ಅಪಘಾತ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ವಿಠ್ಠಲ ತಂದೆ ದಶರಥ ಜಾಮಗೊಂಡ ಸಾ: ಬಂಕಲಗಾತಾ: ಅಫಜಲಪೂರ ರವರು ದಿನಾಂಕ
06-12-2019 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಮತ್ತು ನಮ್ಮೂರಿನ ಶಾಮರಾಯ
ಪಾಟೀಲ ಇಬ್ಬರು ಕೂಡಿ ಮೋಟರ ಸೈಕಲ ಮೇಲೆ ಕಲಬುರಗಿಗೆ ಹೋಗಿ, ಕೆಲಸ ಮುಗಿಸಿಕೊಂಡು ಮರಳಿ ಮೋಟರ ಸೈಕಲ ಮೇಲೆ
ಬರುತ್ತಿದ್ದಾಗ,
ಸಂಜೆ 6:00 ಗಂಟೆ ಸುಮಾರಿಗೆ ಚೌಡಾಪೂರದಲ್ಲಿ ಚಹಾ
ಕುಡಿಯುತ್ತಾ ನಿಂತಿರುತ್ತೇವೆ. ಆಗ ನಮ್ಮೂರಿನ ಪುಂಡಲಿಕ ತಂದೆ ಶರಣಪ್ಪ ಪೊಲೀಸ್ ಪಾಟೀಲ ಮತ್ತು
ಆತನ ತಮ್ಮನಾದ ಶ್ರೀಮಂತ ಇಬ್ಬರು ಮೋಟರ ಸೈಕಲ ಮೇಲೆ ನಮ್ಮ ಹತ್ತಿರ ಬಂದು ನಮ್ಮ ಜೋತೆಗೆ ಚಹಾ
ಕುಡಿದು ಚೌಡಾಪೂರದಲ್ಲೆ ಹಿಟಾಚಿ ಕೆಲಸ ನಡೆದಿದೆ ಎಂದು ಮಾತಾಡಿ ಎಲ್ಲರೂ ಕೂಡಿ ನಾನು ಮತ್ತು
ಶಾಮರಾಯ ಪಾಟೀಲ ಇಬ್ಬರು ನನ್ನ ಮೋಟರ ಸೈಕಲ ಮೇಲೆ ಹಾಗೂ ಪುಂಡಲಿಕನು ಅವನ ತಮ್ಮನು ನಡೆಸುತ್ತಿದ್ದ
ಮೋಟರ ಸೈಕಲ ಮೇಲೆ ಹಿಂದೆ ಕುಳಿತು ಊರಿಗೆ ಹೊರಟಿರುತ್ತೇವೆ. ಸುಮಾರು 6:30 ಗಂಟೆ ಸುಮಾರಿಗೆ ನಾವು ಮಲ್ಲಾಬಾದ ಗ್ರಾಮದ
ಹೊಸ ಪೆಟ್ರೊಲ ಪಂಪ ಹತ್ತಿರ ಬರುತ್ತಿದ್ದಾಗ, ನಮ್ಮ ಮುಂದೆ ಮೋಟರ ಸೈಕಲ ಮೇಲೆ ಹೋಗುತ್ತಿದ್ದ ಶ್ರೀಮಂತನು ಮೋಟರ
ಸೈಕಲನ್ನು ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಎತ್ತಿನ
ಬಂಡಿಗೆ ಕಟ್ ಹೊಡೆಯಲು ಹೋಗಿ ಮೋಟರ ಸೈಕಲನ್ನು ಎತ್ತಿನ ಬಂಡಿಗೆ ಡಿಕ್ಕಿ ಪಡಿಸಿದನು. ಮೋಟರ ಸೈಕಲ
ಡಿಕ್ಕಿ ಹೊಡೆಯುವಾಗ,
ಮೋಟರ ಸೈಕಲ ಮೇಲೆ
ಹಿಂದೆ ಕುಳಿತಿದ್ದ ಪುಂಡಲಿಕನ ತಲೆಗೆ ಎತ್ತಿನ ಬಂಡಿ ಬಡೆದು, ಮೋಟರ ಸೈಕಲ ಸಮೇತ ಇಬ್ಬರು ಕೆಳಗೆ ಬಿದ್ದರು.
ನಾವು ಮೋಟರ ಸೈಕಲ ನಿಲ್ಲಿಸಿ ನೋಡಲು ಪುಂಡಲಿಕನ ತಲೆಗೆ ಮತ್ತು ಬಲ ಕಪಾಳಕ್ಕೆ ಭಾರಿ
ಗುಪ್ತಗಾಯವಾಗಿ,
ಕಿವಿಯಿಂದ
ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲೆ ಮೃತ ಪಟ್ಟಿದ್ದನು. ಮೋಟರ ಸೈಕಲ ನಡೆಸುತ್ತಿದ್ದ ಶ್ರೀಮಂತನಿಗೆ
ಅಲ್ಲಲ್ಲಿ ತರಚಿದ ಗಾಯಗಳು ಆಗಿದ್ದವು. ನಾವು ಮೋಟರ ಸೈಕಲ ನಂಬರ ನೋಡಿದ್ದು ಹಿರೊ ಸ್ಪೇಂಡರ್
ಪ್ಲಸ್ ಮೋಟರ ಸೈಕಲ ನಂ ಕೆಎ-32 ಇವಿ-6700 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment