POLICE BHAVAN KALABURAGI

POLICE BHAVAN KALABURAGI

07 December 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಠ್ಠಲ ತಂದೆ ದಶರಥ ಜಾಮಗೊಂಡ ಸಾ: ಬಂಕಲಗಾತಾ: ಅಫಜಲಪೂರ ರವರು ದಿನಾಂಕ 06-12-2019 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಮತ್ತು ನಮ್ಮೂರಿನ ಶಾಮರಾಯ ಪಾಟೀಲ ಇಬ್ಬರು ಕೂಡಿ ಮೋಟರ ಸೈಕಲ ಮೇಲೆ ಕಲಬುರಗಿಗೆ ಹೋಗಿ, ಕೆಲಸ ಮುಗಿಸಿಕೊಂಡು ಮರಳಿ ಮೋಟರ ಸೈಕಲ ಮೇಲೆ ಬರುತ್ತಿದ್ದಾಗ, ಸಂಜೆ 6:00 ಗಂಟೆ ಸುಮಾರಿಗೆ ಚೌಡಾಪೂರದಲ್ಲಿ ಚಹಾ ಕುಡಿಯುತ್ತಾ ನಿಂತಿರುತ್ತೇವೆ. ಆಗ ನಮ್ಮೂರಿನ ಪುಂಡಲಿಕ ತಂದೆ ಶರಣಪ್ಪ ಪೊಲೀಸ್ ಪಾಟೀಲ ಮತ್ತು ಆತನ ತಮ್ಮನಾದ ಶ್ರೀಮಂತ ಇಬ್ಬರು ಮೋಟರ ಸೈಕಲ ಮೇಲೆ ನಮ್ಮ ಹತ್ತಿರ ಬಂದು ನಮ್ಮ ಜೋತೆಗೆ ಚಹಾ ಕುಡಿದು ಚೌಡಾಪೂರದಲ್ಲೆ ಹಿಟಾಚಿ ಕೆಲಸ ನಡೆದಿದೆ ಎಂದು ಮಾತಾಡಿ ಎಲ್ಲರೂ ಕೂಡಿ ನಾನು ಮತ್ತು ಶಾಮರಾಯ ಪಾಟೀಲ ಇಬ್ಬರು ನನ್ನ ಮೋಟರ ಸೈಕಲ ಮೇಲೆ ಹಾಗೂ ಪುಂಡಲಿಕನು ಅವನ ತಮ್ಮನು ನಡೆಸುತ್ತಿದ್ದ ಮೋಟರ ಸೈಕಲ ಮೇಲೆ ಹಿಂದೆ ಕುಳಿತು ಊರಿಗೆ ಹೊರಟಿರುತ್ತೇವೆ. ಸುಮಾರು 6:30 ಗಂಟೆ ಸುಮಾರಿಗೆ ನಾವು ಮಲ್ಲಾಬಾದ ಗ್ರಾಮದ ಹೊಸ ಪೆಟ್ರೊಲ ಪಂಪ ಹತ್ತಿರ ಬರುತ್ತಿದ್ದಾಗ, ನಮ್ಮ ಮುಂದೆ ಮೋಟರ ಸೈಕಲ ಮೇಲೆ ಹೋಗುತ್ತಿದ್ದ ಶ್ರೀಮಂತನು ಮೋಟರ ಸೈಕಲನ್ನು ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಎತ್ತಿನ ಬಂಡಿಗೆ ಕಟ್ ಹೊಡೆಯಲು ಹೋಗಿ ಮೋಟರ ಸೈಕಲನ್ನು ಎತ್ತಿನ ಬಂಡಿಗೆ ಡಿಕ್ಕಿ ಪಡಿಸಿದನು. ಮೋಟರ ಸೈಕಲ ಡಿಕ್ಕಿ ಹೊಡೆಯುವಾಗ, ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಪುಂಡಲಿಕನ ತಲೆಗೆ ಎತ್ತಿನ ಬಂಡಿ ಬಡೆದು, ಮೋಟರ ಸೈಕಲ ಸಮೇತ ಇಬ್ಬರು ಕೆಳಗೆ ಬಿದ್ದರು. ನಾವು ಮೋಟರ ಸೈಕಲ ನಿಲ್ಲಿಸಿ ನೋಡಲು ಪುಂಡಲಿಕನ ತಲೆಗೆ ಮತ್ತು ಬಲ ಕಪಾಳಕ್ಕೆ ಭಾರಿ ಗುಪ್ತಗಾಯವಾಗಿ, ಕಿವಿಯಿಂದ ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲೆ ಮೃತ ಪಟ್ಟಿದ್ದನು. ಮೋಟರ ಸೈಕಲ ನಡೆಸುತ್ತಿದ್ದ ಶ್ರೀಮಂತನಿಗೆ ಅಲ್ಲಲ್ಲಿ ತರಚಿದ ಗಾಯಗಳು ಆಗಿದ್ದವು. ನಾವು ಮೋಟರ ಸೈಕಲ ನಂಬರ ನೋಡಿದ್ದು ಹಿರೊ ಸ್ಪೇಂಡರ್ ಪ್ಲಸ್ ಮೋಟರ ಸೈಕಲ ನಂ ಕೆಎ-32 ಇವಿ-6700 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

06 December 2019

KALABURAGI DISTRICT REPORTED CRIMES

ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ : 
ನರೋಣಾ ಠಾಣೆ : ದಿನಾಂಕ:05/12/2019 ರಂದು ಬೆಳಿಗ್ಗೆ 04-00 ಗಂಟೆಗೆ ನರೋಣಾ ಠಾಣಾ ವ್ಯಾಪ್ತಿಯ ಚಿಂಚನಸೂರ ಹಾಗೂ ಕಲ್ಲಹಂಗರಗಾ ರೋಡಿಗೆ ಇರುವ ಚಿಂಚನಸೂರ ಮಾಹಾಪೂರತಾಯಿ ದೇವಸ್ಥಾನಕ್ಕೆ ಹೋಗುವ ಕಮಾನ್ ಕ್ರಾಸ್ ಹತ್ತಿರ  ದರೋಡೆ ಮಾಡಲು ಹೊಂಚುಹಾಕಿ ಕುಳಿತಿದ್ದಾರೆ ಅಂತಾ ತಿಳಿದು ಬಂದ ಮೇರೆಗೆ ಪಿ.ಎಸ್.ಐ ನರೋಣಾ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು, ಬೆಳಿಗ್ಗೆ 5-30 ಗಂಟೆಗೆ ಚಿಂಚನಸೂರ ಹಾಗೂ ಕಲ್ಲಹಂಗರಗಾ ರೋಡಿಗೆ ಇರುವ ಚಿಂಚನಸೂರ ಮಾಹಾಪೂರತಾಯಿ ದೇವಸ್ಥಾನಕ್ಕೆ ಹೋಗುವ ಕಮಾನ್ ಕ್ರಾಸ್ ಹತ್ತಿರ ಸ್ವಲ್ಪ ದೂರದಲ್ಲಿ ನಮ್ಮ  ಜೀಪನ್ನು ನಿಲ್ಲಿಸಿ ನಮ್ಮ ವಾಹನದ ಲೈಟಿನ  ಬೆಳಕಿನಲ್ಲಿ ನೋಡಲಾಗಿ ಸುಮಾರು 7 ಜನರಿದ್ದು, ಅವರಲ್ಲಿ 2ಜನ ವ್ಯಕ್ತಿಗಳು ರೋಡಿನ ಆಚೆಗೊಬ್ಬ ಈಚೆಗೊಬ್ಬೆ ನಿಂತುಕೊಂಡು ತಮ್ಮ ಕೈಯಲ್ಲಿ ಒಂದು ಹಗ್ಗವನ್ನು ರೋಡಿಗೆ ಅಡ್ಡವಾಗಿ ಹಿಡಿದುಕೊಂಡಿದ್ದರು. ಎರಡೂ ಬದಿಯಲ್ಲಿ ನಿಂತು ಹಗ್ಗ ಹಿಡಿದ ವ್ಯಕ್ತಿಗಳ ಪಕ್ಕ ಒಂದುಕಡೆ 2ಜನ ಇನ್ನೊಂದು ಕಡೆ 3ಜನರು ತಮ್ಮ-ತಮ್ಮ ಕೈಯಲ್ಲಿ ಚಾಕು, ತಲವಾರ, ಹಿಡಿದುಕೊಂಡು ನಿಂತಿದ್ದು ಸದರಿಯವರು ರೋಡಿಗೆ ಹೋಗಿಬರುವ ವಾಹನಗಳಿಗಾಗಿ ಕಾಯುತ್ತಾ ನಿಂತಿದ್ದರು. ಆಗ ನಾವು ಸದರಿಯವರನ್ನು ಹಿಡಿಯಲು ಜೀಪಿನಿಂದ ಕೆಳಗೆ ಇಳಿದಾಗ ಸಮವಸ್ತ್ರದಲ್ಲಿದ್ದ ನಮಗೆ ನೋಡಿ ಎಲ್ಲರೂ ಓಡಲು ಪ್ರಾರಂಭಿಸಿದರು ಆಗ ನಾನು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ಬೆನ್ನುಹತ್ತಿ 4ಜನರನ್ನು ಹಿಡಿದಿದ್ದು, ನಮ್ಮ ಕೈಗೆ ಸಿಕ್ಕವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ 1)ಜೀವನ ತಂದೆ ಲಕ್ಷ್ಮಣ ಭಾವಿ, ಸಾ:ಚಿಂಚನಸೂರ ಗ್ರಾಮ, 2)ಮಾಪಣ್ಣಾ ತಂದೆ ಬಂಡೆಪ್ಪಾ ಮಾವಿನಕರ, ಸಾ:ಚಿಂಚನಸೂರ ಗ್ರಾಮ, 3)ದೇವಾ @ ದೇವಿಂದ್ರ ತಂದೆ ಲಕ್ಷ್ಮಣ ಮಾವಿನಕರ, ಸಾ:ಚಿಂಚನಸೂರ ಗ್ರಾಮ,  4)ಸನತ್ ತಂದೆ ರೇವಣಸಿದ್ದಪ್ಪಾ ಭಾವಿ, ಸಾ:ಚಿಂಚನಸೂರ ಗ್ರಾಮ, ಅಂತಾ ತಿಳಿಸಿರುತ್ತಾರೆ. ಓಡಿ ಹೋದವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಓಡಿ ಹೋದವರ ಹೆಸರು 5)ಸೋನಾಜಿ ತಂದೆ ಪ್ರಕಾಶ ಸಜ್ಜನ, 6)ರೋಹನ @ ಗುಂಡು ತಂದೆ ಪ್ರಕಾಶ ಕಾಂಬಳೆ, ಸಾ:ಎಲ್ಲರೂ ಚಿಂಚನಸೂರ ಗ್ರಾಮ, 7)ಶಿವು ತಂದೆ ಚಂದಪ್ಪಾ ವಾಗ್ದರ್ಗಿ, ಸಾ:ಮಡಕಿ ಗ್ರಾಮ ಅಂತಾ ತಿಳಿಸಿರುತ್ತಾರೆ. ವಶಕ್ಕೆ ಸಿಕ್ಕವರಿಗೆ ಪಂಚರ ಸಮಕ್ಷಮದಲ್ಲಿ ಅಂಗಶೋದನೆ ಮಾಡಿದಾಗ ಒಂದು ಬಟನ್ ಚಾಕು, ಒಂದು ಪಂಚ್‌, ಒಂದು ಪ್ಲಾಸ್ಟೀಕ್ ಕ್ಯಾರಿಬ್ಯಾಗದಲ್ಲಿ ಅಂದಾಜು ಅರ್ಧ ಕೀಲೊದಷ್ಟು ಖಾರದ ಪುಡಿ, ತಲವಾರ, ಒಂದು ಚಾಕು, ಒಂದು ಲಾಂಗ್, ಒಂದು ಬಿಳಿ ಬಣ್ಣದ ನೂಲಿನ ಹಗ್ಗ ಅಂದಾಜು 20 ಫೀಟ್ ಉದ್ದ ದೊರೆತಿರುತ್ತದೆ. ಹಾಗೂ ಸದರಿಯವರ ಹತ್ತಿರ 4 ಮೊಟಾರ್ ಸೈಕಲಗಳು ಇದ್ದು ಅವುಗಳನ್ನು ಪರಿಶೀಲಿಸಲಾಗಿ 1)ಒಂದು ಕಪ್ಪು ಬಣ್ಣದ ಹೊಂಡಾ ಶೈನ್, ಮೊ.ಸೈ ನಂ ಪರಿಶೀಲಿಸಲಾಗಿ ಅದರ ನಂಬರ್ ಪ್ಲೇಟ್ ಇರುವುದಿಲ್ಲ ಚೆಸ್ಸಿ ನಂ ಪರಿಶೀಲಿಸಲಾಗಿ. ME4JC651KFT134542      ಇದ್ದು ಅಂದಾಜ್ ಕಿಮ್ಮತ್ತು 30,000/- ರೂ, 2)ಒಂದು ಕಪ್ಪು ಮತ್ತು ನೀಲಿ ಬಣ್ಣದ ಹೊಂಡಾ ಸೀಡಿ ಡ್ರೀಮ್ 110 ನಂಬರ್ ಪರಿಶೀಲಿಸಲಾಗಿ ಅದರ ನಂಬರ್ ಕೆಎ28-ಇಎಸ್0729 ಇದ್ದು ಅದರ ಚೆಸ್ಸಿ ನಂ ಪರಿಶೀಲಿಸಲಾಗಿ ME4JC671GE8003786 ಅಂ.ಕಿ 25,000/- ಇರುತ್ತದೆ. 3)ಒಂದು ಕೆಂಪು ಮತ್ತು ಕಪ್ಪು ಬಣ್ಣದ ಪಲ್ಸರ್ 220F  ನಂಬರ್ ಪ್ಲೇಟ್ ಪರಿಶೀಲಿಸಲಾಗಿ ಎಂ.ಹೆಚ್03-ಸಿ.ಇ9269 ಚೆಸ್ಸಿ ನಂಬರ್ ಪರಿಶೀಲಿಸಿದಾಗ ME4JC65BGJ7072483 ಇದ್ದು ಅಂ.ಕಿ 45,000/- ರೂ ಇರುತ್ತದೆ. 4)ಒಂದು ಕೆಂಪು ಬಣ್ಣದ ಹೊಂಡಾಶೈನ್ ಮೊಟಾರ್ ಸೈಕಲ್ ನಂಬರ್ ಪ್ಲೇಟ್ ಇರುವುದಿಲ್ಲ ಚೆಸ್ಸಿ ನಂಬರ್ ಪರಿಶೀಲಿಸಿದಾಗ ME4JC65BGJ7072483 ಇದ್ದು ಅಂ.ಕಿ 30,000/- ರೂಪಾಯಿ ಇರುತ್ತದೆ. ಇವುಗಳ ಬಗ್ಗೆ ಆಪಾದೀತರಿಗೆ ವಿಚಾರಿಸಿದಾಗ ಸದರಿ ವಾಹನಗಳನ್ನು ಸುಮಾರು ಒಂದು ತಿಂಗಳ ಹಿಂದೆ ಎಲ್ಲರೂ ಸೇರಿ ಕಲಬುರಗಿ ನಗರದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ ಸದರಿಯವರು ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕಿ ಕುಳಿತುಕೊಂಡು ರೋಡಿಗೆ ಹೋಗಿಬರುವ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ ವಾಹನದಲ್ಲಿರುವ ಜನರ ಹತ್ತಿರ ಇರುವ ಹಣ, ಬಂಗಾರದ ಒಡವೆಗಳನ್ನು ಮತ್ತು ವಸ್ತುಗಳನ್ನು ಕಿತ್ತ್ತುಕೊಂಡು ದರೋಡೆ ಮಾಡಲು ಹೊಂಚುಹಾಕಿ ಕಾಯುತ್ತಿರುವುದು ಖಚಿತವಾಗಿದ್ದು ಇರುತ್ತದೆ. ಸದರಿಯರಿಂದ ಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಮೋದಿನ ತಂದೆ ಮೆಹಬೂಬಸಾಬ ಭಾಗವಾನ ಉ||ಕಂದಾಯ ನಿರೀಕ್ಷಕರು ಕರಜಗಿ ವಲಯ ಸಾ||ಉಸ್ಮಾನಿಯ ಕಾಲೋನಿ ಅಫಜಲಪೂರ ರವರು  ದಿನಾಂಕ 04/12/2019 ರಂದು ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಮೌಖಿಕ ಆದೇಶದ ಮೇರೆಗೆ ಅಕ್ರಮ ಮರಳು ಸಾಗಾಣಿಕ ತಡೆಗಟ್ಟುವ ಸಲುವಾಗಿ ನಮ್ಮ ಸಿಬ್ಬಂದಿರವರಾದ 1)ನೀಲಪ್ಪ ತಂದೆ ಶೇಟ್ಟೆಪ್ಪ ಜಮಾದಾರ ಗ್ರಾಮ ಸಹಾಯಕ ಶಿವೂರ 2)ದರಸ ಮಹ್ಮದ ತಂದೆ ಖಾದಿರಸಾಬ ಮುಲ್ಲಾ ಗ್ರಾಮ ಲೇಕ್ಕಿಗರು ಶಿವೂರ ರವರೊಂದಿಗೆ  ಗಸ್ತು ಕರ್ತವ್ಯದಲ್ಲಿದ್ದಾಗ ರಾತ್ರಿ 11.30 ಗಂಟೆಗೆ ಕರಜಗಿ- ಮಣ್ಣೂರ ಮುಖ್ಯ ರೋಡಿಗೆ ಇರುವ ಶಿವೂರ ಕ್ರಾಸ್ ಹತ್ತಿರ ಇದ್ದಾಗ ಶಿವೂರ ಗ್ರಾಮದ ಕಡೆಯಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ್ ಬಂದಿದ್ದು ಅದರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಆತನು ಟ್ರ್ಯಾಕ್ಟರ ನಿಲ್ಲಿಸಿದ್ದು ನಾವು ಹತ್ತಿರ ಹೋಗುತ್ತಿದ್ದಂತೆ ಟ್ರ್ಯಾಕ್ಟರ್ ಚಾಲಕ ನಮ್ಮನ್ನು ನೋಡಿ ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರ್ ನೋಡಲಾಗಿ ಸೋನಾಲಿಕ ಕಂಪನಿಯ ಟ್ರ್ಯಾಕ್ಟರ್ ಇದ್ದು ಅದಕ್ಕೆ ನೋದಣಿ ಸಂಖ್ಯೆ ಹಾಕಿರುವುದಿಲ್ಲಾ ಅದರ ಚೆಸ್ಸಿ ನಂ ನೋಡಲಾಗಿ  AZVSG72243853 ಮತ್ತು ಇಂಜಿನ್ ನಂಬರ  3105ELU83C714712F20 ನೇದ್ದು ಇದ್ದು ಸದರಿ ಟ್ರ್ಯಾಕ್ಟರ್ ಅಂದಾಜು ಕಿಮ್ಮತ್ತು 5,00,000/- ರೂಪಾಯಿ ಇರಬಹುದು ಅದರಲ್ಲಿರುವ ಮರಳಿನ ಅಂದಾಜು ಕಿಮ್ಮತ್ತು 3000/- ರೂಪಾಯಿ ಇರಬಹುದು ನಂತರ ನನ್ನ ಜೊತೆ ಇದ್ದ ಸಿಬ್ಬಂದಿಯ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಟ್ರ್ಯಾಕ್ಟರನ್ನು ಜಪ್ತಿ ಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಧನರಾಜ ತಂದೆ ನಾರಾಯಣ ಮಾಶಾಳೆ ಸಾ|| ಖಸಗಿವಾಡಿ ತಾ|| ಉಮರ್ಗಾ ಜಿ||ಉಸ್ಮಾನಬಾದ ರವರ ಹಿರಿಯ ಮಗಳಾದ ಲಕ್ಷ್ಮೀ ಇವಳಿಗೆ 2014 ನೇ ಸಾಲಿನಲ್ಲಿ ಅಫಜಲಪೂರ ತಾಲೂಕಿನ ಉಡಚಾಣ ಹಟ್ಟಿ ಗ್ರಾಮದ ಜಗದೀಶ ತಂದೆ ಸಿದ್ದು ಬಂಡಗಾರ ಈತನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತೇವೆ. ನನ್ನ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ ಮಾವಂದಿರರು ಚನ್ನಾಗಿ ನೋಡಿಕೊಂಡಿರುತ್ತಾರೆ. ದಿನಾಂಕ 30-11-2019 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಉಡಚಾಣ ಹಟ್ಟಿ ಗ್ರಾಮದಿಂದ ನನ್ನ ಸಂಭಂದಿಕರು ನನಗೆ ಪೋನ್ ಮಾಡಿ, ಈಗ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಿಮ್ಮ ಮಗಳು ಲಕ್ಷ್ಮೀ ಇವಳು ವಿಷ ಕುಡಿದಿರುತ್ತಾಳೆ ಲಕ್ಷ್ಮೀಯನ್ನು ಆಕೇಯ ನಾದನಿಯ ಗಂಡನಾದ ರಮೇಶ ಸಿಂದೆ ಇವನು ಸೋಲ್ಲಾಪೂರಕ್ಕೆ ಕರೆದುಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದರು. ಆಗ ರಮೇಶನಿಗೆ ನಾವು ಪೋನ್ ಮಾಡಿ ವಿಚಾರಿಸಿಕೊಂಡು ನಾನು ಮತ್ತು ನನ್ನ ಹೆಂಡತಿ ಇಬ್ಬರು ಸೋಲ್ಲಾಪೂರದ ಲೈಫಲೈನ್ ಆಸ್ಪತ್ರೆಗೆ ಹೋಗಿ ನನ್ನ ಮಗಳಿಗೆ ಹೋಗಿ ನೋಡಲಾಗಿ, ನನ್ನ ಮಗಳೂ ಮಾತನಾಡುವ ಸ್ಥೀತಿಯಲ್ಲಿ ಇರಲಿಲ್ಲ. ನನ್ನ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ಚಿಕಿತ್ಸೆ ಫಲಿಸದೆ ದಿನಾಂಕ 02-12-2019 ರಂದು 03:30 ಎ ಎಮ್ ಕ್ಕೆ ಮೃತಪಟ್ಟಿರುತ್ತಾಳೆ. ನನ್ನ ಮಗಳು ಮೃತ ಪಟ್ಟ ಬಗ್ಗೆ ಸೋಲ್ಲಾಪೂರದ ಸದರ ಬಜಾರ ಪೊಲೀಸ ಠಾಣೆಯ ಪೊಲೀಸರು ಆಸ್ಪತ್ರೆಗೆ ಬಂದು, ನನ್ನ ಮಗಳ ಶವವನ್ನು ಸಿವಿಲ್ ಆಸ್ಪತ್ರೆಗೆ ತಂದು, ಅಲ್ಲಿ ನನ್ನ ಹೇಳಿಕೆಯನ್ನು ಪಡೆದುಕೊಂಡು ನನ್ನ ಮಗಳು ಮೃತಪಟ್ಟ ಬಗ್ಗೆ ಕಾನೂನು ಕ್ರಮ ಕೈಕೊಂಡಿರುತ್ತಾರೆ. ನನ್ನ ಮಗಳ ಮೃತ ದೇಹದ ಪಿ.ಎಮ್.ಇ ಆದ ನಂತರ ಶವವನ್ನು ಉಡಚಾಣ ಹಟ್ಟಿ ಗ್ರಾಮಕ್ಕೆ ತಂದು ಶವ ಸಂಸ್ಕಾರ ಮಾಡಿರುತ್ತೇವೆ.ನಾನು ನನ್ನ ಮಗಳ ಪಿ,ಎಮ್,ಈ.ಕಾಲಕ್ಕೆ ಸೋಲಾಪೂರದ ಸದರ ಬಜಾರ ಪೊಲೀಸರ ಮುಂದೆ ನನ್ನ ಮಗಳು ಸತ್ತ ದುಖ:ದಲ್ಲಿ ನನ್ನ ಮಗಳಿಗೆ ಆಕೆಯ ಗಂಡನ ಮನೆಯವರು ತ್ರಾಸ ಕೊಟ್ಟಿರಬಹುದು, ಅದರಿಂದ ನನ್ನ ಮಗಳು ವಿಷ ಕುಡಿದಿರುತ್ತಾಳೆ ಎಂದು ಹೇಳಿಕೆ ಕೊಟ್ಟಿರುತ್ತೇನೆ. ಆದರೆ ನೀಜ ವಿಷಯವೆನಂದರೆ ನನ್ನ ಮಗಳು ನನ್ನ ಅಳಿಯ ಜಗದೀಶನಿಗೆ ನಾವು ಬೇರೆ ಮನೆ ಮಾಡಿಕೊಂಡು ಇರೊಣ ಅಂತ ನನ್ನ ಅಳಿಯನೊಂದಿಗೆ ಕಿರಿಕಿರಿ ಮಾಡಿ ಅವನಿಗೆ ಹೆದರಿಸಲು ಹೋಗಿ ಹತ್ತಿ ಬೆಳೆಗೆ ಹೊಡೆಯವ ಔಷದಿ ಕುಡಿದಿರುತ್ತಾಳೆ. ಸದರಿ ಘಟನೆ ಬಗ್ಗೆ ನನ್ನ ಮಗಳ ಗಂಡನ ಮನೆಯವರ ಮೇಲೆ ಆಗಲಿ ಅಥವಾ ಇತರರ ಮೇಲೆ ಆಗಲಿ ಯಾವುದೆ ಪಿರ್ಯಾದಿ ವಗೈರೆ ಇರುವದಿಲ್ಲ ಮತ್ತು ಅವಳ ಸಾವಿನ ಬಗ್ಗೆ ಯಾವದೆ ಸಂಶಯವಿರುವದಿಲ್ಲ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ರೇವೂರ ಠಾಣೆ : ಶ್ರೀ ಮೌಲಾಲಿ ತಂದೆ ಲಾಡ್ಲೇಸಾಬ ಭಾಗವಾನ ಸಾ||ಅತನೂರ ರವರು ನಮ್ಮ ಗ್ರಾಮದ ಮುಖ್ಯ ರಸ್ತೆಯ ಆಜು ಬಾಜು ಅಂದಾಜು 55 ರಿಂದ 60 ವರ್ಷದ ಒಬ್ಬಳು ಮಾನಸಿಕ ಅಸ್ವಸ್ಥೆ ಹೆಣ್ಣು ಮಗಳು ಕೇಲವು ದಿನಗಳಿಂದ ದಿನಾಲು ಅಲ್ಲೆ ತಿರುಗಾಡುವದು ರಸ್ತೆಯ ಬಾಜು ಮಲಗುವದು ಮಾಡುತಿದ್ದಳು ಅವಳ ಹೆಸರು ವಿಳಾಸ ನನಗೆ ಹಾಗು ನಮ್ಮ ಗ್ರಾಮದವರಿಗೆ ಗೊತ್ತಿರುವುದಿಲ್ಲ.ದಿನಾಂಕ 03/12/2019 ರಂದು ರಾತ್ರಿ 10.30 ಪಿಎಮ್ ಸುಮಾರಿಗೆ ನಮ್ಮ ಗ್ರಾಮದ ಬಸ್ಸನಿಲ್ದಾಣದ ಹತ್ತಿರ ರೋಡಿನ ಬಾಜು ತಿರುಗಾಡುತ್ತಿರುವುದನ್ನು ನಾನು ಕಂಡಿದ್ದು
ದಿನಾಂಕ 04/12/2019 ರಂದು ಬೆಳಿಗ್ಗೆ 6.30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಗ್ರಾಮದ ಮಲ್ಲಿಕಾರ್ಜುನ ಗೋಳಸಾರ, ಸಂತೋಷ ಹುಲಿ ಮೂರು ಜನರು ಎಂದಿನಂತೆ ವಾಕಿಂಗ ಮಾಡಿಕೊಂಡು ಮುಖ್ಯರಸ್ತೆಯ ಬದಿ ಭೋಗನಳ್ಳಿ ಕ್ರಾಸ ಕಡೆ ನಡೆದುಕೊಂಡು ಹೋಗುತಿದ್ದಾಗ ನಮ್ಮ ಗ್ರಾಮದ ಪ್ರವೀಣ ತಂದೆ ಶಿವಯ್ಯ ಗುತ್ತೇದಾರ ರವರ ಹೊಲದ ಹತ್ತಿರ ರಾಷ್ಠ್ರಿಯ ಹೆದ್ದಾರಿ ಮುಖ್ಯ ರಸ್ತೆಯ ಮೇಲೆ ಒಂದು ಹೆಣ್ಣು ಮಗಳು ಮಲಗಿದಂತೆ ಕಂಡು ನಾವು ಸಮೀಪ ಹೋಗಿ ನೋಡಲಾಗಿ ಹಳದಿ ಬಣ್ಣದ ಸೀರೆ ಇರುವ ಹೆಣ್ಣುಮಗಳ ಮೃತದೇಹ ಕಂಡಿದ್ದು ಸದರಿ ಮೃತ ದೇಹವು ನಮ್ಮ ಗ್ರಾಮದ ಮುಖ್ಯ ರಸ್ತೆಯ ಆಜು ಬಾಜು ತಿರುಗಾಡುತಿದ್ದ  ಅಂದಾಜು 55 ರಿಂದ 60 ವರ್ಷದ ಮಾನಸಿಕ ಅಸ್ವಸ್ಥೆ ಹೆಣ್ಣು ಮಗಳ ದೇಹ ಇದ್ದು ಅವಳ ದೇಹ ರಸ್ತೆ ಅಫಘಾತದಲ್ಲಿ ಸಂಪೂರ್ಣವಾಗಿ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುತ್ತದೆ. ಕಾರಣ ಯಾವುದೋ ಅಪರಿಚಿತ ವಾಹನದ ಚಾಲಕ ಅತಿವೇಗ ಹಾಗು ನಿಸ್ಕಾಳಜಿತದಿಂದ ವಾಹನ ಚಲಾಯಿಸಿ ದಿನಾಂಕ 03/12/2019 ರಂದು ರಾತ್ರಿ 11.00 ಪಿಎಮ್ ದಿಂದ ದಿನಾಂಕ 04/12/2019 ರ 6.00 ಎಎಮ್ ಮದ್ಯದ ಅವದಿಯಲ್ಲಿ ಮಾನಸಿಕ ಅಸ್ವಸ್ಥೆಯಾದ ಅಂದಾಜು 55-60 ವರ್ಷದ ಅಫರಿಚಿತ  ಹೆಣ್ಣುಗಳ ಮೇಲೆ ವಾಹನ ಚಲಾಯಿಸಿ ತನ್ನ ವಾಹನದ ಸಮೇತ ಓಡಿ ಹೋದ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 December 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ವಾಡಿ ಠಾಣೆ : ದಿನಾಂಕ:02/12/2019 ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ  ವಾಡಿ ಪಟ್ಟಣದ ಕುನ್ನೂರ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರೊಡಿಗೆ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಾನೆ ಅಂತಾ ಬಂದ ಬಾತ್ಮಿ ಮೇರೆಗೆ ಪಿ.ಎಸ್.ಐ. ವಾಡಿ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ವಾಡಿಪಟ್ಟಣದ ಕುನ್ನೂರ ಕ್ರಾಸದಿಂದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ಮಲ್ಲಿಕಾರ್ಜನು ತಂದೆ ಈಶ್ವರಪ್ಪ ನಾಟಿಕರ ಸಾ:ಅಂಬೇಡಕರ ಕಾಲೋನಿ ವಾಡಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 1250 /- ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ನಂಬರ ಬರೆದ ಚೀಟಿಗಳನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲಾಗಿ ತಾನೇ ಇಟ್ಟುಕೊಳ್ಳುತ್ತೆನೆ ಅಂತಾ ತಿಳಿಸಿದನು. ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ : ದಿನಾಂಕ:02/12/2019 ರಂದು, ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ  ವಾಡಿ ಪಟ್ಟಣದ ಬಲರಾಮ ಚೌಕ ಹತ್ತಿರ ಬಸಸ್ಟ್ಯಾಂಡ ಮುಂದಿನ ರೊಡಿಗೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಾನೆ ಅಂತಾ ಬಂದ ಬಾತ್ಮಿ ಮೇರೆಗೆ ಪಿ.ಎಸ್.ಐ. ವಾಡಿ ರವರು ಹಾಶಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ವಾಡಿಪಟ್ಟಣದ ಬಲರಾಮ ಚೌಕ ಸಮೀಪ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ಯಲ್ಲಪ್ಪ ತಂದೆ ಹಣಮಂತ ದಂಡಗೋಲಕರ ಸಾ:ಬಸವನಖಣಿ ವಾಡಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 750 /- ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ನಂಬರ ಬರೆದ ಚೀಟಿಗಳನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲಾಗಿ ತಾನೇ ಇಟ್ಟುಕೊಳ್ಳುತ್ತೆನೆ ಅಂತಾ ತಿಳಿಸಿದನು. ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು  ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 02-12-2019 ರಂದು ಸಾಯಂಕಾಲ ನನ್ನ ಗಂಡನಾದ ಮುರುಗಯ್ಯ ಹಿರೇಮಠ ರವರು ಅಫಜಲಪೂರಕ್ಕೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ನಮ್ಮ ಹೊಂಡಾ ಯಾಕ್ಟಿವ್ ಸ್ಕೂಟಿ ಮೋಟರ ಸೈಕಲ ನಂ ಎಮ್.ಹೆಚ್-12 ಡಿಎಫ್-5641 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿರುತ್ತಾರೆ. ಸಂಜೆ 7:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಮಲ್ಲಯ್ಯ ಮಠ ಇವರು ನಮಗೆ ಪೋನ್ ಮಾಡಿ ಅಳ್ಳಗಿ (ಬಿ) ಕ್ರಾಸದಿಂದ ಸ್ವಲ್ಪ ಮುಂದೆ ನಮ್ಮೂರಿನ ರೋಡಿಗೆ ನಿಮ್ಮ ಗಂಡನಿಗೆ ಎಕ್ಸಿಡೆಂಟ ಆಗಿದೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಮನೆಯವರು ಹಾಗೂ ನಮ್ಮೂರಿನ ಮಂಜುನಾಥ ಹಿರೇಮಠ, ಶಿವಣ್ಣ ದೇವರನಾವದಗಿ ಇನ್ನಿತರರೂ ಕೂಡಿ ಸ್ಥಳಕ್ಕೆ ಹೋಗಿ ನೋಡಲು ನನ್ನ ಗಂಡನು ಮೃತ ಪಟ್ಟಿದ್ದನು. ಸ್ಥಳದಲ್ಲಿದ್ದ ಸಿದ್ದರಾಮ ಜವಳಿ ಇವರು ನಾನು ಮತ್ತು ಮಲ್ಲಯ್ಯ ಮಠ ಇಬ್ಬರು ಮೋಟರ ಸೈಕಲ ಮೇಲೆ ಅಫಜಲಪೂರದಿಂದ ಊರಿಗೆ ಬರುತ್ತಿದ್ದೇವು, ನಮ್ಮ ಮುಂದೆಯೆ ಮುರುಗಯ್ಯ ಸ್ವಾಮಿ ಸಹ ಮೋಟರ ಸೈಕಲ ಮೇಲೆ ಹೋಗುತ್ತಿದ್ದನು. ನಮ್ಮೂರಿನ ಕ್ರಾಸ ದಾಟಿದಾಗ ನಮ್ಮ ಹಿಂದಿನಿಂದ ಒಂದು ಟ್ಯಾಕ್ಟರ ಬರುತ್ತಿದ್ದು, ಸದರಿ ಟ್ಯಾಕ್ಟರ ಚಾಲಕ ಅತಿವೇಗವಾಗಿ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಸೈಡ ಹೊಡೆದುಕೊಂಡು ಹೋದನು, ನಾವು ಟ್ಯಾಕ್ಟರ ಹಿಂದೆಯೆ ಹೋಗುತ್ತಿದ್ದಾಗ ಸಂಜೆ 7:30 ಗಂಟೆ ಸುಮಾರಿಗೆ ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ  ಮುಂದೆ ಹೋಗುತ್ತಿದ್ದ ಮುರುಗಯ್ಯ ಹಿರೇಮಠ ಇವರ ಮೋಟರ ಸೈಕಲಕ್ಕೆ ಡಿಕ್ಕಿ ಹೊಡೆದು ಟ್ಯಾಕ್ಟರ ನಿಲ್ಲಿಸದೆ ಟ್ಯಾಕ್ಟರ ಚಾಲಾಯಿಸಿಕೊಂಡು ಹೋದನು. ಆಗ ನಾವು ನಮ್ಮ ಮೋಟರ ಸೈಕಲನ್ನು ನಿಲ್ಲಿಸಿ ಮುರುಗಯ್ಯ ಹಿರೇಮಠ ಇವರಿಗೆ ನೋಡಲು ಅವರ ಬಲ ಕಪಾಳಿಗೆ ಭಾರಿ ರಕ್ತಗಾಯ ಮತ್ತು ಮೈ ಕೈಗೆ ಒಳಪೆಟ್ಟುಗಳು ಆಗಿ ಸ್ಥಳದಲ್ಲೆ ಮೃತಪಟ್ಟಿದ್ದರು. ಸದರಿ ಸಮಯದಲ್ಲಿ ನಾವು ಟ್ಯಾಕ್ಟರ ನಂಬರನ್ನು ಅಷ್ಟಾಗಿ ಗಮನಿಸಿರುವುದಿಲ್ಲ. ಸದರಿ ಟ್ಯಾಕ್ಟರ, ನಮ್ಮ ಮೋಟರ ಸೈಕಲಗೆ ಸೈಡ ಹೊಡೆದುಕೊಂಡು ಹೋಗುತ್ತಿದ್ದಾಗ ನಾವು ಅದನ್ನು ನೋಡಿದ್ದು, ಇನ್ನೊಂದು ಬಾರಿ ನೋಡಿದರೆ, ಸದರಿ ಟ್ಯಾಕ್ಟರನ್ನು ಗುರುತಿಸುತ್ತೇವೆ. ನನ್ನ ಗಂಡನು ಮೋಟರ ಸೈಕಲ ಮೇಲೆ ಬರುತ್ತಿದ್ದಾಗ ಹಿಂದಿನಿಂದ ಯಾವುದೊ ಒಂದು ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನ ಮೋಟರ ಸೈಕಲ ಹಿಂದೆ ಡಿಕ್ಕಿ ಪಡಿಸಿದ್ದರಿಂದ, ನನ್ನ ಗಂಡನ ಬಲ ಕಪಾಳಕ್ಕೆ ಭಾರಿ ರಕ್ತಗಾಯ ಮತ್ತು ಮೈ ಕೈ ಗೆ ಒಳಪೆಟ್ಟುಗಳು ಆಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾರೆ. ಅಂತಾ ಶ್ರೀಮತಿ ಚನ್ನಮ್ಮ ಗಂಡ ಮುರುಗಯ್ಯ ಹಿರೇಮಠ ಸಾ: ಅಳ್ಳಗಿ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.