POLICE BHAVAN KALABURAGI

POLICE BHAVAN KALABURAGI

08 November 2017

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ಪ್ರಕರಣಗಳು :
ಮಾಹಾಗಾಂವ ಠಾಣೆ :ಶ್ರೀ ವಿಶ್ವಾಸ ತಂದೆ ಮಧುಕರ ಸಿಂದೆ ಸಾ: ಶ್ರೀನಿವಾಸ ಸರಡಗಿ ತಾ:ಜಿ: ಕಲಬುರಗಿ ಹಾ|||| ಹಡಪಸರ್ ಪುನೆ ರವರ ಮಗಳಾದ ಮಾಧುರಿ ಇವಳಿಗೆ ಹರಸೂರ ಗ್ರಾಮದ ನಾಗೇಶ ಬೋರೆ ಎಂಬುವವರ ಮಗನಾದ ಕೃಷ್ಣ ಇತನಿಗೆ ಕೊಟ್ಟು 4 ತಿಂಗಳ ಹಿಂದ ಮದುವೆ ಮಾಡಿದ್ದು ಇರುತ್ತದೆ ನನ್ನ ಮಗಳಿಗೆ 2 ತಿಂಗಳು ಚನ್ನಾಗಿ ನೋಡಿಕೊಂಡು ಎರಡು ತಿಂಗಳ ನಂತರ ನನ್ನ ಮಗಳ ಗಂಡ  ಕೃಷ್ಣ ಮತ್ತು ಅವಳ ಅತ್ತೆ ಸುನಿತಾಬಾಯಿ ಇವರು ನಿನು ಕರಿ ಮಾರಿಯಾಕಿ ಇದ್ದಿ ರಂಡಿ ನಿನಗೆ ಅಡಿಗೆ ಮಾಡಲು ಬರುವುದಿಲ್ಲಾ ನಿನು ನಿನ್ನ ತವರು ಮನೆಯಿಂದ ಇನ್ನು ತರಬೇಕಾದ ಬಂಗಾರ ತಂದಿರುವುದಿಲ್ಲಾ ಅಂತ ಕಿರುಕುಳ ಕೊಡುತ್ತಾ ಬಂದಿದಿದ್ದು ಇರುತ್ತದೆ ಅಂತ ನನ್ನ ಮಗಳು ಆಗಾಗ ನನಗೆ ಮತ್ತು ನಮ್ಮ ಸಂಭಂದಿಕರಿಗೆ ಫೋನಿನಲ್ಲಿ ಹೇಳುತ್ತಾ ಬಂದಿದ್ದು ದಿನಾಂಕ 07/11/2017 ರಂದು 04.30 ಎ.ಎಂ.ಕ್ಕೆ ನಾನು ನನ್ನ ಖಾಸಗಿ ಕೆಲಸ ವಿದ್ದಕಾರಣ ಬೀಡ್ (ಮಹಾರಾಷ್ಟ್ರ) ದಲ್ಲಿ ಇದ್ದಾಗ ನನ್ನ ಮಗಳ ಮಾವನಾದ ನಾಗೇಶ ಇತನು ನನಗೆ ಫೊನ್ ಮಾಡಿ ತಿಳಿಸಿದೆನೆಂದರೆ 04.00 ಎ.ಎಂ.ಕ್ಕೆ ನಿಮ್ಮ ಮಗಳು ಮೈ ಮೇಲೆ ಸೀಮೆ ಎಣ್ಣೆ ಹಾಕಿಕೊಂಡು ವೆಂಕಿ ಹಚಿಕೊಂಡಿರುತ್ತಾಳೆ ಅವಳಿಗೆ ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡುತ್ತಿದ್ದು ನಿವು ಕೂಡಾ ಅಲ್ಲಿಗೆ ಬರಿ ಅಂತ ತಿಳಿದ ಮೇರೆಗೆ ನಾನು ಖಾಸಗಿ ವಾಹನದಲ್ಲಿ ಕಲಬುರಗಿ ಬಸವೇಶ್ವರ ಆಸ್ಪತೆ ಕಲಬುರಗಿಗೆ ಬಂದು ನನ್ನ ಮಗಳಿಗೆ ನೊಡಲಾಗಿ ಅವಳ ಮುಖ ಎರಡು ಕೈಗಳು ಎದೆಯ ಭಾಗ ಕುತ್ತಿಗೆ ಹೊಟ್ಟೆ ಬೆನ್ನು ಎರಡು ಕಾಲುಗಳು ಬೆಂಕಿಯಿಂದ ಸುಟ್ಟಿದ್ದು ಇದರ ಬಗ್ಗೆ ನನ್ನ ಮಗಳಾದ ಮಾಧುರಿ ಇವಳಿಗೆ ವಿಚಾರಿಸಲಾಗಿ ಅವಳು ತಿಳಿಸಿದೆನೆಂದರೆ ನನ್ನ ಗಂಡ ಕೃಷ್ಣ ಮತ್ತು ಅತ್ತೆ ಸುನಿತಾಬಾಯಿ ಇವರು ನನಗೆ ಸುಮಾರು ದಿವಸಗಳಿಂದ ಕಿರುಕುಳ ಕೊಡುತ್ತಾ ಬಂದಿದ್ದು ನಿನು ರಂಡಿ ಕರಿ ಮುಖದವಳು ಇದ್ದಿ ನಿನಗೆ ಅಡಿಕೆ ಮಾಡಲು ಬರುವುದಿಲ್ಲಾ ನಿಮ್ಮ ತಂದೆ ಮದುವೆಯಲ್ಲಿ ಇನ್ನು ಕೊಡಬೇಕಾದ ಬಂಗಾರ ಇನ್ನು ಕೊಟ್ಟಿರುವುದಿಲ್ಲಾ ನಿಮ್ಮ ತವರು ಮನೆಯಿಂದ ಅಡಿಗೆ ಕಲಿತು ನಮ್ಮಗೆ ಕೊಡಬೇಕಾದ ಬಂಗಾರ ತೆಗೆದುಕೊಂಡು ಬಾ ರಂಡಿ ನಿನು ತರದಿದ್ದರೆ ನಿನಗೆ ಖಲಾಸ ಮಾಡುತ್ತೇವೆ ಅಂತ ದಿನಾಲು ನನಗೆ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ನಾನು ಬೆಸತ್ತು ಅವರು ನೀಡುವ ಕಿರುಕುಳ ತಾಪ ತಾಳಲಾರದೆ ನಾನೆ ಸತ್ತರೆ ಆಯಿತು ಅಂತ ನಮ್ಮ ಮನೆಯಲ್ಲಿ ಎಲ್ಲರು ಅಂದರೆ ನನ್ನ ಗಂಡ ಕೃಷ್ಣ ನಮ್ಮ ಅತ್ತೆ ಸುನಿತಾಬಾಯಿ ನಮ್ಮ ಮಾವ ನಾಗೇಶ ನಮ್ಮ ಮೈದುನ ತುಳಜಾರಾಮ ಇವರೆಲ್ಲರು ಮಲಗಿ ಕೊಂಡಾಗ ನಾನು ಮನೆಯಲ್ಲಿದ್ದ ಡಬ್ಬಯಲ್ಲಿರು ಸೀಮೆ ಎಣ್ಣೆ ಮೇಮೇಲೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡಿದ್ದು ಉರಿ ತಾಪ ತಾಳಲಾರದೆ ನಾನು ಚಿರಾಡುತ್ತಿರುವಾಗ ನಮ್ಮ ಮಾವ ನಾಗೇಶ ನಮ್ಮ ಮೈದುನ ತುಳಜಾರಾಮ ಇವರು ಬಂದು ನನಗೆ ಹತ್ತಿದ ಬೆಂಕಿ ನೊಡಿ ಆರಿಸುವ ಸಲುವಾಗಿ ಮೈ ಮೇಲೆ ನೀರು ಸುರುವಿದ್ದು ಬೆಂಕಿ ಆರಿತ್ತು ಮೇ ಮೇಲಿದ್ದ ಬಟ್ಟೆ ಸುಟ್ಟಿದ್ದು ನಿರು ಹಾಕಿದರಿಂದ ಮೈಯಾಲಾ ಬೊಬೆ ಬಂದಿದ್ದು ನಾನು ಚಿರಾಡುತ್ತಿರುವದರಿಂದ ನಮ್ಮ ಮಾವ ನಾಗೇಶ ಮೈದುನ ತುಳಜಾರಾಮ ನನ್ನ ಗಂಡ ಕೃಷ್ಣ ಮತ್ತು ಅತ್ತೆ ಸುನಿತಾಬಾಯಿ ಇವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಈ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ನಾನು ನನ್ನ ಗಂಡ ಕೃಷ್ಣ ಮತ್ತು ಅತ್ತೆ ಸುನಿತಾಬಾಯಿ ಇವರ ಕಿರುಕುಳ ತಾಪ ತಾಳಲಾರದೆ ಮೈ ಮೇಲೆ ಸೀಮೆ ಎಣ್ಣೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡಿರುತ್ತೇನೆ. ಅಂತ ಹೇಳಿ ಆ ಇಬ್ಬರ ಮೇಲೆ ಕ್ರಮ ಜರುಗಿಸ ಬೇಕು ಅಂತ ಹೇಳಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಬಸವರಾಜ @ ರವರಿ ಸಾ: ಶಾಂತ ನಗರ ಭಂಕೂರ ಇವರಿಗೆ ಶಾಂತ ನಗರ ಭಂಕೂರ ಬಸವರಾಜ ತಂದೆ ಅಪ್ಪಣ್ಣ ಮುಖರಂಬಿ ಇತನೊಂದಿಗೆ ದಿನಾಂಕ: 24/03/2014 ರಂದು ನಮ್ಮ ತಂದೆ ತಾಯಿ ಮದುವೆಯಲ್ಲಿ ನನ್ನ ಗಂಡನಿಗೆ 06 ತೊಲೆ ಬಂಗಾರ ಒಂದು ಲಕ್ಷ್ ನಗದು ಹಣ ಹಾಗೂ ಗೃಹ ಉಪಯೋಗಿ ವಸ್ತುಗಳು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ ಮದುವೆಯಾದ ಒಂದು ವರ್ಷದವಿರಗೆ ನನ್ನ ಗಂಡ ಬಸವರಾಜ ಅತ್ತೆ ಶರಣಮ್ಮ , ಮಾವ ಅಪ್ಪಣ , ಬಾವ ರಾಜು ಇವರೊಂದಿಗೆ ನನಗೆ ನೋಡಿಕೊಂಡಿರುತ್ತಾರೆ ನಂತರ ದಿನಗಳಲ್ಲಿ ನನಗೆ ನೀನು ಚನ್ನಾಗಿ ಇಲ್ಲ ನಮಗೆ ಸರಿಯಾಗಿ ನೋಡಿಕೊಳ್ಳುವುದಿಲ್ಲಾ ಅಂತಾ ತಕರಾರು ಮಾಡುತ್ತಾ ನನಗೆ ತವರು ಮನೆಗೆ ಕಳುಹಿಸಿದ್ದರು ಅದಕ್ಕೆ ನಮ್ಮ ತಂದೆ ತಾಯಿ ಹಾಗೂ ಹಿರಿಯವರು ದಿನಾಂಕ: 31/03/2017 ರಂದು ನನ್ನ ಸಂಗಡ ಗಂಡನ ಮನೆಗೆ ಬಂದು ಮನೆಯವರಿಗೆ ಬುದ್ದಿ ಮಾತು ಹೇಳಿ ನನ್ನ ಬೀಟ್ಟು ಹೋಗಿದ್ದರು ನಂತರ ನನಗೆ ನನ್ನ ಗಂಡ ಬಸವರಾದ  , ಅತ್ತೆ ಮಾವ , ಭಾವ ಇವರೆಲ್ಲಾರೂ ಕೂಡಿ ಮದುವೆ ಕಾಲಕ್ಕೆ  ಬಂಗಾವ ಮತ್ತು ವರದಕ್ಷಣೆ ಕಡಿಮೆ ಕೊಟ್ಟಿರುತ್ತಾರೆ  ನಿನ್ನ ಗಂಡ ಖಾಸಗಿ ಕಂಪನಿಯಲ್ಲೆ ನೌಕರ ಮಾಡಿಕೊಂಡಿದ್ದು ಬೇರೆ ಮದುವೆ ಮಾಡಿದರೆ ಹೆಚ್ಚಿಗೆ ಬಂಗಾರ ಮತ್ತು ಹಣ ಕೋಡುತ್ತಿದ್ದರು ಈ ನಿನ್ನ ಗಂಡನಿಗೆ ಹೋರ ದೇಶಕ್ಕೆ ಹೋಗುವನಿದ್ದಾನೆ ಅವನಿಗೆ 2 ಲಕ್ಷ್ ರೂ ಬೇಕಾಗಿರುತ್ತವೆ ಅದ್ದರಿಂದ ನಿನ್ನ ತವರು ಮನೆಯಿಂದ ತಂದು ಕೋಡು ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುವುದಲ್ಲದೆ ಮತ್ತು ನಿನಗೆ ಮಕ್ಕಳು ಆಗಿರುವುದಿಲ್ಲಾ ಬಂಜೆ ಇದ್ದಿ ಅಂತಾ ಅವಾಚ್ಯ ಬೈದು ಹೊಡೆ ಬಡೆ ಮಾಡುತ್ತಾ ಬಂದಿರುತ್ತಾರೆ. ಅದನ್ನು ಸಹಿಸಿಕೊಂಡುರುತ್ತೇನೆ. ಇಂದು ದಿನಾಂಕ: 06/11/2017 ರಂದು ಸಾಯಂಕಾಲ 6-00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡ , ಅತ್ತೆ ಮಾವ, ಭಾವ ಇವರೆಲ್ಲಾರೂ ಕೂಡಿ ನನಗೆ ಹೊರದೇಶದಕ್ಕೆ ಹೋಗಲು ಎರಡು ಲಕ್ಷ  ರೂ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಹೇಳಿದರೂ ಇನ್ನೂ ತಂದಿಲ್ಲಾ ಅಂತಾ ಜಗಳ ತೆಗೆದು ಅವಾಚ್ಯವಾಗಿ ಬೈದು ತಲೆಯ ಮೇಲೆನ ಕೂದಲು ಜಗ್ಗಾಡಿ ಕೈಯಿಂದ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ ಕಾರಣ ನನಗೆ ಉಪಚಾರ ಕುರಿತು ಆಸ್ಪತ್ತೆ ಕಳುಹಿಸಿ ಕೊಡಬೇಕು ಮತ್ತು ನನಗೆ ತಬರು ಮನೆಯಿಂದ ವರದಕ್ಷಿಣೆಯಾಗಿ 2 ಲಕ್ಷ್ ರೂ ತೆಗೆದುಕೊಂಡು ಬಾ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಾಲಿನಿಂದ ಹೊಡೆದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: