ಅಕ್ರಮ ಗಾಂಜಾ ಮಾರಾಟ :-
ಅಫಜಲಪೂರ ಪೊಲೀಸ
ಠಾಣೆ
ಜಾತಿ ನಿಂದನೆ
ಪ್ರಕರಣ:-
ರೇವೂರ ಪೊಲೀಸ ಠಾಣೆ
ದಿನಾಂಕ 13/09/2020 ರಂದು 7.00 ಪಿಎಮ್ ಕ್ಕೆ ಫೀರ್ಯಾದಿದಾರರಾದ ಶ್ರೀ ಗುರುನಾಥ ತಂದೆ ಲಾಡಪ್ಪ ನಡುಗೇರಿ ಸಾ||ಸಿಥನೂರ ರವರು ಠಾಣೆ ಹಾಜರಾಗಿ ನೀಡಿದ ಹೇಳಿಕೆ ಸಾರಾಂಶವೆನೆಂದರೆ,
ಇಂದು ದಿನಾಂಕ 13/09/2020 ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಗ್ರಾಮದ ಹುಲೇಪ್ಪ ತಂದೆ ಶರಣಪ್ಪ ಹೇರೂರ, ಹಣಮಂತ ತಂದೆ ಲಕ್ಷ್ಮಣ ತಳೇಕೇರಿ ಮೂರು ಜನರು ನಮ್ಮ ಗ್ರಾಮದ ನಾಗೇಶ ತಂದೆ ಮಾಳಪ್ಪ ಪೂಜಾರಿ ರವರ ಅಂಗಡಿಯ ಮುಂದೆ ಮಾತನಾಡುತ್ತಾ ನಿಂತಾಗ ರಮೇಶ ಕವಲಗಿ ಈತನು ನನ್ನ ಹತ್ತಿರ ಬಂದು ನನಗೆ ಏ ರಂಡಿ ಮಗನೇ ಹೊಲ್ಯಾ ಸುಳೆ ಮಗನೆ ನಿನೌವ್ನ ನಾ ಇಟಂಗಿ ಕೆಲಸಕ್ಕೆ ಹೇಳಿದ ಜನರಿಗೆ ನೀನು ತಗೊಂಡಿದಿ ರಂಡಿ ಮಗನೆ ಅಂತ ಬೈಯುತಿದ್ದಾಗ ನಾನು ಸದರಿಯವನಿಗೆ ನೀವು ಈ ರೀತಿ ಬೈದಾಡುವದು ಸರಿ ಅಲ್ಲಾ ಅವರೇ ನನ್ನ ಹತ್ತಿರ ಕೆಲಸಕ್ಕೆ ಬಂದಿರುತ್ತಾರೆ ಅದು ಮುಗಿದೊದ ವಿಷಯ ಈಗ್ಯಾಕೆ ಅಂತ ಅಂದಾಗ ರಮೇಶ ಈತನು ಹೊಲ್ಯಾ ರಂಡಿಮಗನೆ ನಿನಗ ಸೊಕ್ಕ ಬಾಳ ಅದಾ ಅಂತ ಅಂದು ಹೊಡೆಯಲು ನನ್ನ ಮೇಲೆ ಬರುತಿದ್ದಾಗ ಅಲ್ಲೇ ಇದ್ದ ಹುಲೇಪ್ಪ, ಹಣಮಂತ ಹಾಗು ಅಂಗಡಿಯಲಿದ್ದ ನಾಗೇಶ ರವರು ಬಂದು ರಮೇಶ ರವರಿಗೆ ಬಿಡಿಸಿ ಕಳುಯಿಸಿರುತ್ತಾರೆ. ನಾನು ಈ ಘಟನೆಯ ಬಗ್ಗೆ ನಮ್ಮ ಮನೆಯವರೊಂದಿಗೆ ವಿಚಾರ ಮಾಡಿ ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ.
ಕಾರಣ ರಮೇಶ ತಂದೆ ಶಿವರಾಯ ಕವಲಗಿ ಸಾ||ಸಿದನೂರ ಈತನು ನನಗೆ ಹಳೆ ವೈಶಮ್ಯದಿಂದ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದು ಸದರಿಯವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ ಸಾರಾಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಅಕ್ರಮ ಮಧ್ಯ
ಮಾರಾಟ ಪ್ರಕರಣ:-
ಶಹಾಬಾದ ನಗರ ಪೊಲೀಸ ಠಾಣೆ
ದಿನಾಂಕ:13/09/2020 ರಂದು 5-45 ಪಿ ಎಮ್ ಕ್ಕೆ ಶ್ರೀ ಬಿ ಅಮರೇಶ ಪಿ ಐ ಶಹಾಬಾದ ನಗರ ಪೊಲೀಸ ಠಾಣೆ ರವರು ಠಾಣೆಗೆ ಬಂದು ಇಬ್ಬರು ಅರೋಪಿ ಮತ್ತು ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ದಿನಾಂಕ: 13/09/2020 ರಂದು 3-00 ಪಿ ಎಮ್ ಕ್ಕೆ ಠಾಣೆಯಲ್ಲಿದ್ದಾಗ ಹಳೆ ಶಹಾಬಾದ ಅಟೋ ಸ್ಟಾಂಡ ಹತ್ತಿರ ಇಬ್ಬರೂ ವ್ಯಕ್ತಿಗಳು ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚ ಜನರೊಂದಿಗೆ ಹೊರಟು ಹಳೆ ಶಹಾಬಾದಕ್ಕೆ ಹೋಗಿ ಒಂದು ಹೊಟೇಲ ಮರೆಯಾಗಿ ನಿಂತು ನೋಡಲಾಗಿ ಅಟೋ ಸ್ಟಾಂಡ ಹತ್ತಿರ ಖುಲ್ಲಾ ಜಾಗೆಯಲ್ಲಿ ಇಬ್ಬರೂ ವ್ಯಕ್ತಿಗಳು ಎರಡು ರಟ್ಟಿನ ಬಾಕ್ಸಗಳಲ್ಲಿ ಮದ್ಯ ಇಟ್ಟುಕೊಂಡು ಸಾರ್ವಜನಿಕರಿಗೆ ಆಕ್ರಮವಾಗಿ ಮದ್ಯ ಮರಾಟ ಮಾಡುತ್ತಿದ್ದನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಬ್ಬರೂ ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ವಿಚಾರಿಸಲು ಅವರು ತಮ್ಮ ಹೆಸರು 1) ಹಾಜಪ್ಪ ತಂದೆ ಮಲ್ಕಪ್ಪಾ ಪೂಜಾರಿ ವಯಾ: 57 ವರ್ಷ ಉ: ಖಾಸಗಿ ಕೆಲಸ ಜಾ: ಕುರಬರ ಸಾ: ಹಳೆ ಶಹಾಬಾದ 2) ಸಾಬಯ್ಯ ತಂದೆ ಅಶೋಕ ಗುತ್ತೇದಾರ ವಯಾ: 25 ವರ್ಷ ಉ: ಖಾಸಗಿ ಕೆಲಸ ಜಾ: ಇಳಗೇರ ಸಾ: ಹಳೆ ಶಹಾಬಾದ ಅಂತಾ ತಿಳಿಸಿದರು ಅವರ ಹತ್ತಿರ ಇದ್ದ ರಟ್ಟಿನ ಬಾಕ್ಸಗಳು ಪರಿಶೀಲಿಸಿ ನೋಡಲಾಗಿ ಒಂದು ಬಾಕ್ಸದಲ್ಲಿ 90 ಎಮ್ ಎಲ್ ನ ಯು ಎಸ್ ವಿಸ್ಕಿ ತುಂಬಿದ 70 ಪೌಚಗಳು ಅ.ಕಿ 1750-00 ರೂ ಇನ್ನೋಂದು ಬಾಕ್ಸನಲ್ಲಿ 90 ಎಮ್ ಎಲ್ ನ ಓರಿನಲ್ ಚಾಯ್ಸ ವಿಸ್ಕಿ ತುಂಬಿದ 60 ಪೌಚಗಳು ಅ.ಕಿ 2100-00 ರೂ ಇದ್ದು ಅವರಿಗೆ ಮಧ್ಯ ಮಾರಾಟ ಮಾಡುವ ಬಗ್ಗೆ ಏನಾದರೂ ಪರವಾನಿಗೆ ಇದೆಯೋ ಹೇಗೆ ಅಂತಾ ವಿಚಾರಿಸಲು, ಅವರು ಯಾವುದೆ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದರು ಸದರಿಯವರು ಸರಕಾರದಿಂದ ಯಾವುದೆ ಪರವಾನಿಗೆ ಪಡೆದುಕೊಳ್ಳದೆ ಮದ್ಯ ಮಾರಾಟ ಮಾಡುತ್ತಿದ್ದರಿಂದ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಕ್ರಮ ಕೈಗೊಳ್ಳುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
No comments:
Post a Comment