POLICE BHAVAN KALABURAGI

POLICE BHAVAN KALABURAGI

16 September 2020

KALABURAGI DISTRICT CRIME REPORTED

 ಅಕ್ರಮ ಗಾಂಜಾ ಮಾರಾಟ ಮತ್ತು ಆಕ್ರಮ ನಾಡ ಪಿಸ್ತೂಲ ಜಪ್ತಿ:-

ಅಫಜಲಪೂರ ಪೊಲೀಸ ಠಾಣೆ 

   ದಿನಾಂಕ 15-09-2020 ರಂದು 5:15 ಪಿ.ಎಮ್ ಕ್ಕೆ ನಾನು ಸಂತೋಷ ಎಲ್ ತಟ್ಟೆಪಳ್ಳಿ ಪಿಎಸ್ಐ ಅಫಜಲಪೂರ ಪೊಲೀಸ್ ಠಾಣೆ ಸರ್ಕರಿ ತರ್ಫೇಯಿಂದ ದೂರು ಸಲ್ಲಿಸುವುದೆನೆಂದರೆ,   ದಿನಾಂಕ 15-09-2020 ರಂದು ಮದ್ಯಾಹ್ನ 12:15 ಗಂಟೆಗೆ ನಾನು ಠಾಣೆಯಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಬಡದಾಳ ಸೀಮಾಂತರದಲ್ಲಿ ಜಯಾನಂದ ತಂದೆ ಶಿವನಿಂಗಪ್ಪ ನೀಲಂಗೆ ಸಾ|| ಬಡದಾಳ ಈತನು ತನ್ನ ಹೊಲದಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಮೇಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿ ಪತ್ರಾಂಕಿತ (ಗೆಜಟೇಡ್) ಮಾನ್ಯ ಯಲ್ಲಪ್ಪ ಸುಬೇದಾರ ತಹಸಿಲ್ದಾರರು ಹಾಗೂ ತಾಲುಕಾ ದಂಡಾಧಿಕಾರಿಗಳು ಅಫಜಲಪೂರ ರವರು ತಮ್ಮ ಕಾರ್ಯಾಲಯದ ಸರಕಾರಿ ಪಂಚ ಜನರಿಗೆ ಮತ್ತು ಮಾನ್ಯ ತಹಸಿಲ್ದಾರ ಸಾಹೇಬರಿಗೆ ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಸಂತೋಷ ಹೆಚ್.ಸಿ-439, ಚಿದಾನಂದ ಹೆಚ್.ಸಿ-306, ಯಲಗೊಂಡ ಪಿಸಿ-743, ಭಾಗಣ್ಣ ಪಿಸಿ-167 ಎಲ್ಲರೂ ಕೂಡಿ ನಮ್ಮ ಇಲಾಖಾ ಜೀಪ ನಂ ಕೆಎ-03 ಜಿ-1110 ನೇದ್ದರಲ್ಲಿ ಮತ್ತು. ಮಾನ್ಯ ತಹಸಿಲ್ದಾರರು ಮತ್ತು ಸರಕಾರಿ ಪಂಚರು ಕೂಡಿ ಮಾನ್ಯ ತಹಸಿಲ್ದಾರ ಸಾಹೇಬರ ಇಲಾಖಾ ಜೀಪಿನಲ್ಲಿ ಹೊರಟು ಬಡದಾಳ ದಿಂದ ಅರ್ಜುಣಗಿ ಗ್ರಾಮಕ್ಕೆ ಹೋಗುವ ರಸ್ತೆಗೆ ಸುಮಾರು 2 ಕಿ.ಮಿ ದೂರ ಸಾಗಿ ವಾಹನಗಳನ್ನು ನಿಲ್ಲಿಸಿ, ರೋಡಿನ ಬದಿಯಲ್ಲಿ ನಿಂತಿದ್ದ ಪೊಲೀಸ್ ಬಾತ್ಮಿದಾರನು ಅಲ್ಲಿಂದ ಹೊಲದಲ್ಲಿ ನಡೆಸಿಕೊಂಡು ಕರೆದುಕೊಂಡು ಹೋಗಿ ಸುಮಾರು ದೂರು ಹೋದ ನಂತರ ಬಾತ್ಮಿದಾರನು ಮುಂದೆ ದೂರದಲ್ಲಿ ಕಾಣುತ್ತಿರುವ ಒಂದು ತೋಗರಿ ಹೊಲವನ್ನು ಮತ್ತು ಅದರಾಚೆ ಇರುವ ಕಬ್ಬಿನ ಹೊಲವನ್ನು ತೊರಿಸಿದ ಸದರಿ ಹೊಲದಲ್ಲಿ ಹೊಗುತ್ತಿದ್ದಾಗ, ಆ ಹೊಲದಿಂದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಓಡತೊಡಗಿದನು. ಆಗ ನಾವು ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಜಯಾನಂದ ತಂದೆ ಶಿವನಿಂಗಪ್ಪ ನೀಲಂಗೆ ವಯ|| 35 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬಡದಾಳ ತಾ|| ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ಪುನ ಪುನ ವಿಚಾರಿಸಲು ಸದರಿಯವನು ತೋಗರಿ ಬೆಳೆಯಲ್ಲಿ ಕರೆದುಕೊಂಡು ಹೋಗಿ, ತೋಗರಿಯ ಸಾಲುಗಳ ಮದ್ಯದಲ್ಲಿ ಬೆಳೆದ ಗಾಂಜಾ ಗಿಡವನ್ನು ತೊರಿಸಿದನು. ವಿಚಾರಿಸಲು ಸದರಿ ಗಾಂಜಾ ಗಿಡಗಳನ್ನು ಒಂದು ತಿಂಗಳ ಹಿಂದೆ ಬೀಜ ಹಾಕಿದ್ದು, ಇನ್ನು 4 ತಿಂಗಳು ಬಿಟ್ಟರೆ ಪ್ರತಿ ಗಿಡದಿಂದ ಒಂದು ಕಿಲೋ ಗಾಂಜಾ ಸಿಗುತ್ತದೆ ಮತ್ತು ಸದರಿ ಹೊಲ ನನ್ನ ಹೆಸರಿನಲ್ಲಿದ್ದು ಇದರ ಸರ್ವೇ ನಂಬರ 87/3 ಇರುತ್ತದೆ ಎಂದು ತಿಳಿಸಿದನು. ನಂತರ ಸದರಿಯವನಿಗೆ ಇನ್ನು ಎಲ್ಲಿ ಎಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ ಬಗ್ಗೆ ವಿಚಾರಿಸಲು, ಸದರಿಯವರು ಅಲ್ಲಿ ಪಕ್ಕದಲ್ಲಿರುವ ಕಬ್ಬಿನ ಹೊಲವನ್ನು ತೋರಿಸಿ, ಸದರಿ ಹೋಲ ನಮ್ಮ ಚಿಕ್ಕಪ್ಪನಾದ ಅಮೃತ ತಂದೆ ಶಿವಪ್ಪ ನೀಲಂಗೆ ಇವರ ಹೆಸರಿನಲ್ಲಿದ್ದು, ಸದರಿ ಹೊಲವನ್ನು ನನ್ನ ಚಿಕ್ಕಪ್ಪನಿಗೆ ವರ್ಷಕ್ಕೆ 50,000/- ರೂ ಹಣ ಕೊಟ್ಟು ನಾನೆ ಬೆಳೆಯನ್ನು ತಗೆದುಕೊಳ್ಳುತ್ತಿರುತ್ತೇನೆ. ಸದರಿ ಹೊಲದಲ್ಲಿ ಈಗ ಕಬ್ಬು ಇದ್ದು, ಸದರಿ ಕಬ್ಬಿನ ಹೊಲದಲ್ಲಿಯೂ ಸಹ ಗಾಂಜಾ ಗಿಡಗಳನ್ನು ಬೆಳೆಸಿದ್ದೇನೆ. ಸದರಿ ಗಾಂಜಾ ಗಿಡಗಳು ಹೂವು & ಬೀಜಗಳಾದ ಮೇಲೆ ಗಾಂಜಾವನ್ನು ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ಆತನನ್ನು ವಶಕ್ಕೆ ಪಡೆದುಕೊಂಡು, ತೋಗರಿ ಹೊಲದಲ್ಲಿ ಬೆಳೆದ ಸದರಿ ಗಾಂಜಾ ಗಿಡಗಳನ್ನು ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಪಿತನಿಂದ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 41 ಗಾಂಜಾ ಗಿಡಗಳಿದ್ದು ನಂತರ ಆರೋಪಿತನು ತನ್ನ ಚಿಕ್ಕಪ್ಪನ ಹೆಸರಿನಲ್ಲಿರುವ ತಾನು ಉಳುಮೆ ಮಾಡುವ ಕಬ್ಬಿನ ಹೊಲಕ್ಕೆ ಕರೆದುಕೊಂಡು, ಹೋಗಿ ಕಬ್ಬಿನ ಹೊಲದಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಕಾಣದಂತೆ ಇರುವ ಗಾಂಜಾ ಗಿಡಗಳನ್ನು ತೋರಿಸಿದ್ದು, ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಫಿತನಿಂದ ಗಾಂಜಾ ಗಿಡಗಳನ್ನು ಕಿತ್ತಿಸಲು ಒಟ್ಟು 22 ಗಾಂಜಾ ಗಿಡಗಳು ಇರುತ್ತವೆ. ಎರಡೆರಡು ಗಾಂಜಾ ಗಿಡಗಳ ಒಂದು ಕಟ್ಟನ್ನು ಮಾಡಿ, ಒಟ್ಟು 11 ಕಟ್ಟುಗಳಾಗಿದ್ದು, ಹೀಗೆ ಒಟ್ಟು 63 ಗಾಂಜಾ ಗಿಡಗಳು ಇದ್ದು, ಸದರಿ ಗಾಂಜಾ ಗಿಡಗಳ ಒಟ್ಟು ತೂಕ 14.572 ಕೆಜಿ ತೂಕ ಇರುತ್ತವೆ. ಸದರಿಯವನ ಹೊಲದಲ್ಲಿನ ಮೇಟಗಿಯನ್ನು ಮಾನ್ಯ ತಹಸಿಲ್ದಾರರ ಸಮ್ಮುಖದಲ್ಲಿ, ಸದರಿ ಪಂಚರ ಸಮಕ್ಷಮ ಚೆಕ್ ಮಾಡಲಾಗಿ, ಸದರಿ ಮೆಟಗಿಯ ಮಾಡಿನಲ್ಲಿ ಒಂದು ನಾಡ ಪಿಸ್ತೂಲು ಮತ್ತು ಎರಡು ಜಿವಂತ ಗುಂಡುಗಳು ಸಿಕ್ಕವು, ಸದರಿ ಜಯನಾಂದನಿಗೆ ಸದರಿ ನಾಡ ಪಿಸ್ತೂಲು ಮತ್ತು ಗುಂಡುಗಳ ಬಗ್ಗೆ ನಾನು ಮತ್ತು ತಹಸಿಲ್ದಾರರು ವಿಚಾರಿಸಲು, ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಸದರಿ ನಾಡ ಪಿಸ್ತೂಲಿಗೆ ಮತ್ತು ಗುಂಡುಗಳಿಗೆ ಯಾವುದೆ ಪರವಾನಿಗೆ ಇರುವುದಿಲ್ಲ, ಸದರಿ ನಾಡ ಪಿಸ್ತೂಲನ್ನು ಮತ್ತು ಗುಂಡಗಳನ್ನು ಸುಮಾರು 6-7 ವರ್ಷಗಳ ಹಿಂದೆ ನಮ್ಮ ಸಂಭಂದಿಕನಾದ ರಾಜು ಆನೂರ ಈತನಿಂದ ಖರಿದಿ ಮಾಡಿರುತ್ತೇನೆ. ನಾನು ಹೊಲದಲ್ಲಿ ಒಬ್ಬನೆ ಇರುತ್ತಿದ್ದರಿಂದ ನನ್ನ ಆತ್ಮ ರಕ್ಷಣೆಗಾಗಿ ಈ ನಾಡ ಪಿಸ್ತೂಲನ್ನು 30,000/- ರೂ ಹಾಗೂ ಗುಂಡುಗಳಿಗೆ 1000/- ರೂ ಹಣ ಕೊಟ್ಟು ಖರಿದಿ ಮಾಡಿರುತ್ತೇನೆ. ನನಗೆ ಮಾರಾಟ ಮಾಡಿದ ರಾಜು ಆನೂರ ಈತನು ಈಗಾಗಲೆ ಮೃತ ಪಟ್ಟಿರುತ್ತಾನೆ ಎಂದು ತಿಳಿಸಿದನು. ನಂತರ ನಾಡ ಪಿಸ್ತೂಲನ್ನು ಮತ್ತು ಎರಡು ಜಿವಂತ ಗುಂಡುಗಳ್ನು ತಹಸಿಲ್ದಾರರು ಸಮ್ಮುಖದಲ್ಲಿ, ಸದರಿ ಸರ್ಕಾರಿ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮುದ್ದೆ ಮಾಲು ಮತ್ತು ಆರೋಪಿತನನ್ನು ಹಾಜರು ಪಡಿಸಿ ಸದರಿ ವ್ಯೆಕ್ತಿಯ ಮೇಲೆ ಕಾನೂನು ಕ್ರಮ ಜರೂಗಿಸಲು ಸರಕಾರಿ ತರ್ಪೇಯಾಗಿ ದೂರು ಸಲ್ಲಿಸಿದ್ದು ಸಾರಾಂಶದ ಮೇಲಿಂದ ಅಫಜಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಕುರಿ (ಆಡು) ಗಳು ಕಳ್ಳತನ :-

ಮಾಡಬೂಳ ಪೊಲೀಸ ಠಾಣೆ 

       ದಿನಾಂಕ 15/09/2020 ರಂದು 12.30 ಪಿ.ಎಮಕ್ಕೆ ಫಿರ್ಯಾದಿ ಶ್ರೀ. ಶಮಶೊದ್ದಿನ ತಂದೆ ಅಬ್ದುಲಸಾಬ ಮುಲ್ಲಾಗೋಳ ಸಾಃ ಗುಂಡಗರ್ತಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ 14/09/2020 ರಂದು ಮುಂಜಾನೆ ಎಂದಿನಂತೆ ನಾನು ಆಡುಗಳನ್ನು ಮೇಯಿಸಿಕೊಂಡು ಮನೆಗೆ ಸಾಯಂಕಾಲ ಮನೆಗೆ ಬಂದು, ರಾತ್ರಿ 8.00 ಗಂಟೆಯ ಸುಮಾರಿಗೆ ಮನೆಗೆ ಹೊಂದಿಕೊಂಡಿರುವ ಕೊಣೆಯಲ್ಲಿ ಆಡುಗಳನ್ನು ಬಿಟ್ಟು, ಕೊಣೆಯ ಬಾಗಿಲಿಗೆ ಕೀಲಿ ಹಾಕಿಕೊಂಡು ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಿದ್ದು, ಬೆಳಗಿನ ಜಾವ 3.00 ಗಂಟೆಯ ಸುಮಾರಿಗೆ ನನ್ನ ಹಿರಿಯ ಮಗನಾದ ಮಹಿಬೂಬ ಈತನು ಮೂತ್ರ ವಿಸರ್ಜನೆಗೆಂದು ಎದ್ದಾಗ, ಯಾರೋ ಆತನು ಮಲಗಿದ ಮನೆಯ ಬಾಗಿಲ ಕೊಂಡಿ ಹೊರಗಡೆಯಿಂದ ಹಾಕಿದ್ದರಿಂದ ಇನ್ನೊಂದು ಕೊಣೆಯಲ್ಲಿ ಮಲಗಿದ ನನ್ನ ಕಿರಿಯ ಮಗನಾದ ಖಾಸಿಮ್ ಈತನಿಗೆ ಪೋನ ಮಾಡಿ ಹೊರಗಡೆಯ ಬಾಗಿಲಕೊಂಡಿ ತೆಗೆಯಲು ಹೇಳಿದ್ದರಿಂದ ಆತನು ಬಾಗಿಲು ಕೊಂಡಿ ತೆಗೆದು ನನಗೆ ಎಬ್ಬಿಸಿದ್ದು, ನಂತರ ಸಂಶಯ ಬಂದು ನಾವು ಆಡುಗಳ ಕೊಣೆಯ ಕಡೆಗೆ ಹೊಗಿ ನೋಡಲಾಗಿ ಬಾಗಿಲಿಗೆ ಹಾಕಿದ ಬೀಗ ಇರಲಿಲ್ಲ. ನಂತರ ಒಳಗಡೆ ಹೊಗಿ ನೋಡಲಾಗಿ 20 ಆಡುಗಳು ಇರಲಿಲ್ಲ. ಕೇವಲ ಆಡುಗಳ ಮರಿಗಳು ಇದಿದ್ದವು. ದಿನಾಂಕ 14/09/2020 ರಂದು 8.00 ಪಿ.ಎಮ ದಿಂದ ದಿನಾಂಕ 15/09/2020 ರಂದು 3.00 ಎ.ಎಮದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಆಡುಗಳು ಇದ್ದ ಕೊಣೆಯ ಬಾಗಿಲಕೊಂಡಿ ಮುರಿದು, ಸಣ್ಣ ಮತ್ತು ದೊಡ್ಡ ಆಡುಗಳು ಸೇರಿ ಒಟ್ಟು 20 ಆಡುಗಳು ಅ.ಕಿಃ 1,00,000/-ರೂಪಾಯಿ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಾರಣ ಮಾನ್ಯರವರು ಕಳ್ಳತನವಾದ ನನ್ನ ಆಡುಗಳನ್ನು ಪತ್ತೆ ಮಾಡಿ, ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೆಕೆಂದು ವಗೈರೆಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ಮಾಡಬೂಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

15 September 2020

KALABURAGI DISTRICT CRIME REPORTED

 ಮಹಿಳೆ ಮೇಲೆ ಹಲ್ಲೆ ಪ್ರಕರಣ :-

ಅಫಜಲಪೂರ ಪೊಲೀಸ ಠಾಣೆ 

            ದಿನಾಂಕ 14-09-2020 ರಂದು 9:00 ಎ.ಎಮ್ ಕ್ಕೆ ಫೀರ್ಯಾದಿದಾರಳಾದ ಶ್ರೀಮತಿ ಸುರೇಖಾ ಗಂಡ ಗುರುಬಸಪ್ಪ ಅಜಗೊಂಡ ಸಾ: ಮಣೂರ ಇವರು ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ ನಾವು ಸೊಲ್ಲಾರದಲ್ಲಿ ಇದ್ದಾಗ ನನ್ನ ಮೈದುನನೆ ನಮ್ಮ ಪಾಲಿಗೆ ಬಂದ ಆಸ್ತಿಯನ್ನು ಉಪಯೋಗಿಸುತ್ತಿದ್ದನು ಈಗ ನಾವು ಮಣೂರಕ್ಕೆ ಬಂದಿದ್ದರಿಂದ ನಮ್ಮ ಆಸ್ತಿಯನ್ನು ನಾವು ಪಡೆದುಕೊಂಡು ಸಾಗುವಳಿ ಮಾಡುತ್ತಿದ್ದರಿಂದ ನಮ್ಮ ಮೈದುನ ಸಿದ್ದರಾಮನು ನಮ್ಮ ಮೇಲೆ ಹಗೆತನ ಸಾಧಿಸಿ ತಕರಾರು ಮಾಡಿಕೊಂಡು ಇನ್ನು ನಮಗೆ ಹೆಚ್ಚಿನ ಆಸ್ತಿ ಕೊಡು ಅಂತಾ ಆಗಾಗ ಜಗಳ ಮಾಡುತ್ತಿರುತ್ತಾನೆ.  ಹೀಗಿದ್ದು ದಿನಾಂಕ 12-09-2020 ರಂದು ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಾದ ಪ್ರೀಯಾ ಮತ್ತು ಶ್ರದ್ದಾ ಮನೆಯ ಮುಂದೆ ಮಾತನಾಡುತ್ತಾ ನಿಂತಾಗ ನನ್ನ ಮೈದುನನಾದ ಸಿದ್ದಾರಾಮನ ಮಕ್ಕಳಾದ ರಾಹುಲ್ ಮತ್ತು ರೋಹಿತ್ ಮೂರು ಜನರು ಕೂಡಿಕೊಂಡು ಬಂದವರೆ ಅದರಲ್ಲಿ ನನ್ನ ಮೈದುನ ಬಂದು ನನಗೆ ಏ ರಂಡಿ ಎಲ್ಲಾ ನಿನ್ನಿಂದಲೇ ಆಗಿದೆ ನಮ್ಮ ಅಣ್ಣನ ತಲೆ ತುಂಬಿ ನಮ್ಮ ವಿರುದ್ದ ಜಗಳ ಮಾಡಸುತ್ತಿದ್ದಿಯಾ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ಆಗ ನಾನು ಸುಮ್ಮನೆ ನನಗೆ ಯಾಕೆ ಬೈಯುತ್ತಿದ್ದಿ ಅಂತಾ ಕೇಳಿದಕ್ಕೆ ನನ್ನ ಮೈದುನನು ನನಗೆ ತನ್ನ ಕಾಲಿನಲ್ಲಿ ಇದ್ದ ಚಪ್ಪಲಿಯಿಂದ ನನ್ನ ಮುಖಕ್ಕೆ ಹೊಡೆದನು ಆಗ ನನ್ನ ಎರಡು ಹೆಣ್ಣು ಮಕ್ಕಳು ಬಿಡಿಸಲು ಬಂದಾಗ ರಾಹುಲ್ ಇತನು ನನ್ನ ಮಗಳಾದ ಪ್ರೀಯಾಳ ಮೈ ಮೇಲಿನ ಬಟ್ಟೆ ಹರಿದು ಕುತ್ತಿಗೆ ಹಿಡೆದು ನಿನ್ನ ಸಾಯಿಸೇ ಬಿಡುತ್ತೇನೆ ಅಂತಾ ಅಂದನು ಅಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿದ್ದ ನನ್ನ ಗಂಡನು ಓಡಿ ಬಂದು ಜಗಳ ಬಿಡಿಸಲು ಬಂದಾಗ ರಾಹುಲ್ ನು  ನನ್ನ ಗಂಡನಿಗೆ ಬಲಗಡೆ ಕಪಾಳಕ್ಕೆ ಜೋರಾಗಿ ತನ್ನ ಕೈಯಿಂದ ಹೊಡೆದಿರುತ್ತಾನೆ. ಮತ್ತು ನನ್ನ ಮೈದುನನು ನನಗೆ ಸೀರೆ ಹಿಡೆದು ಎಳೆದಾಡಿ ನನ್ನ ಮೂಗಿನ ಮೇಲೆ ಹಾಗೂ ತುಟೆಯ ಮೇಲೆ ಹೊಡೆದು ರಕ್ತಗಾಯ ಗೊಳಿಸಿರುತ್ತಾನೆ. ನನಗೆ ಮತ್ತು ನನ್ನ ಗಂಡ ಹಾಗೂ ಮಕ್ಕಳಿಗೆ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿ ನನ್ನ ಮಾನಕ್ಕೆ ಕುಂದುಂಟು ಮಾಡಿದ ನನ್ನ ಮೈದುನ ಹಾಗೂ ಅವನ ಮಕ್ಕಳ ಮೇಲೆ ಸೂಕ್ತ ಕಾನೂನು ಕ್ರಮ ಜರಿಗಿಸಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಹಲ್ಲೆ ಪ್ರಕರಣ :-

ಅಫಜಲಪೂರ ಪೊಲೀಸ ಠಾಣೆ 

     ದಿನಾಂಕ: 14-09-2020 ರಂದು 5-30 ಪಿಎಮ್ ಕ್ಕೆ ಪಿರ್ಯಾದಿದಾರಳಾದ ಶ್ರೀಮತಿ ಪುತಳಾಬಾಯಿ ಗಂಡ ಅರ್ಜುನ ರಾಠೋಡ ಸಾ|| ಅಳ್ಳಗಿ ತಾಂಡಾ ಮಾಶಾಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿ ಸಾರಾಂಶವೆನೆಂದರೆ, ನನ್ನ ಮೈದುನನಾದ ಕಿಶನ ತಂದೆ ವಾಲು ರಾಠೋಡ ಇತನು ನನ್ನ ಗಂಡನೊಂದಿಗೆ ನನಗೆ  ಇನ್ನೂ ಹೊಲ ಬರುತ್ತದೆ ಅಂತಾ ಬಂದಾರಿಯ ಸಂಭಂಧ ನಮ್ಮೊಂದಿಗೆ ತಕರಾರು ಮಾಡಿತ್ತಾ ಬಂದಿರುತ್ತಾನೆ. ಹೀಗಿದ್ದು ದಿನಾಂಕ: 12-09-2020 ರಂದು ರಾತ್ರಿ 10-30 ಪಿಎಮ್ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ನಮ್ಮ ಮನೆಯ ಮುಂದಿನ ಖುಲ್ಲಾ ಜಾಗದಲ್ಲಿ ಹೋಗಿದ್ದಾಗ ನನ್ನ ಮೈದುನನು ಮತ್ತು ನೆಗೆಣಿಯಾದ ಅನೀತಾ ಇಬ್ಬರೂ ಕೂಡಿಕೊಂಡು ನನ್ನ ಹತ್ತಿರ ಬಂದು ಅದರಲ್ಲಿ ಅನೀತಾ ಇವಳು ಏ ರಂಡಿ ನೀನು ಯಾಕೆ ಇಲ್ಲಿ ಏಕಿ ಮಾಡುಕತ್ತಿ ಅಂತಾ ಬೈಯುತ್ತಿದ್ದಾಗ ಕಿಶನ ಇತನು ಈ ರಂಡಿದು ಬಾಳ ಆಗ್ಯಾದ ತಡಿ ಅಂತಾ ತನ್ನ ಹತ್ತಿರ ವಿದ್ದ ಚಾಕುವಿನಿಂದ ನನಗೆ ಚುಚ್ಚಲು ಬಂದಾಗ ಆ ಚಾಕು ನನ್ನ ಬಲಗೈಗೆ ಹತ್ತಿ ರಕ್ತಗಾಯವಾಗಿರುತ್ತದೆ. ಆಗ ನಾನು ಜೋರಾಗಿ ಚೀರಿದ್ದರಿಂದ  ನನ್ನ ಗಂಡ ಮತ್ತು ನನ್ನ ಮಗನಾದ ಗೊವಿಂದ ರವರು ಬಂದಾಗ ಮತ್ತು ನಮ್ಮ ಓಣಿಯಲ್ಲಿನ ಜನರು ಬಂದಾಗ ಬಿಟ್ಟು ಓಡಿ ಹೋಗಿರುತ್ತಾರೆ. ಆಗ ನನ್ನ ಗಂಡ ಮತ್ತು ನನ್ನ ಮಗ ಕೂಡಿಕೊಂಡು ನನಗೆ ಅಫಜಲಪೂರದ ದವಾಖಾನೆಗೆ ತಂದು ಸೇರಿಕೆ ಮಾಡಿ ಉಪಚಾರ ಕೋಡಿಸಿರುತ್ತಾರೆ ಈ ‍ಘಟನೆ ಬಗ್ಗೆ ನಾನು ನನ್ನ ಗಂಡ ಮತ್ತು ಮಗ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು ಕಾರಣ ನನ್ನ ಮೈದುನನಾದ ಕೀಶನ ಮತ್ತು ಆತನ ಹೆಂಡತಿಯಾದ ಅನೀತಾರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ

ರಸ್ತೆ ಅಪಘಾತ ಪ್ರಕರಣ ಮರಣಾಂತಿಕ:-

ಮಾಡಬೂಳ ಪೊಲೀಸ ಠಾಣೆ 

             ದಿನಾಂಕ:14/09/2020 ರಂದು 00-15 ಎ.ಎಮ್.ಕ್ಕೆ ಕಲಬುರಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹಾಜರಿದ್ದ ಮೃತಳ ಗಂಡನಾದ ಮೋನಪ್ಪ ತಂದೆ ಸಾಯಿಬಣ್ಣ ಜಮಾದಾರ ಇವರು ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಬೀದರ ಜಿಲ್ಲೆಯ ನಿಡವಂಚಿ ಗ್ರಾಮದವನಿದ್ದು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 13/09/2020 ರಂದು ಬೆಂಗಳೂರಿನಿಂದ ತನ್ನ ಹೆಂಡತಿಯ ತವರು ಮನೆಯಾದ ಕಣಸೂರ ಗ್ರಾಮಕ್ಕೆ ಬಂದು ಹೆಂಡತಿ ಮಕ್ಕಳೊಂದಿಗೆ ಮಾತನಾಡಿಸಿಕೊಂಡು ಸಾಯಂಕಾಲ ಬೆಂಗಳೂರಿಗೆ ಹೋಗುವ ಸಂಬಂದ 6-00 ಪಿ.ಎಂ ಕ್ಕೆ ಕಣಸೂರದಿಂದ ಕಲಬುರಗಿಯವರೆಗೆ ಕಳುಹಿಸಲು ತನ್ನ ಹೆಂಡತಿ ಮತ್ತು ನಮ್ಮ ಸಂಬಂಧಿ ವೈಜನಾಥ ಇವರು ಮೋಟರ ಸೈಕಲ ನಂಬರ ಕೆ.ಎ 05 ಕೆ.ವ್ಹಿ-7512 ನೇದ್ದರ ಮೇಲೆ ನಾನು ಮತ್ತು ನಮ್ಮ ಮಾವ ಶಿವಪ್ಪ ಇನ್ನೊಂದು ಮೋಟರ ಸೈಕಲ ಮೇಲೆ ಕಲಬುರಗಿಗೆ ಬರುತ್ತಿರುವಾಗ ವೈಜನಾಥ ಇತನ ಚಲಾಯಿಸುತ್ತಿದ್ದ ಮೋಟರ ಸೈಕಲ ಮುಂದೆ ಇದ್ದು ನಮ್ಮ ಮೋಟರ ಸೈಕಲ ಸ್ವಲ್ಪ ಅಂತರದಲ್ಲಿ ಹಿಂದೆ ಇದ್ದು ನಾವು ಕೋರವಾರ ದಾಟಿ ವಚ್ಚಾ ಗ್ರಾಮ ಇನ್ನು ಸ್ವಲ್ಪ ದೂರ ಇರುವಾಗ ವೈಜನಾಥನು ತನ್ನ ಮೋಟರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಓಡಿಸುತ್ತಿರುವಾಗ ಎದುರುಗಡೆಯಿಂದ ಒಂದು ವಾಹನ ಬರುತ್ತಿರುವುದು ಕಂಡು ವೈಜನಾಥನು ತನ್ನ ವಶದಲ್ಲಿದ್ದ ಮೋಟರ ಸೈಕಲ ಒಮ್ಮೇಲೆ ರೋಡಿನ ಎಡ ಬದಿಗೆ ತೆಗೆದುಕೊಂಡಾಗ ಮೋಟರ ಸೈಕಲ ಸ್ಕಿಡ ಆಗಿ ಮೋಟರ ಸೈಕಲ ಸಮೇತ ಬಿದ್ದರು ಆಗ ನಾವು ಗಾಬರಿಯಾಗಿ ಏನಾಯಿತು ಅಂತಾ ಹೋಗಿ ನೋಡಲಾಗಿ ನನ್ನ ಹೆಂಡತಿಯ ತಲೆಗೆ ಭಾರಿ ಗುಪ್ತ ಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಸೋರುತ್ತಿದ್ದು ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ನಾವು ಕೂಡಲೇ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಯ ಯುನೈಟೇಡ ಆಸ್ಪತ್ರೆಗೆ ತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಕಾರಣ ಮೋಟರ ಸೈಕಲ ನಂಬರ ಕೆ.ಎ 05 ಕೆ.ವ್ಹಿ-7512 ನೇದ್ದರ ಸವಾರ ವೈಜನಾಥ ತಂದೆ ಪ್ರಭು ಸಾ:ಕಣಸೂರ ಇತನ ಮೇಲೆ ಕಾನೂನಿನ ರೀತಿ ಕ್ರಮ ಜರುಗಿಸಬೇಕು ಅಂತಾ ವಗೈರೆಯಾಗಿ ನೀಡಿರುವ ದೂರಿನ ಸಾರಾಂಶದ ಮೇಲಿಂದ ಮಾಡಬೂಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

14 September 2020

KALABURAGI DISTRICT CRIME REPORTE

 ಅಕ್ರಮ ಗಾಂಜಾ ಮಾರಾಟ :-

ಅಫಜಲಪೂರ ಪೊಲೀಸ ಠಾಣೆ 

 ಇಂದು ದಿನಾಂಕ 13-09-2020 ರಂದು 6:00 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆ ಹಾಜರುಪಡಿಸಿ ಸ:ತ ಫೀರ್ಯಾದಿ ಸಲ್ಲಿಸಿದ್ದು ಸದರಿ ಫೀರ್ಯಾದಿಯ ಸಾರಾಂಶವೇನೆಂದರೆ ದಿನಾಂಕ 13-09-2020 ರಂದು ಮದ್ಯಾಹ್ನ 1:30 ಗಂಟೆಗೆ ನಾನು ಠಾಣೆಯಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಶೀವೂರ ಸೀಮಾಂತರದ ಒಂದು ಹೊಲದಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಮಾನ್ಯ ತಾಲೂಕಾ ಆರೋಗ್ಯಾಧಿಕಾರಿಗಳು ಪತ್ರಾಂಕಿತ ಅಧಿಕಾರಿಯವರಾದ ಡಾ|| ಸಂಗಮೇಶ ಟಕ್ಕಳಕಿ ವೈದ್ಯಾಧಿಕಾರಿಗಳು ತಾಲೂಕು ಸರ್ಕಾರಿ ಆಸ್ಪತ್ರೆ ಅಫಜಲಪೂರ ಮತ್ತು ತಹಸಿಲ್ದಾರ ಕಛೇರಿಯಿಂದ ಇಬ್ಬರು ಸರ್ಕಾರಿ ಪಂಚರೊಂದಿಗೆ ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಸಂತೋಷ ಹೆಚ್.ಸಿ-439, ಚಿದಾನಂದ ಹೆಚ್.ಸಿ-306, ಭಾಗಣ್ಣ ಪಿಸಿ-167   ಎಲ್ಲರೂ ಒಂದು ಖಾಸಗಿ ಕ್ರೂಜರ ವಾಹನದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಜನರು ಮತ್ತು ಉಳಿದವರು ಕೂಡಿ ಶಿವೂರ ಗ್ರಾಮಕ್ಕೆ ಹೋಗಿ, ಪೊಲೀಸ್ ಬಾತ್ಮಿದಾರನು ತೋರಿಸಿದ  ಕಬ್ಬಿನ ಹೊಲವನ್ನು ತೊರಿಸಿದಾಗ ನಾವೇಲ್ಲರೂ ಸದರಿ ಹೊಲದಲ್ಲಿ ಹೊಗುತ್ತಿದ್ದಾಗ, ಸದರಿ ಹೊಲದಿಂದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಓಡ ತೊಡಗಿದನು. ಆಗ ನಾವು ಬೆನ್ನಟ್ಟಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ರೇವಪ್ಪ ತಂದೆ ಶಿವರಾಯ ಪಾಟೀಲ ವಯ|| 45 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಲಾಳಸಂಗಿ ತಾ|| ಇಂಡಿ ಜಿ|| ವಿಜಯಪೂರ ಹಾ|| || ಶಿವೂರ ಹೊಲದಲ್ಲಿ ವಸತಿ ಮಾಡುತ್ತಿರುವದಾಗಿ ತಿಳಿಸಿದ್ದು, ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ಪುನ ಪುನ ವಿಚಾರಿಸಲು ಸದರಿಯವನು ಕಬ್ಬಿನ ಬೆಳೆಯಲ್ಲಿ ಕರೆದುಕೊಂಡು ಹೋಗಿ ಕಬ್ಬಿನ ಬೆಳೆಯ ಮದ್ಯದಲ್ಲಿ ಬೆಳೆದ ಒಂದು ಗಾಂಜಾ ಗಿಡವನ್ನು ತೊರಿಸಿದನು. ನಂತರ ವಿಚಾರಿಸಲು ಅಲ್ಲೆ ಸ್ವಲ್ಪ ದೂರದಲ್ಲಿ ಇನ್ನೊಂದು ಕಬ್ಬಿನ ಸಾಲಿನಲ್ಲಿ ಬೆಳೆದ ಗಾಂಜಾ ಗಿಡವನ್ನು ತೊರಿಸಿದನು. ಸದರಿಯವನಿಗೆ ವಿಚಾರಿಸಿದಾಗ ನನ್ನ ಸ್ವಂತ ಊರು ಇಂಡಿ ತಾಲೂಕಿನ ಲಾಳಸಂಗಿ ಗ್ರಾಮ ಇದ್ದು, ಸದರಿ ಹೊಲ, ನನ್ನ ಹೆಂಡತಿಯ ತಾಯಿಯಾದ ಅಂಬುಬಾಯಿ ಗಂಡ ಗುರಪ್ಪ ಉಡಚಾಣ ಸಾ|| ಶಿವೂರ ಇವರ ಹೆಸರಿನ ಸರ್ವೇ ನಂ 86/2 ರಲ್ಲಿ ಇರುತ್ತದೆ. ನನ್ನ ಅತ್ತೆಗೆ ಗಂಡು ಮಕ್ಕಳು ಇಲ್ಲದ ಕಾರಣ ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ನನ್ನ ಅತ್ತೆಯ ಹೊಲದಲ್ಲಿಯೆ ಕೆಲಸ ಮಾಡಿಕೊಂಡು ಹೊಲದಲ್ಲೆ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ನಂತರ ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ವಿಚಾರಿಸಲು ನಾನು ಸದರಿ ನನ್ನ ಹೊಲದಲ್ಲಿ ಸುಮಾರು ದಿನಗಳಿಂದ ಗಾಂಜಾ ಗಿಡಗಳನ್ನು ಬೆಳೆದು ಅದನ್ನು ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ನಂತರ ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡು, ನಂತರ ಸದರಿ ಗಾಂಜಾ ಗಿಡಗಳನ್ನು ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಪಿತನಿಂದ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 02 ಗಾಂಜಾ ಗಿಡಗಳಿದ್ದು ಅವುಗಳನ್ನು, ಕಬ್ಬಿನ ಹೊಲದಿಂದ ಹೊರಕ್ಕೆ ತಂದು ಪ್ರತ್ಯೆಕವಾಗಿ  ತೂಕ ಮಾಡಿದ್ದು ಎರಡು ಗಿಡಗಳು 1) 0.825 ಗ್ರಾಮ 2) 0.265 ಒಟ್ಟು 1.085 ಕೆಜಿ ತೂಕವಿದ್ದು, ನಂತರ ಅವುಗಳನ್ನು ಪಂಚರ ಸಮಕ್ಷಮ ಮತ್ತು ಪತ್ರಾಂಕಿತ ಅಧಿಕಾರಿಗಳ ಸಮ್ಮುಖದಲ್ಲಿ ಆರೋಪಿತನಿಂದ ವಶಪಡಿಸಿಕೊಂಡಿದ್ದು, ಸದರಿ ಕಾಂಡ ಸಮೇತವಾದ ಹಸಿ ಗಾಂಜಾ ಗಿಡಗಳು ಅಂದಾಜು 5000/- ರೂ ಕಿಮ್ಮತ್ತಿನವು ಇರಬಹುದು. ನಂತರ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಆರೋಪಿತನ  ವಿರುದ್ದ ಕ್ರಮ ಕೈಕೊಳ್ಳಲು ನೀಡಿದ ವರದಿ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

  

ಜಾತಿ ನಿಂದನೆ ಪ್ರಕರಣ:-

ರೇವೂರ ಪೊಲೀಸ ಠಾಣೆ 

           ದಿನಾಂಕ 13/09/2020 ರಂದು 7.00 ಪಿಎಮ್ ಕ್ಕೆ ಫೀರ್ಯಾದಿದಾರರಾದ ಶ್ರೀ ಗುರುನಾಥ ತಂದೆ ಲಾಡಪ್ಪ ನಡುಗೇರಿ ಸಾ||ಸಿಥನೂರ ರವರು ಠಾಣೆ ಹಾಜರಾಗಿ ನೀಡಿದ ಹೇಳಿಕೆ ಸಾರಾಂಶವೆನೆಂದರೆ,

         ಇಂದು ದಿನಾಂಕ 13/09/2020 ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಗ್ರಾಮದ ಹುಲೇಪ್ಪ ತಂದೆ ಶರಣಪ್ಪ ಹೇರೂರ, ಹಣಮಂತ ತಂದೆ ಲಕ್ಷ್ಮಣ ತಳೇಕೇರಿ ಮೂರು ಜನರು ನಮ್ಮ ಗ್ರಾಮದ ನಾಗೇಶ ತಂದೆ ಮಾಳಪ್ಪ ಪೂಜಾರಿ ರವರ ಅಂಗಡಿಯ ಮುಂದೆ ಮಾತನಾಡುತ್ತಾ ನಿಂತಾಗ ರಮೇಶ ಕವಲಗಿ ಈತನು ನನ್ನ ಹತ್ತಿರ ಬಂದು ನನಗೆ ಏ ರಂಡಿ ಮಗನೇ ಹೊಲ್ಯಾ ಸುಳೆ ಮಗನೆ ನಿನೌವ್ನ ನಾ ಇಟಂಗಿ ಕೆಲಸಕ್ಕೆ ಹೇಳಿದ ಜನರಿಗೆ ನೀನು ತಗೊಂಡಿದಿ ರಂಡಿ ಮಗನೆ ಅಂತ ಬೈಯುತಿದ್ದಾಗ ನಾನು ಸದರಿಯವನಿಗೆ ನೀವು ಈ ರೀತಿ ಬೈದಾಡುವದು ಸರಿ ಅಲ್ಲಾ ಅವರೇ ನನ್ನ ಹತ್ತಿರ ಕೆಲಸಕ್ಕೆ ಬಂದಿರುತ್ತಾರೆ ಅದು ಮುಗಿದೊದ ವಿಷಯ ಈಗ್ಯಾಕೆ ಅಂತ ಅಂದಾಗ ರಮೇಶ ಈತನು ಹೊಲ್ಯಾ ರಂಡಿಮಗನೆ ನಿನಗ ಸೊಕ್ಕ ಬಾಳ ಅದಾ ಅಂತ ಅಂದು ಹೊಡೆಯಲು ನನ್ನ ಮೇಲೆ ಬರುತಿದ್ದಾಗ ಅಲ್ಲೇ ಇದ್ದ ಹುಲೇಪ್ಪ, ಹಣಮಂತ ಹಾಗು ಅಂಗಡಿಯಲಿದ್ದ ನಾಗೇಶ ರವರು ಬಂದು ರಮೇಶ ರವರಿಗೆ ಬಿಡಿಸಿ ಕಳುಯಿಸಿರುತ್ತಾರೆ. ನಾನು ಈ ಘಟನೆಯ ಬಗ್ಗೆ ನಮ್ಮ ಮನೆಯವರೊಂದಿಗೆ ವಿಚಾರ ಮಾಡಿ ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ.

 ಕಾರಣ ರಮೇಶ ತಂದೆ ಶಿವರಾಯ ಕವಲಗಿ ಸಾ||ಸಿದನೂರ ಈತನು ನನಗೆ ಹಳೆ ವೈಶಮ್ಯದಿಂದ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದು ಸದರಿಯವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ ಸಾರಾಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಅಕ್ರಮ ಮಧ್ಯ ಮಾರಾಟ ಪ್ರಕರಣ:-

ಶಹಾಬಾದ ನಗರ ಪೊಲೀಸ ಠಾಣೆ 

ದಿನಾಂಕ:13/09/2020 ರಂದು 5-45 ಪಿ ಎಮ್ ಕ್ಕೆ ಶ್ರೀ ಬಿ ಅಮರೇಶ ಪಿ ಐ ಶಹಾಬಾದ ನಗರ ಪೊಲೀಸ ಠಾಣೆ ರವರು ಠಾಣೆಗೆ ಬಂದು ಇಬ್ಬರು ಅರೋಪಿ ಮತ್ತು ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ  ದಿನಾಂಕ: 13/09/2020  ರಂದು 3-00 ಪಿ ಎಮ್  ಕ್ಕೆ ಠಾಣೆಯಲ್ಲಿದ್ದಾಗ ಹಳೆ ಶಹಾಬಾದ ಅಟೋ ಸ್ಟಾಂಡ ಹತ್ತಿರ ಇಬ್ಬರೂ ವ್ಯಕ್ತಿಗಳು ಆಕ್ರಮವಾಗಿ ಮದ್ಯ  ಮಾರಾಟ ಮಾಡುತ್ತಿದ್ದಾರೆ  ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚ ಜನರೊಂದಿಗೆ ಹೊರಟು  ಹಳೆ ಶಹಾಬಾದಕ್ಕೆ ಹೋಗಿ  ಒಂದು ಹೊಟೇಲ  ಮರೆಯಾಗಿ ನಿಂತು ನೋಡಲಾಗಿ  ಅಟೋ ಸ್ಟಾಂಡ ಹತ್ತಿರ ಖುಲ್ಲಾ ಜಾಗೆಯಲ್ಲಿ ಇಬ್ಬರೂ ವ್ಯಕ್ತಿಗಳು ಎರಡು ರಟ್ಟಿನ ಬಾಕ್ಸಗಳಲ್ಲಿ ಮದ್ಯ ಇಟ್ಟುಕೊಂಡು ಸಾರ್ವಜನಿಕರಿಗೆ ಆಕ್ರಮವಾಗಿ ಮದ್ಯ ಮರಾಟ ಮಾಡುತ್ತಿದ್ದನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಬ್ಬರೂ ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ವಿಚಾರಿಸಲು ಅವರು ತಮ್ಮ ಹೆಸರು 1) ಹಾಜಪ್ಪ ತಂದೆ ಮಲ್ಕಪ್ಪಾ ಪೂಜಾರಿ ವಯಾ: 57 ವರ್ಷ ಉ: ಖಾಸಗಿ ಕೆಲಸ ಜಾ: ಕುರಬರ ಸಾ: ಹಳೆ ಶಹಾಬಾದ 2) ಸಾಬಯ್ಯ ತಂದೆ ಅಶೋಕ ಗುತ್ತೇದಾರ ವಯಾ: 25 ವರ್ಷ ಉ: ಖಾಸಗಿ ಕೆಲಸ ಜಾ: ಇಳಗೇರ ಸಾ: ಹಳೆ ಶಹಾಬಾದ ಅಂತಾ ತಿಳಿಸಿದರು ಅವರ ಹತ್ತಿರ ಇದ್ದ ರಟ್ಟಿನ ಬಾಕ್ಸಗಳು ಪರಿಶೀಲಿಸಿ ನೋಡಲಾಗಿ ಒಂದು ಬಾಕ್ಸದಲ್ಲಿ 90 ಎಮ್ ಎಲ್ ನ ಯು ಎಸ್ ವಿಸ್ಕಿ ತುಂಬಿದ 70 ಪೌಚಗಳು ಅ.ಕಿ 1750-00 ರೂ ಇನ್ನೋಂದು ಬಾಕ್ಸನಲ್ಲಿ 90 ಎಮ್ ಎಲ್ ನ ಓರಿನಲ್ ಚಾಯ್ಸ ವಿಸ್ಕಿ ತುಂಬಿದ 60 ಪೌಚಗಳು ಅ.ಕಿ 2100-00 ರೂ  ಇದ್ದು ಅವರಿಗೆ ಮಧ್ಯ ಮಾರಾಟ ಮಾಡುವ ಬಗ್ಗೆ ಏನಾದರೂ ಪರವಾನಿಗೆ ಇದೆಯೋ ಹೇಗೆ ಅಂತಾ ವಿಚಾರಿಸಲು, ಅವರು ಯಾವುದೆ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದರು ಸದರಿಯವರು ಸರಕಾರದಿಂದ ಯಾವುದೆ ಪರವಾನಿಗೆ ಪಡೆದುಕೊಳ್ಳದೆ ಮದ್ಯ ಮಾರಾಟ ಮಾಡುತ್ತಿದ್ದರಿಂದ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಕ್ರಮ ಕೈಗೊಳ್ಳುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ  ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.