POLICE BHAVAN KALABURAGI

POLICE BHAVAN KALABURAGI

27 February 2014

Gulbarga District Reported Crimes

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮೋಸಿನ್  ತಂದೆ ಸಾದೋದ್ದಿನ್ ಖುಷೇಷಿ ಸಾ : ಹುಸೇನಿ ಗಾರ್ಡ ಎಂ.ಎಸ್.ಕೆ ಮಿಲ್ ಗುಲಬರ್ಗಾ ರವರ ಹೆಂಡತಿ ಸುಮೆರಾ ಇವಳು ಕಳೆದ 15 ದಿವಸಗಳ ಹಿಂದೆ ಬೆಂಗಳೂರುನಲ್ಲಿ ವಾಸವಿರುವ ತನ್ನ ತಂಗಿ ದೀಪಾ ಇವಳ ಮನೆಗೆ ಹೋಗಿದ್ದು ಮನೆಯಲ್ಲಿ ನಾನು ಒಬ್ಬನೆ ಇರುತ್ತೆನೆ ಇಂದು ದಿನಾಂಕ 26-02-2014 ರಂದು ಎಂದಿನಂತೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಎಸ್.ಟಿ.ಬಿ.ಟಿ ಕ್ರಾಸ ಹತ್ತಿರ ಇರುವ ನಮ್ಮ ಹೋಟೆಲಕ್ಕೆ ಹೋಗಿದ್ದು ನಾನು ಹೋಟೆಲದಲ್ಲಿದ್ದಾಗ ಸಾಯಂಕಾಲ 04-15 ಗಂಟೆ ಸುಮಾರಿಗೆ ನನ್ನ ಅಳಿಯ ವಸಿಂ ಈತನು ಕರೆಮಾಡಿ ತಿಳಿಸಿದೇನೆಂದರೆ ಮದಿನಾ ಕಾಲೋನಿಯ ನದೀಮ ತಂದೆ ಮಹ್ಮದ ಹುಸೇನ ಎಂಬ ಹುಡುಗ ನಿಮ್ಮ ಮನೆ ಬಾಗಿಲಿನ ಕೊಂಡಿ  ಮುರಿದು ಒಳಗೆ ಹೊಗಿದ್ದು ಇದನ್ನು ನೋಡಿ ನಾವು ಅವನಿಗೆ ಹಿಡಿಯಲು ಹೋದಾಗ ಅವನ ಮೇಲಿನ ಅಂತಸ್ತಿನಿಂದ ಕೆಳೆಗೆ ಹಾರಿ ಹೋಗುವಾಗ ಹುಸೇನ ಗಾರ್ಡನ ವಾಚ್ ಮ್ಯಾನ್, ಹಾಗೂ ನಾನು, ಗೆಳೆಯರು ಹಿಡಿದು ಕೂಡಿಸಿರುತ್ತೆವೆ ಅಂತಾ ತಿಳಿಸಿದ ಮೇರೆಗೆ ನಾನು ಸಾಯಂಕಾಲ 04-30 ಗಂಟೆಗೆ ಮನೆಗೆ ಬಂದು ನೊಡಲು ನಮ್ಮ ಮನೆಯ ಮುಂದೆ ಜನರು ನೇರೆದಿದ್ದು ನಮ್ಮ ನದೀಮ ಇವನಿಗೆ ನಮ್ಮ ಮನೆಯ ಮುಂದೆ ಹಿಡಿದು ಕೂಡಿಸಿದ್ದು ಅವನು ಒಂದನೆ ಅಂತಸ ದಿಂದ ಕೆಳಗೆ ಹಾರಿದಿದ್ದರಿಂದ ಹಣೆಯ ಮೇಲೆ ಗಾಯವಾಗಿರುತ್ತದೆ ನಾನು,  ನಮ್ಮ ಮನೆಯ ಒಳಗೆ ಹೋಗಿ ನೋಡಲು ಬಾಗಿಲು ತರೆದಿದ್ದು ಇದ್ದು ಬೆಡ್ ರೂಮಿನ ಒಳಗೆ ಹೋಗಿ ನೋಡಲು ಬೆಡ್ ರೂಮಿನಲ್ಲಿದ್ದ ಎರಡು ಅಲಮಾರಿಗಳು ತರೆದಿದ್ದು ಇದ್ದು ಒಳಗಡೆ ಇದ್ದ ಎಲ್ಲಾ ಸಾಮಾನುಗಳು ಚಲ್ಲಪಿಲ್ಲಿ ಆಗಿ ಬಿದಿದ್ದು ಅಲ್ಲಿಂದ ಕೆಳಗೆ ಬಂದು ಕೆಳಗಿನ ರೂಮಿನಲ್ಲಿ ಬಂದು ನೋಡಲು ಅಲ್ಲಿ ಕೂಡ ಅಲಮಾರ ತೆರೆದಿದ್ದು ಎಲ್ಲಾ ಸಾಮಾನುಳು ಚಿಲ್ಲಪಿಲ್ಲಿ ಆಗಿ ಬಿದಿದ್ದು ಇರುತ್ತದೆ ನಾನು ಕೆಳಗೆ ಬಂದು ಅವನಿಗೆ ಒಂದು ಆಟೋರಿಕ್ಷಾದಲ್ಲಿ ತಂದು ಹಾಕಿರುತ್ತೆನೆ ಪೋಲೀಸ್ ಠಾಣೆಯಲ್ಲಿ ಅವನಿಗೆ ನನ್ನ ಮುಂದೆ ಅಂಗ ಶೋಧನೆ ಮಾಡಲು ಅವನ ಪ್ಯಾಂಟಿನಿಂದ ಜೋಬಿನಿಂದ ಒಂದು ಜೊತೆ ಬೆಳ್ಳಿ ಕಾಲು ಜೈನುಗಳು ಸಿಕ್ಕಿದ್ದು ಅವುಗಳು ನಾನು ನೋಡಲಾಗಿ ಅದು ನನ್ನ ಮಗಳು ರಾನಿಯ ಬುಸರಾ ಇವಳ ಕಾಲು ಜೈನು ಅಂದಾಜು 6 ತೋಲೆ ಅ.ಕಿ 3,000/- ರೂ. ಬೆಲೆ ಬಾಳುವದು  ಇರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ :  ಶ್ರೀ ರಮೇಶ ತಂದೆ ಸೋಮಯ್ಯ ಇಂದ್ರಿಲಾ ಸಾ:ಸಂಜಯ ನಗರ ಜನಗಾಂವ ಜಿ:ವರಾಂಗಲ್ಲ  ಆಂದ್ರಪ್ರದೇಶ ರಾಜ್ಯ  ರವರು ದಿನಾಂಕ 25-02-2014 ರಂದು ರಾತ್ರಿ ವೇಳೆಯಲ್ಲಿ ರಾಷ್ಟೀಯ ಹೆದ್ದಾರಿ 218 ರಸ್ತೆಯ ಮೇಲಿಂದ ಫರಹಾತಾಬಾದ ಗ್ರಾಮವನ್ನು ದಾಟಿ ಕೆರೆಯಂಗಳದ ಹತ್ತಿರ ರಾತ್ರಿ 11:30 ಗಂಟೆಯ ಸುಮಾರಿಗೆ ಪೆಟ್ರೊಲ್ ಪಂಪ ಎದರುಗಡೆಯಲ್ಲಿ ಹೋಗುತ್ತಿರುವಾಗ ನಮ್ಮ ಟೆಂಪೊದ ಎಡಗಡೆಯ ಮುಂದಿನ ಟೈರ್ ಮತ್ತು ಹಿಂದಿನ ಟೈರ್‌ ಪಂಕ್ಚರ್‌ ಆಗಿದ್ದು ಇರುತ್ತದೆ. ಸದರಿ ಟೈರಗಳನ್ನು ಬದಲಾಯಿಸಲು ನಾವು ನಮ್ಮ ಟೆಂಪೊವನ್ನು ರೋಡಿನ ಪಕ್ಕದಲ್ಲಿ  ನಿಲ್ಲಿಸಿ  ಹಿಂದಿನ ಮತ್ತು ಮುಂದಿನ ಎರಡು ಇಂಡಿಕೇಟರ್‌ಗಳನ್ನು ಹಾಕಿ ಮೊದಲು ಹಿಂದಿನ ಟೈರನ್ನು ಬದಲಾಯಿಸಿದ್ದು, ನಂತರ ನಾನು ಮತ್ತು ರಮೇಶ ಇಬ್ಬರೂ ಕೂಡಿಕೊಂಡು ಮುಂದಿನ ಟೈರ್‌ನ್ನು ಬದಲಾಯಿಸಲು ನಾನು ಟೆಂಪೊದ ಕೆಳಗಡೆಯಲ್ಲಿ ಹೋಗಿ ಕುಳಿತು ನನ್ನ ಕಾಲುಗಳನ್ನು ಚಾಚಿಕೊಂಡು ಜಾಕನ್ನು ಎರಿಸುತ್ತಿದ್ದೆನು, ಕ್ಲೀನರ ರಮೇಶ ಇತನು ಕೂಡಾ ಹೊರ ಬಾಜು ದಲ್ಲಿ ಕಾಲುಗಳನ್ನು ಚಾಚಿಕೊಂಡು ಟೈರ ಬಿಚ್ಚುತ್ತಿದ್ದನು. ಹೀಗಿರುವಾಗ ದಿನಾಂಕ 26-02-2014 ರಾತ್ರಿ 12-30 ಗಂಟೆಯ ಸುಮಾರಿಗೆ ನಮ್ಮ ಹಿಂದಗಡೆಯಿಂದ ಒಬ್ಬ ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟೆಂಪೊಕ್ಕೆ ಜೋರಾಗಿ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನಮ್ಮ ಟೆಂಪೊ ಸ್ತಳದಿಂದ ಮುಂದೆ ಹೋಗಿದ್ದರಿಂದ ನನ್ನ ಎಡಗಡೆಯ ಕಾಲಿನ ಮೇಲಿಂದ ಟೈರ ಹಾಯಿದು ಹೋಗಿರುತ್ತದೆ. ಇದರಿಂದ ನನಗೆ ಎಡಗಾಲಿನ ಮೂಳೆ ಮುರಿದಂತೆ ಆಗಿದ್ದಲ್ಲದೆ ಎಡಗಡೆ ಮೇಲಕಿನ ಮೇಲೆ ರಕ್ತಗಾಯವಾಗಿರುತ್ತದೆ. ನಮ್ಮ ಕ್ಲೀನರ್‌ ರಮೇಶ ಇತನ ಕಾಲಿನ ಮೇಲೆ ಹಾಯಿದು ಹೋಗಿದ್ದು ಆತನಿಗೆ ಬಲಗಡೆಯ ಕಾಲಿನ ಮೋಣಕಾಲು ಕೇಳಗೆ ಮೂಳೆ ಮುರಿದಂತೆ ಆಗಿದ್ದಲ್ಲದೆ, ಎಡಗಡೆಯ ಕಾಲಿನ ಮೋಣಕಾಲು ಕೇಳಗೆ ಬಾರಿ ರಕ್ತಗಾಯ ವಾಗಿರುತ್ತದೆ. ನಂತರ ನಮಗೆ ಡಿಕ್ಕಿ ಪಡಿಸಿದ ವಾಹನವನ್ನು ನೋಡಲಾಗಿ ಅದು ಕೂಡಾ ಹಣ್ಣನ್ನು ತುಂಬಿಕೊಂಡು ಹೊಗುವ ಐಚರ ಗೂಡ್ಸ ಗಾಡಿಯಿದ್ದು ಅದರ ನಂ ಎಪಿ 28 ಟಿಇ5327 ಅಂತಾ ಇರುತ್ತದೆ. ಅದರ ಚಾಲಕನ ಹೆಸರು ನರಸಿಮ್ಲೂ ಅಂತಾ ಗೊತ್ತಾಗಿರುತ್ತದೆ. ಆತನಿಗೆ ಹೊಟ್ಟೆಗೆ, ಎದೆಗೆ,  ಬಲಗಾಲಿಗೆ ಒಳಪೆಟ್ಟಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಭಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: