POLICE BHAVAN KALABURAGI

POLICE BHAVAN KALABURAGI

29 June 2017

Kalaburagi District Reported Crimes

ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ  : ಶ್ರೀ ಲಕ್ಷ್ಮಣ ತಂದೆ ಶರಣಪ್ಪ ಸಮಗಾರ ಸಾಃ ಕೊಳಕೂರ ತಾಃ ಜೇವರಗಿ ರವರ ಹೋಲ  ನಮ್ಮೂರ ಸಿಮಾಂತರದಲ್ಲಿ ಸರ್ವೆ  ನಂ 201 ರಲ್ಲಿ 14 ಎಕೆರೆ ಜಮೀನು ನನ್ನ ಹೆಸರಿನಲ್ಲಿ ಇರುತ್ತದೆ ಸದರಿ ಜಮೀನಿಗೆ ನಾನೆ ಪಟ್ಟೇದಾರನಾಗಿರುತ್ತೇನೆ. ಸದರಿ ನಮ್ಮ ಹೋಲದ ಪಕ್ಕದಲ್ಲಿ ನಮ್ಮೂರ ದರ್ಮಣ್ಣ ತಂದೆ ಸಿದ್ದಣ್ಣ ಅಗಸರ ಇವರ ಹೊಲ ಇರುತ್ತದೆ ದರ್ಮಣ್ಣ ಇತನು ಹೋಲದ ಬಂದಾರಿ ವಿಷಯದಲ್ಲಿ ಸುಮಾರು 5 ವರ್ಷಗಳಿಂದ ನನ್ನ ಸಂಗಡ ತಕರಾರು ಮಾಡುತ್ತಾ ಬಂದಿರುತ್ತಾನೆ ಅದರಿಂದ ಅವನಿಗೂ ನಮಗೂ ವೈಮನಸ್ಸು ಇರುತ್ತದೆ. ದಿಃ22.06.2017 ರಂದು ಮುಂಜಾನೆ 9 ಗಂಟೆಯ ಸುಮಾರಿಗೆ ನಾನು ನಮ್ಮ ಹೋಲಕ್ಕೆ ಹೋಗಿ ಹೋಲದಲ್ಲಿ ಇದ್ದಾಗ ದರ್ಮಣ್ಣ ತಂದೆ ಸಿದ್ದಣ್ಣ ಇತನು ನನ್ನ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ನಮ್ಮ ಹೊಲದಲ್ಲಿ ಒಡ್ಡು ಹಾಕುತ್ತಿದ್ದಾಗ ನಾನು ಅವನಿಗೆ ನಮ್ಮ ಹೋಲದಲ್ಲಿ ಒಡ್ಡು ಯಾಕೆ ಹಾಕುತ್ತಿದಿ ಎಂದು ಕೆಳಿದಾಗ ಧರ್ಮಣ್ಣಾ ಇತನು ನನಗೆ ಎ ಬೊಸಡಿ ಮಗನೆ  ನಾನು ನಮ್ಮ ಹೋಲದಲ್ಲಿ ಒಡ್ಡು ಹಾಕುತ್ತಿದ್ದೆನೆ ಎಂದು ಅವಾಚ್ಯವಾಗಿ ಬೈಯ್ಯಹತ್ತಿದನು. ಆಗ ನಾನು ಅವನಿಗೆ ನಮ್ಮ ಹೋಲದಲ್ಲಿ ಒಡ್ಡು ಹಾಕಿ ನನಗೆ ಬೈಯ್ಯುತ್ತೀಯಾ ಎಂದು ಕೇಳಿದಾಗ ಅವನು ನನ್ನ ಎದೆಯ ಮೇಲೆ ಅಂಗಿ ಹಿಡಿದು ಜಗ್ಗಿ ಎ ಸಮಗಾರ ಸೂಳೆಮಗನೆ ನಿನಗೆ ಸೊಕ್ಕು ಬಹಳ ಆಗಿದೆ ಎಂದು ಜಾತಿ ಎತ್ತಿ ಬೈಯದು ಜಾತಿ ನಿಂದನೆ ಮಾಡಿರುತ್ತಾನೆ. ಅಲ್ಲದೆ ಹೋಲದ ಬಂದಾರಿ ವಿಷಯದಲ್ಲಿ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೊಡೆಯಲು ಬಂದಾಗ ನಾನು ಅಂಜಿ ಹೋಗುತ್ತಿದ್ದಾಗ ನನಗೆ ತಡೆದು ನಿಲ್ಲಿಸಿ ಜಗಳ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ತಲಕ ಎಕ್ಬಾಲ ಗಂಡ ಮಹ್ಮದ ನಿಸಾರ ಹುಸೇನ ಸಾ; ರೆಹಮತ ನಗರ ಕಲಬುರಗಿ ಇವರು  ದಿನಾಂಕ 24.07.2011 ರಂದು ನಮ್ಮ ತಂದೆ ತಾಯಿಯವರು ನಮ್ಮ ಮುಸ್ಲಿಂ ಸಂಪ್ರದಾಯದಂತೆ ಮಹ್ಮದ ನಿಸಾರ ಹುಸೇನ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಆವಾಗಲೇ ನನ್ನ ನಾದಿನಿಯಾದ ಆಯಿಷಾ ಪಾತೀಮಾ ಇವಳಿಗೆ ನನ್ನ ಅಣ್ಣನಾದ ಮಹ್ಮದ ಸಿದ್ದಿಕ ಹುಸೇನ ಇತನೊಂದಿಗೆ ಮದುವೆ ಮಾಡಿರುತ್ತಾರೆ  ನೀನು ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ದಿನಾಲು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾರೆ. ನನ್ನ ನಾದಿನಿಯಾದ ಆಯಿಷಾ ಫಾತೀಮಾ ಇವಳೂ ಕೂಡ ರಂಡಿ ನಿಮ್ಮ ಅಣ್ಣನಿಂದ ಹಣ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆಬಡೆ ಮಾಡುತ್ತಾಳೆ ಮನೆಯಲ್ಲಿ ನನಗೆ ಸರಿಯಾಗಿ ಊಟ ಕೂಡ ಕೊಡುವದಿಲ್ಲ ನನ್ನ ಮೈದುನನಾದ ಮುಸ್ತಾಕ ಹುಸೇನ ಇವನು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಒದೆಯುತ್ತಾನೆ. ನನ್ನ ಇನ್ನೊಬ್ಬಳು ನಾದಿನಿಯಾದ ರೆಹನಾ ಪಾತೀಮಾ ಇವಳು ಕೂಡ ತನ್ನ ಗಂಡನಿಗೆ ಬಿಟ್ಟು ನಮ್ಮ ಮನೆಯಲ್ಲಿಯೇ ಇದ್ದು ರಂಡಿ ಬೋಸಡಿ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ನಿನ್ನ ತವರು ಮನೆಯಿಂದ 10 ಲಕ್ಷ ರೂ ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದು ಕೂದಲು ಹಿಡಿದು ಎಳದಾಡಿ ಹೊಡೆಯುತ್ತಾಳೆ, ದಿನಾಂಕ 28.06.2017 ರಂದು ನನ್ನ ಗಂಡ ನನಗೆ ರಂಡಿ ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ಹಣ ತೆಗದುಕೊಂಡು ಬಾ ಅಂದರೆ ತೆಗೆದುಕೊಂಢು ಬರುತ್ತಿಲ್ಲ ಮಕ್ಕಳಿಗೆ ಶಾಲೆಗೆ ಕಳೂಹಿಸಬೇಕಾದರೆ ಮತ್ತು ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ಹಣ ತೆಗೆದುಕೊಂಡು ಬಾ ಅಂತಾ ಕೈಯಿಂದ ನನಗೆ ಹೊಡೆದು ಜೋರಾಗಿ ಕುತ್ತಿಗೆ ಒತ್ತಿರುತ್ತಾನೆ ನಾನು ಅವನಿಂದ ಬಿಡಿಸಕೊಂಡಿದ್ದು  ಕೈಯಿಂದ ಮೈ ತುಂಬಾ ಹೊಡೆದನು. ಆಗ ನನ್ನ ಮಾವ ಅಹ್ಮದ ಹುಸೇನ ಇತನು ಕೂಡ ನೀನು ನಿನ್ನ  ಹೇಳಿದ ಹಾಗೇ ಕೇಳಿಕೊಂಡು ಕಾರಣ ಮದುವೆ ಆದಾಗಿನಿಂದ ತವರು ಮನೆಯಿಂದ 10 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೂದಲು ಹಿಡಿದು ಜಗ್ಗಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ನನ್ನ ಗಂಡ ಅತ್ತೆ ಮಾವ ಮೈದನು ಮತ್ತು ನಾದಿನಿಯರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಸೇಡಂ ಠಾಣೆ : ದಿನಾಂಕ: 28-06-17 ರಂದು ಮುಂಜಾನೆ ಶ್ರೀ ನರಸಪ್ಪ ತಂದೆ ಹುಸನಪ್ಪ ಚಾಕಣಿ, ಸಾ|| ತೆಲ್ಕೂರ, ತಾ|| ಸೇಡಂ ರವರೊಂದಿಗೆ ತಮ್ಮನಾದ ಶರಣಪ್ಪ, ಬಸಪ್ಪ, ಶಾಮರಾಯ ಅವರೊಂದಿಗೆ ಸುಭದ್ರಾ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲವನ್ನು ನೀನೆ ಯಾಕೆ ಬಿತ್ತಿದ್ದಿ ಅಂತಾ ಜಗಳ ತೆಗೆದು ಬಡಿಗೆಯಿಂದ ಎಡಗೈಗೆ ಜೋರಾಗಿ ಹೊಡೆದು ಭಾರಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 June 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:27/06/2017 ರಂದು ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಫ್ಲೊರಾ ಶಾಲೆ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ  ಮೇರೆಗೆ ಶ್ರೀ ಎ.ಪೌಲ್‌ ಎಎಸ್‌ಐ ರಾಘವೆಂಸ್ರ ನಗರ ಪೊಲೀಸ್‌ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಡಿಸೆಂಟ್‌ ಫಂಕ್ಷನ್‌ ಹಾಲ್‌ ಮುಂದೆ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಟಿ ಅಂಗಡಿಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ಪಂಚರನ್ನು ತೊರಿಸಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ನಾನು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಮಕ್ತುಂಸಾಬ ತಂದೆ ಮದರಸಾಬ ಮುಲ್ಲಾ ಸಾ:ಖಣಿ ಏರಿಯಾ ಜಿಲನಾಬಾದ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್‌ ಪೆನ್‌, 2 ಮಟಕಾ ಬರೆದ ಚೀಟಿ, ನಗದು ಹಣ 900/-ರೂಗಳು ದೊರೆತಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಜಯ ತಂದೆ  ಮಲ್ಲಪ್ಪಾ  ಸಾ; ಮಂಗಲ ಪೇಟ  ಮಥೆಡ್ ಚರ್ಚ ಹತ್ತಿರ ಬೀದರ ರವರು ರಮಜಾನ ಹಬ್ಬದ ಪ್ರಯುಕ್ತ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾ ದರ್ಶನಕ್ಕೆಂದು ನಾನು ಮತ್ತು ನನ್ನ ಗೆಳೆಯರಾದ  2) ಮಹಮ್ಮದ ಇಬ್ರಾಹಿ ತಂದೆ ಮಹಮ್ಮದ ಅಜಿ 3) ಮಹಮ್ಮದ ಯುಸುಫ ತಂದೆ ಮಹಮ್ಮದ ಇಸ್ಮಾಯಿಲ್ 4) ಮಹಮ್ಮದ ನಯಿಮ ತಂದೆ ಖಯ್ಯೂಮ 5) ಮಹಮ್ಮದ ಆಶೀಫ ತಂದೆ ಮಹಮ್ಮದ ಇಸ್ಮಾಯಿಲ್ 6) ಸ್ಟಾರವೆಲ್ಲ ತಂದೆ ಡೇವಿಡ 7) ಶೇಖರ @ ಮಹಮ್ಮದ ಖಾಜಾ 8) ಶಹಬಾಜ ತಂದೆ ಅಬ್ದುಲ ಶುಕುರ 9) ಸುಲ್ತಾನ ತಂದೆ ಹೈದರ 10) ಆರೀಫ ತಂದೆ ಜಬ್ಬಾರ ಮತ್ತು 11) ಮಹಮ್ಮದ ಇಮ್ತಿಯಾಜ ತಂದೆ ನಸೀರ ಸಾ;ಎಲ್ಲರೂ ಅಬ್ದುಲ ಫೈಜಲ ದರ್ಗಾ ಹತ್ತಿರ ಹೈದ್ರಾಬಾದ ರೋಡ ಬೀದರ ಎಲ್ಲರೂ ಕೂಡಿಕೊಂಡು ಮಹಮ್ಮ ಇಮ್ತಿಯಾಜ ಇತನ ಟಾಟಾ ಎ.ಸಿ.ಇ. ವಾಹನ ಸಂ. ಕೆ.ಎ.32-ಬಿ8838 ನೆದ್ದರಲ್ಲಿ  ದಿನಾಂಕ. 26-6-2017 ರಂದು ಬೀದರದಿಂದ ಕಲಬುರಗಿಗೆ ಬಂದಿದ್ದು , ರಾತ್ರಿ ದರ್ಗಾದಲ್ಲಿ ಹಾಲ್ಟ ಮಾಡಿ ದಿನಾಂಕ. 27-6-2017 ರಂದು ಮುಂಜಾನೆ ದರ್ಗಾ ದರ್ಶನ ಮಾಡಿಕೊಂಡು 8-00 ಎ.ಎಂ.ಕ್ಕೆ. ದರ್ಗಾದಿಂದ ನಾವು ತೆಗೆದುಕೊಂಡು ಬಂದ ಸದರಿ ಟಾಟಾ ಎ.ಸಿ.ಇ. ವಾಹನದಲ್ಲಿ ಬೀದರಕಡೆಗೆಬರುತಿದ್ದೇವು ಸದರಿ ವಾಹನವನ್ನು  ಮಹಮ್ಮದ ಇಮ್ತಿಯಾಜ ನಡೆಯಿಸುತತ್ತಿದ್ದು ಅವನ ಪಕ್ಕದಲ್ಲಿ ಕ್ಯಾಬಿನದಲ್ಲಿ  ಮಹಮ್ಮದ ನಯೀಮ ಹಾಗೂ ಸುಲ್ತಾನ ಕುಳಿತಿದ್ದು ಉಳಿದ  8 ಜನರು  ಹಿಂದುಗಡೆ ಕುಳತಿದ್ದೇವು , ಹುಮನಾಬಾದರೋಡಿನ ಅವರಾಧ (ಬಿ) ಗ್ರಾಮದ ಸಮೀಪ ಹೋಗುತಿದ್ದಾಗ ನಮ್ಮ ಚಾಲಕನಿಗೆ ವಾಹನ ಸಾವಕಾಶ ನಡೆಯಿಸು ಅಂತಾ ಹೇಳಿದರು ಕೂಡಾ  ಕೇಳದೆ ತನ್ನ ವಾಹನವನ್ನು ಬಹಳ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು  ಹೋಗಿ ಅವರಾಧ (ಬಿ) ಗ್ರಾಮದ ಬ್ರೀಜ ಹತ್ತಿರ ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದ ಒಬ್ಬ ವ್ಯಕ್ತಿಗೆ ಜೋರಾಗಿ ಡಿಕ್ಕಿ ಹೊಡೆದು ಮುಂದೆ ರೋಡಿ ಪಕ್ಕದಲ್ಲಿರುವ ಗಿಡಕ್ಕೆ ಜೊರಾಗಿ ಡಿಕ್ಕಿ ಹೊಡೆದೆನು. ಇದರಿಂದ ನನಗೆ ಎದೆಯ ಬಲಭಾಗದಲ್ಲಿ ಗುಪ್ತ ಪೆಟ್ಟು , ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ.ಮತ್ತು 2) ಮಹಮ್ಮದ ಇಬ್ರಾಹಿ ತಂದೆ ಮಹಮ್ಮದ ಅಜಿಜ ಇತನಿಗೆ  ಎರಡು ಮೊಳಕಾಲ ಮೇಲೆ ಗುಪ್ತ ಪೆಟ್ಟು, ಮೈಮೇಲೆ ಅಲ್ಲಿ ಒಳಪೆಟ್ಟಾಗಿರುತ್ತದೆ. 3) ಮಹಮ್ಮದ ಯುಸುಫ ತಂದೆ ಮಹಮ್ಮದ ಇಸ್ಮಾಯಿಲ್  ಬಲಹಣೆಗೆ ರಕ್ತಗಾಯ , ಊಗಿನಿಂದ ರಕ್ತಸ್ರಾವ , ಟೊಂಕಕ್ಕೆ ಗುಪ್ತಪೆಟ್ಟಾಗಿರುತ್ತದೆ.5) ಮಹಮ್ಮದ ಆಶೀಫ ತಂದೆ ಮಹಮ್ಮದ ಇಸ್ಮಾಯಿಲ್  ಇತನಿಗೆ ಎದೆಗೆ ಗುಪ್ತ ಪೆಟ್ಟ, ಬಲಪಕ್ಕೆಗೆ ಗುಪ್ತಪೆಟ್ಟು , ಚಿನ್ನಕ್ಕೆ ಗುಪ್ತ ಪೆಟ್ಟಾಗಿ ತರಚಿದ ರಕ್ತ ಗಾಯವಾಗಿರುತ್ತದೆ ,6) ಸ್ಟಾರವೆಲ್ಲ ತಂದೆ ಡೇವಿಡ ಇತನಿಗೆ  ತಲೆಗೆ ಗುಪ್ತಗಾಯ, 7) ಶೇಖರ @ ಮಹಮ್ಮದ ಖಾಜಾ ಇತನಿಗೆ ಗಟಬಾಯಿಗೆ ರಕ್ತಗಾಯ , ತಲೆಗೆ ಭಾರಿ ಪೆಟ್ಟಾಗಿ ರಕ್ತಗಾಯ , ಬಾಯಿಂದ ರಕ್ತಸ್ರಾವಾಗಿರುತ್ತದೆ ಬಲಗಣ್ಣಿಗೆ ಪೆಟ್ಟಾಗಿರುತ್ತದೆ.  8) ಶಹಬಾಜ ತಂದೆ ಅಬ್ದುಲ ಶುಕುರ  ಎಡಮೊಗಲಗಿ ಗುಪ್ತಪೆಟ್ಟಾಗಿರುತ್ತದೆ  10) ಆರೀಫ ತಂದೆ ಜಬ್ಬಾರ  ಮುಖಕ್ಕೆ ಭಾರಿ ಪೆಟ್ಟಾಗಿ ಬಾಯಿಯಿಂದ ರಕ್ತಸ್ರಾವವಾಗಿರುತ್ತದೆ  ಹಾಗೂ ವಾಹನದ ಕ್ಯಾಬಿನದಲ್ಲಿ ಕುಳಿತಿದ್ದ 4) ಮಹಮ್ಮದ ನಯಿಮ ತಂದೆ ಖಯ್ಯೂಮ  ಇತನಿಗೆ  ಎಡಮೊಳಕಾಲಕೆಳಗೆ ರಕ್ತಗಾಯ , ಬಗಾಲತೊಡೆಗೆ ಗುಪ್ತಪೆಟ್ಟಾಗಿರುತ್ತದೆ. ಮತ್ತು  9) ಸುಲ್ತಾನ ತಂದೆ ಹೈದರ  ಇತನಿಗೆ ಎಡಗಾಲು ಮೊಳಕಾಲಿಗೆ ಭಾರಿ ರಕ್ತಗಾಯ , ಎಡಗಣ್ಣಿನ  ಹತ್ತಿರ ರಕ್ತಗಾಯ , ಹಾಗೂ  ವಾಹನ ಚಾಲಕನಿಗೆ  11) ಮಹಮ್ಮದ ಇಮ್ತಿಯಾಜ ತಂದೆ ನಸೀರ ಇತನಿಗೆ ಎಡಗಣ್ಣಿನ ಹತ್ತಿರ , ತಲೆ ಮೇಲೆ ತರಚಿದ ರಕ್ತಗಾಯ ,ಎಡಗಾಲು ಮೊಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಹಾಗೂ  ನಡೆದುಕೊಂಡು ಹೋಗುತಿದ್ದ ವ್ಯಕ್ತಿಗೆ ಡಿಕ್ಕಿಯಾಗಿ ಕೆಳಗೆ ಬಿದ್ದ ವ್ಯಕ್ತಿ ಹೆಸರು ಕೇಳಿ ಗೊತ್ತಾದ ಕಲ್ಯಾಣಿ @ ಕಲ್ಯಾಣರಾವ ತಂದೆ ಶಿವಪ್ಪಾ ನಾಕಮನ ಸಾ;ಬಬಲಾದ ಇತನಿಗೆ ಎಡಗಣ್ಣಿ ಮೇಲೆ ರಕ್ತಗಾಯ, ಹಾಗೂ ತಲೆಗೆ ಬಾರಿ ಪೆಟ್ಟಾಗಿರುತ್ತದೆ. , ಹೊಟ್ಟೆಯ ಮೇಲೆ ತರಚಿದ ರಕ್ತಗಾಯ ವಾಗಿ ಮಾತನಾಡುತಿರಲಿಲ್ಲಾ ಅಷ್ಟರಲ್ಲಿ 108 ಅಂಬುಲೆನ್ಸ ಬಂದಿದ್ದು ಎಲ್ಲರನ್ನು ಅಂಬುಲೆನ್ಸದಲ್ಲಿ ಕೂಡಿಕೊಂಡು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಬಂದು ತೊರಿಸಿದಾಗ ಸದರಿ ಕಲ್ಯಾಣಿ @ ಕಲ್ಯಾಣರಾವ ನಾಕಮನ ಮೃತ ಪಟ್ಟಿರುವದಾಗಿ ವೈದ್ಯರು ತಿಳಿಸಿದರು ಉಳಿದವರು ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ಕೆಲವು ಜನರು ಎ.ಎಸ್.ಎಂ. ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಸೇಡಂ ಠಾಣೆ : ದಿನಾಂಕ: 26-06-17 ರಂದು 1] ದೇವಿಂದ್ರಪ್ಪ ತಂದೆ ಶರಣಪ್ಪ ಹಂಚನಾಳ  2] ದತ್ತು ತಂದೆ ದೇವಿಂದ್ರಪ್ಪ ಹಂಚನಾಳ  3] ಸಿದ್ದು ತಂದೆ ಪೀರಪ್ಪ ಹಂಚನಾಳ, 4] ಜಗನ್ನಾಥ ತಂದೆ ದೇವಿಂದ್ರಪ್ಪ ಹಂಚನಾಳ ಎಲ್ಲರೂ ಸಾ|| ಬಿಬ್ಬಳ್ಳಿ, ತಾ||ಸೇಡಂ ರವರು ಮನೆಯ ಮುಂದೆ ಬಿಬ್ಬಳ್ಳಿ ಗ್ರಾಮದಲ್ಲಿ ಮರಗಮ್ಮ ಗುಡಿಯ ಕಟ್ಟುವ ಸಲುವಾಗಿ ಬುನಾದಿಯನ್ನು ಹಾಕುತ್ತಿದ್ದು, ಸದರಿ ಬುನಾದಿ ಮಣ್ಣು ರೋಡಿನ ಮೇಲೆ ಹಾಕಿದ್ದರು.  ಸದರಿ ರಸ್ತೆಯ ಮೇಲಿನ ಮಣ್ಣಿನ ವಿಷಯದಲ್ಲಿ ಶ್ರೀ ರಾಯಪ್ಪ ತಂದೆ ಶಂಕ್ರಪ್ಪ ದೊಡ್ಡಮನಿ ಸಾ|| ಬಿಬ್ಬಳ್ಳಿ, ತಾ|| ಸೇಡಂ ಹಾಗು ಆರೋಪಿತರ ಮಧ್ಯೆ ಜಗಳವಾಗಿ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿಗೆ  ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 June 2017

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಾಲಸೂದಲು ತಂದೆ ಕೃಷ್ಣಯ್ಯ ಗುಂಟಪಲ್ಲಿ ಸಾಃ ಕನಹಳ್ಳಿ ತಾಃ ಸುರಪೂರ ರವರು ಮತ್ತು ಹೆಂಡತಿ ಮಕ್ಕಳು ಸುಮಾರು 18 ವರ್ಷದ ಹಿಂದೆ ನಮ್ಮ ಸ್ವಂತ ಊರು ಆಂದ್ರಪ್ರದೇಶದ ಅಗ್ರಹಾರಮ್  ಬಿಟ್ಟು ಯಾದಗಿರಿ ಜಿಲ್ಲೆಯ  ಸೂರಪೂರ ತಾಲೂಕಿನ ಕನ್ನಹಳ್ಳಿ ಗ್ರಾಮಕ್ಕೆ ಬಂದು ಇಲ್ಲಿಯೇ ವಾಸವಾಗಿರುತ್ತೆವೆ, ನನ್ನ ಮಗನಾದ ಸುನೀಲ ಇತನು ಈಗ 3 ವರ್ಷಗಳ ಹಿಂದೆ ಜೇವರಗಿ ತಾಲೂಕಿನ ಸಜ್ಜನ ಶೇಟ್ಟಿ ಇವರ ಹೊಲ ಪಾಲಿಗೆ ಮಾಡಿ  ತನ್ನ ಹೆಂಡತಿ ಮಕ್ಕಳೊಂದಿಗೆ ಜೇವರಗಿ ಸೀಮಾಂತರದ ಸಜ್ಜನ ಶೇಟ್ಟಿ ಇವರ ಹೊಲದಲ್ಲಿಯೇ ಮನೆ ಮಾಡಿಕೊಂಡು  ವಾಸವಾಗಿದ್ದನು  ನಾವು ಆಗಾಗ್ಗೆ  ಅವನ ಹತ್ತಿರ ಬಂದು ಹೋಗಿ ಮಾಡುತ್ತಿದ್ದೆವು. ನಾನು ಮತ್ತು ನನ್ನ ಹೆಂಡತಿ ಲಕ್ಮೀ ಇಬ್ಬರೂ ನನ್ನ ಮಗನಿಗೆ ಮಾತನಾಡಿಸಿಕೊಂಡು ಹೋಗಬೇಕೆಂದು ನೀನ್ನೆ ದಿ. 25.06.2017 ರಂದು ನಮ್ಮ ಮಗನ ಹತ್ತಿರ ಬಂದಿದ್ದೆವು. ಇಂದು ದಿ. 26.06.2017 ರಂದು ಮುಂಜಾನೆ ನನ್ನ ಮಗನಾದ ಸುನೀಲ ಗುಂಟುಪಲ್ಲಿ ಇತನು ಜೇವರಗಿಯಲ್ಲಿ ಕೆಲಸ ಇದೆ. ನಾನು ಜೇವರಗಿಗೆ ಹೋಗಿ ಬರುತ್ತೆನೆ ಎಂದು ಹೇಳಿ ಸಜ್ಜನ ಶೆಟ್ಟಿ ಇವರ ಹತ್ತಿರ ಕೆಲಸ ಮಾಡುವ ಕರಣಪ್ಪ ತಂದೆ ಶರಣಪ್ಪ ಯನಗುಂಟಿ ಸಾಃ ಆಂದೊಲಾ ಇತನು ನಡೆಯಿಸುವ ಮೊಟಾರ್ ಸೈಕಲ ಮೇಲೆ ಕುಳಿತಕೊಂಡು ಹೋದನು. ನಾನು ಮತ್ತು ನನ್ನ ಹೆಂಡತಿ ಸೊಸೆ ಎಲ್ಲರೂ ಹೊಲದಲ್ಲಿನ ಮನೆಯಲ್ಲಿಯೇ ಇದ್ದೆವು. ಮುಂಜಾನೆ 9.00  ಸುಮಾರಿಗೆ ಜೇವರಗಿಯಿಂದ ಶಿವು ನಾಟೀಕಾರ ಇತನು ಪೊನ ಮಾಡಿ ನೀಮ್ಮ ಮಗ ಸುನೀಲ ಇತನಿಗೆ ಜೇವರಗಿ ಪಟ್ಟಣದ ಸರಕಾರಿ ಆಸ್ಪತ್ರೆ ಎದುರು ರೋಡಿನಲ್ಲಿ ಎಕ್ಸಿಟೆಂಟ್ ಆಗಿರುತ್ತದೆ ಅವನು ಸ್ಥಳಲ್ಲಿಯೇ ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದ್ದು  ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ  ಸೋಸೆ ನಾಗಮಣಿ ಮೂವರು ಕೂಡಿ ಎಕ್ಸಿಡೆಂಟ್ ಆದ ಸ್ಥಳಕ್ಕೆ ಬಂದಾಗ ಅಲ್ಲಿ ನನ್ನ ಮಗನ ಹೆಣ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ಹಾಕಿರುತ್ತಾರೆಂದು ಗೊತ್ತಾಗಿ ಆಸ್ಪತ್ರೆಗೆ ಹೋಗಿ ನೋಡಲು ನನ್ನ ಮಗನ  ಹಣೆಯ ಮೇಲೆ, ಗಲ್ಲದ ಮೇಲೆ, ಬಲ ಮುಂಗೈ ಹತ್ತಿರ  ತರಚಿದ ಗಾಯವಾಗಿದ್ದವು. ಅವನು ಮೃತಟ್ಟಿದ್ದು ಅಲ್ಲಿಯೇ ಇದ್ದ ಶಿವು  ನಾಟೀಕಾರ ಇತನಿಗೆ ಕೇಳಲಾಗಿ ಅವನು  ಹೇಳಿದ್ದೆನೆಂದರೆ ನಾನು ಮತ್ತು ನನ್ನ ಗೆಳೆಯ ಶಿವಲಿಂಗಪ್ಪ ತಂದೆ ಭೀಮರಾಯ ಶಿವಗೊಂಡ, ಬಸಯ್ಯ ತಂದೆ ಬಸಲಿಂಗಯ್ಯ ಸ್ವಾಮಿ ಮೂವರು ಕೂಡಿ ಇಂದು ದಿ 26.06.2017 ರಂದು ಮುಂಜಾನೆ 8.30 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ  ಸರಕಾರಿ ಆಸ್ಪತ್ರೆ ಎದುರು ಜೇವರಗಿ – ಶಹಾಪೂರ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ವೇಳೆಗೆ ಜೇವರಗಿ ಪಟ್ಟಣದ ಸಿಂದಗಿ ಕ್ರಾಸ್ ಕಡೆಯಿಂದ  ಕರಣಪ್ಪ ತಂದೆ ಶರಣಪ್ಪ ಯನಗುಂಟಿ ಇತನು ತನ್ನ ಮೊಟಾರ್  ಸೈಕಲ ಮೇಲೆ ಸುನೀಲ ಇತನಿಗೆ ಹಿಂದೆ ಕೂಡಿಸಿಕೊಂಡು  ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನಲ್ಲಿ ಡಿವೈಡರ್ ಕ್ಕೆ ಡಿಕ್ಕಿಪಡಿಸಿದನು ಆಗ ಹಿಂದೆ ಕುಳಿತ ಸುನೀಲ ಇತನು  ಮೊಟಾರ್ ಸೈಕಲ ಮೇಲಿಂದ ರೋಡಿನಲ್ಲಿ ಬಿದ್ದನು. ಆಗ ನಾವು ಮೂವರು ಕೂಡಿ  ಹೋಗಿ ನೋಡಲು ಸುನೀಲ ಇತನಿಗೆ ಹಣೆಯ ಮೇಲೆ, ಗಲ್ಲದ ಮೇಲೆ, ಬಲ ಮುಂಗೈ ಹತ್ತಿರ  ತರಚಿದ ಗಾಯವಾಗಿದ್ದವು ಅವನಿಗೆ ಎಬ್ಬಿಸಿದರು ಎಳಲಿಲ್ಲಾ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದನು ಮೊಟಾರ್ ಸೈಕಲ ನಂ ನೋಡಲಾಗಿ ಅದರ ನಂ ಕೆಎ-32-ವಾಯ್-2889 ನೇದ್ದು ಇತ್ತು. ಅದರ ಸವಾರ ಕರಣಪ್ಪ ಇತನು ಸುನಿಲ ಸತ್ತಿದ್ದು ನೋಡಿ ಮೊಟಾರ್ ಸೈಕಲ ಸ್ಥಳದಲ್ಲಿಯೇ  ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಯಡ್ರಾಮಿ ಠಾಣೆ :  ಶ್ರೀ ಹಳ್ಳೆಪ್ಪ ತಂದೆ ಪೀರಪ್ಪ ಹಳ್ಳದಕೇರಿ ಸಾ: ಮಳ್ಳಿ ತಾ: ಜೇವರ್ಗಿ ರವರ ಅಣ್ಣ ತಮ್ಮಕಿಯವರಾದ ತಿಪ್ಪಣ್ಣ ಗೌಂಡಿ, ಬಸಪ್ಪ ಹಳ್ಳದಕೇರಿ, ಹಳ್ಳೆಪ್ಪ ತಂದೆ ಚಂದ್ರಾಮ ಹಳ್ಳದಕೇರಿ ಹೀಗೆಲ್ಲರ ಮನೆಗಳು ಒಂದೆ ಕಡೆ ಇದ್ದು ಎಲ್ಲರ ಮನೆಯ ಮುಂದೆ ಬಯಲು ಜಾಗೆ ಇರುತ್ತದೆ. ಆ ಜಾಗೆಯಲ್ಲಿ ತಿಪ್ಪಣ್ಣ ತಂದೆ ಹಳ್ಳೆಪ್ಪ ಗೌಂಡಿ ಇತನು ನಮ್ಮೆಲ್ಲರಿಗೂ ಬರತಕ್ಕಂತ ಜಾಗೆಯಲ್ಲಿ ಬುನಾದಿ ಹಾಕುತ್ತಿದ್ದಾಗ ನಾವು ಗ್ರಾಮ ಪಂಚಾಯತಿ ಮಳ್ಳಿಯಲ್ಲಿ ತಕರಾರು ಅರ್ಜಿ ಹಾಕಿರುತ್ತೆನೆ. ಆಗ ಗ್ರಾಮ ಪಂಚಾಯತಿಯವರು ಕಟ್ಟಡ ಮಾಡುವುದನ್ನು ನಿಲ್ಲಿಸಿರುತ್ತಾರೆ. ಅಂದಿನಿಂದ ತಿಪ್ಪಣ್ಣ ಗೌಂಡಿ ಹಾಗೂ ಆತನ ಮಕ್ಕಳಾದ ವಿಯಕುಮಾರ, ಸಂತೋಷ ಇವರೆಲ್ಲರೂ  ನಮಗೆ ಕಟ್ಟಡ ಮಾಡುವುದು ನಿಲ್ಲಿಸಿದ್ದಿರಿ ನೀಮಗೆ ಒಂದಿಲ್ಲ ಒಂದು ದಿನ ಖಲಾಸ ಮಾಡಿಯೇ ಬಿಡುತ್ತೆವೆ ಅಂತಾ ಓದರಾಡುತ್ತಿದ್ದು ಆದರು ಕೂಡಾ ಎಲ್ಲರೂ ಅಣ್ಣತಮ್ಮಕಿಯರೆಂಬ ಭಾವನೆಯಿಂದ ಸುಮ್ಮನಿದ್ದೆವು. ದಿನಾಂಕ: 26-06-2017 ರಂದು ಬೆಳಿಗ್ಗೆ 9=00 ಗಂಟೆಯ ಸುಮಾರಿಗೆ ನಮ್ಮ ಎಲ್ಲರ ಮನೆಯ ಮುಂದೆ ಖುಲ್ಲಾ ಜಾಗೆಯಲ್ಲಿ  1) ತಿಪ್ಪಣ್ಣ ತಂದೆ ಹಳ್ಳೆಪ್ಪ ಹಳ್ಳದಕೇರಿ 2) ವಿಜಯಕುಮಾರ ತಂದೆ ತಿಪ್ಪಣ್ಣ ಹಳ್ಳದಕೇರಿ  3) ಸಂತೋಷ ತಂದೆ ತಿಪ್ಪಣ್ಣ ಹಳ್ಳದಕೇರಿ ಇವರುಗಳು ಕಟ್ಟಡ ಮಾಡುತ್ತಿದ್ದಾಗ ನಾನು , ನನ್ನ ಹೆಂಡತಿ ನಾಗಮ್ಮ , ಮಗನಾದ ಶಂಕರೆಪ್ಪ ಹಾಗೂ ನಮ್ಮ ಅಣ್ಣತಮ್ಮಕೀಯ ಹಳ್ಳೆಪ್ಪ ತಂದೆ ಬಸಪ್ಪ ಹಳ್ಳದಕೇರಿ , ರೇಣುಕಾ ಗಂಡ ಹಳ್ಳೆಪ್ಪ ಹಳ್ಳದಕೇರಿ, ಸುಮಿತ್ರಾ ಗಂಡ ಹಳ್ಳೆಪ್ಪ ಹಳ್ಳದಕೇರಿ ಹೀಗೆಲ್ಲರೂ ಕೂಡಿಕೊಂಡು ತಿಪ್ಪಣ್ಣನು ಕಟ್ಟಡ ಕಟ್ಟುವ ಜಾಗೆಯಲ್ಲಿ ಹೋಗಿ ಈ ಜಾಗೆ ಎಲ್ಲರಿಗೂ ಸಂಭಂದ ಪಟ್ಟಿದ್ದು ಇದ್ದು ಇಲ್ಲಿ ಕಟ್ಟಡ ಮಾಡಬೇಡಿರಿ ಅಂತಾ ಅಂದಿದ್ದಕ್ಕೆ ಅವರೆಲ್ಲರೂ ಕೊಲೆ ಮಾಡುವ ಉದ್ದೇಶದಿಂದ ನಾವು ಈ ಜಾಗೆಯಲ್ಲಿ ಕಟ್ಟಡ ಮಾಡಿಯೇ ತಿರುತ್ತೆವೆ ನೀವು ಯಾರು ಕೇಳುವವರು ಬೋಸಡಿ ಮಕ್ಕಳೆ ಅಂತಾ ಬೈದು ಅವರಲ್ಲಿ ತಿಪ್ಪಣ್ಣ ಇತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆ ಬಡೆ ಮಾಡಹತ್ತಿದನು ಆಗ ನನ್ನ ಹೆಂಡತಿಯಾದ ನಾಗಮ್ಮ ಜಗಳವನ್ನು ಬಿಡಿಸಲು ಬಂದಾಗ ವಿಜಯಕುಮಾರ  ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಹೆಂಡತಿಯ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಪಡಿಸಿದನು ನಂತರ ನನ್ನ ಮಗ ಶಂಕ್ರೆರೆಪ್ಪ ಬಿಡಿಸಲು ಬಂದಾಗ ವಿಜಕುಮಾರ ಇತನು ಅದೆ ಕೊಡಲಿಯಿಂದ ನನ್ನ ಮಗನ ತಲೆಯ ಹಿಂಬಾಗದಲ್ಲಿ ಹೊಡೆದು ರಕ್ತಗಾಯಪಡಿಸಿದನು. ಆಗ ನನ್ನ ಅತ್ತಿಗೆಯಾದ ರೇಣುಕಾ ಇವಳು ಜಗಳವನ್ನು ಬಿಡಿಸಿಕೊಳ್ಳಲು ಬಂದಾಗ ಸಂತೋಷ ತಂದೆ ತಿಪ್ಪಣ್ಣ ಗೌಂಡಿ ಬಡಿಗೆಯಿಂದ ಬೆನ್ನಿನ ಮೇಲೆ ಹೊಡೆದಿರುತ್ತಾನೆ. ಆಗ ಜಗಳವನ್ನು ನಮ್ಮ ಅಣ್ಣತಮ್ಮಕೀಯ ಮಗ ಹಳ್ಳೆಪ್ಪ ತಂದೆ ಬಸಪ್ಪ ಹಳ್ಳದಕೇರಿ, ಸುಮಿತ್ರಾ ಗಂಡ ಹಳ್ಳೆಪ್ಪ ಹಳ್ಳದಕೇರಿ  ಇವರುಗಳು ಬಂದು ಜಗಳವನ್ನು ಬಿಡಿಸಿಕೊಂಡಿರುತ್ತಾರೆ. ಅವರೆಲ್ಲರೂ ಅಲ್ಲಿಂದ ಹೋಗುವಾಗ ಈ ಕಟ್ಟಡ ಕಟ್ಟದೆ ಬಿಡುವುದಿಲ್ಲ ಆ ವೇಳೆ ತಡೆದಲ್ಲಿ ನೀಮಗೆ ಖಲಾಸ ಮಾಡಿಯೇ ಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಸೈಯದ ಆಸೀಫ್ ತಂದೆ ಮಸ್ತಾನಸಾಬ ಸಾ|| ರಹಮತ ನಗರ ಸೇಡಂ, ತಾ|| ಸೇಡಂ ರವರ ಮಾವನಾದ ಮಹ್ಮದ ಇಬ್ರಾಹಿಂ ಇತನಿಗೆ 1. ಯುನಸ್ ತಂದೆ ಮಹ್ಮದ ಹುಸೇನ 2. ಇದಿರೀಶ ತಂದೆ ಮಹ್ಮದ ಹುಸೇನ 3. ಆಹ್ಮದ@ಅಮ್ಮು ತಂದೆ ಮಹ್ಮದ ಹುಸೇನ 4. ಇರ್ಫಾನ ತಂದೆ ಬಾಬಾ ಎಲ್ಲರೂ ಸಾ|| ಕೆ.ಇ.ಬಿ ಕಾಲೋನಿ ಸೇಡಂ ಇವರು ಕುಡಿಕೊಂಡು ತಮ್ಮ ಹೊಟೇಲ್ ಮುಂದ ಮೋಟಾಸೈಕಲ್ ಯಾಕೆ ಹಚ್ಚಿದ್ದಿ ಅಂತಾ ಜಗಳ ತೆಗೆದು ಅವಾಚ್ಯ ಶಬ್ಗಳಿಂದ ಬೈದು ಹೊಡೆಬಡೆ ಮಾಡಿ ಬಿಡಿಸಲು ಹೋದ ನನಗು ಸಹ ಹೊಡೆಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.