POLICE BHAVAN KALABURAGI

POLICE BHAVAN KALABURAGI

16 August 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 14-08-2017 ರಂದು ಸಾಯಂಕಾಲ ಶ್ರೀಮತಿ ಗೌರಮ್ಮ ಗಂಡ ಗುಂಡಪ್ಪಾ ಶಿಂದೆ ಸಾ ಪಿ.ಡ್ಲ್ಯೂಡಿ ಕ್ವಾಟರ್ಸ ಕಲಬುರಗಿ ರವರು  ಮತ್ತು ನನ್ನ ಮಗ ಪ್ರದೀಪ ಹಾಗೂ ನನ್ನ ಮಗಳ ಮಗಳಾದ ವೈಷ್ಣವಿ ಮೂವರು ಕೂಡಿಕೊಂಡು ಹೊಸ ಜೇವರ್ಗಿ ರೋಡ ಹತ್ತೀರ ಬರುವ ವೆಂಕಟಗೀರಿ ಹೊಟೇಲ ಹತ್ತೀರ ಇರುವ ಪ್ರವೀಣಬಾಯ ಇವರ ಸ್ಟೀಲ್ ಅಂಗಡಿಗೆ ಮನೆಯಿಂದ ನಡೆದುಕೊಂಡು ಹೋಗಿ ಸ್ಟೀಲ್ ಅಂಗಡಿ ಎದುರುಗಡೆ ರೋಡ ಪಕ್ಕದಲ್ಲಿ ಇರುವಾಗ ಪಿಡಬ್ಲೂಡಿ ಕ್ವಾಟರ್ಸ ಹತ್ತೀರ ಬರುವ ಶ್ರೀ ರಾಘವೇಂದ್ರ ಟೆಂಪಲ ರೋಡ ಕಡೆಯಿಂದ ವೆಂಟಕಗೀರಿ ಹೊಟೇಲ ಕ್ರಾಸ ಕಡೆಗೆ ಹೋಗುವ ಕುರಿತು ಟಾಟಾ ಎಸಿಇ ಗೂಡ್ಸ ವಾಹನ ನಂ ಕೆಎ-33/7512 ನೇದ್ದರ ಚಾಲಕ ಗುರುಬಸಯ್ಯಾ ಇತನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಜೋತೆಯಲ್ಲಿದ್ದ ನನ್ನ ಮೋಮ್ಮಗಳು ವೈಷ್ಣವಿ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವಳಿಗೆ ಭಾರಿ ಗಾಯಗೊಳಿಸಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 15-08-2017 ರಂದು ಸಾಯಂಕಾಲ ಶ್ರೀ ಅನಂತರೆಡ್ಡಿ ತಂದೆ ಭೀಮಣ್ಣಾ ಕಂದಗೋಳ ಸಾ : ಶಾಹಾಪೂರ ಜಿ : ಯಾದಗೀರ ರವರು ಮತ್ತು ನನ್ನೊಂದಿಗೆ ಕೆಲಸ ಮಾಡುವ ಬಸವರಾಜ ಮತ್ತು ಗುರುರಾಜ ಮೂರು ಜನರು ಹಳೆ ಜೇವರ್ಗಿ ರೋಡ ಮೇಲೆ ಬರುವ ಸಾಹಿರಾಮ ಮೆಡಿಕಲ್ ಸ್ಟೋರದಿಂದ ಮೆಡಿಕಲ್ ಸ್ಟೋರ ಎದುರುಗಡೆ ಬರುವ ಟಿಫಿನ ಸೆಂಟರನಲ್ಲಿ ಚಹಾ ಕುಡಿಯುವ ಸಂಬಂದ ನಡೆದುಕೊಂಡು ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ರಸ್ತೆ  ದಾಟುತ್ತೀರುವಾಗ ರೈಲ್ವೆ ಅಂಡರ ಬ್ರೀಡ್ಜ್ ಕಡೆಯಿಂದ ರಾಮ ಮಂದಿರ ರಿಂಗ ರೋಡ ಕಡೆಗ ಹೋಗವ ಕುರಿತು ಆಟೋರಿಕ್ಷಾ ನಂಬರ ಕೆಎ-32/ಬಿ-7368 ನೇದ್ದರ ಚಾಲಕನು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ತನ್ನ ಆಟೋರಿಕ್ಷಾ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಸಾಯೇದಬೇಗಂ ಗಂಡ ಮೈಹಿಬೂಬ ಅಹೆಮದ್ ಇನಾಮದಾರ ಸಾಃ ಟಿಪ್ಪುಸುಲ್ತಾನ ಚೌಕ ಜೇವರಗಿ ಇವರ ಗಂಡನಾದ ಮೈಹಿಬೂಬ ಅಹೆಮದ್ ಇವರು ಹೊರ ದೇಶ ದುಬೈಗೆ ಹೋಗಿರುತ್ತಾರೆ, ನಾನು ನನ್ನ ಮಕ್ಕಳೊಂದಿಗೆ ಜೇವರಗಿಯಲ್ಲಿ ವಾಸವಾಗಿರುತ್ತೆನೆ ನಮಗೆ ಅಲೀಬಾಬಾ ಇನಾಮದಾರ, ಮಹ್ಮದ್ ಇಸ್ಮಾಯಿಲ್, ಮುಬಸೀರಾ,ಮಹ್ಮದ್ ಯಾಸೀನ  ಅಂತಾ ಮಕ್ಕಳಿರುತ್ತಾರೆ ನಮ್ಮ ಮನಗನಾದ ಮಹ್ಮದ್ ಇಸ್ಮಾಯಿಲ್ ಇತನು 10 ನೇ ತರಗತಿಯಲ್ಲಿ ಯಾಳವಾರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಬ್ಯಾಸ ಮಾಡುತ್ತಿದ್ದಾನೆ ಅವನು ಅಲ್ಲಿಯೇ ವಸತಿ ನಿಲಯದಲ್ಲಿದ್ದನು,ಮತ್ತು ಹಬ್ಬಕ್ಕೆ  ಮತ್ತು ಶಾಲೆಗೆ ರಜೆ ಇದ್ದಾಗ ನಮ್ಮ ಹತ್ತಿರ ಜೇವರಗಿಗೆ ಹೋಗಿ ಬಂದು ಮಾಡುತ್ತಿದ್ದನು.  ನಮ್ಮ ಮಗ ಮಹ್ಮದ್ ಇಸ್ಮಾಯಿಲ್ ಇತನು ದಿ. 05.08.2017 ರಂದು ಜೇವರಗಿಯಲ್ಲಿನ ಕ್ರೀಡಾ ಕೂಟಕ್ಕೆ  ಬಂದು ಅಂದು ನಮ್ಮ ಮನೆಗೆ ಬಂದು ನಮ್ಮ ಮನೆಯಲ್ಲಿಯೇ ಇದ್ದನು ದಿ. 08.08.2017 ರಂದು ಮುಂಜಾನೆ ನಮ್ಮ ಮಗನು ಶಾಲೆಗೆ ಹೋಗುತ್ತೆನೆಂದು  ಹೇಳಿ ಮನೆಯಿಂದ ಶಾಲೆಗೆ ಹೋದನು. ನಮ್ಮ ಮಗನ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ  ಕಲಾವತಿ ಇವಳಿಗೆ ನಾನು ದಿ. 09.08.2017  ಮದ್ಯಾಹ್ನ ವೇಳಗೆ ಪೊನ ಮಾಡಿ ನನ್ನ ಮಗನ ಬಗ್ಗೆ ಕೇಳಲಾಗಿ ಅವಳು ಹೇಳಿದ್ದೆನೆಂದರೆ ನೀಮ್ಮ ಮಗನು ಊಟಕ್ಕೆ ಬಂದಿರುವುದು ಕಂಡಿರುವುದಿಲ್ಲಾ ನಾನು ನೋಡಿ ಹೇಳುತ್ತೆನೆಂದು ಹೇಳಿದಳು, ಮತ್ತೆ ಅದೇ ದಿವಸ ಸಾಯಂಕಾಲ ಕಲಾವತಿ ಇವಳು ಪೊನ ಮಾಡಿ ಹೇಳಿದ್ದನೆಂದರೆ ಮಹ್ಮದ್ ಇಸ್ಮಾಯಿಲ್ ಇತನು  ದಿ. 08.08.2017 ರಂದು ಮುಂಜಾನೆ ಶಾಲೆಗೆ ಬಂದು ಹೋಗಿರುತ್ತಾನೆ ಎಂದು ಶಾಲೆಯಲ್ಲಿ ಹೇಳುತ್ತಿದ್ದಾರೆ ಅವನು ಎಲ್ಲಿಗೆ ಹೊಗಿರಿತ್ತಾನೆಂಬುದು ನಮಗೆ ಗೊತ್ತಿರುವುದಿಲ್ಲಾ. ಮಹ್ಮದ್ ಇಸ್ಮಾಯಿಲ್ ಇತನು ಶಾಲೆಯಲ್ಲಿ ಮತ್ತು ವಸತಿ ನಿಲಯದಲ್ಲಿ ಇರುವುದಿಲ್ಲಾ ಎಂದು ತಿಳಿಸಿದಳು ರಾತ್ರಿಯಾಗಿದ್ದರಿಂದ ಮನೆಯಲ್ಲಿಯೇ ಇದ್ದು ಮರು ದಿವಸ ಮುಂಜಾನೆ ನಾನು ಮತ್ತು ನಮ್ಮ ತಮ್ಮ ಮಹ್ಮದ್ ಗೌಸ್ ತಂದೆ ಅಹೇಮದಸಾಬ ಇನಾಮದಾರ ಇಬ್ಬರೂ ಕೂಡಿ  ನಮ್ಮ ಮಗನ ಶಾಲೆಗೆ ಹೋಗಿ ವಿಚಾರಿಸಲು ,  ಮಹ್ಮದ್ ಇಸ್ಮಾಯಿಲ್  ಇತನು ದಿ 08.08.2017 ರಂದು ಮುಂಜಾನೆ ಶಾಲೆಗೆ ಬಂದು ಮುಂಜಾನೆ 11.30  ಗಂಟೆಯ ಸುಮಾರಿಗೆ  ಶಾಲೆಯಿಂದ ಹೊರಗೆ ಸಂಡಾಸಕ್ಕೆ ಹೋದವನು ಮರಳಿ ಶಾಲೆಗೆ ಬಂದಿರುವುದಿಲ್ಲಾ  ಎಂದು ತಿಳಿಸಿದರು. ನಂತರ ನಾನು ಮತ್ತು ನಮ್ಮ ತಮ್ಮ ಮಹ್ಮದ್ ಗೌಸ್ ಹಾಗೂ ನಮ್ಮ ಮಗ ಅಲೀಬಾಬಾ  ಎಲ್ಲರೂ ಕೂಡಿ  ನಮ್ಮ ಸಂಭಂದಿಕರ ಊರುಗಳಿಗೆ ಹೋಗಿ ಮತ್ತು ಯಾಳವಾರ ಸಿಗರಥಹಳ್ಳಿ, ಚಿಗರಳ್ಳಿ ಮತ್ತು ಜೇವರಗಿ ಪಟ್ಟಣದಲ್ಲಿ  ನಮ್ಮ ಮಗನ ಬಗ್ಗೆ ಹುಡುಕಾಡಲು ಅವನು ಸಿಕ್ಕಿರುವುದಿಲ್ಲಾ.  ಅವನು ಶಾಲೆಯಿಂದ ಹೊರಗೆ ಸಂಡಾಸಕ್ಕೆ ಬಂದಾಗ ಯಾರೊ ಅಪರಿಚಿತರು ಅಪಹರಿಸಿಕೊಂಡು ಹೋಗಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 August 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ಸುಭಾನ ಕಂದಾಯ ನಿರೀಕ್ಷಕರು ಶಹಾಬಾದ ರವರು ದಿನಾಂಕ: 13/08/2017 ರಂದು ಮರತೂರ ಗ್ರಾಮಕ್ಕೆ ಕೆಲಸದ ನಿಮಿತ್ಯ ನಾನು ಮತ್ತು ಸಂಗಡ ಗೊಳಾ ಗ್ರಾಮ ಸಹಾಯಕ ಮರಲಿಂಗ ರವರನ್ನು ಕರೆದುಕೊಂಡು ಹೋದಾಗ ಮದ್ಯಾಹ್ನ 3-00 ಗಂಟೆಗೆ ಭಂಕೂರ ಸೀಮಾಂತರದ ಕಾಗಿಣಾ ನದಿಯಿಂದ ಟ್ರಾಕ್ಟರನಲ್ಲಿ ಮರಳು ತುಂಬಿಕೊಂಡು ಮರತೂರ ಕಡೆಗೆ ಸಾಗಣೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಗ್ರಾಮ ಸಹಾಯಕ ಕೂಡಿ ಮರತೂರ ಗ್ರಾಮದ ನಬಿ ಹೊಟೇಲ ಹತ್ತಿರ ಹೋದಾಗ ಶಹಾಬಾದ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ ಬರುತ್ತಿದ್ದು ಟ್ರಾಕ್ಟರ ಚಾಲಕನು ನಮಗೆ ನೋಡಿ ಟ್ರಾಕ್ಟರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು  ಸದರಿ ಮರಳು ತುಂಬಿದ ಟ್ರಾಕ್ಟರ ಪರಿಶೀಲಿಸಿ ನೋಡಲು ಅದರ  ನಂಬರ ಕೆ.ಎ 32 ಟಿ.ಬಿ 1986 ಮಶಿ ಫರಗೂಷನ ಕಂಪನಿಯದ್ದು ಇರುತ್ತದೆ  ಅದರ ಅ.ಕಿ 100000-00 ರೂ ಅದರಲ್ಲಿಯ ಮರಳು ಅ.ಕಿ 1000-00 ರೂ ಸದರಿ ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ  ನಾನು ಬೇರೆಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ರಾಕ್ಟರ ಪೊಲೀಸ ಠಾಣೆಗೆ ಟ್ರಾಕ್ಟರ ಚಾಲಕ ಮತ್ತು ಮಾಲಿಕ ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟ್ರಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ಕುಪೇಂದ್ರ ಚವ್ಹಾಣ ಸಾ: ನಂದಿಕೂರ ತಾಂಡಾ  ತಾ: ಜಿ: ಕಲಬುರಗಿ  ರವರಿಗೆ 1) ಜಯಶ್ರೀ 2) ರಾಜಶ್ರೀ 3) ಪೂಜಾ 4) ಪೂನಂ 5) ಸುಸಮಿತಾ 6) ಪ್ರಿಯಂಕಾ  7) ರೇಣುಕಾ ಅಂತಾ 7 ಜನ ಹೆಣ್ಣು ಮಕ್ಕಳಿದ್ದು ಗಂಡು ಮಕ್ಕಳು ಇರುವುದಿಲ್ಲಾ  ಇದರಲ್ಲಿ ಜಯಶ್ರೀ  ಈಕೆಗೆ ಮದುವೆ  ಮಾಡಿಕೊಟ್ಟಿದ್ದು  ಉಳಿದ ಮಕ್ಕಳೊಡನೆ  ನಾವೆಲ್ಲರೂ  ಇರುತ್ತೇವೆ  ನನ್ನ ಗಂಡ ಈಗ ಸುಮಾರು ವರ್ಷಗಳಿಂದ ನಮಗೆ ಗಂಡು ಮಕ್ಕಳು ಇರುವು ದಿಲ್ಲಾ ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಲು ಸರಾಯಿ ಕುಡಿಯುವ ಚಟಕ್ಕೆ ಬಿದ್ದು ದಿನಾಲು ಮನೆಗೆ ಸರಾಯಿ ಕುಡಿದು ಬರುತಿದ್ದು ನಾನು ಗಂಡನಿಗೆ ಸಮಾದಾನ ಹೇಳಿದರು ಸಹ ಹಾಗೇ ಸರಾಯಿ ಕುಡಿಯುತ್ತಾ ಬಂದಿರುತ್ತಾನೆ.  ಹೀಗಿದ್ದು ದಿನಾಂಕ 11/08/2017 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನಾನು ಮಕ್ಕಳೋಡನೆ  ಮನೆಯಲ್ಲಿದ್ದಾಗ  ಅದೇ ಸಮಯಕ್ಕೆ ನನ್ನ ಗಂಡ ವಿಪರೀತ ಸರಾಯಿ ಕುಡಿದು ಮನೆಗೆ ಬಂದು ಮನೆ ಯಲ್ಲಿ ಒಂದು ರೂಮಿನಲ್ಲಿ ಹೋಗಿ ಬಾಗಿಲು ಮುಚ್ಚಿದನು ಆಗ ನಾನು ಬಾಗಿಲು ತೆಗೆಯಲು ಹೇಳಿದಾಗ  ಗಂಡ ಚೀರಾಡುತ್ತಾ ಬಾಗಿಲು  ತೆಗೆದನು ಆತನ ಪೂರ್ತಿ ಮೈಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ನಾನು ಹಾಗೂ ಮಕ್ಕಳು ಕೂಡಿ  ಬೆಂಕಿ ಆರಿಸಿರು ತ್ತೇವೆ ಇದರಿಂದ ನನ್ನ ಗಂಡನ ಮೈ ಪೂರ್ತಿ ಸುಟ್ಟು ಕಪ್ಪಾಗಿ  ಅಲ್ಲಲ್ಲಿ  ಚರ್ಮ ಸುಲಿದು ಬೆಳ್ಳಗಾಗಿದ್ದರಿಂದ ಗಂಡನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಗಂಡ ಉಪ ಚಾರದಲ್ಲಿ ಗುಣ ಮುಖವಾಗದೇ ನಿನ್ನೆ ದಿನಾಂಕ 12/08/2017 ರಂದು ರಾತ್ರಿ 11:30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿ ಅತ್ಮಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ತಹಶೀನ ಗಂಡ ಗೌಸಪಟೇಲ ಮಾಲಿಪಟೇಲ್ ಸಾ : ಹಡಗಿಲ್ ಹಾರುತಿ ಹಾ.ವ. ರಾಜ ಫಂಕ್ಷನ ಹಾಲ ಹಿಂದುಗಡೆ ಡಬರಾಬಾದ ರೋಡ ಕಲಬುರಗಿ ರವರನ್ನು ಕಳೆದ 4 ವರ್ಷಗಳ ಹಿಂದೆ ನನ್ನಮದುವೆಯು ಹಡಗಿಲ ಹಾರುತಿಯ  ಉಸ್ಮಾನ ಪಟೇಲ್ ಇವರ ಮಗ ಗೌಸಪಟೇಲ್ ಇವರೊಂದಗಿ ಆಗಿರುತ್ತದೆ. ನನ್ನ ತವರು ಮನೆ ಜೇವರ್ಗಿ ತಾಲೂಕಿನ ಯಳವಾರ ಗ್ರಾಮ ಇರುತ್ತದೆ. ನನಗೆ ಈಗ  ಒಂದು ಹೆಣ್ಣು ಮಗಳು ಶೀಫಾ 2 ½ ವರ್ಷ , ಒಂದು ಗಂಡು ಮಗು ಅರಮಾನ ವಯ; 1 ವರ್ಷ ದವನಿರುತ್ತಾನೆ.ನನ್ನ ಮದುವೆಯಾದಾಗಿನಿಂದ ನನ್ನ ಗಂಡ ಗೌಸ ಪಟೇಲ್ ಮತ್ತು ನನ್ನ ಅತ್ತೆ ಉಮೇರಾಬೇಗಂ  ಇವರು ಮತ್ತು ನಾದನಿಯವರಾದ ಹೀನಾ , ನಲೂ @ ನಿಲೋಫರ ಹಾಗೂ ಶಮಾ ಇವರೆಲ್ಲರೂ ನನಗೆ ತುಮ ಅಚ್ಚಿ ನಹಿ ಹೈ , ಹಮಾರಿ ಘರಕೂ ಲಾಯಕ್ ನಹಿ ಹೈ , ಕಾಮ ದಂದಾ ಕರನೇ ನಹಿ ಆತಾ ಅಂತಾ ವಿನಾಕಾರಣ  ನನಗೆ ಅವಾಚ್ಯ ಶಬ್ದಗಳಿಂದ ಬೈಯುವದು ಹೊಡೆಬಡಿ ಮಾಡುತಾ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೊಟ್ಟಿರುವಾಗ 2 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರಿಗೆ ಹೇಳಿದಾಗ ಅವರು ಕಲಬುರಗಿಗೆ ಬಂದು ನನ್ನ ಗಂಡ ಅತ್ತೆಯವರಿಗೆ ತಿಳಿ ಹೇಳಿ ನನಗೆ ಸಮಜಾಯಿಸಿ ಹೋಗಿದ್ದು ಇರುತ್ತದೆ.  ಆದಾಗ್ಯೂ ಕೂಡಾ ನನಗೆ ಒಂದಿಲ್ಲಾ ಒಂದು ಕಾರಣದಿಂದ ನನಗೆ ಹಿಂಸೆ ಕೋಡುತ್ತಾ ಬಂದಿರುತ್ತಾರೆ.  ನನ್ನ ನಾದನಿ  ಹೀನಾ ಇವಳ ಗಂಡ ತೀರಿಕೊಂಡಿದ್ದು  ಅವಳು ನಮ್ಮ ಮನೆಯಲ್ಲಿರುತ್ತಾಳೆ ,  ಮತ್ತು ನಿಲಾ@ ನಿಲೋಫರ  ಗಂಡ ಸಿರಾಜ ಪಟೇಲ್ ಹಾಗು ಶಮಾ ಗಂಡ ಸೈಯದ ಪಟೇಲ್ ಇವರು  1 ½ ತಿಂಗಳಿಂದ ನಮ್ಮಲ್ಲಿಯೇ ಇರುತ್ತಾರೆ. ದಿನಾಂಕ. 12-8-2017 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನನ್ನ ಗಂಡ ಕೆಲಸಕ್ಕೆ ಹೋಗಿದ್ದು  ಮನೆಯಲ್ಲಿ ನನ್ನ ಅತ್ತೆ ಉಮೇಗಾ ಬೇಗಂ. ನಾದನಿಯರಾದ ಹೀನಾ , ನೀಲೋಫರ , ಹಾಗೂ ಶಮಾ ಇವರು ನಾಲ್ಕು ಜನರಿದ್ದು  ಇವರೆಲ್ಲರು ನನಗೆ ರಾಂಡ ಕಾಮ ಜಲ್ದಿ ಜಲ್ದಿ ಕರನೇ ನಹಿ ಆತಾ,  ಅಂತಾ ಅವಾಚ್ಯ ಶಬ್ದಗಳಿ ಬೈಯ್ದು ನನ್ನ ಅತ್ತೆ ಯು  ರಂಡಿ ನಮ್ಮ ಮನಗೆ ನೀನು ಲಾಯಕ್ ಇಲ್ಲಾ  ನಿನಗೆ ಏನು ತಿಳಿಯುವದಿಲ್ಲಾ ಹುಚ್ಚರಿಂಡಿ ಮನೆ ಬಿಟ್ಟು ಎಲ್ಲಿಯಾದರೂ ಹೋಗು  ಇಲ್ಲದಿದ್ದರೆ ನಿನಗೆ ಮನಯಲ್ಲಿ ಇಟ್ಟುಕೊಳ್ಳುವದಿಲ್ಲಾ ಎಂದು ಬೆದರಿಕೆ ಹಾಕಿದರು ಇದರಿಂದ ನಾನು  ಹೆದರಿ ಜೀವನದಲ್ಲಿ ನೊಂದು  ಮದ್ಯಾನ 3-00 ಗಂಟೆಯ ಸುಮಾರಿಗೆ ನಾನು  ನಮ್ಮ ಬೆಡರೂಮಿನಲ್ಲಿ  ಸೀಮೆ ಎಣ್ಣಿ ನನ್ನ ಮೈ ಮೇಲೆ ಹಾಕಿಕೊಂಡು ಬೆಂಕಿಕಡ್ಡಿಯನ್ನು ಕೊರೆದು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ನನ್ನ ಮೈಗೆ ಹತ್ತಿ ಉರಿಯುತಿದ್ದಾಗ ನಾನು ಚೀರಾಡುವಾಗ ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ ನಿಲೋಫರ ಹಾಗೂ  ನಾದನಿಯ ಮಗ  ಜಾವೇದ  ಇವರು ಬಂದು ನನಗೆ ಹತ್ತಿರುವ ಬೆಂಕಿ ಆರಿಸಿ ನಂತರ 108 ಅಂಬುಲೆನ್ಸನ್ನು ಕರೆಯಿಸಿ ನನಗೆ ಉಪಚಾರ ಕುರಿತು ಕಲಬುರಗಿಯ ಜಿಲ್ಲಾ ಸರಕಾರಿ  ಆಸ್ಪತ್ರೆಯಲ್ಲಿ ಸೇರಿಕೆಮಾಡಿರುತ್ತಾರೆ. ಆದುದರಿಂದ ನನ್ನ ಗಂಡ ಮಹಮ್ಮದ ಗೌಶ , ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ ನಿಲಾ @ ನಿಲೋಫರರ,  ಶಮಾ ಗಂಡ ಸೈಯ್ಯದ್ ಇವರೆಲ್ಲರೂ ನನಗೆ ಅಡುಗೆ ಸರಿಯಾಗಿ ಮಾಡುವದಿಲ್ಲಾ , ವಿಳಂಬ ಮಾಡುತ್ತಿ , ನಮ್ಮ ಮನೆಗೆ ಲಾಯಕಿಲ್ಲಾ , ಮನೆಬಿಟ್ಟು ಹೋಗು ರಂಡಿ ಬೋಸಡಿ ಅಂತಾ ಬೈಯುವದು , ಹೊಡೆಬಡಿ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕೊಟ್ಟ ಕಿರಕುಳ ತಾಳಲಾರದೆ  ಮನಸಿನ ಮೇಲೆ ಪರೀಣಾಮ ಮಾಡಿಕೊಂಡು   ದಿನಾಂಕ. 12-8-2017 ರಂದು ಮದ್ಯಾನ 3-00 ಗಂಟೆಯಸುಮಾರಿಗೆ  ನಮ್ಮ ಮನೆಯಲ್ಲಿ ನಾನು ಮೈಮೇಲೆ ಸೀಮೆ ಎಣ್ಣಿ ಹಾಕಿಕೊಂಡು  ಬೆಂಕಿ ಹಚ್ಚಿಕೊಂಡು ಆತ್ಮ ಹತ್ತೆ ಮಾಡಿಕೊಳ್ಳಲು ನನ್ನ ಗಂಡ ಮಹಮ್ಮದ ಗೌಶ , ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ  ಹೀನಾ ಗಂಡ  ಇಮಾಮ ಪಟೇಲ್ ,ನಿಲಾ @ ನಿಲೋಫರರ,  ಶಮಾ ಗಂಡ ಸೈಯ್ಯದ್  ಸಾ; ರಾಜಾಫಕ್ಸನ ಹಾಲ ಹಿಂದುಗಡೆ ಡಬರಾಬಾದ ರೋಡ ಕಲಬುರಗಿ ಇವರೆಲ್ಲರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 August 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 2/08/2017 ರಂದು ರಾತ್ರಿ ನಿಮ್ಮ ಗಂಢನಾದ ನಾಗನಾಥ ಇವರು ಹುಮಾಬಾದ್ ರಿಂಗ್ ರಸ್ತೆ ಕಡೆಯಿಂದ ಹಾಗರಗಾ ಕ್ರಾಸ್ ಕಡೆಗೆ ಹೋಗುವ ರಸ್ತೆಯಲ್ಲಿರುವ ಹೊಂಡಾ ಕಾರ  ಶೋ ರೂಮು ಎದುರುಗಡೆ ರಸ್ತೆ ಬದಿಯಿಂದ ಸೈಕಲ್‌ ತಳ್ಳಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂಬದಿಯಿಂದ ಅಂದರೆ ಹುಮನಾಬಾದ ರಿಂಗ ರಸ್ತೆ ಕಡೆಯಿಂದ ಒಬ್ಬ ಆಟೊ ಚಾಲಕನು ತನ್ನ ಆಟೋವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದವನೆ ನನ್ನ ಗಂಡ ನಾಗನಾಥ ಇತನಿಗೆ ಜೋರಾಗಿ ಡಿಕ್ಕಕೊಟ್ಟು ಅಪಘಾತ ಪಡಿಸಿ ಆಟೋವನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೇ ಹಾಗರಗಾ ಕ್ರಾಸ್ ಕಡೆಗೆ ಓಡಿಸಿಕೊಂಡು ಹೋದನು, ಅಪಘತ ಪಡಿಸಿದ ಆಟೋ ನಂ ಕತ್ತಲಲ್ಲಿ ಸರಿಯಾಗಿ ನೊಡಿರುವುದಿಲ್ಲ ಮತ್ತು ಆಟೋ ಚಾಲಕನ ಹೆಸರು ಗೊತ್ತಿರುವುದಿಲ್ಲ. ಮುಂದೆ ನಾಗನಾಥ ಇವರಿಗೆ 108 ಅಂಬುಲೆನ್ಸ್ ದಲ್ಲಿ ಹಾಕಿಕೊಂಡು ಇಲಾಜ ಕುರಿತು ಸರಕಾರಿ ಆಸ್ಪತ್ರೆಗೆ ಒಯಿದಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನನ್ನ ಮಗ ಮಹೇಶ ಮತ್ತು ಭಾವನ ಮಗ ಗಂಗಾಧರ ಎಲ್ಲರೂ ಕೂಡಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ನನ್ನ ಗಂಡನಿಗೆ ನೋಡಲಾಗಿ ಆತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ ಮುಂದಿನ ತಲೆಗೆ ರಕ್ತಗಾಯ, ನಡು ಹಣೆಗೆ ಗುಪ್ತಗಾಯವಾಗಿದ್ದು ಅವರಿಗೆ ಮಾತನಾಡಿಸಲು ಮಾತಾಡದೇ ಬೇಹೋಸ್‌ ಆಗಿದ್ದರಿಂದ ನಂತರ ದಿನಾಂಕ: 04/08/2017 ರಂದು ನನ್ನ ಗಂಡನಿಗೆ ಹೆಚ್ಚಿನ ಇಲಾಜ್‌ ಕುರಿತು ಸರಕಾರಿ  ಆಸ್ಪತ್ರೆಯಿಂದ ಗಂಗಾ ಆಸ್ಪತ್ರೆ ಕಲಬುರಗಿಯಲ್ಲಿ ಒಯಿದು ಸೇರಿಕೆ ಮಾಡಿದ್ದು ನನ್ನ ಗಂಡನಾದ  ದಿನಾಂಕ: 02/08/2017 ರಂದು ಆದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರವನ್ನು ದಿನಾಂಕ: 04/08/2017 ರಿಂದ ದಿನಾಂಕ: 11/08/2017 ರ ವರೆಗೆ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೆ ಇಂದು ದಿನಾಂಕ: 11/08/2017 ರಂದು ಮದ್ಯಾಹ್ನ 3-30 ಗಂಟೆಗೆ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಸರೊಜಾಬಾಯಿ ಗಂಡ ನಾಗನಾಥ ಪಂಚಾಳ ಮು;ಹೋಳಸಮುದ್ರ ತಾಲುಕು ಅವರಾದ ಜಿಲ್ಲಾ ಬಿದರ ಸದ್ಯ ಇಂಡಸ್ಟ್ರಯಲ್ ಎರಿಯಾ ಮೊದಲನೆ ಹಂತ ಕಪನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ :  ದಿನಾಂಕ 11-08-2017 ರಂದು ಗುಡ್ಡೆವಾಡಿ ಗ್ರಾಮದ ಕಡೆಯಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ,  ಜೆ.ಎಚ್. ಇನಾಮದಾರ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದೇಸಾಯಿ ಕಲ್ಲೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಮರಳು ತುಂಬಿದ ಕೊಂಡು ಬರುತ್ತಿದ್ದುದನ್ನು ನೋಡಿ ಟಿಪ್ಪರನ್ನು ನಿಲ್ಲಿಸಿ ಅದರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಿಜಯಕುಮಾರ ತಂದೆ ಸಾಯಬಣ್ಣ ರಾಂಪೂರ ಸಾ|| ಹಡಗಿಲ್ ತಾ|| ಜಿ|| ಕಲಬುರಗಿ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲಾಗಿ, ಟಿಪ್ಪರದಲ್ಲಿ ಮರಳೂ ತುಂಬಿದ್ದು ಇದ್ದು ಅದರ ನಂಬರ ಕೆಎ-34 ಬಿ-3953 ಅಂತಾ ಇರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟಿಪ್ಪರ ಅಂದಾಜು 10,00,000/- ರೂ ಇದ್ದು, ಅದರಲ್ಲಿದ್ದ ಮರಳು ಅಂದಾಜು 5,000/- ರೂ ಕಿಮ್ಮತ್ತಿನದು ಇರುತ್ತದೆ. ನಂತರ ಸದರಿ ಮರಳು ತುಂಬಿದ ಟಿಪ್ಪರ ಸಮೇತ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ