ಹುಡುಗಿ
ಕಾಣೆಯಾದ ಪ್ರಕರಣ :
ಆಳಂದ ಠಾಣೆ
: ಶ್ರೀ ದಿಲೀಪ ತಂದೆ ಬಸಣ್ಣಾ ನಡಗೇರಿ ಸಾ|| ಖಜೂರಿ ತಾ|| ಆಳಂದ ರವರ
ಮೊದಲನೇಯ ಮಗಳಾದ ಕರಬಸವ್ವಾ 14 ವರ್ಷ ಇವಳು ದಿನಾಂಕ
23-02-2014 ರಂದು ರವಿವಾರ ನಾನು ನನ್ನ ಹೆಂಡತಿ ಕಲ್ಪನಾ ಕೂಡಿ ಕೂಲಿ ಕೆಸಕ್ಕೆಂದು ಮನೆಯಿಂದ
ಬೆಳಿಗ್ಗೆ 10 ಗಂಟೆಗೆ ಹೋಗುವಾಗ ನನ್ನ ಮಗಳಾದ ಕರಬಸವ್ವಾ ಇವಳಿಗೆ ತಂಗಿಯರಿಗೆ ತೆಗೆದುಕೊಂಡು
ಮನೆಯಲ್ಲಿ ಇರು ಅಂತಾ ಹೇಳಿ ಹೋಗಿರುತ್ತೇವೆ, ನಂತರ
ಸಾಯಂಕಾಲ 6 ಗಂಟೆಗೆ ಮನೆಗೆ ಬಂದಾಗ ಮಗಳು ಕರಬಸವ್ವಾ ಕಾಣದಿದ್ದಾಗ ಮಗಳು ಸುನೀತಾ ಇವಳಿಗೆ
ಕೇಳಲಾಗಿ ಆಕೆ ತಿಳಿಸಿದ್ದೇನೆಂದರೆ ನಮಗೆ ಹಸಿವೆಯಾಗಿದ್ದು ಅಕ್ಕ ಕರಬಸವ್ವಾ ಇವಳು ಮಧ್ಯಾಹ್ನ 3
ಗಂಟೆಗೆ ಮನೆಯಿಂದ ಹೋದವಳು ಬಂದಿರುವುದಿಲ್ಲ, ಅಂತಾ
ತಿಳಿಸಿರುತ್ತಾಳೆ, ನಂತರ ನಾನು ಹಾಗೂ ನನ್ನ ಹೆಂಡತಿ ಹಾಗೂ ನಮ್ಮ ಸಂಭಂಧಿಕರು ಕೂಡಿ
ಊರಲ್ಲಿ ಹಾಗೂ ಸಂಭಂಧಿಕರಲ್ಲಿ ಹೋಗಿ ಹುಡುಕಾಡಿ ವಿಚಾರಿಸಿದ್ದು ಆಕೆಯ ಪತ್ತೆಯಾಗಿರುವುದಿಲ್ಲ, ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು
ಪ್ರಕರಣ :
ದೇವಲ
ಗಾಣಗಾಪೂರ ಠಾಣೆ : ಶ್ರೀಮತಿ ಲಕ್ಷ್ಮಿ ಇಲಕಲ್ ಸಾ|| ಗುಲಬರ್ಗಾ
ಇವರು ದಿನಾಂಕ: 24-02-2014 ರಂದು ರಾತ್ರಿ ವೇಳೆಯಲ್ಲಿ ತಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಎಜ್ಯುಶ್ಯಾಟ ಮತ್ತು ಕಂಪ್ಯೂಟರ ಕೊಣೆಗಳ ಬಾಗಿಲ ಕೀಲಿ ಕತ್ತರಿಸಿ ಎಜ್ಯುಶ್ಯಾಟ ಕೊಣೆಯಲ್ಲಿ
ಅಳವಡಿಸಿದ 1. ಒಂದು ಬ್ಯಾಟ್ರಿ ಅ:ಕಿ: 7000=00, 2.
ಸೆಟ್ಟಪ್ ಬಾಕ್ಸ ಅ:ಕಿ: 3000=00, 3. ಚಾರ್ಜ ಕಂಟ್ರೋಲರ್ ಅ:ಕಿ: 2,500=00, 4. 2
ರಿಮೋಟಗಳು ಅ:ಕಿ: 700=00, ಹಾಗೂ ಕಂಪ್ಯೂಟರ ಕೊಣೆಯಲ್ಲಿದ್ದ 5. ಒಂದು ಸಿಪಿಯು ಅ:ಕಿ: 5500=00, 6.
ಕಂಪ್ಯೂರ ಮೌಸ ಅ:ಕಿ: 200=00, 7. 2 ಕಂಪ್ಯೂಟರ ಸ್ಪೀಕರಗಳು ಅ:ಕಿ: 1,100=00
ರೂಪಾಯಿ ಹೀಗೆ ಒಟ್ಟು 20,000=00 ರೂಪಾಯಿ ಕಿಮ್ಮತಿನ ಸಾಮಾನುಗಳು ಯಾರೋ ಕಳ್ಳರು ಕಳುವು
ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ರಾಘವೇಂದ್ರ
ನಗರ ಠಾಣೆ : ದಿನಾಂಕ :
26-02-2014
ರಂದು ಮಧ್ಯಾಹ್ನ 01-30 ಗಂಟೆಗೆ ಶ್ರೀ ಅಲೀಮೋದ್ದಿನ ಪಟೇಲ
ತಂದೆ ಖಯ್ಯುಮ್ ಪಟೇಲ ಸಾ|| ಎಂ.ಎಸ್.ಕೆ ಮಿಲ್ ಮದಿನಾ ಕಾಲೋನಿ, ಗುಲಬರ್ಗಾ ಇವರು ಬಡಾವಣೆಯ
ಪಕ್ಕದ ರಿಂಗ ರೋಡಿನ ಆಚೆ ನಮ್ಮ ಒಂದು ಖಾಸಗಿ
ನ್ಯೂಟನ್ ಕೀರಿಯ ಪ್ರಥಾಮಿಕ ಶಾಲೆ ಇದ್ದು ಮತ್ತು ಅಲ್ಲೆ ನಮ್ಮ ಭುಮಿ ಇದ್ದು ಅದರಲ್ಲಿ ಕಬ್ಬಿನ
ತೋಟ ಮಾಡಿರುತ್ತೆವೆ ದಿನಾಂಕ|| 20-02-14 ರಂದು ಬೆಳಗ್ಗೆ 11-00 ಸುಮಾರಿಗೆ ನಮ್ಮ ತೋಟದ ಹತ್ತಿರ
ನಾನು ಮತ್ತು ನಮ್ಮ ತಂದೆ ಖಯ್ಯುಮ್ ಪಟೇಲ ನಮ್ಮ ತಮ್ಮಂದಿರಾದ ಅಜೀಮ ಪಟೇಲ, ಮತ್ತು ವಾಸಿಂ ಪಟೇಲ,
ಹಾಗೂ ನನ್ನ ಗೆಳೆಯರಾದ ಮೈನೋದ್ದಿನ ಸಿಮ್ಲಾ, ಹಾಗೂ ಅರೀಫ ನಾವೆಲ್ಲರೂ ಹೊಲದಲ್ಲಿದ್ದಾಗ ಅಲ್ಲೆ
ಪಕ್ಕದಲ್ಲಿ ರಿಂಗ ರೋಡಿನ ಆಚೆ ಬಹಳಷ್ಟು ಜನರು ನೆರೆದಿದ್ದು ನಾವೆಲ್ಲರೂ ರಿಂಗ ರೋಡಿನ ಆಚೆ ನಿಂತು
ನೋಡುತ್ತಿದ್ದು ಅಲ್ಲಿ ಪತ್ರಾಸ ಹಾಕಿದ ಶಡ್ಡಗಳನ್ನು ಹಾಗೂ ಮನೆ ಕೇಡವುತ್ತಿದ್ದರು ಮನೆ ಕಡವಿದ್ದ
ಬಗ್ಗೆ ಅಸ್ಲಂ ಕಲ್ಯಾಣಿರವರು ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಖಯ್ಯುಮ ಪಟೇಲ ಮತ್ತು ಇತರರ
ಮೇಲೆ ಪ್ರಕರಣ ದಾಖಲಾಗಿದ್ದ ಬಗ್ಗೆ ನಾನು ದಿನಪತ್ರಿಕೆಯಲ್ಲಿ ನೋಡಿ ಈ ವಿಷಯದ ಬಗ್ಗೆ ಅಸ್ಲಂ
ಕಲ್ಯಾಣಿ ಇವರು ಮಾತನಾಡಿಸಬೇಕೆಂದು ನಿನ್ನೆ ದಿನಾಂಕ || 25/02/2014 ರಂದು ಬೆಳಗ್ಗೆ 11-00
ಗಂಟೆಯ ಸುಮಾರಿಗೆ ನಾನು, ಅಸ್ಲಾಂ ಕಲ್ಯಾಣಿ
ಹತ್ತಿರ ಹೋಗಿ ಈ ವಿಷಯದ ಬಗ್ಗೆ ವಿಚಾರಿಸಲು ನಾವು ನಿಮ್ಮ ಮನೆ ಕೆಡವಿಲ್ಲಾ ನಮಗೆ ಯಾವುದೆ ಸಂಬಂಧ
ಇಲ್ಲಾ ಅಂತಾ ಹೇಳಿದ್ದರಿಂದ ಸ್ವಲ್ಪ ಸಮಯದ ನಂತರ ಮಧ್ಯಾಹ್ನ 12-00 ಗಂಟೆಯ ನಾನು ಪಕ್ಕದಲ್ಲಿ
ಅಸ್ಲಂ ಕಲ್ಯಾಣಿ ಇವರ ಕೆಡವಿದ ಮನೆಯ ಎದುರಿನಿಂದ
ಹೋಗುತ್ತಿರುವಾಗ ಅದೇ ವೇಳೆಯಲ್ಲಿ ಅಸ್ಲಾಂ ಕಲ್ಯಾಣಿ ಇವನು ಅವನ ಜೋತೆಯಲ್ಲಿ ದಿಲಶ್ಯಾದ್
ಕಲ್ಯಾಣಿ, ಶಾಫೀಕ ಕಲ್ಯಾಣಿ, ವಾಜೀದ ಕಲ್ಯಾಣಿ,
ಮತ್ತು ಸಾಜೀದ ಕಲ್ಯಾಣಿ, ರವರೊಂದಿಗೆ
ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ಬೈದು ಕೈಯಿಂದ ಕಾಲಿನಿಂದ ಹೋಡೆದು ಗಾಯಗೋಳಿಸಿ ಜೀವದ
ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment