POLICE BHAVAN KALABURAGI

POLICE BHAVAN KALABURAGI

03 December 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ವಾಡಿ ಠಾಣೆ : ದಿನಾಂಕ:02/12/2019 ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ  ವಾಡಿ ಪಟ್ಟಣದ ಕುನ್ನೂರ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರೊಡಿಗೆ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಾನೆ ಅಂತಾ ಬಂದ ಬಾತ್ಮಿ ಮೇರೆಗೆ ಪಿ.ಎಸ್.ಐ. ವಾಡಿ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ವಾಡಿಪಟ್ಟಣದ ಕುನ್ನೂರ ಕ್ರಾಸದಿಂದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ಮಲ್ಲಿಕಾರ್ಜನು ತಂದೆ ಈಶ್ವರಪ್ಪ ನಾಟಿಕರ ಸಾ:ಅಂಬೇಡಕರ ಕಾಲೋನಿ ವಾಡಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 1250 /- ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ನಂಬರ ಬರೆದ ಚೀಟಿಗಳನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲಾಗಿ ತಾನೇ ಇಟ್ಟುಕೊಳ್ಳುತ್ತೆನೆ ಅಂತಾ ತಿಳಿಸಿದನು. ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ : ದಿನಾಂಕ:02/12/2019 ರಂದು, ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ  ವಾಡಿ ಪಟ್ಟಣದ ಬಲರಾಮ ಚೌಕ ಹತ್ತಿರ ಬಸಸ್ಟ್ಯಾಂಡ ಮುಂದಿನ ರೊಡಿಗೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಾನೆ ಅಂತಾ ಬಂದ ಬಾತ್ಮಿ ಮೇರೆಗೆ ಪಿ.ಎಸ್.ಐ. ವಾಡಿ ರವರು ಹಾಶಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ವಾಡಿಪಟ್ಟಣದ ಬಲರಾಮ ಚೌಕ ಸಮೀಪ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ಯಲ್ಲಪ್ಪ ತಂದೆ ಹಣಮಂತ ದಂಡಗೋಲಕರ ಸಾ:ಬಸವನಖಣಿ ವಾಡಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 750 /- ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ನಂಬರ ಬರೆದ ಚೀಟಿಗಳನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲಾಗಿ ತಾನೇ ಇಟ್ಟುಕೊಳ್ಳುತ್ತೆನೆ ಅಂತಾ ತಿಳಿಸಿದನು. ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು  ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 02-12-2019 ರಂದು ಸಾಯಂಕಾಲ ನನ್ನ ಗಂಡನಾದ ಮುರುಗಯ್ಯ ಹಿರೇಮಠ ರವರು ಅಫಜಲಪೂರಕ್ಕೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ನಮ್ಮ ಹೊಂಡಾ ಯಾಕ್ಟಿವ್ ಸ್ಕೂಟಿ ಮೋಟರ ಸೈಕಲ ನಂ ಎಮ್.ಹೆಚ್-12 ಡಿಎಫ್-5641 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿರುತ್ತಾರೆ. ಸಂಜೆ 7:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಮಲ್ಲಯ್ಯ ಮಠ ಇವರು ನಮಗೆ ಪೋನ್ ಮಾಡಿ ಅಳ್ಳಗಿ (ಬಿ) ಕ್ರಾಸದಿಂದ ಸ್ವಲ್ಪ ಮುಂದೆ ನಮ್ಮೂರಿನ ರೋಡಿಗೆ ನಿಮ್ಮ ಗಂಡನಿಗೆ ಎಕ್ಸಿಡೆಂಟ ಆಗಿದೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಮನೆಯವರು ಹಾಗೂ ನಮ್ಮೂರಿನ ಮಂಜುನಾಥ ಹಿರೇಮಠ, ಶಿವಣ್ಣ ದೇವರನಾವದಗಿ ಇನ್ನಿತರರೂ ಕೂಡಿ ಸ್ಥಳಕ್ಕೆ ಹೋಗಿ ನೋಡಲು ನನ್ನ ಗಂಡನು ಮೃತ ಪಟ್ಟಿದ್ದನು. ಸ್ಥಳದಲ್ಲಿದ್ದ ಸಿದ್ದರಾಮ ಜವಳಿ ಇವರು ನಾನು ಮತ್ತು ಮಲ್ಲಯ್ಯ ಮಠ ಇಬ್ಬರು ಮೋಟರ ಸೈಕಲ ಮೇಲೆ ಅಫಜಲಪೂರದಿಂದ ಊರಿಗೆ ಬರುತ್ತಿದ್ದೇವು, ನಮ್ಮ ಮುಂದೆಯೆ ಮುರುಗಯ್ಯ ಸ್ವಾಮಿ ಸಹ ಮೋಟರ ಸೈಕಲ ಮೇಲೆ ಹೋಗುತ್ತಿದ್ದನು. ನಮ್ಮೂರಿನ ಕ್ರಾಸ ದಾಟಿದಾಗ ನಮ್ಮ ಹಿಂದಿನಿಂದ ಒಂದು ಟ್ಯಾಕ್ಟರ ಬರುತ್ತಿದ್ದು, ಸದರಿ ಟ್ಯಾಕ್ಟರ ಚಾಲಕ ಅತಿವೇಗವಾಗಿ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಸೈಡ ಹೊಡೆದುಕೊಂಡು ಹೋದನು, ನಾವು ಟ್ಯಾಕ್ಟರ ಹಿಂದೆಯೆ ಹೋಗುತ್ತಿದ್ದಾಗ ಸಂಜೆ 7:30 ಗಂಟೆ ಸುಮಾರಿಗೆ ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ  ಮುಂದೆ ಹೋಗುತ್ತಿದ್ದ ಮುರುಗಯ್ಯ ಹಿರೇಮಠ ಇವರ ಮೋಟರ ಸೈಕಲಕ್ಕೆ ಡಿಕ್ಕಿ ಹೊಡೆದು ಟ್ಯಾಕ್ಟರ ನಿಲ್ಲಿಸದೆ ಟ್ಯಾಕ್ಟರ ಚಾಲಾಯಿಸಿಕೊಂಡು ಹೋದನು. ಆಗ ನಾವು ನಮ್ಮ ಮೋಟರ ಸೈಕಲನ್ನು ನಿಲ್ಲಿಸಿ ಮುರುಗಯ್ಯ ಹಿರೇಮಠ ಇವರಿಗೆ ನೋಡಲು ಅವರ ಬಲ ಕಪಾಳಿಗೆ ಭಾರಿ ರಕ್ತಗಾಯ ಮತ್ತು ಮೈ ಕೈಗೆ ಒಳಪೆಟ್ಟುಗಳು ಆಗಿ ಸ್ಥಳದಲ್ಲೆ ಮೃತಪಟ್ಟಿದ್ದರು. ಸದರಿ ಸಮಯದಲ್ಲಿ ನಾವು ಟ್ಯಾಕ್ಟರ ನಂಬರನ್ನು ಅಷ್ಟಾಗಿ ಗಮನಿಸಿರುವುದಿಲ್ಲ. ಸದರಿ ಟ್ಯಾಕ್ಟರ, ನಮ್ಮ ಮೋಟರ ಸೈಕಲಗೆ ಸೈಡ ಹೊಡೆದುಕೊಂಡು ಹೋಗುತ್ತಿದ್ದಾಗ ನಾವು ಅದನ್ನು ನೋಡಿದ್ದು, ಇನ್ನೊಂದು ಬಾರಿ ನೋಡಿದರೆ, ಸದರಿ ಟ್ಯಾಕ್ಟರನ್ನು ಗುರುತಿಸುತ್ತೇವೆ. ನನ್ನ ಗಂಡನು ಮೋಟರ ಸೈಕಲ ಮೇಲೆ ಬರುತ್ತಿದ್ದಾಗ ಹಿಂದಿನಿಂದ ಯಾವುದೊ ಒಂದು ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನ ಮೋಟರ ಸೈಕಲ ಹಿಂದೆ ಡಿಕ್ಕಿ ಪಡಿಸಿದ್ದರಿಂದ, ನನ್ನ ಗಂಡನ ಬಲ ಕಪಾಳಕ್ಕೆ ಭಾರಿ ರಕ್ತಗಾಯ ಮತ್ತು ಮೈ ಕೈ ಗೆ ಒಳಪೆಟ್ಟುಗಳು ಆಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾರೆ. ಅಂತಾ ಶ್ರೀಮತಿ ಚನ್ನಮ್ಮ ಗಂಡ ಮುರುಗಯ್ಯ ಹಿರೇಮಠ ಸಾ: ಅಳ್ಳಗಿ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: