POLICE BHAVAN KALABURAGI

POLICE BHAVAN KALABURAGI

27 April 2017

Kalaburagi District Reported Crimes

ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀಮತಿ ಮಧುಮತಿ ಗಂಡ ಬೈರವೇಶ ಮಠಪತಿ ಸಾ : ತಾಜಸುಲ್ತಾನಪೂರ ರವರು ದಿನಾಂಕ 25/04/17 ರಂದು ಮಧ್ಯಾಹ್ನ ಸಮಯದಲ್ಲಿ ಬಂಬೂ ಬಜಾರದಲ್ಲಿ ಶಿವಶರಣಪ್ಪ ಇತನು ತನಗೆ ನೋಡಿ ತನ್ನ ಮೇಲೆ ರೇಪ ಕೇಸ ಮಾಡಿಸುತ್ತೀ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ತಕರಾರು ಅರ್ಜಿ ವಿಷಯ ವಿಚಾರಿಸಿಕೊಂಡು ತಾಜ ಸುಲ್ತಾನಪೂರಕ್ಕೆ ಗ್ರಾಮಕ್ಕೆ ಮಧ್ಯಾಹ್ನ 03-30 ಗಂಟೆ ಸುಮಾರಿಗೆ ಶಿವಶರಣಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ ಇತನ ಮನೆಯ ಮುಂದಿನಿಂದ ಹಾಯ್ದು ಹೋಗುತ್ತಿದ್ದನ್ನು  1. ಶಿವಶರಣಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ, 2. ಅಣವೀರಪ್ಪ @ ಅಣ್ಣೆಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ 3. ನಾಗರಾಜ ತಂದೆ ಗುರುಲಿಂಗಪ್ಪ ಬೆಡಜುರ್ಗಿ 4. ಶ್ರವಣಕುಮಾರ ತಂದೆ ಗುರುಲಿಂಗಪ್ಪ ಬೆಡಜುರ್ಗಿ 5. ರೇವಣಸಿದ್ಧಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ 6.  ಶ್ರೀಶೈಲ ತಂದೆ ಗುರುಲಿಂಗಪ್ಪ ಬೆಡಜುರ್ಗಿ, 7. ಶಿವಮ್ಮಾ ಗಂಡ ಗುರುಲಿಂಗಪ್ಪ ಬೆಡಜುರ್ಗಿ, 8. ಲಕ್ಷ್ಮೀ ಗಂಡ ಶ್ರವಣಕುಮಾರ ಬೆಡಜುರ್ಗಿ,  9. ನಾಗಮ್ಮಾ ತಂದೆ ಗುರುಲಿಂಗಪ್ಪ ಬೆಡಜುರ್ಗಿ ಸಾ: ಎಲ್ಲರೂ ತಾಜ ಸುಲ್ತಾನಪೂರ ಗ್ರಾಮ ಕುಡಿಕೊಂಡು ಫಿರ್ಯಾದಿದಾರಳಿಗೆ ನೋಡಿ ಈ ರಂಡಿ ರೇಪ ಮಾಡಿಸಿ ಮತ್ತೆ ನಿನ್ನೆ ನಮ್ಮ ಮೇಲೆ ಚೌಕ ಪೊಲೀಸ ಠಾಣೆಯಲ್ಲಿ ಸುಳ್ಳು ಕಂಪ್ಲೇಟ ಕೊಟ್ಟಿರುತ್ತಾಳೆ ಇವತ್ತು ಇವಳಿಗೆ ಬಿಡಬೇಡರಿ ಖಲಾಷ ಮಾಡಿರಿ ಅಂತಾ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಡಿಗೆಯಿಂದ, ಬಾರಿಗೆಯಿಂದ ಕೈಯಿಂದ ಫಿರ್ಯಾದಿದಾರಳಿಗೆ ಮತ್ತು ಜಗಳಾ ಬಿಡಿಸಲು ಬಂದ ಅವಳ ತಾಯಿ ಶಂಕ್ರೆಮ್ಮಾ ತಲೆಯ ಮೇಲೆ ಮತ್ತು ಮೈಮೇಲೆ ಹೊಡೆ ಬಡಿ ಮಾಡಿ ಜೀವ ಭಯ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ನಾಗರಾಜ ತಂದೆ ಗುರಲಿಂಗಪ್ಪ ಬೆಡಜುರಗಿ ಸಾ : ತಾಜಸುಲ್ತಾನಪೂರ ರವರು ದಿನಾಂಕ:- 26/04/2017 ರಂದು ಮದ್ಯಾಹ್ನ ಎತ್ತುಗಳಿಗೆ ನೀರು ಕುಡಿಸುತ್ತಿದ್ದಾಗ ಅವನ ತಮ್ಮ ಶ್ರವಣಕುಮಾರನ ಹೆಂಡತಿ ಲಕ್ಷ್ಮಿ ಇವಳು ಮನೆಯ ಎದುರು ಕುಳಿತುಕೊಂಡಿದ್ದಳು ಆಗ ನಮ್ಮ ಗ್ರಾಮದ 1) ಮಲ್ಲಯ್ಯಾ ತಂದೆ ಸೋಮಯ್ಯಾ ಮಠಪತಿ, 2) ಮದುಮತಿ ಗಂಡ ಬೈರವೇಶ ಮಠಪತಿ 3) ತಾಯಿ ಶಂಕರೆಮ್ಮಾ ಗಂಡ ಸೋಮಯ್ಯಾ ಮಠಪತಿ 4) ಮಲ್ಲಯ್ಯಾನ ಅಕ್ಕನ ಮಗಳು ಅರ್ಚನಾ ಮತ್ತು 5) ಆಕೆಯ ಗೆಳತಿ ನಾಗಮ್ಮಾ ಎಲ್ಲರೂ ಕೂಡಿಕೊಂಡು ನಮ್ಮ ಮನೆಯ ಎದುರು ಬಂದ್ದಿದ್ದು ಮಲ್ಲಯ್ಯಾ ಇತನು ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದಿದ್ದನು ಆಗ ಮದುಮತಿ ಇವಳು ಲಕ್ಷ್ಮಿ ಇವಳಿಗೆ ಮದುಮತಿ ಇವಳು ಏ ರಂಡಿ ನಿಮ್ಮ ಮೈದುನ ಎಲ್ಲಿದ್ದಾನೆ ಹೇಳ ನಾವು ಸುಳ್ಳು ಅರ್ಜಿ ಕೊಟ್ಟಿರುತ್ತೇವೆ ಅಂತಾ ಹೇಳುತ್ತಿರಿ ಇವತ್ತು ನಿಮಗೇ ಗತಿ ಕಾಣಿಸುತ್ತೇವೆ ಅಂತಾ ಬೈಯ್ಯುತ್ತಾ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಮಲ್ಲಯ್ಯ ಕೈಯಲ್ಲಿ ತಲವಾರ ಮತ್ತು ಬಡಿಗೆ ಹಿಡಿದುಕೊಂಡು ಬಂದು ಫಿರ್ಯಾದಿಗೆ ಮತ್ತು ಅವನ ಮನೆಯವರಿಗೆ ಕೊಲೆ ಮಾಡುವ ಉದ್ದೇಶದಿಂದ ಶ್ರವಣಕುಮಾರ ಇತನ ಎಡ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು ಅಲ್ಲದೇ ಜಗಳಾ ಬಿಡಿಸಲು ಬಂದ ಫಿರ್ಯಾದಿದಾರನಿಗೆ ಬಡಿಗೆಯಿಂದ ತಲೆ ಮೇಲೆ ಹೊಡೆದು ರಕ್ತಗಾಯಪಡಿಸಿ ಮಾರಣಾಂತಿಕ ಹಲ್ಲೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 24/04/2017 ರಂದು ಸಾಯಂಕಾಲ ಗಂಜ ಏರಿಯಾದ  ದರ್ಬಾರ ಹೊಟೇಲ್ ಕ್ರಾಸದಿಂದ ಸಂಜೀವ ನಗರ ರಸ್ತೆಯಲ್ಲಿ ಬರುವ ಪ್ರೇಮಜಿ ದಾಲಮಿಲ್ ಹತ್ತಿರ ಮಲ್ಲಿಕಾರ್ಜುನ ಈತನು ರಸ್ತೆ ಎಡಬದಿಯಿಂದ  ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಟಂ ಟಂ ವಾಹನ ನಂಬರ್ ಕೆಎ 32  ಎ-1416 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಲ್ಲಿಕಾರ್ಜುನ ಈತನಿಗೆ ಡಿಕ್ಕಿ ಪಡಿಸಿ ತಲೆಗೆ ಭಾರಿ ರಕ್ತ ಗಾಯಗೊಳಿಸಿದ್ದರಿಂದ ಮಲ್ಲಿಕಾರ್ಜುನ ಈತನಿಗೆ ಉಪಚಾರ ಕುರಿತು ಎ ಎಸ್ ಎಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರಿಯವನಿಗೆ  ಅಘಾತದಲ್ಲಿ ಆದ ಗಾಯವನ್ನು ಕಲಬುರಗಿ ಎ ಎಸ್ ಎಂ ಆಸ್ಪತ್ರೆಯಲ್ಲಿ ವಾಸಿಯಾಗದೆ ಇದ್ದ  ಕಾರಣ ವೈಧ್ಯರ ಸಲಹೆ ಮೇರೆಗೆ ಗಾಯಾಳು  ಮಲ್ಲಿಕಾರ್ಜುನ ಈತನ ಅಣ್ಣನಾದ ಶೇಖಪ್ಪ ಈತನು ತನ್ನ ತಮ್ಮನಿಗೆ  ಹೆಚ್ಚಿನ ಉಪಚಾರ ಕುರಿತು ದಿನಾಂಕ  25/04/2017 ರಂದು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಮಲ್ಲಿಕಾರ್ಜುನ ಈತನಿಗೆ ಅಪಘಾತದಲ್ಲಿ ಆದ ಗಾಯವನ್ನು ವಾಸಿಯಾಗದೆ   ದಿನಾಂಕ 26/04/2017  ರಂದು ಮುಂಜಾನೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಶೇಖಪ್ಪ ತಂದೆ ಸೋಮಣ್ಣಾ ಗಡೇಸೂರ ಸಾ : ಸಂಜೀವ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 April 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 25/04/17 ರಂದು ಮೃತ ಗುಂಡಪ್ಪ ಇತನು ಹೊಂಡಾ ಸೈನ ಕೆಎ 32 ಎಸ 595 ಮೇಲೆ ಕುಳಿತುಕೊಂಡು ತಾಜ ಸುಲ್ತಾನಪೂರ ಗ್ರಾಮದಿಂದ ಕಲಬುರಗಿ ಕಡೆಗೆ ಹೊರಟಿದ್ದು, ರಾತ್ರಿ 09-30  ತಾಜ ಸುಲ್ತಾನಪೂರ ರೋಡಿನ, ಕಮಲನಗರ ಕಾಲನಿ ಪುಲಚಂದ ಇಟ್ಟಂಗಿ ಭಟ್ಟಿ ಎದುರುಗಡೆ ಬಂದಾಗ ಅದೇ ಸಮಯಕ್ಕೆ ಎದುರುನಿಂದ ಹಿರೋ ಸ್ಪೆಂಡರ ಕೆಎ 32 ಇಇ 6945 ಚಾಲಕ ಮಲ್ಲಿಕಾರ್ಜುನ ಇತನು ಹಿಂದೆ ರಾಜೇಶ ಗಿರೆಗೋಳ ಇತನಿಗೆ  ಕೂಡಿಸಿಕೊಂಡು ತನ್ನ ವಶದಲ್ಲಿದ್ದ  ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ಬಂದವನೇ ಗುಂಡಪ್ಪನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಡಿಕ್ಕಿ ಹೊಡೆದ ರಭಸಕ್ಕೆ ಗುಂಡಪ್ಪ ಇತನು ಮೋಟಾರ ಸೈಕಲ ಮೇಲಿಂದ ಹಾರಿ ರೋಡಿನ ಮೇಲೆ ಬಿದ್ದಾಗ ಅದೇ ಸಮಯಕ್ಕೆ ಗುಂಡಪ್ಪನ  ಹಿಂದಿನಿಂದ ಟ್ಯಾಕ್ಟ್ರರ ಇಂಜನ ನಂಬರ ಕೆಎ  33 ಟಿಎ 3948 ಮತ್ತು ಟ್ರಾಲಿ ನಂಬರ ಕೆಎ 33 ಟಿ 9925 ಅದರ ಕೆಳಗಡೆ ಕೆಎ 29  203  ಚಾಲಕ ತನ್ನ ವಶದಲ್ಲಿದ್ದ ಟ್ಯಾಕ್ಟ್ರರನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ರೋಡಿನ ಮೇಲೆ ಬಿದ್ದ ಗುಂಡಪ್ಪನ  ತಲೆಯ ಮೇಲಿಂದ ಹಾಯಿಸಿಕೊಂಡು ಹೋಗಿದ್ದರಿಂದ ಅವನ ತಲೆ ಚಪ್ಪಟೆಯಾಗಿ ಭಾರಿ ರಕ್ತಗಾಯವಾಗಿ ರಕ್ತ ಸ್ರಾವದಿಂದ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಟ್ಯಾಕ್ಟ್ರರ ಚಾಲಕ ಮುಂದೆ ಹೋಗಿ ಟ್ಯಾಕ್ಟ್ರರ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅದರಂತೆ ಮಲ್ಲಿಕಾರ್ಜುನಿನಗೆ ಸಣ್ಣ ಪುಟ್ಟಗಾಯಗಳಾಗಿದ್ದರಿಂದ ಅವನು ಅಲ್ಲಿಂದ ಓಡಿ ಹೋಗಿದ್ದು ರಾಜೇಶ  ಇತನಿಗೆ ರಕ್ತಗಾಯ ಮತ್ತು ಭಾರಿ ಗುಪ್ತಗಾಯಗಳಾಗಿದ್ದರಿಂದ ಅವನಿಗೆ ಅವನ ಗೆಳೆಯ  ಶಿವರಾಜ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿ 108 ಅಂಬುಲೈನ್ಸ ಗಾಡಿಯಲ್ಲಿ  ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ಅಂತಾ ಶ್ರೀಮತಿ ರೇಖಾ ಗಂಡ ಗುಂಡಪ್ಪ ಸುತಾರ ಸಾ : ತಾಜಸುತ್ತಾನಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಬಾಬುರಾವ್ ಕಡವೆ ಸಾಃ ಬಾಲ ಹನುಮಾನ ಗುಡಿ ಹಿಂದುಗಡೆ ಲಮಾಣಿ ತಾಂಡಾ ಫಿಲ್ಟರ್ ಬೇಡ್ ಕಲಬುರಗಿ ರವರು ದಿನಾಂಕ 24.04.2017 ರಂದು ಎಂದಿನಂತೆ ನನ್ನ ಎಮ್ಮೆ, ಕೋಣಗಳನ್ನು ನನ್ನ ಮನೆಯ ಅಂಗಳದ ಮುಂದೆ ಕಟ್ಟಿ ನಾನು ಕುಡಾ ಅಲ್ಲಿಯೆ ಮಲಗಿದ್ದು, ಮಧ್ಯರಾತ್ರಿಯಲ್ಲಿ ದಿನಾಂಕ: 25.04.2017 ರಂದು ನಸುಕಿನ ಜಾವ ಅಂದಾಜು 3.00 ಗಂಟೆ ಸುಮಾರಿಗೆ ನನಗೆ ಎಚ್ಚರವಾಗಿ ನೋಡಿದಾಗ, ನಾನು ಮನೆಯ ಮುಂದೆ ಕಟ್ಟಿದ್ದ 03 ಎಮ್ಮೆ, 01 ಕೋಣಗಳು ಇರಲಿಲ್ಲಾ. ಯಾರೋ ಕಳ್ಳರು ನನ್ನ 03 ಎಮ್ಮೆ, 01 ಕೋಣಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳುವಾದ 03 ಎಮ್ಮೆಗಳ ಅಃಕಿಃ 2,00,000/- 01 ಕೋಣದ ಕಿಮ್ಮತ್ತು ಅಃಕಿಃ 50,000/- ರೂಗಳು ಹಿಗೆ ಒಟ್ಟು 2,50,000/-ರೂ ಬೆಲೆಬಾಳುವ ದನಗಗಳು ಇರುತ್ತವೆ. ನಂತರ ನಾನು & ಇತರರು ಸೇರಿ ಎಲ್ಲಾಕಡೆ ಎಮ್ಮೆ, ಕೋಣಗಳನ್ನು ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುರುಶಾಂತ ತಂದೆ ಮಲ್ಲಪ್ಪ ದೋಡ್ಡಮನಿ ಸಾ|| ಶಿವಪೂರ  ಗ್ರಾಮ ಇವರು ದಿನಾಂಕ 25-04-2017 ರಂದು ಸಾಯಂಕಾಲ ನನ್ನ  ಮೋಟರ ಸೈಕಲ ಮೇಲೆ ನಮ್ಮೂರಿನ ಬಸವಣ್ಣ ದೇವರ ಗುಡಿಯ ಮುಂದೆ ಹೋಗುತ್ತಿದ್ದಾಗ ಶಿವಣ್ಣ ತಂದೆ ದೌಲಪ್ಪ ಸೋನ್ನ ಇವರ ಮಗಳು ನನ್ನ ಮೋಟರ ಸೈಕಲಕ್ಕೆ ಅಡ್ಡ ಬಂದಾಗ ನಾನು ತಕ್ಷಣ ಮೋಟರ ಸೈಕಲಕ್ಕೆ ಬ್ರೇಕ್  ಹಾಕಿದೇನು, ಆಗ ಅಲ್ಲೆ ಇದ್ದ 1) ಶಿವಣ್ಣ ತಂದೆ ದೌಲಪ್ಪ ಸೋನ್ನ 2) ಜಗಪ್ಪ ತಂದೆ ದೌಲಪ್ಪ ಸೋನ್ನ 3) ಉಮ್ಮಣ್ಣ ತಂದೆ ದೌಲಪ್ಪ ಸೋನ್ನ ಸಾ|| ಎಲ್ಲರೂ ಶಿವಪೂರ ಇವರು ನನ್ನ ಹತ್ತಿರ ಬಂದು ಶಿವಣ್ಣ ಈತನು ಏನೋ ಬೋಸಡಿ ಮಗನೆ ನಮ್ಮ ಹುಡುಗಿಗೆ ಮೋಟರ ಸೈಕಲ ಹಾಯಿಸುತ್ತಿದ್ದೇ ನೋಡಿಕೊಂಡು ಹೊಡೆಯೊದಕ್ಕೆ ಬರೊದಿಲ್ಲಾ ಅಂತಾ ಬೈದನು, ಆಗ ನಾನು ನಿಮ್ಮ ಹುಡುಗಿನೆ ಮೋ/ಸೈ ಕ್ಕೆ ಅಡ್ಡ ಬಂದಿದೆ ಯಾಕ ಬೈತಿ ಅಂತಾ ಕೇಳಿದೆನು, ಅದಕ್ಕೆ ಶಿವಣ್ಣ ಈತನು ನನ್ನ ಮೇಲೆ ಇದ್ದ ಹಿಂದಿನ ಜಗಳದ ದ್ವೇಷದಿಂದ ಬೋಸಡಿ ಮಗನೆ ಮತ್ತ ನಮಗೆ ಎದರ ಮಾತಾಡ್ತಿ ಅಂತಾ ಅಲ್ಲೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ಏಡಗೈ ಹಸ್ತದ ಮೇಲೆ ಹೊಡೆದು ಮೂಗಿನ ಮೇಲೆ ಕೈಯಿಂದ ಹೊಡೆದನು. ಉಳಿದವರೆಲ್ಲರೂ ಕೂಡಿ ಕೈಯಿಂದ ಹೊಡೆಯುವುದು ಮತ್ತು ಕಾಲಿನಿಂದ ಒದೆಯುವುದು ಬೈಯುವುದು ಮಾಡಿರುತ್ತಾರೆ. ಸದರಿಯವರು ಮಗನೆ ನಿನಗೆ ಇಷ್ಟಕ್ಕೆ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 April 2017

Kalaburagi District Reported Crimes

ಗೋಡೆ ಕಟ್ಟುವಾಗ ಗೋಡೆ ಕುಸಿದು ಮೃತಪಟ್ಟ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಕಾಂತಾಬಾಯಿ @ ಕಾಂತಮ್ಮಾ ಗಂಡ ಕಳಸಪ್ಪ ಕಂಬಾಳೆ ಸಾ : ಸಾವಳಗಿ  (ಬಿ) ತಾ:ಜಿ:ಕಲಬುರಗಿ ಹಾವ : ಕೆಕೆ ನಗರ ಕಲಬುರಗಿ ಮತ್ತು ಶ್ರೀಮತಿ ಸರಗಮ್ಮಾಬಾಯಿ ಗಂಡ ಜಗನ್ನಾಥ ಸಾ:ಹರಸೂರ ತಾ:ಜಿ:ಕಲಬುರಗಿ ಹಾವ: ಕೆಕೆ ನಗರ ಕಲಬುರಗಿ ನಾಗೇಶ ತಂದೆ ಅರ್ಜುನ ಮದರೇಕರ್ ಸಾ:ಹರಸೂರ ತಾ:ಜಿ:ಕಲಬುರಗಿ ರವರು ದಿನಾಂಕ 24-04-2017 ರಂದು ವಿಜಯಕುಮಾರ ಇವರೊಂದಿಗೆ ಗೊಡೆ ಕಟ್ಟುವ ಕೆಲಸಕ್ಕೆ ಕಲಬುರಗಿ ನಗರದ ಇಂಡಸ್ಟ್ರೀಯಲ್ 2ನೇ ಪೇಸ್ ಮಹಮ್ಮದ ನಿಜಾಮೋದ್ದಿನ ಇವರ ದಾಲಮೀಲದಲ್ಲಿ ಕೆಲಸಕ್ಕೆ ಹೋಗಿದ್ದು ವಿಜಯಕುಮಾರ  ಗೊಡೆ ಕಟ್ಟಿತ್ತಿದ್ದಾಗ ದಾಲ ಮಿಲ್ ಮಸಿನ ಚಾಲು ಮಾಡಿದಾಗ ಅಲ್ಲೆ ಹಾಜರಿದ್ದ ನಮ್ಮ ಗುತ್ತೇದಾರ ನಾಗಣ್ಣಾ ಮತ್ತು ಮಶೀನ ಆಪರೇಟರ  ಒಂದು ಯಾಕೋ ಗೋಡೆ ಬಹಳಷ್ಟು ಅಲುಗಾಡುತ್ತಿದೆ ಅಂಥಾ ಹೇಳಿದಾಗ ಅವರಿಬ್ಬರು ದಿನಾ ಇದೇ ಮಾತು ಹೇಳುತ್ತಿರಿ  ಎನು ಆಗುವದಿಲ್ಲಾ ಮತ್ತು ಗೋಡೆ ಬಿಳುವುದಿಲ್ಲಾ ಸುಮ್ಮನೆ ಗೋಡೆ ಕಟ್ಟಿರಿ ಅಂತಾ ಹೇಳಿ ನಮಗೇ ಯಾವುದೇ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮ ಕೈಕೊಳ್ಳದೇ  ಗೋಡೆ ಕಟ್ಟುವ ಕೆಲಸಕ್ಕೆ ಹಚ್ಚಿದಾಗ ಗೋಡೆ ಕಟ್ಟುವ ಕೆಲಸ ಮಾಡುತ್ತಿದ್ದಾಗ ಸಾಯಂಕಾಲ 5-30 ಗಂಟೆಗೆ ದಾಲ ಮಿಲ್ ಮಸೇನ ಚಾಲು ಇದ್ದುದ್ದರಿಂದ ಗೋಡೆ ಅಲುಗಾ ಅಲುಗಾಡಿ ಒಮ್ಮಿಂದ ಒಮ್ಮಲೇ ಗೋಡೆ ಕುಸಿದು ಬಿದ್ದು ಗೊಡೆ ಅಸರೆಯಲ್ಲಿ ಕೆಲಸ ಮಾಡುತ್ತಿದ್ದ ಫಿರ್ಯಾದಿ, ಸರಗಮ್ಮಾಬಾಯಿ ಮತ್ತು ನಾಗೇಶ ತಂದೆ ಅರ್ಜುನ ಮದರೇಕರ್ ರವರ ಮೇಲೆ ಬಿದ್ದಿದ್ದು ನನಗು ಮತ್ತು ಸರಗಮ್ಮಾಬಾಯಿಗೆ ಗಾಯಗಳಾಗಿದ್ದು ನಾಗೇಶ ತಂದೆ ಅರ್ಜುನ ಮದರೇಕರ್ ಇವನು ಗೋಡೆಯ ಒಳಗಡೆ ಸಿಕ್ಕಿಬಿದ್ದಿದ್ದು ಅವನಿ ಹೊರಗೆ ತೆಗೆದು ಎಲ್ಲರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿ ವೈದ್ಯರು ನಾಗೇಶನಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು ನಮಗೇ ಯಾವುದೇ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮ ಕೈಕೊಳ್ಳದೇ  ಗೋಡೆ ಕಟ್ಟುವ ಕೆಲಸಕ್ಕೆ ಹಚ್ಚಿದ  1. ಮಹಮ್ಮದ ನಿಜಾಮೋದ್ದಿನ ತೇಲಿ ದಾಲಮೀಲ್ ಮಾಲಿಕ  2. ನಾಗಣ್ಣಾ ಗುತ್ತೆದಾರ  3. ಮಶೀನ್ ಆಪರೇಟರ್   ರವರ ಮೇಲೆ ಕ್ರಮ ಜರುಗಿಸಿರಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಉಸ್ಮಾನ ಬಾಷಾ ತಂದೆ ಜಾಫರಲಿ ಜಾಗೀರದಾರ ಸಾಃ ಚಿಗರಳ್ಳಿ ತಾಃ ಜೇವರಗಿ ರವರು ದಿನಾಂಕ  24.04.2017 ರಂದು  ಸಿಗರಥಹಳ್ಳಿ ಗ್ರಾಮದವರು  ಚಿಗರಳ್ಳಿ ಕ್ರಾಸ್ ಹತ್ತಿರ ಇರುವ ಹಜರತ ಸೈಯ್ಯದ ಪೀರ ದರ್ಗಾದಲ್ಲಿ ದೇವರ ಕಾರ್ಯಕ್ರಮ ಮಾಡಿದ್ದರು. ಆ ಕಾರ್ಯಕ್ಕೆ ಬರಲು ಹೇಳಿದರಿಂದ ನಾನು ಮತ್ತು ನನ್ನ ಗೆಳೆಯ ಮೌನೇಶ ತಂದೆ ಶರಣಪ್ಪ ಪೂಜಾರಿ ಇಬ್ಬರೂ ಹೊಗಿದ್ದೆವು ನಾವು ಅಲ್ಲಿಗೆ ಹೋಗಿ ಊಟ ಮಾಡಿ ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ದರ್ಗಾದಿಂದ ಮರಳಿ ಚಿಗರಳ್ಳಿಯ ಕಡೆಗೆ ಬರುತ್ತಿದ್ದೆವು. ಅದೇ ವೇಳೆಗೆ ಚಿಗರಳ್ಳಿ ಕಡೆಯಿಂದ ವಿಶ್ವನಾಥ ತಂದೆ ಸಾಯಿಬಣ್ಣ ಹೇಳವರ ಸಾಃ ಯಾಳವಾರ ಇತನು ಮೊಟಾರ್ ಸೈಕಲ ಮೇಲೆ  ಭೀಮಣ್ಣ ತಂದೆ ಶಿವಪ್ಪ ಸೂರಪೂರ ಇತನಿಗೆ ಮತ್ತು ಶರಣಪ್ಪ ತಂದೆ ನಿಂಗಪ್ಪ ಪೂಜಾರಿ ಸಾಃ ಚಿಕ್ಕ ಜೇವರಗಿ ಇತನಿಗೆ ಕೂಡಿಕೊಂಡು ದರ್ಗಾದಲ್ಲಿ ಊಟ ಮಾಡಲು ಬರುತ್ತಿದ್ದರು, ಜೇವರಗಿ-ಶಹಾಪೂರ ರೋಡ ದರ್ಗಾ ಹತ್ತಿರ ರೊಡಿನಲ್ಲಿ ಮೊಟಾರ್ ಸೈಕಲ ತಿರುಗಿಸುತ್ತಿದ್ದಾಗ ಜೇವರಗಿ ಕಡೆಯಿಂದ ಒಂದು ಮೊಟಾರ್ ಸೈಕಲ ಸವಾರನು ತನ್ನ ಮೊಟಾರ್ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ವಿಶ್ವನಾಥನ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದನು ಎರಡು ಮೊಟಾರ್ ಸೈಕಲ ಮೇಲಿದ್ದವರು  ತಮ್ಮ ತಮ್ಮ ಮೊಟಾರ್ ಸೈಕಲದೊಂದಿಗೆ ರೋಡಿನಲ್ಲಿ ಬಿದ್ದರು. ಆಗ ನಾನು ಮತ್ತು ಮೌನೇಶ ಹಾಗೂ ಅಲ್ಲಿಯೇ ಬರುತ್ತಿದ್ದ ಶರಣಪ್ಪ ತಂದೆ ಸಾಯಬಣ್ಣ ಪೂಜಾರಿ, ಸಾಯಿಬಣ್ಣ ತಂದೆ ಹಣಮಂತ ಖವಾಲ್ದಾರ  ಸಾಃ ಚಿಗರಳಿ ಎಲ್ಲರೂ ಹೋಗಿ ಎಬ್ಬಿಸಿ  ನೋಡಲಾಗಿ  ಶರಣಪ್ಪ ಪೂಜಾರಿ ಇತನ ತಲೆಗೆ & ಎಡ ಮೊಳಕಾಲಿಗೆ ರಕ್ತಗಾಯ, ಬಾಯಿಯಿಂದ ಕಿವಿಯಿಂದ, ಮೂಗಿನಿಂದ ರಕ್ತಸ್ರಾವವಾಗಿತ್ತು, ಅವನು ಮಾತನಾಡಿಸಿದರು ಮಾತನಾಡಲಿಲ್ಲಾ, ನಂತರ ಅವನ ಮುಂದೆ  ಕುಳಿತ ಭೀಮಣ್ಣ ಸುರಪೂರ ಇತನಿಗೆ  ತಲೆ ಗಾಯವಾಗಿತ್ತು ಮೊಟಾರ್ ಸೈಕಲ ನಡೆಯಿಸುತ್ತಿದ್ದ ವಿಶ್ವನಾಥ ತಂದೆ ಸಾಯಿಬಣ್ಣ ಹೇಳೂರ ಸಾಃ ಯಳವಾರ ಇತನಿಗೂ ತಲೆಗೆ ಓಳಪೆಟ್ಟು  ಆಗಿತ್ತು. ವಿಶ್ವನಾಥನ ಮೊಟಾರ್ ಸೈಕಲ ನಂಬರ  ನೋಡಲು ಕೆ.ಎ-36-ಇ.ಹೆಚ್-3487 ನೇದ್ದು ಇತ್ತು. ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದ ಮೊಟಾರ್ ಸೈಕಲ ನಂಬರ ನೋಡಲಾಗಿ ಅದು ಕೆ.ಎ-32-ಎಕ್ಸ್-4192 ನೇದ್ದು ಇತ್ತು ಅದರ ಸವಾರನಿಗೆ ನೋಡಲು ಹಣೆಯ ಮೇಲೆ ರಕ್ತ ಗಾಯವಾಗಿತ್ತು ಅವನ ಹೆಸರು ವಿಠಪ್ಪ ತಂದೆ ಭೀಮರಾಯ ಅಮ್ಮಾಪೂರ ಸಾಃ ಬೈಚಬಾಳ ಅಂತಾ ಗೊತ್ತಾಗಿರುತ್ತದೆ. ಅವನ ಹಿಂದೆ ಕುಳಿತವನಿಗೆ ಯಾವುದೇ ಗಾಯವಾಗಿರುವುದಿಲ್ಲಾ ಅವನ ಹೆಸರು  ಭೀಮಣ್ಣಾ ತಂದೆ ಜಯಪ್ಪ ಶೇಟ್ಟರ ಸಾಃ ಬೈಚಬಾಳ ಅಂತಾ ಗೊತ್ತಾಗಿರುತ್ತದೆ, ನಂತರ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಅಂಬುಲೇನ್ಸ್ ದಲ್ಲಿ ಶರಣಪ್ಪ ಪೂಜಾರಿ & ಮತ್ತು ಗಾಯವಾದವರಿಗೆಲ್ಲರಿಗೂ ಉಪಚಾರ ಕುರಿತು ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಉಪಚಾರ ಕೊಡಿಸಿ ಶರಣಪ್ಪನಿಗೆ ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸ್ ನಲ್ಲಿ ಹಾಕಿಕೊಂಡು ಕಲಬುರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ  ಜೇವರಗಿ ಪಟ್ಟಣದ ಹೊರ ವಲಯದ ಕೊಳಕೂರ ಕ್ರಾಸ್ ಹತ್ತಿರ ಮಾರ್ಗ ಮದ್ಯ ಮದ್ಯಾಹ್ನ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ. ಸಿದ್ದಾರೋಡ ತಂದೆ ಬಸವಣಪ್ಪಾ ಮೂಲಗೆ ವಿಳಾಸ; ಸೈಯದ ಚಿಂಚೋಳಿ ಗ್ರಾಮ ತಾ;ಜಿ;ಕಲಬುರಗಿ ಇವರು  ದಿನಾಂಕ. 24-4-2017 ರಂದು ಮುಂಜಾನೆ ನಾನು ಮತ್ತು ನನ್ನ ಗೆಳೆಯ ಗುರುನಾಥ ಬಿಂಗೆ  ಇಬ್ಬರು ನನ್ನ ಮೋಟಾರ ಸೈಕಲ್ ಮೇಲೆ ಮತ್ತು ನನ್ನ ಅಣ್ಣ ಶರಣಬಸಪ್ಪಾ ಊರ್ಫ ಶಿವಶರಣಪ್ಪಾ ಮೂಲಗೆ ಇವನ ಮತ್ತು ಅವನ ಪರಿಚಯದವನಾದ ಚಾಂದಪಾಶ ತಂದೆ ಫತ್ರುಸಾಬ ಇವರಿಬ್ಬರು ಒಂದು ಹೀರೊಹೊಂಡಾ ಮೋಟಾರ ಸೈಕಲ್ ನಂ.ಕೆ.ಎ.36 ಇ.ಡಿ.3868 ಇವರ ಮೇಲೆ ಚೇಂಗಟಾ ಗ್ರಾಮಕ್ಕೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದು ಕಾರ್ಯಾಕ್ರಮ ಮುಗಿಸಿಕೊಂಡು ಮರಳಿ ಚೇಂಗಟಾದಿಂದ ಕಲಬುರಗಿಗೆ ಬರುತ್ತಿರುವಾಗ ನಮ್ಮ ಅಣ್ಣ ಶರಣಬಸ್ಸಪ್ಪಾ ಮತ್ತು ಅವನ ಗೆಳೆಯ ಚಾಂದಪಾಶಾ ಇಬ್ಬರು  ತಮ್ಮ ಮೋಟಾರ ಸೈಕಲ್ ಮೇಲೆ ಬರುತಿದ್ದರು ನಮ್ಮ ಅಣ್ಣ ಗಾಡಿ ನಡೆಯಿಸುತಿದ್ದರು ಚಾಂದಪಾಶಾ ಹಿಂದೆ ಕುಳಿತಿದ್ದನು ಮತ್ತು ನಾನು ಮತ್ತು ನನ್ನ ಗೆಳೆಯ  ಗುರುನಾಥ ಬಿಂಗೆ ನಮ್ಮ ಮೋಟಾರ ಸೈಕಲ್ ಮೇಲೆ ಹಿಂದೆ ಬರುತಿದ್ದೇವು ಸಂಜೆ 7-15 ಪಿ.ಎಂ. ಗಂಟೆ ಸುಮಾರಿಗೆ ಅವರಾದ (ಬಿ) ಗ್ರಾಮ ದಾಟಿ ತಾವರಗೇರಾ ಕ್ರಾಸ ಸಮೀಪ ನ್ಯೂ ಪರಿಸರ ದಾಬಾದ ಎದುರುಗಡೆ ನಮ್ಮ ಅಣ್ಣನವರು ಮೊಟಾರ ಸೈಕಲ್ ಮೇಲೆ ಹೋಗುತಿರುವಾಗ ಅದೇವೇಳೆಗೆ ಕಲಬುರಗಿಕಡೆಯಿಂದ  ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಬಹಳ ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದವನೆ ನಮ್ಮ ಅಣ್ಣ ಶರಣಬಸ್ಸಪ್ಪಾ ಇತನು ನಡೆಯಿಸುತಿದ್ದಾ ಮೋಟಾರ ಸೈಕಲಗೆ ಜೋರಾಗಿ ಡಿಕ್ಕಿ ಹೊಡೆದನು ಇದರಿಂದ ನಮ್ಮ ಅಣ್ಣ ಮತ್ತು ಅವರ ಗೆಳೆಯ ಮೋಟಾರ ಸೈಕಲ್  ಸಮೇತಾ ಕೆಳಗೆ ಬಿದ್ದನು ಆಗನಾನು ಮತ್ತು ನನ್ನ ಗೆಳೆಯ ಗುರುನಾಥ ತಂದೆ ಅಣ್ಣರಾವ ಬಿಂಗೆ ಹೋಗಿ ನೋಡಲಾಗಿ ನಮ್ಮ ಅಣ್ಣ ಶರಣಬಸ್ಸನಿಗೆ ತಲೆಗೆ ಭಾರಿ ರಕ್ತಗಾಯ ಮತ್ತು ಗುಪ್ತ ಪೆಟ್ಟಾಗಿ ಮೂಗಿನಿಂದ ರಕ್ತಸ್ರಾವಾ ಆಗುತಿದ್ದು ಮತ್ತು ಚಾಂದಪಾಶಾ ಇತನಿಗೆ ಕೈ ಕಾಲಿಗೆ ಅಲಲ್ಲಿ ಗಾಯಗಳಾಗಿದ್ದು ಅಪಘಾತ ಪಡಿಸಿದ ಮೋಟಾರ ಸೈಕಲ್ ನೋಡಲು ಹೀರೊಹೊಂಡ ಸ್ಪ್ಲೆಂಡರ ನಂ.ಕೆ.ಎ.32 ಇ.ಎ.8967 ನೆದ್ದು ಇದ್ದು ಜನರು ಸೇರುವಷ್ಟರಲ್ಲಿ ಈ ಮೋಟಾರ ಸೈಕಲ್  ಸವಾರನು ತನ್ನ ಮೋಟಾರ ಸೈಕಲ್ ನ್ನು ತೆಗೆದುಕೊಂಡು ಹಾಗೆ ಓಡಿಸಿಕೊಂಡು ಹೋದನು ಇತನಿಗೆ ನೋಡಿದಲ್ಲಿ ಗುರ್ತಿಸುತ್ತೇನೆ. ನಂತರ 108 ಅಂಬುಲೆನ್ಸಗೆ ಫೋನ ಮಾಡಿದ್ದು ಸ್ವಲ್ಪ ಸಮಯದ ನಂತರ  108 ಅಂಬುಲೆನ್ಸ ಸ್ಥಳಕ್ಕೆ  ಬಂದಿದ್ದು ಆಗನಾನು ಮತ್ತು ಗುರುನಾಥ ಬಿಂಗೆ ಇಬ್ಬರು ಕೂಡಿಕೊಂಡು ನನ್ನ ಅಣ್ಣನಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ವೈದ್ದಾಧಿಕಾರಿಗೆ ತೋರಿಸಲು ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.