POLICE BHAVAN KALABURAGI

POLICE BHAVAN KALABURAGI

16 August 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 14-08-2017 ರಂದು ಸಾಯಂಕಾಲ ಶ್ರೀಮತಿ ಗೌರಮ್ಮ ಗಂಡ ಗುಂಡಪ್ಪಾ ಶಿಂದೆ ಸಾ ಪಿ.ಡ್ಲ್ಯೂಡಿ ಕ್ವಾಟರ್ಸ ಕಲಬುರಗಿ ರವರು  ಮತ್ತು ನನ್ನ ಮಗ ಪ್ರದೀಪ ಹಾಗೂ ನನ್ನ ಮಗಳ ಮಗಳಾದ ವೈಷ್ಣವಿ ಮೂವರು ಕೂಡಿಕೊಂಡು ಹೊಸ ಜೇವರ್ಗಿ ರೋಡ ಹತ್ತೀರ ಬರುವ ವೆಂಕಟಗೀರಿ ಹೊಟೇಲ ಹತ್ತೀರ ಇರುವ ಪ್ರವೀಣಬಾಯ ಇವರ ಸ್ಟೀಲ್ ಅಂಗಡಿಗೆ ಮನೆಯಿಂದ ನಡೆದುಕೊಂಡು ಹೋಗಿ ಸ್ಟೀಲ್ ಅಂಗಡಿ ಎದುರುಗಡೆ ರೋಡ ಪಕ್ಕದಲ್ಲಿ ಇರುವಾಗ ಪಿಡಬ್ಲೂಡಿ ಕ್ವಾಟರ್ಸ ಹತ್ತೀರ ಬರುವ ಶ್ರೀ ರಾಘವೇಂದ್ರ ಟೆಂಪಲ ರೋಡ ಕಡೆಯಿಂದ ವೆಂಟಕಗೀರಿ ಹೊಟೇಲ ಕ್ರಾಸ ಕಡೆಗೆ ಹೋಗುವ ಕುರಿತು ಟಾಟಾ ಎಸಿಇ ಗೂಡ್ಸ ವಾಹನ ನಂ ಕೆಎ-33/7512 ನೇದ್ದರ ಚಾಲಕ ಗುರುಬಸಯ್ಯಾ ಇತನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಜೋತೆಯಲ್ಲಿದ್ದ ನನ್ನ ಮೋಮ್ಮಗಳು ವೈಷ್ಣವಿ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವಳಿಗೆ ಭಾರಿ ಗಾಯಗೊಳಿಸಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 15-08-2017 ರಂದು ಸಾಯಂಕಾಲ ಶ್ರೀ ಅನಂತರೆಡ್ಡಿ ತಂದೆ ಭೀಮಣ್ಣಾ ಕಂದಗೋಳ ಸಾ : ಶಾಹಾಪೂರ ಜಿ : ಯಾದಗೀರ ರವರು ಮತ್ತು ನನ್ನೊಂದಿಗೆ ಕೆಲಸ ಮಾಡುವ ಬಸವರಾಜ ಮತ್ತು ಗುರುರಾಜ ಮೂರು ಜನರು ಹಳೆ ಜೇವರ್ಗಿ ರೋಡ ಮೇಲೆ ಬರುವ ಸಾಹಿರಾಮ ಮೆಡಿಕಲ್ ಸ್ಟೋರದಿಂದ ಮೆಡಿಕಲ್ ಸ್ಟೋರ ಎದುರುಗಡೆ ಬರುವ ಟಿಫಿನ ಸೆಂಟರನಲ್ಲಿ ಚಹಾ ಕುಡಿಯುವ ಸಂಬಂದ ನಡೆದುಕೊಂಡು ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ರಸ್ತೆ  ದಾಟುತ್ತೀರುವಾಗ ರೈಲ್ವೆ ಅಂಡರ ಬ್ರೀಡ್ಜ್ ಕಡೆಯಿಂದ ರಾಮ ಮಂದಿರ ರಿಂಗ ರೋಡ ಕಡೆಗ ಹೋಗವ ಕುರಿತು ಆಟೋರಿಕ್ಷಾ ನಂಬರ ಕೆಎ-32/ಬಿ-7368 ನೇದ್ದರ ಚಾಲಕನು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ತನ್ನ ಆಟೋರಿಕ್ಷಾ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಸಾಯೇದಬೇಗಂ ಗಂಡ ಮೈಹಿಬೂಬ ಅಹೆಮದ್ ಇನಾಮದಾರ ಸಾಃ ಟಿಪ್ಪುಸುಲ್ತಾನ ಚೌಕ ಜೇವರಗಿ ಇವರ ಗಂಡನಾದ ಮೈಹಿಬೂಬ ಅಹೆಮದ್ ಇವರು ಹೊರ ದೇಶ ದುಬೈಗೆ ಹೋಗಿರುತ್ತಾರೆ, ನಾನು ನನ್ನ ಮಕ್ಕಳೊಂದಿಗೆ ಜೇವರಗಿಯಲ್ಲಿ ವಾಸವಾಗಿರುತ್ತೆನೆ ನಮಗೆ ಅಲೀಬಾಬಾ ಇನಾಮದಾರ, ಮಹ್ಮದ್ ಇಸ್ಮಾಯಿಲ್, ಮುಬಸೀರಾ,ಮಹ್ಮದ್ ಯಾಸೀನ  ಅಂತಾ ಮಕ್ಕಳಿರುತ್ತಾರೆ ನಮ್ಮ ಮನಗನಾದ ಮಹ್ಮದ್ ಇಸ್ಮಾಯಿಲ್ ಇತನು 10 ನೇ ತರಗತಿಯಲ್ಲಿ ಯಾಳವಾರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಬ್ಯಾಸ ಮಾಡುತ್ತಿದ್ದಾನೆ ಅವನು ಅಲ್ಲಿಯೇ ವಸತಿ ನಿಲಯದಲ್ಲಿದ್ದನು,ಮತ್ತು ಹಬ್ಬಕ್ಕೆ  ಮತ್ತು ಶಾಲೆಗೆ ರಜೆ ಇದ್ದಾಗ ನಮ್ಮ ಹತ್ತಿರ ಜೇವರಗಿಗೆ ಹೋಗಿ ಬಂದು ಮಾಡುತ್ತಿದ್ದನು.  ನಮ್ಮ ಮಗ ಮಹ್ಮದ್ ಇಸ್ಮಾಯಿಲ್ ಇತನು ದಿ. 05.08.2017 ರಂದು ಜೇವರಗಿಯಲ್ಲಿನ ಕ್ರೀಡಾ ಕೂಟಕ್ಕೆ  ಬಂದು ಅಂದು ನಮ್ಮ ಮನೆಗೆ ಬಂದು ನಮ್ಮ ಮನೆಯಲ್ಲಿಯೇ ಇದ್ದನು ದಿ. 08.08.2017 ರಂದು ಮುಂಜಾನೆ ನಮ್ಮ ಮಗನು ಶಾಲೆಗೆ ಹೋಗುತ್ತೆನೆಂದು  ಹೇಳಿ ಮನೆಯಿಂದ ಶಾಲೆಗೆ ಹೋದನು. ನಮ್ಮ ಮಗನ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ  ಕಲಾವತಿ ಇವಳಿಗೆ ನಾನು ದಿ. 09.08.2017  ಮದ್ಯಾಹ್ನ ವೇಳಗೆ ಪೊನ ಮಾಡಿ ನನ್ನ ಮಗನ ಬಗ್ಗೆ ಕೇಳಲಾಗಿ ಅವಳು ಹೇಳಿದ್ದೆನೆಂದರೆ ನೀಮ್ಮ ಮಗನು ಊಟಕ್ಕೆ ಬಂದಿರುವುದು ಕಂಡಿರುವುದಿಲ್ಲಾ ನಾನು ನೋಡಿ ಹೇಳುತ್ತೆನೆಂದು ಹೇಳಿದಳು, ಮತ್ತೆ ಅದೇ ದಿವಸ ಸಾಯಂಕಾಲ ಕಲಾವತಿ ಇವಳು ಪೊನ ಮಾಡಿ ಹೇಳಿದ್ದನೆಂದರೆ ಮಹ್ಮದ್ ಇಸ್ಮಾಯಿಲ್ ಇತನು  ದಿ. 08.08.2017 ರಂದು ಮುಂಜಾನೆ ಶಾಲೆಗೆ ಬಂದು ಹೋಗಿರುತ್ತಾನೆ ಎಂದು ಶಾಲೆಯಲ್ಲಿ ಹೇಳುತ್ತಿದ್ದಾರೆ ಅವನು ಎಲ್ಲಿಗೆ ಹೊಗಿರಿತ್ತಾನೆಂಬುದು ನಮಗೆ ಗೊತ್ತಿರುವುದಿಲ್ಲಾ. ಮಹ್ಮದ್ ಇಸ್ಮಾಯಿಲ್ ಇತನು ಶಾಲೆಯಲ್ಲಿ ಮತ್ತು ವಸತಿ ನಿಲಯದಲ್ಲಿ ಇರುವುದಿಲ್ಲಾ ಎಂದು ತಿಳಿಸಿದಳು ರಾತ್ರಿಯಾಗಿದ್ದರಿಂದ ಮನೆಯಲ್ಲಿಯೇ ಇದ್ದು ಮರು ದಿವಸ ಮುಂಜಾನೆ ನಾನು ಮತ್ತು ನಮ್ಮ ತಮ್ಮ ಮಹ್ಮದ್ ಗೌಸ್ ತಂದೆ ಅಹೇಮದಸಾಬ ಇನಾಮದಾರ ಇಬ್ಬರೂ ಕೂಡಿ  ನಮ್ಮ ಮಗನ ಶಾಲೆಗೆ ಹೋಗಿ ವಿಚಾರಿಸಲು ,  ಮಹ್ಮದ್ ಇಸ್ಮಾಯಿಲ್  ಇತನು ದಿ 08.08.2017 ರಂದು ಮುಂಜಾನೆ ಶಾಲೆಗೆ ಬಂದು ಮುಂಜಾನೆ 11.30  ಗಂಟೆಯ ಸುಮಾರಿಗೆ  ಶಾಲೆಯಿಂದ ಹೊರಗೆ ಸಂಡಾಸಕ್ಕೆ ಹೋದವನು ಮರಳಿ ಶಾಲೆಗೆ ಬಂದಿರುವುದಿಲ್ಲಾ  ಎಂದು ತಿಳಿಸಿದರು. ನಂತರ ನಾನು ಮತ್ತು ನಮ್ಮ ತಮ್ಮ ಮಹ್ಮದ್ ಗೌಸ್ ಹಾಗೂ ನಮ್ಮ ಮಗ ಅಲೀಬಾಬಾ  ಎಲ್ಲರೂ ಕೂಡಿ  ನಮ್ಮ ಸಂಭಂದಿಕರ ಊರುಗಳಿಗೆ ಹೋಗಿ ಮತ್ತು ಯಾಳವಾರ ಸಿಗರಥಹಳ್ಳಿ, ಚಿಗರಳ್ಳಿ ಮತ್ತು ಜೇವರಗಿ ಪಟ್ಟಣದಲ್ಲಿ  ನಮ್ಮ ಮಗನ ಬಗ್ಗೆ ಹುಡುಕಾಡಲು ಅವನು ಸಿಕ್ಕಿರುವುದಿಲ್ಲಾ.  ಅವನು ಶಾಲೆಯಿಂದ ಹೊರಗೆ ಸಂಡಾಸಕ್ಕೆ ಬಂದಾಗ ಯಾರೊ ಅಪರಿಚಿತರು ಅಪಹರಿಸಿಕೊಂಡು ಹೋಗಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: