POLICE BHAVAN KALABURAGI

POLICE BHAVAN KALABURAGI

10 November 2017

KALABURAGI DISTRICT REPORTED CRIMES

ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಪುರಮ್ಶಾಂತನು ಪಿ. ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರು ಆರ್.ಸಿ ಸಾಹೇಬರು ಮನೆಯಲ್ಲಿ ಇರುವ ಆಫೀಸನಲ್ಲಿನ ಕೆಲಸ ಮತ್ತು ದೂರವಾಣಿ ಕರೆಗಳನ್ನು ಸ್ವಿಕರಿಸುವುದು ಮಾಡುತ್ತಿದ್ದು ಎಂದಿನಂತೆ ದಿನಾಂಕ 07/11/2017 ರಂದು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ನಾನು ಸಾಹೇಬರ ಮನೆಗೆ ಹೋದಾಗ ಆರ್.ಸಿ ಸಾಹೇಬರ ತಾಯಿಯವರಾದ ಶ್ರೀಮತಿ ಮಿತಿಲೇಶ ಗುಪ್ತಾ ರವರು  ನನಗೆ ತಿಳಿಸಿದ್ದೆನೆಂದರೆ, ಮನೆಯಲ್ಲಿನ .ಟಿ.ಎಮ್ ಕಾರ್ಡ ಕಾಣುತ್ತಿಲ್ಲಾ ಅಂತಾ ತಿಳಿಸಿ ಓರಿಯಂಟಲ್ಬ್ಯಾಂಕ ಆಫ್ಕಾಮರ್ಸ ಅಕೌಂಟ ನಂ.09172011006836 ಇದ್ದು ಈ ಎ.ಟಿ.ಎಮ್ ಕಾರ್ಡನಿಂದ ನನಗೆ ಗೊತ್ತಿಲ್ಲದೆ ಒಟ್ಟು ಹಣ 40,000/-ರೂಗಳು ಡ್ರಾ ಆಗಿರುತ್ತವೆ ಅಂತಾ ತಿಳಿಸಿದ್ದು ನಂತರ ನಾನು ಬ್ಯಾಂಕಿಗೆ ಹೋಗಿ ವಿಚಾರಣೆ ಮಾಡಿದಾಗ ಸಿಟಿ ಬ್ಯಾಂಕ .ಟಿ.ಎಮ್ ವಸಂತ ನಗರ ಬೆಂಗಳೂರಿನಿಂದ ಡ್ರಾ ಆಗಿರುತ್ತವೆ ಎಂದು ಗೊತ್ತಾಗಿರುತ್ತದೆ. ಹಿಂದೆ ಆರ್.ಸಿ ಸಾಹೇಬರು ಬೆಂಗಳೂರಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಅವರ ಮನೆಯಲ್ಲಿ ಕೆಲಸ ಮಾಡುವ ಉತ್ತಮ ಎಂಬುವವನು 15 ದಿನಗಳ ಹಿಂದೆ ಆರ್.ಸಿ ಸಾಹೇಬರ ಮನೆಯಲ್ಲಿ ಕೆಲಸ ಮಾಡುವ ಸಲುವಾಗಿ ಬಂದಿದ್ದು  ಅವನು ದಿನಾಂಕ 05/11/2017 ರಂದು ಸಂಜೆ 6:00 ಗಂಟೆ ಸುಮಾರಿಗೆ ಮನೆಯಿಂದ ಬೆಂಗಳೂರಿಗೆ ಹೋಗಿದ್ದು ಆತನು ಮನೆಯಿಂದ ಹೋಗುವಾಗ ಮನೆಯಲ್ಲಿನ .ಟಿ.ಎಮ್ ಕಾರ್ಡ ಕಳ್ಳತನ ಮಾಡಿಕೊಂಡು ಹೋಗಿ ಹಣ ಡ್ರಾ ಮಾಡಿಕೊಂಡಿರಬಹುದು ಅಂತಾ ಆರ್.ಸಿ ಸಾಹೇಬರ ತಾಯಿಯವರು ಸಂಶಯ ವ್ಯಕ್ತ ಪಡಿಸಿರುತ್ತಾರೆ. ಕಾರಣ ಆರ್.ಸಿ ಸಾಹೇಬರ ಮನೆಯಿಂದ ಎ.ಟಿ.ಎಮ್. ಕಾರ್ಡ ಕಳ್ಳತನ ಮಾಡಿಕೊಂಡು ಹೋಗಿ 40,000/- ರೂ ಡ್ರಾ ಮಾಡಿದವನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪ ತಂದೆ ಲಕ್ಕಪ್ಪ ಹಣಜಿ ಸಾ||ಅಳ್ಳಗಿ(ಬಿ) ತಾ||ಅಫಜಲಪೂರ ರವರ ಮಗ ದಿನಾಂಕ 09/11/2017 ರಂದು ಬೆಳಿಗ್ಗೆ ಎಂದಿನಂತೆ 09.00 ಗಂಟೆ ಸುಮಾರಿಗೆ ನನ್ನ ಮಗನು ಗೌಂಡಿ ಕೆಲಸಕ್ಕೆ ಮಾಶಾಳ ಗ್ರಾಮಕ್ಕೆ ಹೋಗುತ್ತೇನೆ ಅಂತ ಹೇಳಿ ನಮ್ಮ ಮೋಟಾರ ಸೈಕಲ್ ನಂ ಕೆಎ-32 ಇಎ-5056 ನೇದ್ದನ್ನು ತಗೆದುಕೊಂಡು ಮನೆಯಿಂದ ಹೋಗಿದ್ದು   07.00 ಪಿಎಮ್ ಸುಮಾರಿಗೆ ನನಗೆ ಪರಿಚಯಸ್ಥರಾದ ಮಾಶಾಳ ಗ್ರಾಮದ ಚಂದ್ರಮಾ ತಂದೆ ತುಕಾರಾಮ ಹವಳಗಾ ರವರು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಸಾಯಂಕಾಲ 6.30 ಗಂಟೆ ಸುಮಾರಿಗೆ ಕರಜಗಿ ಹಾಗು ಮಾಶಾಳ ಮದ್ಯೆ ಇರುವ ಸಾಯಿ ದಾಬಾ ಹತ್ತಿರ ಇದ್ದಾಗ .ಕರಜಗಿ ಕಡೆಯಿಂದ ಒಬ್ಬ ಲೂನಾ ಮೋಟಾರ ಸೈಕಲ್ ಸವಾರ ಹಾಗು ಮಾಶಾಳ ಕಡೆಯಿಂದ ಒಬ್ಬ ಮೋಟಾರ ಸೈಕಲ್ ಸವಾರ ಅತಿವೇಗ ಹಾಗು ನಿಸ್ಕಾಳಜಿತನದಿಂದ ತಮ್ಮ ಮೋಟಾರ ಸೈಕಲನ್ನು ಚಲಾಯಿಸಿ ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ರೋಡಿನ ಎಡಬಾಗಕ್ಕೆ ಬಿದ್ದರು ಆಗ ನಾನು ಹಾಗು ಅಲ್ಲೆ ದಾಬಾ ಹತ್ತಿರ ಇದ್ದ ಜನರು ಸ್ಥಳಕ್ಕೆ ಓಡಿ ಹೋಗಿ ನೋಡಲಾಗಿ ಮೋಟಾರ ಸೈಕಲ ನಂ ಕೆ-32 ಇಎ-5056 ನೇದ್ದರ ಸವಾರ ನಿಮ್ಮ ಮಗನಾದ ದತ್ತ ಇರುತ್ತಾನೆ ತಲೆಗೆ  ಭಾರಿ ಒಳಪೆಟ್ಟುಗಳಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಲೂನಾ ಮೋಟಾರ್ ಸೈಕಲ್ ಸವಾರ ಕರಜಗಿ ಗ್ರಾಮದ ಇಸ್ಮಾಯಿಲ್ ಅತ್ತಾರ ಅಂತ ಇದ್ದು ಸದರಿಯವನಿಗೆ ತಲೆಗೆ ಕಾಲಿಗೆ ಹಾಗು ಮೈ ಕೈಗಳಿಗೆ ಭಾರಿ ಸಾದಾರಕ್ತಗಾಯಗಳಾಗಿರುತ್ತವೆ ಅಂತ ತಿಳಿಸಿದನು. ನಂತರ ನಾನು ಈ ವಿಷಯವನ್ನು  ನಮ್ಮ ಗ್ರಾಮದ ರವಿ ತಂದೆ ಮಾಣಿಕ ದುದ್ದಣಗಿ, ಮಲ್ಲಪ್ಪ ತಂದೆ ಭೀಮಶ್ಯಾ ಬಂಕದ, ಬಾಬುಗೌಡ ತಂದೆ ರುದ್ರಗೌಡ ಪಾಟೀಲ ತಿಳಿಸಿ ಎಲ್ಲರು ಕೂಡಿಕೊಂಡು ಸಾಯಿ ದಾಬಾ ಹತ್ತಿರ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಮಾಶಾಳಯಿಂದ ಕರಜಗಿ ಕಡೆ ಬರುವ ರೋಡಿನ ಏಡಭಾಗದಲ್ಲಿ ನನ್ನ ಮಗ ಮೃತಪಟ್ಟು ಬಿದ್ದಿದ್ದು, ಆತನ ಎಡಕಾಲಿಗೆ ರಕ್ತಗಾಯ ಮತ್ತು ತಲೆಗೆ  ಭಾರಿ  ಒಳಪೆಟ್ಟುಗಳಾಗಿ  ಮೂಗಿನಿಂದ  ಮತ್ತು ಕಿವಿಯಿಂದ  ರಕ್ತ ಸೋರಿ ಮೃತ ಪಟ್ಟಿದ್ದು ಇರುತ್ತದೆ. ಲಾನಾ ಮೋಟಾರ್ ಸೈಕಲ್ ಸವಾರ ಇಸ್ಮಾಯಿಲ್ ಇತನಿಗೆ ತಲೆಗೆ ಕೈ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ನಂತರ ಅಲ್ಲೆ ಇದ್ದ ಜನರು ಇಸ್ಮಾಯಿಲನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆ ಕರೆದುಕೊಂಡು ಹೋದರು ಲೂನಾ ಮೋಟಾರ ಸೈಕಲ್ ಸವಾರ ಇಸ್ಮಾಯಿಲ್ ಹಾಗು ನನ್ನ ಮಗ ದತ್ತ ಇಬ್ಬರು ಒಬ್ಬರಿಗೊಬ್ಬರು ಅತಿವೇಗ ಹಾಗು ನಿಸ್ಕಾಳಜಿತನದಿಂದ ಮೋಟಾರ್ ಸೈಕಲನ್ನು  ಚಲಾಯಿಸಿ ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ಇಸ್ಮಾಯಿಲ್ ನ್ನು ಗಂಬೀರ ಗಾಯ ಹೊಂದಿದ್ದು ನನ್ನ ಮಗನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಸದರಿ ಘಟನೆಯ ಬಗ್ಗೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗೋವಿಂದ ತಂದೆ ಗೇಮು ಚವ್ಹಾಣ ಸಾ : ವಾಡಿ ತಾ:ಚಿತ್ತಾಪುರ ಜಿ:ಕಲಬುರಗಿ ಸದ್ಯ ಸಂತೋಷ ಕಾಲೋನಿ ನ್ಯೂ ಜೇವರ್ಗಿ ರೋಡ ಕಲಬುರಗಿ ಇವರು ದಿನಾಂಕ:- 17-10-2017 ರಂದು ನನಗೆ ಮತ್ತು ಬಸ್ ನಿರ್ವಾಹಕ ಯಶ್ವಂತ ಟಿ.ಸಿ ನಂ 1412 ಇಬ್ಬರಿಗೆ ಬಸ್ ನಂ ಕೆಎ-32 ಎಪ್-2140 ನೇದ್ದು ಕಲಬರಗಿ-ಪೂನಾ ಮಾರ್ಗ ಸಂಖ್ಯೆ 5-6-5 ನೇದ್ದರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಸದರಿ ಬಸ್ಸಿನಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಹೊರಟಾಗ ನಮ್ಮ ಬಸ ಆಳಂದ ಚೆಕ್ಕ ಪೊಸ್ಟ ಬಿಟ್ಟು ಹೋಗುತ್ತಿರುವ ಆ ಸಮಯದಲ್ಲಿ  ಮಂಜೂರ ಪಟೇಲ್ ತಂದೆ ಖಾಸಿಂ ಪಟೇಲ್ ಚಾಲಕ ಕಂ. ನಿರ್ವಾಹಕ ಬಸ ಡಿಪೊ ನಂ 03  ಕಲಬುರಗಿ ಮತ್ತು ಇತರೇ 03 ಜನರು ಬಸ್ಸಿನ ಬೈನಟ್ಟಿ  ಸೈಡ ಗ್ಲಾಸ ಕಾಣದಂತೆ ಕುಳಿತುಕೊಂಡರು ಆಗ ನಾನು ಬಸ್ಸನ್ನು ಚಾಲು ಮಾಡಿಕೊಂಡು ಹೊರಟೇನು ಸಂಜೆ 07:30 ಗಂಟೆ ಸುಮಾರಿಗೆ ಆಳಂದ ರೋಡಿಗೆ ಇರುವ ಓವರ್ ಬ್ರಿಜನ ಮೇಲೆ ಬಸ್ಸು ಹೋಗುತ್ತಿದಂತೆ ನಾನು ಬೈನಟ್ಟ ಮೇಲೆ ಕುಳಿತುಕೊಂಡಿದ್ದ ಮಂಜೂರ ಪಟೇಲ್ ಇತನಿಗೆ ಸೈಡ್ ಗ್ಲಾಸ ಕಾಣುತ್ತಿಲ್ಲಾ ಸ್ವಲ್ಪ ಸರಿದು ಕುಳಿತುಕೊಳ್ಳಿ ಅಂತಾ ಅಂದಾಗ ಆಗ ಮಂಜೂರ ಪಟೇಲ್ ಇತನು ನನಗೆ ಆಚೆ ಸರಿ ಎಂದು ಹೇಳುತ್ತಿಯಾ ಮಗನೇ ನಾನು ಘಟಕ ನಂ 03 ರಲ್ಲಿ ಬಸ್ ಚಾಲಕನಿರುತ್ತೇನೆ ಅಂತಾ ಅಂದಾಗ ಆಗ ನೀವು ಬಸ್ ಚಾಲಕರಿರಬಹುದು ಆದರೇ ನನಗೆ ಸೈಡ್ ಗ್ಲಾಸ್ ಕಾಣುತ್ತಿಲ್ಲಾ ನೀವು ಬಸ್ ಚಾಲಕರಿರುತ್ತಿರಿ ಸೈಡ್ ಗ್ಲಾಸ್ ಕಾಣದೇ ಇದ್ದರೇ ಬಸ ಹೇಗೆ ಚಾಲನೆ ಮಾಡಿಬೇಕು ನೀವೇ ಹೇಳಿ ಅಂತಾ ಅಂದಾಗ ಆಗ ಮಂಜೂರ ಪಟೇಲ್ ಇತನು ಏ ಲಂಬಾಣಿ ಸೂಳೇ ಮಗನೇ ನಾನು ಯಾರು ಏನು ಅಂತಾ ನಿನಗೆ ಗೊತ್ತಿಲ್ಲಾ ನಿನಗೆ ಈಗಲೇ ಏನು ಮಾಡುತ್ತೇನೆ ನೋಡು ಎಂದು ಅವಾಚ್ಯವಾಗಿ ಬೈಯ್ದು ಬಸ್ಸು ನಡೆಸುತ್ತಿದ್ದ ಸ್ಟೇರಿಂಗ ಹಿಡಿದಾಗ ಆಗ ನಾನು ಬಸ್ಸು ಸೈಡಿಗೆ ನಿಲ್ಲಿಸಿದಾಗ ಆಗ ಮಂಜೂರ ಪಟೇಲ್ ಇತನು ಕೈಯಿಂದ ಎಡ ಕಪಾಳದ ಮೇಲೆ ಹೊಡೆದು ನಂತರ ಚಪ್ಪಲಿಯಿಂದ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಬಗ್ಗಿಸಿ ಬೆನ್ನಿನ ಮೇಲೆ ಒಂದೇ ಸವನೇ ಹೊಡೆಯುತ್ತಿದ್ದಾಗ ಆಗ ಬಸ್ ನಿರ್ವಾಹಕ ಯಶ್ವಂತ ಮತ್ತು ಇತರೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಂದು ನನಗೆ ಹೊಡೆವುದನ್ನು ಬೀಡಿಸಿಕೊಂಡು ಮಂಜೂರ ಪಟೇಲ್ ಇತನಿಗೆ ಹಿಡಿವಷ್ಟರಲ್ಲಿ ಆತನು ಅಲ್ಲಿಂದ ಹೋಲದಲ್ಲಿ ಓಡಿ ಹೋದನು. ನನಗೆ ಹೊಡೆವುದನ್ನು ಬೀಡಿಸಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರ ಹೆಸರು ಮತ್ತು ವಿಳಾಸ ಗೊತ್ತಿಲ್ಲಾ ನೋಡಿದರೇ ಗುರ್ತಿಸುತ್ತೇನೆ. ನಂತರ ನಾನು ಅದೇ ನೋವಿನಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಆಳಂದವರೆಗೆ ಒಯ್ದು ಅವರನ್ನು ಆಳಂದದಲ್ಲಿ ಬಿಟ್ಟು ನಮ್ಮ ಮೇಲಾಧಿಕಾರಿಗಳಿಗೆ ಈ ವಿಷಯ ತಿಳಿಸಿ ಮರಳಿ ಕಲಬುರಗಿ ಬಂದಿರುತ್ತೇನೆ. ನಂತರ ಮರು ದಿವಸ ದಿನಾಂಕ:-18/10/2017 ರಂದು ನನಗೆ ಬಹಳ ನೋವು ಆಗುತ್ತಿದ್ದರಿಂದ್ದ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಹೊರ ರೋಗಿ ಅಂತಾ ಉಪಚಾರ ಪಡೆಕೊಂಡಿರುತ್ತೇನೆ.ನಾನು ಮತ್ತು ಮಂಜೂರ ಅಲಿ ಒಂದೇ ಇಲಾಖೆ ಇದ್ದು ಕೆಲಸ ಮಾಡುತ್ತಿದ್ದರಿಂದ್ದ ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ ವಿಚಾರಣೆ ಮಾಡಿ ಇಂದು ಪೊಲೀಸ ಠಾಣೆಗೆ ದೂರು ದಾಖಲಿಸಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

09 November 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-11-2017 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ  ಜೆ.ಹೆಚ್.ಇನಾಮದಾರ ಸಿಪಿಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಲ್ಲಿಕಾರ್ಜುನ ಚೌಕದಿಂದ ಸ್ವಲ್ಪದೂರು ನಿಂತು ಮರೆಯಾಗಿ ನೋಡಲು ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಟ್ಟು, ಮಟಕಾ ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಧರೇಪ್ಪ ತಂದೆ ಮಳೇಪ್ಪ ಡಾಂಗೆ ಸಾ||ಮಲ್ಲಿಕಾರ್ಜುನ ಚೌಕ ಹತ್ತಿರ ಅಫಜಲಪೂರ ಎಂದು ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3500/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 08-11-2017 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಲ್ಲಿಕಾರ್ಜುನ ಚೌಕ ದಿಂದ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಮಲ್ಲಿಕಾರ್ಜುಜನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲನಾಥ ತಂದೆ ಬಸವರಾಜ ಬಾಳಗಿ ಸಾ||ನಾಗಣಸೂರ ಹಾ||||ಮಲ್ಲಿಕಾರ್ಜುನ ಚೌಕ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2500/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 08-11-2017 ರಂದು ಸಾಯಂಕಾಲ 6;15 ಪಿ.ಎಂ ಸುಮಾರಿಗೆ ನಮ್ಮ ತಮ್ಮಂದಿರಾದ ಶಿವಣ್ಣ ಮತ್ತು ವಿಶ್ವನಾಥ ರವರು ನಮ್ಮೂರ ಬಸವರಾಜ ರಬಗೊಂಡ ರವರ ಮೋಟರ ಸೈಕಲ್ ನಂ ಕೆ.ಎ-32/ಇ.ಡಿ-7564 ನೇದ್ದನ್ನು ತೆಗೆದುಕೊಂಡು ತೊಗರಿಗೆ ಹೊಡೆಯು ಎಣ್ಣೆ ತರಲು ಯಡ್ರಾಮಿ ಗ್ರಾಮಕ್ಕೆ ಹೋಗಿದ್ದು ಇರುತ್ತದೆ, ಮೋಟರ ಸೈಕಲನ್ನು ನಮ್ಮ ತಮ್ಮ ವಿಶ್ವನಾಥ ಈತನು ನಡೆಸುತ್ತಿದ್ದನು, ನಂತರ 6;45 ಪಿ.ಎಂ ಸುಮಾರಿಗೆ ನಮ್ಮೂರ ಸಿದ್ದಪ್ಪ ತಂದೆ ಶರಣಪ್ಪ ಜಕ್ಕೊಂಡ ರವರು ನನಗೆ ಫೋನ ಮಾಡಿ ಹೇಳಿದ್ದೆನೆಂದರೆ, ಇದೀಗ 6;30 ಪಿ.ಎಂ ಸುಮಾರಿಗೆ ನಾನು ಮತ್ತು ನಮ್ಮೂರ ಶಂಕರಗೌಡ ನಾಗಾವಿ ರವರು ಕೂಡಿ ನಮ್ಮ ಮೋಟರ ಸೈಕಲ್ ಮೇಲೆ ಯಡ್ರಾಮಿ ಗ್ರಾಮಕ್ಕೆ ಹೋಗುತ್ತಿದ್ದಾಗ ನಮ್ಮ ಮುಂದೆ ನಿಮ್ಮ ತಮ್ಮಂದಿರಾದ ಶಿವಣ್ಣ ಮತ್ತು ವಿಶ್ವನಾಥ ರವರು ಸಹ ಮೋಟರ ಸೈಕಲ್ ಮೇಲೆ ಯಡ್ರಾಮಿ ಗ್ರಾಮಕ್ಕೆ ಹೋಗುತ್ತಿದ್ದರು, ನನ್ನ ಹಿಂದಿನಿಂದ ಒಂದು ಲಾರಿ ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಒಮ್ಮೇಲೆ ನನಗೆ ಸೈಡ ಹೊಡೆದು ಹೋಗಿ, ಮುಂದೆ ಶಾಂತಪ್ಪ ವನಗುಂಟಿ ರವರ ಹೊಲದ ಹತ್ತಿರ ಹೋಗುತ್ತಿದ್ದ ನಿಮ್ಮ ತಮ್ಮಂದಿರ ಮೋಟರ ಸೈಕಲಗೆ ಹಿಂದಿನಿಂದ ಒಮ್ಮೇಲೆ ಡಿಕ್ಕಿ ಹೊಡೆದು ಅವರ ಮೇಲೆ ಹಾಯಿಸಿ ತನ್ನ ಲಾರಿಯನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ಅಲ್ಲೆ ಸ್ಥಳದಲ್ಲೆ ನಿಲ್ಲಿಸಿ ಅದರ ಚಾಲಕನು ಓಡಿ ಹೋದನು, ನಂತರ ನಿಮ್ಮ ತಮ್ಮಂದಿರರಿಗೆ ನೋಡಲಾಗಿ ಶಿವಣ್ಣನ ತಲೆಯ ಮೇಲೆ ಲಾರಿ ಹಾಯಿದು ತಲೆ ಸಂಪೂರ್ಣವಾಗಿ ಒಡೆದಿದ್ದರಿಂದ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ, ವಿಶ್ವನಾಥ ಈತನಿಗೆ ನೋಡಲಾಗಿ ಅವನ ಕಿಬ್ಬೊಟ್ಟೆಯ ಮೇಲೆ ತೊಡೆಯ ಮೇಲೆ ಹಾಯಿದಿದ್ದು, ಇನ್ನು ಜೀವಂತವಾಗಿರುತ್ತಾನೆ ಬೇಗ ಬನ್ನಿ ಅಂತಾ ಅಂದಾಗ ನಾನು ಮತ್ತು ನಮ್ಮೂರ ಬಸವಲಿಂಗಯ್ಯ ತಂದೆ ಬಸಯ್ಯಾ ಮಠ, ಶರಣಗೌಡ ತಂದೆ ಸಾಯಬಣ್ಣಗೌಡ ಬಿರಾದಾರ, ಬಸವರಾಜ ತಂದೆ ಮಲ್ಲಿಕಾರ್ಜುನ ಬಿರಾದಾರ ಹಾಗು ಇತರೆ ಗ್ರಾಮಸ್ತರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮ ಶಿವಣ್ಣ ಈತನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದನು, ವಿಶ್ವನಾಥ ಇತನು ಜೀವಂತವಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ನಂತರ 108 ಅಂಬೂಲೆನ್ಸ ಕರೆಯಿಸಿ ಅದರಲ್ಲಿ ನಮ್ಮ ತಮ್ಮ ವಿಶ್ವನಾಥನಿಗೆ ಹಾಕಿ ಉಪಚಾರ ಕುರಿತು ಸಿದ್ದಪ್ಪ ತಂದೆ ಶರಣಪ್ಪ ಜಕ್ಕೊಂಡ, ಶಂಕರಗೌಡ ನಾಗಾವಿ ರವರೊಂದಿಗೆ ಕಲಬುರಗಿ ಅಸ್ಪತ್ರೆಗೆ ಕಳುಹಿಸಿಕೊಟ್ಟೆನು, ಮಾರ್ಗ ಮದ್ಯದಲ್ಲಿ ಜೇವರ್ಗಿ ಸಮೀಪ 8;00 ಗಂಟೆ ಸುಮಾರಿಗೆ ನಮ್ಮ ತಮ್ಮ ವಿಶ್ವನಾಥ ಈತನು ಮೃತ ಪಟ್ಟಿರುತ್ತಾನೆ. ನಂತರ ವಿಶ್ವನಾಥ ಈತನ ಮೃತ ದೇಹವು ಮರಳಿ ಘಟನಾ ಸ್ಥಳಕ್ಕೆ ತಂದಿದ್ದು ಇರುತ್ತದೆ, ಅಪಘಾತ ಪಡಿಸಿದ ಲಾರಿ ನೋಡಲಾಗಿ ಅದರ ನಂ ಕೆ.ಎ-02/ಡಿ-5234 ನೇದ್ದು ಇರುತ್ತದೆ. ಅಂತಾ ಶ್ರೀ ಮಹಾಂತಗೌಡ ತಂದೆ ರೇವಣಸಿದ್ದಪ್ಪ ಬಿಲ್ಲಾಡ ಸಾ|| ಕುಕ್ಕನೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 07/11/2017 ರಂದು ರಾತ್ರಿ 8.00 ಗಂಟೆ ಸುಮಾರಿಗೆ ನಾಣು ಹಾಗು ನಮ್ಮ ಓಣಿಯ ಶರಣಪ್ಪ ಪಾಠೋಳಿ, ಖಾಜಪ್ಪ ಪಾಠೋಳಿ, ಸಿದ್ದರಾಮ ಹಳ್ಯಾಳ ಮಾತನಾಡುತ್ತಾ ಕುಳಿತಿದ್ದಾಗ ಪರಶುರಾಮ ಇತನು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ರಂಡಿ ಈ ಮೆನೆ ನನಗೆ ಸೇರಬೇಕು ಅಂತ ಬೈದಾಡುತ್ತಾ ನನ್ನ ಮೈ ಮೇಲೆ ಹೊಡೆಯಲು ಬರುತಿದ್ದಾಗ ಅಲ್ಲೆ ಇದ್ದ ಶರಣಪ್ಪ, ಖಾಜಪ್ಪ, ಸಿದ್ದರಾಮ ರವರು ಸದರಿಯವನಿಗೆ ಹಿಡಿದು ಬುದ್ದಿ ಹೇಳಿ ಕಳುಯಿಸಿದ್ದು ಪರಶುರಾಮ ಇತನು ತನ್ನ ಮನೆಯೊಳಗೆ ಹೋಗಿ 5 ಲೀಟರ ಸೀಮೆಎಣ್ಣೆ ಡಬ್ಬಿ ತಗೆದುಕೊಂಡು ಸಿದಾ ನನ್ನ ಹತ್ತಿರ ಬಂದು ನನ್ನ ಮೈ ಮೇಲೆ ಹಾಕಿ ಒಮ್ಮೆಲೆ ಬೆಂಕಿ ಹಚ್ಚಿದ ನಾನು ಚಿರಾಡುತಿದ್ದಾಗ ಶರಣಪ್ಪ, ಖಾಜಪ್ಪ, ಸಿದ್ದರಾಮ ಇವರು ನನಗೆ ತಗುಲಿದ ಬೆಂಕಿಯನ್ನು ನಂದಿಸಿ ಒಂದು ಖಾಸಗಿ ವಾಹನದಲ್ಲಿ ನನಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಪರಶುರಾಮ ಈತನು ನನ್ನ ಮೈಗೆ ಹಚ್ಚಿದ ಬೆಂಕಿಯಿಂದ ನನ್ನ ಮುಖ, ಏರಡುಕೈ, ಬೆನ್ನು ಹೊಟ್ಟೆ, ಎದೆ, ಏರಡು ತೋಡೆ ಕಾಲುಗಳು ಸುಟ್ಟ ಗಾಯದಿಂದ ಮೇಲಿನ ತೊಗಲು ಹೋಗಿ ಬೆಳ್ಳಗಾಗಿರುತ್ತವೆ. ಪರಶುರಾಮ ತಾಯಿ ಚನ್ನಮ್ಮಾ ಪಾಠೋಳಿ ಈತನು ನನ್ನ ಹೆಸರಿಗೆ ಇದ್ದ ಮನೆ ಹಾಗು ಜಾಗ ತನ್ನ ಹೆಸರಿಗೆ ಮಾಡು ಅಂತ ನನ್ನ ಸಂಗಡ ಜಗಳ ಮಾಡುತ್ತಾ ಬಂದು ನಿನ್ನೆ ನಮ್ಮ ಮನೆಯ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ನನ್ನ ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಪೆಟ್ಟಿಗೆಯಿಂದ ಕಡ್ಡಿ ಕೊರೆದು ಬೆಂಕಿ ಹಚ್ಚಿ ನನಗೆ ಗಂಭೀರ ಗಾಯ ಮಾಡಿದವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಶ್ರೀಮತಿ ರೇಣುಕಾ ತಂದೆ ಮಲ್ಕಪ್ಪಾ ಪಟೊಲಿ ಸಾ ಮಾಶ್ಯಾಳ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಸಂದೀಪ ತಂದೆ ಸಿದ್ರಾಮ ಕಟ್ಟಿಮನಿ ಸಾ: ಮನೆ ನಂ. 26/48 ಗಣೇಶ ಮಂದಿರ ಹತ್ತಿರ ಶಹಾಪೂರ ಓಣಿ ಬಸವಕಲ್ಯಾಣ ಜಿ: ಬೀದರ ರವರು ದಿನಾಂಕ. 07/11/2017 ರಂದು 5-00 ಪಿ.ಎಂ ಸುಮಾರಿಗೆ ನಾನು ನನ್ನ ಹೊಂಡಾ ಎಕ್ಟಿವ್ ಮೋಟಾರ ಸೈಕಲ್ ನಂ. KA-32 EJ- 4366 ಚೆಸ್ಸಿನಂ. ME4JF504DFT295597, .ನಂ. JF50ET2296509 ,ಕಿ|| 35,000/- ರೂ ನೇದ್ದು ಐ-ವಾನ-ಶಾಹಿ ಏರಿಯಾದಲ್ಲಿರುವ ಎಚ್.ಕೆ.ಇ ಪಾಲಿಟೆಕ್ನಿಕ್ ಕಾಲೇಜ ಎದುರುಗಡೆ ಆವರಣದಲ್ಲಿ ನಿಲ್ಲಿಸಿ ಕಾಲೇಜದಲ್ಲಿ ಹೋಗಿ ಕೆಲಸ ಮುಗಿಸಿಕೊಂಡು 5-30 ಪಿ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹೊಂಡಾ ಎಕ್ಟಿವ್ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹೊಂಡಾ ಎಕ್ಟಿವ್ ಮೋಟಾರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 November 2017

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ಪ್ರಕರಣಗಳು :
ಮಾಹಾಗಾಂವ ಠಾಣೆ :ಶ್ರೀ ವಿಶ್ವಾಸ ತಂದೆ ಮಧುಕರ ಸಿಂದೆ ಸಾ: ಶ್ರೀನಿವಾಸ ಸರಡಗಿ ತಾ:ಜಿ: ಕಲಬುರಗಿ ಹಾ|||| ಹಡಪಸರ್ ಪುನೆ ರವರ ಮಗಳಾದ ಮಾಧುರಿ ಇವಳಿಗೆ ಹರಸೂರ ಗ್ರಾಮದ ನಾಗೇಶ ಬೋರೆ ಎಂಬುವವರ ಮಗನಾದ ಕೃಷ್ಣ ಇತನಿಗೆ ಕೊಟ್ಟು 4 ತಿಂಗಳ ಹಿಂದ ಮದುವೆ ಮಾಡಿದ್ದು ಇರುತ್ತದೆ ನನ್ನ ಮಗಳಿಗೆ 2 ತಿಂಗಳು ಚನ್ನಾಗಿ ನೋಡಿಕೊಂಡು ಎರಡು ತಿಂಗಳ ನಂತರ ನನ್ನ ಮಗಳ ಗಂಡ  ಕೃಷ್ಣ ಮತ್ತು ಅವಳ ಅತ್ತೆ ಸುನಿತಾಬಾಯಿ ಇವರು ನಿನು ಕರಿ ಮಾರಿಯಾಕಿ ಇದ್ದಿ ರಂಡಿ ನಿನಗೆ ಅಡಿಗೆ ಮಾಡಲು ಬರುವುದಿಲ್ಲಾ ನಿನು ನಿನ್ನ ತವರು ಮನೆಯಿಂದ ಇನ್ನು ತರಬೇಕಾದ ಬಂಗಾರ ತಂದಿರುವುದಿಲ್ಲಾ ಅಂತ ಕಿರುಕುಳ ಕೊಡುತ್ತಾ ಬಂದಿದಿದ್ದು ಇರುತ್ತದೆ ಅಂತ ನನ್ನ ಮಗಳು ಆಗಾಗ ನನಗೆ ಮತ್ತು ನಮ್ಮ ಸಂಭಂದಿಕರಿಗೆ ಫೋನಿನಲ್ಲಿ ಹೇಳುತ್ತಾ ಬಂದಿದ್ದು ದಿನಾಂಕ 07/11/2017 ರಂದು 04.30 ಎ.ಎಂ.ಕ್ಕೆ ನಾನು ನನ್ನ ಖಾಸಗಿ ಕೆಲಸ ವಿದ್ದಕಾರಣ ಬೀಡ್ (ಮಹಾರಾಷ್ಟ್ರ) ದಲ್ಲಿ ಇದ್ದಾಗ ನನ್ನ ಮಗಳ ಮಾವನಾದ ನಾಗೇಶ ಇತನು ನನಗೆ ಫೊನ್ ಮಾಡಿ ತಿಳಿಸಿದೆನೆಂದರೆ 04.00 ಎ.ಎಂ.ಕ್ಕೆ ನಿಮ್ಮ ಮಗಳು ಮೈ ಮೇಲೆ ಸೀಮೆ ಎಣ್ಣೆ ಹಾಕಿಕೊಂಡು ವೆಂಕಿ ಹಚಿಕೊಂಡಿರುತ್ತಾಳೆ ಅವಳಿಗೆ ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡುತ್ತಿದ್ದು ನಿವು ಕೂಡಾ ಅಲ್ಲಿಗೆ ಬರಿ ಅಂತ ತಿಳಿದ ಮೇರೆಗೆ ನಾನು ಖಾಸಗಿ ವಾಹನದಲ್ಲಿ ಕಲಬುರಗಿ ಬಸವೇಶ್ವರ ಆಸ್ಪತೆ ಕಲಬುರಗಿಗೆ ಬಂದು ನನ್ನ ಮಗಳಿಗೆ ನೊಡಲಾಗಿ ಅವಳ ಮುಖ ಎರಡು ಕೈಗಳು ಎದೆಯ ಭಾಗ ಕುತ್ತಿಗೆ ಹೊಟ್ಟೆ ಬೆನ್ನು ಎರಡು ಕಾಲುಗಳು ಬೆಂಕಿಯಿಂದ ಸುಟ್ಟಿದ್ದು ಇದರ ಬಗ್ಗೆ ನನ್ನ ಮಗಳಾದ ಮಾಧುರಿ ಇವಳಿಗೆ ವಿಚಾರಿಸಲಾಗಿ ಅವಳು ತಿಳಿಸಿದೆನೆಂದರೆ ನನ್ನ ಗಂಡ ಕೃಷ್ಣ ಮತ್ತು ಅತ್ತೆ ಸುನಿತಾಬಾಯಿ ಇವರು ನನಗೆ ಸುಮಾರು ದಿವಸಗಳಿಂದ ಕಿರುಕುಳ ಕೊಡುತ್ತಾ ಬಂದಿದ್ದು ನಿನು ರಂಡಿ ಕರಿ ಮುಖದವಳು ಇದ್ದಿ ನಿನಗೆ ಅಡಿಕೆ ಮಾಡಲು ಬರುವುದಿಲ್ಲಾ ನಿಮ್ಮ ತಂದೆ ಮದುವೆಯಲ್ಲಿ ಇನ್ನು ಕೊಡಬೇಕಾದ ಬಂಗಾರ ಇನ್ನು ಕೊಟ್ಟಿರುವುದಿಲ್ಲಾ ನಿಮ್ಮ ತವರು ಮನೆಯಿಂದ ಅಡಿಗೆ ಕಲಿತು ನಮ್ಮಗೆ ಕೊಡಬೇಕಾದ ಬಂಗಾರ ತೆಗೆದುಕೊಂಡು ಬಾ ರಂಡಿ ನಿನು ತರದಿದ್ದರೆ ನಿನಗೆ ಖಲಾಸ ಮಾಡುತ್ತೇವೆ ಅಂತ ದಿನಾಲು ನನಗೆ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ನಾನು ಬೆಸತ್ತು ಅವರು ನೀಡುವ ಕಿರುಕುಳ ತಾಪ ತಾಳಲಾರದೆ ನಾನೆ ಸತ್ತರೆ ಆಯಿತು ಅಂತ ನಮ್ಮ ಮನೆಯಲ್ಲಿ ಎಲ್ಲರು ಅಂದರೆ ನನ್ನ ಗಂಡ ಕೃಷ್ಣ ನಮ್ಮ ಅತ್ತೆ ಸುನಿತಾಬಾಯಿ ನಮ್ಮ ಮಾವ ನಾಗೇಶ ನಮ್ಮ ಮೈದುನ ತುಳಜಾರಾಮ ಇವರೆಲ್ಲರು ಮಲಗಿ ಕೊಂಡಾಗ ನಾನು ಮನೆಯಲ್ಲಿದ್ದ ಡಬ್ಬಯಲ್ಲಿರು ಸೀಮೆ ಎಣ್ಣೆ ಮೇಮೇಲೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡಿದ್ದು ಉರಿ ತಾಪ ತಾಳಲಾರದೆ ನಾನು ಚಿರಾಡುತ್ತಿರುವಾಗ ನಮ್ಮ ಮಾವ ನಾಗೇಶ ನಮ್ಮ ಮೈದುನ ತುಳಜಾರಾಮ ಇವರು ಬಂದು ನನಗೆ ಹತ್ತಿದ ಬೆಂಕಿ ನೊಡಿ ಆರಿಸುವ ಸಲುವಾಗಿ ಮೈ ಮೇಲೆ ನೀರು ಸುರುವಿದ್ದು ಬೆಂಕಿ ಆರಿತ್ತು ಮೇ ಮೇಲಿದ್ದ ಬಟ್ಟೆ ಸುಟ್ಟಿದ್ದು ನಿರು ಹಾಕಿದರಿಂದ ಮೈಯಾಲಾ ಬೊಬೆ ಬಂದಿದ್ದು ನಾನು ಚಿರಾಡುತ್ತಿರುವದರಿಂದ ನಮ್ಮ ಮಾವ ನಾಗೇಶ ಮೈದುನ ತುಳಜಾರಾಮ ನನ್ನ ಗಂಡ ಕೃಷ್ಣ ಮತ್ತು ಅತ್ತೆ ಸುನಿತಾಬಾಯಿ ಇವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಈ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ನಾನು ನನ್ನ ಗಂಡ ಕೃಷ್ಣ ಮತ್ತು ಅತ್ತೆ ಸುನಿತಾಬಾಯಿ ಇವರ ಕಿರುಕುಳ ತಾಪ ತಾಳಲಾರದೆ ಮೈ ಮೇಲೆ ಸೀಮೆ ಎಣ್ಣೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡಿರುತ್ತೇನೆ. ಅಂತ ಹೇಳಿ ಆ ಇಬ್ಬರ ಮೇಲೆ ಕ್ರಮ ಜರುಗಿಸ ಬೇಕು ಅಂತ ಹೇಳಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಬಸವರಾಜ @ ರವರಿ ಸಾ: ಶಾಂತ ನಗರ ಭಂಕೂರ ಇವರಿಗೆ ಶಾಂತ ನಗರ ಭಂಕೂರ ಬಸವರಾಜ ತಂದೆ ಅಪ್ಪಣ್ಣ ಮುಖರಂಬಿ ಇತನೊಂದಿಗೆ ದಿನಾಂಕ: 24/03/2014 ರಂದು ನಮ್ಮ ತಂದೆ ತಾಯಿ ಮದುವೆಯಲ್ಲಿ ನನ್ನ ಗಂಡನಿಗೆ 06 ತೊಲೆ ಬಂಗಾರ ಒಂದು ಲಕ್ಷ್ ನಗದು ಹಣ ಹಾಗೂ ಗೃಹ ಉಪಯೋಗಿ ವಸ್ತುಗಳು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ ಮದುವೆಯಾದ ಒಂದು ವರ್ಷದವಿರಗೆ ನನ್ನ ಗಂಡ ಬಸವರಾಜ ಅತ್ತೆ ಶರಣಮ್ಮ , ಮಾವ ಅಪ್ಪಣ , ಬಾವ ರಾಜು ಇವರೊಂದಿಗೆ ನನಗೆ ನೋಡಿಕೊಂಡಿರುತ್ತಾರೆ ನಂತರ ದಿನಗಳಲ್ಲಿ ನನಗೆ ನೀನು ಚನ್ನಾಗಿ ಇಲ್ಲ ನಮಗೆ ಸರಿಯಾಗಿ ನೋಡಿಕೊಳ್ಳುವುದಿಲ್ಲಾ ಅಂತಾ ತಕರಾರು ಮಾಡುತ್ತಾ ನನಗೆ ತವರು ಮನೆಗೆ ಕಳುಹಿಸಿದ್ದರು ಅದಕ್ಕೆ ನಮ್ಮ ತಂದೆ ತಾಯಿ ಹಾಗೂ ಹಿರಿಯವರು ದಿನಾಂಕ: 31/03/2017 ರಂದು ನನ್ನ ಸಂಗಡ ಗಂಡನ ಮನೆಗೆ ಬಂದು ಮನೆಯವರಿಗೆ ಬುದ್ದಿ ಮಾತು ಹೇಳಿ ನನ್ನ ಬೀಟ್ಟು ಹೋಗಿದ್ದರು ನಂತರ ನನಗೆ ನನ್ನ ಗಂಡ ಬಸವರಾದ  , ಅತ್ತೆ ಮಾವ , ಭಾವ ಇವರೆಲ್ಲಾರೂ ಕೂಡಿ ಮದುವೆ ಕಾಲಕ್ಕೆ  ಬಂಗಾವ ಮತ್ತು ವರದಕ್ಷಣೆ ಕಡಿಮೆ ಕೊಟ್ಟಿರುತ್ತಾರೆ  ನಿನ್ನ ಗಂಡ ಖಾಸಗಿ ಕಂಪನಿಯಲ್ಲೆ ನೌಕರ ಮಾಡಿಕೊಂಡಿದ್ದು ಬೇರೆ ಮದುವೆ ಮಾಡಿದರೆ ಹೆಚ್ಚಿಗೆ ಬಂಗಾರ ಮತ್ತು ಹಣ ಕೋಡುತ್ತಿದ್ದರು ಈ ನಿನ್ನ ಗಂಡನಿಗೆ ಹೋರ ದೇಶಕ್ಕೆ ಹೋಗುವನಿದ್ದಾನೆ ಅವನಿಗೆ 2 ಲಕ್ಷ್ ರೂ ಬೇಕಾಗಿರುತ್ತವೆ ಅದ್ದರಿಂದ ನಿನ್ನ ತವರು ಮನೆಯಿಂದ ತಂದು ಕೋಡು ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುವುದಲ್ಲದೆ ಮತ್ತು ನಿನಗೆ ಮಕ್ಕಳು ಆಗಿರುವುದಿಲ್ಲಾ ಬಂಜೆ ಇದ್ದಿ ಅಂತಾ ಅವಾಚ್ಯ ಬೈದು ಹೊಡೆ ಬಡೆ ಮಾಡುತ್ತಾ ಬಂದಿರುತ್ತಾರೆ. ಅದನ್ನು ಸಹಿಸಿಕೊಂಡುರುತ್ತೇನೆ. ಇಂದು ದಿನಾಂಕ: 06/11/2017 ರಂದು ಸಾಯಂಕಾಲ 6-00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡ , ಅತ್ತೆ ಮಾವ, ಭಾವ ಇವರೆಲ್ಲಾರೂ ಕೂಡಿ ನನಗೆ ಹೊರದೇಶದಕ್ಕೆ ಹೋಗಲು ಎರಡು ಲಕ್ಷ  ರೂ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಹೇಳಿದರೂ ಇನ್ನೂ ತಂದಿಲ್ಲಾ ಅಂತಾ ಜಗಳ ತೆಗೆದು ಅವಾಚ್ಯವಾಗಿ ಬೈದು ತಲೆಯ ಮೇಲೆನ ಕೂದಲು ಜಗ್ಗಾಡಿ ಕೈಯಿಂದ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ ಕಾರಣ ನನಗೆ ಉಪಚಾರ ಕುರಿತು ಆಸ್ಪತ್ತೆ ಕಳುಹಿಸಿ ಕೊಡಬೇಕು ಮತ್ತು ನನಗೆ ತಬರು ಮನೆಯಿಂದ ವರದಕ್ಷಿಣೆಯಾಗಿ 2 ಲಕ್ಷ್ ರೂ ತೆಗೆದುಕೊಂಡು ಬಾ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಾಲಿನಿಂದ ಹೊಡೆದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.