಾಯಗೋಳಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 25-02-2014 ರಂದು ಹಡಲಗಿ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ  ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಸಿಬ್ಬಂಧಿ ಹಾಗೂ ಪಂಚರೊಂದಿಗೆ  ಬಾತ್ಮಿ ಬಂದ ಸ್ಥಳವಾದ ಹಡಲಗಿ ಗ್ರಾಮದ ಶ್ರೀ ಹನುಮಾನ ದೇವರ ಗುಡಿಯ ಮರೆಯಾಗಿ ನಿಂತು ನೋಡಲಾಗಿ ಶ್ರೀ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ವಿಚಾರಿಸಲು ರಾಜೇಶ ತಂದೆ ಮಾಣಿಕರಾವ ಮರಬೆ ಸಾ|| ದರ್ಗಾ ಶಿರೂರಹಾ|| ||ಹಡಲಗಿ ಗ್ರಾಮ ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 300/-ಒಂದು ಮಟಕಾ ಅಂಕಿ ಸಂಖ್ಯೆ ಹಾಳೆ ಒಂದು ಬಾಲ ಪೆನ್ನ ಒಂದು ಕಪ್ಪು ಬಣ್ಣದ ನೋಕಿಯಾ ಮೋಬೈಲ ಅದರಲ್ಲಿ ಐಡಿಯಾ ಕಂಪನಿಯ ಸಿಮ ನಂ. 9164180504 ಅ.ಕಿ 500/- ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 25-02-2014 ರಂದು 1600 ಗಂಟೆಗೆ ನಿಂಬರ್ಗಾ ಗ್ರಾಮದ ಮೌಲಾ ನಗರದ ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆರವರು, ಠಾಣೆಯ ಸಿಬ್ಬಂಧಿ ಮತ್ತು ಪಂಚರೋಂದಿಗೆ  ನಿಂಬರ್ಗಾ ಗ್ರಾಮದ ಮೌಲಾ ನಗರದ  ಮಲ್ಲಿಕಾರ್ಜುನ ದೇವರ ಗುಡಿಯ ಹಿಂದುಗಡೆ ಮರೆಯಾಗಿ ನಿಂತು ನೋಡಲಾಗಿ 06 ಜನ ವ್ಯಕ್ತಿಗಳು ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ  06 ಆಸಾಮಿ ಜನರನ್ನು ಹಿಡಿದು ವಿಚಾರಿಸಲಾಗಿ 01.ನಾಗಪ್ಪ ತಂದೆ ಚಂದ್ರಾಮಪ್ಪ ಪೂಜಾರಿ 02. ಧರ್ಮರಾಯ ತಂದೆ ಮಹಾದೇವ ಗೋಣಿ 3. ಪಿಂಟು ತಂದೆ ಬಸವರಾಜ ಅಮಾನೆ 04. ಬಸವರಾಜ ತಂದೆ ಮಾಣಿಕಪ್ಪ ಬುಳ್ಳಾ 05. ಚಂದ್ರಕಾಂತ ತಂದೆ ಕಲ್ಯಾಣಿ ಮಾನೆ 06. ಯಲ್ಲಾಲಿಂಗ ತಂದೆ ಸೂರ್ಯಕಾಂತ ಭಾಸಗೆ ಸಾ|| ಎಲ್ಲರು ನಿಂಬರ್ಗಾ ಸದರಿಯವ ರಿಂದ ನಗದು ಹಣ ಒಟ್ಟು 3080/- ರೂಪಾಯಿ ಹಾಗೂ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.    
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾತ್ಮ ಬಸವೇಶ್ವರ ನಗರ ಠಾಣೆ : ಶ್ರೀ ವಿಶ್ವನಾಥ ಶಿಂಧೆ ಸಾಃ ಸರಸ್ವತಿ ಗೋದಾಮ್ ಗುಲಬರ್ಗಾ ಇವರು ದಿನಾಂಕ 22-02-2014 ರಂದು 02:00 ಪಿ.ಎಂ. ಸುಮಾರಿಗೆ ವಿರೇಂದ್ರ ಪಾಟೀಲ್ ಬಡಾವಣೆಯಲ್ಲಿದ್ದ ಸಂಬಂಧಿಕರ ವಾಸ್ತು ಕಾರ್ಯಕ್ರಮವಿದ್ದ ಪ್ರಯುಕ್ತ ಮತ್ತು ಆತನ ಹೆಂಡತಿ ಇಬ್ಬರೂ ಕೂಡಿಕೊಂಡು ಹೊಂಡಾ ಆಕ್ಟಿವಾ ಮೋ.ಸೈಕಲ ನಂ. KA 32 Y 4242 ನೇದ್ದರ ಮೇಲೆ ಹೋಗಿ ಮನೆಯ ಮುಂದೆ ಸೈಡ್ ಲಾಕ್ ಹಾಕಿ ನಿಲ್ಲಿಸಿದ್ದು ನಂತರ ಕಾರ್ಯಕ್ರಮ ಮುಗಿಸಿಕೊಂಡು 02:30 ಪಿ.ಎಂ. ಕ್ಕೆ ಬಂದು ನೋಡಲಾಗಿ ಮೋಟಾರ ಸೈಕಲ ಇರಲಿಲ್ಲಾ. ಎಲ್ಲಾ ಕಡೆಗೆ ಹುಡುಕಾಡಿದರೂ ಮೋಟಾರ ಸೈಕಲ ಪತ್ತೆಯಾಗಿರುವುದಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 19-02-2014 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀ ಚಂದ್ರಕಾಂತ ತಂದೆ ಶಾಂತಪ್ಪ ಕಲ್ಲೂರ  ಸಾ: ಸಂತೋಷ ಕಾಲೋನಿ ಗುಲಬರ್ಗಾ  ರವರು ತಮ್ಮ ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-5383 ರ ಮೇಲೆ ತಾನು ಕೆಲಸ ಮಾಡುತ್ತಿರುವ ಆಫೀಸಿಗೆ ಹೋಗುವ ಕುರಿತು ಖಾದ್ರಿ  ಚೌಕ ಮುಖಾಂತರ ಶಹಾಬಜಾರ ನಾಕಾ ಕಡೆಗೆ ಹೋಗುತ್ತಿದ್ದಾಗ ಶೆಟ್ಟಿ ಕಾಂಪ್ಲೆಕ್ಸ ಎದುರಿನ ರೋಡ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆಎ-32 ಇಡಿ-3472 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 25-02-2014 ರಂದು ಶ್ರೀ ನಿಹಾಲ ತಂದೆ ಚಂದ್ರಶೇಖರ ಪ್ರಸಾದ  ಸಾ:ಬಾಲಾಜಿ ಆಸ್ಪತ್ರೆ ರಾಜಾಪುರ ರೋಡ ಗುಲಬರ್ಗಾ  ರವರ ಗೆಳೆಯನಾದ ಬಸವಂತರಾಯ ಪಾಟೀಲ ಇವರು ಒಂದು ಹೊಸ ಜೀಪ ಖರೀದಿಸಿದ್ದು ಪೂಜೆಗಾಗಿ ಕೊರಂಟಿ ಹನುಮಾನ ಗುಡಿ ಹತ್ತಿರ ಬರಲು ಹೇಳಿ ದಾಗ  ತನ್ನ ಇತರೆ ಗೆಳೆಯ ರೊಂದಿಗೆ ಗುಡಿಯ ಹತ್ತಿರ ಬಂದು ಪೂಜೆ ಮುಗಿಸಿಕೊಂಡು ನಂತರ ಊಟ ಮಾಡಲು ಜೈಲ ಹತ್ತಿರ ಇರುವ ಇಕೋ ಗಾರ್ಡನಗೆ ಹೊರಟೇವು, ಇಕೋ ಗಾರ್ಡನ ಹತ್ತಿರ ಬಂದಾಗ ಪಿರ್ಯಾದಿಯ ಮನೆಯಿಂದ ಪೋನ ಬಂದಿದ್ದು, ಆಗ ಪಿರ್ಯಾದಿ ಇನ್ನೊಮ್ಮೆ ಊಟ ಮಾಡೋಣಾ ಅಂತ ಹೇಳಿದ್ದರಿಂದ ಆರೋಪಿಯು  ಜೀಪನ್ನು ತಿರುಗಿಸಿ ಕೊಂಡು ಗುಲಬರ್ಗಾ ಕಡೆಗೆ ಬರುವಾಗ  ನಂದಿಕೂರ ತಾಂಡಾ ದಾಟಿ ಬರುವ ಮೃತ್ಯೂಂಜಯ ಗೋಡಾನ ಹತ್ತಿರ ಅವರುಗಳು ಕುಳಿತ ಜೀಪನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದ ಅವರ ಗೆಳೆಯ ಆಶೀಷಕುಮಾರ ಶೃಂಗೇರಿ ಇತನು ರಸ್ತೆಯ ಬಲಗಡೆಗೆ ಜೀಪನ್ನು ಪಲ್ಟಿ ಗೊಳಿಸಿರುತ್ತಾನೆ. ಸದರಿ ಜೀಪಿನಲ್ಲಿ ಕುಳಿತವರಿಗೆ ಸಾದಾ ಹಾಗೂ ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 25-02-2014 ರಂದು ಬೆಳಿಗ್ಗೆ ಬೆಳಿಗ್ಗೆ 10;00 ಗಂಟೆಗೆ ಶ್ರೀಮತಿ ವಿಜಯಲಕ್ಷ್ಮಿ ಗಂಡ ನಾರಾಯಣ ಅಂಬುರೆ ಸಾ : ಇಂದಿರಾ ನಗರ ಅಫಜಲಪೂರ ರವರು ಮನೆಯ ಅಂಗಳದಲ್ಲಿ ಬಟ್ಟೆ ಒಗೆಯುತ್ತಿದ್ದೆ. ಅದೆ ಸಮಯಕ್ಕೆ ನಮ್ಮ ಮನೆಯ ಬಾಜು ಇದ್ದ ರಫೀಕ ಮತ್ತು ಅವನ ಸಂಗಡ ಇನ್ನು ಇಬ್ಬರು ಕೂಡಿ ತಮ್ಮ ಕೈಯಲ್ಲಿ ಕೊಡ್ಲಿಗಳನ್ನು  ಹಿಡಿದುಕೊಂಡು ನಮ್ಮ ಮನೆ ಹತ್ತಿರ ಬಂದು ಅಂಗಳದಲ್ಲಿ ಇದ್ದ  ನಮ್ಮ ಟೆಂಗಿನ ಮರವನ್ನು ಕಡಿಯುತ್ತಿದ್ದರು. ಆಗ ನಾನು ಅವರನ್ನು ತಡೆಯಲು ಹೋದೆ ಅವರು ನನಗೆ ತಡೆದು ನಿಲ್ಲಿಸಿ ಏ ಭೋಸಡಿ ನಿನಗ ಎಷ್ಟಸಲ ಹೇಳಿದರು ಕೇಳುತ್ತಿಲ್ಲಾ, ಇವತ್ತ ಈ ಗಿಡ ಕಡದೆ ಬಿಡತಿವಿ ಅಂತಾ ಅಂದರು ಆಗ ನಾನು ನನ್ನ ಗಂಡ ಬರುವರೆಗೆ ನಿಲ್ಲರಿ ಅಂತಾ ಅಂದಿದ್ದಕ್ಕೆ ರಪೀಕ ಇವನು ಪಹಲೆ ಏ ಛಿನಾಲಕೋ ಖಲಾಸ ಕರೋರೆ ಅಂತಾ ಅಂದರು ನಂತರ ಸದರಿ ಗಿಡವನ್ನು ಕಡೆದು ಅವಾಚ್ಯವಾಗಿ ಬೈದು ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.