POLICE BHAVAN KALABURAGI

POLICE BHAVAN KALABURAGI

12 August 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 2/08/2017 ರಂದು ರಾತ್ರಿ ನಿಮ್ಮ ಗಂಢನಾದ ನಾಗನಾಥ ಇವರು ಹುಮಾಬಾದ್ ರಿಂಗ್ ರಸ್ತೆ ಕಡೆಯಿಂದ ಹಾಗರಗಾ ಕ್ರಾಸ್ ಕಡೆಗೆ ಹೋಗುವ ರಸ್ತೆಯಲ್ಲಿರುವ ಹೊಂಡಾ ಕಾರ  ಶೋ ರೂಮು ಎದುರುಗಡೆ ರಸ್ತೆ ಬದಿಯಿಂದ ಸೈಕಲ್‌ ತಳ್ಳಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂಬದಿಯಿಂದ ಅಂದರೆ ಹುಮನಾಬಾದ ರಿಂಗ ರಸ್ತೆ ಕಡೆಯಿಂದ ಒಬ್ಬ ಆಟೊ ಚಾಲಕನು ತನ್ನ ಆಟೋವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದವನೆ ನನ್ನ ಗಂಡ ನಾಗನಾಥ ಇತನಿಗೆ ಜೋರಾಗಿ ಡಿಕ್ಕಕೊಟ್ಟು ಅಪಘಾತ ಪಡಿಸಿ ಆಟೋವನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೇ ಹಾಗರಗಾ ಕ್ರಾಸ್ ಕಡೆಗೆ ಓಡಿಸಿಕೊಂಡು ಹೋದನು, ಅಪಘತ ಪಡಿಸಿದ ಆಟೋ ನಂ ಕತ್ತಲಲ್ಲಿ ಸರಿಯಾಗಿ ನೊಡಿರುವುದಿಲ್ಲ ಮತ್ತು ಆಟೋ ಚಾಲಕನ ಹೆಸರು ಗೊತ್ತಿರುವುದಿಲ್ಲ. ಮುಂದೆ ನಾಗನಾಥ ಇವರಿಗೆ 108 ಅಂಬುಲೆನ್ಸ್ ದಲ್ಲಿ ಹಾಕಿಕೊಂಡು ಇಲಾಜ ಕುರಿತು ಸರಕಾರಿ ಆಸ್ಪತ್ರೆಗೆ ಒಯಿದಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನನ್ನ ಮಗ ಮಹೇಶ ಮತ್ತು ಭಾವನ ಮಗ ಗಂಗಾಧರ ಎಲ್ಲರೂ ಕೂಡಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ನನ್ನ ಗಂಡನಿಗೆ ನೋಡಲಾಗಿ ಆತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ ಮುಂದಿನ ತಲೆಗೆ ರಕ್ತಗಾಯ, ನಡು ಹಣೆಗೆ ಗುಪ್ತಗಾಯವಾಗಿದ್ದು ಅವರಿಗೆ ಮಾತನಾಡಿಸಲು ಮಾತಾಡದೇ ಬೇಹೋಸ್‌ ಆಗಿದ್ದರಿಂದ ನಂತರ ದಿನಾಂಕ: 04/08/2017 ರಂದು ನನ್ನ ಗಂಡನಿಗೆ ಹೆಚ್ಚಿನ ಇಲಾಜ್‌ ಕುರಿತು ಸರಕಾರಿ  ಆಸ್ಪತ್ರೆಯಿಂದ ಗಂಗಾ ಆಸ್ಪತ್ರೆ ಕಲಬುರಗಿಯಲ್ಲಿ ಒಯಿದು ಸೇರಿಕೆ ಮಾಡಿದ್ದು ನನ್ನ ಗಂಡನಾದ  ದಿನಾಂಕ: 02/08/2017 ರಂದು ಆದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರವನ್ನು ದಿನಾಂಕ: 04/08/2017 ರಿಂದ ದಿನಾಂಕ: 11/08/2017 ರ ವರೆಗೆ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೆ ಇಂದು ದಿನಾಂಕ: 11/08/2017 ರಂದು ಮದ್ಯಾಹ್ನ 3-30 ಗಂಟೆಗೆ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಸರೊಜಾಬಾಯಿ ಗಂಡ ನಾಗನಾಥ ಪಂಚಾಳ ಮು;ಹೋಳಸಮುದ್ರ ತಾಲುಕು ಅವರಾದ ಜಿಲ್ಲಾ ಬಿದರ ಸದ್ಯ ಇಂಡಸ್ಟ್ರಯಲ್ ಎರಿಯಾ ಮೊದಲನೆ ಹಂತ ಕಪನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ :  ದಿನಾಂಕ 11-08-2017 ರಂದು ಗುಡ್ಡೆವಾಡಿ ಗ್ರಾಮದ ಕಡೆಯಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ,  ಜೆ.ಎಚ್. ಇನಾಮದಾರ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದೇಸಾಯಿ ಕಲ್ಲೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಮರಳು ತುಂಬಿದ ಕೊಂಡು ಬರುತ್ತಿದ್ದುದನ್ನು ನೋಡಿ ಟಿಪ್ಪರನ್ನು ನಿಲ್ಲಿಸಿ ಅದರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಿಜಯಕುಮಾರ ತಂದೆ ಸಾಯಬಣ್ಣ ರಾಂಪೂರ ಸಾ|| ಹಡಗಿಲ್ ತಾ|| ಜಿ|| ಕಲಬುರಗಿ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲಾಗಿ, ಟಿಪ್ಪರದಲ್ಲಿ ಮರಳೂ ತುಂಬಿದ್ದು ಇದ್ದು ಅದರ ನಂಬರ ಕೆಎ-34 ಬಿ-3953 ಅಂತಾ ಇರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟಿಪ್ಪರ ಅಂದಾಜು 10,00,000/- ರೂ ಇದ್ದು, ಅದರಲ್ಲಿದ್ದ ಮರಳು ಅಂದಾಜು 5,000/- ರೂ ಕಿಮ್ಮತ್ತಿನದು ಇರುತ್ತದೆ. ನಂತರ ಸದರಿ ಮರಳು ತುಂಬಿದ ಟಿಪ್ಪರ ಸಮೇತ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ

No comments: