POLICE BHAVAN KALABURAGI

POLICE BHAVAN KALABURAGI

09 November 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-11-2017 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ  ಜೆ.ಹೆಚ್.ಇನಾಮದಾರ ಸಿಪಿಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಲ್ಲಿಕಾರ್ಜುನ ಚೌಕದಿಂದ ಸ್ವಲ್ಪದೂರು ನಿಂತು ಮರೆಯಾಗಿ ನೋಡಲು ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಟ್ಟು, ಮಟಕಾ ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಧರೇಪ್ಪ ತಂದೆ ಮಳೇಪ್ಪ ಡಾಂಗೆ ಸಾ||ಮಲ್ಲಿಕಾರ್ಜುನ ಚೌಕ ಹತ್ತಿರ ಅಫಜಲಪೂರ ಎಂದು ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3500/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 08-11-2017 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಲ್ಲಿಕಾರ್ಜುನ ಚೌಕ ದಿಂದ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಮಲ್ಲಿಕಾರ್ಜುಜನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲನಾಥ ತಂದೆ ಬಸವರಾಜ ಬಾಳಗಿ ಸಾ||ನಾಗಣಸೂರ ಹಾ||||ಮಲ್ಲಿಕಾರ್ಜುನ ಚೌಕ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2500/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 08-11-2017 ರಂದು ಸಾಯಂಕಾಲ 6;15 ಪಿ.ಎಂ ಸುಮಾರಿಗೆ ನಮ್ಮ ತಮ್ಮಂದಿರಾದ ಶಿವಣ್ಣ ಮತ್ತು ವಿಶ್ವನಾಥ ರವರು ನಮ್ಮೂರ ಬಸವರಾಜ ರಬಗೊಂಡ ರವರ ಮೋಟರ ಸೈಕಲ್ ನಂ ಕೆ.ಎ-32/ಇ.ಡಿ-7564 ನೇದ್ದನ್ನು ತೆಗೆದುಕೊಂಡು ತೊಗರಿಗೆ ಹೊಡೆಯು ಎಣ್ಣೆ ತರಲು ಯಡ್ರಾಮಿ ಗ್ರಾಮಕ್ಕೆ ಹೋಗಿದ್ದು ಇರುತ್ತದೆ, ಮೋಟರ ಸೈಕಲನ್ನು ನಮ್ಮ ತಮ್ಮ ವಿಶ್ವನಾಥ ಈತನು ನಡೆಸುತ್ತಿದ್ದನು, ನಂತರ 6;45 ಪಿ.ಎಂ ಸುಮಾರಿಗೆ ನಮ್ಮೂರ ಸಿದ್ದಪ್ಪ ತಂದೆ ಶರಣಪ್ಪ ಜಕ್ಕೊಂಡ ರವರು ನನಗೆ ಫೋನ ಮಾಡಿ ಹೇಳಿದ್ದೆನೆಂದರೆ, ಇದೀಗ 6;30 ಪಿ.ಎಂ ಸುಮಾರಿಗೆ ನಾನು ಮತ್ತು ನಮ್ಮೂರ ಶಂಕರಗೌಡ ನಾಗಾವಿ ರವರು ಕೂಡಿ ನಮ್ಮ ಮೋಟರ ಸೈಕಲ್ ಮೇಲೆ ಯಡ್ರಾಮಿ ಗ್ರಾಮಕ್ಕೆ ಹೋಗುತ್ತಿದ್ದಾಗ ನಮ್ಮ ಮುಂದೆ ನಿಮ್ಮ ತಮ್ಮಂದಿರಾದ ಶಿವಣ್ಣ ಮತ್ತು ವಿಶ್ವನಾಥ ರವರು ಸಹ ಮೋಟರ ಸೈಕಲ್ ಮೇಲೆ ಯಡ್ರಾಮಿ ಗ್ರಾಮಕ್ಕೆ ಹೋಗುತ್ತಿದ್ದರು, ನನ್ನ ಹಿಂದಿನಿಂದ ಒಂದು ಲಾರಿ ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಒಮ್ಮೇಲೆ ನನಗೆ ಸೈಡ ಹೊಡೆದು ಹೋಗಿ, ಮುಂದೆ ಶಾಂತಪ್ಪ ವನಗುಂಟಿ ರವರ ಹೊಲದ ಹತ್ತಿರ ಹೋಗುತ್ತಿದ್ದ ನಿಮ್ಮ ತಮ್ಮಂದಿರ ಮೋಟರ ಸೈಕಲಗೆ ಹಿಂದಿನಿಂದ ಒಮ್ಮೇಲೆ ಡಿಕ್ಕಿ ಹೊಡೆದು ಅವರ ಮೇಲೆ ಹಾಯಿಸಿ ತನ್ನ ಲಾರಿಯನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ಅಲ್ಲೆ ಸ್ಥಳದಲ್ಲೆ ನಿಲ್ಲಿಸಿ ಅದರ ಚಾಲಕನು ಓಡಿ ಹೋದನು, ನಂತರ ನಿಮ್ಮ ತಮ್ಮಂದಿರರಿಗೆ ನೋಡಲಾಗಿ ಶಿವಣ್ಣನ ತಲೆಯ ಮೇಲೆ ಲಾರಿ ಹಾಯಿದು ತಲೆ ಸಂಪೂರ್ಣವಾಗಿ ಒಡೆದಿದ್ದರಿಂದ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ, ವಿಶ್ವನಾಥ ಈತನಿಗೆ ನೋಡಲಾಗಿ ಅವನ ಕಿಬ್ಬೊಟ್ಟೆಯ ಮೇಲೆ ತೊಡೆಯ ಮೇಲೆ ಹಾಯಿದಿದ್ದು, ಇನ್ನು ಜೀವಂತವಾಗಿರುತ್ತಾನೆ ಬೇಗ ಬನ್ನಿ ಅಂತಾ ಅಂದಾಗ ನಾನು ಮತ್ತು ನಮ್ಮೂರ ಬಸವಲಿಂಗಯ್ಯ ತಂದೆ ಬಸಯ್ಯಾ ಮಠ, ಶರಣಗೌಡ ತಂದೆ ಸಾಯಬಣ್ಣಗೌಡ ಬಿರಾದಾರ, ಬಸವರಾಜ ತಂದೆ ಮಲ್ಲಿಕಾರ್ಜುನ ಬಿರಾದಾರ ಹಾಗು ಇತರೆ ಗ್ರಾಮಸ್ತರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮ ಶಿವಣ್ಣ ಈತನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದನು, ವಿಶ್ವನಾಥ ಇತನು ಜೀವಂತವಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ನಂತರ 108 ಅಂಬೂಲೆನ್ಸ ಕರೆಯಿಸಿ ಅದರಲ್ಲಿ ನಮ್ಮ ತಮ್ಮ ವಿಶ್ವನಾಥನಿಗೆ ಹಾಕಿ ಉಪಚಾರ ಕುರಿತು ಸಿದ್ದಪ್ಪ ತಂದೆ ಶರಣಪ್ಪ ಜಕ್ಕೊಂಡ, ಶಂಕರಗೌಡ ನಾಗಾವಿ ರವರೊಂದಿಗೆ ಕಲಬುರಗಿ ಅಸ್ಪತ್ರೆಗೆ ಕಳುಹಿಸಿಕೊಟ್ಟೆನು, ಮಾರ್ಗ ಮದ್ಯದಲ್ಲಿ ಜೇವರ್ಗಿ ಸಮೀಪ 8;00 ಗಂಟೆ ಸುಮಾರಿಗೆ ನಮ್ಮ ತಮ್ಮ ವಿಶ್ವನಾಥ ಈತನು ಮೃತ ಪಟ್ಟಿರುತ್ತಾನೆ. ನಂತರ ವಿಶ್ವನಾಥ ಈತನ ಮೃತ ದೇಹವು ಮರಳಿ ಘಟನಾ ಸ್ಥಳಕ್ಕೆ ತಂದಿದ್ದು ಇರುತ್ತದೆ, ಅಪಘಾತ ಪಡಿಸಿದ ಲಾರಿ ನೋಡಲಾಗಿ ಅದರ ನಂ ಕೆ.ಎ-02/ಡಿ-5234 ನೇದ್ದು ಇರುತ್ತದೆ. ಅಂತಾ ಶ್ರೀ ಮಹಾಂತಗೌಡ ತಂದೆ ರೇವಣಸಿದ್ದಪ್ಪ ಬಿಲ್ಲಾಡ ಸಾ|| ಕುಕ್ಕನೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 07/11/2017 ರಂದು ರಾತ್ರಿ 8.00 ಗಂಟೆ ಸುಮಾರಿಗೆ ನಾಣು ಹಾಗು ನಮ್ಮ ಓಣಿಯ ಶರಣಪ್ಪ ಪಾಠೋಳಿ, ಖಾಜಪ್ಪ ಪಾಠೋಳಿ, ಸಿದ್ದರಾಮ ಹಳ್ಯಾಳ ಮಾತನಾಡುತ್ತಾ ಕುಳಿತಿದ್ದಾಗ ಪರಶುರಾಮ ಇತನು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ರಂಡಿ ಈ ಮೆನೆ ನನಗೆ ಸೇರಬೇಕು ಅಂತ ಬೈದಾಡುತ್ತಾ ನನ್ನ ಮೈ ಮೇಲೆ ಹೊಡೆಯಲು ಬರುತಿದ್ದಾಗ ಅಲ್ಲೆ ಇದ್ದ ಶರಣಪ್ಪ, ಖಾಜಪ್ಪ, ಸಿದ್ದರಾಮ ರವರು ಸದರಿಯವನಿಗೆ ಹಿಡಿದು ಬುದ್ದಿ ಹೇಳಿ ಕಳುಯಿಸಿದ್ದು ಪರಶುರಾಮ ಇತನು ತನ್ನ ಮನೆಯೊಳಗೆ ಹೋಗಿ 5 ಲೀಟರ ಸೀಮೆಎಣ್ಣೆ ಡಬ್ಬಿ ತಗೆದುಕೊಂಡು ಸಿದಾ ನನ್ನ ಹತ್ತಿರ ಬಂದು ನನ್ನ ಮೈ ಮೇಲೆ ಹಾಕಿ ಒಮ್ಮೆಲೆ ಬೆಂಕಿ ಹಚ್ಚಿದ ನಾನು ಚಿರಾಡುತಿದ್ದಾಗ ಶರಣಪ್ಪ, ಖಾಜಪ್ಪ, ಸಿದ್ದರಾಮ ಇವರು ನನಗೆ ತಗುಲಿದ ಬೆಂಕಿಯನ್ನು ನಂದಿಸಿ ಒಂದು ಖಾಸಗಿ ವಾಹನದಲ್ಲಿ ನನಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಪರಶುರಾಮ ಈತನು ನನ್ನ ಮೈಗೆ ಹಚ್ಚಿದ ಬೆಂಕಿಯಿಂದ ನನ್ನ ಮುಖ, ಏರಡುಕೈ, ಬೆನ್ನು ಹೊಟ್ಟೆ, ಎದೆ, ಏರಡು ತೋಡೆ ಕಾಲುಗಳು ಸುಟ್ಟ ಗಾಯದಿಂದ ಮೇಲಿನ ತೊಗಲು ಹೋಗಿ ಬೆಳ್ಳಗಾಗಿರುತ್ತವೆ. ಪರಶುರಾಮ ತಾಯಿ ಚನ್ನಮ್ಮಾ ಪಾಠೋಳಿ ಈತನು ನನ್ನ ಹೆಸರಿಗೆ ಇದ್ದ ಮನೆ ಹಾಗು ಜಾಗ ತನ್ನ ಹೆಸರಿಗೆ ಮಾಡು ಅಂತ ನನ್ನ ಸಂಗಡ ಜಗಳ ಮಾಡುತ್ತಾ ಬಂದು ನಿನ್ನೆ ನಮ್ಮ ಮನೆಯ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ನನ್ನ ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಪೆಟ್ಟಿಗೆಯಿಂದ ಕಡ್ಡಿ ಕೊರೆದು ಬೆಂಕಿ ಹಚ್ಚಿ ನನಗೆ ಗಂಭೀರ ಗಾಯ ಮಾಡಿದವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಶ್ರೀಮತಿ ರೇಣುಕಾ ತಂದೆ ಮಲ್ಕಪ್ಪಾ ಪಟೊಲಿ ಸಾ ಮಾಶ್ಯಾಳ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಸಂದೀಪ ತಂದೆ ಸಿದ್ರಾಮ ಕಟ್ಟಿಮನಿ ಸಾ: ಮನೆ ನಂ. 26/48 ಗಣೇಶ ಮಂದಿರ ಹತ್ತಿರ ಶಹಾಪೂರ ಓಣಿ ಬಸವಕಲ್ಯಾಣ ಜಿ: ಬೀದರ ರವರು ದಿನಾಂಕ. 07/11/2017 ರಂದು 5-00 ಪಿ.ಎಂ ಸುಮಾರಿಗೆ ನಾನು ನನ್ನ ಹೊಂಡಾ ಎಕ್ಟಿವ್ ಮೋಟಾರ ಸೈಕಲ್ ನಂ. KA-32 EJ- 4366 ಚೆಸ್ಸಿನಂ. ME4JF504DFT295597, .ನಂ. JF50ET2296509 ,ಕಿ|| 35,000/- ರೂ ನೇದ್ದು ಐ-ವಾನ-ಶಾಹಿ ಏರಿಯಾದಲ್ಲಿರುವ ಎಚ್.ಕೆ.ಇ ಪಾಲಿಟೆಕ್ನಿಕ್ ಕಾಲೇಜ ಎದುರುಗಡೆ ಆವರಣದಲ್ಲಿ ನಿಲ್ಲಿಸಿ ಕಾಲೇಜದಲ್ಲಿ ಹೋಗಿ ಕೆಲಸ ಮುಗಿಸಿಕೊಂಡು 5-30 ಪಿ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹೊಂಡಾ ಎಕ್ಟಿವ್ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹೊಂಡಾ ಎಕ್ಟಿವ್ ಮೋಟಾರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: