POLICE BHAVAN KALABURAGI

POLICE BHAVAN KALABURAGI

08 April 2017

Kalaburagi District Reported Crimes

ಅಪಘಾತ ಪ್ರಕರಣ :
ಮುಧೋಳ ಠಾಣೆ : ದಿನಾಂಕ 07-04-2017 ರಂದು ಸಾಯಾಂಕಲ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರ ಹುಸೇನಪ್ಪಾ ತಂದೆ ಶರಣಪ್ಪಾ ಹರಿಜನ ಇವರು ನನಗೆ ಪೋನ್ ಮಾಡಿ  ನಮ್ಮುರ ದಿಂದ ಗಾಡದಾನ ಗ್ರಾಮಕ್ಕೆ ಹೊಗುವ ರಸ್ತೆಯಲ್ಲಿ  ಚಾಂದ ಮುತ್ಯಾ ಇವರ ಹೊಲದ ಹತ್ತಿರ ರಸ್ತೆಯಲ್ಲಿ ಟ್ರಾಕ್ಟರ ಪಲ್ಟಿಯಾಗಿದ್ದು ಇದರಿಂದ ಸದರಿ ಟ್ರಾಕ್ಟರದಲ್ಲಿ ಕುಳಿತಿದ್ದ ನಿಮ್ಮ ಬಾಬು ಅಣ್ಣನ ಮಕ್ಕಳಿಬ್ಬರ ಮೇಲೆ ಕಲ್ಲುಗಳು ಬಿದ್ದು ಭಾರಿಗಾಯಗಳಾಗಿರುತ್ತವೆ ಅಂತಾ ತಿಳಿಸಿದ್ದು ತಕ್ಷಣ ನಾನು ಮತ್ತು  ನಮ್ಮುರ  ನಮ್ಮ ಮಾವನಾದ ಹುಸೇನಪ್ಪಾ ತಂದೆ ಆಶಪ್ಪಾ ಆಶಪಗೋಳ ಮತ್ತು ಇತರರು ಸೇರಿ ನಮ್ಮೂರ ಹತ್ತಿರ ಇರುವ ಚಾಂದ ಮುತ್ಯಾ ಇವರ ಹೋಲದ ಹತ್ತೀರ ಹೋಗಿ ನೋಡಲಾಗಿ ಅಲ್ಲಿ ರಸ್ತೇಯ ಮೇಲೆ  ನಮ್ಮೂರ ಭೀಮಶಪ್ಪಾ ರಾಯಪ್ಪಗೋಳ ಇವರ ಟ್ರಾಕ್ಟರ ಪಲ್ಟಿಯಾಗಿ ಬಿದ್ದಿದ್ದು ನಮ್ಮ ಅಣ್ಣನ ಮಕ್ಕಳಾದ 1] ನರಸಿಂಹ ಮತ್ತು 2] ಮಂಜೂಳ ಹಾಗು ನಮ್ಮರ 3] ಹುಸನಪ್ಪಾ  ತಂದೆ ಹುಸನಪ್ಪಾ ಹರಿಜನ ಇವರುಗಳ ಮೆಲೆ ಟ್ರಾಕ್ಟರದಲ್ಲಿದ್ದ ಗುಂಡುಕಲ್ಲುಗಳು ಬಿದ್ದಿದ್ದು  ಆಗಾ ನಾವು ಮತ್ತು ಸದರಿ ಸುದ್ದಿ ತಿಳಿದು ನಮ್ಮ ಅಣ್ಣನಾದ ಬಾಬು ಇತನು ಅಲ್ಲಿಗೆ ಬಂದಿದ್ದು ನಾವು ಹಾಗು ರಸ್ತೆಯಿಂದ ಹೊಗಿ ಬರುವ ಜನರು ಕೂಡಿ ಗುಂಡು ಕಲ್ಲಿನ ಒಳಗಿದ್ದ ನಮ್ಮ ಅಣ್ಣನ ಮಕ್ಕಳಾದ ನರಸಿಂಹ ತಂದೆ ಬಾಬು ವ|| 10 ವರ್ಷ ಮತ್ತು ಮಂಜುಳಾ ತಂದೆ ಬಾಬು ವ|| 8 ವರ್ಷ ಹಾಗು ನಮ್ಮೂರ ಹುಸೇನಪ್ಪಾ ತಂದೆ ಹುಸೇನಪ್ಪಾ ಕುಂಟಸಾಯಪಗೋಳ ಇವರೆಲ್ಲರಿಗೆ ಮೆಲ್ಲೆತ್ತಿ ನೋಡಲಾಗಿ ನರಸಿಂಹ ಮತ್ತು ಮಂಜುಳಾ ಇವರ ತಲೆಗೆ ಹಾಗು ಮುಖಕ್ಕೆ ಮತ್ತು ಇತರಕಡೆ  ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಹುಸೇನಪ್ಪಾ ಇವರಿಗೆ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯ ಹಾಗು ಎರಡು ಕಾಲುಗಳಿಗೆ ಮತ್ತು ಇತರಕಡೆ ರಕ್ತಗಾಯ ಗುಪ್ತಗಾಯವಾಗಿ 3 ಜನರು ಬೇಹೋಸಾಗಿ ಬಿದ್ದಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಈ ಬಗ್ಗೆ  ನಮ್ಮ ಅಣ್ಣ ಬಾಬು ಇತನಿಗೆ ವಿಚಾರಿಸಲಾಗಿ ಅವನು ಹೇಳಿದ್ದನೆಂದರೆ ಇಂದು ಬೆಳಗ್ಗೆ ನಾನು ನನ್ನ ಇಬ್ಬರು ಮಕ್ಕಳಾದ ನರಸಿಂಹ ಮತ್ತು ಮಂಜುಳಾ ಇವರನ್ನು ನನ್ನ ಜೋತೆಗೆ ಕುರಿ ಕಾಯಲು ನಮ್ಮ ಹೋಲಕ್ಕೆ ಕರೆದುಕೊಂಡು ಹೋಗಿದ್ದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ನನ್ನ ಮಕ್ಕಳನ್ನು ಕರೆದುಕೊಂಡು ವಾಪಾಸ ಮನೆಗೆ ಬರುತ್ತಿದ್ದಾಗ ನಮ್ಮೂರ ನರಸಿಂಹಲು ತಂದೆ ಸೈಬಣ್ಣ ಹದಗಲ ಇತನು ನಮ್ಮೂರ ಅಡವಿಯಿಂದ ತನ್ನ ಟ್ಯಾಕ್ಟರ ನಂ ಎಪಿ 22 ವೈ 6569,-6568 ನೆದ್ದರಲ್ಲಿ ಗುಂಡು ಕಲ್ಲನ್ನು ತುಂಬಿಕೊಂಡು ಕೊಲ್ಕುಂದಾಕ್ಕೆ ಹೋಗುತ್ತಿದ್ದಾಗ ಸದರಿ ಟ್ಯಾಕ್ಟರನ್ನು ನಿಲ್ಲಿಸಿ ನನ್ನ ಮಕ್ಕಳಾದ ನರಸಿಂಹಲು ಮತ್ತು ಮಂಜುಳಾ ಇವರನ್ನು ಟ್ಯಾಕ್ಟರದಲ್ಲಿ ಕುರಿಸಿ ಊರಿಗೆ ಕಳುಯಿಸಿದ್ದು ಸದರಿ ಟ್ಯಾಕ್ಟರದಲ್ಲಿ ನಮ್ಮೂರ ಹುಸೇನಪ್ಪಾ ತಂದೆ ಹುಸೇನಪ್ಪಾ ಕುಂಟಸಾಯಪ್ಪೋಳ ಇತನು ಕೂಡ ಕುಳಿತುಕೊಂಡಿದ್ದು ಅವರು ಸದರಿ ಟ್ಯಾಕ್ಟರದಲ್ಲಿ ಕುಳಿತು ಹೋಗಿದ್ದು ನಾನು ನಮ್ಮ ಕುರಿಗಳನ್ನು ಹೋಡೆದುಕೊಂಡು ನಡೆದುಕೊಂಡು ಹಿಂದುಗಡೆ ಊರಕಡೆ ಬರುತ್ತಿದ್ದಾಗ    ರಸ್ತೆಯಂದ ಬರುತಿದ್ದ ಯಾರೊ ಒಬ್ಬ ವ್ಯ್ತಕಿ  ಮುಂದೆ ರಸ್ತಯಲ್ಲಿ ಕಲ್ಲು ತುಂಬಿದ ಟ್ರಾಕ್ಟರ ಪಲ್ಟಿಯಾಗಿದೆ ಸಣ್ಣ ಮಕ್ಕಳಿಗೆ ಬಹಳ ಪೆಟ್ಟಾಗಿದೆ ಅಂತಾ ತಿಳಿಸಿದ್ದು ತಕ್ಷಣ ನಾನು ಇಲ್ಲಿಗೆ ಓಡಿ ಬಂದಿರುತ್ತೇನೆ ಅಂತಾ ತಿಳಿಸಿರುತ್ತಾನೆ.ನಂತರ ನಾವು ಸದರಿ ನಮ್ಮ ಅಣ್ಣನ ಇಬ್ಬರು ಮಕ್ಕಳಿಗೆ ಮತ್ತು ಹುಸನಪ್ಪಾ ಇವರಿಗೆ ನಾನು ನಮ್ಮ ಅಣ್ಣ ಬಾಬು ಮತ್ತು ನಮ್ಮ ಮಾವ ಹುಸೇನಪ್ಪಾ ಇತರರು ಸೇರಿ ದಾರಿಯಲ್ಲಿ ಬರುತ್ತಿದ್ದ ನಮ್ಮುರ ದೇವಿಂದ್ರಪ್ಪಾ ಆಡಕಿ ಇವರ ಜೀಪಿನಲ್ಲಿ ಹಾಕಿಕೊಂಡು ಕೊಲ್ಕುಂದಾ ಸರಕಾರಿ  ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಉಪಚಾರ ಮಾಡಿಸಿದ್ದು  ಇಲ್ಲಿ ಡಾಕ್ಟರವರು  ನಮ್ಮ ಅಣ್ಣನ ಮಕ್ಕಳಾದ ನರಸಿಂಹ ಮತ್ತು ಮಂಜುಳಾ ಇವರಿಗೆ ಪರಿಕ್ಷೆಮಾಡಿ ಇವರಿಗೆ ಬಹಳ  ಸೀರಿಯಸ್ ಇದೆ ಹೆಚ್ಚಿನ ಉಪಚಾರ ಕುರಿತು ಸರಕಾರಿ ಅಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೊಗಿರಿ ಅಂತಾ ತಿಳಿಸಿದ್ದರಿಂದ ನಮ್ಮ ಅಣ್ಣನ ಇಬ್ಬರು ಮಕ್ಕಳಿಗೆ ನಾವು ಅಂಬುಲೆನ್ಸದಲ್ಲಿ ಹಾಕಿಕೊಂಡು ಸೇಡಂ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಅಲ್ಲಿ ವೈಧ್ಯರು ಸದರಿಯವರನ್ನು ನೋಡಿ ಕಲಬುರ್ಗಿಗೆ ಕರೆದುಕೊಂಡು ಹೋಗಿರಿ ಅಂತಾ ತಿಳಿಸಿದ್ದರಿಂದ ಸದರಿ ನಮ್ಮ ಅಣ್ಣಾ ಬಾಬು ಹಾಗು ಇತರರು ಕೂಡಿ ನಮ್ಮ ಅಣ್ಣನ ಇಬ್ಬರು ಮಕ್ಕಳಿಗೆ ಸೇಡಂದಿಂದ ಅಂಬುಲೆನ್ಸದಲ್ಲಿ ಹಾಕಿಕೊಂಡು ಕಲಬುರಗಿ  ದವಾಖನೆಗೆ ತೆಗೆದುಕೊಂಡು ಹೊಗಿದ್ದು  ನಾನು ಮತ್ತು ನಮ್ಮ ಮಾವ ಹುಸೇನಪ್ಪಾ ಇಬ್ಬರೂ ಸೇರಿ ಮುಧೊಳ ಪೊಲೀಸ ಠಾಣೆಗೆ ಕೇಸ್ ಮಾಡುವದಕ್ಕೆ ಬರುತ್ತಿದ್ದಾಗ ಇಗ ರಾತ್ರಿ 8 -00 ಗಂಟೆ ಸುಮಾರಿಗೆ ನಮ್ಮ  ಅಣ್ಣನದ  ಬಾಬು ಇತನು ಕಲಬುರಗಿಯಿಂದ ನನಗೆ ಪೋನಮಾಡಿ ಹೇಳಿದ್ದೆನೆಂದರೆ ನನ್ನ ಮಕ್ಕಳಾದ ನರಸಿಂಹಲು ಮತ್ತು ಮಂಜುಳಾ ಇವರಿಗೆ ಇಂದು ರಾತ್ರಿ 7-40 ಗಂಟೆಯ ಸುಮಾರಿಗೆ ಕಲಬುರ್ಗಿಯ ಯುನೈಟೇಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೆರಿಕೆಮಾಡಿದಾಗ ಡಾಕ್ಟರವರು  ನನ್ನ ಮಗಳಾದ ಮಂಜುಳಾ ಇವಳಿಗೆ  ಪರಿಕ್ಷೆ ಮಾಡಿ  ಇವಳು ಅಸ್ಪತ್ರೆಗೆ ತರುವಸ್ಟರಲ್ಲಿ ದಾರಿಯಲ್ಲಿಯೇ ಮೃತಪಟ್ಟಿದ್ದು ನೀವು ಇವಳ ಮೃತ ದೆಹಾವನ್ನು  ಸರಕಾರಿ ದವಖಾನೆ ಕಲಬುರಗಿಗೆ ತೆಗೆದುಕೊಂಡು ಹೊಗಿರಿ ಅಂತಾ ಹೇಳಿದ್ದು ಮತ್ತು ನನ್ನ ಮಗನಾದ ನರಸಿಂಹ ಇತನಿಗೆ ಸದರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿಕೊಂಡು ಉಪಚಾರಪಡಿಸುತ್ತಿದ್ದು ನಮ್ಮ ಮಗಳು ಮಂಜುಳಾ ಇವಳ ಮೃತದೇಹವನ್ನು ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ  ತೆಗೆದುಕೊಂಡು ಹೋಗುತ್ತಿರುವದಾಗಿ ತಿಳಿಸಿರುತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು
ಶಾಹಾಬಾದ ನಗರ ಠಾಣೆ : ಶ್ರೀ ಸುನೀಲ ತಂದೆ ರಾಮಚಂದ್ರ ಬೆಣ್ಣೂರ ಸಾ: ಮರತೂರ ಇವರು ಮತ್ತು ಅಣ್ಣ ಹಣಮಂತ ಇಬ್ಬರೂ ಕೂಡಿ ಕಲ್ಲು ತೆಗೆಯುತ್ತಿರುವಾಗ ಶ್ರೀನಿವಾಸ ತಂದೆ ಶರಣಪ್ಪ ಸಂಗಡ 06 ಜನರು ಸಾ: ಮರತೂರ ಗುಂಪು ಕಟ್ಟಿಕೊಂಡು ಬಂದು ಫಿರ್ಯಾದಿಗೆ ತಡೆದು ನಿಲ್ಲಿಸಿ ರಸ್ತೆಯಲ್ಲಿ ಹಾಕಿದ ಕಲ್ಲು ಯಾಕೆ ತೆಗೆಯುತ್ತಿರಿ ಬೋಸಡಿ ಮಕ್ಕಳೆ ಅಂತಾ  ಅವಾಚ್ಯವಾಗಿ ಬೈದಾಗ ನಾನು ಯಾಕೆ ಬೈಯುತ್ತಿರಿ ನಮ್ಮ ಮನೆಯಲ್ಲ ತೊಟ್ಟಿಲು ಕಾರ್ಯಕ್ರಮ ಇದೆ ಕಲ್ಲುಗಳು ತೆಗೆದರೆ ನಿಮಗೇನಾಯಿತು ಅಂತಾ ಅಂದಿದ್ದಕ್ಕೆ ಕೈಯಿಂದ , ಕಲ್ಲಿನಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ  ಅವಮಾನ ಮಾಡಿ ಜೀವ ಭಯ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಶಾಹಾಬಾದ ನಗರ ಠಾಣೆ : ದಿನಾಂಕ: 07/04/217 ರಂದು ಮುಂಜಾನೆ ಮನೆಯಲ್ಲಿದ್ದಾಗ ಎದುರು ಮನೆಯ ರಾಮಚಂದ್ರ ತಂದೆ ಶರಣಪ್ಪ ಬೆಣ್ಣೂರ  2) ನಾಗಮ್ಮ ಗಂಡ ರಾಮಚಂದ್ರ 3) ಹಣಮಂತ ತಂದೆ ರಾಮಚಂದ್ರ ಬೆಣ್ಣುರ 4) ಸುನೀಲ ತಂದೆ ರಾಮಚಂದ್ರ 5) ಅನೀಲ ತಂದೆ ರಾಮಚಂದ್ರ 6) ಶರಣಪ್ಪ ತಂದೆ ರಾಮಚಂದ್ರ 7) ಶಿವಕುಮಾರ ತಂದೆ ಮಲ್ಲಿಕಾರ್ಜುನ 8) ಅಣವೀರಮ್ಮಾ ಗಂಡ ಸುನೀಲ ಇವರೆಲ್ಲಾರೂ ಗುಂಪು ಕಟ್ಟಿಕೊಂಡು ಬಂದು ರಸ್ತೆಯ ಕಲ್ಲುಗಳು ತೆಗೆಯತ್ತಿದ್ದಾಗ ಯಾಕೆ ಕಲ್ಲು ತೆಗೆಯುತ್ತಿರಿ ಜಾಗ ನಮ್ಮದು ಇದೆ ಕಲ್ಲು ತೆಗೆಯಬೇಡಿ ಅಂತಾ ಕೇಳಿದಕ್ಕೆ ನನಗೆ ಮತ್ತು ನನ್ನ ತಾಯಿ ಕಾಂತಮ್ಮ ಇವಳಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಕೈ ಹಿಡಿದು ಎಳೆದಾಡಿ ಅವಮಾನ ಮಾಡಿರುತ್ತಾರೆ ಅಂತಾ ಶ್ರೀಮತಿ ಎಲಿಜಬಾಯಿ ತಂದೆ ಶರಣಪ್ಪ ಕುರಿ ಸಾ: ಮರತೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನೆಲೋಗಿ ಠಾಣೆ : ದಿನಾಂಕ: 7/04/2017 ರಂದು ಸಾಯಂಕಾಲ  ನಮ್ಮೂರಿನ ಆನಂದ ತಂದೆ ರಮೇಶ ಚನ್ನಯ್ಯಾ ತಂದೆ ಸಂಗಯ್ಯಾ, ಅಮರ ತಂದೆ ರಮೇಶ, ಅಶೋಕ ತಂದೆ ನಿಂಗಪ್ಪ ಕೂಡಿಕೊಂಡು ಟವೇರಾ ಜೀಪ ನಂ: ಕೆ,ಎ 51 ಬಿ 9866 ಇದನ್ನು ತಗೆದುಕೊಂಡು ರಂಜಣಗಿ ಗ್ರಾಮಕ್ಕೆ ಹೋಗಿದ್ದು ಹಣಮಂತ ನಾಟಿಕಾರ ಇವನು ನಡುಸುತ್ತಿದ್ದ ನಾವು ಪ್ರಚಾರ ಕುರಿತು ರಂಜಣಗಿ ಗ್ರಾಮಕ್ಕೆ ಹೊದಾಗ ನಮ್ಮ ಟವೇರಾ ಜೀಪಿನಿಂದ ಅಮರ ತಂದೆ ರಮೇಶ, ಅಶೋಕ ತಂದೆ ನಿಂಗಪ್ಪ ಇವರು ಇಳಿದು ಕಾರ್ಯಕ್ರಮದ ಕರ ಪತ್ರಗಳನ್ನು ಹಂಚುತ್ತಾ ಊರಲ್ಲಿ ಹೋಗಿದ್ದು ನಾನು ಮತ್ತು ಆನಂದ ತಂದೆ ರಮೇಶ ಚನ್ನಯ್ಯಾ ತಂದೆ ಸಂಗಯ್ಯಾ ಇವರು ಟವೇರಾ ಜೀಪಿನಲ್ಲಿದ್ದು ನಾವು ಕೂಡಾ ಹಾದಿಯಲ್ಲಿ ಬರುವ ಜನರಿಗೆ ಕರ ಪತ್ರಗಳನ್ನು ಕೊಡುತ್ತಾ ಊರಲ್ಲಿ ಹೋಗುತ್ತಿದ್ದಾಗ ಹರಿಜನವಾಡಾ ಕರೆಪ್ಪನ ಮನೆಯ ಮುಂದಿನ ರಸ್ತೆಯ ಮೇಲೆ ಹೋಗುತ್ಗಿದ್ದಾಗ ಸುಮಾರು 15-20 ಜನರು ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ನಮ್ಮಲ್ಲಿ ಬಂದು ಭೋಸಡಿ ಮಕ್ಕಳೆ ನಿಮ್ಮೂರಿನಲ್ಲಿ ಕಾರ್ಯಕ್ರಮ ಇದ್ದರೆ ನಮ್ಮೂರಿಗೆ ಬಂದು ಪ್ರಚಾರ ಮಾಡುತ್ತಿರಿ ಭೋಸಡಿ ಮಕ್ಕಳೆ ಎಂದು ಬೈಯುತ್ತಾ ಖಾಜಾ ಪಟೇಲ ತಂದೆ ರುಕುಂ ಪಟೇಲ  ಈತನು ತನ್ನ ಕೈಯಲ್ಲಿ ಬಡಿಗೆಯಿಂದ ಎಡಗೈ ಮೇಲೆ ಎಡಗಾಲಿನ ತೋಡೆಯ ಮೇಲೆ ಬಡಿಗೆಯಿಂದ ಹೋಡೆದನು. ಚನ್ನಯ್ಯಾ ತಂದೆ ಸಂಗಯ್ಯಾ ಇತನಿಗೂ ಅಜಮೀರ ಪಟೇಲ ತಂದೆ ಗುಲಾಬಬಾಷಾ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗೈ ಬೆರಳಿನ ಮೇಲೆ ಹೋಡೆದು ಗಾಯಗೋಳಿಸಿದನು ಮತ್ತು ಎಡಗಡೆ ಬೆನ್ನಿನ ಮೇಲೆ ಹೋಡೆದನು ಆಗ ಅಮರ ತಂದೆ ರಮೇಶ ಈತನು ಬಿಡಿಸಲು ಬಂದಾಗ ಅಜೀಜ ಪಟೇಲ ತಂದೆ ಖಾಜಾ ಪಟೇಲ ಇವನು ಕೈಯಿಂದ ದಬ್ಬಿದನು ಬಸೀರ ಪಟೇಲ ತಂದೆ ಇಬ್ರಾಹಿಂ ಪಟೇಲ, ಮಹ್ಮದ ಪಟೇಲ ತಂದೆ ಇಬ್ರಾಹಿಂ ಪಟೇಲ, ಸಾಹೇಬ ಪಟೇಲ ತಂದೆ ರುಕುಂ ಪಟೇಲ, ಸುಭಾನ ಪಟೇಲ ತಂದೆ ಸಾಹೇಬ ಪಟೇಲ, ರುಕುಂ ಪಟೇಲ ತಂದೆ ಮೈದುನ ಪಟೇಲ, ರಫೀಕ ಪಟೇಲ ತಂದೆ ರುಕುಂ ಪಟೇಲ, ಶಬ್ಬೀರ ಪಟೇಲ ತಂದೆ ಖಾಸಿಂ ಪಟೇಲ, ಖಾಸಿಂ ಪಟೇಲ ಹೊಸಮನಿ, ಗಪೂರ ಪಟೇಲ ತಂದೆ ಅಕ್ತರ ಪಟೇಲ, ರಜ್ಜಬಖಾನ ತಂದೆ ಖಾನಖಾಸಿಂ ಖಾನ, ಶಬ್ಬೀರ ಪಟೇಲ ತಂದೆ ಬಾವಾ ಪಟೇಲ, ಮೀರಾ ಪಟೇಲ ತಂದೆ ಖಾಸಿಂ ಪಟೇಲ, ರಾಜಾ ಪಟೇಲ ತಂದೆ  ಗುಲಾಬಾಷ, ಮೀರಾ ಪಟೇಲ ತಂದೆ ಖಾಜಾ ಪಟೇಲ, ಫಯಾಜ ತಂದೆ ಮೀರಾ ಪಟೇಲ, ಸಾಹೇಬ ಪಟೇಲ ತಂದೆ ಮೀರಾ ಪಟೇಲ, ಇವರೆಲ್ಲರೂ ಇದ್ದು ಭೋಸಡಿ ಮಕ್ಕಳ್ಯಾ ನಿಮ್ಮೂರಲ್ಲಿ ಪ್ರಚಾರ ಮಾಡುವದನ್ನು ಬಿಟ್ಟು ನಮ್ಮೂರಿಗೆ ಬಂದು ಕರ ಪತ್ರ ಹಂಚ್ಚುತ್ತಿರು ಭೋಸಡಿ ಮಕ್ಕಳ್ಯಾ ಎಂದು ನಮ್ಮ ಮೇಲೆ ಅವರ ಕೈಯಲ್ಲಿದ್ದ ಕಲ್ಲುಗಳನ್ನು ನಮ್ಮ ಮೇಲೆ ಹೋಡೆಯ ಹತ್ತಿದರು ಆಗ ಅಮರ ತಂದೆ ರಮೇಶ ವಿಜಾಪೂರ, ಅಶೋಕ ವಿಜಾಪೂರ , ಇವರು ಜಗಳವನ್ನು ಬಿಡಿಸಲು ಬಂದಿದ್ದು ಮತ್ತು ನೀವು ಇಲ್ಲಿ ಕರ ಪತ್ರ ಹಂಚ ಬೇಡಾ ಏಂದರೆ ನಾವು ಇಲ್ಲಿಂದ ಹೋರಟು ಹೋಗುತ್ತೇವೆಂದ ಅವರಿಗೆ ಕೈ ಮುಗಿದರು ಅವರು ನಮಗೆ ಬಡಿಗೆಯಿಂದ ಹೊಡೆ ಹತ್ತಿದ್ದರು ಆಗ ನಾವು ತಗೆದುಕೊಂಡು ಹೋದ ವಾಹನ ಚಾಲಕ ಹಣಮಂತನಿಗೂ ಕೂಡಾ ಮಗನೇ ನೀನು ಅವರ ಮಾತು ಕೇಳಿ ಜೀಪು ಇಲ್ಲಿಗೆ ತಗೆದುಕೋಂಡು ಬಂದಿದಿ ನೀನಗೂ ಮತ್ತು ನಿನ್ನ ಜೀಪಿಗೆ ಸುಟ್ಟು ಹಾಕುತ್ತೇವೆ ಎಂದು ಭೋಸಡಿ ಮಗನೆ ಎಂದು ಬಶೀರ ಪಟೇಲ ತಂದೆ ಮಹ್ಮದ ಪಟೇಲ ಇವರು ಕೈಯಿಂದ ಹೊಡೆದು ಕಾಲಿನಿಂದ ಒದೆ ಹತ್ತಿದರು ಆಗ ಅವನು ಜೀಪನ್ನು ಅಲ್ಲಿಯೇ ಬಿಟ್ಟು ಹಣಮಂತ ನಾಟಿಕಾರ ಇವರನ್ನು ಕರೆದುಕೊಂಡು ಹೋದರು ನಾವು ರಾಮನವಮಿ ಹನುಮ ಜಯಂತಿ ಪ್ರಚಾರಕ್ಕಾಗಿ ಹೋದಾಗ ನಮ್ಮನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಹೋಡೆದು ಕಲ್ಲುಗಳಿಂದ ಹೊಡೆದು ಜೀವದ ಬೇದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದವರ ವಿರುದ್ದ ಕಾನೂನಿನ ಕ್ರಮ ಜರಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪಂಪಣ್ಣಾ ತಂದೆ ಬಸಣ್ಣಾ ಸಾ: ಮನೆ ನಂ 3-691 ಮಿಲನ್‌ ಚೌಕ ಗಾಜೀಪೂರ ಕಲಬುರಗಿ ರವರು ಮತ್ತು ತನ್ನ ಹೆಂಡತಿ ಶರಣಬಸವೇಶ್ವರ ದೇವಾಸ್ಥನಕ್ಕೆ ದೇವರ ದರ್ಶನಕ್ಕೆಂದು ಹೋದಾಗ ಗುಡಿಯ ಒಳಬಾಗದಲ್ಲಿ ತೆಂಗಿನ ಕಾಯಿ ಮಾರುವವರ ಆವರಣದಲ್ಲಿ ದಿನಾಂಕ:02/03/2107 ರಂದು ಮಧ್ಯಾನ 2.30 ಗಂಟೆಗೆ ನನ್ನ ಹೆಸರಿಗೆ ಇರುವ KA36 X-7010 ಹೊಂಡಾಶೈನ ಬೈಕ್‌ ದೇವಸ್ಥಾನದಲ್ಲಿ ನಿಲ್ಲಿಸಿ ದರ್ಶನ ಮಾಡಿಕೊಂಡು ಬರುವಷ್ಟರಲ್ಲಿ ನನ್ನ ಗಾಡಿ ಕಳುವಾಗಿದ್ದು ಮಾನ್ಯರು ಬೈಕನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ  ಅಂಥಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 April 2017

Kalaburagi District Reported Crimes

 ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ರೂಪಚೆಂದ್‌ ತಂದೆ ಶಾಹು ಚವ್ಹಾಣ ಸಾ: ನೀಲೆಗಾಂವ ತಾ: ತುಳಜಾಪೂರ ಜಿ; ಉಸ್ಮನಾಬಾದ್‌  ರವರು ದಿನಾಂಕ: 06/04/2017 ರಂದು ಬೆಳಗ್ಗೆ ಜೀರೊಳ್ಳಿ ತಾಂಡಾದಲ್ಲಿ ನಿಂಬಾಜಿ ಚವ್ಹಾಣ ಇವರ ಮನೆಯಲ್ಲಿ ಹೊಸದಾಗಿ ಬೀಗಸ್ತನ ಮಾಡಿದ್ದು ಮದುವೆ ದಿನಾಂಕ ತೆಗೆಯಲು ನೀಲೆಗಾಂವದಿಂದ ಜಿರೋಳ್ಳಿ ಗ್ರಾಮಕ್ಕೆ ನಮ್ಮ ಮೋಟಾರ್‌ ಸೈಕಲ್‌ ನಂ; ಎಮ್‌ಹೆಚ್‌ 25- ಝಡ್‌-5463 ಬಜಾಜ್‌ ಡಿಸ್ಕವರಿ ಮೋಟಾರ್‌ ಸೈಕಲ್‌ ಮೇಲೆ ನಮ್ಮ ತಮ್ಮ ಕಿಶೋರ ಮತ್ತು ನಮ್ಮ ಸಂಬಂದಿ ಮೋಹನ್‌ ತಂದೆ ನರಸಿಂಗ ರಾಠೋಡ ಇವರು ಮತ್ತು ಇನ್ನೊಂದು ಮೋಟಾರ್‌ ಸೈಕಲ್‌ ಮೇಲೆ ನಮ್ಮ ಕಾಕಾ ಶಂಕರ ಚವ್ಹಾಣ ಮತ್ತು ಸುರೇಶ ತಂದೆ ತಾರು ಜಾದವ ಇವರು ಕೂಡಿ ಬಂದಿದ್ದರು. ದಿನಾಂಕ: 06/04/2017 ರಂದು ಸಾಯಂಕಾಲ 5-00 ಘಂಟೆಗೆ ನಮ್ಮ ಕಾಕನಾದ ಶಂಕರ ಚವ್ಹಾಣ ಇವರು ಫೊನ್‌ ಮಾಡಿ ವಿಷಯ ತಿಳಿಸಿದ್ದೇನೆಂದರೆ; ಸಾಯಂಕಾಲ 4-30 ಗಂಟೆಗೆ ಜೀರೊಳ್ಳಿ ಗ್ರಾಮಕ್ಕೆ ಹೋಗಿ ಮರಳಿ ನಮ್ಮೂರಿಗೆ ಬರಲು ಆಳಂದ - ವಾಗ್ದರಿ ರೋಡಿನ ಮುಖಾಂತರ ಎಮ್‌ಹೆಚ್‌ 25- ಝಡ್‌-5463 ಬಜಾಜ್‌ ಡಿಸ್ಕವರಿ ಮೋಟಾರ್‌ ಸೈಕಲ್‌ ಮೇಲೆ ಕಿಶೋರ ಮತ್ತು ಮೋಹನ್‌ ಇವರು ಕೂಡಿ ವಾಗ್ದರಿ ಕಡೆಗೆ ಹೊಗುತ್ತಿದ್ದಾಗ ಕಿಶೋರ ಇತನು ಮೋಟರ ಸೈಕಲ ಚಲಾಯಿಸುತ್ತಿದ್ದನು. ನಾನು ಮತ್ತು ಸರೇಶ ಅವರ ಹಿಂದಿನಿಂದ ಇನ್ನೊಂದು ಮೋಟಾರ ಸೈಕಲ್‌ ಮೇಲೆ ಹೋಗುತ್ತಿದ್ದಾಗ ಜಿಡಗಾ ಕಮಾನ ಹತ್ತಿರ ದಾಟಿ ಸ್ವಲ್ಪ ಮುಂದೆ ಹೋದಾಗ ಎದುರಿನಿಂದ ಅಂದರೆ ವಾಗ್ದರಿ ಕಡೆಯಿಂದ ಒಬ್ಬ ಲಾರಿ ನಂ ಟಿ.ಎನ್‌ 28- ಎ.ಎಫ್‌-4083 ನೇದರ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದವನೆ ಕಿಶೋರ ಇವರ ಮೋಟಾರ್‌ ಸೈಕಲ್‌ಗೆ ಲಾರಿ ಡಿಕ್ಕಿಪಡಿಸಿ ಅಪಘಾತ ಮಾಡಿರುವದರಿಂದ ಅವರು ಕೆಳಗಡೆ ಬಿದ್ದಾಗ ಮೋಹನ್‌ ಇತನಿಗೆ ಹಣೆಗೆ ಹೊಟ್ಟೆಗೆ ಬಾಯಿಗೆ ಅಲ್ಲಲ್ಲಿ ಭಾರಿಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿಲ್ಲ ಸದ್ಯ ಕಲಬುರಗಿಗೆ ಆಸ್ಪತ್ರೆಗೆ ಅಂಬುಲೆನ್ಸದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಕಿಶೋರ ಈತನಿಗೆ ತಲೆಗೆ ಹಣೆಗೆ ಕಾಲಿಗೆ ಕೈಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಎಂದು ತಿಳಿಸಿದರು. ನಂತರ ನಾವು ಗಾಬರಿಯಾಗಿ ನಮ್ಮ ಸಂಬಂದಿಕರು ಕೂಡಿ ಆಳಂದಕ್ಕೆ ಬಂದು ನೋಡಲು ಕಿಶೋರ ಈತನಿಗೆ ತಲೆಗೆ, ಹಣೆಗೆ, ಎದೆಗೆ, ಎರಡು ಕಾಲಿಗೆ ಬಾರಿಗಾಯವಾಗಿ ಕಿವಿಯಿಂದ ರಕ್ತ ಬಂದಿದ್ದು, ಎಡ ಕೈ ಮುರಿದು ಮೃತಪಟ್ಟಿದ್ದನು. ಅಪಘಾತ ಮಾಡಿದ ಲಾರಿ ಸ್ಥಳದಲ್ಲಿಯೇ ನಿಂತಿದ್ದು ಚಾಲಕನು ಓಡಿ ಹೋಗಿದ್ದನು. ಅವನ ಹೆಸರು ರಮೇಶ ತಂದೆ ವೆಂಕಟರಮಣ ಸಾ: ಪೈತುಂಬಾರೈ ತಾ: ಮುಸರಿ ತಮಿಳುನಾಡು ಎಂದು ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ ಪಾತೀಮಾ ಬೇಗಂ ಗಂಡ ಸೈಯ್ಯದ ಜಿಲಾನಿ ಗಲ್ಪಾಡ ಸಾಃ ಆಂದೊಲಾ ತಾಃ ಜೇವರಗಿ ಇವರ ಹೋಲ ನಮ್ಮೂರ ಸೀಮಾಂತರದಲ್ಲಿ ನಮ್ಮದೊಂದು ಹೊಲ ಇರುತ್ತದೆ ನಮ್ಮ ಹೊಲದ ಪಕ್ಕದ ಸೈಯ್ಯದ ಮುಜೀಬ ಹುಸೇನ ಇವರ ಹೊಲ ಇದ್ದು ಅವರ ಹೊಲ ನಮ್ಮೂರ ಸೈಯ್ಯದ ಜಾಫರ್ ಹುಸೇನ ಇವರು ಪಾಲಿಗೆ ಮಾಡಿರುತ್ತಾರೆ ಅವರು ನಮ್ಮ ಹೊಲದಲ್ಲಿ ದನಗಳು ಬಿಟ್ಟಿದಾಗ ಕೇಳಿದರೆ ಅವರಿಗೂ ನಮಗೂ 2 ತಿಂಗಳ ಹಿಂದೆ ಜಗಳ ಆಗಿರುತ್ತದೆ ಅದರಿಂದ ಅವರಿಗೂ ನಮಗೂ ವೈಮನಸ್ಸು ಇರುತ್ತದೆ. ಮತ್ತು ಅವರು ನಾನು ಹೊಲಕ್ಕೆ ಹೋಗುವಾಗ ಮತ್ತು ಬರುವಾಗ ನೊಡಿ ಅವಾಚ್ಯವಾಗಿ ಬೈಯುವುದು ಮಾಡುತ್ತಾ ಬಂದಿರುತ್ತಾರೆ ನಾನು ಎಲ್ಲಿ ಅವರ ಸಂಗಡ ಜಗಳ ಅಂತಾ ಸುಮ್ಮನಿದ್ದೆನು  ದಿನಾಂಕ 02.04.2017 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮೂರ 1) ಸೈಯ್ಯದ ಜಾಫರ್ ಹುಸೇನ ಗಲ್ಪಾಡ, 2)ಸೈಯದ ಸಾದೀಕ ಹುಸೇನ @ ಸದ್ದು 3) ಸೈಯ್ಯದ ಹುಸೇನ ತಂದೆ ಸೈಯದ ಕಾಸಿಂ ಹುಸೇನ 4) ದವಲತಬಿ ಗಂಡ ಖಾಜಾ ಹುಸೇನ ಕೂಕನೂರ 5)ಮೌಲಾಲಿ ತಂದೆ ಖಾಜಾ ಹುಸೇನ ಕೂಕನೂರ 6) ನಬೀಸಾ ತಂದೆ ಖಾಜಾ ಹುಸೇನ ಕೂಕನೂರ 7) ಇಸ್ಮಾಯಿಲ್ ತಂದೆ ಖಾಜಾ ಹುಸೇನ ಕೂಕನೂರ 8) ಸಾಜೀದಾ ಗಂಡ ಅನ್ವರ ಪಾಷಾ 9)ಸಾಧಿಕಾ ಗಂಡ ಜಾಫರ್ ಹುಸೇನ 10) ಅನ್ವರ ತಂದೆ ಮಹ್ಮದ್ ಹುಸೇನ ಸಾಃ ಎಲ್ಲರೂ ಆಂದೊಲಾ ಇವರು ಕೂಡಿಕೊಂಡು ನಮ್ಮ ಮನೆಯ ಎದುರುಗಡೆ ಬಂದು ನನಗೆ ಅವಾಚ್ಯವಾಗಿ ಬೈಯಹತ್ತಿದ್ದರು ನಾನು ಅವರಿಗೆ ನನಗೆ ಯಾಕೆ? ಬೈಯುತ್ತಿದ್ದಿರಿ ಅಂತಾ ಅಂದಾಗ ಸೈಯದ ಜಾಫರ್ ಹುಸೇನ ಇತನು ಏ ಬೊಸಡಿ ನನಗೆ ಎದುರು ಮಾತನಾಡುತಿ ನೀನಗೆ ಸೊಕ್ಕು ಬಹಳ ಬಂದಿದೆ ರಂಡಿ ಅಂತಾ ಅವಾಚ್ಯವಾಗಿ ಬೈಯ್ದು ನನ್ನ ಎರಡು ಕೈ ಒತ್ತಿ ಹಿಡಿದು ಬಳೆ ಒಡೆದಿರುತ್ತಾನೆ ಕೂದಲೂ ಹಿಡಿದು ಜಗ್ಗಿ ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾನೆ, ಮತ್ತು  ಸೈಯದ ಸಾದೀಕ ಹುಸೇನ ಇತನು ನನ್ನ ಮೈ ಮೇಲಿನ ಬಟ್ಟೆ ಹಿಡಿದು ಜಗ್ಗಿರುತ್ತಾನೆ. ಸಾಜೀದಾ ಇವಳು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದಿರುತ್ತಾಳೆ, ಉಳಿದವರೆಲ್ಲರೂ ಈ ರಂಡಿದು ಓಣಿಯಲ್ಲಿ ಬಹಳ ನಡೆದಿದೆ ಹೊಡೆಯಿರಿ ಅಂತಾ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿರುತ್ತಾರೆ. ಮತ್ತು  ಸೈಯದ ಜಾಫರ್ ಹುಸೇನ ಇತನು  ಏ ಬೊಸಡಿ ಇನ್ನೊಮ್ಮೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಭೀಮಾಶಂಕರ ತಂದೆ ನಿಂಗಣ್ಣ ಮಡಿವಾಳ ಸಾ: ಬಿದ್ದಾಪೂರ ಕಾಲೋನಿ ಕಲಬುರಗಿ ರವರ ಮತ್ತು ರಾಜಶೇಖರ ತಂದೆ ಶರಣಪ್ಪಾ  ರವರ ಮಧ್ಯ ಹೊಲದ ಪಾಲಿಸ ಸಂಬಂಧ ತಂಟೆ ತಕರಾರು ಇದ್ದು ದಿನಾಂಕ 04-04-17 ರಂದು 07:30 ಪಿ.ಎಮ್ ಕ್ಕೆ ಕರಜಗಿ ಗ್ರಾಮದ ಆಯಿ ಮುತ್ಯಾನ ಮನೆಯ ಮುಂದೆ ಸದರಿ ರಾಜಶೇಖರ ತಂದೆ ಶರಣಪ್ಪಾ ಸಂಗಡ 8 ಜನರು ಎಲ್ಲರು ಸಾ : ಕರಜಗಿ ಮತ್ತು ಕೋಳಕುರ ಗ್ರಾಮದವರು ಕುಡಿಕೊಂಡು  ಗುಂಪು ಕಟ್ಟಿಕೊಂಡು ಬಂದು ಫೀರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾಕು ಮತ್ತು ಕೈ ಯಿಂದ ಹೊಡೆ ಬಡೆ ಮಾಡಿದ್ದರಿಂದ ಕೈಗೆ, ಹೊಟ್ಟೆಗೆ, ಬೆನ್ನಿಗೆ ರಕ್ತಗಾಯ ಪಡೆಸಿ ಜೀವದ ಭಯ ಹಾಕಿದ್ದು  ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ:
ರಾಘವೇಂದ್ರ ನಗರ ಠಾಣೆ : ಶ್ರೀ ಸುರೇಶ ತಂದೆ ಲಕ್ಷ್ಮೀಪುತ್ರ ಸಾ : ದೇಶಮುಖ ಗಲ್ಲಿ ಬ್ರಹ್ಮಪೂರ ಕಲಬುರಗಿ ರವರು ದಿನಾಂಕ 04/02/17 ರಂದು ರಾತ್ರಿ 10.30 ಕ್ಕೆ ತನ್ನ ಮೋಟಾರ ಸೈಕಲ ನಂ.ಕೆಎ.32 ಕ್ಯೂ.2792 ಅ.ಕಿ.25000/-ರೂ ನೇದ್ದು ಮನೆಯ ಮುಂದೆ ನಿಲ್ಲಿಸಿ ಬೆಳಗ್ಗೆ ಎದ್ದು ನೋಡಲು ನನ್ನ ಮೋಟಾರ ಸೈಕಲ ಕಾಣಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 06.04.2016 ರಂದು ಮುಂಜಾನೆ ಶ್ರೀ ಸಂಗಪ್ಪ ತಂದೆ ಗುರಪ್ಪ ಕರಕಿಹಳ್ಳಿ ಸಾಃ ಕೆಲ್ಲೂರ ತಾಃ ಜೇವರಗಿ  ಮತ್ತು ನನ್ನ ಹೆಂಡತಿ ಕಾಶಿಬಾಯಿ ಸೋಸೆ ಆಶ್ವಿನ ಮೂವರು ಮನೆಯಲ್ಲಿದ್ದಾಗ ನಮ್ಮ ಮನೆಯ ಮುಂದಿನ ಮನೆಯವರಾದ 1)  ಭಗವಂತರಾಯ ತಂದೆ ಬಸವರಾಜ ಹಂಚಿನಾಳ, 2) ಪರಶುರಾಮ ತಂದೆ ಬಸವರಾಜ ಹಂಚಿನಾಳ 3) ಶಾಂತಬಾಯಿ ಗಂಡ ಬಸವರಾಜ 4) ಬಸವರಾಜ ತಂದೆ ಮಲ್ಲೇಶಿ ಹಂಚಿನಾಳ ಸಾಃ ಎಲ್ಲರು ಕೆಲ್ಲೂರ ಎಲ್ಲರು ಕೂಡಿಕೊಂಡು ನಮ್ಮ ಮನೆಯ ಅಂಗಳದಲ್ಲಿ ಬಂದು ನಮಗೆ ಎಲೇ ಹೊಲೆಯ ಸೂಳಿ ಮಕ್ಕಳೆ ನೀಮ್ಮ ಸೊಕ್ಕ ಬಹಳ ಆಗ್ಯಾದ ನೀಮ್ಮ ಮನೆ ಕಿತ್ತಿ ಹಾಕುತ್ತೆವೆ ನೀವು ಇಲ್ಲಿ ಇರಬಾರದು ಅಂತ ಅವ್ಯಾಚ್ಯ ಶಬ್ದಗಳಿಂದ  ಬೈಯುತ್ತಿದ್ದಾಗ ನಾನು ಅವರಿಗೆ ವಿನಾಕಾರಣ ನಮಗೆ ಯಾಕೆ? ಬೈಯುತ್ತಿದ್ದಿರಿ ಅಂದಿದ್ದಕ್ಕೆ  ಅವರು ನನಗೆ ಜೋರಾಗಿ ದಬ್ಬಿದಾಗ ನಾನು ನೇಲಕ್ಕೆ ಬಿದ್ದೆನು.  ನನ್ನ ಹೆಂಡತಿಗೆ  ಬೈದು, ಅವಳ ಮೈ ಮೇಲಿನ ಸೀರೆ ಎಳೆದು ಅವಳಿಗೂ ದಬ್ಬಿದ್ದಾರೆ,  & ನನ್ನ ಸೋಸೆ ಆಶ್ವಿನಿ  ತುಂಬು ಗರ್ಬಿಣಿ ಇದ್ದು ಇವಳ ಮೇಲೂ ಹಲ್ಲೆ ಮಾಡಲಿಕ್ಕೆ ಪ್ರಯತ್ನಿಸಿರುತ್ತಾರೆ. ಈಗ ಎರಡು ದಿವಸಗಳ ಹಿಂದೆ ನನ್ನ ಅಳಿಯನ ಕಾರು ನಮ್ಮ ಮನೆಯ ಮುಂದೆ ನಿಂತಾಗ ಭಗವಂತರಾಯ ಇತನು ತನ್ನ ಟ್ರ್ಯಾಕ್ಟರನ್ನು ಹಾಯಿಸಿ ಕಾರು ಜಖಂ ಮಾಡಿದ್ದನ್ನು ಕೇಳಿದಾಗ ಅವರಿಗು ನಮಗು ಜಗಳ ಆಗಿದ್ದು ಅದಕ್ಕೆ ಅವರು ಇವತ್ತು ನಮ್ಮ ಮನೆಯವರೆಗೆ ಬಂದು  ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮತ್ತು ನಮಗೆ ಊರು ಬಿಟ್ಟು ನಮ್ಮ ಮನೆಯನ್ನು ಮತ್ತೊಬ್ಬರಿಗೆ ಮಾರಬೇಕೆಂದು ಬೇದರಿಸಿರುತ್ತಾರೆ.  ಅಲ್ಲದೆ ಮುಂದೆ  ಈ ಮನೆಯಲ್ಲಿ ಸಂಸಾರ ಮಾಡಲು ಕಷ್ಟವಾಗುತ್ತದೆ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 April 2017

Kalaburagi District Reported Crimes

ಬಾಲ್ಯ ವಿವಾಹ ತಡೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಶೈಲ ತಂದೆ ಬಾಬುರಾವ ಬರ್ದಿ ಸಾ: ಮೇಳಕುಂದಾ (ಬಿ) ಸಂಗಡ ಇನ್ನೂ  22 ಜನರು  ಕುಡಿಕೊಂಡು ದಿನಾಂಕ 10-04-2017  ರಂದು ಮೇಳಕುಂದಾ (ಬಿ) ಗ್ರಾಮದ ಶ್ರೀ ಬೋಗಲಿಂಗೇಶ್ವರ ದೇವ ಸ್ಥಾನದಲ್ಲಿ  ಅಪ್ರಾಪ್ತ  ಬಾಲಕಿಯಾದ ಶಿವಲಿಂಗಮ್ಮಾ ವ: 16 ವರ್ಷ ಇವಳಿಗೆ ಮದುವೆ ನಿಶ್ಚಯಿಸಿದ್ದು. ಸದರಿ ಮದುವೆ ಬಾಲ್ಯವಿವಾಹ ಮಾಡಬಾರದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಇತರೆ ಸಾಮಾಜಸೇವಕರ ತಿಳಿಹೇಳಿದರು ಕೇಳದೆ ಇರುವದರಿಂದ ಸದರಿ ಯವರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಶ್ರೀ ಚಿಕ್ಕ ವೆಂಕಟ ರಮಣಪ್ಪಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 04-04-2017 ರಂದು ಶ್ರೀ ಪ್ರಕಾಶ ತಂದೆ  ಮಲಕಾಜಪ್ಪಾ ಅಂಗಡಿ ಸಾ: ದೇವಿನಗರ ಕಲಬುರಗಿ ಮತ್ತು ಅವನ ಚಿಕ್ಕಪ್ಪಾ ಇಬ್ಬರು ತಮ್ಮ ಮೋ ಸೈಕಲ ನಂ ಕೆಎ 32 ಯು 9512 ನೇದ್ದರ ಮೇಲೆ ಕಲಬುರಗಿಯಿಂದ ಹೋಗುತ್ತಿರುವಾಗ ಕೊಳ್ಳೂರ ಗ್ರಾಮ ದಾಟಿ 1/2 ಕಿಮಿ ದೂರ ಹೋಗುತ್ತಿದ್ದಾಗ ಎದುರಿನಿಂದ ಬಂದ ಕ್ರೋಜರ ಜೀಪ ನಂ ಎಪಿ 23 ವೈ 8227 ನೇದ್ದರ ಚಾಲಕ  ತನ್ನ ವಾಹನವನ್ನು ಅತೀವೇಗವಾಗಿ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 03-04-2017  ರಂದು ರಾತ್ರಿ ಯಲ್ಲಪ್ಪಾ ತಂದೆ ರಾಣಪ್ಪಾ  ಎಂಟಮನ ಸಾ: ನದಿಸಿನ್ನೂರ ಇವನು ಸರಾಯಿ ಕುಡಿದ ನಶೆಯಲ್ಲಿ ತೋರಾಡುತ್ತಾ ಮನೆಗೆ ಬಂದು ಜೋಲಿ ಹೋಗಿ ಮನೆಯ ಮುಂದಿನ ಕಟ್ಟೆಯ ಮೇಲೆ ಬಿದಿದ್ದರಿಂದ ತಲೆಗೆ ಬಾರಿ ಪೆಟ್ಟಗಿ ಬೇಹುಷಾಗಿದ್ದರಿಂದ ಉಪಚಾರ ಕುರಿತು ಆಸ್ಪತ್ರೆ ಸೇರಿಕೆ ಮಾಡಿದ್ದು ಉಪಚಾರದಿಂದ ಗುಣಮುಖ ನಾಗದೆ ದಿನಾಂಕ 04-04-2017 ರಂದು ರಾತ್ರಿ 11 ಗಂಟೆಗೆ ಜಿಜಿಹೆಚ್ ಆಸ್ಪತೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರೇಣುಕಾ ಗಂಡ ಯಲ್ಲಪ್ಪಾ  ಎಂಟಮನ ಸಾ: ನದಿಸಿನ್ನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.